Oppanna.com

ಸಮಸ್ಯೆ 119 : ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ

ಬರದೋರು :   ಸಂಪಾದಕ°    on   28/05/2016    9 ಒಪ್ಪಂಗೊ

ದೊಡ್ಡ ರಜೆ ಮುಗುದು ಶಾಲೆ ಸುರುವಪ್ಪ ಸಮಯಲ್ಲಿ ಭೋಗಷಟ್ಪದಿಯ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ.

 

ಸಮಸ್ಯೆ : ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ

9 thoughts on “ಸಮಸ್ಯೆ 119 : ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ

  1. ಸಾಗು-ಪೂರಿ ಮಾಡಿ ಆಯ್ದು
    ಬೇಗ ತಿಂದು ಹೊಟ್ಟೆ ತುಂಬ್ಸು
    ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ
    ಅಂಗಿ ಹಾಕಿ ತಲೆಯ ಬಾಚು
    ಬ್ಯಾಗು ಬೆನ್ನ ಮೇಲೆ ಹಾಕು
    ಬಾಗಿಲಿಂಗೆ ಬಂದು ಆನು ಟಾಟ ಮಾಡುವೆ.

    1. ಮಕ್ಕಳ ಹೆರಡ್ಸಿ ಶಾಲೆಗೇ ಎಬ್ಬೊದೆ ಒಂದು ದೊಡ್ಡ ಸಾಹಸ , ಲಾಯಕ ಆಯಿದು ವರ್ಣನೆ .

  2. ಬೀಗ ಹಾಕಿ ಪೇಟೆ ಮನೆಗೆ
    ತಿಂಗಳೆರಡು ಮಗನ ರಜೆಲಿ
    ಜಾಗೆ ತೋಟವಿಪ್ಪ ಊರ ಮನೆಗೆ ಹೋದೆಯ|
    ತಾಗಿ ಕೂಗಿ ಬೀಗಿ ಮಾಗಿ
    ಬೇಗ ಮುಗುದ ರಜೆಯ ಬೈಯೆ
    ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ||

    1. ಹ . ಹಾ .. ರಜೆ ಮುಗುದರೆ ಸಜೆ . ಲಾಯ್ಕಾಯಿದು ಶೈಲಜಕ್ಕ .

  3. ಹಟ ಹಿಡುದ ಮಾಣಿಗೆ

    ಕೂಗಿ ತರ್ಕ ಹಿಡುದು ಹೀಂಗೆ
    ರಾಗವೆಳೆದ ಬೊಬ್ಬೆ ಕಂಡು
    ಕಾಗೆ ಹಾರಿ ಹೋತು ನಿಲ್ಸು ನಿನ್ನ ಆರ್ಭಟೆ |
    ಬೇಗಿನೊಳವೆ ಬುತ್ತಿಯಿದ್ದು
    ಮೇಗೆ ಸ್ಲೇಟು ಕಡ್ಡಿಯಿದ್ದು
    ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ ||

  4. ಪಿಳ್ಳೆ ನೆಪ
    ಈಗ ಬತ್ತೆ ಮತ್ತೆ ಬತ್ತೆ
    ರಾಗ ಎಳೆ ಡ ಅಂತೆ ನೀನು
    ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ
    ಸಾಗಿ ಬಂದ ಹಾದಿ ನೋಡು
    ಹೋಗಿ ಸೇರೊ ಗುರಿಯ ಕಾಣು
    ಬೇಗ ಕಲ್ತು ಬುದ್ಧಿವಂತನಾಗು ಮಾಣಿ ನೀ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×