Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಇ೦ದು ಸುಳ್ಯದ ಶಿವಕೃಪಾಲ್ಲಿ ನೆಡೆತ್ತ ನಮ್ಮ ಬೈಲಿನ ಕಾರ್ಯಕ್ರಮ ಚೆ೦ದಕೆ ನೆಡೆಯಲಿ ಹೇಳಿ ಹಾರೈಸುತ್ತಾ,
ಸಮಸ್ಯೆ : ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ
ಭಾಮಿನಿ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ೦ಗೊ ಬರಲಿ.
ಬೇಗ ಊರಿನ ಸೇರಿಗೊ೦ಬಲೆ
ಸಾಗಿ ಹೋಪಗ ಬಂತು ಪರಿಮಳ –
ವಾಗ ಜಾನ್ಸಿದೆ ಸುಭಗ ಭಾವನ “ಕುಣಿಯ” ಅಗಿಕ್ಕೋ?|
ರಾಗ ಹೆರಟತ್ತಯ್ಯ ಬಾಯಿಯ
ಬೀಗ ತೆಗದಾ೦ಗಾತು “ಹರಟೆ”ಗೆ
ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ ||
ಯೇವದೋ ನೆರೆಕರೆಯ ಬೈಲಿಲಿ ಸುಭಗ ಭಾವಂಗೆ “ಹರಟೆ ಮಲ್ಲ ” ಹೇಳಿ ಬಿರುದು ಪ್ರದಾನ ಆಯಿದಡ,ಅಪ್ಪೋ ?!
ಸಾಗಿ ಸಾಧನೆ ಶಿಖರವೇರಿದ
ಮಾಗಿದನುಭವದಜ್ಜ ಮಾದರಿ
ಯಾಗಿ ನಿಂದವು ಬೈಲ ಬಾಳಿಲ ಪಾರಿತೋಷಕಲಿ |
ತೂಗಿ ಕೃತಿ ಬಹುಮಾನ ಕೊಟ್ಟರೆ
ಲಾಗ ಹಾಕುವ ಯಕ್ಷ ನಾಟಕ
ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ ||
ಆಹಾ , ಕಾರ್ಯಕ್ರಮದ ವಿವರಂಗಳೂ ಬಂತು . ರೈಸಿತ್ತು ಪೂರಣ .
ಪರಿಚಯ ಯೋಗ
ಬೇಗ ಬೇಗನೆ ಬಂದು ಸೇರಿದೆ
ಆಗ ಕಂಡದು ಸಣ್ಣ ಸಭೆಯೇ
ಯೋಗ ಕೂಡಿತ್ತಿಂದು ಸುಳ್ಯದ ಪೇಟೆ ಮಧ್ಯಲ್ಲಿ
ಭಾಗವಹಿಸಿದ ಒಪ್ಪ ಬಳಗವ
ಮೇಗೆ ಕೂಡಾ ಗಣ್ಯ ಗಡಣವ
ಬಾಗಿ ವಂದುಸಿ ಗುರ್ತ ಪರಿಚಯ ಆತು ನೆರೆಕರೆಯ
ಮಾವಾ ,
ನಿಂಗೊ ಭಾಗವಹಿಸಿದ್ದು ನೋಡಿ ಕೊಶಿಯಾತು . ಪೂರಣ ಲಾಯ್ಕಿದ್ದು .
ಮಾಗಿದನುಭವ ಹೊಂದಿದಣ್ಣಗೆ
ಪಾಗು ಕಟ್ಟುವ ಚೆಂದ ನೋಡುವ
ಯೋಗ ಕೂಡಿತ್ತಿಂದು ಸುಳ್ಯದ ಪೇಟೆ ಮಧ್ಯಲ್ಲಿ |
ಹೋಗಿ ನೋಡುಲೆ ಯಕ್ಷನಾಟಕ
ಬೇಗ ಕೂದವು ಎದುರು ಸಾಲಿಲಿ
ಭಾಗಿಯಾದವು ಕೈಯ ತಟ್ಟುತ ದೊಡ್ಡ ಚಪ್ಪಾಳೆ ||
ಪಾಗು ಹೇಳಿರೆ ಎಂತದು ಅತ್ತೆ ? ಚಪ್ಪಾಳೆ ಸಮಾಕೆ ಬಿದ್ದದು ಅಪ್ಪು .
ಯೇ … ಅಷ್ಟೂ ಗೊಂತಿಲ್ಯಾ ಭಾವ? ಪಾಗು ಹೇಳಿರೆ ಮುಂಡಾಸು…
ಅಪ್ಪು… ಪಾಗು ಹೇಳಿರೆ ಮುಂಡಾಸು , ರುಮಾಲು….
ಹೊ .. ಎನಗೆ ಹೊಸ ಶಬ್ದ ಇದು ,ಕಲ್ತ ಹಾ೦ಗಾತು .