Oppanna.com

ಅಬ್ಬಿ ಗೀತೆ – ಶರಲ್ಲಿ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   11/10/2012    5 ಒಪ್ಪಂಗೊ

ಹಳೆಮನೆ ಅಣ್ಣ ತೆಗದ ಅಬ್ಬಿ ಪಟಕ್ಕೆ ಅಂದು ವಿಷು ವಿಶೇಷ ಸ್ಪರ್ಧ ಸಮಯಲ್ಲಿ ಆನು ಬರದ್ದದು..

ಚಿತ್ರ(ಕ್ಕೆ) ಗೀತೆ

ಬೇರಿನ ಜೆಡೆಯೋ
ನಾರಿನ ಹಿಡಿಯೋ
ನೀರಿದು ಹರಿವದು ಬರಿ ಹೊಳೆಯೋ
ಸಾರಡಿ ತೋಡಿನ
ದಾರಿಯ ಕರೆಯೋ
ಹಾರೀ ಬೀಳುವ ಜಲನಿಧಿಯೋ

ಲಾಗವ ಹೊಡವದು
ಬೇಗೆಗೆ ಪುಳ್ಳರು
ಕಾಗೆಗೊ ಮೀವಾರೀತಿಲಿಯೋ
ಸಾಗುವ ನೀರಿನ
ಬಾಗುವ ಜಾಗೆಲಿ
ತಾಗುವ ಕಲ್ಲಿನ ಹೊಡಿಯೆಡೆಲೇ

ಮೇಗಿನ ನೀರಿದು

ಹಳೆಮನೆ ಅಣ್ಣಂಗೆ ಕಂಡ ಅಬ್ಬಿ…

ಬೇಗನೆ ಬೀಳುಗು
ಬಾಗಿದ ಪುಳ್ಳಿಯ ನೆತ್ತಿಲಿಯೂ
ಬೇಗಿನ ಹುಗ್ಗುಸಿ
ಬೀಗುವವಾಜೆನ
ಹಾಂಗೇ ಬಿಸಿಲು ತಣಿವವರೆಗೂ

ಕಾರಿಲಿ ಹೊರಟವು
ನೀರಿಲಿ ಹಾರುದು
ತೋರುವ ಚೆಂದದ ಚಿತ್ರ ಪಟ
ಬೇರೆಯ ದಾರಿಲಿ
ಹಾರುವ ನೀರಿನ
ಕೇರಿಲಿ ಚೆಂದಕೆ ಸೆರೆ ಹಿಡುದಾ

~*~

ಚೆಂದದ ಪಟಕ್ಕೆ ಹಳೆಮನೆ ಅಣ್ಣಂಗೆ ಅಭಿನಂದನೆಗೋ
(ಕೇರಿಲಿ – ಹೇಳಿರೆ ಜಾಗೃತೆಲಿ ಹೇಳುವ ಅರ್ಥ (care) )

5 thoughts on “ಅಬ್ಬಿ ಗೀತೆ – ಶರಲ್ಲಿ

  1. ಪದ್ಯ ಸೂಪರ್ ಆಯಿದು. ಪುಳ್ಳಿ ಬೈಲಿಂಗೆ ಅಪರೂಪ ಆಯಿದಾನೆ. ಪದ್ಯ ಓದಿ ಅಪ್ಪಗ ರಾಜಕುಮಾರನ ಪದ್ಯ ನೆಂಪಾವ್ತು ನಿಜ. ಅಂಬಗ ಜೇನಿನ ಹೊಳೆಯೋ ಹಾಡುದೆ ಶರ ಷಟ್ಪದಿಲಿ ಇದ್ದೊ ?

  2. ಪುಳ್ಳಿಯ ಪದ್ಯ ಒಳ್ಳೆದಿದ್ದು

  3. ಇದರ ಓದುವಾಗ ಹಳೆ ಸಿನೆಮ ಪದ್ಯ ನೆಂಪಾವುತ್ತು – “ಜೇನಿನ ಮಳೆಯೋ, ಹಾಲಿನ ಹೊಳೆಯೋ, ಸುಧೆಯೋ ಕನ್ನಡ ಸವಿನುಡಿಯು”
    ಪದ್ಯ ಲಾಯಕ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×