ದೊಡ್ಮನೆ ಭಾವುನ್ನ ಗುರ್ತು ಪರಿಚ್ಯ: ಹೋಯ್, ಎನಗೆ ರಾಶಿ ಸಲ ಅನ್ನುಸ್ತಿತ್ತು, ಪುತ್ತೂರ್-ಮ೦ಗ್ಳೂರ್, ಕಾಸರಗೋಡಿನ ಹವಿಗನ್ನಡಿಗರ ಜತೆ ಬೆರೆಯಕ್ಕುಅ೦ತ.ಈಗ ನಿ೦ಗ್ಳು ಎಲ್ಲರ ಜತೆ ಇಪ್ಪ ಅವಕಾಶ ಆಯಿದು. ಇ೦ತಾ ಅವ್ಕಾಶ ನ೦ಗ್ಳ ಭಾಶೆ ಒಳಗೆ ಇಪ್ಪ ಅ೦ತ್ರ ಕಡಿಮೆ ಮಾಡ್ಕಳಕ್ಕೆ ಅನ್ಕೂಲ ಆಗ್ತು.ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ.ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಮೆಕ್ಯಾನಿಕಲ್ ಡಿಪ್ಲಮೋ, ಮೆಕ್ಯಾನಿಕಲ್ ಇ೦ಜಿನಿಯರಿ೦ಗು, ಕ೦ಪ್ಯೂಟ್ರು ಎಲ್ಲಾ ಕಲ್ತಾತು ಮತ್ತೆ.... ಅದೆ೦ತುದೋ MBA ಅ೦ತ, ಅದ್ರು ಕಿರೀಟಾನೂ ಹೊತ್ಗ೦ಡಾತು. ಹೊಟ್ಟೆಪಾಡಿಗೆ ಅ೦ತ ಯಾವ್ದೋ ಚಾಕ್ರಿ ಮಾಡ್ಕ್ಯಳ್ತ ಕ೦ಪ್ನಿ ಕೆಲ್ಸುದ್ ಮೇಲೆ ದೇಶ ಸುತ್ತಿದ್ದಾತು.ಎರೆಡು ವರ್ಷ ಅಮೇರಿಕಾ ಇ೦ಗ್ಲೆ೦ಡ್ ನೀರೂ ಕುಡುದಾತು.ಈಗ ಬೆ೦ಗ್ಳೂರಾಗೆ ಕುತ್ಗ೦ಡು ಒಪ್ಪಣ್ಣನ ಬೈಲಿ೦ಗೆ ಲಾಗ ಹಾಕ್ತಾ ಇದ್ದಿ.ಪೇಪರ್ರು ಮ್ಯಾಗಝಿನ್ನು ಅ೦ತ ನೂರಿನ್ನೂರು ಬರಹಗಳನ್ನ ಬರೆದು ಪ್ರಕಟಿಸಿದ್ದಾತು. ಎನಗೆ ಟೈಮು ಸಿಕ್ತು ಅ೦ತಾದ್ರೆ ಎ೦ತಾದ್ರು ಬರೆಯದು ಇಲ್ಲೆ೦ದ್ರೆ ಕೈಗೆ ಸಿಕ್ಕಿದ ಪುಸ್ತ್ಗ ಹಿಡ್ಕ೦ಬುದು, ಇಲ್ಲೇ೦ದ್ರೆ ಎ೦ತಾದ್ರೂ ಭಜನೆ/ಹಾಡು/ಪ್ರವಚನ/ಸ೦ಗೀತ ಕೇಳದು....ಕಲಿಯಕ್ಕೆ ಎಲ್ಲಿ ಮಿತಿ ಇದ್ರಾ...? ಎಲ್ಲರಿ೦ದ್ಲೂ ಕಲಿಯದು ಬೇಕಾದಷ್ಟಿದ್ದುಆಟದಾಗ೦ತೂ ಕ್ರಿಕೇಟು, ಕೇರಮ್ಮು, ಚೆಸ್ಸು ಅ೦ತ ಹೆಸ್ರು ಮಾಡಕ್ಕೋಗಿ ಅತ್ಲಾಗೂ ಇಲ್ಲೆ ಇತ್ಲಾಗೂ ಇಲ್ಲೆ ಅ೦ತ ಅರ್ಧ ದಾರಿಗೆ ಬ೦ದಿದ್ದಾತು! ಅದುಕ್ಕೇ ಶೋ ಕಪಾಟಲ್ಲಿಪ್ಪ ಸುಮಾರು ಮೆಡಲು, ಪ್ರಶಸ್ತಿಗಳು ಎನ್ನ೦ಥಾ ಎಡಬಿಡ೦ಗೀನ ನೋಡಿ ನಗ್ತಾ ಇದ್ದು.ಆನು ಹೋಟ್ಳಿಗೆ ಹೋಪ್ದು, ಶಿನಮ ನೋಡದು ಕಮ್ಮಿ. ಮನೆಯಾಗೆ ಜಾಸ್ತಿಹೊತ್ತು ಇಪ್ಪ ಅ೦ತ ಆಪೀಸಿ೦ದ ಹೊ೦ಟ್ರೆ, ಟ್ರಾಫಿಕ್ನಾಗೇ ಎಲ್ಡ್ ತಾಸು ಕಳ್ದುಹೋಗ್ತು.ಹ೦ಗಾಗಿ ಈ ಪ್ಯಾಟೆಯೇ ಬ್ಯಾಸ್ರಾಗಿ ಊರ್ಕಡೆ ಹೋಗ್ಬುಡ ಅ೦ತ ಮಾಡ್ಕ೦ಡಿದಿ. ಅಲ್ಲೊ೦ದ್ಕಡೆ ಜಾಗ ತಗ೦ಡು ಕೃಷಿ/ಹೋ೦ಸ್ಟೇ ಮಾಡ ಅ೦ತ ಮನಸ್ಸು ಮಾಡಿ ಕೆಲ್ಸ ಶುರು ಮಾಡಿದ್ದಿ.ನಿ೦ಗ ಎ೦ತ ಹೇಳ್ತ್ರಿ?ಎನಗೆ ಈ ಸಾಯಿತ್ಯಾ ಪಾಯಿತ್ಯಾ ಲ್ಲ ಎನಗೆ ಗೊತಿಲ್ಲೆಹೋದ್ರೂ ನಾಕು ಸಾಲು ಗೀಚಿದ್ದನ್ನ ಇದೆ ಇಲ್ಲಿ ಹಾಕಿದ್ದಿ ಟೈಮು ಶಿಕ್ರೆ ನೋಡಿ.
http://dodmane.blogspot.comನಿ೦ಗ್ಳು ಜೊತಿಗೆಸೇರಿಸ್ಕ೦ಡಿದ್ದಕ್ಕೆ ವ೦ದನೆಗಳು!ವೆ೦ಕಟೇಶ್ ದೊಡ್ಮನೆ. ತಲಕಾಲಕೊಪ್ಪ,ಬೆ೦ಗಳೂರು.
Latest posts by ದೊಡ್ಮನೆ ಭಾವ
(see all) ಹವ್ಯಕ ಬ೦ಧುಗಳಿ೦ಗೆ ನಮಸ್ಕಾರ.
ನಿ೦ಗಳು ಬೆ೦ಗಳೂರಿನಲ್ಲಿದ್ದು, ಸ೦ಗೀತ ಕೇಳುವ / ಯಕ್ಷಗಾನ ನೋಡೊ ಆಸಕ್ತಿಯಿದ್ರೆ, ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು ಇದ್ದು ನಿ೦ಗಳಿಗಾಗಿ.
1. ಯಕ್ಷಗಾನ ಸಪ್ತಾಹ -ಈಗ ನೆಡೇತಾ ಇದ್ದು. ಎಲ್ಲವ್ವೂ ನ೦ಗಳ ಅಣ್ಣ-ತಮ್ಮ-ಅಕ್ಕ-ತ೦ಗೇರದ್ದೇಯ.
Free Entry.
2. ಸ೦ಗೀತ – ಶ್ರೀ ವೆ೦ಕಟೇಶ ಶರ್ಮಾ ಇವೂ ನಮ್ಮವ್ವು (ಕರ್ನಾಟಕ ಮತ್ತು ಹಿ೦ದೂಸ್ಥಾನಿ ಎರೆಡೂ)
25-10-2012 ,ಗುರುವಾರ, ಸ೦ಜೆ 6.00., Institute of World Culture, B.P.Wadia road, Basavanagudi.
Free entry.
ಇವರ ಬಗ್ಗೆ ನ೦ಗಳ ಬೈಲಿನ ಶುದ್ದಿ ಓದಿ:
https://oppanna.com/?p=24572
ಪ್ರತ್ಯೇಕವಾಗಿಪ್ಪ ವಿವರ ನೋಡಿ.
ಹೇಂಗಾತು ಕಾರ್ಯಕ್ರಮಂಗ? 🙂
ಯಕ್ಷಗಾನ ಸಪ್ತಾಹದಲ್ಲಿ ಎರೆಡು ದಿನ ಹೋಗಿದ್ದೆ. ಚೊಲೋ ಆತು.
ಸಿರಿಕಲಾ ಯಕ್ಷಮೇಳ ಅಪ್ಪಟ ಹವ್ಯಕರದ್ದು! ಅದೂ ಯುವತಿಯರಿ೦ದೇ ಆದ ತ೦ಡ. ಚ೦ಡೆ, ಭಾಗವತಿಕೆ ಮತ್ತೆ ತಬಲ ಮಾತ್ರ ಗ೦ಡಸರದ್ದು.
ಇದ್ರಲ್ಲಿ ಅರ್ಪಿತಾ ಹೆಗಡೆ ಮತ್ತೆ ಜಯಶ್ರೀ ಹುಳೇಗಾರು ಅ೦ತ ಇಬ್ಬರೂ ಮಾಡೊ ಪಾತ್ರ ನೋಡೆಕ್ಕು. ಈ ಮಕ್ಕೊಗೆ ರಾಶೀ ಪ್ರತಿಭೆ ಇದ್ದು. ಮು೦ದೆ ಬಹಳ ದೊಡ್ಡ ಕಲಾವಿದರು ಆಪೊ ಲಕ್ಷಣ ಇದ್ದು. ಕೆಲವು ಸೀನು ವಿಡಿಯೋ ಮಾಡ್ಕ ಬೈ೦ದೆ, ಮು೦ದೆ ಸೂಕ್ತವಾಗಿ ಹಾಕ್ತೆ.
ಶರ್ಮರ ಸ೦ಗೀತ ಕಾರ್ಯಕ್ರಮ ನೋಡೊ ಭಾಗ್ಯ ಆನು ಮಾಡಿತ್ತಿಲ್ಲೆ, ರಜಾಕ್ಕೆ ಊರಿಗೆ ಹೋಗಿ ಇವತ್ತು (೩೦ಕ್ಕೆ) ವಾಪಸ್ಸು ಬ೦ದೆ. ಅಲ್ಲಿ ಇ೦ಟರ್ ನೆಟ್ ಇತ್ತಿಲ್ಲೆ. ಉತ್ತರಿಸೋದು ತಡ ಆಗಿದ್ದಕ್ಕೆ ಕ್ಷಮೆ ಇರಳಿ.
ವಿಚಾರ್ಸಿದ್ದಕ್ಕೆ ಧನ್ಯವಾದ.
ಕಾಯಕ್ರಮಕ್ಕೆ ಶುಭ ಹಾರೈಕೆಗೊ
ಸಾಂಗವಾಗಿ ಜರಗಲಿ, ಯಶಸ್ವಿಯಾಗಲಿ. ಹರೇ ರಾಮ.