Oppanna.com

ಭೋಪಾಲದ ಗ್ಯಾಸಿನ ಕತೆ.

ಬರದೋರು :   ಕೊಳಚ್ಚಿಪ್ಪು ಬಾವ    on   20/06/2010    11 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ಮೊನ್ನೆಂದ ಎಲ್ಲ ಪೇಪರು ,ಟೀ.ವಿ. ಲಿ ಎಲ್ಲದರಲ್ಲು ಭೋಪಾಲ ಭೋಪಾಲ ಹೇಳಿ ಕೇಳಿ ಸಾಕದವಕ್ಕೆ ಭೋಪಾಲದ ಕತೆ ಎಂತರ ಹೇಳಿ ಹೇಳುವ ಮನಸ್ಸಾವುತ್ತ ಇದ್ದು.
ಭೋಪಾಲ ಭಾರತದ ಮಧ್ಯಭಾಗಲ್ಲಿ ಇಪ್ಪ ಮಧ್ಯಪ್ರದೇಶದ ರಾಜಧಾನಿ.
ಅಲ್ಲಿ ಮೊದಲಿಂದಲೂ ಫ್ಯಾಕ್ಟರಿ ಎಲ್ಲ ಇತ್ತು. ಸ್ವಾತಂತ್ರ್ಯ ಬಪ್ಪ ಕಾಲಕ್ಕೆ ನವಾಬ ಆಳಿಯೊಂಡು ಇದ್ದ ರಾಜ್ಯ ಆಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ದೇಶಲ್ಲಿ ವಿದೇಶಲ್ಲಿ ಆದಾಂಗೆ ಅಭಿವೃದ್ಧಿ ಆಯೆಕ್ಕು, ನಮ್ಮಲ್ಲಿ ತಿಂಬಲೆ ಎಲ್ಲರಿಂಗೂ ಅನ್ನ ಇರೆಕ್ಕು ಹೇಳಿ ಸರಕಾರ ಹಸಿರು ಕ್ರಾಂತಿ ಕಾರ್ಯಕ್ರಮ ಮಾಡಿತ್ತು.
ಹಸಿರು ಕ್ರಾಂತಿ ಹೇಳಿರೆ ರಾಸಯನಿಕ , ಕೀಟನಾಶಕ ,ಮತ್ತೆ ಹೊಸ ತಂತ್ರಜ್ಞಾನ ಉಪಯೋಗ ಮಾಡಿ ಹೆಚ್ಚು ಕೃಷಿ ಉತ್ಪಾದನೆ ಮಾಡ್ತದು. ಕೃಷಿಗೆ ಬಳಕೆ ಮಾಡ್ತ ರಾಸಾಯನಿಕ ಕೀಟನಾಶಕಗಳಲ್ಲಿ ಸೆವಿನ್ ಒಂದು.

Burial of an unknown child, Bhopal 1984 This unknown child has become the icon of the world's worst industrial disaster, caused by the U.S. chemical company, Union Carbide. No one knows his parents, and no one has ever come forward to 'claim' this photograph. ©RAGHU RAI/GREENPEACE
ಭೋಪಾಲಲ್ಲಿ ಸತ್ತ ಬಾಬೆ – ©RAGHU RAI/GREENPEACE

ಆ ಸೆವಿನ್ ಭಾರತ ಬೇರೆ ದೇಶಂದ ಆಮದು ಮಾಡುವ ಬದಲು , ಯುನಿಯನ್ ಕಾರ್ಬೈಡ್ ಕಂಪನಿ ಭಾರತಲ್ಲೇ ತಯಾರಿಮಾಡಿಕೊಡ್ಲೆ ಮುಂದೆ ಬಂತು.
ಅದಕ್ಕೆ ಭೋಪಾಲಲ್ಲಿ ಜಾಗೆ ಕೊಟ್ಟು ಫ್ಯಾಕ್ಟರಿ ಶುರುಮಾಡ್ಲೆ ಜಾಗೆ ಕೊಟ್ಟವು. ಆ ಜಾಗೆ ಭೋಪಾಲದ ಮಧ್ಯಭಾಗಲ್ಲಿ ಇಪ್ಪ ಕೊಳಚೆ ಪ್ರದೇಶಲಿ ಇತ್ತು. ಅದರ ಸುತ್ತಮುತ್ತ ಇದ್ದ ಜಾಗೆಲಿ ಒಂದು ಮುಖ್ಯವಾದ್ದು ಓರಿಯಾ ಬಸ್ತಿ.
ಒರಿಸ್ಸಲ್ಲಿ ಬರಗಾಲ ಇದ್ದಿಪ್ಪಗ ಭೋಪಾಲಕ್ಕೆ ಕೆಲಸ ಹುಡುಕಿ ಬಂದ ಒರಿಸ್ಸಾದ ಜೆನಂಗೋ ಎಲ್ಲ ಒಟ್ಟಿಂಗೆ ಇದ್ದ ಜಾಗ ಅದು.
1969 ರಲ್ಲಿ ಶುರುವಾದ ಫ್ಯಾಕ್ಟರಿ ತುಂಬಾ ಜೆನಕ್ಕೆ ಕೆಲಸ ಕೊಟ್ಟತ್ತು. ಆ ಫ್ಯಾಕ್ಟರಿಲಿ ತಯಾರಾದ ಕೀಟನಾಶಕವ ಬಳಕೆ ಮಾಡಿ ತುಂಬಾ ಜೆನ ರೈತರು ಒಳ್ಳೆ ಕೃಷಿ ಮಾಡಿದವು. ರಾಸಾಯನಿಕ ಮಾಡ್ತ ಫ್ಯಾಕ್ಟರಿ ಅದರ ಯಾವಾಗಲೂ ಮನಾರಲ್ಲಿ ಇರೆಕ್ಕದ.
ಇನ್ನೆಂತಾರು ಹೆಚ್ಚಿಕಮ್ಮಿ ಅಗದ್ದಾಂಗೆ. ಈ ಸೆವಿನ್ ತಯಾರು ಮಾಡ್ಲೆ ಬೇಕಾದ ರಾಸಾಯನಿಕಲ್ಲಿ ಒಂದು , methyl isocyanate (MIC)( ಮೀಥೈಲ್ ಐಸೋ ಸಯೋನೆಟ್) .
ಈ ಮೀಥೈಲ್ ಐಸೋ ಸಯೋನೆಟ್ ಭಯಂಕರದ ದ್ರಾವಣ, ನೀರಿನ ಒಟ್ಟಿಂಗೆ ಸೇರಿರೆ ಅದು ಇನ್ನು ವಿಷಯುಕ್ತ ಗ್ಯಾಸ್ ಉತ್ಪಾದನೆ ಮಾಡ್ತು.ಆ ಗ್ಯಾಸ್ ಎಷ್ಟು ವಿಷ ಹೇಳಿರೆ ಅದರ ಸಂಪರ್ಕಕ್ಕೆ ಬಂದರೆ ಜೀವಕ್ಕೆ ತೊಂದರೆ ಅವುತ್ತು.
ನಮ್ಮ ಶ್ವಾಸಕೋಶಕ್ಕೆ ವಿಪರೀತ ತೊಂದರೆಕೊಟ್ಟು ಕೊಲ್ಲುವ ವಿಷಾನಿಲ. ಇಂತ ವಿಷಾನಿಲವ ತುಂಬುಸಿ ಮಡುಗುಲೆ ಅದರದೇ ಆದ ವಿಧಾನಂಗೋ ಇದ್ದು.
ಅದರೆಲ್ಲ ಗೋಷ್ಠಿಗೆ ಮಡುಗದ್ದೇ, ಸಾಧಾರಣ ಸ್ಟೀಲಿನ ಡ್ರಮ್ ಲಿ ತುಂಬುಸಿ ಮಡುಗಿದವು.
1984ರ ದಶಂಬರ 2 ನೇ ತಾರೀಖು ರಾತ್ರೆ 10 ಘಂಟೆಗೆ ಯಾವಗಳಾಣ ಹಾಂಗೆ ರಾತ್ರಿ ಫ್ಯಾಕ್ಟರಿ ಲಿ ತೋಳವಲೆ ಶುರು ಮಾಡಿದವು, ಆ ಸಮಯಲ್ಲಿ ಅಜಾಗರೂಕತೆಲಿ ನೀರು ಹೋಗಿ ಟ್ಯಾಂಕ್ 610ಕ್ಕೆ ಹರಿವಲೆ ಶುರು ಆವುತ್ತು. ಅದರಲ್ಲಿ ಈ MIC (ಮೀಥೈಲ್ ಐಸೋ ಸಯೋನೆಟ್) ಇತ್ತು.
ಅದು ನೀರಿನ ಒಟ್ಟಿಂಗೆ ಕಲಸಿಯೋಂಡು ವಿಷಾನಿಲ ಬಿಡುಗಡೆ ಮಾಡ್ಲೆ ಶುರು ಮಾಡ್ತು. 10:30 ಕ್ಕೆ ಫ್ಯಾಕ್ಟರಿ ಸುತ್ತಮುತ್ತ ಇಪ್ಪ ಜೆನಂಗೊಕ್ಕೆ ಕಣ್ಣುರಿ, ಕೆಮ್ಮು,ದಮ್ಮುಗಟ್ಟುಲೆ ಶುರುಆವುತ್ತು. ಆ ರಾತ್ರಿಸುಮಾರು 42 ಟನ್ MIC ನೀರಿನೊಟ್ಟಿಂಗೆ ಸೇರಿ ವಿಷಾನಿಲ ಬಿಡುಗಡೆ ಆಗಿ 15000 -30000 ಜೆನ ಪ್ರಾಣ ಕಳಕ್ಕೊಳ್ತವು. ಆದರೆ ಆಗಾಣ ಮಧ್ಯ ಪ್ರದೇಶ ಸರಕಾರ ಬರೇ 3,787 ಮಾತ್ರ ಸತ್ತದ್ದು ಹೇಳಿ ಅಧಿಕೃತ ವಿವರ ಕೊಟ್ಟಿದ್ದು.
ಆ ಸಮಯಲ್ಲಿ ಭೋಪಾಲಲ್ಲಿ ಇದ್ದ ಡಾಕ್ಟರಗೊಕ್ಕೆ ಎಂತ ಮದ್ದು ಕೊಡೆಕ್ಕು ಹೇಳಿ ಗೊಂತಿತ್ತಿಲ್ಲೆ. ಈ ಕೆಟ್ಟ ಘಳಿಗೆಲಿದೆ ಕೆಲವು ಒಳ್ಳೆಯವು ಅವರ ಕೈಲಿ ಆದ ಕೆಲಸ ಮಾಡಿದವು.
ಉದಾಹರಣೆಗೆ ಆ ರಾತ್ರಿ ಯಾವಾಗ ಹೀಂಗೆ ಅಯಿದು ಹೇಳಿ ಗೊಂತಾದ ಕೂಡಲೆ ಯಾವ ರೈಲಿಂಗೂ ನಿಂಬಲೆ ಅವಕಾಶ ಕೊಡದ್ದೇ, ಅದಷ್ಟೂ ರೈಲುಗಳ ಭೋಪಾಲಕ್ಕೆ ಬರದ್ದ ಹಾಂಗೆ ಮಾಡ್ತ.
ಈ ದುರಂತ ಆದ ಮೇಲೆ ನಡದ್ದು ಇನ್ನೂಘೋರ.
ಆ ವಿಷಾನಿಲ ಸೇವನೆಯಿಂದ ಇದ್ದ ಜನಕ್ಕೆ ಆರೋಗ್ಯಕ್ಕೆ ತೊಂದರೆ ಆತು. ಆದರೆ ಆ ವಿಷಾನಿಲಂದ ಮುಂದಿನ ತಲೆಮಾರುಗೊದೆ Replica Rolex Watches ವಿಚಿತ್ರ ಖಾಯಿಲೆ ಒಟ್ಟಿಂಗೆ ಹುಟ್ಟುತ್ತಾ ಇದ್ದವು, ಕೆಲವಕ್ಕೆ ಪ್ರಾಯ 16 ಆದರೂ 6 ತಿಂಗಳ ಹಿಳ್ಳೆಹಾಂಗೆ ಮಾತಾಡುಲೆ ಬತ್ತಿಲ್ಲೆ, ಕೆಲವಕ್ಕೆ ಕಣ್ಣೇ ಇಲ್ಲೆ.
ಇದಕ್ಕೆ ಮುಖ್ಯ ಕಾರಣ ಕಾರ್ಖಾನೆಲಿ ಇದ್ದ ರಾಸಾಯನಿಕಂಗಳ ನೆಲಲ್ಲಿ ಹುಗುದವು, ಅದು ಮಳೆ ನೀರಿನೊಟ್ಟಿಂಗೆ ಸೇರಿ ಕುಡಿವ ನೀರಿನ ಸೇರುತ್ತಾ ಇದ್ದು.
ಇದರಿಂದಾಗಿ ಈಗಲೂ ಜೆನಕ್ಕೆ ಆರೋಗ್ಯದ ತೊಂದರೆ ಇದ್ದು.
ಮೊನ್ನೆ 7 ಜೂನ್ 2010ಕ್ಕೆ ಭೋಪಾಲದ ಕೋರ್ಟು ಈ ವಿಷಾನಿಲದ ನಂಬ್ರಲ್ಲಿ ತಿರ್ಮಾನ ಕೊಟ್ಟತ್ತು, ಬರೊಬ್ಬರಿ 25 ವರ್ಷ ಆದ ಮೇಲೆ.
five past midnight in bhopal ಪುಸ್ತಕದ ಮುಖಪುಟ
Five past midnight in bhopal – ಪುಸ್ತಕದ ಮುಖಪುಟ

7 ಜೆನ ಅಪಾದಿತರಿಂಗೆ ಕೊಟ್ಟ ಶಿಕ್ಷೆ 2 ವರ್ಷ ಜೈಲು ಮತ್ತೆ 1 ಲಕ್ಷ ದಂಡ. ಈ ವಿಪತ್ತಿಲಿ ಬದುಕಿ ಉಳಿದ ಪೀಡಿತರಿಂಗೆ 25000 ರುಪಾಯಿ ಪರಿಹಾರ ಧನ, ಸತ್ತವರ ಮನೆಯವಕ್ಕೆ 62000ರುಪಾಯಿ.
ಸಾವಿರಾರು ಜೆನರ ಪ್ರಾಣ ಹೋದದ್ದಕ್ಕೆ ಈ ಶಿಕ್ಷೆಯಾ?.
ಈ ವಿಪತ್ತಿನ ಬಗ್ಗೆ ಏರಡು ಜೆನ ಫ್ರಾನ್ಸಿನ ಪತ್ರಕರ್ತರು ಡೋಮೋನಿಕ್ ಲಾಪಿಯರ್ ಮತ್ತೆ ಜೋವಿಯರ್ ಮೋರೋ “Five Minutes Past Midnight in Bhopal” (ಭೋಪಾಲಲ್ಲಿ ಹನ್ನೆರಡು ಘಂಟೆ ಐದು ನಿಮಿಷ ಆಗಿತ್ತು).
ಅದರಲ್ಲಿ ಈ ದುರಂತ ಹೇಂಗೆ ಆತು? ಅದು ಅಪ್ಪಲೆ ಕಾರಣ ಎಂತೆಂತರ? ಆ ದುರಂತ ಆದ ಮೇಲೆ ಜೆನ ಹೇಂಗೆ ಅದರಿಂದ ತೊಂದರೆ ಅನುಭವಿಸಿದವು? ಆ ಜೆನ ಈಗ ಹೇಂಗೆ ಬದುಕಿಯೊಂಡು ಇತ್ತಿದ್ದವು.
ಈ ವಿಷಯಂಗಳ ಮನಮುಟ್ಟುವ ಹಾಂಗೆ ಬರದ್ದ. ಫ
್ರೆಂಚ್ ಪತ್ರಕರ್ತರಾದ್ರೂ ಈ ವಿಷ್ಯದ ಬಗ್ಗೆ ಅವು ಮಾಡಿಪ್ಪಶೋಧನೆ,ವಿಷಯ ಸಂಗ್ರಹ ಮೆಚ್ಚೆಕ್ಕಾದು.
ಈ ವಿಪತ್ತಿನ ಬಗ್ಗೆ ಜೆನರ ದೃಷ್ಟಿಕೋನಲ್ಲಿ ಬರದ್ದ ಈ ಪುಸ್ತಕವ ಎಲ್ಲರೂ ಓದೆಕ್ಕಾದ್ದು. ಓಂದು ವಿಪತ್ತಿಂದ ಹೇಂಗೆ ನಮ್ಮ ಸರಕಾರ ಪಾಠ ಕಲ್ತಿದಿಲ್ಲೆ ಅದು ಇನ್ನೂ ಜನರ ಸುರಕ್ಷತ್ ಬಗ್ಗೆ ಇನ್ನೂ ಯೋಚನೆ ಮಾಡದ್ದೇ ಇಪ್ಪದು ಒಂದು ಬೇಜಾರದ ವಿಷಯ.
ಅಲ್ಲಿ ಓರಿಸ್ಸಾಲ್ಲಿ ಕೀಟದ ಹಾವಳಿಯಿಂದ ಬೆಳೆನಾಶ ಆಗಿ ಕೆಲಸ ಹುಡುಕಿಯೊಂಡು ಭೋಪಾಲಕ್ಕೆ ಬಂದವು, ಕೀಟನಾಶಕದ ಫ್ಯಾಕ್ಟರಿಯ ಕಾರಣಂದ ಸತ್ತವು ಇದು ಬದುಕಿನ ವಿಪರ್ಯಾಸಲ್ಲಿ ಒಂದು.
ಆ ಪುಸ್ತಕ ಆನು ತುಂಬಾ ದಿನ ಹಿಂದೆ ಓದಿದ್ದೆ. ಮೊನ್ನೆ ಪೇಪರಿಲಿ ಭೋಪಾಲದ ಬಗ್ಗೆ ಓದಿದಾಗ ಇದೆಲ್ಲ ಬರವ ಮನಸಾತು.
ಈ ಲೇಖನಲ್ಲಿ ಇಪ್ಪ ಮೊದಲನೇ ಚಿತ್ರ : Burial of an unknown child, Bhopal 1984
This unknown child has become the icon of the world’s worst industrial disaster, caused by the U.S. chemical company, Union Carbide. No one knows his parents, and no one has ever come forward to ‘claim’ this photograph.
©RAGHU RAI/GREENPEACE

11 thoughts on “ಭೋಪಾಲದ ಗ್ಯಾಸಿನ ಕತೆ.

  1. ಕೊಳಚ್ಚಿಪ್ಪು ಭಾವ° ಬರದ್ದದು ಲಾಯಕ ಆಯಿದು.. ಭೋಪಾಲ ದ ಕತೆ ಓದುವಾಗ ನಿಜವಾಗಿ ಬೇಜಾರಾವುತ್ತು.. ಈ ರಾಜಕಾರಣಿಗ ಪೈಸೆಯ ಆಶೆಗೆ ಸಿಕ್ಕಿದವಕ್ಕೆ ಕಾರ್ಖಾನೆಗಳ ಅಥವಾ ಮನುಷ್ಯರಿಂಗೆ ಮಾರಕ ಅಪ್ಪಂಥ ವಿಷಯನ್ಗೊಕ್ಕೆ ಅನುಮತಿ ಕೊಟ್ಟು ಆ ಜನಂಗ ನಮ್ಮ ದೇಶದ ಅಮಾಯಕ ಜನಂಗಳ ಜೀವಕ್ಕೆ ಅಪಾಯ ಅಪ್ಪ ಹಾಂಗೆ ಆವುತ್ತದಾ.. ಜೀವನದ ದಾರಿ ಹುಡುಕ್ಕುಲೆ.., ತಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ಒಳ್ಳೆ ಬುನಾದಿ ಆಗಲಿ ಹೇಳುವ ಆಶೆಲಿ ಬಂದ ಜೆನಂಗ, ಮಕ್ಕ ಎಲ್ಲೋರೂ ಒಂದೇ ದಿನ, ಒಂದೇ ಸಮಯಲ್ಲಿ.. ಒಂದೇ ಹಾಂಗೆ ಸಮಾಧಿ ಆಯೆಕ್ಕಾಗಿ ಬಂದರೆ ಇದು ವಿಧಿಯ ವಿಪರ್ಯಾಸವುದೇ ಅಲ್ಲದಾ?
    ಈ ವಿಷಯಕ್ಕೆ ಸಂಬಂಧಿಸಿದ ಹಾಂಗೆ ಅಂದಿಂದ ಬತ್ತಾ ಇಪ್ಪ ಲೇಖನಂಗಳಲ್ಲಿ ಎಲ್ಲೋ ಓದಿದ ನೆಂಪು.. ಅಂದು ಈ ಘಟನೆ ನಡದಪ್ಪಗ.., ಮನೆಯ ಎದುರು ಸಗಣ ಸಾರ್ಸಿದ್ದ ಮನೆಯವಕ್ಕೆ ಎಂತ ತೊಂದರೆ ಆಯಿದಿಲ್ಲೇ ಹೇಳಿ… ಈ ವಿಷಯ ಸರಿಯಾ?

    1. ಈ ಪುಸ್ತಕಲ್ಲಿ ಸಗಣ ಸಾರ್ಸಿದ ಮನೆಯ ಬಗ್ಗೆ ಎಂತ ಬರದ್ದವಿಲ್ಲೆ. ಇನ್ನೂ ಕೆಲವರು ಅಗ್ನಿಕಾರ್ಯ ಮಾಡಿಯೊಂಡು ಇದ್ದ ಮನೆಯೋರು ಬದುಕಿ ಬಯಿಂದವಡ ಹೇಳಿಯೂ ಹೇಳ್ತವು . ಏನಗೆ ಗೊಂತಿಲ್ಲೆ. ಸತ್ಯವಾ ಸುಳ್ಳಾ ಹೇಳಿ.
      ಕೆಲವರ ಪ್ರಕಾರ ಈ ಸುದ್ದಿಗೊ ಸುಳ್ಳು ಪ್ರಚಾರಂಗೋ, ಕೆಲವರು ಇದರ ನಂಬುತ್ತವು. ಎನಗೆ ಮಾತ್ರ ಈ ಸಗಣ ಸಾರ್ಸಿದ ಮನೆಯ ಶುದ್ಧಿ ಸುಳ್ಳು ಹೇಳಿ ತೋರ್ತು.
      ಶರ್ಮಪ್ಪಚ್ಚಿಗೆ ಗೊಂತಿಕ್ಕೋ ಎನೋ.

      1. ಅಂಬಗ, ಇಷ್ಟೆಲ್ಲ ಅಪ್ಪಗ ಆ ಅಂಡರುಸನ್ ಅಗ್ನಿಕಾರ್ಯ ಮಾಡಿಗೊಂಡಿತ್ತೋ?
        ಉಮ್ಮಪ್ಪ! 🙁

      2. ಹಾಂಗೆಲ್ಲಾ ಬಂದದರ ಓದಿ ಗೊಂತಿದ್ದು.
        ಯಾವುದೇ ಘಟನಗೊ ನಡದಪ್ಪಗ ಅದಕ್ಕೆ ಹೀಂಗಿಪ್ಪ ಪ್ರಚಾರಂಗೊ ಎಲ್ಲ ಇಪ್ಪದು ಸಾಮಾನ್ಯ.
        ಮೀತೈಲ್ ಐಸೋ ಸಯನೇಟ್ (MIC) ಹಾಂಗಿಪ್ಪ ವಿಶವ ತಗ್ಗಿಸಲೆ ಇದೆಲ್ಲ ಸಾಕಕ್ಕು ಹೇಳಿ ಕಾಣುತ್ತಿಲ್ಲೆ.
        ಅದರ ವಾಸನೆ ಗೊಂತಪ್ಪಲೆ 2.1 ppm (parts per million)- ಹೇಳಿರೆ ಒಂದು ಮಿಲಿಯ ಲೀಟರ್ ಗಾಳಿಲಿ 2.1 ಲೀಟರ್ ನಷ್ಟು MIC ಇದ್ದರೆ ಸಾಕಾವುತ್ತು. 21 ppm ನಷ್ಟು MIC ಇದ್ದರೆ ಒಬ್ಬನ ಕೊಲ್ಲಲೆ ಸಾಕಾವುತ್ತು. WHO ನಿಗದಿ ಪಡಿಸಿದ ಸಾಂದ್ರತೆ 0.02 ppm (Tolerance Limit)
        42 ಟನ್ ವಿಷ ವಾತಾವರಣಕ್ಕೆ ಬಿಡುಗಡೆ ಅಪ್ಪಗ ಗಾಳಿಲಿ ಅದರ ಸಾಂದ್ರತೆ (concentration) ತುಂಬಾ ಜಾಸ್ತಿ ಇದ್ದಿಕ್ಕು. ಇಷ್ಟು ಜಾಸ್ತಿ ಇಪ್ಪದರ ಅಷ್ಟೊಂದು ಕಮ್ಮಿ ಮಾಡ್ಲೆ ಮೇಲೆ ಹೇಳಿದ ಕಾರಣಂಗೊ ಸಾಕಾಗ ಹೇಳಿಯೇ ಎನ್ನ ಅಭಿಪ್ರಾಯ. ಗಾಳಿಯ ದಿಕ್ಕು ಅವರ ಹೊಡೆಂಗೆ ಇಲ್ಲದ್ದೆ ಅವು ಬಚಾವ್ ಆದ್ದು ಆದಿಪ್ಪಲೂ ಸಾಕು. ಇಲ್ಲದ್ದರೆ ಕಟ್ಟು ಕತೆ ಆದಿಕ್ಕು.

  2. ಶುದ್ದಿ ಅಂತೂ ಬಾರಿ ಲಾಯಿಕಾಯಿದು ಭಾವ!
    ತುಂಬಾ ಬೇಜಾರದ ವಿಶಯ..
    ಹೇಳಿದಾಂಗೆ, ಬೋಪಾಲಿಲಿ ಗೇಸು ಹೊಟ್ಟಿದ್ದು ಹೇಳುವಗ ನೆಂಪಾತು – ಅಲ್ಲಿ ಬೆಳವದು ಬಟಾಟೆಯೇ ಅಲ್ಲದೋ?
    ನವಗೆ ಸರೀ ಅರಡಿಯ!

    1. ಅದು ಹಲಸಿನ ಬೇಳೆಯ ಕಾರಣಂದ ಹೇಳಿ ಒಪ್ಪಣ್ಣ ಅಜ್ಜಕಾನ ಭಾವಂಗೆ ಹೇಳಿಯೊಂಡು ಇತ್ತಿದ್ದ ಹೇಳಿ ಬೀಸ್ರೋಡು ಮಾಣಿ ಹೇಳಿದ.

  3. ಕೊಳಚಿಪ್ಪು ಬಾವ ಬರದ್ದು ಲಾಯ್ಕಾ ಆಯಿದು. ಅದು ಯೇವೊದೊ ಆಂಡರ್ಸನ್‌ ಹೇಳ್ತ ಮನುಷ್ಯ ಈಗ ಬಾರಿ ಸುದ್ದಿಲಿ ಇದ್ದು. ಅದು ಈ ಕಂಪೆನಿಯ ಹೆಡ್ಡ○ ಆಗಿತ್ತಡ ಅಂಬಗ, ಕೂಡ್ಲೆ ಅಮೆರಿಕಕ್ಕೆ ಓಡಿದ್ದಡ. ಮೊನ್ನೆ ನಂಬ್ರಕ್ಕೆ ಕೊಟ್ಟ ತೀರ್ಮಾನಲ್ಲಿ ಆ ಬಲಿಪ್ಪಂಗೆ ಏವ ಶಿಕ್ಷೆಯೂ ಕೊಟ್ಟಿದವಲ್ಲೆಡಾ.. ಹೀಂಗೆ ಆದರೆ ಹೇಂಗಕ್ಕು, ನಮ್ಮ ಕಾನೂನಿನಿಂದ ಕಳ್ಳಂಗ ಎಷ್ಟು ಬೇಗ ತಪ್ಪುಸುತ್ತವು.. ಬೇಜಾರಾವುತ್ತು ಬಾವ…
    ಸಕಾಲಿಕ , ಮಾಹಿತಿಪೂರ್ಣ ಲೇಖನ..ಹೀಂಗೆ ಬರಕ್ಕೊಂಡು ಇರಿ ಆತೋ ಏ○

  4. ಕೊಳಚ್ಚಿಪ್ಪು ಬಾವ..!! ಉತ್ತಮ ಬರಹ, ಒಳ್ಳೆ ಸಮಯಲ್ಲಿ.
    ಹಾಂಗಿರ್ತ ನಂಬ್ರಕ್ಕೆ ಮೊನ್ನೆ ತೀರ್ಪು ಬಂತಡ, ಬೋಪಾಲಲ್ಲಿಪ್ಪ ಚೌಕ್ಕಾರು ಮಾವ° ಹೇಳಿತ್ತಿದ್ದವು!
    ಕೇಳಿ ಎನಗೂ ಬೇಜಾರಾತು.
    ಬೋಪಾಲು, ಬೋಪಾಲು ಹೇಳಿ ಎಂಗಳ ಗೋಪಾಲುಮಾವ ಅಂದೇ ಹೇಳಿಗೊಂಡಿತ್ತರೂ,
    ಅದು ಹೇಂಗಾದ್ದು, ಎಂತಕೆ ಆದ್ದುಹೇಳ್ತದು ನವಗೆ ಗೊಂತಿತ್ತಿಲ್ಲೆ ಇದಾ –
    ಈ ಶುದ್ದಿ ಓದಿ ಅಪ್ಪಗ ಗೊಂತಾತು.
    ತುಂಬ ಕೊಶಿ ಆತು..

    1. ಎಂಗಳ ಬೇಂಕಿಲ್ಲಿ ಎಂಗಳ ಭೋಪಾಲ್ ಬ್ರಾಂಚ್ ಬಗ್ಗೆ ಮಾತಾಡುವಗ ಎನ್ನ ಕೆಮಿ ಕುತ್ತ ಆವುತ್ತು. ಎನ್ನನ್ನೇ ದಿನಿಗೇಳಿದವೋ ಹೇಳಿ ಒಂದು ಸಣ್ಣ ಕಂಫ್ಯೂಶನ್ನು ! ಈ ಲೇಖನ ಒಪ್ಪಣ್ಣಂಗೂ ಎನ್ನ ಒಂದರಿ ನೆಂಪು ಮಾಡಿತ್ತದ.
      ಕೊಳಚ್ಚಿಪ್ಪು ಭಾವನ ಲೇಖನ ಒಳ್ಳೆದಿತ್ತು. ಗ್ಯಾಸು ಲೀಕು ಆದ್ದರ ಸರಿಯಾದ ಕ್ರಮಲ್ಲೇ ವಿವರುಸಿದ್ದ. (ಅಂಬಗ ಟಿವಿ 9 ಇತ್ತಿಲ್ಲೆ ಅಲ್ಲದೊ. ಇದ್ದಿದ್ದರೆ ಇಡೀ ದಿನ ಅದೇ ವಿವರಣೆ ಕೊಡುತ್ತಿತವಾಯ್ಕು !). ದುರಂತದ ವಿಷಯವ ಸರಿಯಾಗಿ ಮತ್ತೊಂದರಿ ತಿಳುದು ಬಹಳ ಬೇಜಾರು ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×