ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು

ವಾಯುರನಿಲಮಮೃತಮಥೇದಂ ಭಸ್ಮಾಂತಗ್‍ಂ ಶರೀರಮ್ |
ಓಂ ಕ್ರತೋ ಸ್ಮರ ಕೃತಗ್‍ಂ ಸ್ಮರ ಕ್ರತೋ ಸ್ಮರ ಕೃತಗ್‍ಂ ಸ್ಮರ ||೧೭||

ಗಾಳಿ ಬೆಂಕಿಯ ಜಲದ ಮಣ್ಣಿನ ದೇಹ ಹೊಂದಲು ಭಸ್ಮವ
ಮನವ ನೆನಪಿಸು ಪ್ರಣವ ಮಂತ್ರವ ಗೈದ ಕಾರ್ಯವ ಪುಣ್ಯವ ||೧೭||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಕಾಯವಿದನ್ ಅಗ್ನಿಕೃಪೆ ಬೂದಿಮಾಳ್ಕೆನ್ನುಸಿರ |
ವಾಯು ತಾಂ ವಿಶ್ವದಮೃತಾನಿಲದಿ ಬೆರೆಗೆ ||
ಓಮ್, ಎನ್ನ ಮನವೆ ನೆನೆ ನಿನ್ನ ಕರ್ಮಗಳ ನೆನೆ |
ಓ ಮನವೆ ನೆನೆ ನಿನ್ನ ಕರ್ಮಗಳನೆಲ್ಲ್ಲ ||

ಈ ಎನ್ನ ದೇಹಲ್ಲಿಪ್ಪ ಪ್ರಾಣವಾಯು ಪಂಚಮಹಾಭೂತಂಗಳಲ್ಲಿ ಒಂದಾದ ಶಾಶ್ವತವಾದ ವಿಶ್ವವಾಯುವ ಸೇರಲಿ. ಈ ದೇಹ ಭಸ್ಮವಾಗಿ ಭೂಮಿಯ ಸೇರಲಿ.  ಓಂ ಬ್ರಹ್ಮವೇ, ನಿನಗೆ ನಮಸ್ಕಾರ. ಎನ್ನಂದ ಬೇರೆ ಬೇರೆ ಕೆಲಸಂಗಳ ಮಾಡುಸಿದ, ಮನೋಬುದ್ಧಿರೂಪವಾದ ಓ ಎನ್ನ ಅಂತರಂಗವೇ, ನಿನ್ನ ಕೃತ್ಯಾಕೃತ್ಯಂಗಳ ನೆಂಪು ಮಾಡಿಗೊ. ಪಾಪಕ್ಕಾಗಿ ಪಶ್ಚಾತ್ತಾಪಪಡು, ಪುಣ್ಯಕ್ಕಾಗಿ ಪರಮಾತ್ಮನ ಧ್ಯಾನ ಮಾಡು. ಕರ್ಮಫಲವಿಧಿ ಅನಿವಾರ್ಯ ಹೇಳಿ ಇಲ್ಲಿ ಸ್ಪಷ್ಟವಾಗಿ ಗೊಂತಾವುತ್ತು. ಎರಡನೆಯ ಮಂತ್ರವನ್ನೂ (ನ ಕರ್ಮ ಲಿಪ್ಯತೇ) ಎಂಟನೆಯ ಮಂತ್ರವನ್ನೂ (ಯಾಥಾತಥ್ಯತೋsರ್ಥಾನ್ ವ್ಯವಧಾತ್) ಹದಿನೈದನೆಯ ಮಂತ್ರವನ್ನೂ (ಸತ್ಯಧರ್ಮಾಯ) ಇಲ್ಲಿ ನೆಂಪು ಮಾಡಿಗೊಳೆಕ್ಕು. ಎರಡನೆಯ ಮಂತ್ರದ “ಜಿಜೀವಿಷೇತ್” ಹೇಳ್ತ ವಾಕ್ಯವೂ ಇದ್ದು. ಎಷ್ಟೇ ವರ್ಷ ಬದುಕ್ಕಿರೂ ಅದಕ್ಕೆ ಒಂದು ಮುಕ್ತಾಯ ಇದ್ದು. ಅವಸಾನ ಕಾಲ ಬಪ್ಪಗ ಜೀವಿತ ಕಾಲದ ಕೃತ್ಯಾಕೃತ್ಯಂಗಳ ನೆಂಪು ಮಾಡಿಗೊಂಡು ಪಾಪಕ್ಕಾಗಿ ಪಶ್ಚಾತ್ತಾಪವನ್ನೂ ಪುಣ್ಯಕ್ಕಾಗಿ ದೇವರಿಂಗೆ ವಂದನೆಯನ್ನೂ ಸಲ್ಲುಸೆಕ್ಕಾವುತ್ತು. ಕಡೆಯ ಘಳಿಗೆಯ ಧ್ಯಾನವೇ ಮತ್ತಾಣ ಜನ್ಮಕ್ಕೆ ನಿರ್ಣಾಯಕ ಹೇಳ್ತ ವಿಷಯವ ಭಗವಾನ್ ಎಂಟನೆಯ ಅಧ್ಯಾಯದ ಆರನೆಯ ಶ್ಲೋಕಲ್ಲಿ ಹೇಳಿದ್ದ°.

ಯಂ ಯಂ ವಾsಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ |
ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ ||

ಮರಣಾಸನ್ನನಾಗಿಪ್ಪ ಎನ್ನ ಪ್ರಾಣವಾಯು ಅಧಿದೈವಾತ್ಮವೂ ಸರ್ವಾತ್ಮಕನೂ ಸೂತ್ರಾತ್ಮವೂ ಆದ ವಾಯುವಿನ ಸೇರಲಿ. ಶರೀರದ ಮಿತಿಯ ದಾಂಟಿ ಹೆರ ಇಪ್ಪ ಸೂತ್ರಾತ್ಮವಾದ ವಾಯುವಿಲಿ ಐಕ್ಯವಾಗಲಿ. ಈ ಮಿತಿಯ ಬಿಡೆಕ್ಕಾದರೆ ಆನು ಈ ದೇಹಲ್ಲಿ ಸ್ಥಿತನಾಗಿಪ್ಪವ° ಅಭಿಮಾನ ಹೋಯೆಕ್ಕು. ಆ ಅಭಿಮಾನ ಹೋದರೆ ಪ್ರಾಣವಾಯು ಹೆರ ಇಪ್ಪ ಅಕ್ಷರ, ಕೂಟಸ್ಥ, ಸೂತ್ರಾತ್ಮ ಹೀಂಗೆಲ್ಲ ಹೆಸರಿಪ್ಪ ಅಧಿದೈವಾತ್ಮಲ್ಲಿ ಲೀನ ಆವುತ್ತು. ಓಂಕಾರಾತ್ಮಕನೂ ಸತ್ಯಸ್ವರೂಪನೂ ಸಂಕಲ್ಪಾತ್ಮಕನೂ ಆದ ಅಗ್ನೇ!  ಈ ಸ್ಥೂಲಶರೀರ ಅಗ್ನಿಲಿ ದಹಿಸಿ ಭಸ್ಮವಾಗಿಹೋಗಲಿ. ಜ್ಞಾನಂದಲೂ ಕರ್ಮಂದಲೂ ಸಂಸ್ಕಾರಗೊಂಡ ಎನ್ನ ಲಿಂಗಶರೀರ ಸ್ಥೂಲಶರೀರವ ಬಿಟ್ಟು ಊರ್ಧ್ವಗತಿಯ ಪಡೆಯಲಿ. ಈ ಕಡೆಯ ಘಳಿಗೆಯ ಧ್ಯಾನ ಅರ್ಥಪೂರ್ಣ ಆಯೆಕ್ಕು ಹೇಳ್ತ ಉದ್ದೇಶಂದ ಮಾಡಿದ ಕಾರ್ಯಂಗಳನ್ನೂ ಎರಡೆರಡು ಸರ್ತಿ ನೆಂಪು ಮಾಡಿಗೊಳೆಕ್ಕು ಹೇಳಿ ಋಷಿಗೊ ಹೇಳಿಕೊಟ್ಟಿದವು.

~~~***~~~~

ಬೊಳುಂಬು ಕೃಷ್ಣಭಾವ°

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *