ಎಂಗಳ ಕೂಸು ಶಾಲೆಗೆ ಹೊವುತ್ತು ಎಂತ ಬತ್ತಿಲ್ಲೆ!
February 6, 2009 ರಂದು 1:07 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 4 ಒಪ್ಪಂಗೊ.ಮಾಣಿ ಒಬ್ಬಂಗೆ ಉದಾಸ್ನ/ ಬೇಜಾರ ಅಪ್ಪದಕ್ಕೆ ಕೂಸಿನ ಪದ್ಯ:(ತಪ್ಪಿದ್ದರೆ ಕೂಡಲೇ ತಿಳಿಸಿ ) ಎಂಗಳ ಕೂಸು ಶಾಲೆಗೆ ಹೊವುತ್ತು ಎಂತ ಬತ್ತಿಲ್ಲೆ!ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !! ಮೋರೆಲಿ ಬಂದ ಮುದ್ದಣು ನೋಡಿರೆ ಪಿಸುರೇ ಇಲಿತ್ತಿಲ್ಲೇ!ಗಂಟೆಗಟ್ಲೆ ಪಾಲಿಶ್ ಮಾಡ್ತು ಉಗುರೇ ತೆಗೆತ್ತಿಲ್ಲೆ!! ಹಂಡೆ ಗಟ್ಲೆ ಮಿಂದರೂ ಅದಕ್ಕೆ ಸಾಕೇ ಆವ್ತಿಲ್ಲೇ!ಕನ್ನಟಿ ಎದುರಿನ ಪೌಡರು ಕುಪ್ಪಿ ಮುಗುದರೂ ಬಿಡ್ತಿಲ್ಲೇ!! ಎಂಗಳ ಕೂಸು !! ಇರುಳಿಡಿ ಕೂದು ಟೀವಿ ನೋಡ್ತು ಒರಕ್ಕೆ ಬತ್ತಿಲ್ಲೆ !ಎಲ್ರಾಂ ಬಡಿವಗ ಏಳುಲೆ ಮಾಂತ್ರ [...]
