‘ಪದೋನ್ನತಿ’ಯ ಗೋಪಾಲಕೃಷ್ಣ ಮಧ್ಯಸ್ಥ (G.K.Madhyastha)

ಶ್ರೀ ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು.
ವಿಜಯಕರ್ನಾಟಕ ಪೇಪರಿಲಿ ಉನ್ನತ ಹುದ್ದೆಲಿ ಇದ್ದುಗೊಂಡು, ನಿತ್ಯವೂ ಜೆನರಿಂಗೆ ಅತ್ಯುತ್ತಮ ಗುಣಮಟ್ಟದ ಪತ್ರಿಕೆ ಕೊಡ್ಳೆ ಕಾರಣ ಆಯಿದವು.
ಅವು ಪೇಪರಿನ ಗುಣಮಟ್ಟ ನೋಡಿಗೊಂಬದರೊಟ್ಟಿಂಗೆ ಮತ್ತೊಂದು ಕಾರ್ರ್ಯವನುದೇ ಮಾಡಿಗೊಂಡು ಇದ್ದವು
– ಅದೆಂತರ?
ಪದೋನ್ನತಿ” ಹೇಳ್ತ ಹೆಸರಿಲಿ ಒಂದು ಅಂಕಣ ಬರದು, ಅದರ ಮೂಲಕ ಓದುರಿಂಗೆ ಪ್ರತಿನಿತ್ಯ ಒಂದು ಶೆಬ್ದದ ಸಾರಾರ್ಥ ಹೇಳ್ತ ಕಾರ್ಯ ಮಾಡಿಗೊಂಡು ಇದ್ದವು.

ಅವರ ಅಕ್ಷರ ಸೇವೆಯ ಗುರುತಿಸಿ, ಮೊನ್ನೆ ಆಯಿತ್ಯವಾರ ಬೆಂಗುಳೂರಿಲಿ ಅವಕ್ಕೆ ಸಮ್ಮಾನ ಮಾಡಿದವು.
ಅದರೊಟ್ಟಿಂಗೆ,  ಅಂಕಿತಪುಸ್ತಕ ಹೇಳ್ತ ಅಂಗುಡಿಯೋರು ಅವರ ಶಬ್ದಾರ್ಥಂಗಳ “ಪದೋನ್ನತಿ” ಸಂಗ್ರಹವ ಪುಸ್ತಕ ಮಾಡಿ ಹೆರತಯಿಂದು.
ನಮ್ಮ ಬೈಲಿನ ಪತ್ರಿಕೋದ್ಯಮ ಹಿರಿಯರಾದ ಶ್ರೀ ಮಧ್ಯಸ್ಥ ರ ನಮ್ಮ ಬೈಲಿಂಗೆ ಪರಿಚಯ ಮಾಡ್ತದು “ನಮ್ಮೂರು-ನಮ್ಮೋರು” ಅಂಕಣಕ್ಕೆ ಹೆಮ್ಮೆ.
ಸಮ್ಮಂದಲ್ಲಿ ಹೇಳ್ತರೆ, ನಮ್ಮೆಲ್ಲರ ಪ್ರೀತಿಯ ಸುವರ್ಣಿನಿ ಅಕ್ಕಂಗೆ ಇವು ಸೋದರಮಾವ!

ಸೋದರಮಾವನ ಪರಿಚಯ ನಮ್ಮೆಲ್ಲರಿಂಗೆ ಸುವರ್ಣಿನಿ ಅಕ್ಕ ಮಾಡಿ ಕೊಡ್ತವು.
ಓದಿ, ಮಧ್ಯಸ್ಥರ ಮುಂದಾಣ ದಾರಿಯೂ ಯಶಸ್ಸುಗಳಿಂದ ಕೂಡಿರಲಿ ಹೇಳ್ತ ಆಶಯ ನಮ್ಮೆಲ್ಲದಾಗಿರಲಿ.
~
ಗುರಿಕ್ಕಾರ
°

ಜಿ.ಕೆ. ಮಧ್ಯಸ್ಥರ ಸಣ್ಣ ಪರಿಚಯ:

ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ “ಕುಂಜಾರು” ಹೇಳ್ತ ಊರಿನವ್ವು.
ಶಾಲೆ ಕಾಲೇಜಿಂಗೆ ಹೋಪಗಲೇ ಸಾಹಿತ್ಯದ ಬಗ್ಗೆ ಆಸಕ್ತಿ.
ಗಡಿನಾಡಿನ ಕನ್ನಡಿಗ ಆಗಿ ಕನ್ನಡ ಪರ ಹೋರಾಟ ಮಾಡಿತ್ತಿದ್ದವು.
ಇಂಗ್ಲಿಷ್ ಸಾಹಿತ್ಯಲ್ಲಿ ಪದವಿ ವಿದ್ಯಾಭ್ಯಾಸ (ಕಾಸರಗೋಡಿಲ್ಲಿ) ಮುಗುಶಿ ಮೊದಾಲಿಂಗೆ “ಉದಯವಾಣಿ” ದಿನಪತ್ರಿಕೆಲಿ ಉದ್ಯೋಗ ಶುರು ಮಾಡಿದವು.

14 ವರ್ಷ ಉದಯವಾಣಿಲಿ ಕೆಲಸ ಮಾಡಿ ಮತ್ತೆ “ಮುಂಗಾರು” ಹೇಳ್ತ ದಿನಪತ್ರಿಕೆಲಿ ಮೂರು ವರ್ಷಂಗಳ ಕಾಲ ಇತ್ತಿದ್ದವು.
ಆಮೇಲೆ ಅಲ್ಲಿಂದ ಬೆಂಗ್ಳೂರಿಂಗೆ ಬಂದು “ಪ್ರಜಾವಾಣಿ”ಗೆ ಸೇರಿದವ್ವು.
ಅದರ್ಲಿ ಇಪ್ಪತ್ತು ವರ್ಷ ಇದ್ದು ನಿವೃತ್ತಿ ಆದವು.

ನಿವೃತ್ತ ಜೀವನಲ್ಲಿ ಮನೆಲಿಪ್ಪಗ, “ವಿಜಯಕರ್ನಾಟಕ” ಪತ್ರಿಕೆಂದ ಕರೆಬಂತು, ಗುಣಮಟ್ಟ ನಿಯಂತ್ರಕರಾಗಿ ಕಾರ್ಯ ನಿರ್ವಹಿಸಲೆ.
ಅಲ್ಲಿ ಸೇರಿ ಈಗ 3-4 ವರ್ಷ ಆತು,
ಅದಾಗಲೇ ಇವು ಕೆಲವು ಪುಸ್ತಕಂಗಳ ಬರದು ಪ್ರಕಟಮಾಡಿದ್ದವು. (“ದುಡ್ಡು-ಕಾಸು” ಬರದ ಒಂದು ಪುಸ್ತಕ ತುಂಬ ಪ್ರಸಿದ್ಧಿಗೆ ಬಯಿಂದು.)

ಹುಟ್ಟಿದ್ದು: 16  ಅಗೋಸ್ತು, 1946
(ಇವ್ವು ಎನ್ನ ಅಮ್ಮನ ಅಣ್ಣ, ಎನ್ನ ಸೋದರ ಮಾವ 🙂 )

ಸೂ: 20-ಸೆಪ್ಟಂಬರ್-2010 ರ ವಿಜಯಕರ್ನಾಟಕಲ್ಲಿ ಬಂದ ಪದೋನ್ನತಿ ಅಂಕಣ ಇಲ್ಲಿದ್ದು: (ಸಂಕೊಲೆ)

ಪ್ರಸ್ತುತ ವಿಜಯಕರ್ನಾಟಕಲ್ಲಿ Quality Controllerನ ಹುದ್ದೆಲಿ ಇಪ್ಪ ಜಿ.ಕೆ.ಮಧ್ಯಸ್ಥ ಅವರ ಪುಸ್ತಕ “ಪದೋನ್ನತಿ” ಬಿಡುಗಡೆ ಕಾರ್ಯಕ್ರಮ ಮೊನ್ನೆ ಆದಿತ್ಯವಾರ ನೇ ತಾರೀಖಿಂಗೆ ಬೆಂಗಳೂರಿನ ಬಸವನಗುಡಿಲಿ ನಡತ್ತು.
ಈ ಕಾರ್ಯಕ್ರಮಲ್ಲಿ ವಿಜಯಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್, ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರೊ.ಚಂದ್ರಶೇಖರ ಪಾಟೀಲ ಇತ್ತಿದ್ದವು.

ವಿಜಯಕರ್ನಾಟಕ ಪೇಪರ್ ಲಿ ನಿತ್ಯವೂ ಬಪ್ಪ “ಪದೋನ್ನತಿ” ಅಂಕಣಂಗಳ ಎಲ್ಲ ಸೇರ್ಸಿ ಈ ಪುಸ್ತಕವ ಅಂಕಿತ ಪ್ರಕಾಶನದವ್ವು ಹೆರ ತೈಂದವು.
ಒಟ್ಟಿಂಗೇ ಅವಕ್ಕೆ ಸನ್ಮಾನ ಕಾರ್ಯಕ್ರಮವೂ ಇತ್ತು.

ಮೊನ್ನೆ ನಡದ ಪುಸ್ತಕ ಸಮಾರಂಭದ ಕೆಲವು ಪೋಟೋ ಇಲ್ಲಿದ್ದು:

ಸುವರ್ಣಿನೀ ಕೊಣಲೆ

   

You may also like...

13 Responses

 1. ರಘುಮುಳಿಯ says:

  ವಾ,ಪದೋನ್ನತಿ ಬರೆವವು ನಮ್ಮ ಹತ್ತರಾಣವು ಹೇಳಿ ಗೊಂತೆ ಇತ್ತಿಲ್ಲೆ.ಮಾಹಿತಿಗೆ ಧನ್ಯವಾದ.
  ಪ್ರತಿದಿನವೂ ಸಾಮಾನ್ಯ ಬಳಕೆಯ ಶಬ್ದದ ಆದರೆ ಗೊಂತಿಲ್ಲದ್ದ ಅರ್ಥಂಗಳ ಸಣ್ಣಕ್ಕೆ,ಚೊಕ್ಕಕ್ಕೆ ವಿವರುಸುತ್ತಾ ಇದ್ದವು,ಈ ಮಾವ.ಹೆಚ್ಚಿನ ಶಬ್ದಂಗೋ ಯೇವದಾದರೂ ವಾರ್ತೆಂದ ಹೆರ್ಕಿ ತೆಗದಿಪ್ಪೊದು ವಿಶೇಷ. ಈ ಪುಸ್ತಕ ಕೂಡಲೇ ತೆಕ್ಕೊಲ್ಳೆಕ್ಕು.

 2. ರಘುಮುಳಿಯ says:

  ಪುಳ್ಳಿ ನೀನಾ ? ಅದರದ್ದು ಪಟೋನ್ನತಿ !!
  ಭಾಷಣ ರಜಾ ಬೋರ್ ಆತೋ ?

 3. ಗೋಪಾಲ ಮಾವ says:

  ವಿಜಯ ಕರ್ನಾಟಕದ “ಪದೋನ್ನತಿ” ಒಂದು ಒಳ್ಳೆಯ ಅಂಕಣ. ಯಾವತ್ತೂ ಓದುತ್ತೆ. ಅದರಲ್ಲಿ ಅರ್ಥ ವಿವರಣೆ ಲಾಯಕಿರುತ್ತು. ಕುಂಜಾರು ಹೇಳಿರೆ, ಎಂಗಳ ಬೊಳುಂಬಿನ ನೆರೆಕರೆ ಹೇಳಿ ತಿಳುಸಲೆ ತುಂಬಾ ಅಭಿಮಾನ ಆವ್ತಾ ಇದ್ದು.

 4. ಶರ್ಮಪಚ್ಚಿ says:

  “ಪದೋನ್ನತಿ” ಮೂಲಕ ಸಮಾಜಕ್ಕೆ ತಿಳುವಳಿಕೆ ಕೊಡುವವು ನಮ್ಮವೇ ಹೇಳಿ ಅಪ್ಪಗ ತುಂಬಾ ಸಂತೋಷ ಆತು. ಅವರ ಎಲ್ಲಾ ಕಾರ್ಯಂಗಳಲ್ಲಿ ಅವಕ್ಕೆ ಯಶಸ್ಸು ಸಿಕ್ಕಲಿ ಹೇಳಿ ಹಾರೈಸುತ್ತೆ.

 5. ಪದೋನ್ನತಿ ಅಂಕಣ ಲಾಯ್ಕ ಬತ್ತಾ ಇದ್ದು. ಹಾಂಗೆ ನೋಡಿರೆ ವಿಜಯ ಕರ್ನಾಟಕದ ಕೆಲಾವು ಅಂಕಣಂಗೊ ಲಾಯ್ಕ ಇದ್ದು. ಆದರೆ ಅದರ ಬರವದು ಆರು ಹೇಳುದು ನವಗೆ ಗೊಂತೇ ಆವುತ್ತಿಲ್ಲೆ ಹೇಳುದು ಮಾತ್ರ ಬೇಜಾರು. ಹೇಳಿರೆ ವಿಜಯ ಕರ್ನಾಟಕ ಪೇಪರ್‌ನ ಲೇಖಕಂಗೊಕ್ಕೆ, ಪಟ ತೆಗವವಕ್ಕೆ ಅವರದ್ದೇ ಆದ ಐಡೆಂಟಿಟಿ ಇರ್ತಿಲ್ಲೆ ಹೇಳುದು ಕೂಡ ಅಷ್ಟೇ ಸತ್ಯ. ಒಂದು ಗುಟ್ಟಿನ ಸಂಗತಿ ಹೇಳ್ತೆ, ವಕ್ರತುಂಡೋಕ್ತಿ ಹೇಳಿ ಒಂದು ಅಂಕಣ ಬತ್ತಾ ಇದ್ದು, ನೋಡಿದ್ದಿರಲ್ದಾ? ಅದರ ಬರವದು ನಮ್ಮವೇ ಆದ ವಿಶ್ವೇಶ್ವರ ಭಟ್. ಹಾಂಗೆ ಬಾಲ್ಕನಿಯಿಂದ ಹೇಳಿ ಒಂದು ಸಹಜಾ ಹೇಳ್ತ ಕೂಸು ಬರಕ್ಕೊಂಡು ಇತ್ತಿದ್ದು ಅಲ್ದಾ? ಅದು ಕೂಡ ವಿಶ್ವೇಶ್ವರ ಭಟ್ಟನೇ.

  • ಸಹಜಾ ಬತ್ತಿಲ್ಲೆ ಹೇಳಿ ಪೆರ್ಲದಣ್ಣಂಗೆ ಬೇಜಾರು ಆಯಿದು ಹೇಳಿ ನೆಗೆ ಬಾವ ಹೇಳಿಯೊಂಡಿತ್ತಿದ್ದ..
   ಸತ್ಯ ವಗೆ ಗೊಂತಿಲ್ಲೆ.. ಪೆರ್ಲದಣ್ಣ ಹೇಳುಗು..

 6. gopalakrishna BHAT S.K. says:

  padonnathi is very informative.thanks for introducing the writer.Oppanna may take the contribution of Shri Madhyastha to this blog so that all of us may be benefited.

 7. ಮಧ್ಯಸ್ಥಮಾವಂಗೆ ಅಭಿನಂದನೆಗೊ.
  ವಿಜಯಕರ್ನಾಟಕದ ಬೈಲಿಂಗೆ ಹೊಸಹೊಸ ಶಬ್ದ ಹೇಳಿಕೊಡ್ತ ವಿಶೇಷ ಕಾರ್ಯ ಅವರಿಂದ ಆವುತ್ತಾ ಇದ್ದು.
  ಅದರ ಸಮಾಜವುದೇ ಗುರುತಿಸಿದ್ದು. ಒಳ್ಳೆದಾಗಲಿ.
  ಇನ್ನುದೇ ಮುಂದಂಗೆ ಇದೇ ನಮುನೆ ಸಾರಸ್ವತ ಲೋಕದ ಸೇವೆ ಮುಂದುವರಿಯಲಿ.
  ಒಳ್ಳೆದಾಗಲಿ.

  ಸುವರ್ಣಿನಿ ಅಕ್ಕೋ,
  ಅವು ನಮ್ಮ ಬೈಲಿಂಗೂ ಬಕ್ಕೋ?

 8. ಎಲ್ಲೋರಿಂಗೂ ಜಿ.ಕೆ.ಮಧ್ಯಸ್ಥರ ಪರವಾಗಿ ಧನ್ಯವಾದಂಗೊ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *