Latest posts by ಶೇಡಿಗುಮ್ಮೆ ಪುಳ್ಳಿ (see all)
- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಅಮ್ಮನ ಕಾಲಿಲಿ
ತಮ್ಮನು ಮನುಗಿರೆ
ಸುಮ್ಮನೆ ತೊಂದರೆ ಕೊಡುಲಾಗ
ಸುಮ್ಮನೆ ಹೋಪಗ
ತಮ್ಮನು ಮನುಗಿದ
ಅಮ್ಮನ ಕಾಲಿನ ದಾಂಟ್ಲಾಗ
ಇದು ಹಳಬ್ಬರ ಮಾತು
ಪಟದ ಮೇಲೊಂದು ಪದ
ಹಟದಿ ಬರವಲೆ ಕೂದು
ಕಿಟಕಿ ಬಾಗಿಲ ರಾತ್ರಿ ಹಾಕಿ ದಿಲ್ಲೇ
ಹಟವ ಸಾಧನೆ ಮಾಡಿ
ಕಿಟಕಿ ಕರೆ ನೋಡುವಗ
ಪಟಪಟನೆ ರೆಕ್ಕೆ ಬಡುದು ನುಸಿ ಹೋತೂ
ತಿರುಗಿ ನೋಡಿ ಪೂರ ದೇಹ
ತೊರುಸಿ ಕೆಂಪು ಬಣ್ಣ ಬಂದು
ಕೊರದು ಬೇಯಿಸಲುದೆಯೆಡಿಯ ತೊಂಡೆ ಹಣ್ಣಿದೂ
ಮರದು ಹೋತು ಮರದ ದಳಿಯ
ಕೊರಗಿಯಿನ್ನು ಎಂತ ಮಾಡ್ಸು
ಒರಗಿ ಎರಡು ಗೊರಕೆ ಹೊಡದರೆ ನುಸಿ ಓಡುಗೂ
ಮೇಲಾಣ ಮೂರುದೇ ಬೇರೆ ಬೇರೆ ಹೇಂಗಾಯಿದು…….? ನೋಡಿ ಹೇಳಿಕ್ಕಿ
ಶರಲಿ ಬೈಲಿನ ಬಂಧಿ ಮಾಡುಲೆ
ಶುರುವು ಮಾಡಿದ ಮೂರೆ ವಾರಲಿ
ವರುಷದಾರ೦ಭ ಮೊದಲವಿಲು ಬಡಿಸಿದ ಶೇಭಾವ |
ಬರಲಿ ನಿತ್ಯವು ಹಲವು ಕವನಾ
ತರಲಿ ರಸಿಕರ ಮನಕೆ ಹರುಷವ
ವರುಷದಾರ೦ಭ ದಿನ ವಿಷುವಿನ ಶುಭದ ಹಾರೈಕೆಗೋ ||
ಭಳಿರೆ,ಪ್ರಯೋಗ ಸರೀ ಆಯಿದು.
ಯಬಾ..
ಭಾರ್ಈ ಲಾಯಕಾಯಿದು.
ಚೊಕ್ಕ ಆತು ಭೀಮನ ಬೆಂದಿ!
ಒಂದು ಬೇಳೆಚೆಕ್ಕೆ ಬೆಂದಿ, ಇನ್ನೊಂದು ಅವಿಲು.
ಲಾಯಿಕ ಆಯಿದು
ಶರ ಕುಸುಮ ಭೋಗಗಳ ಬಾಗವ
ಕೊರದು ಸೇರುಸಿ ಮಾಡಿದವಿಲಿನ
ಪರದೆಯೊಳ ಕಂಡೊಗ್ಗರಣೆ ಹಾಕಿತ್ತು ಭಾಮಿನಿಯು|
ತಿರುಗಿಸಿ ತೊಳಸಿ ಸೌಟು ಹಾಕಿಸ-
ವಿರುಚಿ ನೋಡಿ ವಿಸಂಧಿ ದೋಷವು
ಸರಿಯ ಪರವಾಗಿಲ್ಲೆ ಹೇಳುತಲೊಪ್ಪ ಕೊಟ್ಟತ್ತು||
‘ಸೌ’ ಗುರು ಹೇಳಿ ಲೆಕ್ಕ ಹಾಕಿದ್ದೆ… ಸರಿಯ?
ಸೌ,ಸೈ,ಸಂ,ಸಃ – ಎಲ್ಲವನ್ನೂ ಗುರು ಹೇಳಿ ಲೆಕ್ಕ ಹಾಕುದು.
ನಿಂಗಳ ಭಾಮಿನಿ ಲಾಯಿಕಿದ್ದು.
ಧನ್ಯವಾದ ಮಾವ…
ಪಷ್ಟ್ಕಾಸು ಅವಿಲು. ಒಳ್ಳೆ ‘ರುಚಿ’ಕಟ್ಟಾಯಿದು
ಕೊರದು ಬೇಯಿಸಲುದೆಯೆಡಿಯದ್ದ ತೊಂಡೆ ಹಣ್ಣು ಲಾಯಕ ಇದ್ದು.