Oppanna.com

ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ?

ಬರದೋರು :   ಡೈಮಂಡು ಭಾವ    on   29/05/2019    1 ಒಪ್ಪಂಗೊ

ಡೈಮಂಡು ಭಾವ

ಈ ಸಮಯಲ್ಲಿ ಮಸರು ಬೇಡ, ಮಜ್ಜಿಗೆಯೇ ಆಯೆಕ್ಕು ಹೇಳಿ ನ್ಯಾಚುರೋಪತಿ ಡಾಕ್ಟ್ರು ಹೇಳಿತ್ತಿದು. ಎಂಡಿ (ಮನೆ ದೇವರು) ಊರಿಂಗೆ ಹೋದ ಲಾಗಾಯ್ತಿಂದಲೂ ನವಗೆ ನಂದಿನಿ ಮೊಸರೇ.
ಈಗಿನ್ನು ಡಾಕ್ಟ್ರು ಹೇಳಿದ ನಂತರ ಉಪಾಯ ಇಲ್ಲೆ.

ನಂದಿನಿ ಚೇತೋಹಾರಿ ಮಜ್ಜಿಗೆಲಿ ಸುದರ್ಸಿಕ್ಕುವೋ° ಹೇಳಿ ಗ್ರೇಶಿದ್ದದು. ಅದರಲ್ಲಿ ಯಾವ “ಚೇತನ” ವೂ ಇಲ್ಲೆ‌ ಹೇಳಿ ಒಂದೇ ಮಾತಿಲ್ಲಿ ಡಾಕ್ಟ್ರು ಖಂಡ ತುಂಡವಾಗಿ ಹೇಳಿತ್ತಿದು.

ಇನ್ನು ಮಾಡುದೆಂತರ? ನಂದಿನಿ ಪಾರ್ಲರಿಂಗೆ‌ ಹೋಗಿ ಒಂದು ಲೀಟರು ಶುಭಮ್ ಹಾಲು ತಂದು ಸಿಮ್ಮಿಲಿ ಮಡಗಿ ಕೊದಿಶಿ ಲಾಯ್ಕ ಕೆನೆ‌ ಬಂದ ನಂತರ (ಕೆನೆ ಲಾಯ್ಕ ಇದ್ದರೆ ಬೆಣ್ಣೆ ಲಾಯ್ಕ ಬತ್ತು) ಸ್ಟೌವ್ ನಂದಿಸಿ, ಕಸ್ತಲೆ ವರೇಂಗೆ ಹಾಂಗೆ ಮಡುಗಿ, ಹೊತ್ತೋಪ್ಪಗ ಆಫೀಸಿಂದ ಬಂದ ನಂತರ ಕಾಲು ಲೀಟರ್ ನಂದಿನಿ ‌ಮಸರಿನ ಅರ್ಧ ಭಾಗ‌ ಹೆಪ್ಪು ಹಾಕಿತ್ತು. ಇಂದು ಉದಿಯಪ್ಪಗ‌ ಎದ್ದು ನೋಡ್ತೆ ಗಟ್ಟಿ ಮಸರು ಆಯಿದು.

ಮೋಟಾರು ಮಥನಲ್ಲಿ ಕಡದಪ್ಪಗ ಬೆಣ್ಣೆ ತೇಲುಲೆ ಶುರು ಆತು. ಅದು ರಜ್ಜ ಗಟ್ಟಿ ಆತು ಹೇಳಿ ಅಪ್ಪಗ ಮಂತು ತೆಗದು, ಅದರಲ್ಲಿ (ಮಂತಿಲ್ಲಿ) ಅಂಟಿದ್ದ ಬೆಣ್ಣೆಯ ತೆಗದು ಒಂದು ನೀರಿನ ಪಾತ್ರಕ್ಕೆ‌ ಹಾಕಿತ್ತು. ನಂತರ ಮಜ್ಜಿಗೆ ಅಳಗೆಲಿ ಮೇಲೆ ತೇಲ್ತಾ ಇಪ್ಪ ಬೆಣ್ಣೆಯ ತೆಗತ್ತದು (ಕೂಡ್ತದು) ರಜ್ಜ ನಾಜೂಕಿನ ಕೆಲಸ. ಅಳಗೆಯ ರಜ್ಜ ಬಗ್ಗುಸಿಕ್ಕಿ ಬೆಣ್ಣೆಯ ಒಂದೇ ಹೊಡೆಂಗೆ‌ ಕೂಡಿಸಿ ಅಡಿಯಾಣ ಹೊಡೆಂದ ಕೈ ಹಾಕಿ ಅಂಗೈಲಿ ಹಿಡಿದು ಅರುಶುತ್ತ ರೀತಿಲಿ ಕೈಯ ಎರಡು ಮೂರು ಸರ್ತಿ ಮೇಲೆ ಕೆಳ ಮಾಡಿ ಬೆಣ್ಣೆಯ ನಿಧಾನಕ್ಕೆ ಹಾರ್ಸಿ ಅದರ ಹದಾ ಮುದ್ದೆಯಾಂಗೆ ಮಾಡಿ ನೀರಿನ ಪಾತ್ರಕ್ಕೆ ಬಿಟ್ಟಿಕ್ಕುದು.

ಅಳಗೆಲಿಪ್ಪ ಮಜ್ಜಿಗೆಯ ಬೇರೆ ಪಾತ್ರಕ್ಕೆ ಎರದು, ಅಳಗೆಗೆ ರಜ್ಜ ನೀರು ಹಾಕಿ ಸ್ಟೌವ್ವಿಲ್ಲಿ ಮಡಗಿ ಬೆಶಿ ಮಾಡಿ, ಮಂತನ್ನೂ ಅದರಲ್ಲಿ ಅದ್ದಿಯಪ್ಪಗ ಪಸೆ ಬಿಡ್ತದಾ. ನಂತರ ಅಳಗೆಯ ಲಾಯ್ಕ ತೊಳದಿಕ್ಕಿ ಕರೆಲಿ ಕವುಂಚಿ ಮಡುಗುತ್ತದು.

ಅತ್ಲಾಗಿ‌ ನೀರಿಲ್ಲಿ ಹಾಕಿದ ಬೆಣ್ಣೆಯ ಇನ್ನೊಂದರಿ‌ ಸರಿಯಾಗಿ ಕೂಡಿ, ಪಾತ್ರದ ನೀರು ಬದಲಿಸಿ ಫ್ರಿಜ್ಜಿನೊಳ ಮಡುಗಿದರೆ, ಒಂದು ಮಟ್ಟಿನ ಕೆಲಸ ಆತು.

ಹೆಮ್ಮಕ್ಕ ಯಾವಾಗಳೂ ‘ಎನಗೆ‌ ಮಸರು ಕಡದು ಬೆಣ್ಣೆ ‌ಕೂಡ್ಳೆದ್ದು’ ಹೇಳಿ ಗೌಜಿ ಮಾಡುವಾಗ ಎನಗೆ ಗ್ರೇಶಿ ಹೋಪದು ‘ಎಂತ ಇದ್ದಪ್ಪಾ ಅದರಲ್ಲಿ’ ಹೇಳಿ.

ಈಗ ಎನಗೆ‌ ಸ್ವತಃ ಗೊಂತಾತು ಎಂತದೂ ಇಲ್ಲೆ ಇದರಲ್ಲಿ ಹೇಳಿ 😀

✍ ಡಿಬಿವಿ

ನಂದಿನಿ ಮೊಸರು

One thought on “ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ?

  1. ನಂದಿನಿ ಮೊಸರು ತಂದು ಉಂಡಪ್ಪಗ, ಜ್ಞಾನೋದಯ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×