Latest posts by ನೆಗೆಗಾರ° (see all)
- ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ: - August 25, 2015
- ನೆಗೆ ಬಪ್ಪದು ಖಂಡಿತಾ!! - September 9, 2012
- ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’ - March 12, 2012
ಓ ಮೊನ್ನೆ ಒಂದರಿ ನೀರ್ಕಜೆ ಅಪ್ಪಚ್ಚಿ ದ್ವಿಪದಿ ಬರದು ಎಲ್ಲೊರಿಂಗೂ ಅದರ ಜೊರ ಹಿಡುಸಿದ್ದವು!!
ದ್ವಿಪದಿ ಬರವಲೆ ತುಂಬಾ ಕಷ್ಟ, ಅದರಾ ಶೆಬ್ದಂಗೊ, ಅದರಾ ಗೆರೆಗೊ, ಅದರಾ ಪ್ರಾಸಂಗೊ – ಯೆಬೆ, ನವಗೆ ತಲಗೇ ಹೋಗ.
ಎರಡೂ ಗೆರೆಗೊ ಒಂದೇ ನಮುನೆ ಬರಡದೋ ಬಾವಾ!
ಬಿಡಿ, ಅದರಿಂದ ಸುಲಾಬದ್ದು ಏಕಪದಿ! ಎರಡ್ಣೇ ಗೆರೆಯ ತಲೆಬೆಶಿ ಇಲ್ಲೆ. 🙂
ಎಂತ ಹೇಳ್ತಿ?
ಕಳುದೊರಿಶದ ಆಟಿಯ ಶುದ್ದಿ ಓದಿದಮತ್ತೆ ನೆಗೆಗಾರಂಗೂ ಅದರ ಬರದರೆ ಹೇಂಗೆ ಹೇಳಿ ಅನುಸಿತ್ತು.
ಸಣ್ಣಸಣ್ಣ ಗೆರೆಯ ಏಕಪದಿಗೊ, ಬೈಲಿನ ನೆಗೆಗಾಗಿ.
ಓದಿ, ಹೇಂಗಾಯಿದು ಹೇಳಿ. ನಿಂಗೊಗೂ ನೆಂಪಾದರೆ ಹೇಳದ್ದೆ ಇರೆಡಿ, ಆತೋ?
- ಒಪ್ಪಣ್ಣನ ಶುದ್ದಿಗಳಲ್ಲಿ ಒಪ್ಪಕಮ್ಮಿ ಆದರೂ ಈ ಒರಿಶ ಮಳೆ ಕಮ್ಮಿ ಆಗಡ್ಡ..
- ಜೆಂಬ್ರದೆಡಕ್ಕಿನ ಗವುಜಿಲಿ ಅಜ್ಜಕಾನ ಭಾವನ ಶುದ್ದಿಗಳೇ ಅಭಾವ!
- ಕೇಮಹೇಶಣ್ಣ ಡಾಗುಟ್ರು ಆದ ಮೇಲೆ ಅವರ ಮನೆಮುಂದೆ ಮದ್ದಿನ ಕುಪ್ಪಿ ಹಿಡ್ಕೊಂಡು ಜೆನ ಸಾಲುಸಾಲು..
- ಎಡಪ್ಪಾಡಿಬಾವನ ಮೊಬಯಿಲಿಲಿ ಪದ್ಯ ಬತ್ತಡ, ಇರುಳಿಡೀ ಪದ್ಯ ಮಡಗಿದ ಕಾರಣ ನುಸಿ ಕಚ್ಚದ್ದೆ ಒರಕ್ಕು ಬತ್ತಡ..
- ನೀರ್ಕಜೆ ಚಿಕ್ಕಮ್ಮಂಗೆ ಮನೆಲಿ ನೆಂಟ್ರು ಜೋರು!
ಅವರ ಅಡಿಗೆಕೋಣೆಲಿ ಒಗ್ಗರಣೆ ಜೋರಾದ ಕಾರಣ ನಮ್ಮತಲಗೆ ಒಗ್ಗರಣೆ ಬೀಳುದು ರಜ ಕಮ್ಮಿ.! - ಒಂದುವಾರ ನೆಂಟ್ರು ಇದ್ದದರ್ಲಿ ನೀರ್ಕಜೆ ಅಪ್ಪಚ್ಚಿಗೆ ಅಡಿಗೆ ಸರೀ ಅಭ್ಯಾಸ ಆತಡ!
- ಸಪುರ ಅಪ್ಪಲೆ ಜೇನವೂ ನಿಂಬೆವುಳಿದೇ ಕರಡುಸಿ ಕುಡುತ್ತಡ ತರವಾಡುಮನೆ ವಿದ್ಯಕ್ಕ.
ಜೇನಕುಪ್ಪಿಯಹಾಂಗೆ ಉರುಟಿದ್ದ ಜೆನ ನಿಂಬೆಳಿಯಾಂಗೆ ಉರುಟಾತಡ! - ಮಾಷ್ಟ್ರುಮಾವನ ದೊಡ್ಡಮಗ – ಅಮೇರಿಕಲ್ಲಿಪ್ಪವಂಗೆ ಕವಲು ಓದಿ ಓದಿ ಮನೆ ಎದುರಾಣ ಮಾರ್ಗದ ಕವಲು ತಪ್ಪಿದ್ದಡ್ಡ!
- ಶೆಂಕರಿಅತ್ತೆ ಕುಂಕುಮಾರ್ಚನೆ ಮಾಡುವಗ ಹತ್ತರೆ ಕೂದ ಹೆಮ್ಮಕ್ಕೊಗೆ ಇವರ ಸೀರೆಯ ಬಗ್ಗೆಯೇ ಚಿಂತೆ ಅಡ!
- ಬೇಸಗೆಲಿ ಅಡಕ್ಕೆ ಇರ್ತು, ಈಗ ಬೆಳ್ಳಕ್ಕೆ ಹೋಯಿದು!
ಪಾಲಾರಣ್ಣನ ಮನೆ ಜಾಲು ಈಗ ರಜ ಮನಾರ ಆಯಿದು.. - ಪೆರ್ಲದಣ್ಣ ಬನಿಯಾನಂಗಿಗೊ ಸಣ್ಣ ಆವುತ್ತಡ.
ಒರಿಶ ಹೋದಾಂಗೆ ಪೇಂಟಂಗಿಗೊ ಸಣ್ಣಸಣ್ಣ ಆವುತ್ತು ಹೇಳಿ ಅಜ್ಜಕಾನಬಾವನ ನಂಬುಸಿದ್ದ. - ಬೇಂಕಿನ ಪ್ರಸಾದಣ್ಣಂಗೆ ಮದುವೆ ಆದ ಮತ್ತೆ ದೇವರ ಮೇಗೆ ಬಕ್ತಿ ಜಾಸ್ತಿ ಆಯಿದಡ
– ಸಂಕಟ ಬಂದರೆ ವೆಂಕಟ ರಮಣ ಹೇಳಿ ನಿಡ್ಡಾಜೆ ಮಾವ ಹೇಳುಗು.. - ಬೆಟ್ಟುಕಜೆಬಾವಂಗೆ ಆಸ್ಪತ್ರೆಲಿಪ್ಪಗ ಎಲೆಡಕ್ಕೆ ತಿನ್ನದ್ದೆ ಬಾಯಿಚೆಪ್ಪೆ ಆಯಿದಡ!
- ಕಾನಾವಜ್ಜಿಯ ಮನೆಲಿ ಹಪ್ಪಳಕ್ಕೆ ಬೂಸುರು ಬಂದು ಶುಬತ್ತೆಯ ಹಾಂಗೆ ಬೆಳಿಬೆಳಿ ಆಯಿದಡ..
- ಒಂದು ವಾರಂದ ಮಳೆ ಬಿಟ್ಟಕಾರಣ ಕಲ್ಮಡ್ಕ ಅನಂತ ರೈನುಕೋಟು ಇಲ್ಲದ್ದೆ ಪುತ್ತೂರಿಂಗೆ ಹೋಯಿದನಡ..
- ಕೆಮರ ಚೆಂಡಿ ಅಪ್ಪ ಕಾರಣ ಹಳೆಮನೆ-ಯೇನಂಕೂಡ್ಳು – ಬೊಳುಂಬು – ಎಲ್ಲಾ ಕೆಮರಂಗಳೂ ಒಲೆಕಟ್ಟೆಲಿ ಇದ್ದಡ
- ಕಲ್ಮಡ್ಕನಂತನ ಮನೆಲಿ ಪೂಜೆ ಮುಗುಶಿ ಬಪ್ಪಗ ಮಾಲಚಿಕ್ಕಮ್ಮಂಗೆ ರೂಪತ್ತೆಯ ಕಾರು ಸಿಕ್ಕಿತ್ತಡ.
- ಪಂಜಚಿಕ್ಕಯ್ಯನಲ್ಲಿ ಅಡಕ್ಕಗೆ ಮದ್ದುಬಿಟ್ಟಾಯಿದಿಲ್ಲೆ. ಹೊತ್ತೊತ್ತಿಗೆ “ನಿನಿಗೆ” ಮದ್ದುಬಿಡದ್ರೆ ಕೃಷಿ ಎಲ್ಲ ಹಾಳಕ್ಕು ಹೇಳಿ ಬೇಜಾರಲ್ಲಿದ್ದವಡ..
- ಚಂಬರಕಟ್ಟದ ಕೇಜಿಮಾವಂಗೆ ಮಾಂಬಳಕಟ್ಟದ ನೆಂಪಾವುತ್ತಡ, ಜೋರು ಮಳೆಬಪ್ಪಗ..
- ಸರ್ಪಮಲೆಮಾವಂಗೆ ಪುಳ್ಳಿಮಾಣಿ ತಣ್ಣೀರು ಕುಡುಶಿದ್ದರಿಂದ ಶೀತ ಸುರು ಆಯಿದಡ…
- ದೊಡ್ಡಳಿಯಂಗೆ ರೈನುಕೋಟು ತರೆಕ್ಕೋ ಹೇಳಿ ದೊಡ್ಡಬಾವಂಗೆ ಯೋಚನೆ ಬಯಿಂದಡ..
- ಓ ಮೊನ್ನೆ ಗುಂಪೆ ಮದುವೆಲಿ ನೆರಿಯದಣ್ಣ ನೆಗೆಬತ್ತ ಚೂರ್ಣಿಕೆ ಹೇಳಿದ್ದರಲ್ಲಿ ಆಚಮನೆ ದೊಡ್ಡಣ್ಣಂಗೆ ತೆರಂಬುಹೋಯಿದಡ..
- ದೊಡ್ಡಜ್ಜನಮನೆಲಿ ಕೊತ್ತಳಿಂಗೆ ಒಯಿಶಿದ್ದು ಕಾಲಿ ಆಯ್ಕೊಂಡು ಬಯಿಂದಡ!
- ಗುಣಾಜೆಮಾಣಿಗೆ ಊರಿಲಿ ಓಟುಬಂದದು ಬರಗಾಲಲ್ಲಿ ಕೆಂದಾಳಿಬೊಂಡನೀರುಸಿಕ್ಕಿದ ನಮುನೆ ಆಯಿದಡ.
- ಚೆಂಬರ್ಪು ಮಾಷ್ಟ್ರಣ್ಣಂಗೆ ಮದುವೆ ದಿನ ಪಾಟಮಾಡ್ಳೆ ಎಡಿಗಾಯಿದಿಲ್ಲೆಡ!
- ರಾಜಣ್ಣನ ಆಟದ ಕೇಸೆಟ್ಟುಗೊ ಒಲೆಕಟ್ಟೆಂದ ತೆಗವಲೆ ನಿದಾನ ಆಗಿ ಕರಿ ಹಿಡುದ್ದಡ.
- ಚೆನ್ನಬೆಟ್ಟಣ್ಣಂಗೆ ಕಲ್ಲುಗುಂಡಿ ಆಟದ ಕಾಕತ ನೋಡಿ ಸ್ವರ್ಗಸಿಕ್ಕಿದ ಹಾಂಗೆ ಆತಡ – ಆನಲ್ಲ, ಮುಳಿಯಬಾವ ಹೇಳಿದವು.
- ಮೂಡಬಿದ್ರೆಂದ ಪೆರಟ್ಟಿ ತಂದದರ ಪಾಯಿಸ ಮಾಡದ್ದಕ್ಕೆ ಮಾಷ್ಟ್ರುಮಾವನಮಗ – ಅಮೇರಿಕಲ್ಲಿಪ್ಪವ – ಪೆರಟ್ಟು ಮಾತಾಡಿದನಡ.
- ಕೊಳಚ್ಚಿಪ್ಪು ಬಾವ ಬಯಿಗಳು ತಿಂದ, ಪುನಾ ಬಂಡಾಡಿಅಜ್ಜಿಯತ್ರೆ.
– ಈ ಸರ್ತಿ ಕಡದು ಕೊಡದ್ದೆ ಕೊಟ್ಟಿಗೆ ತಿಂಬಲೆ ಬಂದದಕ್ಕೆ. - ಪುತ್ತೂರುಬಾವನ ಐಪೋನಿ ಕನ್ನಡ ಕಾಣ್ತಿಲ್ಲೆಡ. ಕನ್ನಡ ಲಿಪಿಗೊ ಪೂರ ಜಿಲೇಬಿ ತುಂಡಿನ ಹಾಂಗೆ ಕಾಣ್ತಡ.
- ಪ್ಲೇಷ್ಟಿಕು ಉಪಯೋಗ ಬೇಡ – ಹೇಳ್ತ ಬೇನರಿನ ಚೆಂಡಿ ಆಗದ್ದ ಹಾಂಗೆ ಪ್ಲೇಷ್ಟಿಕು ತೊಟ್ಟೆಲಿ ಕಟ್ಟಿ ತಂದವಡ ಗುರಿಕ್ಕಾರ್ರು.
- ಬಟ್ಯ ಕುಪ್ಪಿ ಕುಡಿವದು ಬಿಟ್ಟಿತ್ತಿದ್ದು, ಪ್ಲೇಷ್ಟಿಕು ತೊಟ್ಟೆ ಬೇಡ ಹೇಳಿ ಶರ್ಮಪ್ಪಚ್ಚಿ ಹೇಳಿದಮತ್ತೆ ಪುನಾ ಸುರು ಮಾಡಿತ್ತು.
- ಡಾಗುಟ್ರಕ್ಕನ ಲೇಪುಟೋಪು ಹಾಳಾದ್ದಕ್ಕೆ ಕಷಾಯ ಕುಡುಶಿದವಡ, ಬಾವ ಸಮಾ ಪರಂಚಿದ್ದವು, ಪಾಪ!
- ಸುವರ್ಣಿನಿ ಅಕ್ಕ ಪಟ ತೆಗವಗ ಬಾವ° ಮೋರೆ ತಿರುಗುಸಿದವಡ. ಹಾಂಗೆ, ಚೆಂದ ಬಯಿಂದು ಅವರ ಪಟ!!
- ರಂಗಮಾವಂಗೆ ಗೆಂಟುಬೇನೆ ಜೋರಾದ್ದಕ್ಕೆ ಶೇಡಿಗುಮ್ಮೆಬಾವ ಮಜಲುಕೆರೆಣ್ಣೆ ಹೇಳಿ ಎಳ್ಳೆಣ್ಣೆ ತಂದು ಕೊಟ್ಟಿದ°!
- ಇನ್ನೂ ಸುಮಾರಿದ್ದು, ಇನ್ನೊಂದರಿ ಹೇಳ್ತೆ..
ನಿಂಗೊಗೂ ಸುಮಾರು ಏಕಪದಿಗೊ ಗೊಂತಿಕ್ಕು, ಗೊಂತಾದ ಹಾಂಗೆ ಹೇಳಿಗೊಂಡು ಹೋಗಿ,
ಆತೋ?
ಏ°?
ನಿಂಗಳ ನೆಗೆಯ,
~
ನೆಗೆಗಾರ°
ಎಂಗಳಲ್ಲಿ ವೈನ್ ಕುಪ್ಪಿಲ್ಲಿದ್ದು ಜೇನು (ಪುತ್ತೂರು ಜೇನು ವೆವಸಾಯ ಸಂಘಂದ ಜೇನು ಹೇಳಿ ತಂದದು). ಅದು ಉರುಟಿಲ್ಲೆ ಚಟ್ಟೆ ಇಪ್ಪದು ಹಾಂಗೆ ಜೇನಕುಪ್ಪಿಯಹಾಂಗೆ ಉರುಟಿದ್ದ ಜೆನ ಹೇಳಿದರೆ ಎಷ್ಟು ಉರುಟು ಹೇಳಿ ಗೊಂತಾಯಿದಿಲ್ಲೆ. ನೆಗೆಗಾರ ಸಾಕಾಯ ಮಾದೆಕ್ಕು!!!!
(ಎಂಗಳಲ್ಲಿ ವೈನ್ ಕುಪ್ಪಿಲ್ಲಿದ್ದು !!)………………………………..
ಚಿಕ್ಕಮ್ಮ ಎಂತ ನಿಂಗಳ ಪುತ್ತೂರು ಜೇನು ವ್ಯವಸಾಯ ಕೇಂದ್ರ ದವು ಜೇನು ಹೇಳಿ “ವೈನ್ ” ಕೊಟ್ಟು ಮೋಸ ಮಾಡಿದವೋ ಹೇಳಿ !!?
ವೈನಿನ ರುಚಿ ಗೊಂತಿಲ್ಲದ್ದ ಕಾರಣ, ಜೇನಿನ ರುಚಿ ಗೊಂತಿಪ್ಪ ಕಾರಣ ಮೋಸ ಆಯಿದಿಲ್ಲೇ hELi kANuttu 🙂
ಹುಬ್ಬಳ್ಳಿ ಜೆನಕ್ಕೆ ಈ ಜೇನು ಕೊಟ್ರೆ ಎಂತ ಹೇಳುಗು? ಪುತ್ತೂರು ಜೇನು ವೈನಾಗೈತಿ !!!
{ ಜೇನು ಕೊಟ್ರೆ ಎಂತ ಹೇಳುಗು }
– ನೀರ್ಕಜೆ ಜೆನಕ್ಕೆ ವೈನು ಕೊಟ್ರೆ ಎಂತ ಹೇಳುಗು?
= ಜೇನಿನ ಹಾಂಗಿದ್ದು!! 😉
ಅಲ್ಲದೊನ್ ಅವು ನಿಜವಾಗಿ ಜೇನು ಕೊಟ್ಟದಾದಿಕ್ಕು!!!! ನೀರ್ಕಜೆ ……..ನ್ಗೆ ಅದು ವೈನ್ ಹೇಳಿ ಹೆಂಗೆಪ್ಪಾ ಗೊಂತಾದ್ದು ??!!!!!!!!!!!!!!!!
{ಎಂಗಳಲ್ಲಿ ವೈನ್ ಕುಪ್ಪಿಲ್ಲಿದ್ದು}
–
ಎಲ್ಲೋರ ಮನೆಲಿದೇ ಅದು ಕುಪ್ಪಿಲೇ ಇಪ್ಪದಡ ಚಿಕ್ಕಮ್ಮ, ಬರಣಿಲಿ ಎಲ್ಲ ಮಡಗವು.
ಗಂಗಾಸರ ಆದರೆ ತೊಟ್ಟೆಲಿರ್ತಡ, ಬಟ್ಯಂಗೆ ಗೊಂತಿದ್ದು!! 😉
ಏ ನೆಗೆ ಕುನ್ಹಿ ಅದು ಹೇಂಗೆ ಮನೇಲಿ ಕುಪ್ಪಿಲಿ ಮಡುಗುಲೇ ಎಡಿಯದ್ದವು; ಕಸ್ತಲೆ ಅಪ್ಪಗ ಮನೆಗೆ ಬಪ್ಪಗ ಹೊಟ್ಟೆಲೇ ಮಡಿಗಿಯೊಂದು ಬಾರವ !!!!!!!!!!!!!!!!
@ಎಲ್ಲೋರ ಮನೆಲಿದೇ ಅದು ಕುಪ್ಪಿಲೇ ಇಪ್ಪದಡ ಚಿಕ್ಕಮ್ಮ, ಬರಣಿಲಿ ಎಲ್ಲ ಮಡಗವು.
ಅದೆಲ್ಲ ನೆಗೆಗಾರಂಗೆ ಹೆಂಗೆ ಗೊಂತು ಹೇಳಿ?
ನೆಗೆಗಾರಣ್ಣನ ಅನುಭವಾಮ್ರತ ಸುಧೆಯೋ? ಅಲ್ಲ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಮೈಲುಗಳನ್ನೋದುತಂ.. ಹೇಳಿಯೋ??
ಯೇ ಮುಳಿಯಬಾವ,
ಸುರೆಯೂ ಅಲ್ಲ, ಅಮೃತವೂ ಅಲ್ಲ, ಮೈಲುತೂತೂ ಅಲ್ಲ!! 🙁 🙁 🙁
ಇದಾ- ನಿಂಗೊ ಎಂತೆಲ್ಲ ಹೇಳೆಡಿ,
ಮೊದಲೇ ನೀರ್ಕಜೆಚಿಕ್ಕಮ್ಮ ಪರಂಚಿರೆ ಕೂಪಲೆಡಿತ್ತಿಲ್ಲೆ, ಮತ್ತೆ ಮಾತಾಡ್ಳೇ ಎಡಿಯ!! 😉
ಎಲ್ಲ ನಗೆಭಾವನ ಅನುಭವ ಸಾರ 😉 ನಮೋನ್ನಮಃ
ಶರ್ಮಪ್ಪಚ್ಚಿ ಪ್ಲಾಸ್ಟಿಕ್ ಉಪಯೋಗ್ಸುದರ ಕಮ್ಮಿ ಮಾಡಕ್ಕು ಹೇಳಿ ಹೇಳಿದ ಮತ್ತೆ ಬಟ್ಯ ತೊಟ್ಟೆ ಬಿಟ್ಟಿದಡ, ಈಗ ಕುಪ್ಪಿ ಮಾತ್ರ ಅಡ…
🙂
ಪ್ಲಾಸ್ಟಿಕ್ ಅಭಾವ !!!!! ಎಲ್ಲಿ ಅಜ್ಜಕಾನ ಭಾವ?
ಬಲ್ನಾಡು ಮಾಣಿಗೆ ಗೊಂತಾದ್ದು ಹೇಂಗೆಯೋ?
ಮೊನ್ನೆ ಬೈಲಿಲಿ ಸಿಕ್ಕಿಯಪ್ಪಗ ಹಾಂಗೆ ಹೇಳಿತ್ತು.. 🙂
ನೀನು ರಾಮಜ್ಜನ ಕೋಲೇಜು ಜಾಗೆ ಬಿಟ್ಟು ಬೈಲಿಂಗೆ ಯೇವಾಗ ಬಂದಾದ್ದೋ,..ಆರಿಂಗೂ ಗೊಂತಿಲ್ಲೆ..
ಗಣೇಶ ಮಾವಂತೂ ಬಲ್ನಾಡು ಮಾಣಿಯ ಕಾಂಬಲೇಇಲ್ಲೆ ಹೇಳಿಯೋಂಡಿತ್ತಿದ್ದವು
ಏ ಭಾವಾ, ರಾಮಜ್ಜನ ಕಾಲೇಜಿಲಿ ಎನಗೆಂತ ಕೆಲಸ, 🙂 ಆನು ಅಪೀಸು ಕೆಲಸಲ್ಲಿ ಬಿಸಿ ಇತ್ತಿದ್ದೆ!!
ಕಾಲೇಜು ಜಾಗೆ ಹೇಳಿ ಒತ್ತಿ ಹೇಳಿದ್ದವು ಭಾವ.ಅದೇ,ದಿನಾ ಕಾಲೇಜು ಬಿಡುಲಪ್ಪಗ ನೀನು ನಿಂಬ ಖಾಯಂ ಜಾಗೆ..
ಕಾಲೇಜು ಬಿಡ್ಲಪ್ಪಗ ಆನು ಹೆರ ನಿಂದೋಂಡಿದ್ದರುದೆ ಸೀತಾ ಆಪೀಸಿನ ಒಳ ಬಂದು ಕೂರ್ತೆ, ಕಾಲೇಜು ಮ್ಮಕ್ಕಳ ಉಪದ್ರ ತಡವಲೆಡ್ತಿಲ್ಲೆ!! 🙂
ಅಲ್ಲಾ ಆದರ್ಶ ಅನ್ನೋ ಅದಾರಯ್ಯಾ “ಸೀತಾ ” !!!!!!
🙂 ಸೀತಾ ಹೇಳುವ ಶಬ್ದವ ಕ್ರಿಯಾವಿಶೇಷಣ ಆಗಿ ಉಪಯೋಗ್ಸಿದ್ದೆ ರಾಜಣ್ಣ,, ಅದು ಹೆಸರಲ್ಲ 🙂 ಬೇಕಾರೆ ಮಾಷ್ಟ್ರು ಮಾವನ ಕೇಳಿ ನೋಡಿ.. 🙂 😀
ಅಲ್ಲಾ ನಮ್ಮ ರಘು ಅಣ್ಣ ಹೇಳಿದ ಹಾಂಗೆ ಕಾಲೇಜ್ ಬಿಡುವ ಹೊತ್ತಿಂಗೆ ನಿಂಗೋ ಖಾಯಂ ನಿಂಬ ಜಾಗೆ ………………. ಅದಕ್ಕೆ ಕೊಟ್ಟ ನಿಂಗಳ ಉತ್ತರಲ್ಲಿ ಕಂಡತ್ತು ಎನಗೆ” ಸೀತಾ”!!!!!!!!
ಚೆ ಚೆ,, ಅಪಾರ್ಥಮಾಡಿಕೊಳ್ಳದಿರಿ ನನ್ನಂಥ ಮುಗ್ಥ ಹುಡುಗನನ್ನು… 🙂
ಅಲ್ಲಾ ಸಾರ್ ನಮ್ಮ ಭಾರತ ದೇಶವಿಡೀ” ರಾಮ ” ನ ಅಯೋಧ್ಯಾ ದ ವಿಷಯದಲ್ಲಿ ತಲ್ಲೀನರಾಗಿರುವಾಗ ನಿಮ್ಮಲ್ಲಿ ಅದು ಹೇಗೆ “ಸೀತಾ ” ವಿಷಯ ಬೋನ್ತಪ್ಪ ?????!!!!!!!
ಅದು ಗೋಣ೦ಗೊ ಮೀವಲೆ ಹೋಪದು ಸಹಜ ಅಲ್ಲದೊ ಮತ್ತೆ ಬೆ೦ಗಳೂರಿಲ್ಲಿ ನಮ್ಮ K.S.R.T.C ಬಸ್ಸುಗಳ ಮೀಶದ್ದೆ ಸುಮಾರು ದಿನ ಆಗಿತ್ತಾಡ ಹಾ೦ಗಾಗಿ ನಮ್ಮ ವರುಣ ದೇವರು ಬೇಜಾರಗಿ ಬಸ್ಸುಗಳ ಎಲ್ಲ ಮೀವಲೆ ಹೋಪ ಹಾ೦ಗೆ ಮಾಡಿದ್ದಡ ನಮ್ಮ ರಘ್ಹು ಭಾವ೦ಗೆ ವಿಷಯ ಗೊ೦ತಾಗದ್ದೆ ಬೆಳ್ಳಕ್ಕೆ ಹೋದ್ದು ಹೆಳಿ ಬರದ್ದದ.ಈ ಬೋಸ೦ಗೊ ಆದರೆ ಇದೇ ಕಷ್ಟ ಎಲ್ಲ ಹೇಳಿ ಕೊಟ್ಟೆ ಆಯೆಕು.ರಜ ರಜ ಅರ್ಥ ಮಾಡಿಯೊಳೆಕು ಭಾವ ಹಾ೦ಗಾರೆ ಈ ಬೋಸ ಹೇಳುವದರ ನಿಲ್ಲುಸುಗದ
ಓ.. ಹಾ೦ಗೊ.. ಸರಿ ಸರಿ.. ಈಗ ಗೊ೦ತಾತು.. 😀
ಮಂಗಳೂರಿಲಿ ಗೋಣ ಪಳ್ಳಕ್ಕೆ ಹೋತಡ,ಬೆಂಗಳೂರಿಲಿ ಬಸ್ಸು ಬೆಳ್ಳಕ್ಕೆ ಹೋತಡ.
ಎ೦ತಗೆ ರಘುಅಣ್ಣ ಮೀವಲಾ?? 😀
ನೀನು ಮೀತ್ತಿಲ್ಲೆ ಹೇಳಿಗೊಂಡು ಗೋಣಂಗಳೂ ಹಾಂಗೆಯೋ?
ಗೋಣಂಗೊಕ್ಕೆ ಅಂಬಗಂಬಗ ಮಿಂದು ಮನಾರ ಆಗದ್ದರೆ ಒರಕ್ಕು ಬತ್ತಿಲ್ಲೆ ಸಮಗಟ್ಟು!!
ಮೀವಲೇ ಹೋದ್ದಾಯಿಕ್ಕು, ಪಾಪ.
ಆನು ದಿನಾ ಮೀತೆ ಆತೊ ಕೊಟ್ಟಗೆಲಿ…. ಎಬೇ.. ಹಾ೦ಗೆ ಹೇಳಿ… ಹೊಳೇಲಿ ಗೋಣಂಗಳ್ಟೊ೦ಗೆ ಮೀವಲೆಡಿಗಾ?? ಚೀ….. 😀
ಚೀ… ಹೇಳಿದ್ದು ಎಮ್ಮೆರಾಗಲ್ಲಿಯೋ??
ಗೋಣ೦ಗಳೂ ಹಾಂಗೇ ರಾಗ ತೆಗಕ್ಕೊಂಡಿದ್ದವು ಹೇಳಿ ಶುದ್ದಿ, ಬೋಚನ ಹೊಳೆಗೆ ಇಳಿಸಿಕ್ಕೆಡಿ ಹೇಳಿ..
😀
ನಿನ್ನ ಮೋರೆ ನೋಡಿರೆ ಮಿಂದ ಹಾಂಗೆ ಕಾಣುತ್ತಿಲ್ಲೇನೆ ?
ಹಾ.. ಅದೋ.. ಎ೦ತ ಹೇಳಿರೆ ಮಾವ.. ಓ ಮೊನ್ನೆ ಅಜ್ಜಕಾನ ಬಾವ ಸಿಕ್ಕಿತವು.. ಅನು ಬೆಳ್ಳ೦ಗೆ ಅಪ್ಪದು ಹೇ೦ಗೆ ಹೀಳಿ ಕೇಳಿಯಪ್ಪಗ.. ದಿನಾ.. ಉದ್ಯಪ್ಪಗ ಮೀ೦ದಿಕ್ಕಿ ಮಸಿ ಮೊರೆಗೆ ಉದ್ದಿಗೊ ಹೇಳಿದವು.. ಹಾ೦ಗೆ.. ದಿನಾ ತಪ್ಪದ್ದೆ ಮಾಡ್ತಾಯಿದ್ದೆ… 😀
ಅಜ್ಜಕಾನ ಭಾವ ಹೇಳಿದ್ದು ತತ್ವಮಸಿಯ.
ಬೋಸ ಭಾವ ಉದ್ದಿದ್ದು ಒಲೆಕಟ್ಟೆ ಮಸಿಯ.. ಹೆಸರಿಂಗೆ ಸಾರ್ಥಕ ಆತು..
ಯೊ… ಎನಗೊ೦ತಿಲ್ಲೆ.. ಉಉ.. 🙁 … ಅನು ಗ್ರೆಶಿದ್ದು.. ಒಲೆಲಿಪ್ಪ ಮಸಿಹೇಳಿ.. ಅದು ಎ೦ತ “ತತ್ವಮಸಿ”
ಹೇಳಿರೆ?? ಎಲ್ಲಿ ಸಿಕ್ಕುತು.. ರಜಾ ಉದ್ಯೊ೦ಬೊ ಮೋರೆಗೆ.. ಬೆಳಿಯಾವುತರೆ ಆಗಲಿ.. 😀
ತತ್ವಮಸಿ ಹೇಳಿರೆ ಪುತ್ತೂರಿನ ದೈಯ್ಯನಂಗಡಿಲಿ ಸಿಕ್ಕುವ ಬೆಳಿ ಮಸಿ.. ಹಲ್ಲಿಂಗುದ್ದಿರೆ ಕಪ್ಪಾವುತ್ತು, ಮೋರೆಗುದ್ದಿರೆ ಬೆಳಿಯಾವುತ್ತು.. 🙂
ಹಿ ಹಿ ,, ಅದಪ್ಪು ರಘುಮಾವಾ,, ಅವ ಹೇಳುಲೆ ಇವ ಕೇಳುಲೆ, ಚೋರ ಗುರುವಿಂಗೆ ಚಂಡಾಲ ಶಿಷ್ಯ.. 🙂
ಹೇ ಬೋಸ!!!! ನೀನು ಕೆಲವೆಲ್ಲ ಬರೆತ್ತದರ ಓದಿದರೆ ನಿನಗೂ ಗೊಣನ್ಗಕ್ಕೂ ಎಂತದೋ ವೆತ್ಯಾಸ ?!!!
ನಿನ್ನ ಹೆಂಗಾರು ಸರಿ ಮಾಡೆಕ್ಕು ಹೇಳಿಗೊಂದು;ನಮ್ಮ ಬಯಲಿಲಿ ನೆಗೆ ಮಾಣಿ ,ರಘು ಅಣ್ಣ ,ಆದರ್ಶ,ಅಪ್ಪಚಿ,ಒಪ್ಪಣ್ಣ ಎಲ್ಲೋರು ಬಂಗ ಬತ್ತವು ಪಾಪ !!!!!
ನೆಗೆಭಾವ,
ನೀನು ನೆಗೆ ಮಾಡಿಸಿದ್ದರಲ್ಲಿ ಎನಗೆ ಬರವಲೇ ಎಡಿಗಾಯಿದಿಲ್ಲೆ ಇದ.
ಶರ್ಮಪ್ಪಚ್ಚಿಗೆ “ತೊಟ್ಟೆ ಬೇಡ” ಜೆಪ, ಬಟ್ಯಂಗೆ “ಕುಪ್ಪಿ ಬೋಡು” ಜೆಪ ಸುರು ಆಯಿದಡ ಬಯಲಿಲ್ಲಿ.
ಮದ್ದು ಬಿಡ್ಲೆ ಬಂದ ಬಟ್ಯಂಗೆ, ಮರಲ್ಲಿಪ್ಪ ಅಡಕ್ಕೆ ಕೆಳ ಬಿದ್ದರ ನೋಡಿ ಇನ್ನೆರಡು ಕುಪ್ಪಿ ಹಾಕ್ಕೆಕ್ಕು ಹೇಳಿ ಹೋತಡ.
ಕೊಡೆ ಕೊಂಡೋಗದ್ದ ಕೀರ್ತಿ ಮಾಣಿಗೆ ಮಳೆಗೆ ನೆನವಲೆ ಕೊಶೀ ಆತಡ.
[ಮಜಲುಕೆರೆಣ್ಣೆ], ಮೆಲ್ಲಂಗೆ ಹೇಳಿಕ್ಕು ಮಾರಾಯ. ಮಜಲು ಕೆರೆಲಿ ಎಣ್ಣೆ ಸಿಕ್ಕುತ್ತು ಹೇಳಿ ಶರ್ಮಪ್ಪಚ್ಚಿಗೆ ಗೊಂತಾದರೆ ಅಲ್ಲಿ ಒಂದು ರಿಫೈನರಿ ಹಾಕುವೊ ಹೇಳುಗು.
ಎಂತ ನೆಗೆಗಾರೋ… ಮೊನ್ನೆ ಕೊಚ್ಚಿಸಳ್ಳಿ ಕೊಡದ್ದದು ಸಾಕಾಯಿದಿಲ್ಲೆಯೋ… ಇನ್ನುದೇ ಬಿಂಗಿ ಮಾತಾಡಿರೆ ಮುಳ್ಳುಸವುತ್ತೆ ಪಾಯಸ ಕೊಡುಲಿಲ್ಲೆ…
ಏ ಅಜ್ಜಿ, ಎನಗೆ ಮುಳ್ಳು ಸೌತೆ ಪಾಯಸ ಬೇಡ. “ಚಕ್ಕರ್ಪೆ” ಪಾಯಸ ಮಾಡಿ ಕೊಡಿ ಆತಾ?
ಅಪ್ಪು ಶ್ರೀಶಣ್ಣ,
ಎನಗುದೇ ಹಾಂಗೆ, ಮುಳ್ಳುಸವುತ್ತೆ ಪಾಯಿಸ ಬೇಡ.
ಚೆಕ್ಕರ್ಪೆದು ಸಾಕು! 😉
ಪಾಯಸಕ್ಕೆ ಕಡದು ಕೊಡೆಕು ಹೇಳಿ ಇದ್ದರೆ, ಕಾಯಿ ಹಾಲು ಹಾಕುತ್ತು ಬೇಡ. ದನದ ಹಾಲು ಅಕ್ಕು ಅಲ್ಲದ ನಗೆ ಭಾವ?
{ಪಾಯಸಕ್ಕೆ ಕಡದು ಕೊಡೆಕು}
ದನದ ಹಾಲು ಕರದು ಕೊಡೆಕು ಹೇಳಿರೆಯೋ°?
ಆನಿಲ್ಲೆ, ಆನು ಮದ್ಯಾನಕ್ಕೆ ಬಪ್ಪದು – ಹೊತ್ತಿಂಗಪ್ಪಗ! 🙁
ನೀನು ಹೋಪಗ ಹೇಳಿಕ್ಕು. ಅಜ್ಜಿಯ “ನಂದಿನಿ” ದನದ ಹಾಲೇ ಕೊಂಡೋದರೆ ಆತಪ್ಪ
ಅಲ್ಲಾ ಗಂಗೆಯೋ , ಗೌರಿಯೋ , ಯಮುನೆಯೋ , ಲಕ್ಸ್ಮಿಯೋ , ಈ ಯಾವುದಾದರೂ ನಮ್ಮ ಹಟ್ಟಿಲಿ ಇಪ್ಪ ಉಂಬೆಯ ಹಾಲಾಗದೋ ??!!!!
ನಗೆಗಾರನ ಏಕಪದಿಗಳ ಓದಿ ಹೊಟ್ಟೆ ತುಂಬಿದ ಹಾಂಗೆ ಅತು.
ಬೆಂಗಳೂರಿಲ್ಲಿ ನೆಗೆ ಕ್ಲಬ್ ಇರ್ತಡ. ನವಗೆ ಯೇವತ್ತು ನಗೆಗಾರ ಒಟ್ಟಿಂಗೆ ಇಪ್ಪಗ ಅದರ ಅಗತ್ಯ ಇಲ್ಲೆ.
ಅಪ್ಪಚ್ಚಿ,
ಎಲ್ಲಿ ನೆಗೆಗೆ ಬರಗಾಲವೋ ಅಲ್ಲಿ ಬಲವಂತದ ನೆಗೆ ಕ್ಲಬ್ಬುಗಳೂ ಅನಿವಾರ್ಯ ಆಯಿದು.
ದಿನಲ್ಲಿ ಅರ್ಧ ಘಂಟೆ ಹೋ..ಹೋ..ಹೇಳಿ ನೆಗೆ ಮಾಡಿ ಮತ್ತೆ ಒಳುದ ಸಮಯ ಕೈಕ್ಕೆ ಮದ್ದು ಕುಡುದೋರ ಹಾಂಗಿಪ್ಪೊದು ಪೇಟೆ ಕ್ರಮ ಅಲ್ಲದೋ?
ನವಗೆ ನೆಗೆಗಾರನೇ ಚೀಪೆಮದ್ದು.
{ಕೆಮರ ಚೆಂಡಿ ಅಪ್ಪ ಕಾರಣ ಹಳೆಮನೆ-ಯೇನಂಕೂಡ್ಳು – ಬೊಳುಂಬು – ಎಲ್ಲಾ ಕೆಮರಂಗಳೂ ಒಲೆಕಟ್ಟೆಲಿ ಇದ್ದಡ}
–
ಚೆಂಡಿ ಆದ ಕಾರಣವೋ ಗೊಂತಿಲ್ಲೆ, ಹಳೆಮನೆಲಿ ಒಂದು ಕೆಮರ ಒಲೆಕಟ್ಟೆಲಿ ಚಳಿ ಕಾಸುತ್ತಾ ಇದ್ದು… ಚಳಿ ಜ್ವರ ಬಿಡುಸೆಕ್ಕಾರೆ ಹವೆ ಬದಲಾವಣೆ ಮಾಡೆಕ್ಕಾವುತ್ತೋ ಸಂಶಯ. ಹಾಂಗಾಗಿ ಬೆಂಗ್ಳೂರಿಂಗೆ ಕಳುಸುವ ಅಂದಾಜು ಇದ್ದು.
ವಾಹ್ ವಾಹ್… ಒಂದಕ್ಕಿಂತ ಒಂದು ಚೆಂದ…ನೆಗೆಗಾರಣ್ಣನ ಪದ !!
ನೆಗೆಗಾರನ ಏಕಪದಿ ಓದಿ ಬೈಲಿನೋರ ಹೊಟ್ಟೆ ಹುಣ್ಣಾತಡ.
ಇನ್ನು ರಜಾ ಸೇರ್ಸುವ.
ಗೋಪಣ್ಣ ಸಿಗರೇಟು ಬಿಡುಲೆ ಎಲೆತಟ್ಟೆಲಿ ಹೊಗೆಸೊಪ್ಪು ಹುಡುಕ್ಕಿದ ಹಾಂಗಾತು .
ಕಂಪ್ಯೂಟರಿನ ನೋಡಿ ಕಣ್ಣು ಮಯಮಯ ಆತಡ .
ಪೇಟೆ ತಲೆಬೆಶಿ ಗೊಂಪಿಲ್ಲದ್ದೆ ಮತ್ತೂ ಹೆಚ್ಚಾತು.
ಚೆನ್ನಬೆಟ್ಟಣ್ಣ೦ಗೆ ಚೆಂಡೆ ಪೆಟ್ಟು ಕೇಳದ್ದರೆ ಸ್ವರ್ಗಲ್ಲಿಯೂ ಒರಕ್ಕು ಬಾರಡ.
ಹೊ.. ನೆಗೆಗಾರಣ್ಣೊ.. ಚ೦ದಾಯಿದು ಬರದ್ಸು.. 😀
ಒಪ್ಪಣ್ಣ ಸುದ್ದಿ ಪಣ್ಪುನ ನಣ ಒಂಜೇ ತಿಂಗೊಳುಗೆ!
ಸೋಭಕ್ಕೆ ಮಂತ್ರಿ ಆಪೆರುಗೆ
ಗುಣಾಜೆ ದಣಿಕ್ಕುಲು ಬೈಲುಗು ಬತ್ತೆರುಗೆ
ಇಲ್ಲಿ ಗಾಸಿಪ್ಪುಗುಳಿಗೇನೂ ಕಮ್ಮಿ ಇಲ್ಲ. ಇದೇ ಈ ಪೊರ್ತಿನ ವಿಶೇಷ, “ನಿಂಗೊ ಹೇಳಿದ್ದು, ಆನು ಕೇಲಿದ್ದು”.
ಬಟ್ಯ ಟಿ.ವಿ. ನೋಡುದು ಜಾಸ್ತಿ ಆತೋ ಕಾಣ್ತು..
ಓಟು ಹಾಕಿರೆ ಟಿ.ವಿ ಸಿಕ್ಕುತ್ತು..
ಟಿ.ವಿ. ಸಿಕ್ಕಿರೆ ಬಟ್ಯ ಸಿಕ್ಕುತ್ತಿಲ್ಲೆ..
ನೆಗೆಗಾರನೊಟ್ಟಿ೦ಗೆ ಇ೦ಬ್ಲೀಸು ಕಲಿವಲೆ ಮಾಸ್ಟ್ರುಮಾವನಲ್ಲಿ ಹೋಗಿ ಹುಳಿಅಡ್ರಿನ ಶಬ್ದಕೇಳಿ ಜಾಲಿ೦ದಲೇಬ೦ದ ಎನಗೆ ಇದ ಇಲ್ಲಿಯೆ ಅವ° ಕಾಂಬಲೆ ಸಿಕ್ಕಿದ್ದು.
ಹಾ೦ಗೆ ನೆರೆಕರೆ ಮಾಣಿ ಹೆಳಿದ ಒ೦ದು ಏಕಪದಿ ಹೀಂಗಿದ:
* ನೆಗೆಗಾರನ ಏಕಪದಿ ಆಡ – ಓದಿ ಬ೦ದ ತಲೆಬೇನೆ ಡಾಕುಟ್ರುಮಾವ° ಬ೦ದೂ ಹೋಯಿದಿಲ್ಲೆಡ.
ಇನ್ನೊ೦ದು
* ನೆಗೆಗಾರ° ಇ೦ಬ್ಲಿಸು ಕಲ್ತನಾಡ ಮಾಸ್ಟ್ರುಮಾವ೦ಗೆ ನಾಗರಬೆತ್ತ ಹೊಸತ್ತು ಬೇಕಾಡ.
ಹಿ೦ಗೆ ಹಲವು ಹೆಳಿದ° ಅದೆಲ್ಲ ಇನ್ನೊ೦ದಾರಿ ಹೆಳುವೊ°.
ನೆಗೆಗಾರ ಬಾವ ನಿನು ಲಾಯಕಾಗಿ ಏಕಪದಿಗೊ ಬರೆತ್ತೆ. ಇ೦ಗ್ಲಿಷು ಕಲಿವದರನ್ನು ಏಕಪದಿ ಬರವದರನ್ನು ಬಿಟ್ಟಿಕ್ಕೇಡ.
ಒಪ್ಪ೦ಗಳೊಟ್ಟಿ೦ಗೆ.
ನೆಗೆಗಾರೋ!!!!!!! ಏಕಪದಿಗ ತುಂಬಾ ಲಾಯ್ಕಾಯಿದು….
ಕೆಲವು ದಿಕ್ಕೆ ಏಕಪದಿ ದ್ವಿಪದಿಗಳೂ ಆಯಿದಲ್ಲದಾ? ಏಕಪದಿ ಹೇಳಿ ಬರದ ಹೆಚ್ಚಿಂದುದೆ ಪ್ರಾಸವೇ ಆಯಿದು.. ತ್ರಾಸ ಇಲ್ಲದ್ದೆ!!!!
ಸೂಪರ್!!!!
ಅಕ್ಕ° ಎರಡು ಏಕಪದಿಗಳ ಸೇರ್ಸೆಕ್ಕಾ?
*ನೆಗೆಗಾರಂಗೆ ತಪ್ಪು ತಪ್ಪು ಇಂಗ್ಲೀಷು ಬೈಲಿಲಿ ಹಾಕುತ್ತ° ಹೇಳಿ ಮಾಷ್ಟ್ರು ಮಾವ ಒಂದರಿ ಬೆನ್ನು ಮಡಿ ಮಾಡಿದ್ದವಡ್ಡ.. ಹಾಂಗಾಗಿ ಬೈಲಿಲಿ ಇಂಗ್ಲೀಷು ಬಾರದ್ದದಡ್ಡ. 🙁
*ಅಶೋಕೆಗೆ ನೆಗೆಗಾರನ ಕರ್ಕೊಂಡು ಹೋದರೆ ಮೇಪುಲೆಡಿಯ ಹೇಳಿ ಹೋಪ ವಿಷಯ ಹೇಳಿದ್ದವೆ ಇಲ್ಲೆಡ್ಡ, ಹಾಂಗೆ ಬಿಟ್ಟಿಕ್ಕಿ ಹೋದ ಪಿಸುರಿಲಿ ಶುದ್ದಿಗೆ ಒಪ್ಪ ಬರದ್ದ° ಇಲ್ಲೆಡ್ಡ.
ಇನ್ನುದೇ ಬರಲಿ ನೆಗೆಗಾರಾ ನಿನ್ನ ಏಕಪದಿಗ, ದ್ವಿಪದಿಗ, ತ್ರಿಪದಿಗ ಎಲ್ಲ ಬೈಲಿಲಿ……
ಬೈಲು ನೆಗೆಯ ಅಲೆಲಿ ತೇಲಲಿ…
ಎಲ್ಲರ ಜೀವನ ಕಷ್ಟಂಗ ಒಂದರಿ ಮರೆಯಲಿ……