Oppanna.com

ದಾರಳೆಕಾಯಿ ಬೆಂದಿ

ಬರದೋರು :   ವೇಣಿಯಕ್ಕ°    on   05/08/2014    0 ಒಪ್ಪಂಗೊ

ವೇಣಿಯಕ್ಕ°

ದಾರಳೆಕಾಯಿ ಬೆಂದಿ

ಬೇಕಪ್ಪ ಸಾಮಾನುಗೊ:

  • 3 ದಾರಳೆಕಾಯಿ
  • 1-1.25 ಕಪ್(ಕುಡ್ತೆ) ಕಾಯಿ ತುರಿ
  • ಚಿಟಿಕೆ ಅರುಶಿನ ಹೊಡಿ
  • 1/2 ಚಮ್ಚೆ ಜೀರಿಗೆ
  • ದ್ರಾಕ್ಷೆ ಗಾತ್ರದ ಹುಳಿ
  • 3-4 ಒಣಕ್ಕು ಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ
  • 4-5 ಬೇನ್ಸೊಪ್ಪು
  • 3-4 ಎಸಳು ಬೆಳ್ಳುಳ್ಳಿ
  • 1 ಚಮ್ಚೆ ಸಾಸಮೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ.

ಕೊರದ ದಾರಳೆಕಾಯಿಯ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಚಿಟಿಕೆ ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಬೇಶಿದ ತೊಗರಿ ಬೇಳೆ ಹಾಕಿ ತೊಳಸಿ, ಕೊದುಶಿ.

ಒಣಕ್ಕು ಮೆಣಸಿನ ಮೈಕ್ರೋವೇವ್ ಲ್ಲಿ ಸುಟ್ಟು ಹಾಕಿ ಮಡುಗಿ ಅಥವಾ ಬಾಣಲೆಲಿ ಎಣ್ಣೆ ಹಾಕದ್ದೆ ಸಣ್ಣ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರುದು ಮಡುಗಿ. ಕಾಯಿ ತುರಿ, ಒಣಕ್ಕು ಮೆಣಸು, ಜೀರಿಗೆಯ ಮಿಕ್ಸಿಲಿ ಹಾಕಿ ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.

ಕಡದ ಮಸಾಲೆಯ ಬೆಂದ ಬಾಗಕ್ಕೆ ಹಾಕಿ ತೊಳಸಿ, ಲಾಯಿಕಲಿ ಕೊದುಶಿ.(ಉಪ್ಪು, ನೀರು ಬೇಕಾದರೆ ಹಾಕಿ.)
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಅಶನ/ಚಪಾತಿ/ರೊಟ್ಟಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×