Oppanna.com

ಕೋಕನಟ್ ರೈಸ್(ತೆಂಗಿನಕಾಯಿ ಅಶನದ ಒಗ್ಗರಣೆ)

ಬರದೋರು :   ವೇಣಿಯಕ್ಕ°    on   10/02/2015    6 ಒಪ್ಪಂಗೊ

ವೇಣಿಯಕ್ಕ°

ಕೋಕನಟ್ ರೈಸ್(ತೆಂಗಿನಕಾಯಿ ಅಶನದ ಒಗ್ಗರಣೆ)

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
  • 1 ಕಪ್(ಕುಡ್ತೆ) ಕಾಯಿ ತುರಿ
  • 1-2 ಹಸಿಮೆಣಸು
  • 3-4 ಎಳೆ ಕೊತ್ತಂಬರಿ ಸೊಪ್ಪು
  • ಸಣ್ಣ ತುಂಡು ಶುಂಠಿ
  • 8-10 ಬೇನ್ಸೊಪ್ಪು
  • 2 ಚಮ್ಚೆ ಬೀಜದ ಬೊಂಡಿನ ತುಂಡುಗೊ
  • 1 ಚಮ್ಚೆ ಕಡ್ಲೆ ಬೇಳೆ
  • 1 ಚಮ್ಚೆ ಉದ್ದಿನ ಬೇಳೆ
  • 1/2 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • 1/2 ಚಮ್ಚೆ ಸಕ್ಕರೆ
  • 1-2 ಮುರುದ ಒಣಕ್ಕು ಮೆಣಸು
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 2 ಚಮ್ಚೆ ತುಪ್ಪ

ಮಾಡುವ ಕ್ರಮ:

1 ಕುಡ್ತೆ ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ ತೊಳದು, ಸಾಧಾರಣ 2 ಕುಡ್ತೆ ನೀರು ಹಾಕಿ, ಕುಕ್ಕರಿಲ್ಲಿ ಬೇಶಿ ಕರೆಲಿ ಮಡುಗಿ.

ಕಾಯಿಯ ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡಿಕ್ಕೊಳ್ಳಿ. ಹಸಿಮೆಣಸಿನ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪು, ಶುಂಠಿಯ ಸಣ್ಣಕೆ ಕೊಚ್ಚಿ ಮಡುಗಿ.

ಒಂದು ಬಾಣಲೆಲಿ, ಬೀಜದ ಬೊಂಡು, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ತುಪ್ಪ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟಿ ಅಪ್ಪಗ, ಶುಂಠಿ, ಸಿಗುದ ಹಸಿಮೆಣಸು, ಇಂಗು, ಬೇನ್ಸೊಪ್ಪು ಹಾಕಿ ಸಾಧಾರಣ 1 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ತೊಳಸಿ. ಇದಕ್ಕೆ ಕಾಯಿ ತುರಿ, ಸಕ್ಕರೆ ಹಾಕಿ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ತೊಳಸಿ.

ಬೇಶಿ ಮಡುಗಿದ ಅಶನ, ಉಪ್ಪು ಹಾಕಿ ತೊಳಸಿ, 2-3 ನಿಮಿಷ ಲಾಯಿಕ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.

ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ, ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

6 thoughts on “ಕೋಕನಟ್ ರೈಸ್(ತೆಂಗಿನಕಾಯಿ ಅಶನದ ಒಗ್ಗರಣೆ)

  1. ಈ ರೈಸಿಂಗೆ ನಿಂಬೆ ಹುಳಿಯೆಸರೋ ಅಥವಾ ಮಾವಿನ ತುರಿಯೋ ಸೇರ್ಸಿರೆ ಹೆ೦ಗಕ್ಕೂ ಹೇಳಿ !

  2. ಆಹಾ..! ಒಗ್ಗರಣೆಯ ಘಮ ಇಲ್ಲಿವರೆಗೆ ಹೊಡೆತ್ತು..!
    ಹೆರಿಯವು ಹೇಳಿದ ಮಾತು ಕೇಳದ್ದೆ ಬಿಂಗುರ್ಟಿ ಮಾಡಿಂಡಿಪ್ಪ ಹೇಂಗಿರ್ತ ಪೋಕನೇಟು ಮಕ್ಕೊ ಸಾನು ’ಕೋಕನೇಟು ರೈಸು ಇದ್ದು ಬಾ’ ಹೇಳಿ ದೆನಿಗೇಳಿರೆ ಓಡಿ ಬಂದು ಬಟ್ಲ ಮುಂದಿಕ್ಕೆ ಕೂರುಗು..!

  3. ಇದಕ್ಕೆ ಮೊಸರು ಗೊಜ್ಜು ಬೇಕಾದರೆ ಹಾಕಿಯೊಂಬಲಕ್ಕು,ಅಲ್ಲದೋ../?
    ಮಜ್ಜಿಗೆ ಮೊಸರು ಆಗದ್ದೋರು ಅಂತೇ ತಿಂಬಲು ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×