- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ಶೇಷವೋ – ಅವಶೇಷವೋ ಗೊಂತಿಲ್ಲೆ.
ಇಂದು ರಜಾ ಪುರುಸೋತ್ತಿಲಿ ಕೂದರೆ ಶುರುವಾತಿದ ಮತ್ತೆ ಯಡ್ಯೂರಪ್ಪಂಗೆ ಕಂಟಕದ ಶುದ್ದಿ. ಅತ್ಲಾಗಿ ಹೋಪ ಮೊದಲು ಒಂದು ಸಣ್ಣ ಶುದ್ದಿ ಹೇಳುತ್ತೆ.
ಜಪಾನಿಲಿ ಭೂಕಂಪ-ಸುನಾಮಿ ಆತನ್ನೆ ಮೊನ್ನೆ. ಅದರ ಬಗ್ಗೆ ವಿವರಣೆ ಕೇಳುಲೆ ಬೆಂಗಳೂರಿಲಿ ಎಂಟೋರಿಷಂದ ಇಪ್ಪ ಜಪಾನಿ ಹೆಮ್ಮಕ್ಕಳಕರೆದಿತ್ತವು 24X7 ಚಿನ್ನದ ಶುದ್ದಿ ಹೇಳ್ತ ಕನ್ನಡ ಚಾನೆಲ್. ಬಾರೀ ಕೊಶಿ ಆತು ಎನಗೆ ಬೆಂಗಳೂರಿಗನ್ನಡಿಗರಿಂದ ಲಾಯ್ಕ ಮಾತಾಡಿದ್ದು ಕನ್ನಡಲ್ಲಿ. ಆ ಹೆಮ್ಮಕ್ಕೊಗೆ ದನ್ಯವಾದ ಹೇಳೆಕ್ಕೆ. ವಿಶಯ ಅದಲ್ಲ ಅಖೇರಿಗೆ ಶುದ್ದಿ ಓದುತ್ತ ಪಾಳ್ಯಲ್ಲಿ ಅಕ್ಕಿ ಹುಡುಕುತ್ತ ಜೆನಂಗೊ ಥಾಂಕ್ಯು ಥಾಂಕ್ಯು ಹೇಳಿದವು. ಪಾಪ ಆ ಹೆಮ್ಮಕ್ಕೊ ಶುದ್ದ ಕನ್ನಡಲ್ಲಿ “ದನ್ಯವಾದ” ಹೇಳಿತ್ತು.
ಇವಕ್ಕೆ ಎಂತ ಹೇಳುದಪ್ಪೊ. ಬೈಲಿಲಿ ಗಡಿನಾಡಿಲಿ ಕನ್ನಡದ ಬಗ್ಗೆ ಅಂದು ಚರ್ಚೆ ಆಯಿದು. ಈಗ ಹೃದಯಲ್ಲಿ ಕನ್ನಡ ಒಳಿಗೊ?
ಈ ಚರ್ಚೆಯ ಕೇಳೆಕ್ಕಾರೆ ಇರುಳು ಹನ್ನೊಂದುವರೆಗೆ ಆ ಚಾನೆಲ್ಲು ನೋಡಿ.
ಪೆಂಗಣ್ಣೋ..
ಅದಾ, ಟೀವಿನೋಡಿದೋರಿಂಗೆ ಮಾಂತ್ರ ಅರ್ತ ಆವುತ್ತ ನಮುನೆ ಶುದ್ದಿ ಹೇಳಿದ್ದ ನೀನು, ಹಪ್ಪಾ..
ಒಪ್ಪಣ್ಣಂಗೆ ಟೀವಿ ಎಲ್ಲಿಂದ? ಅಲ್ಲಿ ಬಂದದರ ಸಂಕೊಲೆ ಏನಾರಿದ್ದರೆ ಬೈಲಿಲಿ ತೋರುಸುತ್ತೆಯೋ?
ಹೇಳಿದಾಂಗೆ, ಯೆಡಿಯೂರಪ್ಪಂಗೆ ಎಂತಾತು? ನಿನಗೆ ಗೊಂತಕ್ಕಲ್ಲದೋ ಬೇಗ… 🙂
ಇದು ನಮ್ಮ ಕನ್ನಡದ ಅವಸ್ಥೆ. ವಿಶ್ವಕನ್ನಡ ಸಮ್ಮೇಳನ ಮಾಡಿರೆ ಸಾಲ,ಭಾಷೆ ನಮ್ಮ ಮನಸ್ಸಿ೦ಗೆ,ಹೃದಯಕ್ಕೆ ಹತ್ತರೆ ಇರೆಕ್ಕು,ಅಲ್ಲದೋ?
ಅಪ್ಪೋ?? ಛೇ ಎನಗೆ ನೋಡುಲೇ ಆಯಿದಿಲ್ಲೆ…
🙁
ಆನುದೇ ಆ ಕಾರ್ಯಕ್ರಮವ ನೋಡಿದೆ, ಜಪಾನಿನ ಜೆನ ಧನ್ಯವಾದ ಹೇಳಿದ್ದು, ‘so called’ ಕನ್ನಡಿಗರು thanx ಹೇಳಿದ್ದರ ನೋಡಿ ನೆಗೆ ಮಾಡೆಕೋ ಅಥವಾ ದುಃಖಪಡೆಕೋ ಹೇಳಿ ಗೊಂತಾಯ್ದಿಲ್ಲೆ 🙁