Oppanna.com

ಬೆಂಡೆಕಾಯಿ ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   02/12/2014    0 ಒಪ್ಪಂಗೊ

ವೇಣಿಯಕ್ಕ°

ಬೆಂಡೆಕಾಯಿ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 15 ಬೆಂಡೆಕಾಯಿ (ಊರ ಬೆಂಡೆಕಾಯಿ ಆದರೆ ಒಳ್ಳೆದು)
  • ಸಣ್ಣ ನಿಂಬೆ ಹಣ್ಣಿನ ಗಾತ್ರದ ಬೆಲ್ಲ
  • 1/2-3/4 ಚಮ್ಚೆ ಮೆಣಸಿನ ಹೊಡಿ
  • ಚಿಟಿಕೆ ಅರುಶಿನ ಹೊಡಿ
  • ದ್ರಾಕ್ಷೆ ಗಾತ್ರದ ಹುಳಿ
  • 4-5 ಚಮ್ಚೆ ಕಾಯಿ ತುರಿ
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ಉದ್ದಿನ ಬೇಳೆ
  • 5-6 ಬೇನ್ಸೊಪ್ಪು
  • 1-2  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೆಂಡೆಕಾಯಿಯ ತೊಳದು, ತೊಟ್ಟು ತೆಗದು, ಸಾಧಾರಣ 1/2 ಇಂಚು ಉದ್ದಕೆ ಕೊರದು ಮಡುಗಿ.

ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಮಡುಗಿ. ಬಾಣಾಲೆಲಿ ಕೊರದ ಬೆಂಡೆಕಾಯಿ, ಹುಳಿನೀರು, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರೆಜ್ಜ ನೀರು(ಸಾಧಾರಣ 1/4 ಕುಡ್ತೆ) ಹಾಕಿ ಮುಚ್ಚಲು ಮುಚ್ಚಿ, ಸಾಧಾರಣ ನೀರು ಆರುವನ್ನಾರ ಹದ ಕಿಚ್ಚಿಲ್ಲಿ ಬೇಶಿ. 3-4 ನಿಮಿಷಕ್ಕೊಂದರಿ ತಾಳಿನ ತೊಳಸಿಗೊಂಡಿರಿ.

ಇದಕ್ಕೆ ಕಾಯಿತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ 5-10 ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆ, ಉದ್ದಿನಬೇಳೆ, ಸಾಸಮೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ತೊಳಸಿ.
ಇದು ಅಶನ ತುಪ್ಪ, ಮೊಸರು/ಮಜ್ಜಿಗೆ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×