- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಸುರುಳಿ ಪತ್ರೊಡೆ
ಬೇಕಪ್ಪ ಸಾಮಾನುಗೊ:
- 1 ಕಪ್(ಕುಡ್ತೆ) ಕೊಯಿಶಕ್ಕಿ
- 1 ಕಪ್(ಕುಡ್ತೆ) ಬೆಣ್ತಕ್ಕಿ
- 1/2-3/4 ಕಪ್(ಕುಡ್ತೆ) ಕಾಯಿ ತುರಿ
- 2 ಚಮ್ಚೆ ಉದ್ದಿನ ಬೇಳೆ
- 1/2 ಚಮ್ಚೆ ಮೆಂತೆ
- 2 ಚಮ್ಚೆ ಕೊತ್ತಂಬರಿ
- 1/2 ಚಮ್ಚೆ ಜೀರಿಗೆ
- ಸಾಧಾರಣ ನಿಂಬೆ ಗಾತ್ರದ ಹುಳಿ
- ದೊಡ್ಡ ನಿಂಬೆ ಗಾತ್ರದ ಬೆಲ್ಲ
- 1/4 ಚಮ್ಚೆ ಅರುಶಿನ ಹೊಡಿ
- 1/4 ಚಮ್ಚೆ ಇಂಗು
- 12-15 ಒಣಕ್ಕು ಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 20-25 ಸಾಧಾರಣ ಗಾತ್ರದ ಕೆಸವಿನ ಎಲೆ
- 4-5 ಬಾಳೆ ಎಲೆ
ಮಾಡುವ ಕ್ರಮ:
ಅಕ್ಕಿಯ 6-7 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಇನ್ನೊಂದು ಪಾತ್ರ/ಗಿಣ್ಣಾಲಿಲ್ಲಿ ಉದ್ದಿನ ಬೇಳೆ, ಮೆಂತೆಯ 6-7 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ.
ಅಕ್ಕಿಯನ್ನೂ, ಬೊದುಳಿದ ಉದ್ದಿನ ಬೇಳೆ, ಮೆಂತೆಯನ್ನೂ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಗ್ರೈಂಡರ್/ಮಿಕ್ಸಿಗೆ ಬೊದುಳಿದ ಉದ್ದಿನ ಬೇಳೆ, ಮೆಂತೆ, ಒಣಕ್ಕುಮೆಣಸು, ಕೊತ್ತಂಬರಿ, ಜೀರಿಗೆ, ಕಾಯಿ, ಹುಳಿ, ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ.
ಅದಕ್ಕೆ ಬೊದುಳಿದ ಅಕ್ಕಿ, ಬೆಲ್ಲ, ಉಪ್ಪು, ಅರುಶಿನ, ಇಂಗು ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ ನೊಂಪಿಂಗೆ ಗಟ್ಟಿಗೆ ಕಡೆರಿ.
ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಕೆಸವಿನ ಎಲೆಯ ಲಾಯಿಕಲಿ ತೊಳದು, ಹಿಂದಾಣ ದಪ್ಪ ದಂಟಿನ ಕೆತ್ತಿ ಮಡುಗಿ.
ದೊಡ್ಡ ಎಲೆಯ ತೆಕ್ಕೊಂಡು, ಅದರ ಬಾಳೆ ಎಲೆಲಿ ಕವುಂಚಿ ಮಡುಗಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಿಟ್ಟಿನ ಉದ್ದಿ.
ಇನ್ನು ರೆಜ್ಜ ಸಣ್ಣ ಎಲೆಯ ತೆಕ್ಕೊಂಡು ಅದರ ಮೇಲೆ ಕವುಂಚಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ. ಅದಕ್ಕೆ ಪುನಃ ಹಿಟ್ಟಿನ ಉದ್ದಿ.
ಹೀಂಗೆ ಒಟ್ಟು 4-5 ಎಲೆ ಮಡುಗಿ ಹಿಟ್ಟಿನ ಉದ್ದಿ.
ಎಲೆಯ ಕಡೇಯಾಣ ಹೊಡೇಂದ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡ್ಸಿಗೊಂಡು ಬನ್ನಿ. ಎಲೆ ದೊಡ್ಡ ದಿದ್ದರೆ ಅದರ ಕರೆಯ ಸುರುವಿಂಗೆ ಮಡ್ಸಿಕ್ಕಿ ಮತ್ತೆ ಸುರುಳಿ ಸುತ್ತೆಕ್ಕು. ಮಡ್ಸಿದ ಹಾಂಗೆ ರೆಜ್ಜ ರೆಜ್ಜ ಹಿಟ್ಟನ್ನೂ ಹಿಂದಾಣ ಹೊಡೇಂಗೆ ಮೆತ್ತಿಗೊಂಡು ಬನ್ನಿ.
ಬಾಳೆ ಎಲೆಲಿ ಸುರುಳಿ ಸುತ್ತಿದ ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ, ಬಾಳೆ ಎಲೆಯ ಮಡ್ಸಿ.
ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 30-40 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)
ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಕೊರದು, ಬೆಶಿ ಬೆಶಿ ತುಪ್ಪ/ತೆಂಗಿನ ಎಣ್ಣೆ ಹಾಕಿ ಚಟ್ನಿ ಅಥವಾ ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ಪತ್ರೊಡೆ ಆವುತ್ತು. ಇದರ ಖಾರ ಒಗ್ಗರಣೆ, ಪತ್ರೊಡೆ ರೋಸ್ಟ್ ಮಾಡ್ಲೆ ಉಪಯೋಗ್ಸುಲೆ ಅಕ್ಕು.
ಇದರ ಉರುಟಿಂಗೆ ಕೊರದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ರೆಜ್ಜ ತುಪ್ಪ ಹಾಕಿ ಆರ್ಸಿ(ರೋಸ್ಟ್ ಮಾಡಿ) ತಿಂಬಲುದೆ ರುಚಿ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಆಹಾ… ಇದು ತಿಂಬಲೆ ಭಾರೀ ಲಾಯಿಕಾವ್ಥು … ಕಾವಲಿಗೆಲಿ ಬಾಡ್ಸಿ ( ರೋಸ್ಟು ಮಾಡಿ) ತಿಂದರೆ ಹೆಚ್ಹು ರುಚಿ… ಅಕ್ಕಿಯೊಟ್ಟಿಂಗೆ ಹೆಸರು ಬೇಳೆ ಹಾಕಿದೇ ಮಾಡ್ಲಾವ್ಥು..