- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮಾಂಬಳ
ಬೇಕಪ್ಪ ಸಾಮಾನುಗೊ:
- ಮಾವಿನಹಣ್ಣು (ಕಾಟು ಮಾವಿನ ಹಣ್ಣು ಒಳ್ಳೆದು)
- ರುಚಿಗೆ ತಕ್ಕಸ್ಟು ಉಪ್ಪು
ಮಾಡುವ ಕ್ರಮ:
ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ.
ಮಾವಿನ ಹಣ್ಣಿನ ಚೋಲಿಗೆ ರೆಜ್ಜ ನೀರು ಹಾಕಿ ಪುರುಂಚಿ, ಎಸರಿನ ಗೊರಟು ಇಪ್ಪ ಪಾತ್ರಕ್ಕೆ ಹಾಕಿ. ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ, ಉಪ್ಪು ಹಾಕಿ ತೊಳಸಿ.
ಮಾವಿನ ಹಣ್ಣಿನ ಗಟ್ಟಿ ಇದ್ದರೆ ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸುಲಕ್ಕು.
ಒಂದು ಕೆರುಶಿ/ಹಾಳೆಗೆ ಪ್ಲಾಸ್ಟೀಕು ಶೀಟು ಅಥವಾ ವಸ್ತ್ರದ ತುಂಡಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ.
ಮಾವಿನ ಹಣ್ಣಿನ ಎಸರಿನ ಪ್ಲಾಸ್ಟೀಕು ಶೀಟ್ ಅಥವಾ ವಸ್ತ್ರದ ಮೇಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹರಡುಸಿ, ಬೆಶಿಲಿಂಗೆ ಮಡುಗಿ. ಪುನಃ ಮರುದಿನವುದೇ(ಅಥವಾ ದಿನ ಬಿಟ್ಟು ದಿನ) ಹೀಂಗೆ ಮಾವಿನ ಹಣ್ಣಿನ ಎಸರು ಹಿಂಡಿ ಅದರ ಮೇಗಂದ ಎರದು ಬೆಶುಲಿಂಗೆ ಮಡುಗಿ. ಸಾಧಾರಣ 8-10 ಸರ್ತಿ ಮಾವಿನ ಹಣ್ಣಿನ ಎಸರು ಎರದಪ್ಪಗ ಮಾಂಬಳ ಸಾಧಾರಣ ದಪ್ಪ ಬತ್ತು.
ಮತ್ತೆ ಸರಿ ಒಣಗುವನ್ನಾರ(ಎಳಕ್ಕುಲೆ ಬಪ್ಪನ್ನಾರ) ಸಾಧಾರಣ 5-6 ದಿನ, ದಿನಾಗುಳುದೆ ಬೆಶಿಲಿಂಗೆ ಮಡುಗಿ.
ಇದರ ಪ್ಲಾಸ್ಟೀಕು ಶೀಟ್ ಅಥವಾ ವಸ್ತ್ರಂದ ಎಳಕ್ಕುಸಿ, ಕವುಂಚಿ ಮಡುಗಿ, ಪುನಃ ಇನ್ನೊಂದು ಎರಡು ದಿನ ಬೆಶಿಲಿಂಗೆ ಒಣಗುಸಿ.
ಇದರ ಉದ್ದಕೆ ಕೊರದು, ಮಡ್ಸಿ, ಕರಡಿಗೆಲಿ ಹಾಕಿ ತೆಗದು ಮಡುಗಿ. ಇದರ ಹಾಂಗೆ ಬೇಕಾದರು ತಿಂಬಲೆ ಆವುತ್ತು ಅಥವಾ ಗೊಜ್ಜಿ ಮಾಡಿಯುದೆ ತಿಂಬಲೆ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಎನಕೆ ಅತಿ ಪ್ರೀತಿಯ ಬಾಯ್ಬೇಡಿ ಇದು, ಊರಕಡೆ ಈಗೀಗ ಕಾಟುಹಣ್ಣು ಸಿಗ್ತೆ ಇಲ್ಲೆ, ಅಮ್ಮಂಗೂ ವಯಸ್ಸಾತು, ಮಹಿಳೋದಯದ ಐಟಂ ಭಾಳ ತುಟ್ಟಿ.