Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಸಾರಿನ ಹೊಡಿ
ಬೇಕಪ್ಪ ಸಾಮಾನುಗೊ:
- 1 ಕಪ್(ಕುಡ್ತೆ) ಒಣಕ್ಕು ಮೆಣಸು
- 5-6 ಚಮ್ಚೆ ಕೊತ್ತಂಬರಿ
- 1.5 ಚಮ್ಚೆ ಜೀರಿಗೆ
- 1 ಚಮ್ಚೆ ಮೆಂತೆ
- 1/2 ಚಮ್ಚೆ ಇಂಗಿನ ಹೊಡಿ ಅಥವಾ ಸಣ್ಣ ದ್ರಾಕ್ಷೆ ಗಾತ್ರದ ಇಂಗು
- 1/4 ಚಮ್ಚೆ ಅರುಶಿನ ಹೊಡಿ ಅಥವಾ 1/4 ಇಂಚು ಉದ್ದದ ಒಣಗಿದ ಅರುಶಿನ ಕೊಂಬು
- 20-25 ಬೇನ್ಸೊಪ್ಪು
ಮಾಡುವ ಕ್ರಮ:
ಒಂದು ಬಾಣಲೆಗೆ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ಅರುಶಿನ ಕೊಂಬು(ಅರುಶಿನ ಹೊಡಿ ಆದರೆ ಲಾಸ್ಟಿಂಗೆ ಇಂಗಿನ ಒಟ್ಟಿಂಗೆ ಹಾಕಿ), ಬೇನ್ಸೊಪ್ಪು ಹಾಕಿ ಸಣ್ಣ/ಹದ ಕಿಚ್ಚಿಲ್ಲಿ ಲಾಯಿಕ ಪರಿಮ್ಮಳ ಬಪ್ಪನ್ನಾರ ಹೊರಿರಿ. ಇದಕ್ಕೆ ಇಂಗು ಹಾಕಿ ಒಂದು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ.
ಪೂರ್ತಿ ತಣುದ ಮೇಲೆ, ಮಿಕ್ಸಿಗೆ ಹೊರುದ ಮಸಾಲೆ ಹಾಕಿ ನೊಂಪಿಂಗೆ ಹೊಡಿ ಮಾಡಿ ಮಡಿಕ್ಕೊಳ್ಳಿ. ಇದರ ಒಂದು ಕರಡಿಗೆಲಿ ಹಾಕಿ ತೆಗದು ಮಡುಗಿ. ಹೆಚ್ಚು ಸಮಯ ಬಾಳಿಕೆ ಬಪ್ಪಲೆ ಪ್ರಿಡ್ಜ್ ಲ್ಲಿ ತೆಗದು ಮಡುಗಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~ ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.