ಅಕ್ಷಯ ಎಸ್.ರಾವ್
N.I.T.K ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಈ ವರ್ಷದ ಹತ್ತನೇ ತರಗತಿ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ ಅತ್ಯುತ್ತಮ ಶ್ರೇಣಿಯ CGPA : 10 ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ ಪ್ರತಿಭಾವಂತನೇ ಅಕ್ಷಯ ಎಸ್.ರಾವ್. NITK ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ಲಿಲ್ಲಿ ಇಪ್ಪ ಶ್ರೀ ಸುಬ್ಬಾ ರಾವ್ ಮತ್ತೆ ಶ್ರೀಮತಿ ಮಂಜುಳಾ ದಂಪತಿಯ ಹೆಮ್ಮೆಯ ಸುಪುತ್ರ ಅಕ್ಷಯ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.
ಇವನ ಇತರ ಸಾಧನೆಗೊ:-
- ೨೦೧೩-೧೪ ನೇ ಸಾಲಿಲ್ಲಿ ಶಾಲೆಯ ವಿದ್ಯಾರ್ಥಿ ಸಂಘದ ನಾಯಕನಾಗಿ ಮುಂದಾಳತ್ವ
- ಜಿಲ್ಲಾ ಮಟ್ಟದ ಸ್ಪರ್ಧೆಗಳಾದ ಚೆಸ್ , ಟೇಬಲ್ ಟೆನ್ನಿಸ್, ಕ್ರಿಕೆಟ್ ಮತ್ತೆ ಶಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸುವಿಕೆ
- ಸಂಸ್ಕೃತ ಶ್ಲೋಕ ಮತ್ತೆ ಭಗವದ್ಗೀತಾ ಕಂಠಸ್ಥ ಹೇಳುವದರಲ್ಲಿ ಬಹುಮಾನ
- ಅಂತರ್ ಶಾಲಾ ವಿಜ್ಞಾನ ಪ್ರತಿಭೆ ಸ್ಪರ್ಧೆಲಿ ಬಹುಮಾನ
- ಸತರ ಮೂರು ವರ್ಷ (೮ನೇ ತರಗತಿಂದ ೧೦ ನೇ ತರಗತಿ ವರೆಗೆ) Best Academic award
- ಅಂತರ್ ಶಾಲಾ ರಸ ಪ್ರಶ್ನೆ ಕಾರ್ಯಕ್ರಮಂಗಳಲ್ಲಿ ಬಹುಮಾನ
- Best Outgoing Student award- ೨೦೧೪ ನೇ ಸಾಲಿನ ವಿದ್ಯಾರ್ಥಿಗೊಕ್ಕೆ ಕೊಡುವ ಬಹುಮಾನ.
ಹವ್ಯಾಸಂಗೊ:-
- ವೇದ ಮಂತ್ರಾಭ್ಯಾಸಂಗೊ- ರುದ್ರ, ಚಮಕ, ಇನ್ನಿತರ ಸೂಕ್ತಂಗೊ
- ಪುಸ್ತಕ ಓದುವದು
- ಈಜುವದು
- ಕ್ರಿಕೆಟ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟ ಆಡುವದು.
ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ಮುಂದುವರುದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ, ಹೆತ್ತವರಿಂಗೆ ಕೀರ್ತಿ ತಂದು ಕೊಡಲಿ ಹೇಳಿ ಹರಸಿ ಶುಭ ಹಾರೈಸುವೊ°
~~~****~~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಅಕ್ಷಯಂಗೆ ಶುಭವಾಗಲಿ 🙂
ಅಕ್ಷಯ ,ಶುಭವಾಗಲಿ .
ಅಕ್ಷಯಂಗೆ ಶುಭ ಹಾರೈಕೆಗೊ.