ಬೈಲಿನ ನೆರೆಕರೆಯ ಎಲ್ಲಾ ಶಿಕ್ಷಕರಿಂಗೆ ‘ಶಿಕ್ಷಕರ ದಿನ’ದ ಶುಭಾಶಯಂಗ….

ಇಂದು ಶಿಕ್ಷಕರ ದಿನ.
ನಮ್ಮ ದೇಶದ ಮಾಜಿ ರಾಷ್ಟ್ರಪತಿ
ಡಾ | ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನ. ಅವರ ಹುಟ್ಟಿದ ದಿನವ ಶಿಕ್ಷಕರ ದಿನ ಆಗಿ ಆಚರಣೆ ಮಾಡ್ತದು ಮರಿಯಾದಿ.
ಎಲ್ಲೋರೂ ಎಲ್ಲೋರಿಂಗೂ ಮಾಷ್ಟ್ರನೇ – ಹೇಳಿ ಮಾಷ್ಟ್ರುಮಾವ° ಹೇಳುಗು ಕೆಲವು ಸರ್ತಿ!
ಅದನ್ನೇ ವೃತ್ತಿ ಆಗಿ ತೆಕ್ಕೊಂಡೋರ ಸಾಮಾನ್ಯವಾಗಿ ಮಾಷ್ಟ್ರಂಗೊ ಹೇಳ್ತ ಕ್ರಮ ಇದ್ದು.

ಬೈಲಿಲಿ ಸುಮಾರು ಜೆನ ಮಾಷ್ಟ್ರಕ್ಕೊ ಇದ್ದವು – ಮಾಷ್ಟ್ರುಮಾವ, ದೊಡ್ಡಮಾವ, ದೊಡ್ಡಬಾವ, ಸುವರ್ಣಿನೀ, ಅಜಕ್ಕಳ ಮಾಷ್ಟ್ರಣ್ಣ, ಕಾಂತಣ್ಣ – ಇನ್ನೂ ಅನೇಕರು.
ನೆರೆಕರೆಲಿ ನೋಡಿರೆ ಧಾರಾಳ ಜೆನ ಮಾಷ್ಟ್ರಕ್ಕೊ ಇದ್ದವು.ಮದಲಿಂಗೇ ಹಾಂಗೆ, ನಮ್ಮೋರು ಮಾಷ್ಟ್ರಾಗಿಪ್ಪದು ಸರ್ವೇ ಸಾಮಾನ್ಯ.
ಮಕ್ಕೊಗೆ ವಿದ್ಯೆ ಕಲಿಶಿ ಬೆಳೆಶಿ, ಅವರ ಅಬಿವುರ್ದಿಲೇ ಸಾರ್ತಕತೆ ಕಾಂಬ ಚೆಂದದ ಉದ್ಯೋಗವೇ ಈ ’ಅಧ್ಯಾಪನ’.

ಎಲ್ಲಾ ಶಿಕ್ಷಕರಿಂಗೂ, ಅವರ ವಿದ್ಯಾರ್ಥಿಗೊಕ್ಕೂ ದೇವರು, ಗುರುಗೊ ಒಳ್ಳೆದು ಮಾಡ್ಳಿ.
ಹರೇರಾಮ.

ಗುರಿಕ್ಕಾರ°

ಸೂ: ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಣ ತಜ್ಞೆ ನಮ್ಮ ಬೈಲಿನ ಶ್ರೀ ಅಕ್ಕ ಬರದ ನಾಕು ಮಾತುಗೊ, ಇಂದ್ರಾಣ ಶುದ್ದಿ.

ಜೀವನ ನಿರ್ವಹಣೆಗೆ ನಾವು ಎಷ್ಟೋ ಉದ್ಯೋಗಂಗಳ ಹಿಡಿತ್ತು.
ಬೇರೆ ಯಾವ ಉದ್ಯೋಗದವ° ಆದರೂ, ಅವನ ಉದ್ಯೋಗಂದ ನಿವೃತ್ತಿ ಆದಪ್ಪಗ ಅವನ ಉದ್ಯೊಗದ ಪರಿಮಿತಿ ಮುಗಿತ್ತು.

ಡಾ | ಸರ್ವಪಲ್ಲಿ ರಾಧಾಕೃಷ್ಣನ

ಒಬ್ಬ ಶಿಕ್ಷಕ° ಹಾಂಗಲ್ಲ! ಅವ° ಅವನ ಜೀವನ ಪರ್ಯಂತ ಶಿಕ್ಷಕನೇ ಆಗಿರ್ತ°.
ಅವನ ಅಧ್ಯಯನ,ಅಧ್ಯಾಪನವುದೇ ಜೀವನ ಪರ್ಯಂತ ಇರ್ತು.
ಆರೇ ಎಂತ ಸಂಶಯ ಕೇಳಿದರೂ ಕೂಡಲೇ ಪರಿಹರಿಸುಲೆ ಎಡಿಗಪ್ಪದು ಶಿಕ್ಷಕಂಗೇ!!
ಆ ಕಾರಣಕ್ಕೇ ಅಲ್ಲದಾ ನಮ್ಮ ಸಂಸ್ಕೃತಿಲಿ ಗುರು ಹೇಳಿರೆ ಪೂಜ್ಯ ಸ್ಥಾನ ಕೊಟ್ಟಿಪ್ಪದು.
ಎನಗೆ ಕಲಿಶಿದ ಶಿಕ್ಷಕರು ಎಲ್ಲಿ ಎಲ್ಲಾ ಇದ್ದವು ಹೇಳಿಯೇ ಗೊಂತಿಲ್ಲೆ.

ಆದರೆ ಮನಸ್ಸಿಲಿ ಅವಕ್ಕೆಲ್ಲಾ ಪ್ರಣಾಮ ಸಲ್ಲುಸುತ್ತೆ.
ನೆರೆಕರೆಯ ಎಲ್ಲಾ ಗುರುಗಳ ಮೂಲಕ ಆನು ಎಲ್ಲಾ ಗುರುಗೊಕ್ಕೂ ವಂದನೆದೇ, ನಮಸ್ಕಾರಂಗಳನ್ನೂ ಮಾಡ್ತಾ ಇದ್ದೆ.
ಲೋಕದ ಎಲ್ಲಾ ಶಿಕ್ಷಕರಿಂಗೆ ಜಗತ್ತಿಂಗೆ ಮಾದರಿ ಶಿಷ್ಯರ ಕೊಡ್ಲೆ ಎಡಿಗಾಗಲಿ.
ಅವಕ್ಕೆ ಆಯುರಾರೋಗ್ಯ ಸಕಲ ಸೌಭಾಗ್ಯಂಗಳೂ ಶ್ರೀ ದೇವರು ಶ್ರೀ ಗುರುಗೋ ಅನುಗ್ರಹಿಸಲಿ.
ಜಗತ್ತು ನೆಂಪು ಮಡಿಕ್ಕೊಂಬ ಶಿಕ್ಷಕರಾಗಲಿ.

ಹರೆರಾಮ.
ಪ್ರೀತಿಂದ,
ಶ್ರೀದೇವಿ ವಿಶ್ವನಾಥ್

ಶ್ರೀಅಕ್ಕ°

   

You may also like...

6 Responses

 1. ಶ್ರೀಕೃಷ್ಣ ಶರ್ಮ.ಹಳೆಮನೆ says:

  ನಮ್ಮ ಜೀವಮಾನ ಇಡೀ ಎಂತಾದರೂ ಕಲಿವಲೆ ಇದ್ದೇ ಇರ್ತು. ಗುರುಗಳ ಮಾರ್ಗದರ್ಶನ ಯಾವಾಗಲೂ ನವಗೆ ಅತೀ ಅಗತ್ಯ. ನೇರವಾಗಿಯೊ ಪರೋಕ್ಷವಾಗಿಯೋ ಗುರುಗಳಾಗಿ ಮಾರ್ಗದರ್ಶನ ಮಾಡಿದ ಎಲಾ ಗುರುಗೊಕ್ಕೂ ಅನಂತಾನಂತ ಪ್ರಣಾಮಂಗೊ.

 2. ನಮ್ಮ ಇಂದಾಣ ಜ್ಞಾನಕ್ಕೆ ಮೂಲವಾಗಿಪ್ಪ, ಕನ್ನಡದ ಅಕ್ಷರಮಾಲೆಂದ ಇಂಗ್ಲೀಷಿನ ಏಬೀಸೀಡಿಯ ಪೂರ ಹೇಳಿಕೊಟ್ಟು, ಭವಿಷ್ಯದ ಬುನಾದಿಯ ಭದ್ರ ಮಾಡಿಕೊಟ್ಟ ಎಲ್ಲಾ ಮಾಷ್ಟ್ರಕ್ಕೊಗೂ, ಟೀಚರುಗೊಕ್ಕೂ ಅನಂತ ಧನ್ಯವಾದಂಗೊ. ಶುಭಾಶಯಂಗೊ.

 3. ಜೋರಿನ ಮಾಷ್ಟ್ರಕ್ಕೊಗೆ ಒಂದು ದಿನ, ಪಾಪದ ಮಾಷ್ಟ್ರಕ್ಕೊಗೆ ಇನ್ನೊಂದು ದಿನ ಹೇಳಿ ಎಂತಾರು ಇದ್ದೋ?
  ಅಲ್ಲ, ಎಲ್ಲೋರಿಂಗೂ ಒಟ್ಟಿಂಗೆಯೋ?

 4. ನಮ್ಮ ಜೀವನಲ್ಲಿ ಶಿಕ್ಷಣ ಹೇಳುದು ಬರೇ ಶಾಲೆಲಿ ಮಾತ್ರ ಅಲ್ಲ.. ಈ ಜೀವನವೇ ಒಂದು ಪಾಠಶಾಲೆ ಇದ್ದ ಹಾಂಗೆ….. ಬದುಕು ಹೇಳುದು ಇಪ್ಪಲ್ಲಿ ವರೆಗೆ ಪ್ರತಿ ಹಂತವೂ ಸಮಾಜ ನವಗೆ ಕಾಂಬ ಪ್ರತೀ ವ್ಯವಸ್ಥೆಯೂ ಪ್ರಾಯ,ವರ್ಣ,ಜಾತಿ,ಮತ ಭೇದ ಇಲ್ಲದ್ದೆ ಹೊಸದೊಂದರ ಕಲಿವಲೆ ದಾರಿ ಮಾಡಿಕೊಡ್ತು . ಅನೇಕ ವ್ಯಕ್ತಿಗ ನವಗೆ ವಿಭಿನ್ನ ರೀತಿಲಿ ಪ್ರಭಾವ ಬೀರುತ್ತವು . ಉತ್ತಮ ಜೀವನ ರೂಪಿಸುಲೆ ಅವರದ್ದೇ ಆದ ರೀತಿಲಿ ಕಾಣಿಕೆ ಸಲ್ಲಿಸಿರ್ತವು . ನಮ್ಮ ಜೀವನಲ್ಲಿ ಶಿಕ್ಷಕರು ಹೇಳಿ ಇಪ್ಪಂತವಕ್ಕೆ ಎಲ್ಲೋರಿಂಗೂ ಅಭಿವಂದನೆಗ….

  • ಇವರನ್ನೂ ಶಿಕ್ಷಕರ ದಿನ ವಂದನೆ ಮಾಡ್ಲೆ ಅಕ್ಕಲ್ದಾ?
   ಸಣ್ಣ ಪ್ರಾಯಲ್ಲಿ ಬೆಳೆಶಿ ಪ್ರತಿಯೊಂದನ್ನೂ ಹೇಳಿ ಕೊಡುವ ಅಪ್ಪ ,ಅಮ್ಮ ಗುರುಗ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು.

   ಪ್ರಾಥಮಿಕ ಶಾಲೆಗೆ ಪ್ರವೇಶ ಕೊಡುವ ಸಮಯಲ್ಲಿ ಅಮ್ಮನ ಹಾಂಗೆ ಮಾತೃ ವಾತ್ಸಲ್ಯದ ಮೂಲಕ ಅಕ್ಷರ ತಿದ್ದಿಸಿ, ನೀತಿ ಕತೆಂದ ಬದುಕಿಂಗೆ ರೂಪ ಕೊಟ್ಟ ಗುರುಗ.

   ವಿದ್ಯಾದಾನ ಮಾಡಿ ಜೀವನೋಪಾಯಕ್ಕೆ ಸ್ವತಂತ್ರವಾಗಿ ಬದುಕು ಕಟ್ಟಿಗೊಮ್ಬಲೆ ಕಾರಣರಾದ ಗುರುವೃಂದ.

   ಜೀವನಲ್ಲಿ ಗೊಂದಲ ಅಪ್ಪಗ ಆರೋಗ್ಯಕರ ಚರ್ಚೆನ್ದ ಸರಿಯಾದ ಮಾರ್ಗ ಕಂಡುಗೊಮ್ಬಲೆ ಸಹಕಾರ ಕೊಡುವ ಸ್ನೇಹಿತರು ಹೇಳುವ ಗುರುಗ.

   ಅರ್ಥೇಚ ಕಾಮೇಚ ಮೋಕ್ಷೇಚ ಹೇಳುವ ಜೀವನದ ಜೊತೆ ಜೊತೆಲಿ ಇಪ್ಪಂತಹ ಸಂಸಾರವ ಬೆಳಗುವ ಸಹಧರ್ಮಿಣಿ ಗುರು.

   ಬದುಕಿಲಿ ಮುಗ್ದತೆಯ ಪಾಠ ಮತ್ತೆ ಮತ್ತೆ ಹೇಳಿಕೊಡುವ ಸಣ್ಣ ಮಗುವೇ ಗುರು.(ಮಗುವಿನಷ್ಟೇ ಮುಗ್ಧ ಮನಸ್ಸು ಹೇಳಿ ಹೇಳ್ತವು)

   ನೈತಿಕ ಮೌಲ್ಯಂಗಳ ಹೇಳಿಕೊಟ್ಟು ಸರಿಯಾದ ದಾರಿಲಿ ನಡೆಶಿ ಜೀವನಕ್ಕೆ ರೂಪು ಕೊಡುವ ಸಂಸ್ಕೃತಿ ಗುರು.

   ಹರ ಮುನಿದರೆ ಗುರು ಕಾಯುವನು ಹೇಳುವ ಅಭಯ. ಗುರು ಬ್ರಹ್ಮ ಹೇಳುದು ದೇಶದ ಸಂಸ್ಕಾರ…. ಯಾವ ಗುರುವಿಂಗೆ ಎಷ್ಟು ನಮಿಸಲಿ?

   ವಿನಯಂದ ಗುರುವಿನೆಡೆಂಗೆ ಶಿಷ್ಯರು ಹೇಳಿ ಹೇಳುವ ಶಿರ ಸದಾ ಬಾಗಿರಲಿ.
   ಹರೇ ರಾಮ …

 5. raghumuliya says:

  ಈ ಡೇ ಯ ಆಚರಣೆಗೆ ಆರದ್ದೂ ಆಕ್ಷೇಪ ಇರ .
  ತನ್ನ ಜೀವನವ ಗಂಧದ ಕೊರಡಿನ ಹಾಂಗೆ ತೇದು, ಸುತ್ತಲೂ ಸುಗಂಧವ ಪಸರಿಸುವ ಶಿಕ್ಷಕರಿಂಗೆ ಪ್ರಣಾಮಂಗೋ.
  ಗುರುಬ್ರಹ್ಮಾ …ಇದು ನಮ್ಮ ದೇಶದ ಸಂಸ್ಕಾರವೂ ಅಲ್ಲದೋ? ಹೆರದೇಶಲ್ಲಿ ಈ ದಿನದ ಆಚರಣೆ ಇದ್ದೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *