- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಶ್ರೀಮತಿ ಸರಸ್ವತಿ ಶಂಕರ್ ಬರೆದ ಪ್ರವಾಸ ಕಥನ ‘ಚಿನ್ನದ ನಾಡಿಂದ ಹೊನ್ನ ದ್ವಾರದತ್ತ ‘ ಕಳೆದ ೨೪ಕ್ಕೆ ಬೆಂಗಳೂರಿಲಿ ನಡೆದ ಕಾರ್ಯ ಕ್ರಮಲ್ಲಿ ಲೋಕಾರ್ಪಣೆ ಆತು.ರವಿ ಪ್ರಕಾಶನ,ಬೆಂಗಳೂರು -ಇವು ಪ್ರಕಾಶಕರು-ಪ್ರಕಟಿಸಿದ್ದ ಒಟ್ಟು ಐದು ಗ್ರಂಥಂಗೊ ಅಂದು ಅಲ್ಲಿ ಬಿಡುಗಡೆ ಆಯಿದು.
ಕೆಲವು ಊರುಗೊಕ್ಕೆ ಭೇಟಿ [ದೇಶವಿದೇಶಲ್ಲಿ] ನೀಡಿದ ಇವು,ತುಂಬಾ ಶ್ರಮಪಟ್ಟು ಮಾಹಿತಿ ಸಂಗ್ರಹ ಮಾಡಿ ಈ ಕೃತಿ ಬರೆದ್ದವು.ಇದರಲ್ಲಿ ಹಲವು ಲೇಖನಂಗೊ ಈಗಾಗಲೇ ಪತ್ರಿಕೆಗಳಲ್ಲಿಯೂ ಪ್ರಕಟ ಆಯಿದು.ಈಗ ಪುಸ್ತಕರೂಪಲ್ಲಿ ಬಂತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಹಿರಿಯ ಶಿಕ್ಷಣವೇತ್ತ ಪ್ರೊ॥ಕೆ.ಇ.ರಾಧಾಕೃಷ್ಣ ವಹಿಸಿದವು.ಕೃತಿ ಬಿಡುಗಡೆ ಮಾಡಿದವರು ನಾಡಿನ ಹೆಸರಾಂತ ಸಾಹಿತಿ-ಡಾ॥ನಾ.ಮೊಗಸಾಲೆ.
ವಿದ್ವಾಂಸ ಡಾ।।ಕಬ್ಬಿನಾಲೆ ವಸಂತ ಭಾರದ್ವಾಜ ಮುಖ್ಯ ಅತಿಥಿಯಾಗಿ ಇತ್ತಿದ್ದವು.
ಪಟಲ್ಲಿ ಎಡಂದ ಬಲತ್ತಿಂಗೆ ನೋಡಿದರೆ ಎರಡನೆಯವು ಸರಸ್ವತಿ ಶಂಕರ್.
ಸರಸ್ವತಿ ಶಂಕರ್ ಬರೆದ ಎರಡು ಕಥಾಸಂಕಲನ [ತೆನೆಗಳು ಮತ್ತೆ ಸುಮಸಂಚಯ] ಮತ್ತೆ ಎರಡು ಕಾದಂಬರಿ [ಜ್ವಾಲೆ ಮತ್ತೆ ಬಿರುಗಾಳಿ ] ಈ ಮೊದಲು ಪ್ರಕಟ ಆಯಿದು.
ಕುಂಬಳೆಯ ಶೇಡಿಗುಮ್ಮೆ ಕೃಷ್ಣ ಭಟ್ಟರ ಮಗಳಾದ ಇವು ,ಬೆಂಗಳೂರಿಲಿದ್ದವು. ಒಂದು ಖಾಸಗಿ ಕೋಲೇಜಿಲಿಗಣಿತ ಉಪನ್ಯಾಸಕಿ ಆಗಿ ನಿವೃತ್ತರು.ಇವರ ಪತಿ ಡಾ॥ಶಂಕರ ಭಟ್,ಸುಳ್ಯ[ಇವು ಬಂಟ್ವಾಳ ತಾಲೂಕಿನ ಮಂಚಿ ಸುಳ್ಯದವು] ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಪ್ರೊಫೆಸರ್ ಆಗಿ,ನಿವೃತ್ತರು.ಇವೂ ಕೂಡಾ ಸಸ್ಯಶಾಸ್ತ್ರ ಮತ್ತೆ ಸೂಕ್ಷ್ಮಜೀವಿಶಾಸ್ತ್ರ ಕುರಿತಾದ ಹಲವಾರು ಪಾಠಪುಸ್ತಕ ಬರೆದ್ದವು.ಇಬ್ಬರೂ ಸಾಹಿತ್ಯಾಸಕ್ತಿ ಇಪ್ಪವರು.
ಸರಸ್ವತಿ ಶಂಕರ್ ಗೆ ಈ ಕೃತಿ ಬರೆವಲೆ ಪ್ರೋತ್ಸಾಹ ಕೊಟ್ಟು ,ಒಂದು ಒಳ್ಳೆ ಕೃತಿ ಬೆಳಕಿಂಗೆ ಬಪ್ಪ ಹಾಂಗೆ ಮಾಡಿದ್ದರಲ್ಲಿ ಅವರ ಯಜಮಾನರ ಪಾತ್ರ ದೊಡ್ಡದು.
ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಇವರಿಬ್ಬರಿಂದಲೂ ನಡೆಯಲಿ ಹೇಳಿ ಹಾರೈಸುವೊ.
ಅವರ ಕಾದಂಬರಿ ಬಿರುಗಾಳಿ-ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಹಾರ್ನಹಳ್ಳಿ ಗೌರಮ್ಮ ಮಂಜಪ್ಪ ದತ್ತಿನಿಧಿ ಪ್ರಶಸ್ತಿ ೨೦೦೯ರ ವರ್ಷಕ್ಕೆ ಸಿಕ್ಕಿದ್ದು.
ಈ ಕಾರ್ಯಕ್ರಮವ ನೋಡುಲೆ ಆನೂ ಹೋಗಿತ್ತಿದ್ದೆ.ಪೂರ್ವದ ಥೈಲೇ೦ಡಿ೦ದ ಪಶ್ಚಿಮದ ಅಮೇರಿಕ ವರೆಗೆ ಪ್ರವಾಸ ಮಾಡಿ ವಿಶಿಷ್ಟ ರೀತಿಲಿ ಈ ಪುಸ್ತಕ ಬರದ್ದವು.ಈ ದ೦ಪತಿಗಳ ಸರಳತೆ ನವಗೆಲ್ಲ ಮಾದರಿ ಆಯೆಕ್ಕಾದ್ದು.
ಸರಸ್ವತಿ ಅತ್ತೆಯ ಕಥಾಸ೦ಕಲನ೦ಗೊಕ್ಕೆ ಕೆಲವು ಪ್ರಶಸ್ತಿಗಳೂ ಸಿಕ್ಕಿದ್ದು ಅಲ್ಲದೋ ಗೋಪಾಲಣ್ಣ.
ಧನ್ಯವಾದ ಮಾವ…
ಸಿಕ್ಕಿಯಪ್ಪಗ ಓದುತ್ತೆ… ತಿಳಿಸಿದ್ದಕ್ಕೆ ಧನ್ಯವಾದಂಗೊ ಗೋಪಾಲಣ್ಣ…