Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಪತ್ರೊಡೆ ಖಾರ ಒಗ್ಗರಣೆ
ಬೇಕಪ್ಪ ಸಾಮಾನುಗೊ:
- 3 ಸುರುಳಿ ಪತ್ರೊಡೆ ಅಥವಾ 2 ಪತ್ರೊಡೆ
- 1/2 ಕಪ್(ಕುಡ್ತೆ) ಕಾಯಿ ತುರಿ
- 2 ಸಾಧಾರಣ ಗಾತ್ರದ ನೀರುಳ್ಳಿ
- ಚಿಟಿಕೆ ಉಪ್ಪು
- 5-6 ಬೇನ್ಸೊಪ್ಪು
- 2 ಚಮ್ಚೆ ಕಡ್ಲೆ ಬೇಳೆ
- 1 ಚಮ್ಚೆ ಉದ್ದಿನ ಬೇಳೆ
- 1/2 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- 3-4 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ/ಕೊರದು ಮಡುಗಿ.
ನೀರುಳ್ಳಿಯ ತೆಳ್ಳಂಗೆ ಉದ್ದ ಉದ್ದಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಡುಗಿ.
ಬಾಣಲೆಲಿ ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಮೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಬೇನ್ಸೊಪ್ಪು, ನೀರುಳ್ಳಿ, ಉಪ್ಪು ಹಾಕಿ ಹದ/ಸಣ್ಣ ಕಿಚ್ಚಿಲ್ಲಿ ನೀರುಳ್ಳಿ ಬೇವನ್ನಾರ ಬಾಡ್ಸಿ. ಅದಕ್ಕೆ ಕೊರದ/ಹೊಡಿ ಮಾಡಿದ ಪತ್ರೊಡೆ, ಕಾಯಿ ತುರಿಯ ಹಾಕಿ ತೊಳಸಿ.
ಪತ್ರೊಡೆ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.