Oppanna.com

ಗುರುವಾಯೂರಿನ ಆನೆಶಾಲೆ

ಬರದೋರು :   ಹಳೆಮನೆ ಅಣ್ಣ    on   12/12/2010    12 ಒಪ್ಪಂಗೊ

ಹಳೆಮನೆ ಅಣ್ಣ

ಕೇರಳದ ತ್ರಿಶ್ಶೂರು ಜಿಲ್ಲೆಲಿಪ್ಪ ಗುರುವಾಯೂರು ದೇವಸ್ಥಾನ ವಿಶ್ವಪ್ರಸಿದ್ಧ. ಹಾಂಗೆಯೇ ಅಲ್ಯಾಣ ಆನೆಗಳೂ. ದೇವಸ್ಥಾನಂದ ಸುಮಾರು 3 ಕಿ.ಮೀ. ದೂರದ ಪುನ್ನತ್ತೂರ್ ಕೋಟೆ ಹೇಳ್ತ ಜಾಗೆಲಿ ದೇವಸ್ಥಾನದ ಆನೆಗಳ ಸಾಂಕುತ್ತ ಕೇಂದ್ರ ಇದ್ದು. ದೇವಸ್ಥಾನಕ್ಕೆ ಹರಕೆ ರೂಪಲ್ಲಿ ಬಂದ ಆನೆಗಳೂ ಇಲ್ಲಿದ್ದವು. 60ಕ್ಕೂ ಹೆಚ್ಚು ಆನೆಗೊ ಇಲ್ಲಿದ್ದವು.

ಇಲ್ಲಿಂದ ಆನೆಗಳ ಬೇರೆ ದೇವಸ್ಥಾನಂಗಳ ಜಾತ್ರೆಗಳಲ್ಲಿ ಭಾಗವಹಿಸಲೆ ಕರಕ್ಕೊಂಡು ಹೋವುತ್ತವು. ಹಾಂಗಾಗಿ ಎಲ್ಲ ಕಾಲಲ್ಲಿಯೂ ಎಲ್ಲ ಆನೆಗಳೂ ಇಲ್ಲಿ ಒಟ್ಟಿಂಗೆ ನೋಡಲೆ ಸಿಕ್ಕುದು ಕಷ್ಟ. ಆದರೆ ಮಳೆಗಾಲಲ್ಲಿ ಉತ್ಸವಂಗೊ ಇಲ್ಲದ್ದಿಪ್ಪಗ ಈ ಆನೆಗೊಕ್ಕೆ ’ಹಸ್ತಿ ಆಯುರ್ವೇದ’ ಹೇಳ್ತ ಕ್ರಮಲ್ಲಿ ಮದ್ದು ಮಾಡ್ತವು. 21 ದಿನ ಕಾಲ ನೆಡೆತ್ತ ಈ ಚಿಕಿತ್ಸೆಲಿ ನಿತ್ಯದ ಆಹಾರ ಈಂದಿನ ಎಲೆಯೊಟ್ಟಿಂಗೆ ವಿಶೇಷವಾಗಿ ತಯಾರಿಸಿದ ಮದ್ದಿನ ಆಹಾರವನ್ನೂ ಕೊಡ್ತವು.

ಗುರುವಾಯೂರಿಂಗೆ ಹೋಪದಿದ್ದರೆ ಈ ಆನೆಗೊ ಇಪ್ಪ ’ಪುನ್ನತ್ತೂರ್ ಕೋಟೆ’ಗೂ ಹೋಗಿ ನೋಡಿ ಬನ್ನಿ.

12 thoughts on “ಗುರುವಾಯೂರಿನ ಆನೆಶಾಲೆ

  1. ಪುನ್ನತ್ತೂರು ಕೋಟೆ ಆನೆಶಾಲೆಯ ವಿಷಯ ಗೊಂತಿತ್ತಿಲ್ಲೆ. ಆದ ಕಾರಣ ಗುರುವಾಯೂರಿಂಗೆ ಹೋದರೂ ಪುನ್ನತ್ತೂರಿಂಗೆ ಹೋಯಿದಿಲ್ಲೆ. ಕೊಡಗಿನ ದುಬಾರೆ ಆನೆ ಕ್ಯಾಂಪಿನ ನೋಡಿದ್ದೆ.
    ಸಂಕ್ಷಿಪ್ತ ಆದರೂ ಉಪಯುಕ್ತ ಮಾಹಿತಿ! ಇನ್ನೂ ವಿವರವಾಗಿ ಬರದಿದ್ದರೆ ಒಳ್ಳೆದಿತ್ತು.
    ಪಟಂಗೊ ಭಾರಿ ಲಾಯಿಕು ಬಯಿಂದು.

  2. ಅಯ್ಯೋ ಬೋಸನ ಮೀಶೇಕಾರೆ ಆನಗಳ ಮೀಸುತ್ತಷ್ಟು ಸುಲಭ ಇಲ್ಲೆ.ಅದಕ್ಕೆ ಒ೦ದ ನಾಕು ಲೋಡಾರೂದೆ ಕಾಯಿಸೊಪ್ಪು ಬೇಕಕ್ಕು ಅಷ್ಟು ಒಟ್ಟು ಉಪಯೋಗಿಸಲೆ ಅಲ್ಲಿ ಬಿಡ್ತವಿಲ್ಲೆ ಹೇಳಿ ಕೇಳಿದ್ದೆ.ಬೇಕಾರೆ ಸ್ಪೆಷಲಾಗಿ ಒಪ್ಪುತ್ತವೋ ಹೇಳಿ ಪ್ರಯತ್ನ ಮಾಡಿ ನೋಡು ಆಗದೊ ನೆಗೆಗಾರ ಮಾಣಿ.ನಿನಗಾದರೆ ಅಷ್ಟು ಕಷ್ಟ ಆಗ ಒ೦ದು ಪ್ರಯತ್ನ ಮಾಡ್ಲಕ್ಕು.ಒಪ್ಪ೦ಗಳೊಟ್ಟಿ೦ಗೆ.

  3. “ತ್ರಿಶ್ಶೂರ್ ಪೂರಂ”ಗೆ ಇಲ್ಲಿಂದಲೇ ಆನೆಗಳ ಕೊಂಡುಹೋಪದು… ಅದರ ನೋಡುಲೆ ತುಂಬಾ ಲಾಯ್ಕ ಆವುತ್ತು. ಆನು ಟಿವಿಲಿ ನೋಡಿದ್ದು. ಒಂದರಿ ಹೋಯೆಕ್ಕು ಹೇಳಿ ಇದ್ದು.
    ಪಟಂಗ ಒಪ್ಪ ಇದ್ದು. ಒಪ್ಪಂಗಳೊಟ್ಟಿಂಗೆ…,

  4. ಅಪರೂಪದ ಪಟಂಗ. ಆನೆಗಳ ಮೀಶುತ್ತ ಪಟ ವಿಶೇಷವಾಗಿದ್ದು. ಹಸ್ತಿ ಆಯುರ್ವೇದ ಹೇಳಿರೆ, ಮದ್ದಿನ ಎಣ್ಣೆ ಹಚ್ಚಿ, ಮಸಾಜು ಮಾಡುತ್ತದಾಯಿಕ್ಕು. ಅಲ್ಲದೊ ? ಲೇಖನ ಲಾಯಕಾಯಿದು.

  5. ಹಳೆಮನೆ ಅಣ್ಣ,
    ಪಟ ,ಲೇಖನ ಫಷ್ಟಾಯಿದು .ಅದು ಒಂದು ಆನೆ ಕೆಮಿಗೆ ಹೂಗು ಮಡುಗಿದ್ಸೋ ?ಸುಗುಡು ಹಾಕಿ ತಿಕ್ಕೊದು ಲಾಯಿಕಾಯಿದು. ನಮ್ಮ ಬೋಚ ಮೀವ ಹೊಳೆಗೆ ಆನೆಗಳೂ ಇಳಿತ್ತವೋ?

  6. Guruvayuru Aane vishaya oduvaga ondu nenapatu, enthalidare anu sannariyyapa enna anna prashana Guruvayuru Sri Krishna Devastanlli agittu, agenaginnu 3 varsha praya, irulu devara utsava hopagaga anega 4-5 irtavu, adalli ondu anege 5 kalu kandattu ! enage aShcarya aagi appana hattare kelide, ella aanege nalku kalu, idalli ondakke entha 5 kalu heli !

    Uttara ningole tilikollekku, nodle tamashe adaru nijavada vishaya !

    1. ನಮಸ್ಕಾರ ಅಣ್ಣ.
      ಎಲ,ಅದು ಹೇಂಗೆ ಆನೆಗೆ ಐದು ಕಾಲು?? ಬೋಸನೇ ಹೇಳೆಕ್ಕಷ್ಟೇ..

  7. ಈಗ ಗುರುವಾಯೂರಿನ ಕೆಲವು ಆನೆಗವುಕ್ಕೆ ಜೋರು ಕೋಪ ಬತ್ತಡ…………….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×