ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?
October 30, 2009 ರಂದು 12:00 amಗೆ ಒಪ್ಪಣ್ಣ ಬರೆದ್ದು, ಇದುವರೆಗೆ 11 ಒಪ್ಪಂಗೊ.ಊರ ದೇವಸ್ತಾನಲ್ಲಿ ಒರಿಶಕ್ಕೊಂದರಿ ಜಾತ್ರೆ ಆವುತ್ತು.ನಿತ್ಯವೂ ಪೂಜೆಮಾಡಿದ ಆ ದೇವರ ಲೆಕ್ಕಲ್ಲಿ ಗಮ್ಮತ್ತು ಮಾಡ್ತ ದಿನ. ಉತ್ಸವ ಮೂರ್ತಿಯ ಅಲಂಕಾರ ಮಾಡಿ, ತಂತ್ರಿಗಳ ಬರುಸಿ, ಚೆಂಡೆ-ಪಟಹ ವಾದ್ಯಂಗಳ ಒಟ್ಟಿಂಗೆ ದರ್ಶನಬಲಿ ಬಂದು, ಬೆಡಿ ಇತ್ಯಾದಿ ಹೊಟ್ಟುಸಿ ಗೌಜಿ ಮಾಡುದು. ಊರಿನ ಆಸ್ತಿಕರೆಲ್ಲರೂ ಹೋಗಿ ಆ ಜಾತ್ರೆಗೆ ಸೇರಿಗೊಳ್ತವು.ಶ್ರದ್ಧಾಕೇಂದ್ರ ದೇವಸ್ತಾನದ ಸುತ್ತಮುತ್ತ ಇಪ್ಪ ಗೌಜಿ ಗದ್ದಲಲ್ಲಿ ಕೂಡಿ, ಹತ್ತರಾಣವರತ್ರೆ ಮಾತಾಡಿಗೊಂಡು, ಬೊಬ್ಬೆ ಹೊಡಕ್ಕೋಂಡು ತಿರುಗುತ್ತವು. ಎಲ್ಲ ನಮುನೆಯ ಜೆನಂಗಳೂ ಬಂದು ಬಂದು ಸೇರುತ್ತವು. ಗಣೇಶಮಾವನ ಹಾಂಗಿರ್ತವು ಮಂತ್ರಸುತ್ತಿಲಿ ತೊಡಗಿಯೊಂಡ್ರೆ, [...]
