- ಮಾಣಿ ಬೋಚನೋ? - October 27, 2015
- ಫಾಲನೇತ್ರನಮುನಿಸೊ - May 13, 2015
- ಜೀವ ನೆಲೆ - April 22, 2015
ಮಾಣಿ ಬೋಚನೋ ?
ಒಂದು ಊರಿನ ಮಾಣಿ
ಬೋಚ ಹೇಳುಗು ಅವನ
ಕೇಳಿದರೆ ಎಂತದು ಗೊಂತಿಲ್ಲೆಡ /
ದಿನವು ಪೇಪರು ತೆಗದು
ಸುದ್ದಿ ಓದುಗು ಅದರ
ಊರಿಲಿಡಿ ಬಿಕ್ಕಿಂಡು ಬಪ್ಪದಾಡ /೧//
ಚಾಮಿ ದೇವರ ಕತೆಗೋ
ಅವನಜ್ಜಿ ಹೇಳುಗಡ
ಶಾಲೆಲಿಯು ಅವ ಕೇಳಿ ಕಲ್ತಿದಾಡ /
ಕಿಟ್ಟ ಚಾಮಿಯ ಕತೆಯ
ರಾಮ ದೇವರ ಕತೆಯ
ಊರ ಹರಿಕತೆಗಳಲೆ ಕೇಳಿದ್ದಾ ಡ /೨/
ಭಗವಂತ ಹೇಳಿದರೆ
ಗೀತೆ ಮನಸಿಲಿ ಬಕ್ಕು
ರಾಮ ದೇವರ ಮೇಗೆ ಭಕುತಿ ಇಕ್ಕು /
ಬಲಿಪಜ್ಜ ಹಾಡಿಲಿಯೊ
ಶೇಣಿ ಹರಿಕತೆಗಳಲೊ
ಕಲ್ತವೆಷ್ಟೋ ಜೆನ ಊರಿಲಿಕ್ಕು /೩/
ಊರ ಹಸುಗಳ ಕದ್ದು
ಹಸಿ ಹಸಿಯೇ ತಿಂಬದರ
ಒಂದು ಪೇಪರಿಲಂದು ಬೋಚ ಓದಿದ್ದ /
ಅವಕ್ಕೆಂತ ಬೇರೆಂತ್ಸು
ಸಿಕ್ಕಿತ್ತಿಲ್ಲೆಯೋ ಹೇದು
ಬೋಚ ‘ಬೋಚ’ ನ ಹಾಂಗೆ ಎನ್ನ ಕೇಳಿದ್ದ /೪/
ಗೀತೆಯನ್ನೇ ಸುಡುವೆ
ಹೇಳಿದ್ದ ಭಗವಾನ
ಮತ್ತೊಬ್ಬ ಹೇಳುತ್ಸು ಬೇರೆ ನೋಡಿ !/
ಮಹಿಷ ರಾಜನ ನಾವು
ಪೂಜೆ ಮಾಡೆಕು ನಿತ್ಯ
ಮಾಡ್ಲಪ್ಪ ಅದಕ್ಕೆಂತ?ಆರು ಅಡ್ಡಿ ! /೫/
ರಾಮ ಸೀತೆಯ ಅಂದು
ಕಾಡಿಂಗೆ ಕಳುಸಿದ್ದು
ಒಂದು ಬಗೆ ಜೆನಂಗೊಕ್ಕೆ ಭಾರಿ ತಪ್ಪು! /
ಇವು ಎಲ್ಲ ಎಲ್ಲಿಂದ
ಬಂದು ಸೇರಿದವಪ್ಪ!
ಸೊಯ ಪೂರ್ತಿ ಇಲ್ಲೇದು ಕಾಣುತ್ತಪ್ಪೊ!/೬/
ಊರ ಆಳುವ ರಾಜ
ಅರೆ ಮರುಳ ಆದ ಕತೆ
ಹಿಂದೆ ಎಂದೋ ನವಗೆ ಕೇಳಿ ಗೊಂತಿದ್ದು /
ಹಿಂದಲ್ಲ ಮುಂದಲ್ಲ
ನಮ್ಮ ಕಣ್ಮುಂದೆಯೇ
ನೆಡದತ್ತು ಇದು ಎಲ್ಲ ನಾವು ಕಂಡತ್ತು /೭\
ಅಲ್ಲೆಲ್ಲೋ ದನ ಕಡುದು
ತಿಂದವನ ಬಡುದವಡ
ಅದಕ್ಕೆ ಎದುರಾಗೆಂತ ? ಗೋಮಾಂಸ ತಿಂದು/
ದನದ ಕಳ್ಳರ ಹಿಡುದು
ತಡದವರ ಕೊಂದವದ
ಅದಕ್ಕೆಂತ ಮಾಡುದಡ ? ಸಾಕೋ “ಬಂದು” ? / ೮/
ದೇವರ ಮೇಗುದೇ
ದೂರು ಕೊಡ್ಳೆಡಿಗಾರೆ
ಇವು ಕೊಡುಗು ಖಂಡಿತಾ ನವಗರಡಿಯ /
ಬೋಚ ಮಾಣಿಯ ತಲೆಲಿ
ಯೋಚನೆಗೊ ಹೀಂಗೆಲ್ಲ
ಸತ್ಯದ ಮುಂದೆಂದು ಲೊಟ್ಟೆ ನೆಡೆಯ / ೯/
~~~~~****~~~~
ಬೋಚ ಬೋಸ ಅಲ್ಲ
ಬೋಚ ಮಾಣಿಯ ಪದ್ಯ ಊಚು ಆಯಿದು ಬಾಲಣ್ಣ…
ಮಾಣಿ ಬೋಚನೋ ಕೇಳಿದವು. ಅವ° ಖಂಡಿತಾ ಬೋಚ ಅಲ್ಲ. ಇಂದ್ರಾಣ ಪರಿಸ್ಥಿತಿಯ ಅರ್ಥ ಮಾಡಿ “ಸತ್ಯಕ್ಕೇ ಜಯ” ಹೇಳಿ ನಿರ್ಧಾರ ತೆಕ್ಕೊಂಬಷ್ಟು ಗಟ್ಟಿಗನೇ . ಬಾಲಣ್ಣನ ಕವನ ಲಾಯಿಕ ಆಯಿದು.
ಕಲಿಯುಗದ ಶುದ್ದಿಗಳ ಕವನ ಸರಿಯಾಗಿದ್ದು. ಬೋಚನ ಆಲೋಚನೆಲಿ ಸಾಚಾತನ ಇದ್ದು. ಸತ್ಯದ ಮುಂದೆ ಲೊಟ್ಟೆ ಎಂದೆಂದಿಗೂ ನೆಡೆಯ. ಬಾಲಣ್ಣ, ತುಂಬಾ ಲಾಯಕಾಯಿದು ಪದ್ಯ.
ಸದ್ಯದ ಪರಿಸ್ತಿತಿಗೆ ಬೋಚಭಾವನ ಆಲೋಚನೆಗೊ ಸರಿಯೇ ಇದ್ದು