ಶೀರ್ಷಿಕೆ ಹಾಗೂ ಚೌಕಟ್ಟಿಲ್ಲದ್ದ ನ್ಯಾನೋ ಕಥೆಗೋ

ಕಥೆ-೧

ಶಂಕ್ರ ದಿನಾಗ್ಲೂ ಲೇಟಾಗಿ ಮನೆಗೆ ಬಪ್ಪದು. ಅವನ ಹೆಂಡತಿ ಬೇಗ ಬನ್ನಿ ಹೇಳಿ ಎಷ್ಟು ಸರ್ತಿ ಹೇಳಿದರೂ ಅವ ಬೇಗ ಬಾರ!. ಮದುವೆ ಆದ ಸಮಯಲ್ಲಿ ಬೇಗ ಬಂದುಗೊಂಡಿತ್ತಿದ. ಈಗ ಕೆಲಸ ಜಾಸ್ತಿ ಅಡ!

ಅವನಹತ್ರೆ ಇಪ್ಪ ಹಳತ್ತು ಬೈಕಿನ ಮಾರಿ ಹೊಸತ್ತು ತೆಗೆಯಕ್ಕು ಹೇಳಿ ಆಲೋಚನೆ ಮಾಡ್ತಾ ಇದ್ದ. ಹೆಂಡತಿ ಹೇಳಿತ್ತುಈಗ ಎಂತಗೆ. ಇಪ್ಪದ್ ಸಾಕು“. ಶಂಕ್ರ ಹೇಳಿದಎನಗೆ ಯಾವುದನ್ನೂ ಜಾಸ್ತಿ ಸಮಯ ಯೂಸ್ ಮಾಡಿ ಗೊಂತಿಲ್ಲೆ, ಹಳತ್ತು ಆವ್ತಾ ಇದ್ದಂಗೆ ಎಳದ್ದು ಇಡ್ಕೆಕ್ಕು“!!.

ಈಗ ಅವರ ಡೈವೋರ್ಸ್ ಕೇಸು ಕೋರ್ಟಿಲಿ ನಡೆತ್ತ ಇದ್ದು.!!!

ಕಥೆ-೨

ಚಂದ್ರಶೇಖರ ರಾವ್ ದೊಡ್ಡ ಮನಃಶಾಸ್ತ್ರಜ್ಞ, ಮತ್ತೆ ಸಲಹೆಗಾರ. ತುಂಬಾ ಜನ, ದಂಪತಿಗ ಅವರ ಹತ್ರೆ ಬಕ್ಕು ಸಲಹೆ ತೆಕ್ಕೊಂಬಲೆ. ಅವು ಹೇಳುಗುನಿಂಗ ಕೆಲಸಕ್ಕಿಂತ ಫ್ಯಾಮಿಲಿಗೆ ಪ್ರಾಮುಖ್ಯತೆ ಜಾಸ್ತಿ ಕೊಡೆಕ್ಕು, ಅಂಬಗ ಎಲ್ಲಾ ಸಮಸ್ಯೆ ಪರಿಹಾರಹೇಳಿ.

ಜಾಸ್ತಿ ಫೀಸು ತೆಕ್ಕೊಳ್ತಾವಿಲ್ಲೇ. ಹಾಂಗಾಗಿ ಅವಕ್ಕೆ ಕೆಲಸ ಜಾಸ್ತಿ. ದಿನಾಗ್ಲೂ ಲೇಟಕ್ಕು ಮನೆಗೆ ಬಪ್ಪಗ. ಹೆಂಡತಿ ಬೈಗುನಿಂಗ ಊರಿಂಗೆ ಉಪಕಾರಿ………….!!”

ಅವಕ್ಕೆ ಈಗೀಗ ಅರ್ಥ ಆವ್ತು ಬೇರೆವಕ್ಕೆ ಹೇಳುದು ಸುಲಭ, ಅಳವಡಿಸಿಗೊಮ್ಬದು ಚೂರು ಕಷ್ಟ!!!

ಕಥೆ-೩

ಮೊನ್ನೆ ಪ್ರಕೃತಿ ದಿನಾಚರಣೆ ನಡದತ್ತು. ಪರಿಸರ ಪ್ರೇಮಿಗ ಎಲ್ಲ ಸೇರಿಗೊಂಡು ಜಾಥಾ ಎಲ್ಲಾ ಮಾಡಿದವು. ಮಾನ್ಯ ಪರಿಸರ ಮಂತ್ರಿಗ ಪರಿಸರ ನಾಶಕ್ಕೆ ಕಾರಣ ಅಪ್ಪ ಕೈಗಾರಿಕೆಗಳ ಕಡಮ್ಮೆ ಮಾಡೆಕ್ಕು ಹೇಳಿ ಹೇಳಿದವು

ಅದಾಗಿ ಎರಡು ದಿನಕ್ಕೆ ಬಂಡವಾಳ ಹೂಡಿಕೆ ಸಮಾವೇಶ ಹೇಳಿ ಮಾಡಿದವು. ಕೈಗಾರಿಕೆಗಳ ಅಭಿವೃದ್ದಿಯೇ ನಾಡಿನ ಅಭಿವೃದ್ದಿ ಹೇಳಿ ಮಂತ್ರಿಗೋ ಹೇಳಿದವು. ದೊಡ್ಡ ಸ್ಟೀಲಿನ ಕಾರ್ಖಾನೆಗೆ ಶಂಕು ಸ್ಥಾಪನೆ ಆಯ್ದು!! ರೈತರೆಲ್ಲ ಅದು ಎಂಗಳ ಸಮಾಧಿ ಹೇಳಿ ಗಲಾಟೆ ಮಾಡ್ತಾ ಇದ್ದವಡ. ಅವಕ್ಕೆ ಸೂಕ್ತ ಪರಿಹಾರ ಕೊಡ್ಲೆ ಇದ್ದು ಹೇಳಿ ಸರಕಾರ ಹೇಳಿದ್ದು!!

ಕಥೆ-೪

ಶಂಕ್ರಂಗೆ ಒಳ್ಳೆ ಕಂಪೆನಿಲಿ ಕೆಲಸ ಬೆಂಗ್ಳೂರಿಲಿ. ವೀಕೆಂಡಿಲಿ ಬೇರೆವರ ಹಾಂಗೆ ತಿರುಗುಲೆ ಹೋಗದ್ದೆ, ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿಪ್ಪವರ ಒಟ್ಟಿನ್ಗೆ ಮಾತಾಡಿ ಸಾಂತ್ವಾನ ಹೇಳಿಯಪ್ಪಗ ಅವಂಗೆ ಒಂದು ರೀತಿ ಸಮಾಧಾನ.

ಅಂವ ಗ್ರೇಶುದು ಒಂದೊಂದು ಸರ್ತಿ, ಅಪ್ಪ ಅಮ್ಮನ ವೃದ್ಧಾಶ್ರಮಕ್ಕೆ ಸೇರ್ಸುದು ಎಷ್ಟು ಕಟುಕತನ ಹೇಳಿಗೊಂದು. ಅದಕ್ಕೆ ಅಂವಂಗೆ ಅಲ್ಲಿಪ್ಪವರ ಮೇಲೆ ಭಾರೀ ಪ್ರೀತಿ. ಆದರೆ ಇತ್ತೀಚೆಗೆ ಅವನ ಮಾಡುವೆ ಆದ ಮೇಲೆ ಅತ್ಲಾಗಿ ಹೊಪಲೆ ಆಯ್ದಿಲ್ಲೆ. ಆದರೆ ಪ್ರೀತಿ ಇತ್ತಲ್ದ??

ಹಾಂಗಾಗಿ ಅವನ ಅಬ್ಬೆಅಪ್ಪನ ಅಲ್ಲಿಗೇ ಸೇರ್ಸಿದ್ದ.!!!!

ಕಥೆ-೫

ರವಿ ಡಿಪ್ಲೋಮಾ ಮಾಡಿ ಬೆಂಗ್ಳೂರಿಲಿ ಕಷ್ಟಪಟ್ಟು ಕೆಲಸಕ್ಕೆ ಸೇರಿದ. ಸಂಬಳ ಕಡಮ್ಮೆ ಆದರೂ ಫ್ರೆಂಡುಗಳ ಜೊತೇಲಿ ಹೆಂಗೋ ಸುಧಾರ್ಸಿಗೊಂಡಿತ್ತಿದ. ಅವನ ಹಾಂಗೆ ಉಷಾಂದೆ ಮೊನ್ನೆ ಮೊನ್ನೆ ಕೆಲಸಕ್ಕೆ ಅಲ್ಲಿ ಸೇರಿದ್ದು. ಒಂದೇ ಊರಿನವ್ವು ಇದಾಹಾಂಗಾಗಿ ಬೇಗ ಫ್ರೆಂಡುಗಾದವು. ಮಾಮೂಲಿ ಕಥೆ, ಪ್ರೀತಿ ಹುಟ್ಟಿತ್ತು, ಇಬ್ರೂದೆ ಹೇಳಿಗೊಂಡಿದವಿಲ್ಲೆ ; ಅಂವ ಹೇಳಲಿ ಹೇಳಿ ಇದು, ಅದು ಹೇಳಲಿ ಹೇಳಿ ಇಂವ ಹಾಂಗೆ ಹೋತು …. ಆದರೆ ಒಳ್ಳೆ ಸಂಬಳದ ಕೆಲಸ ಸಿಕ್ಕಿಯಪ್ಪಗ ರವಿ ಫ್ಯಾಕ್ಟರಿ ಬಿಡುವ ಮನಸ್ಸು ಮಾಡಿದ. ಆದಿನ ಅವಿಬ್ರುದೆ ಕಾಫೀ ಡೇಲಿ , ಕಾಫೀ ಕುಡುದವು.

ಅಂತೂ ಎನ್ನ ಎಲ್ಲಾ ಮರೆತ್ತೆ ಹೇಳಿ ಆತುಉಷಾಂಗೆ ಕಣ್ತುಂಬಿ ಬಂತು

ಛೇ ಹಾನ್ಗೆಂತ ಇಲ್ಲೇ, ನಮ್ಮ ಇಬ್ಬರ ಸಂಸಾರ ಸಾಗೆಕ್ಕು ಹೇಳಿ ಆದರೆ ಪೈಸೆ ಬೇಕಲ್ದರವಿ ಉಶಾಂದು ಕೈ ಹಿಡುದು ಕೇಳಿದ, ಭರವಸೆಯ, ಒಲವಿನ ಮಹಾಪೂರವೇ ಅಲ್ಲಿ ಕಂಡತ್ತು..!!!!

ಕಥೆ-೬ (ಸದ್ಯಕ್ಕೆ ಮುಗುದತ್ತು)

ಇಪ್ಪತ್ತೈದು ಖಂಡಿ ಆಡಕ್ಕೆ ಅಪ್ಪ ದೊಡ್ಡ ಕುಳ ರಾಮ್ಭಟ್ರು ಮೊನ್ನೆ ಊರಿಂಗೆ ಹೋದಪ್ಪಗ ಸಿಕ್ಕಿತ್ತಿದವು.

ಇದಾ ಪುಟ್ಟ. ಆಡಕ್ಕೆ ನಂಬಿರೆ ಆಗ. ನೀನು ಬೆಂಗ್ಳೂರಿಲಿ ಸೆಟ್ಲ್ ಅಪ್ಪದು ಒಳ್ಳೇದು, ಎಂಗಳ ಹಾಂಗೆ ಅಪ್ಪದು ಬೇಡ, ಭಾರೀ ಕಷ್ಟ ಇದ್ದು!!”, ಹೇಳಿದವು. ಆನು ಎಂತ ಹೇಳಿದ್ದಿಲ್ಲೇ. ಎಂತ ಕಷ್ಟ ಹೇಳಿ ಗೊಂತಾಯ್ದಿಲ್ಲೆ.!

ಮುಂದಣ ತಿಂಗಳು ಅವರ ಮಗಳ ಮದುವೆ, ಎರಡು ಸಾವಿರ ಜನಕ್ಕೆ ಅಟ್ಟಣೆ, ಇಪ್ಪತ್ತು ಪವನು ಚಿನ್ನಡ!! ” ಅಮ್ಮ ನಿನ್ನೆ ಫೋನಿಲಿ ಹೇಳಿತ್ತು.

ಪುಟ್ಟಬಾವ°

   

You may also like...

21 Responses

 1. ರಘುಮುಳಿಯ says:

  ಸುಂದರ ಕಥೆಗೊ.
  ಜಟಿಲ ವಸ್ತುಗಳ ಸರಳವಾಗಿ ಕಥೆ ಮಾಡಿ ಬೈಲಿಂಗೆ ಬಳುಸಿದ ಪುಟ್ಟಭಾವ, ಬತ್ತಳಿಕೆಲಿಪ್ಪ ಸರಳುಗೊ ಬರಲಿ ಪುಂಖಾನುಪುಂಖವಾಗಿ,ಬೈಲಿನವರ ಮನಸ್ಸಿಂಗೆ ನಾಟಲಿ,ಹೃದಯವ ತಟ್ಟಲಿ ,.

 2. ಪುಟ್ಟ ಭಾವ ಒಳ್ಳೆ ಕಥಗೋಕ್ಕೆ ಒಳ್ಳೆ ಒಪ್ಪ೦ಗಳೂ ಬಯಿ೦ದು.ಇನ್ನೂ ಕಥಗೊ ಬರಳಿ ಸಮಯ ನಾವು ಹೊಸ್ತಾಗಿ ಉ೦ಟು ಮಾಡ್ಲೆ ಎಡಿತ್ತಿಲ್ಲೆ ಇದ್ದದರಲ್ಲೇ ಹೊ೦ದ್ಸಿ ಬರೆಯಿ.ಒಪ್ಪ೦ಗಳೊಟ್ಟಿ೦ಗೆ.

 3. ಎಲ್ಲಾ ಕತೆಗಳೂ ಒಂದರಿಂದ ಒಂದು ಲಾಯಿಕಿದ್ದು ಪುಟ್ಟಬಾವ..
  ತುಂಬಾ ಸಮೆಯ ಬಿಟ್ಟು ಬೈಲಿಂಗೆ ಬಂದದರ್ಲಿ ಎಂಗಳ ಕುತೂಹಲ ತಣುಶಿದಿ!!

  ಕತೆಗೊ ಮುಂದುವರಿಯಲಿ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *