Oppanna.com

ಸೋಮೇಶ್ವರ ಶತಕ

ಬರದೋರು :   ಶರ್ಮಪ್ಪಚ್ಚಿ    on   03/09/2012    34 ಒಪ್ಪಂಗೊ

ಮಧ್ಯಕಾಲೀನ ಕನ್ನಡ ಸಾಹಿತ್ಯದ “ಸೋಮೇಶ್ವರ ಶತಕ” ಸುಭಾಷಿತಂಗೊ ಆಗಿ ನವಗೆ ಮಾರ್ಗದರ್ಶನ ಕೊಡ್ತು.
ಆಯ್ದ ಕೆಲವು ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಟ್ಟಿದವು. ಅದರ ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡಿದ್ದವು.
ಇಬ್ರಿಂಗೂ ಧನ್ಯವಾದಂಗೊ.

ಸೋಮೇಶ್ವರ ಶತಕ:

ಗಮಕ ವಾಚನ: ಶ್ರೀಶಣ್ಣ
ಅರ್ಥ ವಿವರಣೆ: ಶರ್ಮಪ್ಪಚ್ಚಿ


ಈಗ ಕೆಲವು ವರ್ಷ ಮೊದಲು ಶಾಲೆಗಳಲ್ಲಿ ಕಲ್ತವು ಸೋಮೇಶ್ವರ ಶತಕವ ಕೇಳಿಕ್ಕು, ಬಾಯಿಪಾಠವೂ ಮಾಡಿಕ್ಕು.
ಇದಲ್ಲಿ ಬಪ್ಪ ಕೆಲವು ವಾಕ್ಯಂಗಳ ಗಾದೆ ರೂಪಲ್ಲಿ ಈಗಲೂ ಉಪಯೋಗ ಮಾಡುತ್ತವು.
ಉದಾಹರಣೆಗೆ- ಪಲವುಂ ಪಳ್ಳ ಸಮುದ್ರವೈ, ಸತಿಗೆ ಪಾತಿವ್ರತ್ಯವೇ ಭೂಷಣಂ, ಬಡವಂ ಬಲ್ಲಿದನಾಗನೇ,, ಎಳೆಗರುಂ ಎತ್ತಾಗದೇ, ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ ಇತ್ಯಾದಿ.

ಇದರ ಬರದ ಕವಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲೆ. ಪುಲಿಗೆರೆಯ ಸೋಮ ಹೇಳ್ತವ ಸರಿ ಸುಮಾರು ಕ್ರಿ.ಶ. ೧೩೦೦ ರ ಸಮಯಲ್ಲಿ  ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಲಿ (ಈಗಾಣ ಲಕ್ಷ್ಮೇಶ್ವರ) ಹುಟ್ಟಿದ°
ಶಿವ ಭಕ್ತನಾದ ಇವ° “ಹರ ಹರಾ ಶ್ರೀ ಚೆನ್ನ ಸೋಮೇಶ್ವರ” ಹೇಳ್ತ ಅಂಕಿತ ನಾಮಲ್ಲಿ ಕಾವ್ಯ ರಚನೆ ಮಾಡಿದ್ದ°.
ಈ ಶತಕ ವೃತ್ತ ಛಂದಸ್ಸಿಲ್ಲಿ ಇದ್ದು. ಸುರುವಾಣ ಕೆಲವು ಕಾವ್ಯಂಗೊ “ಶ್ರೇಷ್ಠತೆ” ಬಗ್ಗೆ ಇದ್ದು.

ಕನ್ನಡ ಸಾಹಿತ್ಯ ಪರಿಷತ್ತು, ಈ ಶತಕಂಗಳ ಸಂಗ್ರಹವ ಭಾವಾರ್ಥ, ಟಿಪ್ಪಣಿ ಮತ್ತೆ ಪೂರ್ವಕತೆಗಳೊಟ್ಟಿಂಗೆ 2003 ನೇ ಇಸವಿಲಿ ಹೆರ ತಯಿಂದು.
ಅದರಿಂದ ಆಯ್ದ ಕೆಲವು ಪದ್ಯಂಗಳ ಸರಳಸಾರ ಸಹಿತ  ಇಲ್ಲಿ ಕೊಡ್ತಾ ಇದ್ದೆ.

~

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧||

ಹಲವಾರು ನದಿಗೊ ಸೇರಿ ಸಮುದ್ರ ಹೇಂಗೆ ಉಂಟಾವುತ್ತೋ ಹಾಂಗೇ, ನಮ್ಮ ಜ್ಞಾನ ಕೂಡಾ.
ಕೆಲವು ವಿಶಯಂಗಳ ನಾವು ಗೊಂತಿಪ್ಪವರಿಂದ ಕಲಿತ್ತು, ಇನ್ನು ಕೆಲವು ಶಾಸ್ತ್ರಂಗಳ ಕೇಳಿ ತಿಳ್ಕೊಳುತ್ತು, ಇನ್ನು ಕೆಲವು ಮಾಡುವ ಕೆಲಸಂಗಳ ನೋಡಿ ಅನುಭವ ತೆಕ್ಕೊಳ್ತು, ಇನ್ನು ಕೆಲವರ ನಮ್ಮ ಸ್ವ ಬುದ್ಧಿಂದ ಕಲಿತ್ತು. ಇನ್ನು ಕೆಲವು ಒಳ್ಳೆ ಜೆನರ ಸಹವಾಸಂದಲೂ ಕಲಿತ್ತು. ಹೀಂಗೆ ಬೇರೆ ಬೇರೆ ಮೂಲಂಗಳಿಂದ ತಿಳ್ಕೊಂಡೇ ಸರ್ವಜ್ಞ ಆವುತ್ತು.

~

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ|
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೨||

ಕೈಲಿ ಕನ್ನಾಟಿ ಇಪ್ಪಗ ಅದರ ಬಿಟ್ಟು ನೀರಿಲ್ಲಿ ಮೋರೆ ನೋಡ್ತವಾ?  ಹಾಲಿಂಗಾಗಿ ಕಾಮಧೇನು ಇಪ್ಪಗ ಬೇರೆ ಹಸುಗಳ ಸಾಂಕುತ್ತವೋ? ಗುಣವಂತರು ಹಾಲು ಉಂಡ ಮತ್ತೆ ಬೇರೆ ಎಂತಾರೂ ಉಣ್ಣುತ್ತವೋ? ಗಿಳಿಯ ಮಾತಿಲ್ಲಿ ಇಪ್ಪ ಇಂಪಿಂದ ಹೆಚ್ಚಿನದ್ದು ಕಾಕೆಯ ಕೂಗಿಲ್ಲಿ ಇದ್ದಾ? ರಂಭೆಯ ನೃತ್ಯ ನೋಡಿದ ಮತ್ತೆ ಡೊಂಬರಾಟ  ನೋಡ್ತವಾ? ಸ್ನೇಹಿತರಿಂದ ಹೆಚ್ಚಿನ ದೊಡ್ಡ ವಸ್ತು ಎಂತಾರೂ ಇದ್ದಾ?
(ಮುಕುರಂ= ಕನ್ನಾಟಿ)

~

ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ |
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ ||
ರವಿ ಮುಖ್ಯಂ ಗ್ರಹ ವರ್ಗದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್ |
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೩||

ಇದರಲ್ಲಿ ಕವಿ, ಆರು ಶ್ರೇಷ್ಠ ಹೇಳಿ ವ್ಯಾಖ್ಯಾನ ಮಾಡ್ತ°.
ಮನುಷ್ಯರಲ್ಲಿ ಕವಿ, ಲೋಹಂಗಳಲ್ಲಿ ಚಿನ್ನ, ತೀರ್ಥಂಗಳಲ್ಲಿ (ನೀರಿಲ್ಲಿ) ಗಂಗಾಜಲ, ಹೆಂಗಸರಲ್ಲಿ ಪತಿವ್ರತೆ, ಗ್ರಹಂಗಳಲ್ಲಿ ಸೂರ್ಯ, ರಸಂಗಳಲ್ಲಿ ಶೃಂಗಾರ ರಸ, ದೇವತೆಗಳಲ್ಲಿ ಶಿವನೇ ಶ್ರೇಷ್ಠ.

~

ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ ||
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೪||

ಇದರಲ್ಲಿ ಕವಿ, ಎಲ್ಲೆಲ್ಲಿ ಆರು ಭೂಷಣಪ್ರಾಯರಾಗಿ ಇರ್ತವು ಹೇಳ್ತ°:
ಆಕಾಶಕ್ಕೆ ಸೂರ್ಯನೂ, ಇರುಳಿಂಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ತಾವರೆಯೂ, ಯಜ್ಞಕ್ಕೆ ಹವಿಸ್ಸೂ, ಹೆಂಗಸರಿಂಗೆ ಪಾತಿವ್ರತ್ಯವೂ, ರಾಜರ ಸಭೆಗೆ ಕವಿಯೂ ಅಲಂಕಾರ.

~

ಹರನಿಂದುರ್ವಿಗೆ ದೈವವೇ ಕಿರಣಕಿಂದುಂಬಿಟ್ಟು ಸೊಂಪುಂಟೆ ಪೆ|
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ ||
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ವಾಳೆ ಮೂಲೋಕದೊಳ್
ಗುರ್ವಿಂದುನ್ನತ ಸೇವ್ಯನೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೫||

ಶಿವನಿಂದ ಮೇಲ್ಪಟ್ಟು ದೊಡ್ಡ ದೇವರು ಆರೂ ಇಲ್ಲೆ, ಚಂದ್ರನ ಕಿರಣಂದ ಹೆಚ್ಚಿನ ತಂಪಿನ ಕಿರಣ ಬೇರೆ ಯಾವುದೂ ಇಲ್ಲೆ.
ನಮ್ಮ ಹೆತ್ತವರಿಂದ ಹೆಚ್ಚಿನ ಹಿತ ಬಯಸುವವು ಆರೂ ಇಲ್ಲೆ. ಗ್ರಹಸ್ಥರಿಂಗೆ ಹೆಂಡತಿಗಿಂತ ಹೆಚ್ಚಿನ ಆಪ್ತರು ಬೇರೆ ಆರೂ ಇಲ್ಲೆ.
ವಿದ್ಯೆಗಿಂತ ಹೆಚ್ಚಿನ ನೆಂಟರು ಆರೂ ಇಲ್ಲೆ. ಮನ್ಮಥನ ಮೀರುಸುವ ಬಿಲ್ಲಾಳುಗೊ ಆರೂ ಇಲ್ಲೆ. ಸೇವೆ ಮಾಡುಸಲೆ ಗುರುವಿಗಿಂತ ಉತ್ತಮರು ಆರೂ ಇಲ್ಲೆ.

~

ಸೂ:

~*~*~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

34 thoughts on “ಸೋಮೇಶ್ವರ ಶತಕ

  1. ಸೋಮೇಶ್ವರ shataka ಸರಿ ಆದರೆ ಈ ವಿವರಣೆ ಕೊಟ್ಟಿರುವುದು ಯಾವ ಭಾಷೆಯಲ್ಲಿ? ಹಳೆಗನ್ನಡವೋ? tiliyalilla

    1. ಇದು ಹವಿಗನ್ನಡ ಭಾಷೆಯಲ್ಲಿದೆ

  2. ಬಹು ಒಳ್ಳೆಯ ಕಾರ್ಯ ಮಾಡ್ತಾ ಇದ್ದೀರಾ. ಮುಂದು ವರೆಸಿ.

  3. ನಾನು ೭೦-೮೦ ರ ದಶಕದಲ್ಲಿ ಶಾಲೆ ಕಲಿಯುವಾಗ ಸೋಮೇಶ್ವರನ ಶತಕ ಬಾಯಿಪಾಠ ಮಾಡಿದ ನೆನಪುಗಳನ್ನ ತಂದು ಕೊಟ್ಟಿತು.
    ಕಾನನದೋಳ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ, ……
    ಹರಕೊಲ್ಲಲ್ ಪರಕಾಯ್ವನೆ……
    ಇತ್ಯಾದಿ ಇನ್ನೂ ಮನದಲ್ಲಿ ಗುನುಗುನಿಸುತ್ತಿವೆ.
    ಧನ್ಯವಾದಗಳು ವೇಂಕಟೇಶ ಮನ್ನಾರಿ, ಹಾವೇರಿ /ಧಾರವಾಡ

  4. ಐವತ್ತು ವರ್ಷಗಳ ಹಿಂದೆ ಓದಿದ ಕಾವ್ಯ ನೆನಪಿಗೆ ಬಂದಕೂಡಲೆ ಅಂಗೈಗೆ ತಂದುಕೊಟ್ಟ ನಿಮಗೂ, ಇಂದಿನ ತಂತ್ರಜ್ಞಾನಕ್ಕೂ ನಮಸ್ಕಾರಗಳು!

  5. ಮಾನ್ಯರೇ, ನಾನು ಕೆ.ಎಸ್.ಗುರುಮೂರ್ತಿ, ನಿವೃತ್ತ ತಹಸೀಲ್ದಾರ, ಸಧ್ಯ ಸಿಎಂಎಸ್ ಐಟಿ ಸರ್ವೀಸಸ್ ನಲ್ಲಿ ಸಮಾಲೋಚಕನಾಗಿದ್ದು ಬೆಂಗಳೂರಿನಲ್ಲಿ ಭೂಮಿ ಉಸ್ತುವಾರಿ ಕೋಶದಲ್ಲಿ ಕೆಲಸ ಮಾಡುತ್ತಿದ್ದೇನೆ. ಸೋಮೇಶ್ವರ ಶತಕದ ತಿಳುವಳಿಕೆಯ ಶೈಲಿ ಖುಷಿಯಾಗಿದೆ. ಧನ್ಯವಾದಗಳು.

  6. ಶರ್ಮಣ್ಣನ ಹಿರಿ ಮಗಳಾದ ರಶ್ಮಿಗೆ ಎಮ್ ಟೆಕ್ ಲಿ ಪ್ರಥಮ ರಾ೦ಕ್ ಬ೦ದದಕ್ಕೆ ಈ ಸ೦ಧರ್ಭಲ್ಲಿ ಅಭಿನ೦ದನೆಗೊ.

    1. ಓಹ್! ಉದಿಯಪ್ಪಗಳೇ ಕೊಶಿಯ ಶುದ್ದಿ ಕೇಳಿತ್ತು. ರಶ್ಮಿಗೆ ಅಭಿನಂದನೆಗೊ.

  7. ಒಳ್ಳೆದಾಯಿದು.
    ಇದು “ಮತ್ತೇಭವಿಕ್ರೀಡಿತ ವೃತ್ತ”ಲ್ಲಿಪ್ಪದು ಹೇಳಿ ಈ ಸೂತ್ರವ ಎನ್ನ ಮನೆದೇವರು ಹೇಳಿಕೊಟ್ಟಿದು – “ಸಬರಂನಂಮಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ”

    1. ಯತಿ ಹಸ್ತಕ್ಕೆ ಸಭಂರನಂ ಮಯಲಗಂ ಮತ್ತೇಭವಿಕ್ರೀಡಿತಂ-ಹೇಳಿ ಇನ್ನೊಂದು ಸೂತ್ರ ಇದ್ದು.ಹಸ್ತ-ಹದಿಮೂರನೆ ನಕ್ಷತ್ರ-ಆ 13 ಅಕ್ಷರದ ನಂತರ ಯತಿ [ವಿರಾಮ] ಬರೆಕ್ಕಾಡ,ಈ ವೃತ್ತಲ್ಲಿ.

  8. ಈ ಬೈಲಿ೦ಗೆ ಭೂಷಣಂ
    ಶ್ರೀ ಅಣ್ನನ ಕಾಯಕವು.

  9. ಮಹೇಶಣ್ಣ ಹೇಳಿದ ಹಾಂಗೆ, ಪಿ ಬಿ ಶ್ರೀನಿವಾಸನ ದನಿಯೇ ಕೇಳುತ್ತು, ಈ ವಿಷಯವ ಅಂದೇ ಆನು ಶ್ರೀಶಣ್ಣನ ಹತ್ರೆ ಮಾತಾಡುವಗ, ಹೇಳಿದ್ದೆ ಕೂಡಾ. ಹಳೆ ರಾಜ ಕುಮಾರನ ಸಿನೆಮಾಲ್ಲಿ ಸುರೂವಿಂಗೆ ಊದುಬತ್ತಿ ಹೊಗೆಯೊಟ್ಟಿಂಗೆ ದೇವರ ಫೊಟೋವ ತೋರುಸುವಗ ಇದೇ ಸ್ವರ ಕೇಳುತ್ತು, ಅಲ್ಲದೊ ಮಹೇಶಾ ? ಶ್ರೀಶಣ್ಣನ ಧ್ವನಿ ಕೇಳ್ಲೆ ತುಂಬಾ ಕೊಶಿ ಆವ್ತು.

  10. ಶರ್ಮಪ್ಪಚ್ಚಿಯ ಶ್ರಮಂದ ಶತಕದ ಅರ್ಥಸ್ವಾರಸ್ಯ ಸಿಕ್ಕುತ್ತಾ ಇದ್ದು. ಧನ್ಯವಾದಂಗ.
    ಶ್ರೀಶಣ್ಣನ ಧ್ವನಿಮಾಧುರ್ಯ ಶತಕದ ರುಚಿಯ ಲಾಯಕಕ್ಕೆ ಆಸ್ವಾದಿಸುವ ಹಾಂಗೆ ಮಾಡ್ತಾ ಇದ್ದು.
    ಪಿಬಿ ಶ್ರೀನಿವಾಸನ ಸ್ವರ ಕೇಳಿದಾಂಗೆ ಆವ್ತನ್ನೆ!

    1. ಮಹೇಶಣ್ಣನ ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗೊ.
      ಪಿ.ಬಿ. ಎಲ್ಲಿ, ನಾವು ಎಲ್ಲಿ?

  11. ಮಧುರ ಮಧುರವೀ ಮ೦ಜುಳ ಗಾನ. ಶತಕ ವಾಚನ ತು೦ಬಾ ಲಾಯ್ಕ ಆಯಿದು .ಪ್ರತಿ ವಾರವೂ ಹರಿಯಲಿ ಈ ಗಾನ ಸುಧೆ.

  12. ಜೆಮ್ಬಾರಲ್ಲಿ ಚೂರ್ಣಿಕೆ ಕೇಳಿದ ಹಾಂಗೆ ಆತು 🙂

  13. ಬಹಳ ಲಾಯ್ಕಿದ್ದು.
    ಸೋಮೇಶ್ವರ ಶತಕ ಕನ್ನಡ ಸಾಹಿತ್ಯದ ಅನರ್ಘ್ಯ ರತ್ನ.

  14. ಕೇಳಿಯಾತು… ಓದಿಯಾತು …ಖುಷೀಯಾತು…. ಧನ್ಯವಾದ ಶರ್ಮಪ್ಪಚ್ಚಿ, ಶ್ರೀಶಣ್ಣ

    1. ಧನ್ಯವಾದಂಗೊ ಮಾನೀರ್ ಮಾಣಿಗೆ.
      ಮೊನ್ನೆ ಕಂಡು ಮಾತಾಡಿದ್ದು ಕೊಶಿ ಆತು.

      1. ಶರ್ಮಪ್ಪಚ್ಚಿ ನಿ೦ಗಳೆಲ್ಲರ ಕ೦ಡದ್ದು ಯೆನಗೂ ಕೊಶಿಯಾಯ್ದು. ಮೊದಾಲು ರಜಾ ಹಿ೦ಜರಿಕೆ ಇತ್ತು. ಆರೂ ಗುರ್ತ ಇಲ್ಲೆ ಹೆ೦ಗಪ್ಪಾ ಹೇಳಿ. ಕಡೇಗೆ ಹಾ೦ಗೆ ಅನಿಸಿದ್ದೇ ಇಲ್ಲೆ. ಹೊಸಬನನ್ನೂ ಲಾಯಕ್ಕಲ್ಲಿ ಮಾತಾಡ್ಸಿದವು ಬೈಲಿನವು 🙂

  15. ಶ್ರೀಶಣ್ಣನ ಗಾಯನದ ಏರಿಳಿತ ಹಿತವಾಗಿ ಮೂಡಿ ಬೈಯಿ೦ದು, ಧನ್ಯವಾದ.

    ಹಳೆಗನ್ನಡದಲ್ಲಿಪ್ಪ ಸೋಮೇಶ್ವರ ಶತಕಕ್ಕೆ ಕನ್ನಡದಲ್ಲಿ ಬೇರೆ ಬೇರೆಯವರು ಅರ್ಥ/ ಭಾವಾರ್ಥ ವಿವರಣೆ ಕೊಟ್ಟಿದ್ದೊ.
    ಆದರೆ ಹವಿಗನ್ನಡದಲ್ಲಿ ಆನು ಮೊದಲಬಾರಿ ಇದನ್ನ ನೋಡ್ತಾ ಇದ್ದೆ,
    ಇದು ಕೇವಲ ಭಾವಾರ್ಥ ಅಲ್ಲ, ಪೂರ್ಣ ಮಾಡಿದಾಗ ಇದು ಹವಿಗನ್ನಡದ ಅಪರೂಪದ ಆಸ್ತಿ ಆಗೊದರಲ್ಲಿ ಸ೦ಶಯ ಇಲ್ಲೆ. ಇದಕ್ಕಾಗಿ ಕ್ರಿಯಾಶೀಲ ಹೆಜ್ಜೆಯಿಟ್ಟ ಶರ್ಮಪ್ಪಚ್ಚಿ೦ಗೆ ಅಭಿನ೦ದನೆ ಹಾಗೂ ಧನ್ಯವಾದ೦ಗೊ.

    1. ಧನ್ಯವಾದಂಗೊ ದೊಡ್ಮನೆ ಭಾವಂಗೆ.
      ಇದರ ಮುಂದುವರ್ಸುವ ಪ್ರಯತ್ನ ಇದ್ದು.

  16. ಶ್ರೀಶಣ್ಣನ ದನಿಲಿ ಸೋಮೇಶ್ವರ ಶತಕ ಚೆಂದಕೆ ಮೂಡಿ ಬಯಿಂದು. ಶರ್ಮಪ್ಪಚ್ಚಿಯ ಅರ್ಥ ವಿವರಣೆಯುದೆ ಒಟ್ಟು ಸೇರಿದ್ದದು ಮತ್ತೂ ಚೆಂದ ಆತು. ಶ್ರೀಶಣ್ಣ+ಶರ್ಮಪ್ಪಚ್ಚಿಯ ಬಾಂಧವ್ಯ ಹೀಂಗೇ ಮುಂದುವರುದು, ಬೈಲಿಂಗೆ ಸಾತ್ವಿಕ ರಂಜನೆ ಸಿಕ್ಕುತ್ತಾ ಇರಳಿ.

    1. ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗೊ

  17. ಕಾಲೇಜಿ೦ಗೆ ಹೋಪಗ ಕಲ್ತ ಕೆಲವು ಸೋಮೇಶ್ವರ ಶತಕ೦ಗೊ ನೆ೦ಪಿಗೆ ಬ೦ತು. ದನ್ಯವಾದ೦ಗೊ.

  18. ಅಪ್ಪಚ್ಚಿ ಬರದ್ದದೂ ಲಾಯಕ ಆಯ್ದು, ಶ್ರೀಶಣ್ಣ ಹಾಡಿದ್ದೂ ಲಾಯಕ ಆಯ್ದು. ಕೊಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×