ಒಂದು ‘ಚೋದ್ಯ’

ಗೀತಕ್ಕನ ಲೆಕ್ಕ ನೋಡಿ ಅಪ್ಪಗ ಒಂದು “ಚೋದ್ಯ” ಕೇಳುವೊ ಹೇಳಿ ಕಂಡತ್ತು:

ಒಬ್ಬ ಯಜಮಾನನ ಹತ್ರ 15 ಕುದುರೆ ಇತ್ತು. ಅವಂಗೆ 4 ಜನ ಮಕ್ಕೊ.
ಅವ ತೀರಿ ಹೋಪಗ ಮಕ್ಕೊಗೆ ಪಾಲು ಆಯೆಕ್ಕು ಹೇಳಿ ಆತು. ಯಜಮಾನ ಮೊದಲೇ ಯಾವ ರೀತಿ ಪಾಲು ಅಯೆಕ್ಕು ಹೇಳಿ ಹೇಳಿತ್ತಿದ್ದಡ.

 • ದೊಡ್ಡವಂಗೆ ದೊಡ್ಡ ಪಾಲು, ಇಪ್ಪದರಲ್ಲಿ ಅರ್ಧದಷ್ಟು,
 • ಎರಡನೆಯವಂಗೆ ಉಳುದ್ದರಲ್ಲಿ ಅರ್ಧ,
 • ಮೂರನೆಯವಂಗೆ, ಮೊದಲಾಣ ಇಬ್ರಿಂಗೆ ಕೊಟ್ಟು ಉಳುದ್ದರಲ್ಲಿ ಅರ್ಧ,
 • ನಾಲ್ಕನೆಯವಂಗೆ ಮೊದಲಾಣ ಮೂರೂ ಜೆನಂಗೊಕ್ಕೆ ಕೊಟ್ಟು ಉಳುದ್ದರ ಅರ್ಧ ಹೇಳಿ.

ಇಪ್ಪ 15 ರ ಸುರುವಾಣವಂಗೆ ಅರ್ಧದಷ್ಟು ಹೇಳಿರೆ 7.5 ಆವುತ್ತು. ಕುದುರೆಯ ಅರ್ಧ ಮಾಡುವ ಹಾಂಗೆ ಇಲ್ಲೆ. ಆಷ್ಟಪ್ಪಗ ಅಲ್ಲಿಗೆ ಒಬ್ಬ ಕುದುರೆ ಸವಾರ ಬಂದ.

ನಾಲ್ಕೂ ಜೆನಂಗೊ ಸೇರಿ ಅವನ ಹತ್ರ ಇದಕ್ಕೆ ಒಂದು ಪರಿಹಾರ ಹೇಳ್ಲೆ ಎಡಿಗೋ ಕೇಳಿಯಪ್ಪಗ ಅವ ಸಂತೋಷಲ್ಲಿ ಒಪ್ಪಿಯೊಂಡ.

(ಅವ ಮುಂದೆ ಎಂತ ಮಾಡಿದ ಹೇಳುವದರ ನಿಂಗೊ ತಿಳಿಸಿ)

ಶರ್ಮಪ್ಪಚ್ಚಿ

   

You may also like...

10 Responses

 1. ಗೋಪಾಲ ಮಾವ says:

  15ರ ಅರ್ಧ ಹೇಳಿರೆ 7.5, ಅದರ ರೌಂಡ್ ಆಫ್ ಮಾಡುವೊ. 8 ಬಂತು. ದೊಡ್ಡವಂಗೆ 8 ಕೊಡೆಕು. ಮತ್ತಾಣವಂಗೆ 4, ಮತ್ತಾಣವಂಗೆ 2, ಮತ್ತಾಣವಂಗೆ 1. ಹೇಂಗೆ ಉತ್ತರ ಸರಿಯೊ ?

  • ಶ್ರೀಕೃಷ್ಣ ಶರ್ಮ. ಹಳೆಮನೆ says:

   ಉತ್ತರ ಸರಿಯಾಗಿಯೇ ಇದ್ದು. ಆದರೆ ಈ “ರೌಂಡ್ ಅಪ್” ಮಾಡ್ಲೆ ಆ “ಗೆಂಟು” ಗೊ ಬಿಡ್ತವಿಲ್ಲೆ ಅಡ. ಮೊದಲಾಣವಂಗೆ ಕೊಟ್ಟು ಉಳುದ 7 ರ ಪುನಹ ಅರ್ಧ ಮಾಡುವಾಗ ಇದೇ ತೊಂದರೆ ಬತ್ತಲ್ಲದ? ಕುದುರೆ ಸವಾರ ಅದಕ್ಕೆ ಎಂತಾರೂ “ಕೆಣಿ” ಮಾಡ್ತನಾ ನೋಡುವ

 2. ದೊಡ್ಡವ° ಹೇದರೆ ದೊಡ್ಡಭಾವನೋ, ಎನ್ನ ಪ್ರಶ್ನೆ ಇಷ್ಟೆ..!!

 3. ಗೋಪಾಲ ಮಾವ says:

  ಮುಟ್ಟಾಳೆ ಮಡುಗೆಂಡು ಬೈಕಿಲ್ಲಿ ಕೂದೊಂಡು ಇಪ್ಪ ದೊಡ್ಡ ಬಾವಂಗೆ ಕುದುರೆ ಎಂತಕೆ ?

 4. ಆದರ್ಶ says:

  ಕುದುರೆ ಸವಾರ ಆದಕಾರಣ ಅವನ ಹತ್ರೆ ಒಂದು ಕುದುರೆಯು ಇಕ್ಕನ್ನೆ?? ಅವ ಕುದುರೆಯ ಒಟ್ಟಿಂಗೆ ಬಯಿಂದ ಹೇಳಿ ಗ್ರೇಶಿಗೊಂಡರೆ, ನಾಲ್ಕು ಜನ ಅಣ್ಣತಮ್ಮಂದಿರು ಆ ಕುದುರೆ ಸವಾರನ ಕುದುರೆಯ ಒಂದು ಕ್ರಯ ಕೊಟ್ಟು ತೆಕ್ಕೊಳೆಕ್ಕು, ಅಷ್ಟಪ್ಪಗ 16 ಕುದುರೆ ಆತಿಲ್ಲೆಯ? ಮತ್ತೆ ಒಪ್ಪಂದ ಪ್ರಕಾರ ಹಂಚುಲೆಂತ ಅಡ್ಡಿ?? 🙂

  • ಶ್ರೀಕೃಷ್ಣ ಶರ್ಮ. ಹಳೆಮನೆ says:

   ಕುದುರೆಯ ಕ್ರಯಕ್ಕೆ ತೆಕ್ಕೊಳೆಕ್ಕಾಗ. ಒಂದರಿಯಂಗೆ “adjust” ಮಾಡಿರೆ ಸಾಕಾಕ್ಕೋ

   • ಆದರ್ಶ says:

    ಅದಪ್ಪು, ಒಂದರಿ adjust ಮಾಡಿರು ಸಾಕು, 🙂 ಇನ್ನುದೆ ಲಾಯ್ಕ ಉಪಾಯ ಇದ್ದು ಶರ್ಮಪ್ಪಚ್ಚಿ, ಹೆಂಗಾರುಗೆ ಇವು ನಾಲ್ಕು ಜೆನ ಇಲ್ಲೆಯ, ಕುದುರೆ ಸವಾರನ ಕೆಳ ಇಳಶಿ ಅವನ ಮೇಲೆ ದಂಡಪ್ರಯೋಗ ಮಾಡಿರೆ ಅವ ಆಗಿಯೆ ಕುದೆರೆಯ ಬಿಟ್ಟಿಕ್ಕಿ ಓಡುಗು, 🙂 ನಾವಗೆ ಕುದುರೆ ಸಿಕ್ಕಿರೆ ಆತನ್ನೆ, 🙂

 5. its very simple… Use that extra Horse (which is with that stranger) to simplify the calculations. (I mean to solve the issue of round off). Then total will become 16.
  Now u can divide like this :
  8-4-2-1 and finally that one extra will be available and that one is the Horse of that stranger.

 6. ಗೋಪಾಲ ಮಾವ says:

  ಶರ್ಮಪ್ಪಚ್ಚಿ, ಕಡೆಂಗೆ ಉತ್ತರ ಎಂತರ ಹೇಳಿಕ್ಕಿ ಆತೋ. ಎಲ್ಲೋರು “ಈಗರ್ಲೀ ವೈಟಿಂಗು” ಮಾಡ್ತಾ ಇದ್ದವು. ಮರದಿಕ್ಕೆಡಿ.

  • ಶ್ರೀಕೃಷ್ಣ ಶರ್ಮ. ಹಳೆಮನೆ says:

   ಕೇಶವ ಪ್ರಸಾದ ಕೊಟ್ಟ ಉತ್ತರವೇ ಎನ್ನ ಉತ್ತರ ಕೂಡ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *