ಕು| ಸಂಸ್ಕೃತಿ ಭಟ್ 2019 ಜೂನ್ ತಿಂಗಳಿಲ್ಲಿ ನಡದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಲಿ 96% ಮಾರ್ಕ್ ತೆಗದು ಉನ್ನತ ಶ್ರೇಣಿಲಿ ಉತ್ತೀರ್ಣಳಾಯಿದು.
ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ) ಇಲ್ಲಿಶ್ರೀ ರಘುನಂದನ ಬೇರ್ಕಡವು ಅವರಲ್ಲಿ ಸಂಗೀತ ತರಬೇತಿ ಪಡಕ್ಕೊಳ್ತಾ ಇದ್ದು.
2017ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಲಿಯೂ 95.25% ಮಾರ್ಕ್ ಪಡೆದು ಗುರು ವಿದುಷಿ ಶ್ರೀಮತಿ ಮಮತಾ ಕಾರಂತರ ಹೆಮ್ಮೆಯ ಶಿಷ್ಯ ಎನಿಸಿಗೊಂಡಿದು.
ಕೈಂತಜೆ ಶಿವಪ್ರಕಾಶ ಹಾಂಗೂ ವಂದನಾ ಜಿ ಕೆ ಇವರ ಸುಪುತ್ರಿಯಾದ ಸಂಸ್ಕೃತಿ, ಬೆಂಗಳೂರಿನ ಗೋಪಾಲನ್ ನ್ಯಾಷನಲ್ ಸ್ಕೂಲ್ ನ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ, ನಮ್ಮ ಸಮಾಜದ ಹೆಮ್ಮೆಯ ಕೂಸು.
ಸುರತ್ಕಲ್ ನಿವಾಸಿಗಳಾಗಿಪ್ಪ ಶ್ರೀಮತಿ ಕುಸುಮಾ ಹಾಂಗೂ ಗೋವಿಂದ ಭಟ್ ಇವರ ಪುಳ್ಳಿ (ಮಗಳ ಮಗಳು)
ಶಾಲಾ ವಿದ್ಯಾಭ್ಯಾಸದೊಟ್ಟಿಂಗೆ ಸಂಗೀತ ಹಾಂಗೂ ನೃತ್ಯ ವಿದ್ಯಾಭ್ಯಾಸ ಸುಗಮವಾಗಿ ಮುಂದುವರಿದು ಈ ಕ್ಷೇತ್ರಲ್ಲಿ ಒಳ್ಳೆಯ ಹೆಸರು ತಂದು ಹೆತ್ತವಕ್ಕೂ ಸಮಾಜಕ್ಕೂ ರಾಜ್ಯಕ್ಕೂ ಗೌರವ ತಪ್ಪಂತಾಗಲಿ ಹೇಳಿ ಶುಭ ಹಾರೈಕೆಗೊ.
(ಮಾಹಿತಿ ಒದಗಿಸಿದವು ಶ್ರೀಮತಿ ಕುಸುಮಾ ಗೋವಿಂದ ಭಟ್ ಸುರತ್ಕಲ್)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಸಂಸ್ಕೃತಿಗೆ ಶುಭಾಶಯಂಗೊ..