Oppanna.com

ದಾರಳೆಕಾಯಿ ದೋಸೆ

ಬರದೋರು :   ವೇಣಿಯಕ್ಕ°    on   15/07/2014    0 ಒಪ್ಪಂಗೊ

ವೇಣಿಯಕ್ಕ°

ದಾರಳೆಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1-2 ದಾರಳೆಕಾಯಿ (ಎಳತ್ತು ಆದರೆ ಒಳ್ಳೆದು)
  • 3-4 ಒಣಕ್ಕು ಮೆಣಸು
  • 2 ಚಮ್ಚೆ ಕಾಯಿ ತುರಿ
  • 8-10 ಕೊತ್ತಂಬರಿ
  • 5-6 ಜೀರಿಗೆ
  • ದೊಡ್ಡ ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಯ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ, ಕಾಯಿ ತುರಿ, ಬೇನ್ಸೊಪ್ಪು, ಒಣಕ್ಕು ಮೆಣಸು, ಜೀರಿಗೆ, ಕೊತ್ತಂಬರಿ, ಇಂಗು, ಉಪ್ಪು, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಉರುಟಿಂಗೆ ಕೊರದು ಮಡುಗಿ.

ಕಾವಲಿಗೆಯ ಬೆಶಿ ಮಾಡಿ, ಕೊರದ ದಾರಳೆಕಾಯಿಯ ಹಿಟ್ಟಿಲ್ಲಿ ಅದ್ದಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ಜೋಡ್ಸಿ. ಮುಚ್ಚಲು ಮುಚ್ಚಿ ಸಾಧಾರಣ ಒಂದು ನಿಮಿಷ ಹದ ಕಿಚ್ಚಿಲ್ಲಿ ಬೇಶಿ. ಒಂದು ಸಕ್ಕಣ ತುಪ್ಪ/ಎಣ್ಣೆಯ ದೋಸೆಯ ಮೇಲಂಗೆ ಉದ್ದಿ, ದೋಸೆಯ ಕವುಂಚಿ ಹಾಕಿ.

ಪುನಃ ಅದರ ಮೇಲಂಗೆ ರೆಜ್ಜ ತುಪ್ಪ/ಎಣ್ಣೆಯ ಉದ್ದಿ ಮುಚ್ಚ್ಲಲು ಮುಚ್ಚಿ ಸಾಧಾರಣ ಒಂದು ನಿಮಿಷ ಬೇಶಿ. ಕವುಂಚಿ-ಮೊಗಚ್ಚಿ ಹಾಕಿ ಸಣ್ಣ ಕಿಚ್ಚಿಲ್ಲಿ ದೋಸೆಯ ಬೇಶಿ.
ತುಪ್ಪ ಹಾಕಿ, ಬೆಶಿ ಬೆಶಿ ದೋಸೆಯ, ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×