- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ತ್ರಿಶ್ಶೂರು ಪೂರಲ್ಲಿ ಸರ್ತ ನೆಡದ್ಸು ಎಂಗೊ ಮಾಂತ್ರ…!

ನೆಮ್ಮರ, ಕುಮಾರನೆಲ್ಲೂರು, ಗುರುವಾಯೂರು, ತ್ರಿಶ್ಶೂರು ಎಲ್ಲ ಹತ್ತರೆ ಹತ್ತರೆ ಇಪ್ಪ ದೊಡ್ಡ ದೊಡ್ಡ ದೇವಸ್ಥಾನಂಗೊ.
ನೆತ್ತಿಪಟ್ಟಂ, ಕುಡಮಾಟ್ಟಂ, ಚೆಂಡೆ ಮೇಳ, ವೆಡಿಕ್ಕೆಟ್ಟ್.. ತ್ರಿಶ್ಶೂರು ಪೂರಂ ವಿಶೇಷಂಗೊ.
‘ಪೂರಂ, ಪೊಡಿಪೂರಂ..!’ ಹೇಳುಗು ಮಲಯಾಳಿಗೊ.
ನೆಡು ಇರುಳು ಬೆಡಿ ಹೊಟ್ಟುಸುಸ್ಸಕ್ಕೆ ವೆಡಿಕ್ಕೆಟ್ಟ್ ಹೇಳ್ತವು! ಬೆಡಿ ಹೊಟ್ಟಿಕ್ಕಿ ಒಂದು ಹತ್ತು ನಿಮಿಷ ಮೇಗಂದ ಬೆಡಿಲಿ ತುಂಬುಸಿದ ಹೊಡಿ ಬೀಳುಗು, ಹಾಂಗಾಗಿಯೋ ಎಂತ್ಸೋ… ಪೊಡಿಪೂರಂ ಹೇಳ್ಸು.
‘ಉಮ್ಮಪ್ಪ!’ ಎನ ಗೊಂತಿಲ್ಲೆ!
ಚರಿತ್ರೆ ಓದಿದವಕ್ಕೆ ಕೇಳಿ ಗೊಂತಿಕ್ಕು, ರಾಜಾ ರಾಮ ವರ್ಮ, ಅವನ ಶಕ್ತನ್ ತಂಬುರಾನ್ ಹೇಳುಗಡ ಅಂದ್ರಾಣ ಜೆನಂಗೊ.
ಅವ° ಈ ತ್ರಿಶ್ಶೂರು ಪೂರಂ ಹೇಳ್ತ ಕಲ್ಪನೆಯ ಹೆರಮಡಗಿ ಇನ್ನೂರೋ ಮುನ್ನೋರೋ ವರ್ಷ ಆತಾಯಿಕ್ಕು.
ಹೇಳ್ಸು ಕೇಳಿದ ಪ್ರಕಾರ ೧೭೯೮ರಲ್ಲಿ. ಮೇಷ ತಿಂಗಳ ಪೂರ್ವಾಭಾದ್ರೆ ನಕ್ಷತ್ರಕ್ಕೇ ತ್ರಿಶ್ಶೂರು ಪೂರಂ ಮಾಡುವೊ ಹೇಳಿ ನಿಘೆಂಟು ಮಾಡಿದ್ಸು ಅವ°.
ಹತ್ತು ದೇವಸ್ಥಾನಂಗಳ ಒಟ್ಟು ಸೇರುಸಿ ಅವರ ಎರಡು ಪಂಗಡ ಮಾಡಿದ್ಸೂ ಅವನೇ.
ಪಡುಹೊಡೆಯಾಣ ಕುಞಿಮಂಗಲಂ, ಲಾಲೂರು, ಅಯ್ಯಂತೊಲೆ, ನೆತ್ತಿಲಕ್ಕಾವು, ತಿರುವಂಬಾಡಿ ಇಷ್ಟು ದೇವಸ್ಥಾನ ಇಪ್ಪ ವಿಭಾಗಕ್ಕೆ ತಿರುವಂಬಾಡಿ ಹೇಳಿ ಹೆಸರು.

ವಡಕ್ಕುನಾಥ, ಹೇದರೆ ಶಿವನ ಕಾಂಬಲೆ ಬಂದು, ಅಲ್ಲಿ ಅವ್ವು ಎದುರೆದುರು ಆವ್ತವು. ಆ ಚೆಂದ ನೋಡೇಕು ಒಂದೋ ಪ್ರತ್ಯಕ್ಷ, ಅಲ್ಲದ್ರೆ ಟಿವಿಲಿ! ಮಲಯಾಳದ ಎಲ್ಲ ಚಾನಲ್ಗೊ ನೇರಪ್ರಸಾರ ಮಾಡ್ತವು. ಬಿಟ್ಟಿಕ್ಕೆಡಿ, ಬಪ್ಪ ವರ್ಷ ಮೇ ೧೨ಕ್ಕೆ.
ಹೇಳಿದಾಂಗೆ, ತ್ರಿಶ್ಶೂರು ಪೂರಲ್ಲಿ ವಡಕ್ಕುನಾಥಂಗೆ ನೋಡ್ಸು ಬಿಟ್ಟರೆ ಬೇರೆಂತ ಕೆಲಸವೂ ಇಲ್ಲೆ, ಹತ್ತರಾಣ ಈ ಹತ್ತು ದೇವಸ್ಥಾನದ ಜೆನಂಗೊಕ್ಕೆ, ಬಂದವಕ್ಕೆ, ದೇವರಿಂಗೆ ಜಾಗೆ ಕೊಡೇಕು ಅಷ್ಟೆ!
ಚೆರ್ಪು ತೆಗೆ ಮಾರಾಯಾ ಹೇಳಿ ಕೆಳ ಇಪ್ಪದು ಪರಂಚುತ್ತು, ಮೇಗಾಣದ್ದು ಎನ್ನ ಕಾಲಿಲ್ಲಿ ಮೆಟ್ಟು ಎಲ್ಲಿದ್ದು ಹೇಳಿ ಪರಡುತ್ತು!
ಚೆಂಡೆ ಮೇಳ ಅಪ್ಪಗ ಅದರ ಸುತ್ತಲೂ ಜೆನಂಗೊ, ಎರಡೂ ಕೈ ನೆಗ್ಗಿ ತಾಳ ಹಾಕುತ್ತವು, ಏನಾರು… ಅವರದ್ದೇ ಮಹಾಪೂರ !!
ಅವಕ್ಕೂ ಸರ್ತ ನೆಡವಲೆಡಿಯ!! ಅಂತೂ ತೊಂಭತ್ತು ಏರ್ಸದ್ದೆ ಇದ್ದವು, ಪೂರ ಪೂರ್ತಿ ಸರ್ತ ನೆಡದವು ಎಂಗೊ ಮಾಂತ್ರ!!
ಹಾಂಗಾಗಿ ಪುತ್ತೂರು ಜಾತ್ರಗೆ ಹೋಪಲೆ ಎಡಿಗಾಯಿದಿಲ್ಲೆ. ಇನ್ನು ಮಧೂರು ಜಾತ್ರಗೆ ಆದರೂ ಹೋಪಲಕ್ಕನ್ನೆ ಹೇಳಿ ಬಂದಪ್ಪಗ ಹೊಯ್ದತ್ತಯ್ಯಾ…
ಮಳೆ, ಎಲ್ಲಿಗೆ ಹೋವ್ಸು, ಸುಮ್ಮನೆ ಮನಿಕ್ಕೊಂಬಲಕ್ಕು ತೋರಿತ್ತು.
ಹಾಂಗಾಗಿ ವಿಷು, ಮಧೂರು ಜಾತ್ರೆ ನೋಡಿಯೊಂಡು ಏನಾರು ಒಂದು ಇಕ್ಕು ಅವರದ್ದು. ಉಪದ್ರ…

ಹಾಂಗಾಗಿ ಅವು ಟಿಕೆಪಿ, ಅವನ ಭಾವಂದ್ರು ಬರೆಪ್ಪಾಡಿಯ ಜೋಯ್ಸ ಶಿವ, ಮರಗೋಡಿನ ಆಯುರ್ವೇದ ಡಾಕ್ಟ್ರು ಶ್ಯಾಮ, ಅವನ ಅಣ್ಣ ರವಿ, ಎನ್ನ ಅಕ್ಕನ ಅತ್ತಿಗೆ ಮಗ ಸುಳ್ಯ ಕೈಂತಜೆಯ ಒಕೀಲ° ಪ್ರಸಾದ ಉದೆಕಾಲಕ್ಕೆ ಎದ್ದು ಬೈಕ್ಕು ಕೊಂಡೋಗಿ ಕಾಸ್ರೋಡು ರೈಲ್ವೇ ಸ್ಟೇಷನಿಲಿ ಮಡಗಿ ಐದು ಗಂಟೆಗೆ ಬಪ್ಪ ಪರಶುರಾಮಲ್ಲಿ ಹತ್ತಿದ್ಸಡ.
ಅವು ಮಧ್ಯಾಹ್ನಕ್ಕೇ ತ್ರಿಶ್ಶೂರಿಂಗೆ ಎತ್ತಿದ್ದವು, ದಾರಿ ಇಡೀ ತಲೆಂಗಳ ಅತ್ತೆ ಎರದು ಕೊಟ್ಟ ಉದ್ದಿನ ಕೊಟ್ಟಿಗೆ ತಿಂದವಡ, ಮನೇಂದ ಹೊತ್ತೊಂಡು ಬಂದ ಐದು ಲೀಟ್ರು ನೀರು, ಮಜ್ಜಿಗೆ ಪೂರ್ತಿ ಮುಗುಶಿದ್ದವಡ.
ಆನು ಮಧ್ಯಾಂತಿರುಗಿ ಕಲ್ಲಿಕೋಟೆಂದ ಹೆರಟು ಕೊಯಂಬತ್ತೂರು ಬಂಡಿಗೆ ಹತ್ತಿ ಶೋರ್ನೂರಿಲ್ಲಿ ಇಳುದು ಇನ್ನೊಂದು ಬಂಡಿಗೆ ಹತ್ತಿ ತ್ರಿಶ್ಶೂರಿಂಗೆ ಎತ್ತುವಗ ಬೆಶಿಲಿಂಗೆ ತಿರುಗಿ ಅವಕ್ಕೆ ಒಳ್ಳೆತ ಬಚ್ಚಿದ ಹಾಂಗೆ ಕಂಡತ್ತು!
ಅಲ್ಲಿಂದ ವಸ್ತು ಪ್ರದರ್ಶನ ಸ್ಟಾಲ್ ನೋಡ್ಳೆ ಹೋದ್ಸು, ಹತ್ತು ರುಪಾಯಿ ಟಿಕೇಟು ತೆಗದು ಅದರ ಒಳ ಗಂಟೆಗಟ್ಳೆ ತಿರುಗಿದೆಯೊ.
ಇನ್ನು ಹೆರ ಹೋದರೆ ತೆಂಕ್ಲಾಗಿ ವೆಜಿಟೇರಿಯನ್ ಹೋಟ್ಳು ಸಿಕ್ಕಲೆ ಬಂಙ ತೋರಿತ್ತು. ಹಾಂಗಾಗಿ ಅಲ್ಲೇ ಒಳ ಇದ್ದ ಹೋಟ್ಳಿನ ಒಳಾಂಗೆ ವರೇಗೆ ಹೋಗಿ ನೋಡಿ ಬೇರೆಂತ್ಸೂ ಇಲ್ಲೆ ಹೇಳಿ ಧೈರ್ಯ ಮಾಡಿಯೊಂದು ಪರೋಟ, ಚಪಾತಿ, ಮಸಾಲೆ ದೋಸೆ ತಿಂದು, ಕುಪ್ಪಿ ಪೂರ್ತಿ ನೀರು ತುಂಬುಸಿ ಹೆರ ಬಂದಪ್ಪಗ ಗಂಟೆ ಹತ್ತು ಕಳುದ್ದು. ಹೆರ ಮೈದಾನಲ್ಲಿ ಕಾಲು ಹಾಕಲೆ ಜಾಗೆ ಇಲ್ಲೆ, ಕರೇಲಿ ಒಂದು ಕೂಸು ಬಳ್ಳಿ ಕಟ್ಟಿ ದೊಂಬರಾಟ ಮಾಡಿಯೊಂಡು ಇತ್ತು.
ಅದರ ನೋಡಿಕ್ಕಿ ‘ಚೆರುಪೂರಂ’ ನೋಡ್ಳೆ ಹೋದೆಯೊ. ‘ಇದು ಸಣ್ಣ ಅಡ’ ಹೇಳಿದೆ, ಮಲಯಾಳ ಗೊಂತಾಗದ್ದವರತ್ರೆ. ‘ನಿಂಗೊ ನೋಡಿಕ್ಕಿ, ಎಂಗೊ ಹಗಲಿಡೀ ದೊಡ್ಡದು ನೋಡಿದ್ದೆಯೊ°’ ಹೇಳಿ ಇಬ್ರು ಮಾರ್ಗದ ಕರೇಲಿ ಫೂಟುಪಾತು ಇದ್ದನ್ನೆ, ಅಲ್ಲೇ ಕೂದು, ಬಾಕಿಪ್ಪವಕ್ಕೆ ಜಾಗೆ ಮಡಗಿದವು.
ವಡಕ್ಕುನಾಥನ ದೇವಸ್ಥಾನಕ್ಕೆ ಒಂದೇ ಹಾಂಗೆ ಕಾಂಬ ನಾಲ್ಕು ಪ್ರವೇಶ ದ್ವಾರ. ದೇವಸ್ಥಾನ ಚೌಕಾಕಾರಲ್ಲಿಪ್ಪದು, ಅದರ ಎದುರು ಮಾರುಗಟ್ಳೆ ದೂರಲ್ಲಿಪ್ಪದು ವೃತ್ತಾಕಾರಲ್ಲಿ ಮತ್ತೊಂದು ಕೋಟೆ, ನೆಡುಸ್ಸರೆ ದೊಡ್ಡ ದೊಡ್ಡ ದೇವದಾರು ಮರಂಗೊ, ಎಲ್ಲಿ ಕೂದರೂ ಬೆಡಿ ಸರೀ ಕಾಣ.
ಆ ವೃತ್ತಾಕಾರದ ಕೋಟೆಂದ ಹೆರ ಪೂರ್ತಿ ಹೆದ್ದಾರಿ, ಒಂದೇ ಒಂದು ವಾಹನವನ್ನೂ ಜಾತ್ರೆ ಅಡ್ಕಕ್ಕೆ ಬಿಡ್ತವಿಲ್ಲೆ, ಹಾಂಗಾಗಿ ಆ ಮಾರ್ಗ ಪೂರ್ತಿ ಜೆನ, ಜೆನ.
ಎಡಕ್ಕಿಲ್ಲಿ ದೂರದೂರಕೆ ಕಡ್ಳೆಗಾಡಿಗೊ ಇಷ್ಟೆ! ಜಾತ್ರೆ ಇಲ್ಲದ್ದ ದಿನ ನೆಡಕ್ಕೊಂಡು ಹೋದರೆ ಒಂದು ಸುತ್ತ ಬಂದಪ್ಪಗ ಎರಡು ಮೈಲು ಆದರೂ ಆಗಿ ಹೋಕೋ ಹೇಳಿ ಒಂದು ಅಂದಾಜು.
ಎದುರು ದೊಡ್ಡದೀಪ ಮಡಗಿದ್ಸು ಪ್ರಧಾನ ದ್ವಾರ ಹೇದವು ಆರೋ, ಅಲ್ಲಿ ಇನ್ನು ಚೆರುಪೂರಂ.

ಈ ಊರಿಲ್ಲಿ ಹಾಂಗಾರೆ ದೇವರ ತಲೆಲಿ ಹೊರ್ತ ಕ್ರಮ ಇರ, ಗುರುವಾಯೂರಿಂದ ಹೆಚ್ಚು ದೂರ ಇಲ್ಲೆ, ಆನೆಗೊಕ್ಕೂ ತತ್ವಾರ ಇರ ಹೇಳಿ ಮಾತಾಡಿಗೊಂಡೆಯ°.
ದೇವರ ಆನೆಯ ಎದುರು ಕೈದೀಪ ಹಿಡುಕ್ಕೊಂಡ ನಂಬೀಶನ ಕಂಡತ್ತು. ಅವನ ಒಟ್ಟಿಂಗೆ ತಂತ್ರಿಯನ್ನೂ ಕಂಡ ಹಾಂಗಾತು, ಚೆಂಡೆಗೊ ರೈಸಿದವು, ಒಟ್ಟಿಂಗೆ ಜನಂಗಳ ತಾಳವೂ ಕುಣಿತವೂ ರೈಸಿತ್ತು.
ಇದು ಮುಗುದಪ್ಪದ್ದೆ ದೇವರ ಎದುರು ಏಳು ಆನೆಗೊ ಬಂದವು, ಯಥಾಪ್ರಕಾರ ಕುಡಮಾಟ್ಟಂ, ಚೆಂಡೆಮೇಳ ನೆಡದತ್ತು.
ಮಧ್ಯಾಹ್ನ ನೋಡ್ಳೆ ಸಿಕ್ಕದ್ದಕ್ಕೆ ಈಗ ಇಷ್ಟಾರೂ ಸಿಕ್ಕಿತ್ತನ್ನೆ ಹೇಳಿ ಗ್ರೇಶಿಯೊಂಡೆ. ಅದಾ, ಅವರ ಹಿಂದಂದ ಒಂಭತ್ತು, ಪುನಾ ಒಂಭತ್ತು, ಇನ್ನು ಆರು… ಆನೆಗಳ ಸಾಲು ಬಪ್ಪಲೆ ಸುರು ಆತು. ಹೆಚ್ಚುಕಮ್ಮಿ ಮಧ್ಯಾಹ್ನದಷ್ಟೇ ರೈಸಿತ್ತು ಹೇಳಿದ° ಟಿಕೆಪಿ.
ಕೋರ್ಟು ಆದೇಶ ಕೊಟ್ಟ ಕಾರಣ, ಡೆಸಿಬೆಲ್ ಕಡಮ್ಮೆ ಮಾಡಿದ್ದವು ಹೇಳಿದವನ ಎದುರು ಕಾಂಬಲೆ best rolex replica watch ಸಿಕ್ಕಿರೆ ಎರಡ್ಡು ಕೊಡೇಕು ತೋರಿತ್ತು! ಹೋಗಲಿ, ಹಾಂಗಾರೆ ಮೊದಲು ಎಷ್ಟಿದ್ದಿಕ್ಕು ಬೆಡಿ?! ತಿರುವಂಬಾಡಿಯವರ ಬೆಡಿ ಮುಗುಶಿಕ್ಕಿ ಪಾರಮೇಕ್ಕಾವಿನವು ಸುರು ಮಾಡುವಗ ಹೆರಟೆಯೊ. ಎರಡ್ನೇದು ಮೊದಲಾಣದ್ದರ ಜೆರಾಕ್ಸ್! ರೈಲ್ವೇ ಸ್ಟೇಷನಿಂಗೆ ಹೋಗಿ ಆರು ಗಂಟೆಯ ರೈಲಿಲ್ಲಿ ಸೀಟು ಹಿಡುದು ಕೂದು ರೈಲು ಹೆರಡುವನ್ನಾರವೂ ಬೆಡಿ ಹೊಟ್ಟುದು ಕೇಳಿಯೊಂ…ಡಿತ್ತು!
ಶುದ್ದಿಲಿಪ್ಪ ಪಟಂಗೊ:
lekhana odiyappaga pooram nodi bandastu kushi atu.Innana varsha hopale beku.
ದೊಡ್ಡ ಭಾವ,ತ್ರಿಶೂರ್ ಪೂರಂ ಬಗ್ಗೆ ಎನಗೆ ಏನೂ ಗೊಂತಿತ್ತಿಲ್ಲೆ…ನಿಂಗಳ ಲೇಖನ ನೋಡಿ ಇನ್ನು ಮುಂದಾಣ ಪೂರಂ ಗೆ ಹೋಯೆಕ್ಕು ಹೇಳಿ ಕೊದಿ ಆಯಿದು.ಆನು ಕೈರಳೀ ಚಾನೆಲ್ ಲಿ ಒಂದರಿ ಇದರ ನೋಡಿದ್ದೆ..ಮತ್ತೆ ನಿಂಗಳ ಹತ್ರೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು..ಧನ್ಯವಾದ ದೊಡ್ಡ ಭಾವ…
ಪೂರಂ ನ ಪೂರ್ಣ ವಿವರಕ್ಕೆ ದನ್ಯವಾದಂಗ.. ಓದಿ ಒಂದರಿ ಅಲ್ಲಿಗೆ ಹೋಯೆಕ್ಕು ಹೇಳಿ ಆವುತ್ತಾ ಇದ್ದು. ಬಪ್ಪೊರಿಷ ಒಟ್ಟಿಂಗೆ ಹೋಪ..
ಅಖೇರಿ ದಿನ ಮಾರ್ಕ್ ಸರಿ ಹಾಕಿದ್ದೀರನ್ನೆ…?
ದೊಡ್ಡ ಭಾವ° ಪೂರಂನ ಬಗ್ಗೆ ಬರದ್ದದು ಲಾಯಕ ಆಯಿದು.. ಕುಡುಮಟ್ಟಮ್ ನ ಪಟ ಲಾಯಕ ಬಯಿಂದು.. ದೀಪದ ಎಣ್ಣೇಲಿ ದೇವರ ಬಿಂಬ ಲಾಯ್ಕಲ್ಲಿ ಪ್ರತಿಫಲನ ಆವುತ್ತು… ತ್ರಿಶೂರಿನ್ಗೆ ಮದಲು ತಿರು ಶಿವ ಪೇರೂರು ಹೇಳಿ ಹೆಸರಿತ್ತು.., ಆಚಾರ್ಯ ಅತ್ರೇಯರ ಆದೇಶದ ಹಾಂಗೆ ಆಚಾರ್ಯ ಶಿವಗುರು ಮತ್ತೆ ಮಾತಾ ಆರ್ಯಾಂಬಾ ದಂಪತಿಗ ವಡಕ್ಕುನಾಥನ ಸೇವೆಯ ನಲುವತ್ತೆಂಟು ದಿನಗಳ ಕಾಲ ಮಾಡಿ ಶಿವನ ಅನುಗ್ರಹಲ್ಲಿ ನಮ್ಮ ಸಮಾಜದ,ಸಂಸ್ಕೃತಿಯ ಉದ್ಧಾರಕ ಆಚಾರ್ಯ ಶಂಕರರ ಪುತ್ರನಾಗಿ ಪಡಕ್ಕೊಂಡವು.. ಹೇಳಿ ಇಪ್ಪ ವಿಷಯವ ‘ಧರೆಗಿಳಿದ ದಿವ್ಯತೇಜ ಶ್ರೀ ಶಂಕರಾಚಾರ್ಯ’ ಹೇಳ್ತ ಪುಸ್ತಕಲ್ಲಿ ಓದಿದ್ದೆ.. ಇನ್ನು ಹೆಚ್ಚಿನ ವಿವರಂಗ ಮಾಷ್ಟ್ರು ಮಾವನೆ ಹೇಳೆಕ್ಕಷ್ಟೇ…
ಲೇಖನಲ್ಲಿ ಸುಮಾರು ವಿಶಯಂಗಳ ತಿಳಿಸಿದ್ದೆ. Informative . ಓದುವಾಗ ಒಂದರಿ ಹೋಯೆಕ್ಕು ಹೇಳಿ ಆವ್ತು. ಬೆಡಿಯ ಡೆಸಿಬಲ್ ಹೇಳುವಾಗ, ಕೆಮಿಗೆ ಹತ್ತಿ ಮಡ್ಕೊಂಡು ಹೋಪದೇ ಒಳ್ಳೆದಾಯಿಕ್ಕು ಹೇಳಿ ತೋರ್ತು.
ದೊಡ್ಡಬಾವ,
ಶುದ್ದಿ ಪಷ್ಟ್ಳಾಸಾಯಿದು!
ಬಪ್ಪೊರಿಶ ಎಡಿಗಾರೆ ಬೈಲಿಂದ ಎಲ್ಲೊರುದೇ ಹೋಪೊ°, ಆಗದೋ?
ಸರೀ ಹೇಳಿದ್ದಿ ನಿಂಗೊ.
ಊರಿಡೀ ಬಾಂಕು ಕೊಟ್ರೆ ಡೆಸಿಬೆಲ್ಲು ಏರ್ತಿಲ್ಲೆ ಆಯಿಕ್ಕು ಇವಕ್ಕೆ! ಅವರದ್ದಕ್ಕು, ನಮ್ಮದಾಗದೋ?!
ಒಪ್ಪಣ್ಣ ಭಾವ ನೀನು ಸರಿ ಹೇಳಿದ್ದೆ… ಹಿಂದೂ ಕಾರ್ಯಂಗಳಲ್ಲಿ ಹಾಕಿರೆ ಮಾತ್ರ ಏರುದು.. ಬಾಂಕು ಕೊಟ್ರೆ ಎಂತದು ಅವುತ್ತಿಲ್ಲೆ..