Oppanna.com

ಇಹಯಾತ್ರೆ ಮುಗಿಸಿದ ಬಲಿಪಜ್ಜ°

ಬರದೋರು :   ಒಪ್ಪಣ್ಣ    on   17/02/2023    0 ಒಪ್ಪಂಗೊ

ನಮ್ಮೆಲ್ಲರ ಗೌರವದ, ಇಷ್ಟದ ಭಾಗವತರಾದ ಶ್ರೀ ಬಲಿಪ ನಾರಾಯಣ ಭಾಗವತರು / ಕಿರಿಯ ಬಲಿಪರು / ಬಲಿಪಜ್ಜ° – ಇವು ನಿನ್ನೆ ಅಸ್ತಂಗತರಾದವು.

ಕಂಚಿನ ಕಂಠ ಹೇಳಿಯೇ ಇವು ಪ್ರಸಿದ್ಧ.  ಕಪ್ಪು3 ಬೆಳಿ5 ರ ವಿಶಿಷ್ಟ, ಕ್ಲಿಷ್ಟ ಶ್ರುತಿಲಿ ಲೀಲಾಜಾಲವಾಗಿ ಹಾಡುವ ಇವರ ದೈವದತ್ತ ಪ್ರತಿಭೆ ಯಕ್ಷ ಪ್ರಿಯರಿಂಗೆ ಅತ್ಯಾದರ.

ಹತ್ತರತ್ತರೆ ತೊಂಭತ್ತು ಒರಿಷ. ಅದರ್ಲಿ ಸುಮಾರು ಎಪ್ಪತ್ತು ವರ್ಷವೂ ಮೇಳಂಗಳಲ್ಲಿ ಯಕ್ಷಾರಾಧನೆ.

ಪಡ್ರೆ ಶ್ರೀ ಜಠಾಧಾರಿ ಮೇಳಲ್ಲಿ ಇವರ ಯಕ್ಷಸೇವೆಯ ಸುಮಾರು ಏಳು ದಶಕದ ಹಿಂದೆ ಆರಂಭ ಮಾಡಿದವಡ. ಅಲ್ಲಿಂದ ಹಿಂದೆ ನೋಡಿದ್ದವೇ ಇಲ್ಲೆ.

ತನ್ನ ಮಕ್ಕಳನ್ನೂ ಯಶಸ್ವೀ ಭಾಗವತರಾಗಿಸಿ, ‘ಬಲಿಪ ಪರಂಪರೆ’ಯ ಮುಂದುವರುಸುವ ವ್ಯವಸ್ಥೆ ಮಾಡಿದ್ದವು. ಇತ್ತೀಚೆಗೆ ಇವರ ಮಗ ಶ್ರೀ ಪ್ರಸಾದ ಬಲಿಪರು ಅಸ್ತಂಗತರಾಗಿ  ಯಕ್ಷ ಕ್ಷೇತ್ರಕ್ಕೆ ಅಪಾರ ನಷ್ಟ ಆಗಿತ್ತು.

ಕಟೀಲು ಮೇಳದ ಪ್ರಧಾನ ಭಾಗವತರಾಗಿ ಹಲವಾರು ದಶಕ ಹಿರಿಮೆ ಹೊತ್ತಿದವು. ಹಾಂಗಾಗಿ, ಕಟೀಲಿನ ಯಾವದೇ ಮೇಳಲ್ಲಿ ಜಾಗಟೆ ಹಿಡಿದು ಭಾಗವತರಾಗಿ ಕೂಪಲಕ್ಕು – ಹೇಳುವ ಅಪೂರ್ವ ಗೌರವ ಇವಕ್ಕೆ ಒಲುದಿತ್ತು.

ಬಲಿಪಜ್ಜನ ನಿಧನಕ್ಕೆ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಸಹಿತ ಅಪಾರ ಅಭಿಮಾನಿಗೊ ಬೇಜಾರ ತಿಳುಶಿದ್ದವು.

ಒಟ್ಟಿಲಿ, ಯಕ್ಷಪ್ರಿಯರಿಂಗೆ, ಯಕ್ಷಗಾನಕ್ಕೆ ಇದು ಅಪಾರ ನಷ್ಟ.

ಬಲಿಪಜ್ಜ ದೇವಲೋಕದ ದೇವಸಭೆಲಿ ಕಂಚಿನ ಕಂಠ ನುಡಿಸಲಿ. ಯಕ್ಷಪ್ರಿಯರ ಮೇಲೆ ಅವರ ಪ್ರೀತಿ ಸದಾ ಇರಲಿ…

ಪ್ರಧಾನಮಂತ್ರಿ ಮೋದಿ ಅಜ್ಜನ ಸಂದೇಶ:

ಕರ್ನಾಟಕ ಮುಖ್ಯಮಂತ್ರಿಗಳ ಸಂದೇಶ:

ಬಲಿಪಜ್ಜನ ಅಮರ ಗೀತೆ – ಶರಣು ತಿರುವಗ್ರ ಶಾಲಿವಾಹಿನೀ…

 

ಬಲಿಪಜ್ಜ° – (ಅಜ್ಜ° ಅಪ್ಪ ಮೊದಲು… )

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×