Oppanna.com

ರೂಪತ್ತೆಗೆ ತುಂ…ಬಾ ಬೇಜಾರಾಯಿದಡ.. ;-(

ಬರದೋರು :   ಒಪ್ಪಣ್ಣ    on   01/07/2011    65 ಒಪ್ಪಂಗೊ

ಅಪ್ಪು, ಬೈಲಿಲಿ ಸುಮಾರು ಸಮಯ ಆತು, ಕುಶಿಯ ಶುದ್ದಿಯನ್ನೇ ಮಾತಾಡ್ತದು.
ನಾವು ಮಾತಾಡಿರೂ, ಎಲ್ಲೋರುದೇ ಕೊಶಿಲಿದ್ದವು ಹೇಳಿ ಲೆಕ್ಕ ಅಲ್ಲ; ಪ್ರಪಂಚಲ್ಲಿ ಬೇರೆಬೇರೆ ನಮುನೆ ಮನಸ್ಥಿತಿಯೋರು ಇದ್ದವಿದಾ.
ಭಗವದ್ಗೀತೆಲಿ ಹೇಳಿದ ನಮುನೆ – ವೀತ ರಾಗ ಭಯ ಕ್ರೋಧ  ಬಿಟ್ಟು ಸ್ಥಿತಪ್ರಜ್ಞ° ಆಗಿಪ್ಪಲೆ – ಎಲ್ಲರಿಂದಲೂ ಎಡಿಗೋ? 🙂
ಒಬ್ಬ° ಕೊಶಿಲಿದ್ದರೆ ಇನ್ನೊಬ್ಬ° ಬೇಜಾರಲ್ಲಿಕ್ಕು, ಮತ್ತೊಬ್ಬ ಹಾಂಕಾರಲ್ಲಿಕ್ಕು.
ಉದಾಹರಣೆಗೆ, ಚೆನ್ನೈಭಾವ ಬಟಾಟೆಸೋಂಟೆಮಾಡಿ ಹೊಟ್ಟೆತುಂಬ ತಿಂದು ‘ಇದೆಂತರ’ ಕೇಳಿಗೊಂಡಿದ್ದರೆ, ಹಜಾರೆಅಣ್ಣ ಉಪವಾಸ ಮಾಡಿ ಹಶುಹೊಟ್ಟೆಲಿ ‘ಇನ್ನೆಂತರ’ ಕೇಳಿಗೊಂಡಿಕ್ಕು!!
ವಿದ್ವಾನಣ್ಣನ ಕೈಲಿ ಕೇಳಿರೆ, ಲೋಕೋ ಭಿನ್ನರುಚಿಃ – ಹೇಳುಗು.
ಅದಿರಳಿ.
~

ಸುಮಾರು ಸಮೆಯ ಆತು ರೂಪತ್ತೆಯ ಶುದ್ದಿ ಸಮಗಟ್ಟು ಮಾತಾಡದ್ದೆ; ಬೈಲಿನ ಕೆಲವು ಜೆನಕ್ಕೆ ಅದರ ಮರದೇ ಹೋಯಿದೋ ಏನೋ!
ಮೂಲ ಪುತ್ತೂರು ಇದ್ದೊಂಡು ಸದ್ಯ ಪಂಜಲ್ಲಿ ಇದ್ದವು. ದೊಡಾ ಜಾಗೆ, ದೊಡ್ಡ ಮನೆ.
ಜಾಗೆ ಕೆಲಸಕ್ಕೆ ಧಾರಾಳ ಆಳುಗೊ ಇದ್ದವು; ಮನೆಗೆಲಸ ಅವರ ಗೆಂಡನೇ ಮಾಡ್ತ ಕಾರಣ – ಟೀವಿನೋಡಿಗೊಂಡು, ಮೊಬೈಲು ಮಾತಾಡಿಗೊಂಡು ಆರಾಮಲ್ಲಿ ಇರ್ತವು.
ತರವಾಡುಮನೆ ರಂಗಮಾವನ ತಂಗೆ ಮಾಲಚಿಕ್ಕಮ್ಮನ ಮೂಡ್ಳಾಗಿ ಕೊಟ್ಟದಿದಾ – ಪಂಜಚಿಕ್ಕಯ್ಯಂಗೆ; ಅವರ ನೆರೆಲೇ ರೂಪತ್ತೆ ಇಪ್ಪ ಕಾರಣ ಧಾರಾಳ ಶುದ್ದಿಗೊ ಬೈಲಿಂಗೆ ಸಿಕ್ಕುತ್ತು!

ಅವರ ಬಗ್ಗೆ ನಾವು ಅದಾಗಲೇ ಕೆಲವು ಸರ್ತಿ ಮಾತಾಡಿದ್ದು ಅಲ್ಲದಾ?
ಸುರೂವಿಂಗೆ ರೂಪತ್ತೆಯ ಮನೆಲಿ ಎಲಿ ಉಪದ್ರ ಕೊಟ್ಟು – ಮಾ ರಗಳೆ ಆದ್ದರ ಬಗ್ಗೆ ಶುದ್ದಿ ಮಾತಾಡಿತ್ತಿದ್ದು.  (ಸಂಕೊಲೆ)
ರೂಪತ್ತೆ ಬಗ್ಗೆ ವಿವರವಾಗಿ ಗುರ್ತ ಗೊಂತಾದ್ದು ಈ ಶುದ್ದಿಲೇ.
ಬಂಡಾಡಿಪುಳ್ಳಿ ಈ ಶುದ್ದಿಯ ಕೇಳಿ – ಮರದಿನ ಕ್ಳಾಸಿಲಿ ನೆಂಪಾಗಿ ಪಸಕ್ಕನೆ ತನ್ನಷ್ಟಕ್ಕೇ ನೆಗೆಮಾಡಿ, ಮಾಷ್ಟ್ರನಕೈಲಿ ಸಿಕ್ಕಿಬಿದ್ದದು ಬೇರೆಯೇ ಶುದ್ದಿ! 😉
ಅದು ಒಪ್ಪಣ್ಣಂಗೆ ಲಗಾವು ಇಲ್ಲೆ. 😉
ಅದಿರಳಿ

ಮನೆಲಿ ಕೆಲಸಕ್ಕೆ ಹೇಂಗೂ ಮಾವ° ಇಪ್ಪಗ, ಅಂತೇ ಕೂದು ಧಾರಾವಾಹಿಗಳ ನೋಡ್ತರ ಎಡಕ್ಕಿಲಿ – ಪಂಜದ ಉಮಾ ಡ್ರೈವಿಂಗು ಸ್ಕೂಲಿಂಗೆ ಹೋದ್ದು ನೆಂಪಿದ್ದೋ?
ಅದರಿಂದ ಮತ್ತೆ ಎರಡುವಾರ ರೂಪತ್ತೆ ಕಾರು ಕಲ್ತ ಶುದ್ದಿಯನ್ನೇ ಒಂದು ವಾರ ಮಾತಾಡಿದ್ದು. ನೆಗೆಮಾಣಿ ಅಂತೂ ಅದರ ಓದಿಯೇ ಕಾರು ಕಲ್ತಿದ! (ಸಂಕೊಲೆ)
ಬೊಳುಂಬುಮಾವ ಈಗಳೂ ರೂಪತ್ತೆಯ ಅದೇ ಶುದ್ದಿಲಿ ಗುರ್ತ ಹಿಡಿವದಿದಾ! 🙂

ಮುಂದಕ್ಕೆ, ಬೈಲಿಲಿ ಓಡಾಡ್ಳೆ ಕಷ್ಟ ಆವುತ್ತು ಹೇಳ್ತ ಕಾರಣಕ್ಕೆ – ಮಗ ಒಂದು ಕಾರು ತೆಗದು ಕೊಟ್ಟದು ಬೈಲಿಂಗೆ ಗೊಂತಿದ್ದು;
ರೂಪತ್ತೆಯೇ ಸ್ವತಃ ಅದರ ಬಿಟ್ಟುಗೊಂಡು ಹೋಪಗ, ದಾರಿಲಿ ಗಣೇಶಮಾವನ ಕಂಡುದೇ ಸೀತ ಹೋದ್ದು ಅರಡಿಗೋ?
ಅದಾ, ಅಂದೊಂದರಿ ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆ – ಹೇಳ್ತ ಶುದ್ದಿ ಮಾತಾಡಿದ್ದು. (ಸಂಕೊಲೆ)
ದೊಡ್ಡಜ್ಜಂಗೆ ಬೈಲು ಹೇಳಿರೆ ಪಕ್ಕನೆ ಇದೇ ಶುದ್ದಿ ನೆಂಪಪ್ಪದು!  😉
~

ಆಗಲಿ, ಹೋಗಲಿ.
ಅದೆಲ್ಲ ಆಗಿ, ಸುಮಾರು ಸಮೆಯ ಆತು – ರೂಪತ್ತೆಯ ಶುದ್ದಿಯೇ ಮಾತಾಡದ್ದೆ. ಅದರಷ್ಟಕೇ ಇತ್ತು. 😉
ಮೊನ್ನೆ ಒಂದಿನ ಕೆದಿಲಲ್ಲಿ ಉಪ್ನಾನ ಇತ್ತಲ್ಲದೋ? ಹೇಳಿಕೆ ಇತ್ತು, ಆದರೆ ನವಗೆ ಹೋಪಲಾಯಿದಿಲ್ಲೆ.
ಕಲ್ಮಡ್ಕ ಅನಂತ° ಹೋಗಿತ್ತಿದ್ದನಾಡ ಇದಾ.
ನಿನ್ನೆ ಅಜ್ಜಕಾನಬಾವಂಗೆ ಅನಂತ° ಸಿಕ್ಕಿ, ಬೈಲಿಂಗೆತ್ತಿದ ಕೆಲವು ಶುದ್ದಿಗಳಲ್ಲಿ ರೂಪತ್ತೆಯ ಶುದ್ದಿಯೂ ಇದ್ದತ್ತು!
ಈ ವಾರ ಅದನ್ನೇ ಮಾತಾಡುವನೋ?
(ನಿಂಗೊ ಮಾತಾಡುವೊ° ಹೇಳುವಿ, ಆದರೆ ಸರ್ಪಮಲೆಮಾವ ಕಣ್ಣುದೊಡ್ಡಮಾಡಿರೆ ಒಪ್ಪಣ್ಣ ಒಬ್ಬನೇ ಕೇಳಿಗೊಳೆಡದೋ? ;-( )
~
ಹೇಳಿದಾಂಗೆ, ಆ ಉಪ್ನಾನಕ್ಕೆ ರೂಪತ್ತೆಗೂ ಹೇಳಿಕೆ ಇದ್ದತ್ತು.
ಎಂತಾರು ಸಾಮಾನು ತಪ್ಪದೋ – ಮಣ್ಣ ಇದ್ದರೆ ಮಾವ° ಅಂಬೆರ್ಪಿಲಿ ಇರ್ತವು, ಅಲ್ಲದ್ದರೆ ಅವು ಮನೆಲೇ ಇರ್ತವು ಅಲ್ಲದೋ.
ಮಾವ ಮನೆಲೇ ಇದ್ದರೆ ರೂಪತ್ತೆಗೆ ಜೆಂಬ್ರಂಗೊಕ್ಕೆ ಹೋಪಲೆ ಅನುಕೂಲ ಅಪ್ಪದು; ಹಾಂಗೆ ಮಾವಂಗೆ ಪುರುಸೊತ್ತು ಮಾಡುಸಿ, ಮನೆಲೇ ನಿಲ್ಲುಸಿ- ಆ ದಿನ ರೂಪತ್ತೆ ಬಂದಿತ್ತಾಡ.

~
ಪಂಜಂದ ಕೆದಿಲಕ್ಕೆ ಸೀತ ಬಸ್ಸಿಲ್ಲೆ; ಎರಡು ಮೂರು ಪಗರುಸಿ ಬರೇಕಷ್ಟೆ – ಅಲ್ಲದೋ?
ಒಂದು ವೇಳೆ ಬಸ್ಸಿದ್ದರೂ ಜೆಂಬ್ರಕ್ಕೆ ಹೋಪಲೆ ಆಗ;
ಪಟ್ಟೆಸೀರೆ ಹೊಡಿ ಆಗಿ, ಸೀಟಿಂದ ಮಣ್ಣು ಹಿಡಿಗು, ಸೂಡಿದ ಮಲ್ಲಿಗೆಮಾಲೆ ಹೊಡಿಯಾಗಿ, ಬೆಗರಿಂಗೆ ಪವುಡರು ಹಾಳಾಗಿ, ಮೂಗಿಂಗೆ ಧೂಳು ಹೋಗಿ, ಶೀತ ಆಗಿ.. ಹೋ ಕಷ್ಟ ಕಷ್ಟ!
ಅದಲ್ಲದ್ದೇ, ಈಗಾಣ ಹೊಸ ಮೊಬೈಲುದೇ ಜಾಗ್ರತೆ ಮಾಡಿಗೊಳೆಕ್ಕಕ್ಕು, ಈ ನೂರೈವತ್ತು ನಮುನೆ ಜೆನಂಗೊ ಬಪ್ಪಗ  ಜಾಗ್ರತೆ ಮಾಡೇಕೋ- ಬೇಡದೋ?
ಮತ್ತೆ, ಬಸ್ಸಿಲೇ ಹೋಗಿ ಏನೂ ಆಯೇಕು ಹೇಳಿ ಇಲ್ಲೆ; ಕಾರಿದ್ದನ್ನೇ?!

ಹಾಂಗೆ, ಆ ದಿನ ಕಾರು ತೆಕ್ಕೊಂಡು ಹೆರಟೇ ಹೆರಟ ರೂಪತ್ತೆ – ಹನ್ನೊಂದುಗಂಟೆ ಹೊತ್ತಿಂಗೆ ಎತ್ತಿತ್ತಡ, ಉಪ್ನಾನ ಮನೆಗೆ.
ಜಾಲಿಂಗಡ್ಡದ ದಾರಿಲಿ ಓರಗೆ ಕಾರು ನಿಲ್ಲುಸಿತ್ತು.
ಮೋರೆಲಿದ್ದ ಷ್ಟಿಕ್ಕರಿನ ತೆಗದು ಕನ್ನಟಿಗಂಟುಸಿ, ಎರಡು ಸರ್ತಿ ತಲೆಬಾಚಿ, ನಾಕು ಸರ್ತಿ ಕನ್ನಾಟಿನೋಡಿ – ಮೋರೆ ಉದ್ದಿ, ಷ್ಟಿಕ್ಕರಿನ ಪುನಾ ಮೋರೆಗೆ ಅಂಟುಸಿಗೊಂಡು ಕಾರಿಂದ ಇಳುದತ್ತು.
ಬೀಗತಕೈಲಿ ಸುಚ್ಚು ಒತ್ತಿರೆ ಕಾರಿಂದ ಕೈಂಕ್ ಹೇಳಿ ಶಬ್ದ ಬತ್ತಲ್ಲದೋ – ಕಾರುಗೊಕ್ಕೆ ಶಬ್ದ ಇಲ್ಲೆ; ಕಾರು ಬಂದದು ನಾಕು ಜೆನಕ್ಕೆ ಗೊಂತಪ್ಪದು ಈ ಕೈಲೋಕು ಮಾಡುವಗಳೇ ಇದಾ!
ಬಾಗಿಲು ಹಾಕಿ ಕೈಂಕ್ ಶಬ್ದ ಮಾಡಿ ನೆಡಕ್ಕೊಂಡು ಬಂತು.
ಎಕ್ಸುಲೇಟ್ರು ತೊಳುದ್ದಕ್ಕೆ ಕಾಲುತೊಳೇಕು ಹೇಳಿ ಏನಿಲ್ಲೆ, ಹಾಂಗೆ, ಮನ್ನೆ ಬೆಂಗುಳೂರಿಂದ ತಂದ ಹೊಸಾ ಮೆಟ್ಟಿನ ಜೋಡಿನ – ಕಮ್ಮಿ ಕುರೆ ಇಪ್ಪಲ್ಲಿ, (ಎಲ್ಲೋರಿಂಗೂ ಕಾಣ್ತಲ್ಲಿ) – ಜಾಗೆನೋಡಿ ಮಡಗಿತ್ತಡ.
ಆರು ಎದುರು ಸಿಕ್ಕದ್ದರೂ ಒಳ್ಳೆದು ಒಳ್ಳೆದು ಹೇಳ್ತ ನಮುನೆಲಿ ನೆಗೆಮಾಡಿಗೊಂಡು ಒಳಬಂತು!
ಮೊಬೈಲು ಹಿಡುದ ಎಡದ ಕೈಲಿ ಪಟ್ಟೆಸೆರಗನ್ನೂ ಹಿಡ್ಕೊಂಡು, ಕರ್ಚೀಪು ಹಿಡ್ಕೊಂಡ ಇನ್ನೊಂದು ಕೈಲಿ ಬೆಗರಿಲ್ಲದ್ದ ಮೋರೆಯ ಪೌಡ್ರುಹಾಳಾಗದ್ದ ನಮುನೆಲಿ ಉದ್ದಿಗೊಂಡು – ಬಡಬಡನೆ ಬಂದು ಕೆಂಪುಕುರುಶಿಲಿ ಕೂದತ್ತಡ!

ಕಲ್ಮಡ್ಕ ಅನಂತನೂ ಅದೇ ಹೊತ್ತಿಂಗೆ ಎತ್ತಿದ ಕಾರಣ ಆಸರಿಂಗೆ ಕುಡುದ್ದು ಒಟ್ಟಿಂಗೇ ಅಡ.
ಅಪುರೂಪಲ್ಲಿ ಮಾತಾಡಿದ ಹಾಂಗಾತು – ಹೇಳಿಗೊಂಡು ರೂಪತ್ತೆಯ ಹತ್ತರೇ ಕೂದುಗೊಂಡನಡ.
ಉಪ್ನಾನಮಾಣಿಯ ಸೋದರತ್ತಿಗೆ – ಉದ್ದಲಂಗದ  ಕೂಚಕ್ಕ° – ಪುನರ್ಪುಳಿ ಶರ್ಬತ್ತಿನ ತಂದು ಕೊಟ್ಟತ್ತಡ.
ಅರ್ದ ಸಾಕಾತ – ಹೇಳಿ ಒಂದು ಗ್ಲಾಸು ತೆಗದು, ಒಳುದ ಗ್ಲಾಸುಗೊಕ್ಕೆ ಅರೆವಾಶಿ ಎರದು.. ಅದಾ! ಎರವಗ ಒಂದು ಬಿಂದು ಬಿದ್ದತ್ತಡ – ಪಟ್ಟೆಸೀರೆ ಮೇಗಂಗೆ!
ಶರ್ಬತ್ತಲ್ಲ, ಬೆಶೀ ಪಾದರಸ ಬಿದ್ದ ಹಾಂಗೆ ರಪಕ್ಕನೆ ಒಂದರಿಯೇ ಗಡಿಬಿಡಿಮಾಡಿಗೊಂಡತ್ತಡ!
ಕಳುದೊರಿಶ ಮಗಳ ಮದುವೆ ಕಳಾತಲ್ಲದೋ- ಅದರ ಮರುಮಂಗಲ ಸೀರೆಗೆ ಮೇಚಿಂಗು ಸೀರೆ ಅಡ ಇದು, ಚೆ – ಪುನರ್ಪುಳಿ ಕಲೆ ಬೇಗ ಹೋವುತ್ತೂಇಲ್ಲೆ! ಹೇಳಿ ಬೇಜಾರು ಮಾಡಿಗೊಂಡತ್ತಡ.
ತೊಂದರಿಲ್ಲೆ ಅತ್ತೆ, ತೊಳದರೆ ಹೋಕು – ಹೇಳಿದನಡ ಕಲ್ಮಡ್ಕನಂತ°!

ಅನಂತಂಗೆ ಹೇಳುಲೆ ಸುಲಾಬ, ಆದರೆ ಮಾವ ತೊಳೆತ್ತ ನಮುನೆ ತೊಳದರೆ ಕಲೆ ಅಲ್ಲ, ಗೊಂಡೆ – ಫಾಲುದೇ ಹೋಗದೋ? ಮಿಶನಿಂಗೆ ಹಾಕಿರೆ ಸೀರೆ ಒಳಿಗೋ? ಅದು ಇವಂಗೆ ಗೊಂತಿಲ್ಲೆ.
“ಇದು ಪಟ್ಟೆಸೀರೆ ಅಲ್ಲದೋ; ಡ್ರೈವಾಶೇ ಮಾಡುಸೆಕ್ಕಷ್ಟೆ ಅನಂತಾ” – ಬೇಜಾರದ ಎಡೆಲಿಯೂ ಸಮದಾನಮಾಡಿಗೊಂಡು ಹೇಳಿತ್ತಡ ರೂಪತ್ತೆ!
~

ಜೆಂಬ್ರದ ಮನೆಲಿ ಎಲ್ಲೋರುದೇ ಕೊಶಿಲಿದ್ದರೂ, ರೂಪತ್ತೆ ಮಾಂತ್ರ ಬೇಜಾರಲ್ಲೇ ಸುರುಮಾಡಿತ್ತು.
ಮದಲೇ ಮನಸ್ಸಿಂಗೆ ಬೇಜಾರಾದರೆ ಹೀಂಗೆಂತಾರು ಮತ್ತೊಂದು ಕಾರಣ ಸಿಕ್ಕಿಪ್ಪಗ ಉಮ್ಮಳುಸಿ ಬತ್ತು; ಅದು ಸಾಮಾನ್ಯವೇ.
ರೂಪತ್ತೆಗೂ ಹಾಂಗೇ ಆದ್ದು – ಅದು ಮದಲೇ ಬೇಜಾರಲ್ಲಿದ್ದತ್ತಡ; ಪೂರ್ವಾಪರ ಮತ್ತೆ ಕಲ್ಮಡ್ಕನಂತಂಗೆ ಗೊಂತಾತು!
~

ಮೊನ್ನೆ ಬೆಂಗುಳೂರಿಂಗೆ ಹೋದ ಮತ್ತೆ ಮಾತಾಡುವಗ ಎಲ್ಲೋರ ಹತ್ತರೆಯೂ –  ಒಂದಲ್ಲಒಂದು ವಿಷಯ ತೆಗದು ಬೆಂಗುಳೂರಿನ ಶುದ್ದಿ ಹೇಳುಗಡ.
ಅನಂತಂಗೆ ಅದು ಗೊಂತಿತ್ತಿಲ್ಲೆ, ಇಂದು ಮಾತಾಡುವನ್ನಾರ!

~
ಅಂತೂ, ಬೇಜಾರಪ್ಪಲೆ ಕಾರಣ ಎಂತರಪ್ಪ – ಅನಂತ ಕೇಳಿದ್ದಕ್ಕೆ ರೂಪತ್ತೆ ಸುಮಾರು ಶುದ್ದಿಮಾತಾಡಿ, ಕಾರಣ ಹೇಳಿತ್ತಡ.
ಆ…. ಆವಳಿಗೆ ತಡವಲೆ ಅನಂತಂಗೆ ಅರಡಿತ್ತು. ಕಲ್ಮಡ್ಕನಂತನ ಕೈಂದ ಶುದ್ದಿ ಕೇಳಿಗೊಂಡ ಅಜ್ಜಕಾನ ಬಾವಂಗೂ ಅರಡಿತ್ತು. ಆದರೆ  ನಿಂಗೊಗೆಡಿಗೋ? 😉
(ಆ…. ಆಹ್… ಆ………ವಳಿಗೆ ಬಂದರೆ ತಡಕ್ಕೊಳಿ ಆತಾ, ಶುದ್ದಿ ರಜ ಉದ್ದ ಇಕ್ಕು!)
~

ರೂಪತ್ತೆಯ ಮಗಳಿಂಗೆ ಕಳುದೊರಿಶ ಮದುವೆ ಆದ್ಸು ಬೈಲಿಂಗೇ ಅರಡಿಗು.
ಮದುವೆ ಆದ ಮತ್ತೆ ಮದಲಾಣ ಮಗಳೇ ಅಲ್ಲ ಅದು – ಹೇಳಿ ಅನುಸುದು ರೂಪತ್ತೆಗೆ. ದೂರ ಹೋಗಿ ಜೀವನ ಮಾಡುವಗ ಮನಗೆ ಪೋನುದೇ ಸಮಗಟ್ಟು ಮಾಡ್ತಿಲ್ಲೇಡ.
ಸುರು ರಜ್ಜ ಸಮೆಯ ಮಗಳ ಬಿಟ್ಟ ನಮುನೆಲಿ ಅಸಕ್ಕಾದರೂ, ಅದರ್ಲಿ ಬೇಜಾರ ಅಪ್ಪಲೆ ಎಂತೂ ಇಲ್ಲೆ!

ಮದುವೆ ಅಪ್ಪ ಸಮೆಯಲ್ಲಿ ಅಳಿಯಮಾಣಿ ಉತ್ತರಭಾರತಲ್ಲಿ ಇತ್ತಿದ್ದನಾಡ, ಮತ್ತೆ ಬೆಂಗುಳೂರಿಂಗೆ ಟ್ರಾನ್ಸುವರು ಆತಡ.
ಕಂಪೆನಿಯವಕ್ಕೆ ರೂಪತ್ತೆ ಅಳಿಯನ ಬಾರೀ ಕೊಶಿ ಅಡ! ಅವನ ಕೆಲಸ ಹೇಳಿರೆ ತುಂಬ ಲಾಯಿಕಡ. ಅವನ ಕೆಲಸ ಕೊಶಿ ಆಗಿ ಅವ್ವೇ ಜಾಸ್ತಿ ಸಂಬಳದ ವೆವಸ್ತೆ ಮಾಡಿದ್ದವಡ.
ಒಂದು ಕಂಪೆನಿಂದ ಇನ್ನೊಂದಕ್ಕೆ ಹಾರಿ ಬೆಂಗುಳೂರಿಂಗೆ ಎತ್ತಿದ್ದು –ಹೇಳ್ತದು ಅನಂತಂಗೆ ಬೇರೆಆರೋ ಹೇಳಿತ್ತಿದ್ದವು ಮದಲೇ!
ಆಪೀಸಿಲಿ ಕೆಲಸ ಜಾಸ್ತಿ ಮಾಡಿ ಅಳಿಯ ಮನಗೆ ಬಪ್ಪದೇ ತಡವಾವುತ್ತಡ. ಕೆಲಸದ ವಿಶಯಲ್ಲಿ ಅಂಬೆರ್ಪು ಇದ್ದರೆ ಬೇಜಾರ ಏನೂ ಮಾಡ್ಳಿಲ್ಲೆ ಇದಾ!

ರೂಪತ್ತೆಗೆ ಉತ್ತರಭಾರತ ಯಾತ್ರೆ ಹೋಯೇಕು ಹೇಳಿ ಇತ್ತು.
ಅಲ್ಲಿ ರಜ ತಿರುಗಿ, ಚೆಂದಕೆ ತಾಜುಮಹಲೋ – ಗಾಜುಮಹಲೋ – ಎಲ್ಲ ನೋಡ್ಳಾವುತ್ತಿತು; ಅದರಿಂದಲೂ ಹೆಚ್ಚು, ಅಲ್ಯಾಣ ಪಟ ತೆಗದು ಮಾಲಚಿಕ್ಕಮ್ಮಂಗೆಲ್ಲ ತೋರುಸುಲಾವುತಿತು.
ಆದರೆ?  ಆ ಸಮೆಯಲ್ಲೇ ಅಳಿಯನ ಟ್ರಾನ್ಸುವರು ಆದ ಕಾರಣ ಆಲೋಚನೆ ಕಂಜಿಹಾಕಿತ್ತು. ಪಾಪ!
ಅಲ್ಲ, ಕೆಲಸಲ್ಲಿ ಹಾಂಗೆಲ್ಲ ಇಪ್ಪದೇ, ಒಂದು ದಿಕ್ಕಂದ ಇನ್ನೊಂದು ದಿಕ್ಕಂಗೆ ಹೋವುತ್ತ ಬತ್ತ ಇರ್ತು – ಅದರ್ಲಿ ಏನೂ ಬೇಜಾರಿಲ್ಲೆ.

ಉತ್ತರ ಭಾರತಕ್ಕೆ ಹೋಪಲೆ ಎಡಿಗಾಗದ್ದಕ್ಕೆ ಮಗಳಪ್ಪಂಗೆ ಭಾರೀ ಕೊಶಿ ಆಯಿಕ್ಕು – ಹೇಳಿ ಗ್ರೇಶಿ ಮನಸ್ಸಿಲೇ ಪಿಸುರು ಎಳಗಿಂಡು ಇತ್ತಾಡ ರೂಪತ್ತೆಗೆ.
ಆದರೆ ಮಾವ ಈ ಶುದ್ದಿಗೆ ತಲೆಯೇ ಹಾಕಿದ್ದವಿಲ್ಲೇಡ, ಅವ್ವಾತು – ಅವರ ಮನೆಕೆಲಸ ಆತು, ಅಷ್ಟೇ!
ಆತಿನ್ನು; ಪುರುಸೋತಿಲಿ ಕೂದರಾಗ, ಬೆಂಗುಳೂರಿನ ಮಾಣಿ ಮತ್ತೆ ಕೊಡೆಯಾಲಕ್ಕೆ ಟ್ರಾನ್ಸ್ವರು ಆದರೆ ಅದೂ ಇರ – ಬೇಗ ಹೋಯೇಕು ಹೇಳಿ ಲೆಕ್ಕ ಹಾಕಿತ್ತಡ.
ಮಗಳು ಬೆಂಗುಳೂರಿಂಗೆ ಎತ್ತಿ ಮನೆವೆವಸ್ತೆ ಆದ ಕೂಡ್ಳೇ ಮಾವಂಗೆ ಪುರುಸೋತು ಮಾಡುಸಿ ಹೋಗಿಬಂತಡ!
ಒಬ್ಬನೇ ಹೋಗಿಬಪ್ಪದು ಹೇಳಿರೆ ಬೇಜಾರವೋ – ಚೆ ಚೆ, ಇಲ್ಲೆಪ್ಪಾ. ಅದರ್ಲಿ ಏನೂ ಬೇಜಾರಿಲ್ಲೆ.

ಹೋಗಿಬಂದು ಎರಡುವಾರ ಆತಷ್ಟೇ, ಪ್ರಯಾಣದ ಬಚ್ಚಲು ಇನ್ನುದೇ ಪೂರ್ತ ಹೋಯಿದಿಲ್ಲೇಡ!
ಹಾಂಗೆ ಬಚ್ಚಲಿದ್ದ ಕಾರಣ  ಕಳೀಯಬಾರದ್ದ ಜೆಂಬ್ರಂಗೊಕ್ಕೆ ಮಾಂತ್ರ ಹೋಪದಡ!
ಕೆದಿಲದ ಜೆಂಬ್ರ ಹೇಳಿರೂ ಹತ್ತರಾಣದ್ದೇ- ರೂಪತ್ತೆಯ ಗೆಂಡನ ತಂಗೆಯ ಮಾವನೋರ ಅಣ್ಣನ ಮಗನ ದೊಡ್ಡ ಮಗನ ಎರಡ್ಣೇ ಮಗಳ ಮೈದುನನ ಮಗಂಗೆ! 😉
ಹಾಂಗೆ – ಹತ್ತರಾಣದ್ದಾದ ಕಾರಣ ಹೆರಟದಷ್ಟೇ ಇಂದು!
ಮೊನ್ನೆ ಬೆಂಗುಳೂರಿನ ಬಚ್ಚಲಿಂದಾಗಿ ಎಲ್ಲ ಜೆಂಬ್ರಂಗೊಕ್ಕೆ ಹೋತಿಕ್ಕಲೆ ಅವಕಾಶ ಆವುತ್ತಿಲ್ಲೆ; ಬಿಡಿ, ಅದರ್ಲಿ ಏನೂ ಬೇಜಾರಿಲ್ಲೆ.

ಜೆಂಬ್ರಂಗೊಕ್ಕೆ ಕಾರಿಲೇ ಹೋವುತ್ತ ಕಾರಣ ಬಚ್ಚಲು ಹೆಚ್ಚಪ್ಪಲಿಲ್ಲೆಇದಾ! ಒಂದು ಸರ್ತಿ ಕೂದರೆ ಸೀದ ಹೋವುತ್ತು.
ಬೆಂಗುಳೂರಿನಷ್ಟು ದೂರ ಹೋಪಲೆ ಅಭ್ಯಾಸ ಆಯಿದಿಲ್ಲೆಡ, ಆದರೂ – ಊರೊಳ ಜೆಂಬ್ರಂಗೊಕ್ಕೆ, ಪುತ್ತೂರಿಂದ ಸುಳ್ಯಕ್ಕೆ – ಹೀಂಗೆ ಹೋಪಲೆ ಅಭ್ಯಾಸ ಆಯಿದು, ಅಷ್ಟೇ!
ಆದರೆ ಮಗಳ ಅಪ್ಪಂಗೆ ಅಷ್ಟೂ ಅರಡಿಯ ಅಲ್ಲದೋ – ಹೇಳಿಗೊಂಡತ್ತಡ. 😉
ಕಾರುಬಿಟ್ಟೊಂಡು ಹೋಯೆಕ್ಕಾದ್ದದು ಬೇಜಾರವೋ? ಅದರ್ಲಿ ಏನೂ ಬೇಜಾರಿಲ್ಲೆ!

ಊರಿಲಿ ಜೆಂಬ್ರಂಗೊ ಕಮ್ಮಿ ಇಪ್ಪ ಮೌಢ್ಯ ಸಮೆಯ ನೋಡಿಗೊಂಡು ಮೊನ್ನೆ ಬೆಂಗುಳೂರಿಂಗೆ ಹೋದ್ದದು.
ಕಾರಿಲೇ ಹೋಯೆಕ್ಕು ಗ್ರೇಶಿರೂ ರೂಪತ್ತೆ ತಮ್ಮ ಖಡಾಖಡಿ ‘ಬೇಡ’ ಹೇಳಿದ ಕಾರಣ ಮತ್ತೆ ಬಸ್ಸಿಲೇ ಹೋದ್ಸು.
ಮಗಳ ಅಪ್ಪ ಹೇಳಿದ್ದಿದ್ದರೆ ‘ಅವು ಕೇಡಿಲಿ ಆಯಿಕ್ಕು’ ಗ್ರೇಶುಲಕ್ಕು; ಆದರೆ ಕಾಸಾತಮ್ಮ ಹೇಳುದು ಅಕ್ಕನ ಒಳ್ಳೆದಕ್ಕೇ ಅಲ್ಲದೋ! 😉
ಹಾಂಗೆ ಕಾರಿಲಿ ಹೋಗದ್ದೆ ಬಸ್ಸಿಲೇ ಹೋದ್ಸು. ಆತು, ಅದರ್ಲಿ ಏನೂ ಬೇಜಾರಿಲ್ಲೆ.

ಬೆಂಗುಳೂರಿಂಗೆ ಹೋಪಲೆ ಯೇಸಿಬಸ್ಸು, ಓಳ್ವೋ – ಟಿಗೇಟು ತಮ್ಮನೆ ಮಾಡಿಕೊಟ್ಟಿದ.
ಆ ದಿನ ಇರುಳು ಬಸ್ಸಿಂಗೆಮುಟ್ಟ ಹೋಯೇಕಲ್ಲದೋ –  ತಮ್ಮಂಗೆ ಆ ದಿನ ಅಂಬೆರ್ಪು ಇದ್ದ ಕಾರಣ ಮತ್ತೆ ರಿಕ್ಷ ಮಾಡಿಗೊಂಡು ಹೋದ್ಸು; ಇನ್ನೂರೈವತ್ರುಪಾಯಿ!!
ತೊಂದರಿಲ್ಲೆ, ಹೋಗಿ ಬಪ್ಪಗ ರಜ ಆರಾಮ ಬೇಕು ಹೇಳಿ ಆದರೆ ಖರ್ಚು ಮಾಡೇಕಾವುತ್ತು. ಅದರ್ಲಿ ಏನೂ ಬೇಜಾರಿಲ್ಲೆ!!

ಬಸ್ಸಿಲಿಯುದೇ – ಹೆಮ್ಮಕ್ಕಳ ಸೀಟಿಲಿ ಕೂದು ಒಬ್ಬನೇ ಇರುಳಿಡೀ ಹೋಯೇಕು, ಮರದಿನ ಉದಿಯಪ್ಪಗ ಬೆಂಗುಳೂರು!
ಒಬ್ಬನೇ ಹೋಯೇಕು ಹೇಳ್ತದು ಬೇಜಾರವೋ? ಅದು ಬೇಜಾರವೋ; ಅಲ್ಲಪ್ಪ.
ಅಂತೇ ಕೂದರಾತು, ಒಂದು ಒರಗಿ ಏಳುವಗ ಎತ್ತೇಕಾದಲ್ಲಿ ಎತ್ತುತ್ತು.

ಮರದಿನ ಉದಿ ಆಯೇಕಾರೇ ಬೆಂಗುಳೂರಿಂಗೆ ಎತ್ತಿತ್ತಡ ಅಲ್ಲದೋ? ಗುರ್ತ ಇಲ್ಲದ್ದ ಊರು, ಗುರ್ತು ಪರಿಚಯ ಇಲ್ಲದ್ದ ಜೆನಂಗೊ – ಬಷ್ಟೇಂಡಿಲಿ.
ಅದರ್ಲಿ ಎಂತ ಬೇಜಾರಿದ್ದು? – ಅಳಿಯ ಕಾರು ತೆಕ್ಕೊಂಡು ಕರಕ್ಕೊಂಡು ಹೋಪಲೆ ಬಯಿಂದನಾಡ.
ಮಗಳು ಬೈಂದಿಲ್ಲೆ, ಉದಿಯಪ್ಪಗಾಣ ಕಾಪಿತಿಂಡಿ ಆಗೆಡದೋ? ಅದರ್ಲಿ ಎಂತದೂ ಬೇಜಾರಿಲ್ಲೆ.

ರೂಪತ್ತೆ ಬೆಂಗುಳೂರಿಂಗೆ ಎತ್ತಿದ ದಿನ ಪ್ರಯಾಣದ ಆಯಾಸ – ಹೇಳಿಗೊಂಡು ಮನುಗಿತ್ತಡ.
ಓಳ್ವೋದ ಯೇಸಿಗೆ ಬಸ್ಸಿಲಿ ತಣ್ಣಂಗೆ ಹೋದ್ದಾದರೂ, ಪ್ರಯಾಣ ಪ್ರಯಾಣವೇ ಅಲ್ಲದಾ?
ಹಾಂಗೆ ಮನುಗಿದ್ದರ್ಲಿ – ಮಗಳಿಂಗೆ ಅಡಿಗ್ಗೆ ಏನೂ ಸೇರ್ಲೆ ಎಡಿಗಾಯಿದಿಲ್ಲೆಡ.
ಅಡಿಗ್ಗೆ ಗೇಸಿನ ವೆವಸ್ತೆ ಇಪ್ಪದಿದಾ, ಊರಿಲಿಪ್ಪ ಹಾಂಗೆ ಸೌದಿ ಒಲೆ ಅಲ್ಲ. ಅಡಿಗೆಮಾಡ್ಳೆ ಚಿಕನು (ಕಿಚನು)ದೇ ಒಳ್ಳೆ ಲಾಯಿಕಿದ್ದಡ. ಎಲ್ಲ ವೆವಸ್ತೆಯೂ ಇದ್ದಡ.
ಉಪ್ಪುಮೆಣಸು ಬೇಕಾದಲ್ಲಿ ಸಿಕ್ಕುತ್ತಡ. ಮಗಳಿಂಗೆ ಅದು ಸರೀ ಅಭ್ಯಾಸ ಆಯಿದಡ.
ಹಾಂಗಾಗಿ, ಅಡಿಗ್ಗೆ ಸೇರ್ಲೆ ಎಡಿಯದ್ದರ್ಲಿ ಏನೂ ಬೇಜಾರಿಲ್ಲೆಡ!

ರೂಪತ್ತೆ ಬೆಂಗುಳೂರಿಂಗೆ ಎತ್ತಿದ ದಿನ ಲಾಲುಬಾಗಿನ ಹತ್ತುದಿನದ ’ಮಾವುಮೇಳದ’ ಕೊನೇ ದಿನ ಅಡ, ಶಪಿಂಡಿಯ ಹಾಂಗೇ!
ಲೋಕದ ಎಲ್ಲಾ ಬಗೆಯ ಮಾಯಿನಣ್ಣು ತಂದು ಕಮ್ಮಿ ಕ್ರಯಕ್ಕೆ ಮಾರ್ತವಡ – ಹೊತ್ತಪ್ಪಗ ಮಗಳು ವಿವರುಸಿತ್ತು.
ಕಮ್ಮಿ ಕ್ರಯ ಹೇಳಿ ಅಲ್ಲದ್ದರೂ, ಬೇರೆಬೇರೆ ಜಾತಿ ಹಣ್ಣು ತಿಂಬಲಾವುತಿತು – ಹೇಳಿ ಒಂದರಿ ಆಶೆ ಬಂತು.
ಹಗಲಿಡೀ ಒರಗಿದ ಕಾರಣ ಆ ಸಂಗತಿ ಗೊಂತೇ ಆಯಿದಿಲ್ಲೆ, ಅಲ್ಲದ್ದರೆ ಹೋತಿಕ್ಕಲಾವುತಿತು!
ಸಾರ ಇಲ್ಲೆ, ಅದರ್ಲಿಯೂ ಏನೂ ಬೇಜಾರಿಲ್ಲೆ; ಆಪೀಸಿಂದ ಅಳಿಯ ಬಪ್ಪಗ ನಾಕು ಕಿಲ ತಯಿಂದನಾಡ.

ರೂಪತ್ತೆಗೆ ಇಡೀ ಬೆಂಗುಳೂರಿಲಿ ಮದಾಲುಕಂಡದು ಆಕರ್ಷಕವಾಗಿ ಕಂಡದು ಎಂತರ?
– ಇವರ ಬಾಡಿಗೆಮನೆಂದಲೇ ಕೆಳ ಇಪ್ಪ ಮನೆಯೆಜಮಾನನ ಹೆಂಡತ್ತಿ ರೂಪತ್ತೆಕಾರಿಂದಲೂ ದೊಡ್ಡಕಾರಿನ ಬಿಡ್ತಡ!
ಅದೂ ಬೆಂಗುಳೂರಿನ ಅಂಬೆರ್ಪಿನ ಮಾರ್ಗಂಗಳಲ್ಲಿ. ಬಿಡಿ, ಅದರ್ಲಿಯೂ ಏನೂ ಬೇಜಾರಿಲ್ಲೆ!
ಅವರ ನಾಯಿ ಮತ್ತೂ ದೊಡ್ಡದಿದ್ದಾಯಿಕ್ಕು – ಹೇಳಿ ಸಮಾದಾನ ಮಾಡಿಗೊಂಡತ್ತು.

ಹನ್ನೊಂದೂವರೆಗೆ ಸುರುವಾದರೆ ಮೂರೂವರೆವರೆಗೂ ಟೀವಿಲಿ ಒಂದಲ್ಲ ಒಂದು ಕಾರ್ಯಕ್ರಮ ಬತ್ತು.
ವನಿತೆ, ಮಹಿಳೆ, ಸಖೀ – ಎಲ್ಲ ಮುಗುದು, ಮಂದಾರ,  ಒಂದು ಮನೆ – ಮೂರು ಬಾಗಿಲು, ಹೀಂಗ್ರುತ್ತ ನಾನಾನಮುನೆ ಕತೆಗೊ ದಾರಾವಾಹಿ ಆಗಿ ಬಂದುಗೊಂಡಿರ್ತು.
ಒಂದರ್ಲಿ ಸೊಸೆ ಮನೆ ಬಿಟ್ಟುಹೋಪ ಸಮೆಯ, ಇನ್ನೊಂದರ್ಲಿ ಹೀರೊಯಿನ್ನಿಂಗೆ ಮದುವೆ ಅಪ್ಪ ಸಮೆಯ, ಮತ್ತೊಂದರ್ಲಿ ಅಜ್ಜಿ ತೀರಿಹೋಪ ಸಮೆಯ, ಬೇರೆ ಒಂದರ್ಲಿ ಕುಂಞಿಬಾಬೆಗೆ ಹೆಸರು ಮಡುಗುವ ಸಮೆಯ! – ಎಂತ ಹೆಸರು ಮಡುಗುತ್ತವು ಹೇಳಿ ಇದಕ್ಕೆ ಕುತೂಹಲ!!  ಒಂದನ್ನೂ ಬಿಟ್ಟಿಕ್ಕಲೆ ಗೊಂತಿಲ್ಲೆ, ಎಲ್ಲವುದೇ ನೋಡಿಗೊಂಡಿದ್ದು ಅರ್ದಲ್ಲಿದ್ದು!
ಧಾರವಾಹಿ ಸಿಕ್ಕದ್ದೆ ಆವುತ್ತೋ ಹೇಳಿಒಂದು ಬೇಜಾರಿತ್ತು, ಇದು ಹೋಪ ಮುನ್ನಾಣ ದಿನವೇ ಅಲ್ಲಿಗೆ ಕೇಬುಲು ಬಂತಡ.
ಹಾಂಗಾಗಿ ಆ ಬಗ್ಗೆ ಏನೂ ಬೇಜಾರಿಲ್ಲೆ.

ಹೀಂಗಾಗಿ, ಹಗಲು ಇಡೀ ರೂಪತ್ತೆಗೆ ಪುರುಸೊತ್ತಿಲ್ಲೆ, ಮತ್ತೆ ಮಗಳಿಂಗೆ ಪುರುಸೊತ್ತಿಲ್ಲೆ; ಮನೆಕೆಲಸ ಇದ್ದು!
ಹಾಂಗಾಗಿ ಬೆಂಗುಳೂರಿಲಿ ಜಾಸ್ತಿ ಹೆರ ತಿರುಗಲೆ ಆಯಿದಿಲ್ಲೇಡ.
ಮುಖ್ಯವಾಗಿ ಒಂದು ಸೀರೆಯಂಗುಡಿಗೆ ಹೋಪದು ಗ್ರೇಶಿದ್ದು, ಮತ್ತೆ ಪುರುಸೊತ್ತು ಸಾಕಾಗದ್ದೆ ಬಾಕಿ ಆಗಿತ್ತಾಡ.
ತೊಂದರಿಲ್ಲೆ, ಇನ್ನೊಂದರಿ ಬೆಂಗುಳೂರಿಂಗೆ ಹೋಗಿಪ್ಪಗ ಪುರುಸೊತ್ತು ಮಾಡಿರೆ ಆತು,
ಅದರ್ಲಿ ಬೇಜಾರ ಎಂತೂ ಮಾಡ್ಳಿಲ್ಲೆ!

ಬೆಂಗುಳೂರಿಲಿ ನಾಕು ದಿನ ಇದ್ದದರ್ಲಿ ಒಂದುದಿನ ಪುರುಸೊತ್ತು ಮಾಡಿ ತಿರುಗಲೆ ಹೋದವಡ.
ಕಾರಿನ ಅಳಿಯ ಆಪೀಸಿಂಗೆ ತೆಕ್ಕೊಂಡು ಹೋದ ಕಾರಣ ಬಸ್ಸಿಲೇ ಹೋಯೇಕಷ್ಟೇ! ಅಲ್ಲ, ಕಾರಿನ ಮನೆಲೇ ಬಿಟ್ಟಿಕ್ಕಿ ಹೋಗಿದ್ದರೂ ಏನೂ ಮಾಡ್ಳೆಡಿತ್ತಿತಿಲ್ಲೆ. 🙁
ಈ ಬೆಂಗುಳೂರಿನ ಅಂಬೆರ್ಪಿಲಿ ಕಾರು ಬಿಡೇಕಾರೆ ಇನ್ನು ಮೂರುಸರ್ತಿ ಕಲ್ತು ಬರೇಕಷ್ಟೇ! 🙁
ಹ್ಹೆ, ಎನಗೇ ಎಡಿಯ, ಇನ್ನು ಮಗಳ ಅಪ್ಪಂಗೆ ಎಡಿಗೋ! ಒಂದು ನೆಗೆಯೂ ಬಂತತ್ಲಾಗಿ.
ಹಾಂಗಾಗಿ ಕಾರು ಮಡಗಿ ಹೋಗದ್ದಕ್ಕೆ ಏನೂ ಬೇಜಾರಿಲ್ಲೆಪ್ಪ.

ಮಂತ್ರಿಮಾಲು ಹೇಳಿ ಒಂದು ದೊಡಾ ಅಂಗುಡಿಗಳ ಅಂಗುಡಿ ಅಡ.
ಅಲ್ಲಿ ಎಲ್ಲ ಮಾಲುಗಳನ್ನೂ ಕೈಗೆ ತಾಂಟುತ್ತ ನಮುನೆಲಿ ಮಡಗಿರ್ತವಾಡ. ಬೇಕಾದೋರು ಬೇಕಾದ್ದರ ತೆಕ್ಕೊಳ್ತ ನಮುನೆಲಿ – ಅನಂತಂಗೆ ಗೊಂತಾಗದ್ದರೆ ಹೇಳಿ ತೂಷ್ಣಿಲಿ ವಿವರುಸಿತ್ತಾಡ.
ಕಾಸ್ರೋಡಿಲಿ ಆ ನಮುನೆ ಒಂದಿದ್ದಲ್ಲದೋ – ಆ ಜಾತಿದೇ ದೊಡ್ಡದಾಯಿಕ್ಕು ಗ್ರೇಶಿಗೊಂಡೆ, ಅಜ್ಜಕಾನಬಾವ ವಿವರುಸುವಗ.
ಆ ಮಂತ್ರಿಮಾಲಿಲಿ ಯೇವ ಮಾಲನ್ನೂ ಮುಟ್ಟಿಕ್ಕಲೆ ಗೊಂತಿಲ್ಲೆ! ಎಲ್ಲ ತಲೆಂದ ಮೇಗೆ ಕ್ರಯ ಅಡ.
ಹಾಂಗೆ ಅಲ್ಲಿ ಎರಡು ಸೀರೆ, ನಾಕು ಚೂಡಿದಾರ, ನಾಕು ಸೆಟ್ಟು “ಒಂದುಗ್ರಾಮುಚಿನ್ನದ” ಬಳೆ, ಎರಡು ವೇನಿಟಿಬೇಗುಗೊ – ಇಷ್ಟು ಬಿಟ್ರೆ ಬೇರೆಂತೂ ತೆಗವಲೆ ಪುರುಸೊತ್ತೇ ಇತ್ತಿಲ್ಲೆಡ.
ಅದಕ್ಕೆಂತರ ಬೇಜಾರಿದ್ದು, ಇನ್ನೊಂದರಿ ಬಪ್ಪೊ – ಹೇಳಿತ್ತಡ ಮಗಳು. ಹಾಂಗೆ ಅದರ್ಲಿ ಎಂತೂ ಬೇಜಾರಾಯಿದಿಲ್ಲೇಡ.

ಸೋಮವಾರ ಹೋಗಿ ಶುಕ್ರವಾರ ಒಪಾಸು ಬಂದದಲ್ಲದೋ ಊರಿಂಗೆ-  ಹೆರಡ್ಳಪ್ಪಗ ಮಗಳಿಂಗೆ ತುಂಬ ಬೇಜಾರಾಯಿದಡ.
ಬಂದು ತುಂಬ ದಿನ ಆತು ಮಗಳೇ, ಇನ್ನೊಂದರಿ ಬತ್ತೆ; ತುಂಬ ದಿನ ನಿಂಬಲೆ! – ಹೇಳಿ ಒಂದರಿ ತಲೆ ಉದ್ದಿತ್ತಡ; ಅಳಿಯ ಮಾಡುಸಿ ಕೊಟ್ಟ ಹೊಸ ಮಾಟಿ – ಅಯಿದು ಪವನಿಂದು – ಮಗಳ ಕೆಮಿಲಿತ್ತಡ!
ಎಲ್ಲಿಗೇ ಹೋದರೂ ಮನಗೇ ಒಪಾಸು ಬರೇಕು, ಅದರ್ಲಿ ಎಂತ್ಸೂ ಬೇಜಾರ ಮಾಡ್ಲಿಲ್ಲೆ.

ಬೆಂಗುಳೂರಿಂಗೆ ಹೋದಿಪ್ಪಗ ಮನೆಲಿ ಮಾವ ಒಬ್ಬನೇ ಇದಾ!
ಬೇಜಾರಾವುತ್ತೋ – ಇಲ್ಲಲೇ ಇಲ್ಲೆಪ್ಪ. ಅವಕ್ಕೆ ಒಬ್ಬನೆ ಇದ್ದು ಅಭ್ಯಾಸ ಇದ್ದು, ರೂಪತ್ತೆ ಮನೆಲೇ ಇದ್ದರೂ ಅವು ಒಬ್ಬನೇ! 🙁
ಅವ್ವಾತು, ಅಡಿಗೆ ಕೆಲಸ ಆತು – ಅವರಷ್ಟಕೇ ಇರ್ತವು, ನೆಡಕ್ಕೊಂಡು ಬಂದದೇ ಹಾಂಗೇ!! ಅದರ್ಲಿ ಬೇಜಾರು ಮಾಡ್ಳೆ ಎಂತ ವಿಶೇಷ ಇಲ್ಲೆ.

ಹಾಂಗೆ ಮನೆಗೆತ್ತಿ ಎರಡು ವಾರ ಆತು, ಆದರೂ ಬಚ್ಚಲು ಹೋಯಿದಿಲ್ಲೆ. ಕಳೀಯಬಾರದ್ದ ಜೆಂಬ್ರಂಗೊಕ್ಕೆ ಮಾಂತ್ರ ಹೋಪದು.
ಮನೆ ಉದ್ದಿಉಡುಗಲೆ ಬಾಕಿ ಇದ್ದು, ಪಾತ್ರತೊಳವಲೆ ಬಾಕಿ ಇದ್ದು, ಒಸ್ತ್ರ ಒಗವಲೆ ಬಾಕಿ ಇದ್ದು – ಹೇಳಿ ಎಂತಾರು ಬೇಜಾರ ಮಾಡ್ಲಿದ್ದೋ?
ಷೇ, ಇಲ್ಲೆಪ್ಪ. ಪಾತ್ರ ತೊಳೆತ್ತದು, ನೆಲ ಉದ್ದಿಉಡುಗಿ ಮಾಡ್ತದು ಮಾವಂಗೆ ಮದಲೆಲ್ಲ ಸರಿ ಅರಡಿಯದ್ರೂ – ಈಗ ಸರೀ ಅಭ್ಯಾಸ ಆಯಿದು!
ದೊಡ್ಡ ಒಸ್ತ್ರ ಒಗವಲೆ ಮಿಷನು ಇದ್ದು, ಒಳುದ್ದರ ಮಾವ ಕೈಲೇ ಒಗೆತ್ತವು. ಹಾಂಗಾಗಿ ಆ ಮಟ್ಟಿಂಗೆ ಬೇಜಾರ ಮಾಡ್ಳಿಲ್ಲೆ!

ಬೆಂಗುಳೂರಿಂಗೆ ಹೋಗಿಪ್ಪಗ ‘ತೋಟ ನೋಡಿಗೊಳದ್ದೆ ಬಾಕಿ ಆತು!’ ಹೇಳಿ ಬೇಜಾರವೋ?!
ಅಲ್ಲಪ್ಪ. ತೋಟದ ಕೆಲಸಕ್ಕೆ ಆಳುಗೊ ಇದ್ದವು – ಪುರುಸೊತ್ತಪ್ಪಗ ಮಾವಂದೇ ಹೋವುತ್ತವು ಎಡೇಡೆಲಿ.
‘ದೊಡ್ಡ ತೋಟ ಇದಾ, ನೋಡಿಗೊಂಬಲೆ ಕಷ್ಟ ಆವುತ್ತು ಅನಂತಾ’ – ಹೇಳಿತ್ತಾಡ! ಅಡಕ್ಕೆ ಅಪ್ಪದು ಆವುತ್ತು, ಎಷ್ಟಾತು ಹೇಳ್ತದು ಬಪ್ಪೊರಿಶ ಕೆಮ್ಕದವು ಹೇಳಿ ಅಪ್ಪಗ ಗೊಂತಾವುತ್ತು ರೂಪತ್ತಗೆ!
ಈಗ ಮಳೆಗಾಲ ಆದ ಕಾರಣ ತೋಟದ ವಿಶಯಲ್ಲಿ ಬೇಜಾರು ಏನೂ ಮಾಡ್ಳಿಲ್ಲೆ!

ಬೆಂಗುಳೂರಿಂಗೆ ಹೋದಿಪ್ಪಾಗ ನಿತ್ಯನೋಡ್ತ ಸುಮಾರು ದಾರವಾಹಿಗೊ ತಪ್ಪಿತ್ತೋ?
ಬೆಂಗುಳೂರಿಲಿಯೂ ಎಲ್ಲವನ್ನೂ ನೋಡ್ಳಾಯಿದು; ಅದೊಂದು ದಿನ ಬಿಟ್ಟು! ಆದರೆ ಅದರಿಂದ ಚೆಂದದ ಬೆಂಗುಳೂರಿನ ನಿಜದಾರಾವಾಹಿಯ ಕಂಡತ್ತಿಲ್ಲೆಯೋ?!
ಹಾಂಗಾಗಿ ಅದೆಂತೂ ಬೇಜಾರಪ್ಪಲಿಲ್ಲೆ!

ಆದರೆ ನಿಜವಾದ ಬೇಜಾರೆಂತ್ಸರ ಹೇಳಿತ್ತುಕಂಡ್ರೆ, ರೂಪತ್ತೆಯ ನಾಯಿಗೆ ಒಂದುವಾರ ರೂಪತ್ತೆ ಇಲ್ಲದ್ದೆ ಅಸಕ್ಕಾಯಿದಡ.
ರೂಪತ್ತೆಗೆ ನಾಯಿ ಹತ್ತರೆಯೋ, ನಾಯಿಗೆ ರೂಪತ್ತೆ ಹತ್ತರೆಯೋ – ಇಬ್ರಿಂಗೂ ಗೊಂತಿಲ್ಲೆ!
ನಾಯಿಗೆ ಗೊಂತಾದರೆ  ಒಟ್ಟಿಂಗೇ ಬತ್ತೆ ಹೇಳಿ ಹಟಮಾಡುಗು ಹೇಳಿಗೊಂಡು, ಹೆರಡುವಗ ಅದಕ್ಕೆ ಹೇಳದ್ದೆ ಹೋದ್ಸಡ.
ಹೋಗಿ ಮನೆಗೇಟುದಾಂಟಿ ಅಪ್ಪಗಳೇ ಪಾಪ, ನಾಯಿಯ ‘ಅವಸ್ಥೆಯ’ ಗ್ರೇಶಿ ರೂಪತ್ತೆಗೆ ಯೋಚನೆ ಸುರು ಆತಾಡ.
ಈ ಮಗಳ ಅಪ್ಪ ಹೇಂಗೆ ನೋಡಿಗೊಂಗು? ಮದಲೇ ಅವಕ್ಕೆ ನಾಯಿಗಳ ಕಂಡ್ರೆ ಅಷ್ಟಕ್ಕಷ್ಟೇ! ಸರಿ ಊಟಕಾಪಿ ಕೊಡುಗೋ, ಉಮ್ಮ!
ಬೆಂಗುಳೂರಿಲಿ ಎಷ್ಟೂ ಕೊಶಿಲಿದ್ದರೂ, ಮನೆಲಿದ್ದ ನಾಯಿಯ ಬಗ್ಗೆ ಯೋಚನೆ ಮಾಡಿಯೇ ಹೋಗಿಂಡಿತ್ತಾಡ!
ಒಪಾಸು ಮನಗೆ ಬಂದಮತ್ತೆ ಒಂದರಿ ನಾಯಿಯ ಮುಸುಡು ಕಣ್ತುಂಬ ನೋಡುವನ್ನಾರ ಕನಸಿಲಿದೇ ಇದನ್ನೇ ಕಂಡುಗೊಂಡಿತ್ತಾಡ.
~

ಬಂದು ನೋಡುವಗ!
ಮಾವಂದೇ ಇದಕ್ಕೆ ಸರೀಯಾಗಿ ತೊಂದರೆ ಮಾಡಿದವಾಡ!

ಅದಾ, ರೂಪತ್ತೆ ನೋಡುವಗ ನಾಯಿಯ ಸಂಕೊಲೆಲಿ ಕಟ್ಟಿದ್ದದು! ಪಾಪ!!

ಮನೆಒಳದಿಕ್ಕೆ ಸ್ವಚ್ಛಂದವಾಗಿ ತಿರುಗೆಂಡಿದ್ದ ನಾಯಿಯ ಹಿಡಿಸುಡಿಲಿ ಅಟ್ಟಿಅಟ್ಟಿ, ಹೆರಾಣ ಜೆಗಿಲಿಲಿ ಸಂಕೊಲೆಲಿ ಕಟ್ಟಿತ್ತಿದ್ದವಾಡ! 🙁
ಬರೇ ಹೆಜ್ಜೆಮಜ್ಜಿಗೆಯೂ, ಬೆಂದಿ ಅಶನವೂ ಮಾಂತ್ರ ಹಾಕಿ, ನಿತ್ಯವೂ ಹಾಲಿಲದ್ದಿದ ರಸ್ಕು, ಡೋಗುಫುಡ್ಡು, ಎಲುಬು, ಮೀನಿನತುಂಡು, ಮೊಟ್ಟೆ ತಿಂದು ಅಭ್ಯಾಸ ಆದ ನಾಯಿಗೆ ಅರೆಹೊಟ್ಟೆ ಮಾಡಿದ್ದವಡ. 🙁
ಇರುಳು ಮಣ್ಣಿ ಕೊಡ್ತ ಕ್ರಮವೇ ಇತ್ತಿಲ್ಲೇಡ ಅವಕ್ಕೆ!
ಉದಿಯಾದರೆ ಸಂಕೊಲೆಂದ ಬಿಟ್ಟುಬಿಟ್ಟೊಂಡಿತ್ತಿದ್ದವಾಡ, ಒಂದರಿ ಪ್ರೀತಿಲಿ ಗುಡ್ಡೆಗೆ ಕರಕ್ಕೊಂಡು ಹೋಯಿದವೇ ಇಲ್ಲೇಡ! 🙁
ಅಂತೂ ಮಾವ ಒಂದುವಾರ ಆ ಜಾತಿನಾಯಿಯ ನಾಯಿಜಾತಿ ಮಾಡಿಹಾಕಿದವು!

ರೂಪತ್ತೆ ಬೆಂಗುಳೂರಿಂದ ಬಂದದೇ, ಈ ನಾಯಿ ಇಡೀ ಬೇಜಾರ ಹೇಳಿಗೊಂಡತ್ತಡ.
ಬಪ್ಪಗ ಸುತ್ತಿದ ಪಟ್ಟೆಸೀರೆಗೇ ಹತ್ತಿ, ಮಾತಾಡಿತ್ತಡ.
ಸಂಕೊಲೆಲಿ ಕಟ್ಟಿಹಾಕಿದ್ದರ ಕಂಡು ಬೆಂಗುಳೂರಿನ ಅಷ್ಟೂ ಕೊಶಿ ಇಳುದು ಬೇಜಾರಾತಡ.

ಒಟ್ಟಾರೆ, ಬೆಂಗುಳೂರಿಂಗೆ ಬಿಟ್ಟಿಕ್ಕಿ ಹೋದ ಕಾರಣ ನಾಯಿಗೆ ಬೇಜಾರಾತಡ.
ನಾಯಿಯ ಕರಕ್ಕೊಂಡು ಹೋಪ ಕಾರು ಕೊಂಡೋಗದ್ದಕ್ಕೆ ರೂಪತ್ತೆಗೆ ಅದರ ಮೇಗೆಯೇ ಬೇಜಾರಾಗಿಂಡು ಇತ್ತಡ.

~
ನಾಯಿಗೆ ಹೆಚ್ಚು ಬೇಜಾರಾದ್ಸೋ, ಅತ್ತೆಗೋ, ಉಮ್ಮ!
ಎರಡು ವಾರ ಕಳುದರೂ ಬಚ್ಚಲು ಇಳುದ್ದಿಲ್ಲೆ, ಇನ್ನು ಬೇಜಾರ ಇಳಿವಲೆ ಎಷ್ಟು ದಿನ ಬೇಕಕ್ಕೋ – ಕಲ್ಮಡ್ಕನಂತಂಗೆ ಕನುಪ್ಯೂಸು ಬಂತಡ, ಅಜ್ಜಕಾನಬಾವನತ್ರೆ ಕೇಳಿದನಡ!

ರೂಪತ್ತೆಯ ನಾಯಿಗೆ ಬೇಜಾರಾದ್ದರ್ಲಿ, ರೂಪತ್ತೆಗೂ ಬೇಜಾರಾದ್ದರ್ಲಿ, ಕಲ್ಮಡ್ಕನಂತನೂ ಬೇಜಾರು ಮಾಡಿ ತೊರುಸಿದನಡ!
ಈ ಶುದ್ದಿ ಹೇಳುವಗ ರೂಪತ್ತೆಗೆ ತುಂಬ ಬೇಜಾರಾಗಿತ್ತಡ, ಕಲ್ಮಡ್ಕ ಅನಂತ ಹಾಂಗೇ ಬಂದು ಅಜ್ಜಕಾನ ಬಾವನ ಹತ್ತರೆ ಹೇಳಿದ°.
ಅಜ್ಜಕಾನ ಬಾವ ಒಪ್ಪಣ್ಣನ ಹತ್ತರೆ ಹೇಳಿದ°, ಒಪ್ಪಣ್ಣಂಗೂ ಬೇಜಾರಾತು.
ಒಪ್ಪಣ್ಣ ಈಗ ಬೈಲಿಂಗೆ ಹೇಳ್ತಾ ಇದ್ದೆ – ನಿಂಗೊಗೂ ಬೇಜಾರಾತಲ್ಲದೋ? ಫಾಫ!

ಇಪ್ಪ ವಿಶಯಕ್ಕೆ ರೂಪತ್ತೆಯೇ ರಜ ಸೇರುಸಿತ್ತೋ?
ಅಲ್ಲ; ಅನಂತ ರಜ ಸೇರುಸಿದನೋ?
ಅಲ್ಲ; ಇನ್ನು ನಮ್ಮ ಅಜ್ಜಕಾನ ಬಾವ ಲೊಟ್ಟೆ ಸೇರುಸಿದನೋ?
ಉಮ್ಮಪ್ಪ, ನವಗರಡಿಯ!
ನಾವಂತೂ ನವಗೆ ಕೇಳಿದ್ದರ ಹಾಂಗೇ ಬೈಲಿಂಗೆ ಹೇಳಿದ್ದು! ಒಪ್ಪಣ್ಣಂಗೆ ಲೊಟ್ಟೆ ಅರಡಿಯ ಇದಾ! 😉

ರೂಪತ್ತೆ ಹೇಂಗೋ ಜೆಂಬ್ರಲ್ಲಿ ಕಷ್ಟಪಟ್ಟು ಕೊಶಿ ತೋರುಸಿಗೊಂಡಿತ್ತಡ. ಜೆಂಬ್ರಲ್ಲಿ ರೂಪತ್ತೆ ಸುತ್ತಿದ – ಮಗಳ ಮರುವಾರಿ ಸೀರೆಯ ಮೇಚಿಂಗು – ಪಟ್ಟೆಸೀರೆಗೆ ಪುನರ್ಪುಳಿ ಕಲೆ ಬಿದ್ದದು ಹೊಸಾ ಬೇಜಾರು ಇದ್ದೇ ಇದ್ದನ್ನೇ!
ಅಂತೂ ಇಂತೂ ಇದರಿಂದಾಗಿ ಬೈಲಿಂಗೆ ಈ ವಾರಕ್ಕೆ ದಕ್ಕಿತ ಶುದ್ದಿ ಸಿಕ್ಕಿತ್ತು!
ಬೇಜಾರಂಗಳೆಡಕ್ಕಿಲಿಯೂ ಬೈಲಿಂಗೊಂದು ಅದೇ ಕೊಶಿ!  😉

ಒಂದೊಪ್ಪ: ಕಾಲ ಬಂದಪ್ಪಗ ಯೇವ ನಾಯಿಯೂ ಒಂದು ಶುದ್ದಿ ಅಕ್ಕು- ಹೇಳುಗು ಶಂಬಜ್ಜ ಮದಲಿಂಗೆ!

65 thoughts on “ರೂಪತ್ತೆಗೆ ತುಂ…ಬಾ ಬೇಜಾರಾಯಿದಡ.. ;-(

  1. 😀 ಎನಗೆ ಓದಿ ಓದಿ ಹೊಟ್ಟೆ ಬೇನೆ ಎದ್ದತ್ತು…(ನೆಗೆ ಮಾಡಿ ಮಾಡಿ)

    ಪುಣ್ಯಕ್ಕೆ ಎನ್ನ ಆಪೀಸಿಲಿ ಆರೂ ಇತ್ತಿದ್ದವಿಲ್ಲೆ ಇಲ್ಲದ್ರೆ ಇವಂಗೆಂತಾತಪ್ಪ ಗ್ರೇಷುತಿತ್ತವು ನೆಗೆ ಮಾಡುವ ಅವಸ್ಥೆ ನೋಡಿ…

    ಕೊನೆಗೊರೆಗೂ ಎಂತದೋ ಕುತೂಹಲ ಇತ್ತಿದ್ದು ಎಂತಕಪ್ಪಾ ಬೇಜಾರಾದ್ದು ಹೇಳಿ, ಮತ್ತೆ ಪೂರ್ತಿ ಓದಿ ಅಪ್ಪಗ ಮತ್ತೂ ನೆಗೆ ಬಂತು..

    ಪಾಪ ನಾಯಿ ಸುಮಾರು ಬಚ್ಚಿದಾಂಗೆ ಕಾಣ್ತನ್ನೆ…. 😛

    ಅಂಬಗ ನಾಯಿಗೆಂತ ತೈಂದವಿಲ್ಲೆಯ ಅತ್ತೆ ಬೆಂಗ್ಳೂರಿಂದ ? !!!!

  2. laikaidu oppanna.
    odi tumba negeyu maadi aatu. roopatteya hesaru bandare car,patte seere avara naayi ityadigala hesaru seradre adarli maja ille allada oppanno.
    ondari bailinavakke parichaya maadusekku aatha.
    oppannange purusottilladre gurikkarru sikkire avaratre helu oppanno.
    ondari mukatha beti aagali.
    pastaidu. tumba samayave aathu heengippa shuddi bareyadde.baretta iru .
    good luck…

    1. ಒಪ್ಪಣ್ಣಂಗೆ ರೂಪತ್ತೆಯ ಪರಿಚಯ ಮಾಡುಸಿದ್ದು ನಿಂಗಳೇ ಅಲ್ಲದೋ – ಇನ್ನು ಬೈಲಿಂಗೆ ಒಪ್ಪಣ್ಣ ಪರಿಚಯ ಮಾಡ್ತದರ್ಲಿ ಎಂತರ ಕೊಶಿ ಇದ್ದು?
      – ನಿಂಗಳೇ ಮಾಡಿಕ್ಕಿ, ಆಗದೊ? 😉

      ಹ್ಮ್, ರೂಪತ್ತೆಯ ಹೆಸರಿನೊಟ್ಟಿಂಗೆ ಕಾರು, ಪಟ್ಟೆಸೀರೆ, ನಾಯಿ – ಎಲ್ಲ ಬಾರದ್ದರೆ ರೂಪತ್ತೆಗೂ ಪಾತಿಅತ್ತೆಗೂ ಎಂತ ವಿತ್ಯಾಸ ಇದ್ದು ಬೇಕೇ? 🙂

  3. Para oorili, orina nenapappaga, asakka appaga oppnnana nodudu, ooringe hogi bandange avtuu:)

  4. ಲಾಯಿಕ್ಕಾಯಿದು…..
    ಬೇಜಾರು ಏನೂ ಇಲ್ಲೆ…. ಹೇಳಿ ….. ಅಲ್ಲಿ ಇಲ್ಲಿ ಸೇರ್ಸಿ …ಯಾವದಕ್ಕೂ ಬೇಜಾರ ಮಾದದ್ದ ಈ ರೂಪತ್ತೆಯ ಗುಣ ನಿಜವಾಗಿಯೂ ಮೆಚ್ಹೆಕ್ಕಾದ್ದೆ.

    1. {ಯಾವದಕ್ಕೂ ಬೇಜಾರ ಮಾದದ್ದ ಈ ರೂಪತ್ತೆಯ ಗುಣ ನಿಜವಾಗಿಯೂ ಮೆಚ್ಹೆಕ್ಕಾದ್ದೆ}
      ಸುಬ್ಬಣ್ಣ, ರೂಪತ್ತೆಲಿಯೂ ಮೆಚ್ಚೇಕಾದ ವಿಶಯ ಹುಡ್ಕಿದ ನಿಂಗಳ ಕಂಡ್ರೆ ರೂಪತ್ತೆಗೆ ಆದ ಬೇಜಾರವೂ ಮರಗು! 😉

    1. ಗೋಪಾಲಮಾವಾ..
      ಬೈಲಿನೋರೆಲ್ಲರೂ ಹೇಳ್ತದು ಅದನ್ನೇ:
      ಅಬ್ಬಬ್ಬಾ…. ರೂಪತ್ತೆ..!! 🙂

  5. ವ್ಹಾರೆ ವ್ಹಾ..! ರೂಪತ್ತೆಯ ಕಥೆ ಓದಿಯಪ್ಪಗ ಕಣ್ಣಿಲಿ ನೀರು ಬಂತು. (ನಗೆ ಮಾಡಿ ಮಾಡಿ, ಬೇಜಾರಾಗಿ ಅಲ್ಲ. 😉 )
    ಕಥೆ ತುಂಬಾ ಸೂ………ಪರು ಆಯಿದು. ಇಂತಹ ಕಥೆ ಹೇಳಿದ್ದಕ್ಕೆ ಒಪ್ಪಣ್ಣಂಗೆ ನಮೋ ನಮ:
    ಈ ಒಪ್ಪ ಓದಿಯಪ್ಪಗ ರೂಪತ್ತೆಗೆ ಬೇಜಾರಾದರೆ ಆನು ಜೆನ ಅಲ್ಲ 😉

    1. ಪ್ರದೀಪಣ್ಣಂಗೆ ಬೇಜಾರಾದರೂ, ಕೊಶಿ ಆದರೂ, ಮುಣ್ಚಿತಿಂದರೂ – ಕಣ್ಣಿಲಿ ನೀರು ಬಂದೇ ಬತ್ತು,

      ಸೂ…..ಪರು ಆದ ಶುದ್ದಿಯ ಕೇಳಿ ಬೈಲಿಂಗೆ ಬೇ…ಜಾರು ಆದ್ದದು ಸೃಷ್ಟಿ ವೈಚಿತ್ರ್ಯ, ಅಲ್ಲದೋ? 🙂

  6. ಅದಾ..!! ಈ ರೂಪತ್ತೆಯ ದಿಸೆಲ್ಲಿ ಅಕ್ಕೋ?? ಚೇ..!! ಮನೆಲಿ ನಾಯಿ(..ಗಳ??) 😉 ಬಿಟ್ಟಿಕ್ಕಿ ಮಗಳಲ್ಲಿಗೆ ಹೋದ್ದು ಸಾಕನ್ನೆ?? 🙂
    ಬೇ೦ಗ್ಳೂರಿ೦ಗು ಪಾಪದ ನಾಯಿ…ಯ ಕರಕ್ಕೊ೦ಡು ಹೋಪಲಾವುತ್ತಿತ್ತು.. ಚೇ..!!
    ಅದು ಪಾಪ ರೂಪತ್ತೆಯ ಕಾಣದ್ದೆ – “ಉಕ್ಯೋ…!! ಉಕ್ಯೋ…” ಹೇಳಿ ಬೊಬ್ಬೆ ಹಾಕೆ೦ಡು ಇತೋ ಏನೋ..!!

    ಒಟ್ಟಾರೆ “ಮ೦ಕ್ರೀ” ಮಾಲು ನೋಡಿ,
    ಬೇ೦ಗ್ಳೂರು ಬಚ್ಚಿಲ್ಲಿ ತಿರುಗಿ..
    ಬಚ್ಚಲು ಹಿಡುದತ್ತು..!!
    ಪಾಪದ ರೂಪತ್ತೆಗೆ..

    1. ಚುಬ್ಬಣ್ಣನ ಒಪ್ಪ ಕಾಣದ್ದೆ ತುಂಬಾ ಸಮಯ ಆತದ. ಒಪ್ಪ ಕಂಡು ಕೊಶಿ ಆತು. ಒಪ್ಪ ಕಾಂಬಗ ರಜಾ ಬೋಚಬಾವನ ಅನುಸರಿಸಿದ ಹಾಂಗೆ ಕಾಣ್ತಾನೆ ? ಒಪ್ಪವ, ಬೋಚಬಾವನ ಹತ್ರೆ ಹೇಳಿ ಹಾಕ್ಸಿದ್ದೊ ಎಂತ ?

      1. ಹೆ ಹೆ ಹೆ…!! ಅದಾ ಮಾವ..!! 🙂

        ನಮ್ಮ ಒಪ್ಪಕ್ಕೆ ನಿ೦ಗಳ ಒಪ್ಪ ಬರದ್ದು ಕ೦ಡು ಕೊಶಿಯಾತು.. ಹಾ ಮತ್ತೆ ನಾವು ಎಲ್ಲಾ ವಿಶಯ೦ಗಳನ್ನು ಓದುತ್ತೆ ಮಾವ.. ಒಪ್ಪ ಒ೦ದಲ್ಲಾ ಒ೦ದು ರೀತಿ ಬರೆತ್ತೆಪ್ಪಾ… 😉 , ನಮ್ಮ ಬೋಚನ ಅನುಯಾಯಿಗೊ ಅಲ್ಲದೋ? ಹಾ೦ಗೆ ನಾವು ಬರವ ಶೈಲಿಯೂ ಹಾ೦ಗೆ ತಿರುಗೊತ್ತೊ??? ಛೆ..!!! ಆಗಪ್ಪಾ ಆಗ ಈ ಬೋಚನ ದಿಸೆಲಿ !?
        ಅವನ ಒಪ್ಪ ಓದಿ ಓದಿ.. ಆನುದೆ ಬೋಚ ಆಗದ್ರೆ ಸಾಕು..!!

        1. { ಆನುದೆ ಬೋಚ ಆಗದ್ರೆ ಸಾಕು..!! }
          ಯವ್ವಾ! ಚುಬ್ಬಣ್ಣ ಹೀಂಗೆ ಹೇಳಿದ್ದರ ಕೇಳಿರೆ ರೂಪತ್ತೆಗೆ ಮದಲಾಣ ಬೇಜಾರ ಪೂರ ಮರಗು (ಹೊಸ ಬೇಜಾರ ಮಾಂತ್ರ ಒಳಿಗಟ್ಟೇ! ) 😉

  7. ವಾಹ್!! ಭಾರೀ ಲಾಯ್ಕಾಯ್ದು ವಿವರಣೆ..ಇದರ ಓದುವಾಗ ಆವಳಿಗೆ ಎಲ್ಲಾ ಓಡಿ ಹೋತು.
    ಪಾಪ ರೂಪತ್ತೆಗೆ ಅಷ್ಟು ಬಚ್ಚಲು ಇದ್ದರೂ ಹೋದವನ್ನೆ ಉಪ್ನಾನಕ್ಕೆ ಖುಶಿ ಆತು.ಅಷ್ತೂ ಹತ್ತರಾಣ ಜೆ೦ಬ್ರಕ್ಕೆ ಹೊಗದ್ದೆ ಮತ್ತೆ 😉
    ರೂಪತ್ತೆ ಕಾರಿ೦ದ ಇಳಿವ ವರ್ಣನೆ ಅ೦ತೂ ಸೂಪರ್…ಕಣ್ಣಿ೦ಗೆ ಕ೦ಡಾ೦ಗೇ ಆತು 🙂
    ಮತ್ತೆ ಬೆ೦ಗ್ಳೂರಿ೦ಗೆ ಹೋದಿಪ್ಪಗ ಮ೦ತ್ರಿಮಾಲಿಲಿ ಅ೦ತೆ “ಗಿಲುಬಾಗಿಲು ವ್ಯಾಪಾರ” ಮಾಡಿ ಬೈ೦ದವಿಲ್ಲೆನ್ನೆ ಎರಡು ಸೀರೆ, ನಾಕು ಚೂಡಿದಾರ, ನಾಕು ಸೆಟ್ಟು “ಒಂದುಗ್ರಾಮುಚಿನ್ನದ” ಬಳೆ, ಎರಡು ವೇನಿಟಿಬೇಗುಗೊ–ಇಷ್ಟಾದರು ತೆಕ್ಕೊ೦ಡವನ್ನೆ ಹೇಳಿ ಖುಶಿ ಆತು 😉
    ಅ೦ತೂ ರೂಪತ್ತೆಯ ಗ೦ಡನ ಗ್ರೇಶಿ ಬೆಜಾರಾತು 🙁
    “ಜಾತಿನಾಯಿಯ ನಾಯಿಜಾತಿ ಮಾಡಿಹಾಕಿದವು!”-ಇದರ ಓದಿ ಒ೦ದುಜಾತಿ ನೆಗೆ ಮಾಡುದೆ ಆಯಿದು 🙂
    ಒಟ್ಟಾರೆ ಇದ್ದದರ ಇದ್ದ ಹಾ೦ಗೆ ಬರದ ಒಪ್ಪಣ್ಣ೦ಗೆ ಧನ್ಯವಾದ..ಹೊಟ್ಟೆತು೦ಬ ನೆಗೆ ಮಾಡಿದೆ 🙂

    1. { ಅ೦ತೂ ರೂಪತ್ತೆಯ ಗ೦ಡನ ಗ್ರೇಶಿ ಬೆಜಾರಾತು 🙁 }
      – ಅಬ್ಬ, ಇದೊಂದು ವಿಶಯಲ್ಲಿ ಆದರೂ ಬೇಜಾರಾತಲ್ಲದೋ? ಒಪ್ಪಣ್ಣಂಗೆ ಕೊಶೀ ಆತು.
      ಬೇರೆ ನೆಗೆಮಾಡಿದ್ದು ಒಪ್ಪಣ್ಣಂಗೆ ಬೇಜಾರಾತು. 😉

  8. ಒಪ್ಪಣ್ಣಾ,
    ರೂಪತ್ತೆ ಕಾರಿನ ಒಳಾಂದ ಹೆರ ಬಪ್ಪನ್ನ ಮೊದಲೊಂದರಿ ಮೇಕಪ್ ಮಾಡುವದು, ಇಳುದ ಮತ್ತೆ ಕಾರಿನ ಶಭ್ದ ಬಪ್ಪ ಹಾಂಗೆ ಬೀಗ ಹಾಕುದು, ಮತ್ತೆ ಎಲ್ಲರಿಂಗೂ ಕಾಣುತ್ತ ಹಾಂಗೆ ಮೆಟ್ಟಿನ ಮಡುಗಿಕ್ಕಿ ಒಳ ಬಂದು ಶರ್ಬತ್ತು ಕುಡಿವಾಗ ಸೀರೆಗೆ ಬಿದ್ದಪ್ಪಗ ಬೇಜಾರು ಅಪ್ಪದು ಇದೆಲ್ಲಾ ವಿವರಣೆ ತುಂಬಾ ಸಹಜವಾಗಿ ಬಯಿಂದು. ಸರಿಯಾಗಿ ಗಮನಿಸಿರೆ, ಇದೆಲ್ಲಾ ಜೆಂಬಾರಂಗಳ ಮನೆಲಿ ಕಾಂಬ ವಿಚಾರಂಗಳೇ.
    ಯಾವ ವಿಚಾರಂಗಕ್ಕೂ ಬೇಜಾರು ಮಾಡದ್ದ ರೂಪತ್ತೆಗೆ ತನ್ನ ನಾಯಿಗೆ ಬೇಕಾದ ಹಾಂಗೆ ಅರೈಕೆ ಆಯಿದಿಲ್ಲೆ, ಕಾರಿಲ್ಲಿ ಅದನ್ನೂ (ಅವನನ್ನೂ) ಕರಕ್ಕೊಂಡು ಹೋಯೆಕ್ಕಾತು ಹೇಳಿ ಬೇಜಾರು ಆದ್ದು, ಅವರ ಪ್ರಾಣಿ ಪ್ರೀತಿಯೇ ಅದರೂ ಅಷ್ಟೇ ಪ್ರೀತಿ ಎಲ್ಲಾ ಪ್ರಾಣಿಗಳಲ್ಲಿಯೂ ತೋರಿಸಿದರೆ ಲಾಯಿಕ ಇತ್ತಿದ್ದು.
    ತಮಾಶೆ ಸೇರಿಸಿಂಡು ವಾಸ್ತವಕ್ಕೆ ಹತ್ರಾಣ ಸಂಗತಿಗಳ, ಒಪ್ಪಣ್ಣ ಈ ಲೇಖನಲ್ಲಿ ಬರದ್ದು ಎಲ್ಲರಿಂಗೂ ಕೊಶಿ ಕೊಟ್ಟತ್ತು ( ಬೌಶಃ ರೂಪತ್ತೆಗೆ ಬಿಟ್ಟು ಬಾಕಿ ಎಲ್ಲರಿಂಗೂ)
    ಮರತ್ತು ಹೋದ ಹಳೇ ಪ್ರಯೋಗ:
    [ಆಲೋಚನೆ ಕಂಜಿಹಾಕಿತ್ತು.]

    1. ಅಪ್ಪಚ್ಚೀ..
      { ಅದನ್ನೂ (ಅವನನ್ನೂ) ಕರಕ್ಕೊಂಡು ಹೋಯೆಕ್ಕಾತು }
      ಓ, ಅವನನ್ನೂ ಹೇಳೇಕಾತಪ್ಪೋ – ಪುಣ್ಯ, ರೂಪತ್ತೆಯ ಕೈಲಿ ಮಾತಾಡುವ ಮದಲು ನಿಂಗೊ ನೆಂಪುಮಾಡಿದಿ. ಬಚಾವು!! 😉

      ನೆಗೆನೆಗೆ ಶುದ್ದಿಗೆ ನೆಗೆಯ ಒಪ್ಪ ಕೊಟ್ಟ ನಿಂಗೊಗೆ ಪ್ರೀತಿಗೊ.. 🙂

  9. ಒಳ್ಲೆ ಲೇಖನ.
    ಓದುಲೆ ತಮಾಶೆ ಅಗಿದ್ದರೂ ಇದು ನಮ್ಮ ಸಮಾಜಕ್ಕೆ ಹಿಡುದ ಕನ್ನಡಿ. ಹೀಂಗಿಪ್ಪ ಹೆಮ್ಮಕ್ಕೊ ನಮ್ಮ ನೆರೆಕರೆಲಿಯೆ ಕಾಂಬಲೆ ಸಿಕ್ಕುತ್ತವು.

    ವಿವರಣೆ ಭಾರಿ ಲಾಯ್ಕಯ್ದು. ಒಂದರಿಯೆ ಕೆಲವು ಹೀಂಗಿಪ್ಪ ಹೆಮ್ಮಕ್ಕಳ ಮೊರೆ ನೆಂಪಾತು.

    ನಾಯಿ-ಪುಚ್ಹೆಯ ಕೊಂಗಾಟ ಮಡುದು ತಪ್ಪಲ್ಲ. ಆದರೆ ಬ್ರಾಮಂಡ್ರಿಗೆ ದನದ ಮೇಲೆ ಹೆಚ್ಹು ಪ್ರೀತಿ ಇರೆಕ್ಕು.

    ಇನ್ನೊಂದರಿ ರೂಪತ್ತೆಯ ಗೆಂಡ (ಮಾವ) ನ ಬಗ್ಗೆ ಬರೆಯಕ್ಕು. ಕಾದುಗೊಂಡಿದ್ದೆ ಓದುಲೆ.

    1. ನಂದನಣ್ಣೋ..
      ಆ ಮನೆಲಿ ರೂಪತ್ತೆಯೇ ಶುದ್ದಿ!
      ರೂಪತ್ತೆಯ ಮಗಳ ಅಪ್ಪನ ಬಗ್ಗೆ ಶುದ್ದಿ ಹೇಳುಲಕ್ಕು. ಆದರೆ – ಶುದ್ದಿ ಬೇಕಲ್ಲದೋ? 😉

      ಆತು, ನೋಡುವೊ. ಎಂತಾರು ಸಿಕ್ಕುಗು.
      ಸಿಕ್ಕಿಪ್ಪಗ ಹೇಳ್ತೆ – ಆಗದೋ? 🙂

  10. ಓದಿ ಅಪ್ಪಗ ನೆಗೆ ಮಾಡಿ ಮಾಡಿ ಸಾಕಾತು… ಆದರೆ ಆನು ನೆಗೆ ಮಾಡಿದೆ ಹೇಳಿ ಒಪ್ಪಣ್ಣ ಬೇಜಾರು ಮಾಡುದು ಬೇಡ. ರೂಪತ್ತೆಯ ಬೇಜಾರು ಕೇಳಿ ಆನು ಬೇಜಾರಿಲಿ ನೆಗೆ ಮಾಡಿದ್ದು…

    1. { ರೂಪತ್ತೆಯ ಬೇಜಾರು ಕೇಳಿ ಆನು ಬೇಜಾರಿಲಿ ನೆಗೆ ಮಾಡಿದ್ದು }
      ನಿಂಗೊಗೆ ಬೇಜಾರಾದ ರೀತಿಯ ಕಂಡು ಒಪ್ಪಣ್ಣಂಗೂ ಬೇಜಾರಾಗಿ ನೆಗೆಬಂತು! 🙂
      ಪಾಪ ರೂಪತ್ತೆ! 😉

  11. ಬೈಲಿನವಕ್ಕೆ ರೂಪತ್ತೆಯ ಮರವಲೆ ಎಡಿಗೊ? ಏಕೆ ಒಪ್ಪಣ್ಣ ರೂಪತ್ತೆಯ ಶುದ್ದಿ ಬರೆತ್ತಾಯಿಲ್ಲೆ° ಗ್ರೇಶೆಂಡಿತ್ತಿದ್ದೆ. ನಿನ್ನೆ ಉದಿಯಪ್ಪಗ ನೋಡುವಾಗ ಬೈಲ್ಲಿ ಎಲ್ಲೋರೂ ರೂಪತ್ತೆಯ ಶುದ್ದಿಯೇ ಮಾತಾಡೊದು ಕಂಡತ್ತು!

    ರೂಪತ್ತಗೆ ತುಂ…ಬಾ ಬೇಜಾರ ಆದ ಶುದ್ದಿ ಓದಿ ಸರ್ಪಮಲೆ ಮಾವಂಗೆ ಸಂತೋಷವೇ ಆತು! ಅದರ್ಲಿ ಬೇಜಾರ ಅಪ್ಪಲೆ ಎಂತದೂ ಇಲ್ಲೆ!
    ರೂಪತ್ತೆಯ ಶುದ್ದಿಗೊ ಇನ್ನೂ ಬರಲಿ! ರೂಪತ್ತೆಯೂ ಬೈಲಿಂಗೆ ಬರಲಿ ಕಾರಿಲ್ಲೇ.

    ಒಪ್ಪಣ್ಣ ಗಾಡಿ ಎತ್ತು ಉಚ್ಚೊಯಿದ ಹಾಂಗೆ ಉದಾಕೆ ಹೇಳೆಂಡು ಹೋದರೂ ನವಗೆ ಆವಳಿಗೆ ಬಯಿಂದೇ ಇಲ್ಲ್ಲೆ! ನೆಗೆಯೇ ಬಂದೊಂಡಿತ್ತು!! ಅದಕ್ಕೂ ಬೇಜಾರ ಇಲ್ಲೆ.

    ರೂಪತ್ತೆಯ ಶುದ್ದಿ ಓದುವಾಗ ಶುಭತ್ತೆಯನ್ನೂ ನೆಂಪಾತು! ಶುಭತ್ತೆ ಬೆಂಗ್ಲಳೂರಿಲ್ಲೇ ಇದ್ದಲ್ಲದೋ?

    ತರವಾಡು ಮನೆಯ ಶುದ್ದಿ ಕೇಳದ್ದೆ ತುಂಬಾ ಸಮಯ ಆತು. ಶಂಬಜ್ಜ, ರಂಗ ಮಾವ, ಶಾಂಬಾವ, ಕಾಂಬು ಅಜ್ಜಿ, ಪಾತಿ ಅತ್ತೆ,, ಸಾರಡಿ ತೋಡು ಎಲ್ಲಾ ಒಂದೊಂದಾಗಿ ನೆಂಪಪ್ಪಲೆ ಸುರುವಾತು. ಈಗ ತರವಾಡಿಲ್ಲಿ ಶಾಂಬಾವನ ಕಾರ್ಬಾರೋ, ಅಲ್ಲ, ಅವನ ಮಕ್ಕಳ ಕಾರ್ಬಾರೋ ಗೊಂತಿಲ್ಲೆ. ಅಲ್ಲ, ಎಲ್ಲ ಮಾಪ್ಳಗಕ್ಕೊ, ಕೊಚ್ಚಿ ಕ್ರಿಶ್ಚನುಗೊಕ್ಕೊ ಮಣ್ಣ ಮಾರಿಕ್ಕಿ ಮಂಗ್ಳೂರಿಲ್ಲಿಯೊ, ಬೆಂಗ್ಳೂರಿಲ್ಲಿಯೊ ಹೋಗಿ ಕೂಯಿದೊವೊ ಏನೊ. ಅಜ್ಜಕಾನ ಭಾವನತ್ತರೆ ತಿಳಿವಲೆ ಹೇಳಿಕ್ಕು, ಒಪ್ಪಣ್ಣ! ಶುದ್ದಿ ಸಿಕ್ಕಿದರೆ, ಒಪ್ಪಣ್ಣನ ಬಾಯಿಂದಲೇ ಕೇಳೆಕು ಹೇಳಿ ಸರ್ಪಮಲೆ ಮಾವ ಹೇಳುತ್ತವು.

    ಒಪ್ಪಣ್ಣ ಪಂಜ ಚಿಕ್ಕಯ್ಯನ ಶುದ್ದಿಯನ್ನೇ ಬಿಟ್ಟದೆಂತಕೆ? ಪಂಜ ಚಿಕ್ಕಯ್ಯ
    “ಸೆಗ್‍ಣಿ ಸಾರ್ಸಿ ಸರೀ ಹೊಳಿಯೆಕ್ಕು ನಿನಿಗೆ” “ಗೋಬರುಗೇಶಿನ ಸ್ಲರಿಯ ಸರೀ ಕೊಳ್ಸಿ ಹಾಕಿದ್ರೆ ಒಳ್ಳೆ ಸಿಂಗಾರ ಬತ್ತು ನಿನಿಗೆ” “ಒಂದೇ ಸರ್ತಿಗೆ ಹಿಂಡಿ ಬದಲಿಸಿದ್ರೆ ಹಾಲು ಕಡಿಮೆ ಆಗ್ತಿಲ್ಯ ನಿನಿಗೆ?” “ಸೋನಿಯನ ಬೀಳ್ಸೆಕ್ಕಿದ್ರೆ ಮಮತಾ ಬೇನರ್ಜಿಯ ಸಪೋರ್ಟು ಬೇಕಲ್ದಾ ನಿನಿಗೆ?”
    ಹೇಳಿ ಹೇಳುವ ಮಾತುಗಳ ಕೇಳಿದರೆ ಎಂತ ಬೇಜಾರ ಇದ್ದರೂ ಹೋಕು! ಬರಲಿ ಬೇಗನೆ ಚಿಕ್ಕಯ್ಯನ ಹೊಸ ಶುದ್ದಿಗೊ!

    1. ಸರ್ಪಮಲೆಮಾವಾ°…
      ಛೆ, ಎಶ್ಟೊಂದು ಪ್ರೀತಿ – ಆತ್ಮೀಯತೆ ನಿಂಗಳ ಒಪ್ಪಲ್ಲಿ!

      {ರೂಪತ್ತೆಯೂ ಬೈಲಿಂಗೆ ಬರಲಿ ಕಾರಿಲ್ಲೇ} – ಹ ಹ, ಕಾರಿಲೇ ಹೇಳಿ ಒತ್ತಿ ಹೇಳಿದ್ದು ಕೇಳಿರೆ ರೂಪತ್ತೆಗೆ ಇಂದು ಆದ ಬೇಜಾರ ಎಲ್ಲವೂ ಮರದೇ ಹೋಕು.

      ತರವಾಡುಮನೆ, ಅಲ್ಯಾಣ ವೆಗ್ತಿತ್ವಂಗೊ, ಪಂಜಚಿಕ್ಕಯ್ಯ, ಅವರ ಮಾತುಗೊ – ಇದೆಲ್ಲವನ್ನೂ ನೆಂಪುಮಡಾಗಿ ಒಪ್ಪಣ್ಣಂಗೂ ನೆಂಪುಮಾಡುಸಿದ ನಿಂಗಳ ಒಪ್ಪ ತುಂಬ ಕೊಶಿ ಆತು.
      ಈ ಆಟಿ ಪುರುಸೊತ್ತೇ ಅಲ್ಲದ ಮಾವ°, ಕೂದೊಂಡು ಈ ಶುದ್ದಿಗಳ ಮಾತಾಡುವೊ, ಆಗದೋ?

      ನಿಂಗೊಗೂ ಪುರುಸೊತ್ತು, ಒಪ್ಪಣ್ಣಂಗೂ ಪುರುಸೊತ್ತು! 😉 😉

  12. ನೆಗೆ ಮಾಡಿ ಮಾಡಿ ಸಾಕಾತು.. ಅಬ್ಬ, ಭಾರೀ ಲಾಯ್ಕಾಯ್ದು ಬರದ್ದು. ಆ…ವಳಿಗೆ ಬಪ್ಪಲೆ ಅವಕಾಶವೇ ಇಲ್ಲೆಪ್ಪಾ.
    ಬೌಶ್ಶ ರೂಪತ್ತೆಗೆ ಬೇ..ಜಾರಾದ್ದು ಆ ದೇವರ ಮನಸ್ಸಿಂಗೆ ತಟ್ಟಿತ್ತೋ ಹೇಳಿ ಕಾಣ್ತು, ಎರಡು ದಿನಂದ ಹನಿಕಡಿಯದ್ದ ಮಳೆ!

    ಎನಗೀಗ ಆ ಮಾವನ ಭವಿಷ್ಯ ಹೇಂಗಿಕ್ಕಪ್ಪಾ ಇನ್ನು ಹೇಳಿ ಆಲೋಚನೆ ಆಗಿ ಬೇಜಾರಾವ್ತಾ ಇದ್ದು. 🙁

    1. { ಎರಡು ದಿನಂದ ಹನಿಕಡಿಯದ್ದ ಮಳೆ! }
      – ಓಹೋ, ದೇವರಿಂಗೆ ಬೇಜಾರಾಗಿ ಕಣ್ಣೀರೋ? ಯಪ್ಪಾ!
      ಇದೆಲ್ಲ ಸಾಹಿತ್ಯ ಅರಡಿವೋರಿಂಗೆ ಬಕ್ಕಷ್ಟೇ, ಒಪ್ಪಣ್ಣಂಗರಡಿಯ 😉

      ಮಾವನ ಭವಿಷ್ಯ ಇಂದಲ್ಲ, ಮದುವೆ ಆಗಿ ಆ ಮನಗೆ ಬಂದಪ್ಪಗಳೇ ಅಂದಾಜಿ ಆಯಿದು ಇದಾ! 😉

  13. ಹಹ್ಹಹ್ಹಾ …. ಒಪ್ಪಣ್ಣ ಬರದ ಲಾಯಿಖ ಇಪ್ಪ ಲೇಖನ ಓದುವಗ ಎನಗೆ ಒಂದೇ ಒಂದು ಆವಳಿಕೆದೆ ಬಯಿಂದಿಲ್ಲೆ.
    ಮಗನುದೆ ಒರಗಿಯೊಂಡಿದ್ದ ಕಾರಣ ಒಂದರಿಯೆ ಬೇಗ ಓದುಲಾತು. ನಿನ್ನೆ ಓದುಲಾತಿಲ್ಲೆನ್ನೆ? ಹೇಳಿ ಮಾತ್ರ ಎನಗೆ ಬೇಜಾರಾತು. ಆದರೆ ರೂಪತ್ತೆಯ ಬೇಜಾರದ ಮುಂದೆ ಎನ್ನದು ದೊಡ್ಡ ಬೇಜಾರಲ್ಲಪ್ಪ. ಇಂದು ಆದರೂ ಓದಿ ಖುಶಿ ಪಟ್ಟೆನ್ನೆ ಹೇಳಿ ಖುಶಿ ಆತು. ಎನಗುದೆ ಬೇರೆಯವಕ್ಕೆ ಇಪ್ಪ ಹಾಂಗೆ ಆ ರೂಪತ್ತೆಯ ನೋಡೆಕ್ಕು ಹೇಳಿ ಅವ್ತು. ಒಪ್ಪಣ್ಣ ಬರವ ಶೈಲಿಯೆ ಭಾರಿ ಚಂದ. ಇನ್ನಾಣ ವಾರಕ್ಕೆ ಕಾವ ಕೆಲಸ ಇನ್ನು ಅಂಬಗ.
    ~ ಸುಮನಕ್ಕ.

    1. ಸುಮನಕ್ಕಾ..
      { ರೂಪತ್ತೆಯ ಬೇಜಾರದ ಮುಂದೆ ಎನ್ನದು ದೊಡ್ಡ ಬೇಜಾರಲ್ಲಪ್ಪ }
      – ಅಬ್ಬಬ್ಬ! ಬೈಲಿನ ತುಂಬ ಚೆಂದಕೆ ಅರ್ತ ಮಾಡಿಗೊಂಡ ನಿಂಗಳ ಕಂಡು ಕೊಶೀಆತು.
      ಪಾಪ, ರೂಪತ್ತೆ. ಅಲ್ಲದಾ?! 🙁

  14. ಶುದ್ದಿ ಸೂಪರ್..

    ರೂಪತ್ತೆಯ ಶುದ್ದಿ ಇಲ್ಲದ್ದೆ ಅಸಕ್ಕ ಹಿಡುದಿತ್ತು…
    ಶುದ್ದಿ ಓದ್ವಾಗ ನೆಗೆಯೋ ನೆಗೆ… ಅದಕ್ಕೇನು ಬೆಜಾರಿಲ್ಲೆಪ್ಪ.. 😉
    [ರೂಪತ್ತೆಯ ಗೆಂಡನ ತಂಗೆಯ ಮಾವನೋರ ಅಣ್ಣನ ಮಗನ ದೊಡ್ಡ ಮಗನ ಎರಡ್ಣೇ ಮಗಳ ಮೈದುನನ ಮಗಂಗೆ!]-ಅಲ್ಲ ಒಪ್ಪಣ್ಣಂಗೆ ತಪ್ಪಿತ್ತೊ ಹೇಳಿ…ಅದು ದೊಡ್ಡ ಮಗಳ ಮೈದುನನ ಮಗನೊ ಹೇಳಿ ಕಾಣ್ತು… ಅಲ್ಲ, ಇದರ್ಲಿಯೂ ಬೇಜಾರಿಲ್ಲೆಪ್ಪ.. ಹೇಳಿದ್ದಷ್ಟೆ…

    ಈ ಬೇಜಾರದ ಶುದ್ದಿ ಕೇಳಿ ಸಾರಡಿ ತೋಡಿನ ಕರೆಲಿ ಕೂದು ಕೂಗಿಯೊಂಡಿದ್ದ ನೆಗೆಗಾರಣ್ಣ ಬೆಳ್ಳಕ್ಕೆ ಹೊದನೊ ಹೇಳಿ…. 🙁 ಇದಕ್ಕೆ ಮಾತ್ರ ಬೇಜಾರಿದ್ದಪ್ಪ….

    1. ಒಪ್ಪಕ್ಕೋ..
      ಸಂಬಂದ ಹಿಡುದು ಮೇಲೆಕೆಳ ಮಾಡ್ಳೆ ನೀನುದೇ ಉಶಾರಿಯೇ ಅಪ್ಪೋ!! 🙂
      ಬೇಜಾರದ ಶುದ್ದಿ ಕೇಳಿ ನೆಗೆಬಂದದಕ್ಕೂ ಬೇಜಾರ ಮಾಡ್ಳಿಲ್ಲೆಯೋ ಅಂಬಗಾ…??
      ಪಾಪ.
      {ಬೇಜಾರದ ಶುದ್ದಿ ಕೇಳಿ ಸಾರಡಿ ತೋಡಿನ ಕರೆಲಿ ಕೂದು ಕೂಗಿಯೊಂಡಿದ್ದ ನೆಗೆಗಾರಣ್ಣ }
      – ಹ ಹ, ಇದು ಪಷ್ಟಾಯಿದು! 🙂
      ನೆಗೆಮಾಣಿಯೇ ಕೂಗಿದನೋ? ಚೆ ಚೆ!!

  15. ತುಂ…ಬಾ ಲಾಯಿಕಾಯಿದು..ಓದುಲೆ ಕುಶಿ ಆತು…

  16. ಒಪ್ಪಣ್ಣ , ಲಾಯ್ಕ ಆಯಿದಿದಾ ಕಥೆ!!!!

    ಅಪ್ಪು ಅದಾರು ಪ೦ಜಲ್ಲಿ ರೂಪತ್ತೆ ಹೇಳಿರೆ? ಪ೦ಜ ಹೇಳ್ವಾಗ ಎನ್ನ ಕೆಮಿ ಒ೦ದರಿ ಕುತ್ತ ಆತಿದಾ!!!! ಗೂಗಲ್ ಲಿಲಿ ಹುಡುಕಿದೆ ಇದಾ ಅರೂ ಸಿಕ್ಕಿದ್ದವಿಲ್ಲೆ! ಒ೦ದರಿ ರೂಪತ್ತೆಯ ಮಾತಡ್ಸೆಕ್ಕಾತು, ನಾಯಿಯ ವಿಶಯ,ಕಾರಿನ ವಿಶಯ ಹೀ೦ಗೆಲ್ಲಾ ಸುಮಾರು ಕೇಳುಲೆ ಇದ್ದತ್ತಿದಾ!!!! ಪಟಲ್ಲಿಪ್ಪ ನಾಯಿ ಪಷ್ತು ಇದ್ದದಾ!!!

    ಕೊನೆಗೆ ಒ೦ದೊಪ್ಪಃ ಎ೦ತಾರುದೆ ಒಪ್ಪಣ್ಣನ ಶೈಲಿ ಬಗ್ಗೆ ಹೇಳಿತ್ತು ಕ೦ಡ್ರೆ, ಒಪ್ಪಣ್ಣ೦ಗೆ ಒಪ್ಪಣ್ಣನೆ ಸಾಟಿ ಇದಾ.

    1. ಗೆಣವತಿಅಣ್ಣನ ಆಸಕ್ತಿ ಕೊಶಿ ಆತು.
      ರೂಪತ್ತೆಯ ತಿಳಿಯಲೆ ಅಷ್ಟೂ ಕೊಶಿ ಆಗಿದ್ದರೆ ಬನ್ನಿ, ಒಂದರಿ ಪರಿಚಯ ಮಾಡುಸಿ ಬಿಡ್ತೆ.
      ಮತ್ತೆ ಮಾತಾಡಿಮಾತಾಡಿ ತಲೆಬೇನೆ ಬಂದರೆ ಬೈಲಿಲಿ ಹೇಳಿರೆ ಆಗ, ಹಾ°! 😉
      ಒಪ್ಪಣ್ಣಂಗೆ ಅಷ್ಟು ತಲೆಬೇನೆ ಕಮ್ಮಿ ಅಕ್ಕು ಇದಾ!!

      ಹೇಳಿದಾಂಗೆ, ಪಂಜಲ್ಲಿ ಬೇರೆ ಆರ ಗುರ್ತ ಇದ್ದು?

    1. ರೂಪತ್ತೆಗೆ ಬೇಜಾರಾದ್ದು ಕಂಡು ನಿಂಗೊಗೆ ಚೆಂದ ಆಯಿದಾ? 😉
      ಯೋಗದ ಹರೀಶಣ್ಣ ಬೈಲಿಂಗೆ ಬಂದದು ಬೈಲಿನ ಯೋಗವೇ ಅಲ್ಲದೋ?

  17. ಭಾರಿ ಲಾಯ್ಕ ಆಯಿದು ಒಪ್ಪಣ್ಣನ ಅಲ್ಲಲ್ಲ ರೂಪತ್ತೆಯ ಕಥೆ..

    {ಹಾಂಗೆ ಮನೆಗೆತ್ತಿ ಎರಡು ವಾರ ಆತು, ಆದರೂ ಬಚ್ಚಲು ಹೋಯಿದಿಲ್ಲೆ}
    ಅದಕ್ಕೆ ಒಂದು ಕೆಲ್ಸ ಮಾಡುಲಕ್ಕು… ಅಂಗಡಿಲಿ ’ಇಸಬ್ ಗೋಲ್’ ಹೇಳ್ತ ಒಂದು ಹೊಡಿ ಸಿಕ್ಕುತ್ತು.. ನೋಡುವಾಗ ಸಣ್ಣ ಸಜ್ಜಿಗೆಯ ಹಾಂಗೆ ಇರ್ತದು.. ಅದರ ತಂದು ಒಂದೆರಡು ಚಂಚೆ ನೀರ್ಲಿ ಕಲಸಿ ಕೊಟ್ಟರೆ ಸರಿ ಅಕ್ಕು… ಆದರುದೆ ಎರಡು ವಾರದ ಸ್ಟಾಕು ಕ್ಲಿಯರ್ ಅಪ್ಪದು ಚೂರು ಕಷ್ಟ ಹೇಳಿ ಕಾಣುತ್ತು 🙂

    1. {ಒಂದೆರಡು ಚಂಚೆ ನೀರ್ಲಿ ಕಲಸಿ ಕೊಟ್ಟರೆ}
      ನೀರು-ಕಜೆ ಅಪ್ಪಚ್ಚಿ ನೀರಿಲಿ-ಕಲಸಿ ಕುಡಿವಲೆ ಹೇಳಿದ್ದು ಕೇಳಿ ಹೊಟ್ಟೆ ತಂಪಾತು.
      ಆದರೆ ಈ ಮದ್ದಿನ ರೂಪತ್ತೆಗೆ ಹೇಳುಲೆ ಹೋದರೆ ಪುನಾ ಇಡೀ ಕತೆ ಬಕ್ಕನ್ನೇಪಾ!!
      ಎಂತ ಮಾಡುದು! 😉 🙁

  18. ರೂಪತ್ತೆಗೆ ಬೇ…..ಜಾರು ಆದ್ದದು ಕೇಳಿ, ಎನಗುದೆ ತುಂಬಾ ಬೇಜಾರು ಆತು. ನಿಜಾ ಹೇಳ್ತರೆ, ರೂಪತ್ತೆಯ ವಿಷಯ ಕೇಳದ್ದೆ, ತುಂಬಾ ಅಸಕ್ಕ ಆಗೆಂಡಿತ್ತು. ರೂಪತ್ತೆಯ ಮೊಬೈಲು ನಂಬರುದೆ ಗೊಂತಿಲ್ಲೆ ಇದಾ !!!
    ಅಂತೂ ಒಪ್ಪಣ್ಣ ಇದ್ದದರ ಇದ್ದ ಹಾಂಗೇ ಹೇಳಿದ್ದರ ಕೇಳಿ ಅಪ್ಪಗ ಅಸಕ್ಕ ರಜಾ ಕಡಮೆ ಆತದ. ಆದರೂ, ಮಾವ, ರೂಪತ್ತೆಯ “ಜಾತಿಯ ನಾಯಿ”ಯ ಹಾಂಗೆ ನೋಡೆಂಡದು ಕೇಳಿ ಬೇಜಾರು ಆಗಿ ತಡೆಯ. ಸದ್ಯ ಒಲೆ ಬೂದಿಲಿ ಮನುಗುತ್ತ ಹಾಂಗೆ ಮಾಡಿದ್ದವಿಲ್ಲೆ ಆನ್ನೆ?!
    ರೂಪತ್ತೆ ಕಾರಿಂದ ಇಳುದ ವರ್ಣನೆ ಕೇಳಿ ಅಪ್ಪಗ, ರೂಪತ್ತೆಯ ಕಣ್ಣಾರೆ ಕಂಡ ಹಾಂಗೆ ಆತು.
    ಮೋರೆಲಿದ್ದ ಷ್ಟಿಕ್ಕರಿನ ತೆಗದು ಕನ್ನಟಿಗಂಟುಸಿ, ಎರಡು ಸರ್ತಿ ತಲೆಬಾಚಿ, ನಾಕು ಸರ್ತಿ ಕನ್ನಾಟಿನೋಡಿ, ಕಾರಿನ ಕೈಂಕ್ ಹೇಳಿ ಲಾಕ್ ಮಾಡಿ… ಲಾಯಕಾಯಿದು.
    ಎಕ್ಸುಲೇಟ್ರು ತೊಳುದ್ದಕ್ಕೆ ಕಾಲುತೊಳೇಕು ಹೇಳಿ ಇಲ್ಲೆ !
    ಮಾವ ತೊಳೆತ್ತ ನಮುನೆ ತೊಳದರೆ ಕಲೆ ಅಲ್ಲ, ಗೊಂಡೆ – ಫಾಲುದೇ ಹೋಗದೋ.
    ’ಮಾವುಮೇಳದ’ ಕೊನೇ ದಿನ ಅಡ, ಶಪಿಂಡಿಯ ಹಾಂಗೇ!
    ಎಲ್ಲ ಮಾತುಗಳುದೆ ಸೂಪರ್ ಆಯಿದು. ಹೇಳ್ತರೆ ಇನ್ನುದೆ ತುಂಬಾ ಇದ್ದು.

    ಆಫೀಸು ಸಮಯಲ್ಲಿ ಒಪ್ಪಣ್ಣನ ಈ ಲೇಖನ ಓದಿದ್ದಕ್ಕೆ, ಎನಗೆ ಎಂತೂ ಬೇಜಾರಿಲ್ಲೆ !!

    1. ರೂಪತ್ತೆಯ ನಂಬ್ರ ಇಲ್ಲದ್ದದಕ್ಕೆ ಬೊಳುಂಬುಮಾವಂಗೆ ಬೇಜಾರಾತೋ – ಹೇಳಿ ಅಜ್ಜಕಾನಬಾವ ಕೋಂಗಿಮಾಡೆಂಡು ಇತ್ತಿದ್ದ° ಮಾವಾ!
      ಅದರ ಕೇಳಿರೆ ನಿಂಗೊಗೆ ಬೇಜಾರಕ್ಕು – ಹೇಳಿ ಆನು ಹೇಳದ್ದೆ ಇದ್ದದು. ಮತ್ತೆ ಒಪ್ಪಣ್ಣಂಗೇ ಬೇಜಾರಕ್ಕಿದಾ! 😉

      {ಆಫೀಸು ಸಮಯಲ್ಲಿ ಒಪ್ಪಣ್ಣನ ಈ ಲೇಖನ ಓದಿದ್ದಕ್ಕೆ, ಎನಗೆ ಎಂತೂ ಬೇಜಾರಿಲ್ಲೆ !!}
      – ಇದು ಪಷ್ಟಾಯಿದು ಮಾವ°..
      ಆಪೀಸಿನ ಓಪೀಸರಂಗೆ ಬೇಜಾರಾಯಿಕ್ಕೋ? ಉಮ್ಮಪ್ಪ. ನವಗೆಂತ ಅಲ್ಲದೋ? 🙂

  19. ಒಪ್ಪಣ್ಣನ ಹಾಸ್ಯಮಯ ಶೈಲಿ ಭಾರೀ ಲಾಯಕ ಆಯಿದು.ಧನ್ಯವಾದ.

    1. ಡೀಕೇಶಾಂಬಾವಾ…
      ಒಪ್ಪಕ್ಕೆ ಕೊಶಿ ಆತು.
      ನಿಂಗಳ ಶುದ್ದಿ ಯೇವತ್ತು ಬಪ್ಪದಪ್ಪಾ…? ಬೈಲಿಲಿಕಾದೊಂಡಿದ್ದವು.. 🙂

  20. ರೂಪತ್ತೆ ಶುದ್ದಿ ಹೇಳಿರೆ ಭಾರೀ ಕೊಷಿ ಅದಾ ಓದಲೇ ..
    ಲಾಯ್ಕ ಆಯ್ದು ಒಪ್ಪಣ್ಣ..

    1. ಕಳಾಯಿಗೀತತ್ತೆ,
      ಅಂದೊಂದರಿ ರೂಪತ್ತೆಯ ಶುದ್ದಿಮಾತಾಡದ್ದೆ ಸುಮಾರು ಸಮಯ ಆಗಿಪ್ಪಗ ನಿಂಗಳೇ ಬೈದು, ರೂಪತ್ತೆಶುದ್ದಿ ಹೇಳುಸಿದ್ದು ಒಪ್ಪಣ್ಣಂಗೆ ಈಗಳೂ ನೆಂಪಿದ್ದು! 😉

      ಈಗ ಹೇಳಿ, ನಿಂಗೊಗೆ ಬೇಜಾರಾತೋ? 🙂

  21. ಛೆ, ಈ ರೂಪತ್ತೆಯ ಒ೦ದರಿ ಕಣ್ತು೦ಬ ಕಾಣೆಕ್ಕಾತನ್ನೇ..
    ಪಟ್ಟೆಸೀರೆಯ ಮಗಳಪ್ಪನ ಕೈಲಿ ಕೊಡುಲಾಗಪ್ಪೊ. ಜಾತಿನಾಯಿಯ ನಾಯಿಜಾತಿ ಮಾಡಿದ ಮಾವ°, ಪಟ್ಟೆಸೀರೆಯ ಚೆ೦ಡಿಹರ್ಕು ಮಾಡಿ ಜಾಲಿ೦ಗೆ ಹಾಕಿರೋ° !!.

    1. ಮುಳಿಯಭಾವಾ..
      ರೂಪತ್ತೆಯ ಬಗ್ಗೆ ತುಂಬ ಅನುಕಂಪಲ್ಲಿ ಒಪ್ಪಕೊಟ್ಟದು ನಿಂಗೊ ಮಾಂತ್ರ.
      ಪಾಪ!! 😉
      {ಪಟ್ಟೆಸೀರೆಯ ಚೆ೦ಡಿಹರ್ಕು ಮಾಡಿ..} – ಎಂತ ಉಪಮೆ ಬಾವ ನಿಂಗಳದ್ದು.
      ಪಷ್ಟ್ಲಾಸಾಯಿದು.
      ಈ ಒಪ್ಪ ಕಂಡು ಭರ್ತಿ ಒಂದು ದಿನ ಬೇಜಾರದ ನೆಗೆಬಯಿಂದು ಒಪ್ಪಣ್ಣಂಗೆ! 🙂

  22. (ಆ…. ಆಹ್… ಆ………ವಳಿಗೆ ಬಂದರೆ ತಡಕ್ಕೊಳಿ ಆತಾ, ಶುದ್ದಿ ರಜ ಉದ್ದ ಇಕ್ಕು!)
    ಬಾರದ್ದ ಆ..ವಳಿಗೆ ಶುರು ಆತು ಇಲ್ಲಿಂದಲೇ..ಹಾಂಗೇಳಿ ಬೇಜಾರಿಲ್ಲೆ.. ಮಾವ ಮತ್ತೆ ಪಟ್ಟೆ ಸೀರೆಯ ಕಲೆ ತೆಗೆಶುವ ವ್ಯವಸ್ತೆ ಮಾಡಿಕ್ಕು ಅಲ್ಲದೋ.?

    1. ತೆಕ್ಕುಂಜೆಕುಮಾರಣ್ಣಾ..
      {ಹಾಂಗೇಳಿ ಬೇಜಾರಿಲ್ಲೆ.. }
      – ಹ ಹ, ರೂಪತ್ತೆಯ ಶುದ್ದಿಗೆ ಒಪ್ಪಕೊಡುವಗ ಅದರ ನಮುನೆಯೇ ಮಾತಾಡ್ಳೆ ಕಲ್ತಿದಿ, ಅಪ್ಪೋ?! 🙂

  23. ಅ೦ದೂ೦ದರಿ ಯಾವದೊ ‘ಬೀಚಿ’ ಬರೆದ ಪುಸ್ತಕಲ್ಲಿದ್ದ ‘ಗ೦ಡನನ್ನು ಪಳಗಿಸುವುದು ಹೇಗೆ?’ ಹೇಳುವ ವಾಕ್ಯ ನೆ೦ಪಾತು ರೂಪತ್ತೆಯ ಬಗ್ಗೆ ಓದಿ ಅಪ್ಪಗ

    1. ಬೀಚಿಯ ‘ಮೇಡಮ್ಮನ ಗಂಡ” ಪುಸ್ತಕಲ್ಲಿ ಒಳ್ಳೇ ವಿವರಣೆ ಬತ್ತು.

      1. ಬಹುಶ ಅದೆ ಪುಸ್ತಕ ಆಗಿರೆಕ್ಕು. ಬೀಚಿ ಯ ವಿಡ೦ಬನಾತ್ಮಕ ಹಾಸ್ಯ ಒಪ್ಪಣ್ಣನ ಲೇಖನ ಒದಿ ಅಪ್ಪಗ ಒ೦ದರಿ ನೆ೦ಪಾತು.

  24. ಅನೇಕ ವಾರ ನಂತರ ಒಪ್ಪಣ್ಣ ತಮಾಷೆಗೆ ಮರಳಿದ.
    ಕುಶಿ ಆತು.

    1. ಗೋಪಾಲಣ್ಣಾ..
      ಬೈಲಿನೋರ ಕೊಶಿಯೇ ಒಪ್ಪಣ್ಣನ ಕೊಶಿ.

      ಕಳುದ ವಾರ ಬಟ್ಟಮಾವ ಸಿಕ್ಕಿದವಿಲ್ಲೆ, ಹಾಂಗಾಗಿ ಈ ’ನೇರಂಪೋಕು’ ಶುದ್ದಿ ಮಾತಾಡಿದ್ದದು! 🙂

  25. ನಿಂಗೊಗೆಲ್ಲಾ ಪಾಪದ ರೂಪತ್ತೆಯ ವಿಷಯ ಸಿಕ್ಕಿರೆ ಸಾಕು,ಕಿಸಿವಲೆ ಸುರು ಮಾಡಿ.ಪಟ್ಟೆ ಸೀರೆಗೆ ಪುನರ್ಪುಳಿ ಕಲೆ ಅದರೆ ಮಾವಂಗೆಷ್ಟು ಕಷ್ಟ ಹೇಳಿ ಆರಾರೂ ಯೋಚನೆ ಮಾಡಿದ್ದಿರೋ?ಎ°

    1. ವ್ಹಾವ್ಹಾ ಕೇಜಿಮಾವಾ!
      ನಿಂಗಳ ಒಪ್ಪ – ನಿಂಗೊ ಕೊಟ್ಟ ಮಾಂಬ್ಳದ ನಮುನೆಯೇ ಇದ್ದತ್ತು.
      ಸಣ್ಣ, ಕಡ್ಪ, ರುಚೀ – ಆಗಿಂಡು. 🙂

      ಪಾಪ, ಯೋಚನೆ ಮಾಡುವ ಮದಲೇ ಎಷ್ಟು ನೆಗೆಮಾಡ್ತವು ಬೈಲಿಲಿ! 🙂

      1. ಪಾಪ,ಮಾಂಬ್ಳ ಸಿಕ್ಕದ್ದೆ ಸುಮಾರು ಸಮಯ ಆತು ಹೇಳಿ ಕಾಣ್ತು ಒಪ್ಪಣ್ಣಂಗೆಃ)

  26. [ಮೊಬೈಲು ಹಿಡುದ ಎಡದ ಕೈಲಿ ಪಟ್ಟೆಸೆರಗನ್ನೂ ಹಿಡ್ಕೊಂಡು,…………..ಬಂದು ಕೆಂಪುಕುರುಶಿಲಿ ಕೂದತ್ತಡ] – ಅಂಬಗ ಈ ರೂಪತ್ತೆ ವ್ಯಾನಿಟಿ ಬ್ಯಾಗ್ ಹೆಗಲಿಂಗೆ ಏರ್ಸಿಗೊಂಡು ಹೋಪ ಕ್ರಮ ಇಲ್ಯೋ ಭಾವ!
    ಕೆದಿಲ ಮಾರ್ಗ ಈಗ ಅಂಬಗ ಲಾಯಕ್ಕ ಮಾಡಿದ್ದವೋ ಭಾವ?. ಇಲ್ಲದ್ರೆ ಈ ರೂಪತ್ತೆ ಆ ಮಾರ್ಗಲ್ಲಿ ಹೇಂಗೆ ಕಾರು ಬಿಡುಗು?!
    [ಶಪಿಂಡಿಯ ಹಾಂಗೇ!] – ಹ ಹ ಹಾ
    […..ಒಂದು ಮನೆ – ಮೂರು ಬಾಗಿಲು, ಹೀಂಗ್ರುತ್ತ ನಾನಾನಮುನೆ ಕತೆಗೊ ದಾರಾವಾಹಿ] – ಛೆ, ಶೋಭಕ್ಕ ಏನೂ ತೊಂದರೆ ಕೊಟ್ಟಿದಿಲ್ಲೆ ರೂಪತ್ತೆ ಬಂದದರ್ಲಿ ನೋಡಿದಿರೋ!! ಗುಣಾಜೆ ಮಾಣಿ ಶೋಭಕ್ಕಂಗೆ ಮದಾಲೆ ಸೂಚನೆ ಕೊಟ್ಟಿತ್ತನೋ ಹೇಂಗೆ?!
    [ಎರಡು ಸೀರೆ, ನಾಕು ಚೂಡಿದಾರ, ನಾಕು ಸೆಟ್ಟು “ಒಂದುಗ್ರಾಮುಚಿನ್ನದ” ಬಳೆ, ಎರಡು ವೇನಿಟಿಬೇಗುಗೊ ]- ಓಯಿ., ಪ್ರೀ ಅತವಾ ಬೆಳ್ಳಿ ನಾಣ್ಯ ಗಿಪ್ಟು ಎಂತೂ ಸಿಕ್ಕಿದ್ದಿಲ್ಲೆಯೋ ಇಟ್ಟು ತೆಗದ್ದಕ್ಕೆ?!!
    [ನಾಯಿಗೆ ಹೆಚ್ಚು ಬೇಜಾರಾದ್ಸೋ, ಅತ್ತೆಗೋ,] – ಉಮ್ಮಾ , ಆ ಮಟ್ಟಿಂಗೆ ಬೇಜಾರ ಮಾಡ್ಳಿಲ್ಲೆ.
    [ಒಪ್ಪಣ್ಣಂಗೆ ಲೊಟ್ಟೆ ಅರಡಿಯ ಇದಾ] – ಬೇಜಾರು ಏನೂ ಮಾಡ್ಳಿಲ್ಲೆ!
    [ಕೇಳಿದ್ದರ ಹಾಂಗೇ ಬೈಲಿಂಗೆ ಹೇಳಿದ್ದು!] – ಅದರ್ಲಿ ಎಂತ್ಸೂ ಬೇಜಾರ ಮಾಡ್ಲಿಲ್ಲೆ
    [ಸುತ್ತಿದ ಪಟ್ಟೆಸೀರೆಗೇ ಹತ್ತಿ, ಮಾತಾಡಿತ್ತಡ.] – ಅದು ಬೇಜಾರವೋ; ಅಲ್ಲಪ್ಪ., [ಪಟ್ಟೆಸೀರೆಗೆ ಪುನರ್ಪುಳಿ ಕಲೆ ಬಿದ್ದದು ] – ಛೆ, ಎಂಥ ಅನ್ಯಾಯ ಅಪ್ಪೋ.!! ಜ್ಯೂಸ್ ಕೊಡ್ತವಕ್ಕೆ ರಜಾರು ಜೆವಬ್ದಾರಿ ಬೇಡದೋ!!
    [ಕಾಲ ಬಂದಪ್ಪಗ ಯೇವ ನಾಯಿಯೂ ಒಂದು ಶುದ್ದಿ ಅಕ್ಕು] – ಇದು ವಿಷಯ ಅಪ್ಪು.

    ‘ಭಾವ, ಸಂಗತಿ ಅಪ್ಪು’ ಹೇಳಿ ನಮ್ಮ ಒಪ್ಪ.

    1. ಚೆನ್ನೈಭಾವಾ…
      ರೂಪತ್ತೆಯ ಬೇಜಾರವ ಬೈಲಿಲಿ ಕಂಡು ಬೇಜಾರಾಗಿ ನಿಂಗೊ ಬೇಜಾರದ ಒಪ್ಪವನ್ನೇ ಕೊಟ್ಟದು ಒಪ್ಪಣ್ಣಂಗೆ ಬೇಜಾರಾತು!
      ತುಂಬಾ ಬೇಜಾರಾಗಿ ನೆಗೆಯೂ ಬಂತತ್ಲಾಗಿ! 😉

      { [ಒಪ್ಪಣ್ಣಂಗೆ ಲೊಟ್ಟೆ ಅರಡಿಯ ಇದಾ] – ಬೇಜಾರು ಏನೂ ಮಾಡ್ಳಿಲ್ಲೆ! }
      – ಹ ಹ! ಅಬ್ಬ, ಎಲ್ಲಿ ನಿಂಗೊಗೆ ಬೇಜಾರಾವುತ್ತೋ ಹೇಳಿ ಒಪ್ಪಣ್ಣಂಗೆ ಬೇಜಾರಾಗಿಂಡಿತ್ತು! 😉

  27. ಹ್ಹಹ್ಹಹ್ಹಾ..
    ಅಪ್ಪಪ್ಪು ಒಪ್ಪಣ್ಣಾ.. ಎನಗೆ ಬೇಜಾರಾಗಿ ತಡೆಯ.. ಇನ್ನು ನಾಳೆ ಉದಿಯಪ್ಪಗವರೇ೦ಗೆ ಆನು ಹೆಜ್ಜೆತೆಳಿ ಕೂಡ ಕುಡಿಯೆ.. ಅಷ್ಟುದೆ ಬೇಜಾರ ಆಯಿದೆನಗೆ.. 😉

    ಒಪ್ಪಣ್ಣನ ಸ್ವತಃಸಿಧ್ಧ ಶೈಲಿಗೆ ಮುಟ್ಟಾಳೆ ನೆಗ್ಗಿ ಸಲಾಮು ಹೊಡೆತ್ತೆ.. ಒಪ್ಪ೦ಗೊ.

        1. ಗಣೇಶಣ್ಣಾ..
          ಸುರೂವಾಣ ಒಪ್ಪಕ್ಕೆ ಪ್ರೀತಿಯ ಒಪ್ಪಂಗೊ.

          {ಇನ್ನು ನಾಳೆ ಉದಿಯಪ್ಪಗವರೇ೦ಗೆ ಆನು ಹೆಜ್ಜೆತೆಳಿ ಕೂಡ ಕುಡಿಯೆ.. }
          ಹ ಹ ಹ! ಇದರ ಕೇಳಿ ತಡವಲೆಡಿಯದ್ದ ಬೇಜಾರಾತೆನಗೆ. 🙂
          ಒಪ್ಪ ಪಷ್ಟಾಯಿದು ಬಾವ.

          ಮುಣ್ಚಿಕಾನದ ಭಾವನ ಚೋದ್ಯಕ್ಕೆ ಉತ್ತರ ನವಗರಡಿಯ.
          ಆದರೆ, ದುಬಾಯಿಗೆ ಹೋದರೆ ಮುಟ್ಟಾಳೆ ಬೇಡ, ಬೇಕಾದಷ್ಟು ಟೊಪ್ಪಿ ಮಡಗುತ್ತೋರು ಇದ್ದವಡ, ಅಪ್ಪೋ ಗಣೇಶಣ್ಣಾ..? 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×