ಒಳ ಹೋದ ಕಡಂದುಳುಗ ಹೆರ ಬಾರದ್ದೇ ಇರಲಿ… ಹೆರ ಬಂದವು ಮತ್ತೆ ಹೋಗಲಿ..

November 17, 2011 ರ 11:47 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕ್ಷರಶಃ ದೇಶದ/ರಾಜ್ಯದ ಜನಂಗೊ ದ್ವಂದ್ವಲ್ಲಿದ್ದವು. ಅವಕ್ಕೆ ಭ್ರಮೆ ನಿರಸನವೂ ಆಯಿದು. ಅಡಕ್ಕತ್ತರಿಲಿ ಸಿಕ್ಕಿದ ಸ್ಥಿತಿ ಅವರದ್ದು. ನೆಗೆ ಮಾಡೆಕ್ಕೊ, ಕೂಗೆಕ್ಕೊ- ಹೇಳಿ ಅವಕ್ಕೆ ಅರಡಿತ್ತಿಲ್ಲೆ. ಜೆನರ ಪೈಸೆ ನುಂಗಿದ ಭ್ರಷ್ಟ ಕಳ್ಳಂಗೊ ಜೈಲಿಂಗೆ ಹೋದ್ದಕ್ಕೆ ನೆಗೆ ಮಾಡೆಕ್ಕೊ ಅಥವಾ ಅಂತ ಜೆನಂಗಳ ನಾವು ಓಟು ಹಾಕಿ ಗೆಲ್ಲಿಸಿತ್ತನ್ನೇ ಹೇಳಿ ಕೂಗೆಕ್ಕೋ ಹೇಳ್ತ  ಕವಲು ನಿರ್ಧಾರಕ್ಕೆ ಬಪ್ಪಲೆ ಅವಕ್ಕೆ ಎಡಿಗಾಗಿಯೊಂಡಿಲ್ಲೆ. ದೇವಸ್ಥಾನಲ್ಲಿ ಪ್ರಸಾದ ತೆಕ್ಕೊಂಬಲೆ ನಿಂತ ಕ್ಯೂವಿನ ಹಾಂಗೆ ಜೈಲಿಂಗೆ ಹೋಪಲೆ ಇನ್ನೂ ಹಲವು ರಾಜಕಾರಣಿಗ, ಅಧಿಕಾರಿಗೊ ಸಾಲಿಲಿ ನಿಂದುಗೊಂಡಿಪ್ಪದು ನೋಡಿದರೆ, ನಾವೇ ತಪ್ಪು ಮಾಡಿತ್ತೋ ಹೇಳಿ ಅವಕ್ಕೆ ಕಾಣ್ತು. ಛೆಲಾ ಹೀಂಗಾತನ್ನೆ ಹೇಳಿಯೂ ಅನುಸಿ ಹೋವ್ತು.

~

ಭ್ರಷ್ಟಾಚಾರ ನಮ್ಮ ದೇಶಲ್ಲಿ ಹೊಸತ್ತಲ್ಲ. ಆದರೆ ಭ್ರಷ್ಟ ರಾಜಕಾರಣಿಗ ಈ ನಮೂನೆ ಜೈಲಿಂಗೆ ಹೋಪಲೆ ಸುರುಮಾಡಿದ್ದರ ನೋಡುದು ಹೊಸತ್ತು. ಮೊದಲೆಲ್ಲ ಭ್ರಷ್ಟಂಗ ಇತ್ತಿದವೇ ಇಲ್ಲೆ ಹೇಳಿ ಅಲ್ಲ. ಇತ್ತಿದವು. ಆದರೆ ಈ ಪ್ರಮಾಣಲ್ಲಿ ಅಲ್ಲ. ೧೯೪೭ರಲ್ಲಿ ಸ್ವಾತಂತ್ರ‍್ಯ ಬಂದು ಏವಾಗ ರಾಜಕಾರಣಿಗ ದೇಶವ ಆಡಳಿತ ನಡೆಸಲೆ ಸುರು ಮಾಡಿದವೊ ಅಂಬಗಳೇ ಸಣ್ಣ ಮಟ್ಟಿನ ಭ್ರಷ್ಟಾಚಾರಂಗ ಸುರು ಆಯಿದು ಇದಾ… ಹಾಂಗಿದ್ದರೂ, ಆ ಕಾಲಲ್ಲಿ ರಾಜಕಾರಣ ಹೇಳುದು ಪೈಸೆ ಮಾಡುವ ಉದ್ದಿಮೆ ಆಗಿತ್ತಿಲ್ಲೆ. ಅದು ಒಂದು ರೀತಿಯ ಜನ ಸೇವೆ ಹೇಳಿಯಯೇ ಲೆಕ್ಕ.  ಕ್ರಮೇಣ ರಾಜಕೀಯ ಸಾಮಾಜಕ್ಕೆ ಸೇವೆ ಮಾಡುವ ಒಂದು ಮಾರ್ಗ ಹೇಳ್ತ ಕಲ್ಪನೆ ಅಳುಕ್ಕೊಂಡು ಬಂತು. ಜನಸೇವೆಯ ಮುಖವಾಡ ಹಾಕಿಯೊಂಡು ಪೈಸೆ ಮಾಡುವ ಒಂದು ವಿಧಾನ ಆಗಿಯೇ ಬದಲಾಗಿ ಹೋತು. ೭೦ರ ದಶಕದ ಮಧ್ಯಭಾಗಂದ ಅಂತು ರಾಜಕೀಯ ಉದ್ಯಮ ಆಗಿ ಹೋತು. ಪೈಸೆ ಚೆಲ್ಲಿ ಓಟಿಲ್ಲಿ ಗೆಲ್ಲುದು. ಇನ್ನಾಣ ಸರ್ತಿಯಾಣ ಓಟಿಲ್ಲೆ ಗೆಲ್ಲಲೆ ಮತ್ತೆ ಪೈಸೆ  ಮಾಡುವುದು ಒಂದು ಅಭ್ಯಾಸ ಆಗಿ ಬದಲಾತು. ದೇಶದ ರಾಜಕಾರಣವನ್ನೂ ಸೇರಿಸಿ ಭಾರತಲ್ಲಿಪ್ಪ ಯಾವ ರಾಜ್ಯಲ್ಲಿ ಭ್ರಷ್ಟಚಾರ ಮುಕ್ತ ಆಡಳಿತ ಇದ್ದು? ಒಳ್ಳೆಯ ರಾಜಕಾರಣಿಗ ಎಲ್ಲಿದ್ದವು? ಇದ್ದರೂ ಎಷ್ಟು ಸಂಖ್ಯೆಲಿ ಇಕ್ಕು? ಬೆರಳಿಲ್ಲಿ ಎಣುಸುವಷ್ಟು ಮಾತ್ರ. ಭಾರತ ಮಾತೆಯ ದುರಂತ ಅಲ್ಲದೋ? ಆ ಪಕ್ಷ, ಈ ಪಕ್ಷ ಹೇಳಿ ಯಾವುದೇ ವ್ಯತ್ಯಾಸ ಇಲ್ಲೆ ಈಗ. ಎಲ್ಲಾ ಪಕ್ಷಲ್ಲಿ ಇಪ್ಪದು ಕಳ್ಳಂಗಳೇ. ದೊಡ್ಡ ಕಳ್ಳನೋ ಅಥವಾ ಸಣ್ಣ ಕಳ್ಳನೋ ಹೇಳ್ತ ವ್ಯತ್ಯಾಸ ಮಾತ್ರ ನೋಡ್ಳಿಪ್ಪದು. :)

~

ನಾವು ಹಿಂದಂಗೆ ಹೋಪದು ಬೇಡ ನಮ್ಮ ಕಣ್ಣ ಎದುರಿಂಗೆ ಆದ, ದೇಶದ ಅತ್ಯಂತ ದೊಡ್ಡ ಹಗರಣ ಹೇಳಿ ವಿವರುಸುತ್ತಿಪ್ಪ ೨ಜಿ ಸಿಗ್ನಲ್‌ ಪಾಲು ಮಾಡುವ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣವ ತೆಕ್ಕೊಂಬ. ರಾಜ್ಯ ಮಟ್ಟಲ್ಲಿ, ಭೂ ಹಗರಣವನ್ನೇ ತೆಕ್ಕೊಂಬ. ಮೊಬೈಲ್‌ ಸಿಗ್ನಲ್‌ ಮಾರಾಟ ಮಾಡುದರಲ್ಲಿ ಇಷ್ಟು ಪೈಸೆ ಮಾಡ್ಳೆ ಎಡಿಗೋ ಹೇಳುವಷ್ಟರ ಮಟ್ಟಿಂಗೆ ರಾಜಾ ಮತ್ತು ಅದರ ಪರಿವಾರಂಗೊ ಪೈಸ ಮಾಡಿದ್ದವು. ಇದರಲ್ಲಿ ಕೇವಲ ರಾಜಾ ಮಾತ್ರಂ ಅಲ್ಲ, ಡಿಎಂಕೆಯ ಇನ್ನಷ್ಟು ಜೆನಂಗ ಇದ್ದವು. ಆಡಳಿತ ಪಕ್ಷದ ಜೆನಂಗೂ ಈ ಹರಗಣಲ್ಲಿ ಸೇರಿದ್ದವಿಲ್ಲೆ ಹೇಳಿ ಹೇಳ್ಳೆ ಎಡಿಯ. ಪ್ರಧಾನಿ ಆಂಡ್‌ ಕಂಪೆನಿಗೆ ಈ ವಿಷಯ ಗೊಂತಿಲ್ಲದ್ದೇ ಇರ. ಇದರಲ್ಲಿ ಸರ್ಕಾರ ಮಾತ್ರ ಅಲ್ಲ. ಕೆಲವು ಪ್ರೈವೇಟ್‌ ಕಂಪೆನಿಗಳೂ ಸೇರಿದ್ದವು.

ಪುಣ್ಯಾತ್ಮ ಜನಾತಪಕ್ಷ ಮುಖ್ಯಸ್ಥ ಸುಬ್ರಮಣಿಯನ್‌ ಸ್ವಾಮಿ. ಅವಂ ಈ ಹಗರಣವ ಬಯಲು ಮಾಡಿ ಇಡಿ ದೇಶಕ್ಕೆ ಉಪಕಾರ ಮಾಡಿದ. ಈಗ ನೋಡಿ, ರಾಜಾ, ಕರುಣಾನಿಧಿ ಮಗಳು ಕನಿಮೊಳಿ, ರಿಲಯನ್ಸ್ ಕಂಪೆನಿ ಅಧಿಕಾರಿಗೊ.. ಹೀಂಗೆ ಕೆಲವು ಜೆನ ಒಳ ಹೋಯಿದವು. ಜಾಮೀನು ಇನ್ನೂ ಸಿಕ್ಕಿದ್ದಿಲ್ಲೆ. ಕನಿಮೊಳಿ: ಆನು ಹೆಮ್ಮಕ್ಕ … ಕಷ್ಟ ಆವುತ್ತು ಎನಗೆ ಜಾಮೀನು ನೀಡೆಕ್ಕು ಹೇಳಿ ಹೇಳಿದರೂ ಕೋರ್ಟ್‌ ಕೇಳಿದ್ದಿಲ್ಲೆ. ಇವರೊಟ್ಟಿಂಗೆ ಮಾರನ್‌ ಸೆಟ್ಟು ಕೂಡ ಒಳ ಹೋಪಲೆ ಕಾದು ಕೂದೊಂಡು ಇದ್ದು.

ಇನ್ನು ಕಾಮನ್ವೆಲ್ತ್‌ ವಿಚಾರಕ್ಕೆ ಸುರೇಶ್‌ ಕಲ್ಮಾಡಿ ಪೈಸವ ನುಂಗಿ ಈಗ ಜೈಲಿಲ್ಲಿ ಇದ್ದ.. ನಮ್ಮ (ಕುಂದಾಪುರದ) ಊರಿನವ ಆಗಿಯೊಂಡು,  ಉತ್ತಮ ವಿದ್ಯಾಭ್ಯಾಸ ಇದ್ದುಗೊಂಡು ಕೋಟಿ ಗಟ್ಟಲೆ ಪೈಸೆ ಮಾಡಿ ಅಕೇರಿಗೆ ಆದ್ದು ಎಂತರ, ಜೈಲಿಂಗೆ ಹೋದ್ದು. ಕ್ರೀಡಾ ಕೂಟಲ್ಲಿ ಹಗರಣ ನಡೆಸಿ ಜಗತ್ತಿನ ಕ್ರೀಡಾ ವಲಯಲ್ಲಿ ನಮ್ಮ ದೇಶದ ಮರಿಯಾದೆ ತೆಗೆದ ಅಪಕೀರ್ತಿಯೂ ಅವಂದೆ. ಎನಗೆ ನೆಂಪು ಶಕ್ತಿ ಇಲ್ಲೆ ಹೇಳಿ ಹೇಳಿದರೂ ಕೋರ್ಟ್‌ ಕೇಳಿದ್ದಿಲ್ಲೆ. ಜಾಮೀನು ಇನ್ನೂ ಸಿಕ್ಕಿದ್ದಿಲ್ಲೆ.

~

ನಮ್ಮ ಕರ್ನಾಟಕ ವಿಚಾರ ಅಂತು ಚಿಂತಾಜನಕ. ಬಿಜೆಪಿ ಸರ್ಕಾರದ ಮೇಲೆ ಜೆನಂಗೊಕ್ಕೆ ಭಾರಿ ನಿರೀಕ್ಷೆ ಇದ್ದದು ಲೊಟ್ಟೆ ಅಲ್ಲ. ಆದರೆ ಈಗ ನೋಡಿ… ಅವಕ್ಕೆ ಭ್ರಮ ನಿರಸನ ಆಯಿದು. ಏವತ್ತಿಂಗೂ ಕೇಳದ್ದ ಹಗರಣಂಗಳ ಭ್ರಷ್ಟಚಾರಂಗಳ ಈ ಸರ್ಕಾರ ಮಾಡಿದ್ದು, ದೇಶದಕ್ಕೆ ಭ್ರಷ್ಟಾಚಾರಲ್ಲಿ ನಂ.೧ ಹೇಳ್ತ ಸ್ಥಾನ ಕರ್ನಾಟಕಕ್ಕೆ ಸಿಕ್ಕಿದ್ದು ಹೇಳ್ತದರ ಒಬ್ಬ ಜೆವಬ್ದಾರಿಯುತ ಪ್ರಜೆಯಾಗಿ ನಾಚಿಕೆಂದ ತಲೆ ತಗ್ಗಿಸಿಕೊಂಡು ಹೇಳೆಕ್ಕಾಯಿದು. ಅಭಿವೃದ್ಧಿ ಅಭಿವೃದ್ಧಿ ಹೇಳಿಗೊಂಡು ಒತ್ತರೆ ಕರ್ನಾಟಕದ ಭೂಮಿಯನ್ನೇ ನುಂಗಿ ಹಾಕಿದವನ್ನೇ. ಸ್ವಂತ ಗಿಸೆಂಗಳ ತುಂಬಿಸಿದ್ದವನ್ನೇ ಇವು. ಓಟು ಹಾಕಿದವ ನಿಜವಾಗಿಯೂ ಕಣ್ಣೀರು ಹಾಕುತ್ತಾ ಇದ್ದಂ.

ಹಾಂಗೆ ಹೇಳಿದ ಮಾತ್ರಕ್ಕೆ ಹಿಂದಿನ ಸರ್ಕಾರಂಗಳಲ್ಲಿ ಭ್ರಷ್ಟಾಚಾರ ಇತ್ತಿದಿಲ್ಲೆ ಹೇಳಿ ಅಲ್ಲ.  ಆದರೆ ಈ ಪ್ರಮಾಣಲ್ಲಿ ಇತ್ತಿದಿಲ್ಲೆ ಹೇಳ್ತದು ಸ್ಫುಟವಾದ ಸತ್ಯ. ಮಾಜಿ ಮುಖ್ಯಮಂತ್ರಿ ಆಂಡ್‌ ಪಾರ್ಟಿ ಡಿನೋಟಿಫಿಕೇಷನ್‌ ಹಗರಣಲ್ಲಿ ಸಿಕ್ಕಿ ಒಳ ಹೋಗಿ ಹೆರ ಬಂದರೆ, ಬಳ್ಳಾರಿಲಿ ಗುಡ್ಡೆಯ ಗರ್ಪಿ ರೆಡ್ಡಿ ಒಳ ಇದ್ದದಾ.. ಈಗ ನೋಡಿ ಸ್ವಾಭಿಮಾನದ ಲೆಕ್ಕಲ್ಲಿ  ಗುಡ್ಡೆ ಗರ್ಪಿದ ದೂಳಿಲ್ಲಿ ಓಟು ನಡೆತ್ತಾ ಇದ್ದು. ಎಂತ ಡೊಂಬರಾಟ ಇದು. ನಾಟಕವೊ..ಪ್ರಹಸವೊ… ಹಾಸ್ಯ ಕಾರ್ಯಕ್ರಮವೋ  ಒಂದೂ ಅರಡಿತ್ತಿಲ್ಲೆ.

~

ಇಷ್ಟೆಲ್ಲಾ ಆದರೂ ನಿರಾಶೆ ಆಯೆಕ್ಕೋಳಿ ಇಲ್ಲೆ. ಸತ್ಯಮೇವ ಜಯತೇ ಹೇಳ್ತ ಹಳೇ ಮಾತು ನಿಜ ಆವುತ್ತಾ ಇದ್ದು. ತಪ್ಪು ಮಾಡ್ತ ಇಪ್ಪವಕ್ಕೆ ನಿಧಾನವಾಗಿ ಶಿಕ್ಷೆ ಆವುತ್ತಾ ಇದ್ದು. ಅಷ್ಟರಮಟ್ಟಿಂಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಮಡುಗಲಕ್ಕು. ಕೇಂದ್ರದಲ್ಲಿ ಯಪಿಎ ಸರ್ಕಾರ ಇದ್ದರೂ ಕಲ್ಮಾಡಿ, ರಾಜಾ, ಕನಿಮೊಳಿ ಜೈಲಿಂಗೆ ಹೋಪದರ ತಪ್ಪುಸುಲೆ ಎಡಿಗಾಯಿದಿಲ್ಲೆ. ಕರ್ನಾಟಕಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕಟ್ಟಾ ನಾಯ್ಡು, ಅದರ ಮಗ ಜಗದೀಶ್‌, ಯಡಿಯೂರಪ್ಪ, ಜನಾರ್ದನ ರೆಡ್ಡಿ ಒಳ ಕೂಬದರ ತಪ್ಪುಸುಲೆ ಎಡಿಗಾಯಿದಿಲ್ಲೆ. ಇವರಲ್ಲಿ ಕೆಲವು ಜೆನ ಕೆಲವೇ ದಿನಲ್ಲಿ ಹೆರ ಬಂದಿಕ್ಕು. ಆದರೆ ಒಂದರಿ ಆದರೂ ಒಳ ಕೂಯಿದವೆಲ್ಲೆಯಾ ಅದು ನಮ್ಮ ಬಲಿಷ್ಠ ನ್ಯಾಯ ವ್ಯವಸ್ಥೆ ಎತ್ತಿ ತೋರುಸುತ್ತು. ಜೈಲಿಲಿಪ್ಪ ಒಳುದವೂ ಹೆರ ಬಕ್ಕು. ಆದರೆ ಆರೋಪ ಸಾಬೀತಾದರೆ ಅವು ಮತ್ತೆ ಒಳ ಕೂರೆಕ್ಕಾವ್ತು.

ಹಠಾತ್‌ ಆಗಿ ನಮ್ಮ ನ್ಯಾಯವ್ಯವಸ್ಥೆಗೆ ಇಷ್ಟು ಬಲ ಬಂದದು ಹೇಂಗೆ? ಕೆಲವು ಜಡ್ಜಂಗ ನ್ಯಾಯಪರವಾಗಿ ಇದ್ದವು. ಅಪರಾಧಿ ಆರೇ ಆಗಿದ್ದರು ಅವಕ್ಕೆ ಶಿಕ್ಷೆ ಅಪ್ಪಲೇ ಬೇಕು ಹೇಳ್ತ ತತ್ವಂಗಳ ಆಧಾರಲ್ಲೆ ಅವು ಕೆಲಸ ಮಾಡುವವು. ಇದಲ್ಲದೇ ನಮ್ಮ ಅಣ್ಣಾ ಹಜಾರೆ ಅಜ್ಜನ ಹೋರಾಟವು ಇದಕ್ಕೆ ಕಾರಣ ಆದಿಪ್ಪಲೂ ಸಾಕು. ಭ್ರಷ್ಟಾಚಾರದ ವಿರುದ್ಧ ಜೆನಂಗಳೂ ಜಾಗೃತ ಆಯಿದವು. ಕಾಲ ಮೊದಲಾಣ ಹಾಂಗೆ ಇಲ್ಲೆ. ಜೆನಂಗ ಎದ್ದು ನಿಂದರೆ ಏವ ವ್ಯವಸ್ಥೆಯನ್ನೂ ಬದಲಾಯಿಸಲಕ್ಕು. ಆ ಮನಸ್ಸು ಜೆನಂಗೊಕ್ಕೆ ಬೇಕಷ್ಟೆ.

ಅಕೇರಿಗೆ: ಕುಟ್ಟುತ್ತ ಕಡಂದುಳುಗಳ ಕೊಲ್ಲಲ್ಲೆ/ಅಟ್ಟುಸಲೆ ಕಸ್ತಲಪ್ಪಗ ದೊಂದಿ ಹಿಡ್ಕೊಂಡು ಜೋರು ಹೊಗೆ ಹಾಕಿದರೆ ಆವ್ತು.

ದೊಂದಿ: ನಾವು. ಹೊಗೆ: ನಾವು ಹಾಕುವ ಓಟು. ಕಸ್ತಲೆ: ಚುನಾವಣೆ ಸಂದರ್ಭ. ಎಂತ ಹೇಳ್ತಿ…?

ಒಳ ಹೋದ ಕಡಂದುಳುಗ ಹೆರ ಬಾರದ್ದೇ ಇರಲಿ... ಹೆರ ಬಂದವು ಮತ್ತೆ ಹೋಗಲಿ.., 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಅನು ಉಡುಪುಮೂಲೆ

  ನಿ೦ಗ ಹೇಳಿದ ವಿಷಯಕ್ಕೆ ನೂರಕ್ಕೆ ನೂರ ಒಂದು ಮಾರ್ಕು….

  [Reply]

  ಡೈಮಂಡು ಭಾವ

  ಸೂರ್ಯ Reply:

  ಅನು ಅಕ್ಕಾ ಒಪ್ಪಕ್ಕೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಲೇಖನ ಇಷ್ಟ ಆತು…

  “ಸತ್ಯಮೇವ ಜಯತೇ ಹೇಳ್ತ ಹಳೇ ಮಾತು ನಿಜ ಆವುತ್ತಾ ಇದ್ದು…”. “ಭ್ರಷ್ಟಾಚಾರದ ವಿರುದ್ಧ ಜೆನಂಗಳೂ ಜಾಗೃತ ಆಯಿದವು. ಕಾಲ ಮೊದಲಾಣ ಹಾಂಗೆ ಇಲ್ಲೆ. ಜೆನಂಗ ಎದ್ದು ನಿಂದರೆ ಏವ ವ್ಯವಸ್ಥೆಯನ್ನೂ ಬದಲಾಯಿಸಲಕ್ಕು. ಆ ಮನಸ್ಸು ಜೆನಂಗೊಕ್ಕೆ ಬೇಕಷ್ಟೆ”… ನಾವೆಲ್ಲ ಒಂದಾಗಿ ರಾಮ ರಾಜ್ಯವ ಕಟ್ಟುವ…

  [Reply]

  ಡೈಮಂಡು ಭಾವ

  ಸೂರ್ಯ Reply:

  ಒಪ್ಪ ಕೊಟ್ಟದಕ್ಕೆ ಧನ್ಯವಾದ
  ರಾಮ ರಾಜ್ಯ ಕಟ್ಟುವ ಪ್ರಯತ್ನ ಮಾಡುವಾ ….

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ನ್ಯಾಯವಾದ ಮಾತು,ಕೆಪ್ಪಣ್ಣಾ.
  ತಪ್ಪು ನಮ್ಮದೇ. ಶತಮಾನ೦ಗಳಲ್ಲಿ ನಾವು,ಭಾರತೀಯರು ಬೇರೆಯವರಿ೦ದ ಆಳುಸಿಗೊ೦ಡು ಬದುಕ್ಕುಲೆ ಅಭ್ಯಾಸ ಮಾಡಿದ್ದೆಯ°.ಮದಲು ರಾಜ೦ಗಳ ಆಳ್ವಿಕೆ,ಮತ್ತೆ ಬ್ರಿಟಿಷರದ್ದು.ಈಗ ಸ್ವಾತ೦ತ್ರ್ಯ ಸಿಕ್ಕಿದ ಮೇಲೆ ಪ್ರಜಾಪ್ರಭುತ್ವದ ಹೆಸರಿಲಿ ಈ ನಾಯಕರ ಕಾರ್ಬಾರು.
  ಕಸ್ತಲೆ ಅಪ್ಪಗ ದೊ೦ದಿ ಹಿಡುದು ಕಡ೦ದಲೆಗಳ ಅಟ್ಟುಸುವದರ ಬಿಟ್ಟು ಕಸ್ತಲೆಲಿ ಕ೦ಡ ಭಾವಿಗೆ ಹಗಲು ಹೋಗಿ ಬೀಳದ್ದರೆ ಸಾಕು !!

  [Reply]

  ಡೈಮಂಡು ಭಾವ

  ಸೂರ್ಯ Reply:

  ಭಾವ ಕೊಶಿ ಆತು ನಿಂಗಳ ಒಪ್ಪ ಕಂಡು…ನಾವು ಜಾಗೃತಲ್ಲಿದ್ದರೆ, ಹಗಲು ಬಾವಿಗೆ ಬೀಳುವ ಸಾಧ್ಯತೆಯೇ ಇಲ್ಲನ್ನೆ ಭಾವ :)

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಭ್ರಷ್ಟಾಚಾರದ ವಿರುದ್ಧ ಜೆನಂಗಳೂ ಜಾಗೃತ ಆಯಿದವು. ಕಾಲ ಮೊದಲಾಣ ಹಾಂಗೆ ಇಲ್ಲೆ. ಜೆನಂಗ ಎದ್ದು ನಿಂದರೆ ಏವ ವ್ಯವಸ್ಥೆಯನ್ನೂ ಬದಲಾಯಿಸಲಕ್ಕು. ಆ ಮನಸ್ಸು ಜೆನಂಗೊಕ್ಕೆ ಬೇಕಷ್ಟೆ.}..ಅಪ್ಪು ಕಾದು ನೋಡುವೋ

  ಓಯ್..ಲಾಯ್ಕ ಬರೆತ್ತಿ .

  [Reply]

  ಡೈಮಂಡು ಭಾವ

  ಸೂರ್ಯ Reply:

  ಮಾವ ನಿಂಗಳ ಒಪ್ಪಕ್ಕೆ ಧನ್ಯವಾದಂಗೊ.. ಏನೋ ಬರವ ಸಣ್ಣ ಪ್ರಯತ್ನ ಎನ್ನದು.. ನಿಂಗಳಂತ ಹಿರಿಯರ ಆಶೀರ್ವಾದ ಬೇಕಿದಾ…

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಬ್ರಷ್ಟಾಚಾರ ಇಲ್ಲದ್ದ ರಾಜಕಾರಣವ ಜಾನ್ಸುಲೆ ಕೂಡಾ ಎಡಿಯದ್ದ ಪರಿಸ್ಥಿತಿ ಬಯಿಂದು.
  ಜೆನಂಗೊ ಜಾಗೃತರಾಯಿದವು. ಹಾಂಗಾಗಿಯೇ ಇದೆಲ್ಲಾ ಹೆರ ಬತ್ತಾ ಇದ್ದು.
  ಮಾಹಿತಿ ಹಕ್ಕು ಕಾಯಿದೆಂದಾಗಿ (Right to Information Act), ಕೆಲವೊಂದು ಹಗರಣಂಗೊ ಹೆರ ಬತ್ತಾ ಇದ್ದು.

  [Reply]

  ಡೈಮಂಡು ಭಾವ

  ಸೂರ್ಯ Reply:

  ಅಪ್ಪಚ್ಚಿ ಧನ್ಯವಾದ ಒಪ್ಪಕ್ಕೆ..ನಿಂಗಳ ಮಾತು ಅಕ್ಷರಶಃ ಸತ್ಯ.. ಆ ಕಾನೂನು ಬಂದು ತುಂಬಾ ಸಕಾಯ ಆಯಿದು…

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಬೆಲ್ಲಲ್ಲಿ ಕಡೆ ಕೊಡಿ ಇದ್ದೋ ಹೇಳಿ ಹೇಳುತ್ತಾಂಗೆ ರಾಜಕಾರಣಲ್ಲಿ ಶುದ್ದರಿದ್ದವೋ ಹೇಳಿ ಕೇಳುವಾಂಗೆ ಆಯ್ದೀಗ. ಇಲ್ಲ್ಯೋ ಕೇಳಿರೆ ಎಲ್ಯೋ ಒಬ್ಬ ಇದ್ದ ಹೇಳಿ ಇಪ್ಪಲೂ ಸಾಕು. ಆದರೆ ಈ ಹಗರಣದ ತುಲಾಭಾರಲ್ಲಿ ಅದು ತೂಕ ಕಳಕ್ಕೊಳ್ಳುತ್ತು.

  ಚಿಂತನೆ ಲಾಯಕ ಆಯ್ದು . ಪರಿಸ್ಥಿತಿ ಖಂಡಿತವಾಗಿಯೂ ಬದಲಾಯೇಕು.

  [Reply]

  ಡೈಮಂಡು ಭಾವ

  ಸೂರ್ಯ Reply:

  ಅದಾ ಚೆನ್ನೈವಾಣಿ ಬಂತು…:)
  ಏಕೆ ಬೈಂದಿಲ್ಲೆ ಹೇಳಿ ಕಾದುಗೊಂಡು ಇತ್ತಿದೆ…
  ಒಪ್ಪ ಕಂಡು ಕೊಶಿ ಆತಿದಾ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಚೆನ್ನೈ ಬಾವ°ಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಸುವರ್ಣಿನೀ ಕೊಣಲೆಸುಭಗಶ್ರೀಅಕ್ಕ°ಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಸಂಪಾದಕ°ಜಯಶ್ರೀ ನೀರಮೂಲೆಬೊಳುಂಬು ಮಾವ°ಕೆದೂರು ಡಾಕ್ಟ್ರುಬಾವ°ವೇಣೂರಣ್ಣಶಾಂತತ್ತೆಮಾಷ್ಟ್ರುಮಾವ°ಪುತ್ತೂರುಬಾವಅಕ್ಷರ°ಅಜ್ಜಕಾನ ಭಾವಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆಡಾಗುಟ್ರಕ್ಕ°ದೀಪಿಕಾನೀರ್ಕಜೆ ಮಹೇಶಚೂರಿಬೈಲು ದೀಪಕ್ಕಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ