Oppanna.com

ಚೆಂದದ ಆಕಾಶ

ಬರದೋರು :   ಶರ್ಮಪ್ಪಚ್ಚಿ    on   28/05/2017    7 ಒಪ್ಪಂಗೊ

ಪ್ರಸನ್ನಾ ವಿ ಚೆಕ್ಕೆಮನೆ ಇವು ಕಳ್ಸಿದ ಒಂದು ಕವನ ಇಲ್ಲಿದ್ದು. ಇದರ ಓದಿ ನಿಂಗಳ ಅನಿಸಿಕೆಗಳ ತಿಳುಶಿ

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಚೆಂದದ ಆಕಾಶ

ಬೆಳಿ ಮುಗಿಲಿನ ಮುಟ್ಲೆ
ಆನು ಆಕಾಶಕ್ಕೆ ಹಾರೆಕೋ
ನೀಲಿ ರಂಗಿನನ್ನೂ ಒಂದರಿ
ಮೆಲ್ಲಂಗೆ ಮುಟ್ಟೇಕೋ

ಆಶೆಯೇಕೆ ಮನಸಿಲ್ಲಿ
ಕುಞ್ಞಿ ಮಕ್ಕಳ ಹಾಂಗೆ
ಸಣ್ಣ ಹಾತೆಯಾಗಿ ಆನು
ಮೇಲಂಗೋಪದು ಹೇಂಗೇ

ವಿಮಾನವ ನೋಡೆಕು
ಚಂದಮಾಮನತ್ರೆ ಕೂರೇಕು
ಕಣ್ಣು ಪಿಳಿ ಪಿಳಿ ಮಾಡಿ 
ಚೆಂದಕೆ ನೆಗೆ ಮಾಡುವ ಪುಟ್ಟು
ನಕ್ಷತ್ರವ ಮೆಲ್ಲಂಗೆ ಎಣ್ಸೆಕು

ಸೂರ್ಯಚಾಮಿ ಬಂದರೆ
ದೂರ ಹೋಗು ಹೇಳುವೆ
ನಿನ್ನ ಬೆಶಿಯ ತಡವಲೆಡಿಯ
ಹಾಂಗೆ ಹೇಳಿ ಹುಗ್ಗುವೆ

ಕರಿಮುಗಿಲಿನ ಒಟ್ಟು ಸೇರ್ಸಿ
ಗಾಳಿಯೊಟ್ಟಿಂಗೆ ಕಳ್ಸುವೆ
ಭೂಮಿಲಿ ಮಳೆಯಾಗಿ 
ಸೊರ್ಗು ಬೇಗ ಹೇಳುವೆ

ಆಕಾಶಕ್ಕೆ ಹಾರ್ಲೆಡಿಗೋ
ಚುಕ್ಕಿಗಳ ಎಣ್ಸಲೆಡಿಗೋ
ಇದೆಲ್ಲ ಎನ್ನ ಬರೀ ಕನಸುಗೊ
ಮಾತ್ರಲ್ಲದಾ….

~~~***~~~

-ಪ್ರಸನ್ನಾ ವಿ ಚೆಕ್ಕೆಮನೆಚೆಂದದ ಆಕಾಶ

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಚೆಂದದ ಆಕಾಶ

    1. ಪದ್ಯ ಒಪ್ಪಾಯಿದು ಹೇಳಿದ್ಸಕ್ಕೊಂದೊಪ್ಪ..

  1. ಚೆಂದದ ಆಗಸದ ಬಗ್ಗೆ ಚೆಂದದ ಕವನ. ವಿಮಾನಲ್ಲಿ ಹೋಪಗ ಕೈ ಹೆರ ಹಾಕಲೆಡಿತ್ತಿಲ್ಲೆ ಆಡ, ಇಲ್ಲದ್ರೆ ಬೆಳಿಮುಗಿಲ ಮುಟ್ಳಾವ್ತಿತು.

    1. ಆದರೂ ಒಂದಾರಿಯಾದರೂ ಮುಟ್ಟುವ ಕೊದಿ..ಮನಸಿಲ್ಲಿ….ಕವನ ಮೆಚ್ಚಿದ್ದಕ್ಕೆ ಧನ್ಯವಾದ

  2. ಚೆಂದದ ಆಕಾಶವ ಒಪ್ಪಣ್ಣ ಬೈಲಿಂಗೆ ಹಾಕಿದ ಶರ್ಮಣ್ಣಂಗೆ ಧನ್ಯವಾದ….. ಬೈಲಿನ ಎಲ್ಲಾ ಬಂಧುಗಳ ಪ್ರೋತ್ಸಾಹವೇ ಎನ್ನ ಬರವಣಿಗೆಗೆ ಸ್ಪೂರ್ತಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×