Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಶೇಂಗ ಪುಡಿ ಚಟ್ನಿ
ಬೇಕಪ್ಪ ಸಾಮಾನುಗೊ:
- 4-5 ಚಮ್ಚೆ ಶೇಂಗ ಪುಡಿ
- 2 ಚಮ್ಚೆ ಕಾಯಿ ತುರಿ
- 1-2 ಎಳೆ ಕೊತ್ತಂಬರಿ ಸೊಪ್ಪು
- 1 ಹಸಿಮೆಣಸು
- 1/2 ಕುಡ್ತೆ(ಕಪ್) ಚಪ್ಪೆ ಮೊಸರು
- ರುಚಿಗೆ ತಕ್ಕಸ್ಟು ಉಪ್ಪು
- 1/4 ಚಮ್ಚೆ ಜೀರಿಗೆ
- 1/2 ಚಮ್ಚೆ ಸಾಸಮೆ
- 1-2 ಮುರುದ ಒಣಕ್ಕು ಮೆಣಸು
- ಚಿಟಿಕೆ ಇಂಗು
- 4-5 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಒಂದು ಪಾತ್ರಲ್ಲಿ ಕಾಯಿ ತುರಿ, ಸಣ್ಣಕೆ ಕೊಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪಿನ ಹಾಕಿ.
ಇದಕ್ಕೆ ಮೊಸರು, ಉಪ್ಪು, ಶೇಂಗ ಪುಡಿ ಹಾಕಿ ಲಾಯಿಕಲಿ ತೊಳಸಿ.(ಬೇಕಾದರೆ ರೆಜ್ಜ ನೀರು ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು, ಬೇನ್ಸೊಪ್ಪು ಹಾಕಿ ಒಗ್ಗರಣೆಯ ಚಟ್ನಿಗೆ ಹಾಕಿ ತೊಳಸಿ.
ಇದು ದೋಸೆ, ಇಡ್ಲಿ, ರೊಟ್ಟಿ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಓ,ಇದು ಹೊಸ ಬಗೆ.ಪ್ರಯೋಗ ಬೇಗನೇ ಆಯೆಕ್ಕು.