Oppanna.com

ಮಾಂಬಳ ಗೊಜ್ಜಿ

ಬರದೋರು :   ವೇಣಿಯಕ್ಕ°    on   24/06/2014    0 ಒಪ್ಪಂಗೊ

ವೇಣಿಯಕ್ಕ°

ಮಾಂಬಳ ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 2-3 ಇಂಚು ಉದ್ದದ ಮಾಂಬಳ
  • 3-4 ಹಸಿಮೆಣಸು
  • 1-2 ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 4-5 ಬೇನ್ಸೊಪ್ಪು
  • 3-4 ಬೆಳ್ಳುಳ್ಳಿ ಎಸಳು (ಬೇಕಾದರೆ ಮಾತ್ರ)
  • ಚಿಟಿಕೆ ಇಂಗು
  • 1-2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಮಾಂಬಳವ ತುಂಡು ಮಾಡಿ, 2-3 ಕುಡ್ತೆ ಬೆಶಿ ನೀರಿಲ್ಲಿ ಒಂದು 30 ನಿಮಿಷ ಬೊದುಳುಲೆ ಹಾಕಿ.

ಇದರ ಮಿಕ್ಸಿಗೆ ಹಾಕಿ ಒಂದರಿ ತಿರುಗ್ಸಿ ಅಥವಾ ಕೈಲಿ ಲಾಯಿಕಲಿ ಪುರುಂಚಿ. ಇದಕ್ಕೆ ಸೀವಿಂಗೆ ಬೇಕಪ್ಪಸ್ಟು ಬೆಲ್ಲವ ಕೆರಸಿ ಹಾಕಿ. ಹಸಿಮೆಣಸಿನ ಲಾಯಿಕಲಿ ನುರಿರಿ. ಉಪ್ಪು, ನೀರು ಬೇಕಪ್ಪಸ್ಟು ಹಾಕಿ ತೊಳಸಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಹಾಕಿ, ಎಣ್ಣೆದೆ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.
ಇದಕ್ಕೆ ಸಾಸಮೆ ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ, ಅದಕ್ಕೆ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×