Oppanna.com

ಜೋಗುಳ ಹಾಡು – ಕೂಗೆಡ ಮಗಳೂ ಒರಗೀಗ ಸುಖಲ್ಲೀ

ಬರದೋರು :   ಅರ್ತಿಕಜೆ ಮಾವ°    on   19/06/2014    9 ಒಪ್ಪಂಗೊ

 
ಕೂಗೆಡ ಮಗಳೂ ಒರಗೀಗ ಸುಖಲ್ಲೀ |
ತೂಗುವೆ ಜೋಗುಳ ಪದಂಗಳ ಹೇಳೀ ||
ಜೋಜೋ ಜೋಜೋ ಜೋಜೋ ||೧||
 
ಎದ್ದಿಕ್ಕಿ ಬಪ್ಪಾಗ ಆಡುಲೆ ಕೊಡುವೇ
ಮುದ್ದೀನ ಕೊಟ್ಟಾನು ಎತ್ತುತ್ತ ನಡವೇ
ಇದ್ದಷ್ಟು ಹಾಲಿನ ನಿನಗಾನು ಕೊಡುವೇ
ಮದ್ದಿನ ಕುಡುಸಲೆ ಬೇಜಾರ ಪಡುವೇ
ಜೋಜೋ ಜೋಜೋ ಜೋಜೋ ||೨||
 
ಅಕ್ಕಂದ್ರು ಅಣ್ಣಂದ್ರು ಎಲ್ಲೋರೂ ಬಂದೂ
ಸಿಕ್ಕಿದ ಹಾಂಗೆಲ್ಲ ಎತ್ತುಗು ನಿಂದೂ
ಶಕ್ಕರೆ ಹಣ್ಣಿನ ಬಾಯಿಗೆ ತಂದೂ
ತೆಕ್ಕೊಬ್ಬೊ ತಿನ್ನಬ್ಬೊ ಹೇಳುಗು ಇಂದೂ
ಜೋಜೋ ಜೋಜೋ ಜೋಜೋ ||೩||
 
ರಂಗೀನ ತರತರ ಅಂಗೀಯ ಹೊದ್ದು
ನಿನಗಾನು ತೊಡುಸುವೆ ಮಂಗಳೆ ಮುದ್ದು
ಬಂಗಾರ ಬಳೆಕುಟುಕಿ ಹಾಕುಲೆ ಇದ್ದು
ಸಿಂಗಾರ ಮಲ್ಲಿಗೆ ಸೂಡುಸುವೆ ಎದ್ದು
ಜೋಜೋ ಜೋಜೋ ಜೋಜೋ ||೪||
 
ಕೂಸು ಕೂಸೇಳಿ ಸಸಾರವು ಜನಕೆ
ಕೂಸೇ ಅಲ್ಲದೋ ಅಬ್ಬೆಯು ನಿಜಕೆ
ಕೂಸೇ ಆಗಿರೆಕ್ಕು ಹೆಂಡತ್ತಿ ಜೋಕೆ
ಕೂಸಾದರೆಂತಾತು ಬುದ್ದಿ ಒಳ್ಳೆದಿರೆಕ್ಕು
ಜೋಜೋ ಜೋಜೋ ಜೋಜೋ ||೫||
 
 
 

ಅಯ್ಯೋ ಬಾರನ್ನೆ ಪದ ಎನಗೊಂದುದೆ
ಸ್ವರಾ ಬಪ್ಪಾದು ಹೇಂಗದು ಪದವ ಹೇಳದ್ದೆ
ಶುರುಮಾಡುತ್ತೆ ಆನು ಪದ ಒಂದು ಹೇಳುಲೆ
ನಿಂಗೊ ಮಾಡೆಡಿ ಬೇಜಾರ ಪದವ ಕೇಳುಲೆ
ನಾಚಿಕೆ ಎಂತ ಹೇಳುಲೆ ಸ್ವಂತ
ಮಾಡುಲೆ ಆಗ ಈಗ ಕೋಲಂಗಳ
ಇಪ್ಪ ತಪ್ಪೀನ ಕ್ಷಮಿಸೆಕ್ಕು ನಿಂಗಳೆ
ಬಪ್ಪ ಕಷ್ಟಾವ ಬಿಡುಸೆಕ್ಕು ದೇವರೆ ||ಅಯ್ಯೋ||
 
ಇಪ್ಪಾದು ನಾವು ಸುಮ್ಮನೆ ಭೂಮಿಲಿ
ಬಪ್ಪ ಕಷ್ಟವ ಬಿಡಿಸಿ ಎನ್ನ ಕಾಯಿರಿ
ದೇವರ ದಯವೇ ಜ್ಞಾನದ ಮೂಲ
ಆಯ ಇಲ್ಲದ ಮನೆ ನಿರ್ಮೂಲ ||ಅಯ್ಯೋ||
~~~
 
[ಜೋಗುಳ ಹಾಡು
ಸಂಗ್ರಹ : ಅರ್ತಿಕಜೆ ಮಾವ]
 
 
 
 

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

9 thoughts on “ಜೋಗುಳ ಹಾಡು – ಕೂಗೆಡ ಮಗಳೂ ಒರಗೀಗ ಸುಖಲ್ಲೀ

  1. ಓಹ್ ! ಅಕ್ಕಾ ,ನಿಂಗೊ ಇದರ ಸಂದರ್ಭ ಸಹಿತ ವಿವರಣೆ ಕೊಟ್ಟಪ್ಪಗ ಪದ್ಯದ ತೂಕ ಮತ್ತಷ್ಟು ಹೆಚ್ಚಾತು! ಅದರ ಹಿಂದೆ ಇತ್ತ ಕಷ್ಟ ಕಳದು ಹೋದಿಕ್ಕು ಹೇಳಿ ಗ್ರೇಶುತ್ತೆ .

  2. ಈ ಕವನದ ಹಿನ್ನೆಲೆ ತಿಳಿಸಿದ್ದಕ್ಕೆ ಧನ್ಯವಾದ.ಬರೆದವರ ಅಭಿನಂದಿಸುತ್ತೆ .

  3. ಕೂಗಾಡ ಮಗಳೆ ಹಾಡು ನೋಡಿ ತುಂಬ ಖುಷಿ ಆತು. ಎಂತ ಹೇಳಿರೆ ಅದು ೫೦ ವರ್ಷಕ್ಕೆ ಹಿಂದೆ ಎಂಗಳ ಅಪ್ಪ ಪಳ್ಳದಕೋಡಿ ಸೀತಾರಾಮ ಭಟ್ರು ಕಟ್ಟಿದ ಹಾಡು. ಅವು ತಾಳಮದ್ದಳಗೆ ಅರ್ಥ ಹೇಳುಗು. ಯಕ್ಷಗಾನಲ್ಲಿ ವೇಷ, ಭಾಗವತಿಗೆ, ಚೆಂಡೆಮದ್ದಳೆ ಎಲ್ಲ ಮಾಡಿಗೊಂಡಿತ್ತಿದ್ದವು. ಕಾಂಚನ ಮೇಳಲ್ಲಿ ಕೆಲವು ಸಮಯ ಹೋಗಿಗೊಂಡು ಇತ್ತಿದ್ದವು. ತೀರಿಹೊಗಿ ೨೦ ವರ್ಷಕ್ಕೆ ಹತ್ತರೆ ಆತು. ಒಂದು ಅಕ್ಕ ಆದಮೇಲೆ ಅಣ್ಣಂದ್ರು ಮೂರು ಜನ ಆಗಿ ಎಂಗೊ ಪುನ ನಾಲ್ಕು ಜನ ಕೂಸುಗೊ. ಮತ್ತೆ ತಮ್ಮನು ಇದ್ದ. ಅಕೆರ್ಯಣ ಎನ್ನ ತಂಗೆ ಹುಟ್ಟಿಪ್ಪಗ ಬಡತನದ ಒಟ್ಟಿಂಗೆ ಈ ಕೂಸುಗೊಕ್ಕೆ ಎಷ್ಟು ಕಷ್ಟ ಹೇಳಿ ಅಬ್ಬೆ ಬೇಜಾರ ಮಾಡಿಯಪ್ಪಗ ಅಪ್ಪ ಬರದ ಹಾಡಿದು. ಧನ್ಯವಾದಂಗೊ ಅರ್ತಿಕಜೆ ಅಣ್ಣಂಗೂ ವೆಬ್ಸೈಟ್ ನಡೆಶುವೊರಿಂಗೂ

    1. ಈ ಹಾಡಿನ ಮೂಲ ಮತ್ತೆ ಹಾಡು ಹುಟ್ಟಿದ ಸಂದರ್ಭ ಸನ್ನಿವೇಶ ತಿಳುದಪ್ಪಗ ಹಾಡಿನ ನಿಜವಾದ ಅರ್ಥ ಗ್ರಹಿಕೆ ಸಾಧ್ಯ ಅಪ್ಪದು ಅಕ್ಕಂದ್ರು ಅಣ್ಣಂದ್ರು ಎಲ್ಲೋರೂ ಬಂದೂ
      ಸಿಕ್ಕಿದ ಹಾಂಗೆಲ್ಲ ಎತ್ತುಗು ನಿಂದೂ
      ಶಕ್ಕರೆ ಹಣ್ಣಿನ ಬಾಯಿಗೆ ತಂದೂ
      ತೆಕ್ಕೊಬ್ಬೊ ತಿನ್ನಬ್ಬೊ ಹೇಳುಗು ಇಂದೂ
      ಜೋಜೋ ಜೋಜೋ ಜೋಜೋ ||೩||ನಿಂಗ ತಿಳಿಸಿದ ಮೇಲೆ ಈ ಸಾಲುಗ ಮನಸ್ಸಿಂಗೆ ಬಂತು ,ತಿಳಿಸಿದ್ದಕ್ಕೆ ಧನ್ಯವಾದಂಗ

  4. ತುಂಬಾ ಮರ್ಮಿಕವಗಿದ್ದು ಮಾವ . ಅಮ್ಮನ ಆತ್ಮವೇ ಆಗಿ ಬರದ ಹಾಂಗಿದ್ದು !
    ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .
    ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಗೆರೆ ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .

  5. ತುಂಬಾ ಮರ್ಮಿಕವಗಿದ್ದು ಮಾವ . ಅಮ್ಮನ ಆತ್ಮವೇ ಆಗಿ ಬರದ ಹಾಂಗಿದ್ದು !
    ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .

  6. ಅರ್ಥ , ಭಾವ ತುಂಬಿದ ಜೋಗುಳ ಪದ . ಧನ್ಯವಾದ ಮಾವ .

  7. ಕೂಸು ಕೋಸೇಳಿ …
    ಸಾಲುಗೊ ತುಂಬ ಲಾಯಿಕಿದ್ದು. ಲಾಯ್ಕದ ಪದ್ಯಂಗೊ.

  8. ಅರ್ತಿಕಜೆ ಮಾವಾ,
    ಪದ್ಯ ಲಾಯ್ಕಾಯಿದು.
    [ಕೂಸು ಕೂಸೇಳಿ ಸಸಾರವು ಜನಕೆ
    ಕೂಸೇ ಅಲ್ಲದೋ ಅಬ್ಬೆಯು ನಿಜಕೆ
    ಕೂಸೇ ಆಗಿರೆಕ್ಕು ಹೆಂಡತ್ತಿ ಜೋಕೆ
    ಕೂಸಾದರೆಂತಾತು ಬುದ್ದಿ ಒಳ್ಳೆದಿರೆಕ್ಕು
    ಜೋಜೋ ಜೋಜೋ ಜೋಜೋ ||೫||]
    ಈ ಸಾಲುಗ ತುಂಬಾ ಲಾಯ್ಕಿದ್ದು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×