Oppanna.com

ಆಧುನಿಕತೆಲಿ ಕವಲಾದ ಬದುಕಿನ ಕತೆ

ಬರದೋರು :   ಕೊಳಚ್ಚಿಪ್ಪು ಬಾವ    on   25/07/2010    11 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ಪರ್ವ-ಸಾರ್ಥ-ಆವರಣ-ಗೃಹಭಂಗ ಇಂತ ಅತ್ಯಂತ ಉತ್ತಮ ಪುಸ್ತಕಗಳ ಬರದ ಎಸ್.ಎಲ್.ಭೈರಪ್ಪನ ಹೊಸ ಕಾದಂಬರಿಯ ಹೆಸರು “ಕವಲು”. ಈ ಕಾದಂಬರಿ ಬತ್ತು ಹೇಳಿ ನಮ್ಮ ಒಪ್ಪಣ್ಣ ಮೊದಲೆ ಬರದ್ದ.ಮೊನ್ನೆ ಆ ಪುಸ್ತಕ ಓದಲೆ ಸಿಕ್ಕಿತ್ತು(ಸಿಕ್ಕಿತ್ತು ಹೇಳುದಕ್ಕಿಂತ ತೆಕ್ಕೊಂಡೆ ಹೇಳುದು ಸರಿಯಾಗಿರ್ತು) . ನಮ್ಮ ಬೈಲಿಲಿ ಒಂದು ಮಾಷ್ಟ್ರಮಾವನ ಮಗ ಅಮೇರಿಕಾಲ್ಲಿಪ್ಪವ ಮತ್ತೆ ಅಮೇರಿಕಾಲ್ಲಿಪ್ಪ ಪುತ್ತೂರು ಭಾವ ಇಬ್ಬರು ಎನಗೆ ಗೊಂತಿಪ್ಪಾಂಗೆ ಭೈರಪ್ಪನ ದೊಡ್ಡ ಅಭಿಮಾನಿಗೊ, ನಿಂಗೊಗೆ ಭೈರಪ್ಪನ ಯಾವುದೇ ಪುಸ್ತಕ ಎಲ್ಲಿಯೂ ಸಿಕ್ಕಿದಿಲ್ಲೆ ಹೇಳಿರೆ ಅವರಿಬ್ಬರತ್ರ ಕೇಳಿ ನಿಂಗೊಗೆ ಖಂಡಿತ ಸಿಕ್ಕುಗು.
ವರದಕ್ಷಿಣೆ ಕಿರುಕುಳದ ಆರೋಪಲ್ಲಿ ಜಯಕುಮಾರ್ ಹೇಳ್ತ ಉದ್ಯಮಿಯ ಪೋಲಿಸ್ ಸ್ಟೇಷನಿಗೆ ದಿನಿಗೇಳಿ ಕೋಣೆಗೆ ( ಬಂಧಿಸಿ ಜೈಲಿಂಗೆ) ಹಾಕುತ್ತ ಮೂಲಕ “ಕವಲು” ಕಾದಂಬರಿ ಶುರು ಆವುತ್ತು. ಮುಂದೆ ಒಂದು ಐವತ್ತು ಪುಟಲ್ಲಿ ಈ ಉದ್ಯಮಿಯ ಮೊದಲನೆ ಹೆಂಡತಿ, ಬುದ್ದಿ ಬೆಳೆಯದ್ದ ಮಗಳು, ಅವನ ಮೊದಲನೆ ಹೆಂಡತಿಯ ಸಾವು, ಎರಡನೇ ಮದುವೆ, ಎರಡನೇ ಹೆಂಡತಿ ಮಂಗಳೆಯ ಸ್ತ್ರೀ ವಿಮೋಚನಾ ಚಳುವಳಿಯ ಹಿನ್ನಲೆ,ಅವನ ಮದುವೆಯ ಹೇರಣ ಸಂಬಂಧ ಹೀಂಗೆ ಈ ಕತೆಯ ಎಲ್ಲಾ ಪಾತ್ರಗಳ ಪೂರ್ವಪರದ ವರ್ಣನೆ ನಡೆತ್ತು.

ಇಲ್ಲಿ ಇಷ್ಟೆಲ್ಲ ನಡಕ್ಕೊಂಡು ಇರೆಕ್ಕಾರೆ ಜಯಕುಮಾರನ ಎರಡನೇ ಹೆಂಡತಿ ಮಂಗಳೆಯ ಟೀಚರ್ ಇಳಾ ಮೇಡಮ್ ನ ಕತೆ ಶುರು ಆವುತ್ತು.ಇಳಾ ಮೇಡಮ್ ಮತ್ತೆ ಅದರ ಗಂಡ ಜಯಚಂದ್ರ ಅವರ ನಡುವೆ ನಡೆವ ವಿರಸ ,ಅವರ ಡೈವೋರ್ಸಿಂಗೆ ನಡೆವ ಜಗಳ,ಅದರ ನಡುವೆ ಸಿಕ್ಕಿ ಪರದಾಡುವ ಅವರ ಮಗಳು ಸ್ವೀಟಿ, ಈ ನಡುವೆ ಇಳಾ ಮೇಡಮ್ ಮತ್ತೆ ಒಬ್ಬ ಪ್ರಸಿದ್ದ ರಾಜಕಾರಣಿಯ ಸಂಬಂಧ ಹೀಂಗೆ ಕತೆ ಮುಂದೆ ಹೋವುತ್ತು. ಈ ಎರಡು ಕತೆ ಗುರು-ಶಿಷ್ಯೆಯದ್ದು ಅದರೂ ಅವೆರಡೂ ಅವರದ್ದೇ ಆದ ದಾರಿಲಿ ಸಾಗುತ್ತು. ಕೊನೆಯ ಕೆಲವು ಪುಟ ಬಿಟ್ಟರೆ ಬೇರೆಲ್ಲಿಯೂ ಸೇರ್ತಿಲ್ಲೆ.
ಜಯಕುಮಾರನ ಹೆಂಡತಿ ಅವನ ಮೇಲೆ ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಮಾಡ್ತದು, ಅದರ ಮೂಲಕ ಆ ಕಾನೂನಿನ ತಪ್ಪು ಉಪಯೋಗ ಮಾಡ್ತದು.ಈ ಕಾನೂನಿನ ಬೇಕಾರೆ ಹೇಂಗೆ ನಮ್ಮ ಉಪಯೋಗಕ್ಕೆ ದುರುಪಯೋಗ ಮಾಡ್ತದು.ಇದರಿಂದ ನವಗೆ ಹೇಂಗೆ ತೊಂದರೆ ಆವುತ್ತು ಹೇಳುವ ವಿವರಣೆ ಲಾಯಿಕಾಯಿದು. ವರದಕ್ಷಿಣೆ ಕಿರುಕುಳದ ವಿರುದ್ದ ಇಪ್ಪ ಕಾನೂನಿನ ತಪ್ಪು ಒಪ್ಪುಗಳ ಭೈರಪ್ಪನ ಹಾಂಗೆ ಯಾರಿಗೂ ವಿವರ್ಸಲೆ ಆವುತ್ತಿಲ್ಲೆ.
ಈ ಜಯಕುಮಾರನ ಅಕ್ಕನ ಮಗ ಒಬ್ಬ ಅಮೇರಿಕಾಲ್ಲಿ ಇರ್ತ. ಅವ ಮದುವೆ ಆಗದ್ದೆ ಬೆಳಿ ಕೂಸಿನೊಟ್ಟಿಂಗೆ ಇರ್ತ. ಅವನ ಮೂಲಕ ಅಮೇರಿಕಾದಂತ “ಮುಂದುವರಿದ” ಪಶ್ಚಿಮ ರಾಷ್ಟ್ರಲ್ಲಿ ಮದುವೆಯ ಮತ್ತೆ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತ. ಜಯಕುಮಾರನ ಕತೆ ಲೈಂಗಿಕ ಸಂಬಂಧಗಳ ಮೂಲಕ ಎರಡನೇ ಹೆಂಡತಿಯ ವಿರುದ್ಧ ಸೇಡು ತೀರುಸುಲೆ ಹೆರಡುವುದು.ಇಳಾ ಮೇಡಮ್ ಮಹಿಳಾ ವಿಮೋಚನೆ ಹೆಸರಿಲಿ “ಕುಟುಂಬ” ದ ಸಂಸ್ಕೃತಿಯಿಂದ ಹೆರಬಪ್ಪ ಪ್ರಯತ್ನ ಮಾಡುತ್ತು.ಈ ಏರಡು ಏಳೆ ನಮ್ಮ ಜೀವನಲ್ಲಿ ಆದುನಿಕತೆಯಿಂದ ಎಷ್ಟು ಒಳ್ಳೇದಾಯಿದು ಆಷ್ಟೆ ಕೆಟ್ಟದೂ ಆಯಿದು.ನಮ್ಮ ಸಂಸ್ಕೃತಿಲಿ ಮದುವೆ ಕುಟುಂಬ ಹೀಂಗೆ ಇಪ್ಪ ಅನಿವಾರ್ಯವಾದ ಅಂಗಂಗೊ ಎಷ್ಟು ಬದಲಾಯಿದು.ಹೇಳಿ ,ನಮ್ಮ ನಮ್ಮ ಬೇರಿಂದ ಎಷ್ಟು ದೂರ ಬಯಿಂದಿಯ ಹೇಳಿ ವಿಸ್ತಾರವಾಗಿ ವಿವರಣೆ ಮಾಡುತ್ತ.
ಈ ಎಲ್ಲ ವಿಷಯಂಗಳ ಹೇಳುವ ಗಡಿಬಿಡಿಲಿ ಕತೆಯ ಬಗ್ಗೆ ವಿಶೇಷ ಗಮನಕೊಡ್ಲೆ ಆಯಿದ್ದಿಲ್ಲೆ ಹೇಳಿ ಕಾಣ್ತು.ಡೈವೋರ್ಸ್,ಆಧುನಿಕತೆ,ಮದುವೆ, ವರದಕ್ಷಿಣೆ ವಿರುದ್ದದ ಕಾನೂನಿನ ಬಗ್ಗೆ ಬರವ ಕೆಲವು ಪುಟಂಗಳಲ್ಲಿ ಭೈರಪ್ಪನ ಶೈಲಿ ಎದ್ದು ಕಾಣ್ತು. ಆದರೆ ಆ ಕೆಲವು ಪುಟಂಗೊಕ್ಕೆ ಬೇಕಾಗಿ ಉಳಿದ ಪುಟಂಗಳ ಓದೆಕ್ಕನ್ನೆ ಹೇಳುದೇ ಬೇಜಾರು.ಬೇರೆ ಆರಾರು ಈ ಪುಸ್ತಕ ಬರದಿದ್ದರೆ ಅದರ ಒಳ್ಳೆ ಪ್ರಯತ್ನ ಹೇಳುಲಾವುತ್ತಿತ್ತು .ಆದರೆ ಇಷ್ಟೆಲ್ಲಾ ಒಳ್ಳೆ ಪುಸ್ತಕ ಬರದ ಭೈರಪ್ಪನಂತ ಲೇಖಕ ಈ ಪುಸ್ತಕ ಬರದ್ದು ಹೇಳಿರೆ ಅದರ ಒಳ್ಳೆ ಪ್ರಯತ್ನ ಹೇಳುಲಾವುತ್ತಿಲ್ಲೆ. ಭೈರಪ್ಪನ ಹಾಂಗಿಪ್ಪ ಉತ್ತಮ ವರ್ಚಸ್ಸಿನ ಲೇಖಕ ,ಅದೇ ಭೈರಪ್ಪನ ಹಳೇ ಕಾದಂಬರಿಗಳ ನಾವು ತೂಗಿ ನೋಡಿರೆ ಇದು ಒಂದು ಸಾಧಾರಣ ಕಾದಂಬರಿಯಾವುತ್ತು. ಆದರೆ ನಾವು ಹಾಂಗೆ ತೂಗುದು ತಪ್ಪು ಆದರೆ ಎಂತ ಮಾಡುದು,ಎಲ್ಲಾ ಹೊಸ ವಿಷಯ ,ಹೊಸ ವಸ್ತುಗಳ ಹಳತ್ತರೊಟ್ಟಿಂಗೆ ತೂಗುದು ಮನುಷ್ಯನ ಸಹಜ ಧರ್ಮ.ಈ ಪುಸ್ತಕವ ಒಂದರಿ ಓದುಲೆ ಮೋಸ ಇಲ್ಲೆ.
ಇಲ್ಲಿ ಆನು ಪುಸ್ತಕಲ್ಲಿ ನಡವ ಕತೆ ವಿಸ್ತಾರ ಆಗಿ ವಿವರ್ಸುಲೆ ಹೋಯಿದಿಲ್ಲೆ, ಕತೆ ಬರದಿದ್ದರೆ “ಆನು ಓದೆಕ್ಕು ಹೇಳಿ ಇತ್ತಿದ್ದೆ ಆದರೆ ನೀನು ಕತೆ ಬರದು ಓದುವ ಗಮ್ಮತ್ತು ಸಿಕ್ಕದಂಗೆ ಮಾಡಿದೆ.” ಹೇಳಿ ಪುತ್ತೂರು ಭಾವ , ಮಾಷ್ಟ್ರುಮಾವನ ದೊಡ್ಡಮಗ, ಒಪ್ಪಣ್ಣ ಆದಿಯಾಗಿ ಬೈಲಿನ ಎಲ್ಲರೂ ಪರಂಚುಲೆ ಶುರು ಮಾಡುಗು ಹೇಳಿ ಬರದ್ದಿಲ್ಲೆ. ಕಲ್ಮಡ್ಕ cheap raybans sunglasses ಅತ್ತೆ ಹತ್ರ ಕೇಳಿಯಪ್ಪಗ ,ಅವು ಕವಲು ಓದಿದವಡ ಅವಕ್ಕೆ ಇಷ್ಟ ಆಯಿದಿಲ್ಲೆ ಹೇಳಿ ಹೇಳಿದವು. ನಿಂಗೊದೇ ಓದಿ ನಿಂಗೊಗೆ ಹೇಂಗೆ ಅನ್ನಿಸಿತ್ತು ಹೇಳಿ.
ಹೇಳಿದಾಂಗೆ ಕವಲು ಕಾದಂಬರಿಲಿ ಒಂದು ಮಾತು ಬತ್ತು, ಯಾಕೋ ಆ ಮಾತು ಈಗಾಣ ಸಮಾಜದ ವ್ಯಂಗ್ಯವ ತೋರ್ಸುತ್ತು:
ಓದಿದ ಗಂಡಸರೆಲ್ಲಾ ಎಂಗಸರಾಯ್ತಾರೆ.ಓದಿದ ಎಂಗಸರೆಲ್ಲಾ ಗಂಡಸರಾಯ್ತಾರೆ.

11 thoughts on “ಆಧುನಿಕತೆಲಿ ಕವಲಾದ ಬದುಕಿನ ಕತೆ

  1. ಹೋಯ್ ಕೊಳಚಿಪ್ಪು ಭಾವಾ, ವಿಮರ್ಶೆ ಚೊಲೋ ಬೈ೦ದು. ಕೊನೇದು “ಓದಿದ ಗ೦ಡಸರೆಲ್ಲಾ…..” ಪರಮ ಸತ್ಯ ವಾಕ್ಯ. ನಿ೦ಗಳ ಭಾಷೆ ಸಾಗರ ಹವಿಗನ್ನಡಕ್ಕೆ ರಾಶಿ ಹತ್ರ ಇದ್ದು, ಸುಲಭ ಅರ್ಥ ಆಗ್ತು. ಉತ್ತಮ ಬರಹಕ್ಕೆ ಅಭಿನ೦ದನೆಗಳು.

  2. ಬೈಲಿಲಿ ಜ್ಞಾನಪ್ರಸಾರಕ್ಕೂ ಕಾರಣ ಅಪ್ಪಂತಾ ಒಳ್ಳೆಯ ವಿಮರ್ಶಾ ಲೇಖನ ಬರದ್ದಿ ಕೊಳಚ್ಚಿಪ್ಪುಭಾವಾ..
    ಕೊಶೀ ಆತು.
    ಏನೇ ಆದರೂ ಭೈರಪ್ಪನ ಬರವಣಿಗೆಯ ಶೈಲಿ ಇದ್ದಲ್ಲದೋ – ಅದಕ್ಕಾಗಿಯೇ ಪೈಶೆಕೊಟ್ಟು ತೆಕ್ಕೊಂಡರೂ ಚೋದ್ಯ ಇಲ್ಲೆ ಹೇಳಿ ನಮ್ಮ ಗಣೇಶಮಾವನ ನಂಬಿಕೆ!

  3. ಕವಲು ಓದಲೆ ಸುರು ಮಾಡಿದ್ದೆ. ಭೈರಪ್ಪನ ಮದಲಾಣ ಕಾದಂಬರಿಗಳಷ್ಟು ಹೂರಣ ಸಾಲ.

  4. ಮಾಷ್ಟ್ರುಮಾವನ ಮಗ° – ಅಮೇರಿಕಲ್ಲಿಪ್ಪವ° – ’ಕವಲು’ ಓದದ್ದ ಹಾಂಗೆ ಅವರ ಎಜಮಾಂತಿ ’ಕಾವಲು’ ಕೂಯಿದವಡ.
    ಅದರ ಬರದರೆ ಇನ್ನೊಂದು ಕಾದಂಬರಿ ಅಕ್ಕಡ.
    ಅಪ್ಪೋ, ಕೊಳಚ್ಚಿಪ್ಪು ಭಾವಾ?
    ಏ°?

    1. ಉಮ್ಮಪ್ಪ ನವಗೆ ಎಂತ ಸುದ್ದ ತಲುಪಿದ್ದಿಲ್ಲೆ. ಮಾಷ್ಟ್ರುಮಾವನ ಮಗ° – ಅಮೇರಿಕಲ್ಲಿಪ್ಪವ° ನ ಸುದ್ದಿ ಇಲ್ಲದ್ದ ಕಾರಣ ಕವಲು ಹಿಡ್ಕೊಂದು ಕೂಯಿದ ಹೇಳಿ ಗ್ರೇಶಿದೆ.. ಉಮ್ಮಪ್ಪಾ… ನವಗರಡಿಯಾ..

    2. ಆವ ಕೆಲಸ ಇದ್ದು ಹೇಳಿ ಆಫೀಸಿಲಿ ರಾತ್ರಿ ಇಡಿ ಕೂತು ಪುಸ್ತಕ ಓದುತ್ತಾ ಇದ್ದ ಹೇಳಿ ಪುತ್ತೂರು ಭಾವ ಹೇಳಿಯೊಂಡು ಇತ್ತಿದ್ದ.
      ಮತ್ತೆ ಎನಗೆ ಗೊಂತಿಲ್ಲೆ.

  5. ಭೈರಪ್ಪನ ಹಾಂಗಿಪ್ಪ ಉತ್ತಮ ವರ್ಚಸ್ಸಿನ ಲೇಖಕ ,ಅದೇ ಭೈರಪ್ಪನ ಹಳೇ ಕಾದಂಬರಿಗಳ ನಾವು ತೂಗಿ ನೋಡಿರೆ ಇದು ಒಂದು ಸಾಧಾರಣ ಕಾದಂಬರಿಯಾವುತ್ತು. – ಎನಗೂ ಹಾ೦ಗೆ ಕ೦ಡತ್ತು…

  6. ಹ್ಮ್.. ಓದಿ ಆಯಿದು ಮನ್ನೆಯೇ. “ಓದಿದ ಗಂಡಸರೆಲ್ಲಾ ಎಂಗಸರಾಯ್ತಾರೆ.ಓದಿದ ಎಂಗಸರೆಲ್ಲಾ ಗಂಡಸರಾಯ್ತಾರೆ” ಹೇಳಿ ಹೇಳಿದ್ದು ಜೈಲು ಕಾವ ಪೋಲೀಸಪ್ಪ.. 🙂 ಎನಗೂ ಭಾರಿ ಲಾಯಿಕ ಆಯಿದು ಡಯಲಾಗು..
    ಈ ಕಾದಂಬರಿಲಿ ಮನಸಿಂಗೆ ತಟ್ಟುದು ಜಯಕುಮಾರನ ಪಶ್ತಾತ್ತಾಪ. ಸುರುವಣ ಹೆಂಡತಿ ತೀರಿಗೊಂಡು ೩ ವರ್ಷ ಕಳದ ಮೇಲೇ ಯಾವುದೋ ಕೆಟ್ಟ ಗಳಿಗೆಲಿ ಅದರ ಪ್ರೀತಿಗೆ ಮೋಸಮಾಡಿ ಇನ್ನೊಂದು ಹೆಣ್ಣಿನ ಸಂಗ ಮಾಡಿದ ಪಾಪ ಅವಂಗೆ ಕೊನೆವರೆಗೂ ತಲೆಲಿ ಕೊರೆತ್ತಾ ಇರ್ತು.. ಎನಗೆ ಬಪ್ಪ ಕಷ್ಟಂಗೊ ಆ ಪ್ರೀತಿಗೆ ಮಾಡಿದ ಮೋಸಂದಾಗೇ ಹೇಳಿ ಜಯಕುಮಾರಂಗೆ ಅನ್ಸುತ್ತು,.
    ಮತ್ತೆ ಇಳಾ ಗೆಂಡನ ಪಾತ್ರವುದೆ ಲಾಯಿಕ ಇತ್ತು.. ಚೂರು ಮಚ್ಯೂರ್ ಬ್ಯುಆಲೆನ್ಸ್‍ಡ್ ಮನುಷ್ಯನ ಹಾಂಗೆ..
    ಇನ್ನೊಂದು ಗಮ್ಮತ್ತಿನ ಡೈಲಾಗು ಇದ್ದು… ಮಂಗಳೆ ಆಧುನಿಕ ಮಹಿಳೆ ಇದಾ.. ಬೊಟ್ಟು ಗಿಟ್ಟು ಬಳೆ ಎಲ್ಲ ಇಲ್ಲೆ ಅದಕ್ಕೆ. ಅದರ ನೋಡುವಗ ಜಯಕುಮಾರಂಗೆ ಅನ್ಸುದು ’ “ಮುಖಲ್ಲಿ ಪ್ರೇತ ಕಳೆ ಇದ್ದು – ಮುಸಲ್ಮಾನರವಳಂತೆ” ಹೇಳಿ. 🙂 ಕಮ್ಯುನಲ್ ಅಲ್ಲದ ಭೈರಪ್ಪ?? 😉

    1. ಎಲ್ಲಾ ಪಾತ್ರಗಳ ಮೂಲಕ ಮಾತಾಡುವವ ಲೇಖಕ ಆದ ಕಾರಣ, ಪಾತ್ರಂಗೋ ಕಮ್ಯೂನಲ್ ಆದರೆ ಲೇಖಕನೂ ಕಮ್ಯೂನಲ್ ಅಲ್ಲದ ಅಪ್ಪಚ್ಚಿ. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×