Oppanna.com

ಜನಂಗಳ ಪಟಂಗೊ #01

ಬರದೋರು :   ಹಳೆಮನೆ ಅಣ್ಣ    on   02/05/2010    8 ಒಪ್ಪಂಗೊ

ಹಳೆಮನೆ ಅಣ್ಣ

ನಮ್ಮ ಈ ಪ್ರಪಂಚಲ್ಲಿ ಅತಿ ಹೆಚ್ಚು ಪಟ ತೆಗೆಸಿಕೊಳ್ಳುತ್ತ ವಸ್ತು ಯಾವುದು ಗೊಂತಿದ್ದಾ? ಮನುಷ್ಯರ ಮೋರೆ. ಈಗ ಎಂತ ಒಂದು ಇದ್ದರೂ ಅದಕ್ಕೆ ಪಟ ಬೇಕಾವುತ್ತು. ರೇಶನ್ ಕಾರ್ಡ್, ಶೇಷನ್ ಕಾರ್ಡ್, ಬ್ಯಾಂಕಿನ ಪಾಸು ಪುಸ್ತಕ, ಪಾಸುಪೋರ್ಟು… ಹೀಂಗೆ ಎಲ್ಲದಕ್ಕೂ ಪಟ ಬೇಕು. ಒಬ್ಬ ವೆಗ್ತಿಯ ಅದು ಅವನೇ ಹೇಳಿ ಗುರುತುಸಲೆ ಬೇಕಪ್ಪದು ಈ ಪಟವೇ. ಹಾಂಗಾಗಿ ಮನುಷ್ಯನ ಮೋರೆಯ ಪಟಂಗೊಕ್ಕೆ ಯಾವಾಗಲೂ ಭಾರೀ ಡಿಮಾಂಡು.
ಹಾಂಗೆ ಈ ಸರ್ತಿ ರಜ್ಜ ಮನುಷ್ಯರಿಂಗೆ ಸಂಬಂಧಿಸಿದ ಪಟಂಗಳ ನೇಲುಸುತ್ತೆ, ಆಗದಾ? ಹೀಂಗಿಪ್ಪ ಪಟಂಗಳ ‘ಪೀಪಲ್ ಫೊಟೋಗ್ರಫಿ’ ಹೇಳ್ತವು. ಮನುಷ್ಯರ ಬೇರೆ ಬೇರೆ ಭಾವನೆಗಳ ವ್ಯಕ್ತಪಡಿಸುತ್ತ ಈ ಚಿತ್ರಂಗೊಕ್ಕೆ ‘ಪೋರ್ಟ್ರೇಟ್ ಫೊಟೋಗ್ರಫಿ’ ಹೇಳ್ತ ಹೆಸರೂ ಇದ್ದು. ಕೆಮರ ಹಿಡುದ್ದದು ಕಾಣದ್ದ ಹಾಂಗೆ ಪಟ ತೆಗವದಕ್ಕೆ ‘ಕ್ಯಾಂಡಿಡ್ ಫೊಟೋಗ್ರಫಿ’ best rolex replica watch ಹೇಳಿಯೂ ಹೇಳ್ತವು. ಇಲ್ಲಿ ಕೆಲವು ಪಟ ಹಾಂಗೆ ಅವಕ್ಕೆ ಗೊಂತಿಲ್ಲದ್ದೇ ತೆಗದ್ದದು. ಭಟ್ಟ ಮಾವ°ನ ಪಟ ನಿಂಗೊ ಈಗಾಗಳೇ ನೋಡಿ ಆಯಿದು, ಅಲ್ಲದಾ? ಪೇಪರು ಓದುತ್ತ (ಜರ್ನಲಿಸಂ ಕಲಿತ್ತ) ಮಕ್ಕೊಗೆ ಹೀಂಗಿಪ್ಪ ಪಟಂಗೊ ಒಳ್ಳೆ ಕೊಶಿ ಕೊಡ್ತ ವಿಷಯ. ನಿಂಗಳೂ ನೋಡಿ, ಒಪ್ಪ ಕೊಡ್ಲೆ ಮರೆಡಿ. ಆತಾ?
ಹಳೆಮನೆ ಅಣ್ಣmoncler rockar försäljning
 

8 thoughts on “ಜನಂಗಳ ಪಟಂಗೊ #01

  1. ಹಳೆಮನೆ ಅಣ್ಣ ತೆಗೆದ ಪಟಂಗ ಲಾಯ್ಕ ಇದ್ದು.. ದೊಡ್ಡ ಭಾವ ಪಟಕ್ಕೆ ಹಾಜರಿ ಹಾಕುತ್ತ ಇಪ್ಪದೊ ಹೇಂಗೆ?

  2. ಅಳಿಯ ತೆಗದ ಪಟಂಗ ಲಾಯಕು ಬಯಿಂದು. ಜೆನಂಗಳ ಪಟ ತೆಗವಗ ದೂರಂದಲೇ ತೆಗೆಕು. ಹತ್ರೆ ಹೋಗಿ ತೆಗವಲೆ ಹೆರಟರೆ ಕೆಲವೊಂದರಿ ಬೈಗಳು ತಿನ್ನೆಕಾಗಿ ಬತ್ತು. ಅಥವಾ ಅವು ಚೆಂದಕೆ ನೋಡಿ ಸ್ಮೈಲು ಕೊಡುತ್ತವು. (ಹಿಂದಾಣ ಕಾಲಲ್ಲಿ ಈಗಾಣ ಹಾಂಗೆ ಟೆಲಿ ಲೆನ್ಸು ಎಲ್ಲ ಇತ್ತಿಲ್ಲೆ) ಆನೊಂದರಿ “ಜೀವನ ಹಾಗೂ ಪರಿಸರ” ತಲೆಬರಹಕ್ಕೆ ಪಟ ತೆಗವಲೆ ಹೋಗಿ, ಪಟ ತೆಗದ ಮತ್ತೆ ಕೆಲವು ಕುಡುದ ಜವ್ವನಿಗರ ಕೈಗೆ ಸಿಕ್ಕದ್ದ ಹಾಂಗೆ ಕೆಮರ ಹಿಡುದು ಓಡಿದ್ದು ಈಗಳೂ ನೆಂಪಾವುತ್ತು.

  3. ಹಳೆಮನೆ ಅಣ್ಣ,
    ಪಟಂಗೊ ನಿಜವಾಗಿಯೂ ಅದ್ಭುತ ಇದ್ದು. 🙂
    ತುಂಬಾ ಕೊಶಿ ಆವುತ್ತು ನೋಡ್ಳೆ.
    ಪ್ರತಿಯೊಂದುದೆ – ಪರಿಪೂರ್ಣ – ನಿಂಗಳ ಚಾಕಚಕ್ಯತೆ ಮೆಚ್ಚಲೇ ಬೇಕು.
    ’ಪಟ ತೆಗವದರ ಬಗ್ಗೆ’ ಬೈಲಿಂಗೆ ರಜ್ಜ ಮಾಹಿತಿ ಕೊಡ್ಳೆ ಶುರುಮಾಡಿರೆ ಹೇಂಗೆ?

  4. ಹರೀಶ, ಪಟಂಗ ತುಂಬಾ ಸಹಜವಾಗಿ ಬಯಿಂದು. ಜನಂಗೊಕ್ಕೆ ಗೊಂತಾಗದ್ದ ಹಾಂಗೆ ತೆಗದಪ್ಪಗ ತುಂಬಾ ಸಹಜ ಆಗಿ ಬತ್ತಲ್ಲದ. ನೀನು ಈಗ ಹಾಕಿದ್ದಕ್ಕೆ ‘ಕ್ಯಾಂಡಿಡ್ ಫೊಟೋಗ್ರಫಿ’ ಹೇಳುವದ?

    1. ಶರ್ಮಣ್ಣ, ಧನ್ಯವಾದಂಗೊ. ಇದರಲ್ಲಿ ಹೆಚ್ಚಿನದ್ದೂ ಕ್ಯಾಂಡಿಡ್ ಪಟಂಗೊ. ಆದರೆ ಎಲ್ಲವೂ ಅಲ್ಲ. ಅದು ಸಾಧಾರಣ ನವಗೆ ನೋಡಿಯಪ್ಪಗ ಅಂದಾಜು ಆವುತ್ತು, ಅಲ್ಲದಾ?

  5. ಪಟಂಗ ಚೆಂದ ಬಯಿಂದು ಅಣ್ಣ,, 🙂 ಜನಂಗಳ ಪಟ ಅವಕ್ಕೆ ಗೊಂತಾಗದ್ದ ಹಾಂಗೆ ತೆಗದ ಪಟಂಗ ನಿಜಕ್ಕು ತುಂಬಾ ಅರ್ಥಗರ್ಭಿತವಾಗಿರ್ತು.. ಪೋರ್ಟ್ರೈಡ್ ಫೋಟೊಗ್ರಫಿ ಕೂಡ ಕಷ್ಟದ ಕಲೆಯೆ ಸರಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×