Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮಾವಿನ ಮೆಡಿ ತಂಬ್ಳಿ
ಬೇಕಪ್ಪ ಸಾಮಾನುಗೊ:
- 2-3 ಸಾಧಾರಣ ಗಾತ್ರದ ಮಾವಿನ ಮೆಡಿ(ಉಪ್ಪಿಲ್ಲಿ ಹಾಕಿದ್ದು ಅಥವಾ ಮೆಡಿ ಉಪ್ಪಿನಕಾಯಿದು)
- 3/4 ಕಪ್(ಕುಡ್ತೆ) ಕಾಯಿತುರಿ
- 1 ಹಸಿಮೆಣಸು
- ರುಚಿಗೆ ತಕ್ಕಸ್ಟು ಉಪ್ಪು
- 3/4-1 ಕಪ್(ಕುಡ್ತೆ) ಚಪ್ಪೆ ಮಜ್ಜಿಗೆ
- 1/2 ಚಮ್ಚೆ ಸಾಸಮೆ
- 4-5 ಬೇನ್ಸೊಪ್ಪು
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಮಾವಿನ ಮೆಡಿಯ ಉಪ್ಪು ನೀರಿಂದ/ಉಪ್ಪಿನಕಾಯಿಂದ ತೆಗದು ತೊಳದು, ಒಳಾಣ ಕೋಗಿಲೆ ತೆಗದು ಮಡುಗಿ.
ಮಿಕ್ಸಿ/ಗ್ರೈಂಡರಿಂಗೆ ಕಾಯಿ, ಮಾವಿನ ಮೆಡಿ, ಹಸಿಮೆಣಸನ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಇದಕ್ಕೆ ಮಜ್ಜಿಗೆ, ಉಪ್ಪು ಹಾಕಿ ತೊಳಸಿ.(ನೀರು ಬೇಕಾದರೆ ರೆಜ್ಜ ಹಾಕುಲಕ್ಕು)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಂಬ್ಳಿಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.