Oppanna.com

ಬೆಂಡೆಕಾಯಿ ಬೋಳುಕೊದಿಲು

ಬರದೋರು :   ವೇಣಿಯಕ್ಕ°    on   20/01/2015    0 ಒಪ್ಪಂಗೊ

ವೇಣಿಯಕ್ಕ°

ಬೆಂಡೆಕಾಯಿ ಬೋಳುಕೊದಿಲು

ಬೇಕಪ್ಪ ಸಾಮಾನುಗೊ:

  • 10-12 ಸಣ್ಣ ಬೆಂಡೆಕಾಯಿ
  • 1-1.5 ಕಪ್(ಕುಡ್ತೆ) ಬೇಶಿದ ತೊಗರೀಬೇಳೆ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಅರುಶಿನ ಹೊಡಿ
  • ಸಣ್ಣ ನಿಂಬೆ ಗಾತ್ರದ ಬೆಲ್ಲ
  • 1/4 ಚಮ್ಚೆ ಮೆಣಸಿನ ಹೊಡಿ
  • 1/2 ಚಮ್ಚೆ ಸಾಂಬಾರು/ಸಾರಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 2-3 ಎಳೆ ಕೊತ್ತಂಬರಿ ಸೊಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:
ಬೆಂಡೆಕಾಯಿಯ ತೊಳದು, 1/2 ಇಂಚು ಉದ್ದಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಇದರ ಒಂದು ಬಾಣಲೆಗೆ ಹಾಕಿ ಹದ ಕಿಚ್ಚಿಲ್ಲಿ 4-5 ನಿಮಿಷ ಬೆಂಡೆಕಾಯಿಯ ನ್ಯೋಳಿ ಹೋಪನ್ನಾರ ಹೊರಿರಿ.

ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಹುಳಿ ನೀರು, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಇದಕ್ಕೆ ಬೇಶಿದ ತೊಗರೀಬೇಳೆ, ಸಾರಿನ/ಸಾಂಬಾರಿನ ಹೊಡಿ ಹಾಕಿ ಕೊದುಶಿ. ಬೋಳು ಕೊದಿಲಿನ ಸಣ್ಣ ಕಿಚ್ಚಿಲ್ಲಿ 3-4 ನಿಮಿಷ ಮಡುಗಿ. ಕೊಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೋಳುಕೊದಿಲಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×