Oppanna.com

ಮಾರ್ಗದ ಕರೆ ಇಂಗ್ರೋಜಿಲಿ ‘ಶುದ್ಧಕಲಶಾಭಿಶೇಕ’…!!

ಬರದೋರು :   ಒಪ್ಪಣ್ಣ    on   05/02/2010    56 ಒಪ್ಪಂಗೊ

ಬೈಲಿಂಗೆಬತ್ತ ದೊಡ್ಡಮಾರ್ಗದ ಕರೆಲಿ ಒಂದು ಇಂಗ್ರೋಜಿ (ಇಗರ್ಜಿ / ಚರ್ಚು) ಇದ್ದನ್ನೆ?
ಅದೇ, ಅಲ್ಲೆ ರಜ ರಬ್ಬರು ತೋಟ ಇದ್ದದಾ – ಅಲ್ಲಿಗೆ ರಬ್ಬರಡ್ಕವೋ ಎಂತದೋ ಹೇಳ್ತವು ಜೆನಂಗೊ!
ಹೆಸರೇನೇ ಇದ್ದರೂ ನವಗೆಲ್ಲ `ಮಾರ್ಗದಕರೆ ಇಂಗ್ರೋಜಿ’ ಹೇಳಿ ಲೆಕ್ಕ, ಅಷ್ಟೆ!
ಅಲ್ಲಿ ಒರಿಶಕ್ಕೊಂದರಿ ನೆಡೆತ್ತ ಎಂತದೋ ಗೌಜಿ – ಓ ಮೊನ್ನೆ ಸುರು ಆತು.
ಗೌಜಿಯ ಅಬ್ಬರ ನೋಡಿಕ್ಕಿ, ಬೇಡಬೇಡ ಹೇಳಿರೂ ಈ ಶುದ್ದಿ ಹೇಳುಲೆ ಶುರುಮಾಡಿದ್ದು!

ಕಣಿಯಾರ ದೇವಸ್ಥಾನದ ಹಾಂಗೆ ಪ್ರಾಕಿಲೇ ಆ ಇಂಗ್ರೋಜಿ ಇತ್ತಿಲ್ಲೆ, ಮತ್ತೆ, ಇತ್ತೀಚೆಗೆ ಯೇವಗಳೋ ಬಂದದು!
ಬ್ರಿಟಿಷರ ಕಾಲಲ್ಲಿ ಹೇಳ್ತವು, ಅಂತೂ ಶಂಬಜ್ಜನ ಕಾಲಕ್ಕಪ್ಪಗ ಇತ್ತು ಖಂಡಿತ.
ಹಂಚಿನ ಎರಡುಮಾಡಿನ ಸಣ್ಣ ಕಟ್ಟೋಣಲ್ಲಿ, ಕುರ್ಚಿಕಾಲಿನ ಹಾಂಗಿರ್ತ ಎರಡು ಮರದ ತುಂಡುಗಳ ಸಂದುಕೂಡುಸಿ ಎದುರು ಗೋಡಗೆ ನೇಲುಸಿಗೊಂಡು ಇತ್ತಡ, ಮದಲಿಂಗೆ.
ದೂರಂದ ನೋಡಿರೆ ಕನ್ನೆಪ್ಪಾಡಿ ಬಜನಾಮಂದಿರದ ಹಾಂಗೆ ಕಾಂಗು, ಅಷ್ಟಕೆ ಇತ್ತುದೇ!

ಅದಕ್ಕೆ ಹೋಯ್ಕೊಂಡು ಇದ್ದದೂ ಅಷ್ಟೇ, ಅವರ ಕೆಲಾವು ಜೆನಂಗೊ. ಪುರ್ಬುಗೊ / ಸೋಜಂಗೊ ಹೇಳುದು ಅವರ.
ಈಗ ಮಾರ್ಗದ ಕರೆಲಿ ಇಡೀ ಅವ್ವೇ ತುಂಬಿರುದೇ, ಮದಲಿಂಗೆ ಕಮ್ಮಿ ಜೆನ ಇದ್ದದು.
ಅವರ ಮನೆಯುದೇ ಅಲ್ಲೇ – ಓ ಆ ಹೊಲೆಯರ ದಟ್ಟಿಗೆ ಇತ್ತಲ್ದ, ಆಚಬೈಲಿನ ಕರೆಲಿ – ರಬ್ಬರಡ್ಕಲ್ಲೆ ಆಗಿ ಇದ್ದಿದ್ದದು.

ಅಂಬಗ ಎಲ್ಲ ಹೆಚ್ಚಿನವುದೇ ನಮ್ಮೋರಲ್ಲಿಗೆ ಕೂಲಿಕೆಲಸಕ್ಕೆ ಬಕ್ಕು, ನಮ್ಮೋರ ಆಳುಗಳ ಒಟ್ಟೊಟ್ಟಿಂಗೆ.
ಪೇತ್ರು, ಕರ್ನೆಲ°, ರೋಂದ°, ಜೋನು, ದೂಜ° – ಇವೆಲ್ಲ ನಮ್ಮ ಐತ್ತ, ಚೋಮ, ಅಂಗಾರ°, ಚುಕ್ರ°, ಚನಿಯನವರ ಒಟ್ಟೊಟ್ಟಿಂಗೇ ಇಕ್ಕು. ಅವರ ಇಬ್ರ ವೇಶಭೂಷಣಲ್ಲಿ, ಆಹಾರ ಪದ್ಧತಿಲಿ, ಮಾತಾಡುವ ರೀತಿಲಿ – ಏನೂ ವೆತ್ಯಾಸ ಇಲ್ಲೆ!
ಎಂತಕೇಳಿರೆ, ಮದಲಿಂಗೆ ಅವು ಎಲ್ಲ ಒಂದೇ ಕುಟುಂಬದವು ಅಡ, ಶಂಬಜ್ಜ° ಹೇಳುಗು!

5SogeMadinaIngroji
ದೊಡ್ಡ ಇಂಗ್ರೋಜಿಗೆ ಹೋಪಲೆಡಿಯದ್ರೆ ಎಂತಾತು, ದಟ್ಟಿಗೆ ಕರೆಲಿ ಸಣ್ಣದೊಂದು ಇದ್ದು!!

~
ಇಂಗ್ರೋಜಿ ಕಟ್ಟಿ ಒಂದೆರಡು ಒರಿಶ ಆದ ಸಮೆಯಲ್ಲಿ, ಊರಿಲಿಡೀಕ ಬರ ಅಡ. ಕ್ಷಯ ಸಂವತ್ಸರ ಇದಾ, ಹಾಂಗಾಗಿ! – ಹೇಳ್ತವು ಶಂಬಜ್ಜ.
ಸರಿಗಟ್ಟು ತಿಂಬಲೂ ಇಲ್ಲೆ. ಕುಡಿವಲೆ ನೀರುದೇ ಇಲ್ಲೆ. ರೋಗ ಬಂದರೆ ಮದ್ದುದೇ ಇಲ್ಲೆ, ಮದ್ದಿಂಗೆ ಪೈಸೆ ಮೊದಲೇ ಇಲ್ಲೆ!
ಆ ಸಂದರ್ಭಲ್ಲಿ ಇಂಗ್ರೋಜಿಯ ಪಾದ್ರಿ ಸಮೆಯ ನೋಡಿ ಹೊಲೆಯರ ದಟ್ಟಿಗೆಗೆ, ಮೇರಂಗಳ ಬೊಟ್ಟಕ್ಕೆ ಬಂದು, ಪ್ರತಿ ಮನೆಒಳಂಗೆ ಹೊಕ್ಕತ್ತಡ, ಉಡು ಹೊಕ್ಕಹಾಂಗೆ!
ಮನೆಯ ಎಲ್ಲೊರತ್ರುದೇ ಮುಟ್ಟಿ ಮಾತಾಡಿ, ಹಲ್ಲುಕಿಸುದು, ಅಡಿಗೆಗೆ ಗೋಧಿಯುದೇ, ರೋಗಕ್ಕೆ ದರ್ಮಾರ್ಥ ಮದ್ದುದೇ ಕೊಟ್ಟತ್ತಡ.
ಇಂಗ್ರೋಜಿಯ ದೇವರಿನ ಕೋಪಂದಾಗಿ ಈ ಬೈಲಿಂಗೆ ಅಭಾವ ಬಂದದು ಹೇಳಿಯೂ, ಸಮೃದ್ಧಿ ಬರೆಕ್ಕಾರೆ ಎಲ್ಲೊರುದೇ ಇಂಗ್ರೋಜಿಗೆ ಬರೆಕ್ಕು ಹೇಳಿಯೂ, ಇಂಗ್ರೋಜಿಗೆ ಬತ್ತರೆ ನಿಂಗಳ ಹಾಳು ಬೂತಂಗಳ ನಂಬುಲಾಗ ಹೇಳಿಯೂ, ದೇವಸ್ಥಾನಲ್ಲಿಪ್ಪ ಕಲ್ಲಿನ ದೇವರಿಂಗೆ ನಮಸ್ಕಾರ ಮಾಡ್ಳಾಗ ಹೇಳಿಯೂ ಆಣೆಮಾಡುಸಿತ್ತಡ!
ಕೆಲವೆಲ್ಲ ‘ಗುಳಿಗ್ಗನಾಣೆ’ ಒಪ್ಪಿದವಡ.!!

ಎಲ್ಲೊರು ಅಲ್ಲ, ಕೆಲಾವು ಜೆನ! ಮತ್ತೆ ಕೆಲವಕ್ಕೆ ‘ಗುಳಿಗ್ಗ ಸುಮ್ಮನೆ ಬಿಡ’ ಹೇಳಿ ಹೆದರಿಕೆ ಇದ್ದೇ ಇತ್ತಲ್ದಾ, ಹಾಂಗಾಗಿ ಅದಕ್ಕೆ ಒಪ್ಪಿದ್ದವಿಲ್ಲೆ.

ಆ ಒಪ್ಪಿದ ಜೆನಂಗೊಕ್ಕೆ ಪಾದ್ರಿ ಅಂಬಗಳೇ ಆಶೀರ್ವಾದ ಮಾಡಿತ್ತಡ.
ಇಂಗ್ರೋಜಿಂಗೆ ದಿನಿಗೇಳಿ, ಎಂತದೋ ಕುರೆನೀರಿಲಿ ಮೀಶಿ ಶುದ್ಧಮಾಡಿದವಡ! ಮತ್ತೆಯೇ ಅವೆಲ್ಲ ಯೇಸುವಿನ ಮಕ್ಕೊ – ಸೋಜಂಗೊ ಆದ್ದಡ.
ಅಂಬಗಾಣ ಅವರ ಹೆಸರೆಲ್ಲ – ಬೂದ°, ಗುರುವ°, ಚುಕ್ರ°, ಮಾಯ್ಲ°, ನಿಟ್ಟೋಣಿ, – ಅವರವರ ಮನೆಯಅಪ್ಪ ಮಡಗಿದ ಹಾಂಗೇ ಇತ್ತು,
ಆದರೆ ಅವಕ್ಕೆ ಹುಟ್ಟಿದ ಮಕ್ಕಳದ್ದೆಲ್ಲ ಇಂಗ್ರೋಜಿಅಪ್ಪ° (ಪಾದ್ರಿ) ಮಡಗಿದ್ದಡ – ಪೇತ್ರು, ರೋಂದ°, ರೋಬರ್ಟು, ಚಾರ್ಲ°, ಜೆಕ್ಕಪ್ಪು, ಮೇರಿಯಮ್ಮ, ಸಿಸಿಲ°,- ಅದು ಇದು ಎಲ್ಲ!
(ಮೂಲ ಹೆಸರು ಇಂಗ್ಳೀಶಿಲಿ ಬೇರೆಯೇ ಇದ್ದರೂ, ಇವು ಹೇಳಿ ಹೇಳಿ ಹಾಂಗೆ ಆದ್ದೋ ಕನುಪ್ಯೂಸು ನಮ್ಮ ದೊಡ್ಡಬಾವಂಗೆ!)

ಕುರೆ ನೀರಿಲಿ ಶುದ್ಧ ಮಾಡುದು
ಕುರೆ ನೀರಿಲಿ ಶುದ್ಧ ಮಾಡುದು (ಈಗ ಹಿಂದು! ಮುಳುಗಿ ಎದ್ದರೆ ಬಾಯಮ್ಮ!)

ಅಲ್ಲಿಂದ ಮತ್ತೆ ಪ್ರತಿ ಆದಿತ್ಯವಾರ ಅವೆಲ್ಲ ಇಂಗ್ರೋಜಿಗೆ ಹೋಪದಡ, ಹೆದರಿಕೆಲಿ – ಇನ್ನೊಂದರಿ ಆ ದೇವರಿಂಗೆ ಕೋಪ ಬಂದು ಬರ ಬಪ್ಪಲಾಗನ್ನೆ!!
ಈ ಜೆನಂಗೊಕ್ಕುದೇ ಹಾಂಗೇ – ಅಷ್ಟ್ರೊರೆಂಗೆ ನಮ್ಮ ದೇವಸ್ಥಾನಂಗಳಲ್ಲಿ ನಿಂದೊಂಡಿದ್ದ ಹಾಂಗೆ ಹೆರಾ ನಿಲ್ಲೆಕ್ಕೂಳಿ ಇತ್ತಿಲ್ಲೆಡ, ಸೀತ ಒಳಂಗೇ ಹೋಪದಡ.
ಅಲ್ಲಿ ಪಾದ್ರಿ ಪ್ರಾರ್ತನೆ ಮಾಡ್ತಡ, ಇವಕ್ಕೆ ಅರ್ತ ಅಪ್ಪ ಹಾಂಗೆ. ಇವು ಆ ವಾರ ಮಾಡಿದ ಎಲ್ಲಾ ತಪ್ಪುಗಳನ್ನುದೇ ಕ್ಷಮಿಸೆಕ್ಕು ಹೇಳಿ ಇವರ ಪರವಾಗಿ ಆ ಪಾದ್ರಿ ದೇವರತ್ರೆ ಕೇಳಿಗೊಳ್ತಡ, ಮತ್ತೆ ಇವು ನಮಸ್ಕಾರ ಮಾಡಿಕ್ಕಿ ಮನೆಗೆ ಬಪ್ಪದಡ.
ನಮಸ್ಕಾರವುದೇ ಹಾಂಗೆ, ಕಾಂಬುಅಜ್ಜಿ ಹೊಸ್ತಿಲಿಂಗೆ ಮಾಡಿದ ಹಾಂಗೆ – ಕೈಲಿ ಎದೆ, ಹಣೆ ಮುಟ್ಟಿ ನಮಸ್ಕಾರ ಮಾಡುದಲ್ಲ, ಬದಲಾಗಿ ಹಣೆ, ಎದೆ, ಎಡಭುಜ, ಬಲಭುಜ ಎಲ್ಲ ಮುಟ್ಟಿ, ಗೋಡೆಲಿ ನೇಲುಸಿದ ಮರದತುಂಡಿನದ್ದೇ ಆಕಾರ ಬರುಸುದಡ!
ಸುರುಸುರುವಿಂಗೆ ಅದೆಲ್ಲ ಕಷ್ಟ ಆದರೂ ಬೇಗಲ್ಲೇ ಕಲ್ತುಗೊಂಡವಡ ಎಲ್ಲೊರುದೇ. ಅದೇ ನಮುನೆ ನೆಡಕ್ಕೊಂಡು ಇತ್ತು / ಇದ್ದು ಇಂದಿನ ಒರೆಂಗೂ!

ಅಂದು ಬರೇ ಸಣ್ಣ ಬಜನಾಮಂದಿರದಷ್ಟಕೆ ಇದ್ದ ಆ ಇಂಗ್ರೋಜಿ ಮತ್ತೆ ಬೆಳದತ್ತಡ.
ರಂಗಮಾವ ಸಣ್ಣ ಇಪ್ಪಕಾಲಲ್ಲಿ, ಅದರ ಒಂದು ‘ತರವಾಡು ಮನೆ’ಯಷ್ಟಕ್ಕೆ ಕಟ್ಟಿದವಡ, ಕೊಡೆಯಾಲದ ದೊಡ್ಡಇಂಗ್ರೇಜಿಂದ ಪೈಶೆ ಬಯಿಂದಡ – ಹೇಳಿ ಎಲ್ಲ ಮಾತಾಡಿಗೊಂಡು ಇತ್ತಿದ್ದವು.
ಹೋವುತ್ತ ಜೆನಂಗಳೂ ರಜಾ ಜಾಸ್ತಿ ಆದವು. ಕೆಲವೆಲ್ಲ ಮನೆಯೋರು – ಇಂದು ಹೊಲೆಯ ಆದರೆ ನಾಳೆ ಸೋಜ, ಕಳುದ ವಾರ ಮೇರಂಗೊ ಆದರೆ ಬಪ್ಪ ವಾರಂದ ಸೋಜಂಗೊ – ಹೀಂಗೆಲ್ಲ ಜಾತಿಪಗರುಲೆ ಸುರು ಆದವಡ!
ಹಾಂಗೆ ಸೋಜಂಗೊ ಆದರೆ ಅವಕ್ಕೆ ಪೈಸೆ ಸಿಕ್ಕಿಯೊಂಡು ಇತ್ತಡ! ಹಾಂಗಾಗಿ ತೀರಾ ಹರಿಜನರು, ಗಿರಿಜನರು ಮಾಂತ್ರ ಅಲ್ಲದ್ದೆ, ರಜ ಕಲ್ತವುದೇ ಅಲ್ಲಿಗೆ ಹೋಪಲೆ ಸುರುಮಾಡಿದವಡ.
ಅವರ ಹಾಂಗೆ ಪೇಂಟು ಹಾಯ್ಕೊಂಡು ಅನುಕರಣೆ ಮಾಡ್ಳುದೇ ಸುರುಮಾಡಿದವಡ!
~

ಅಂದು ಪಾದ್ರಿ ಹೇಳಿದ್ದಕ್ಕೆ ಗುಳಿಗ್ಗನ ಬಿಟ್ಟವಲ್ದ, ಅವು ನಮ್ಮ ದೇವಸ್ಥಾನಂಗಳನ್ನುದೇ ಬಿಟ್ಟಿತ್ತಿದ್ದವು.
ಎಷ್ಟು ದೇವರ ಬಿಟ್ರುದೇ ಅವರ ಬಾಲ್ಯದ, ಪೂರ್ವಾಶ್ರಮದ ಆಚಾರಂಗಳ ಬಿಡ್ಳೆ ಕಷ್ಟ ಆವುತ್ತಿಲ್ಲೆಯೋ?!
ಹಾಂಗಾಗಿ ಅಪ್ಪಲೆ ಸೋಜಂಗೊ ಆದರೂ, ಅವರ ಆಚಾರ ವಿಚಾರ ಚಿಂತನೆಗೊ ನಮ್ಮ ಸನಾತನ ಧರ್ಮಕ್ಕೆ ಸಮಾಂತರವಾಗಿ ನೆಡವಲೆ ಸುರು ಆತು.
ನೇರವಾಗಿ ಹೇಳ್ತರೆ, ನಮ್ಮ ಊರಿಲೇ ತೆಯಾರಾದ ಈ ‘ಯೇಸುವಿನ ಮಕ್ಕೊ’ ಮದಲಿಂಗೆ ಗುಳಿಗ್ಗಂಗೋ, ದೇವಸ್ಥಾನಕ್ಕೋ ಮಾಡಿಗೊಂಡಿದ್ದದರ ಅಲ್ಲಿಗೂ ಪ್ರತಿತೆಗವಲೆ ಸುರು ಮಾಡಿದವು.
ಇದರ ಪಾದ್ರಿಗಳುದೇ ನೇರವಾಗಿ ಪುಷ್ಟೀಕರುಸಿದವಡ, ಎಂತಕೇಳಿರೆ ಮತ್ತಾಣೋರು ಸೋಜಂಗೊ ಅಪ್ಪಲೆ ಅನುಕೂಲ – ಹೇಳ್ತ ಲೆಕ್ಕಂದ!

ಅವರ ಮನೆಲಿ ಈಗ ಮೊದಲಾಣ ಹಾಂಗೆ ತೊಳಶಿಕಟ್ಟೆ ಇಲ್ಲೆ! ಆದರೆ ಮನಗೆ ಆಯ ಇದ್ದು!
ಒಳದಿಕೆ ಗೋಡಗೆ ದೇವರ ಪಟಂಗ ನೇಲುಸಿಗೊಂಡಿಲ್ಲೆ, ಬದಲಾಗಿ ಬಾಯಮ್ಮ ಒಂದು ಸಣ್ಣ ಕೂಸಿನ ಮುದ್ದು ಮಾಡ್ತ ಪಟವೋ, ಜವ್ವನ ಯೇಸುವಿನ ಆ ಮರದತುಂಡಿಂಗೆ ಆಣಿಬಡುದು ನೇಲುಸಿದ ಪಟವೋ ಮಣ್ಣ ಇಪ್ಪದು.
ಕೊರಳಿಲಿಯುದೇ ಹಾಂಗೆ- ತೊಳಶಿಮಣಿಯ ಮಾಲೆಲಿ ದೇವರ ಪದಕ ಇಲ್ಲೆ, ಕ್ರೂಜು(ಕ್ರಾಸ್) ಇಪ್ಪದು.
ಗೆದ್ದೆ ಇಪ್ಪ ಸೋಜಂಗಳ ಅಕ್ಕಿಮುಡಿಯ ತಲೆಲಿದೇ ಇದೇ ಕ್ರೂಜು ಇಪ್ಪದು – ಒಳ ಇಪ್ಪದು ಹಾಳಾಗದ್ದ ಹಾಂಗೆಡ!
ಹೊಸ್ತಿಲಿಲಿದೇ ಹಾಂಗೆ, ಕಾಂಬುಅಜ್ಜಿ ಬರದ ಸ್ವಸ್ತಿಕದ ಗೆರೆ ಇಲ್ಲೆ, ಇದೇ ಕ್ರೂಜುಗೆರೆ ಇಪ್ಪದು!
ಹೆಮ್ಮಕ್ಕಳ ಕೊರಳಿಲಿ ಕರಿಮಣಿ ಇದ್ದು, ತಾಳಿ ಇಲ್ಲೆ. ಮೋರೆಲಿ ಬೊಟ್ಟು ಇದ್ದು, ಕುಂಕುಮ ಇಲ್ಲೆ! ತಲೆಲಿ ಜೊಟ್ಟು ಇದ್ದು, ಹೂಗಿಲ್ಲೆ!
ನಮ್ಮ ಆಚಾರಲ್ಲಿ ಎಂತೆಲ್ಲ ಇತ್ತೋ, ಹೆಚ್ಚಿಂದೆಲ್ಲ ಅವರದ್ದರಲ್ಲಿದೇ ಇತ್ತು, ಆದರೆ ರಜಾ ಬೇರೆ ನಮುನೆ, ಅವಕ್ಕೆ ಅಕ್ಕಾದ ಹಾಂಗೆ ಮಾರ್ಪಾಡುಗೊ!

ಅಲ್ಲಿಂದಲೇ ಇನ್ನೂ ಮುಂದುವರುದವು…

ದೀಪ ಹೊತ್ತುಸಿರೆ ಸಿಕ್ಕುವ ಗಾಂಭೀರ್ಯತೆ ಕರೆಂಟು ಹೋದರೆ ಹೊತ್ಸುತ್ತ ಕೇಂಡ್ಳು ಹೊಸ್ಸಿರೆ ಸಿಕ್ಕುಗೋ? ಅವುದೇ ಎಳ್ಳೆಣ್ಣೆ ಎರದು ಏಸುವಿಂಗೆ ಕಾಲುದೀಪ ಹೊತ್ತುಸಿದವು!
ಕಪ್ಪು ಕಲ್ಲಿನ ಗಂಭೀರ ಮೂರ್ತಿಯ ನೋಡುವಗ ಸಿಕ್ಕುವ ಆನಂದ, ಬಣ್ಣಮೆತ್ತಿದ ಪ್ಲೇಶ್ಟಿಕು ಮೂರ್ತಿ ನೋಡಿರೆ ಸಿಕ್ಕುಗೋ? ಅಲ್ಲಿಯೂ ಕೆಲವೆಲ್ಲ ಮೂರ್ತಿಗೊ ಸುರು ಆತು!
ಅರಳಿದ, ಪರಿಮ್ಮಳದ ಹೂಗುಗಳ ನೋಡುವಗ ಸಿಕ್ಕುವ ಸಂತೋಷ, ನೆತ್ತರು ಹಿಡುದ ಒಣಕ್ಕು ಕೋಲಿನ ಪಟ ನೋಡಿರೆ ಸಿಕ್ಕುಗೋ? ಇಂಗ್ರೋಜಿಲಿಯುದೇ ಹೂಗಿನ ಪರಿಮ್ಮಳ ಸುರು ಆತು!

ಚೆ ಚೆ! ನೋಡಿಗೊಂಡು ಇದ್ದ ಹಾಂಗೇ ಆ ಇಂಗ್ರೋಜಿಲಿ ನಮ್ಮದೆಲ್ಲ ಸುರು ಆತು!
ಮೂರ್ತಿ, ಉರುಕ್ಕು, ಮಂತರುಸಿದ ಮಾಲೆಗೊ.! ಕಾಲುದೀಪ, ಎಳ್ಳೆಣ್ಣೆ, ಬತ್ತಿ, ಊದುಬತ್ತಿ, ಆರತಿ!!
ಹೂಗು, ಹೂಗಿನ ಮಾಲೆ, ಧೂಪದ ಪರಿಮ್ಮಳ..! ಬೆಳ್ಳಿಹೂಗು, ಚಿನ್ನದ ಹೂಗಿನ ಹರಕ್ಕೆ, ಮೇರಿಗೆ ಪಟ್ಟೆಸೀರೆಯ ಹರಕ್ಕೆ!!
ನಾಗದೋಶ ನಿವುರ್ತಿ, ಶನಿದೋಶ ನಿವುರ್ತಿ!! ಹೂಗಿನ ಪ್ರಸಾದ, ಹೊಡಿಗಂಧ, ಭಸ್ಮ..!
ಅಲ್ಲಿಯೂ ಅರ್ಚನೆ, ರಂಗಪೂಜೆ, ಬಲಿ, ಕ್ರಮೇಣ – ಜಾತ್ರೆ, ಬಲಿ, ಕೊಡಿ, ಬೆಡಿ…!
ಈಗಂತೂ, ಅಲ್ಲಿಯೂ ವಾರ್ಷಿಕ ಪೂಜಾ ಉತ್ಸವ ಸುರು ಆತು!

ಮದಲಿಂಗೆ ಒರಿಶಕ್ಕೊಂದರಿ ಇತ್ತೋ ಸರಿ ನೆಂಪಿಲ್ಲೆ, ಈಗ ಸುಮಾರು ಸಮೆಯ ಆತಡ – ಒರಿಶಕ್ಕೊಂದರಿ ‘ಉತ್ಸವ’ ಹೇಳಿಯೇ ಹೇಳ್ತವದರ. (ಪುಣ್ಯಕ್ಕೆ, ಆಯನ ಹೇಳ್ತವಿಲ್ಲೆ!)
ಅದರೊಟ್ಟಿಂಗೆ ಬೆಡಿ, ರಂಗಪೂಜೆ, ಕ್ರೈಸ್ತರಿಗಾಗಿ ಪೂಜೆ, ಅಕ್ರೈಸ್ತರಿಗಾಗಿ ಪೂಜೆ – ಎಲ್ಲ ಹೇಂಗೂ ಇದ್ದನ್ನೆ!
ಇನ್ನೆಂತರ ಬಾಕಿ ಇದ್ದು..!? ಚೆ!
ನಮ್ಮ ಯಾವೆಲ್ಲ ಆಚರಣೆಗಳ ಬೈದು ಅವು ಸೋಜಂಗೊ ಆದವೋ, ಅದೇ ಆಚರಣೆಗಳ ಅಲ್ಲಿ ಹೋಗಿ ಸುರು ಮಾಡಿದವು! ಇಲ್ಲಿ ಕಲ್ತದರ, ಕೇಳಿದ್ದರ, ನೋಡಿದ್ದರ ಅಲ್ಲಿ ಅನ್ವಯ ಮಾಡಿದವು!
ಅಪ್ಪನಮನೆ ಚಿನ್ನವ ಕದ್ದು ಗೆಂಡನಮನಗೆ ಹೊತ್ತ ಹಾಂಗೆ!

ಅಲ್ಲಿಗೇ ನಿಂದತ್ತೋ, ಅದೂ ಇಲ್ಲೆ!
ನಮ್ಮ ಆಚಾರ ವಿಚಾರಂಗಳ ಒಂದೊಂದೇ ಆಗಿ ಪ್ರತಿ ತೆಗವಲೆ ಅಬ್ಯಾಸ ಆಗಿದ್ದ ಸೋಜಂಗೊ ಮುಂದೆ ನಮ್ಮೋರ ಹೆಸರಿಂಗೂ ಕೈ ಹಾಕಿದವು!
ಹಿಂದುಗಳಲ್ಲಿ ದೇವರುಗಳ ನೇರ ಹೆಸರುಗೊ ಅಲ್ಲದ್ದೆ, ವಿಶೇಷಣಂಗಳ ಮಡಿಕ್ಕೊಂಡು ಇತ್ತಲ್ದ, ಅದೆಲ್ಲ ಅವುದೇ ಮಡಿಕ್ಕೊಂಡು ತಿರುಗಲೆ ಸುರು ಮಾಡಿದವು.
ಅಭಿಶೇಕ, ಅಶ್ವಿನಿ, ಶೈಲಾ, ಸುನೀತಾ, ಅನಿಲ್, ಪ್ರೀತಿ, ಸ್ವಾತಿ, ಹರ್ಶ, ಪುನೀತ, ವಿನೀತ, ರಂಜಿತ, ರವಿ, ಸಾಗರ, ಜಗದೀಶ, ಸುರೇಂದ್ರ – ಇದೆಲ್ಲ ಸೋಜಂಗಳ ಹೆಸರಪ್ಪಲೆ ಸುರು ಆತು. ನಮ್ಮ ದೇವರುಗಳ ಕಲ್ಪನೆಯನ್ನೇ ಅವರ ದೇವರಿಂಗೆ ಪ್ರತಿ ತೆಗವ ಕೆಲಸ ಮಾಡಿದವು!
~

ಈ ಒರಿಶ ಅಂತೂ ಅಲ್ಲಿ ಗೌಜಿಯೇ ಗೌಜಿ!
ಸದ್ಯ ಇಂಗ್ರೋಜಿಗೆ ಹೊಸ ಕಟ್ಟೋಣ ಆತಲ್ದಾ, ಆ ಕಟ್ಟೋಣವ ಶುದ್ಧ ಮಾಡ್ಳೆ ಕಲಶ ಮಡಗಿ, ಅದರ ಅಭಿಶೇಕ ಮಾಡ್ತವೋ ಎಂತೊ!
ಯಬೋ ಆ ಹೊಸ ಕಟ್ಟೋಣ – ಇದ್ದು ಹೇಂಗೆ!!

ಇಂಗ್ರೋಜಿ
ಜಾತ್ರೆಗೌಜಿಯ ಇಂಗ್ರೋಜಿ ಎದುರು ಕೊಡಿಮರ, ಬಲಿಕಲ್ಲು !!

ಬೂದು ಬಣ್ಣದ ಪೈಂಟು, ಅದೇ ಬಣ್ಣದ ಆಳೆತ್ತರದ ಕಾಂಪೋಂಡು ಗೋಡೆ!
ದೊಡ್ಡಮಾರ್ಗಂದ ಇಂಗ್ರೋಜಿಗೆ – ಅರ್ದ ಪರ್ಲಾಂಗು – ಡಾಮರು ಮಾರ್ಗ, ನೆಡುಕೆ ಬೆಳಿಗೆರೆ ಎಳದ್ದದು..!
ಒಂದು ಲೋರಿಯಷ್ಟೆತ್ತರದ ಬಾಗಿಲು, ಒಳದಿಕೆ, ತೆಂಗಿನ ಮರದಷ್ಟೆತ್ತರದ ಅಗಾಲದ ಮುಖ್ಯದ್ವಾರದ ಮುಸುಡು, ಪಾತಿಅತ್ತೆ ಸೀರೆ ಆರುಸಿದಹಾಂಗೆ ಕಾಂಗು ದೂರಕ್ಕೆ.
ಅದರ ಕೊಡಿಲಿ – ಇರುಳು ಹೊಳೆತ್ತ – ಕ್ರೂಜು, ಅದರ ಒಳದಿಕೆ ದೊಡಾ ಕೋಣೆ, ಮದುವೆಹೋಲಿನ ಹಾಂಗೆ, ಇಪ್ಪತ್ನಾಲ್ಕು ಗಂಟೆ ಕರೆಂಟು ದೆಂಡ ಮಾಡ್ಳೆ!
ಇಂಗ್ರೋಜಿಯ ಎದುರು ಒಂದು ಬಲಿಕಲ್ಲು – ಅದರ್ಲಿ ಒಂದು ಕ್ರೂಜುಕಂಬ! ಬಲಿಕಲ್ಲಿನ ಒತ್ತಕ್ಕೆ ಒಂದು ಕೊಡಿಮರದ ಕಂಬ, ಕಂಬದ ಕೊಡಿಲಿ ಪುನಾ ಒಂದುಸಣ್ಣ ಕ್ರೂಜು!!
ಈ ಸರ್ತಿ ಗೋರ್ಮೆಂಟಿಂದ ಸಿಕ್ಕಿದ್ದಡ ರಜ, ಅವರದ್ದೇ ಪೈಸೆ ಆಗಿದ್ದರೆ ಹೀಂಗೆ ಕಟ್ಟುತವಿಲ್ಲೆಪ್ಪಾ – ಹೇಳಿದ ಗುಣಾಜೆಮಾಣಿ, ಕುಶಾಲಿಂಗೆ ಅಲ್ಲ – ಬೇಜಾರಲ್ಲಿ.

ಹಾಂಗೆ ಈ ಸರ್ತಿಯಾಣ ಆ ಹೊಸಾ ಕಟ್ಟೋಣವ ಶುದ್ಧ ಮಾಡಿ, ಉತ್ಸವ ಮಾಡ್ತವಡ.
ಆ ಶುದ್ಧಮಾಡ್ಳೆ ಬೇಕಾಗಿ ‘ಶುದ್ಧಕಲಶಾಭಿಶೇಕ’ ಮಾಡ್ತವಡ!!!
~
ಆ ಶಬ್ದಲ್ಲಿಪ್ಪ ಮೂರುದೇ ನಮ್ಮ ಶುದ್ಧ ಸಂಸ್ಕೃತ ಶಬ್ದಂಗೊ – ಶುದ್ಧ, ಕಲಶ, ಅಭಿಶೇಕ!!!
ಮೂರುದೇ ಅವರ ಸಂಸ್ಕೃತಿಲಿ ಇಲ್ಲದ್ದು. ಅವಕ್ಕೆ ಅದು ಆಗಲೇ ಆಗದ್ದು!
ನಮ್ಮ ಮನೆಗಳಲ್ಲಿ ಬಟ್ಟಮಾವ ಮಾಡ್ತವಲ್ದ,
ಚೆಂಬಿನ ಕೊಡಪ್ಪಾನಲ್ಲಿ ನೀರು ತುಂಬುಸಿ – ಸ್ವಸ್ತಿಕದ ಮೇಲೆ ಮಡಗಿ, ಹಲಸುಮಾವಿನ ಎಲೆಯ ಬಾಯಿಗೆ ಮಡಗಿ, ಮೇಗೆ ಒಂದು ತೆಂಗಿನ ಕಾಯಿ ಮಡಗಿ, ತಲೆಂಗೆ ಒಂದು ಕೂರ್ಚೆ ದರ್ಬೆಮುಚ್ಚಿ, ಎದುರು ಮಣೆಮಡಿಕ್ಕೊಂಡು ಉದಕಶಾನ್ತಿ ಓದುತ್ತವು – ಗೊಂತಿದ್ದನ್ನೆ, ಇದು ನ್ಯಾಯವಾದ ಕಲಶ!!
ಅದರ ಒಳಂಗೆ ಜಂಬೂದ್ವೀಪದ ಅಷ್ಟೂ ಪವಿತ್ರ ನದಿಗಳ ಆವಾಹನೆ ಮಾಡಿ, ಯೆಜಮಾನನ ಆ ಕಲಶಲ್ಲಿ ಮೀಶಿ – ಶುದ್ಧ ಮಾಡುದು!

ಓ! ಕೊಡಿ ಏರುದು!
ಕೊಡಿ ಏರುದು!! ಸುಮುಹೂರ್ತಮಸ್ತು!! 🙁

ಆದರೆ ಪುರ್ಬುಗೊಕ್ಕೆ ಎಂತರ ಇದ್ದು ಬೇಕೆ? ಅವರಲ್ಲಿ ‘ಶುದ್ಧ’ ಮಾಡುದು ಹೇಳಿ ಎಂತಾರು ಇದ್ದಾ? ಅವರಲೆಕ್ಕಲ್ಲಿ ಶುದ್ಧ ಆಗಿಯೇ ಸೋಜಂಗೊ ಆದ್ದಲ್ದಾ?
ಯೇಸು ಯಾವದರ ಶುದ್ಧ ಮಾಡಿದ್ದು? ಎಲ್ಲಿ ಕಲಶ ಮಡಗಿದ್ದು? ಯೇವ ನೀರಿನ ಆವಾಹನೆ ಮಾಡಿದ್ದು? ಯೇವದಕ್ಕೆ ಅಭಿಶೇಕ ಮಾಡಿದ್ದು?
ಅವರ ಪುಸ್ತಕಲ್ಲಿ ಬರಕ್ಕೊಂಡು ಇದ್ದಾ? ಎಲ್ಲಿದ್ದು? ಚೆ!.. ನಾಚಿಕೆಯುದೇ ಆವುತ್ತಿಲ್ಲೆ ಅವಕ್ಕೆ ಅದರ ಹೇಳುಲೆ..!
ಅದು ಮಾಂತ್ರ ಅಲ್ಲ, ಇಂಗ್ರೋಜಿಯ ಎದುರು ಕೊಡಿಮರ, ಬಲಿಕಲ್ಲು ಯೇವ ಯೇಸು ಮಡಗುಸಿದ್ದು?

ಹೋಗಿ ಅವರ ಪೋಪೊನ ರಟ್ಟೆಹಿಡುದು ಕೇಳಿರೆ, ಇದು ಎಂತದು ಹೇಳಿಯೇ ಗೊಂತಿರ! ಹಾಂಗಿರ್ತ ಒಂದು ಎಂಜಲುತಿಂಬ ಬುದ್ಧಿ, ಇವರದ್ದು!
ನಮ್ಮದು ಬೇಡ ಹೇಳಿ ಹೆರ ಹೋದರೆ ಸಂಪೂರ್ಣ ದೂರ ಹೋಗಲಿ!
ಒಂದೋ ಇದು ಬೇಕು ಹೇಳಿ ಜಾನುಸಿರೆ ನಮ್ಮ ಒಟ್ಟಿಂಗೇ ಬರಳಿ – ಎರಡಕ್ಕುದೇ ನಮ್ಮಲ್ಲಿ ಸ್ವಾಗತವೇ!
ಆದರೆ, ನಮ್ಮದೇ ವಿಶಯಂಗಳ ಬೈದು, ನಮ್ಮ ಆಚರಣೆಗಳ, ದೇವರುಗಳ ಬೈದು – ಜೆನಂಗಳ ಮನಸ್ಸಿಲಿ ತಪ್ಪು ಕಲ್ಪನೆ ಮೂಡುಸಿ ಅವರ ಸೋಜಂಗೊ ಮಾಡಿಕ್ಕಿ,
ಮತ್ತೆ ಅಲ್ಲಿ ಹೋಗಿ ಅದೇ ವಿಶಯಂಗಳ ಸುರು ಮಾಡಿರೆ ಸಹಿಸುದು ಹೇಂಗೆ? ಇಲ್ಲಿ ಆಗದ್ದು ಅಲ್ಲಿ ಅಕ್ಕಾ?
ಕೃಷ್ಣನ ಮೂರ್ತಿಯ ಆರತಿ ಎತ್ತಲಾಗಡ, ಕ್ರಿಸ್ತನ ಮೂರ್ತಿಗೆ ಕೇಂಡ್ಳು ಮಡಗಲಕ್ಕಾ?
ಶಿವಲಿಂಗಕ್ಕೆ ಅಭಿಶೇಕ ಮಾಡ್ಳಾಗಡ, ಯೇಸುವಿನ ತಲಗೆ ಹಾಲೆರವಲಕ್ಕಾ?
ಇದು ತಪ್ಪಾದರೆ ಅದುದೇ ತಪ್ಪು.

ಚೆಂಡೆ ಪೆಟ್ಟಿನ ಗೌಜಿ!!
ಕೊಡಿ, ಬೆಡಿ ಆತು. ಇನ್ನು ಚೆಂಡೆ ಸುತ್ತು ಆಗೆಡದೋ?!

ನಮ್ಮ ತಪ್ಪುಗಳ ಬೈಕ್ಕೊಂಡು ಅವುದೇ ತಪ್ಪು ಮಾಡ್ತಾ ಇದ್ದವೋ?
ಅವು ತಪ್ಪು ಮಾಡ್ತಾ ಇದ್ದವು ಹೇಳಿ ಆದರೆ ಅವಕ್ಕೇ ಗೊಂತಿರ, ಏಸು ಹೇಳಿದಹಾಂಗೆ!!

ಅಥವಾ,
ಸನಾತನ ಧರ್ಮದ ಅನುಕರಣೆ ಮಾಡಿಗೊಂಡು ಅವರ ಧರ್ಮವುದೇ ಪರಿಪೂರ್ಣತೆಯ ಹೊಡೆಂಗೆ ಹೋವುತ್ತಾ ಇದ್ದು ಹೇಳಿ ಅರ್ಥವೋ?
ಮೊದಲು ಅರೆಬೆಂದ ಯೋಚನೆಗೊ ಇತ್ತು. ಈಗ ಅದುದೇ ಬೆಳದು ಬೆಳದು ಪರಿಪೂರ್ಣವಾದ ಹಿಂದುತ್ವದ ಹೊಡೆಂಗೆ ಬತ್ತಾ ಇದ್ದು ಹೇಳುವನೋ?

ಎಷ್ಟಾರೂ ನಮ್ಮ ಸನಾತನ ಧರ್ಮಂದ ಎಷ್ಟೋ ಮತ್ತೆ ಹುಟ್ಟಿದ್ದು ಈ ಪೊಡಿ ಚಿಲ್ಲರೆ ಧರ್ಮಂಗೊ.
ಸರಿಯಾಗಿ ಪಕ್ವ ಆಗದ್ದೆ ಎಳಮ್ಮೆಪಾಕಲ್ಲಿ ಇದ್ದು. ಅದು ಪೂರ್ಣತೆಗೆ ಬರೆಕ್ಕಾರೆ ಇನ್ನುದೇ ಸಾವಿರಾರು ಒರಿಶಂಗೊ ಬೇಕಕ್ಕು!

ಜನಸಂಕೆ ಮೇಲೆ ಪ್ರಾಬಲ್ಯತೆ ಮೆರವಲೆ ಪ್ರಯತ್ನ ಪಟ್ಟೋಂಡಿಪ್ಪ ಇಂತಾ ಧರ್ಮಂಗೊ ಎಷ್ಟು ದಿನ ನೆಡಗು?
ಈ ಲೋಕದ ಜೆನಸಂಕೆಲಿ ಹಿಂದುಗಳಿಂದ ಜಾಸ್ತಿ ಇಕ್ಕು, ಅಷ್ಟಕ್ಕೇ ಸೋಜಧರ್ಮ ಇದರಿಂದ ಒಳ್ಳೆದು ಹೇಳಿ ಲೆಕ್ಕ ಅಲ್ಲ!
ಗಂಧದ ಮರ ನೋಡಿ ನಿಂಗೊ – ಬೆಳವದು ಬಾರೀ ನಿಧಾನ. ಸುಮಾರು ತಲೆಮಾರು ಕಳುದರೂ ಗಾತ್ರ ಏನೂ ತುಂಬ ವಿತ್ಯಾಸ ಬಾರ.
ಬೆಳದು ತೋರ ಆದಷ್ಟು ಅದರ ಪರಿಮ್ಮಳ, ಬೆಲೆ ಎರಡೂ ಕಂಡಾಬಟ್ಟೆ!
ಅದೇ ಉಪ್ಪಳಿಗೆ ನೋಡಿ – ಹತ್ತೊರಿಶಲ್ಲಿ ಪತ್ತಕ್ಕೆ ಸಿಕ್ಕದ್ದಷ್ಟು ತೋರ ಅಕ್ಕು, ಎಂತಕಿಪ್ಪದು ಬೇಕೆ, ಎಳಬ್ಬೆ..!
ಬರೇ ಗಾತ್ರ ನೋಡಿಗೊಂಡು ‘ಉಪ್ಪಳಿಗೆ ಒಳ್ಳೆದು’ ಹೇಳಿರಕ್ಕೋ?
ಎರಡ್ರನ್ನುದೇ ಒಂದೇ ನಮುನೆ ಹೇಳಿ ನಾವು ನೋಡ್ಳಾಗ! ಗಂಧ ಗಂಧವೇ, ಉಪ್ಪಳಿಗೆ ಉಪ್ಪಳಿಗೆಯೇ!
~

ಶುದ್ಧಕಲಶಾಭಿಷೇಕ ಎರೇಕಪ್ಪದು ಇಂಗ್ರೋಜಿಗೆ ಅಲ್ಲ.
‘ಸಂಕೆಯೇ ಮುಕ್ಯ’ ಹೇಳಿ ಪಾಪದ ಸನಾತನಿಗಳ ಧರ್ಮಾಂತರ ಮಾಡ್ತಾ ಇಪ್ಪ ಪಾದ್ರಿಗಳ ಮಂಡೆಗೆ!
ಜೀವನಲ್ಲಿ ಕಷ್ಟಲ್ಲಿಪ್ಪ, ಬೇಜಾರಲ್ಲಿಪ್ಪವರ – ಮೋಸಂದ ಸೋಜಂಗ ಮಾಡಿಗೊಂಡು, ಇಡೀ ಇಡೀ ಮನೆಯನ್ನೇ ಅಹಿಂದುಗೊ ಮಾಡಿ, ಹೆಮ್ಮೆಯ ಸನಾತನ ಧರ್ಮದ ಮೇಲೆ ಅಪಚಾರ ಮಾಡುವ ಆ ಸೋಜಂಗಳ ಮೇಲೆ!
ಎಡಿಗಾರೆ ಕಲಶದ ನೀರು ಅಲ್ಲಿಗೆ ಎರೆಯಲಿ, ಇಂಗ್ರೋಜಿಲಿ ಚೆಲ್ಲುದಲ್ಲ!

ನಮ್ಮೋರ ಒಂದು ಕೂಸಿನ ಮೋಸಲ್ಲಿ ಕರಕ್ಕೊಂಡು ಹೋಗಿ, ಮಾಪ್ಳೆತ್ತಿ ಮಾಡಿ, ಅದರ ಮಕ್ಕಳ ಕಾರಣಲ್ಲಿ ಅಹಿಂದುಗೊ ಬೆಳವಲೆ ಕಾರಣ ಅಪ್ಪ ‘ಲವ್-ಜಿಹಾದ್’ ಎಷ್ಟು ಅಪಾಯಕಾರಿಯೋ,
ಇಡೀಡೀ ಮನೆಯನ್ನೇ ರಾತ್ರೋರಾತ್ರಿ ಪೊರ್ಬುಗೊ ಮಾಡಿ, ಮರದಿನಂದ ನಮ್ಮ ಎಲ್ಲ ಆಚಾರವನ್ನುದೇ ಬಿಟ್ಟು ಇಂಗ್ರೋಜಿಲಿ ಗೋಡೆನಕ್ಕಲೆ ಹೇಳಿ ‘ಧರ್ಮಾಂತರ’ ಮಾಡುದುದೇ ಅಷ್ಟೇ ಅಪಾಯಕಾರಿ!

ಇನ್ನಾರೂ ನಮ್ಮ ಹರಿ, ಗಿರಿ ಜನಂಗೊ, ದೇವೋಪಾಸಕ ಹಿಂದುಗೊ, ಸನಾತನ ಧರ್ಮದ ಎಲ್ಲ ‘ನಮ್ಮೋರ’ ಜೆನಂಗೊಕ್ಕೆ – ನಮ್ಮದೇ ದೇವಸ್ಥಾನಲ್ಲಿ ನೆಮ್ಮದಿ ಸಿಕ್ಕುವ ಹಾಂಗೆ ನೋಡಿಗೊಂಬ°.
ನಮ್ಮ ಬೈಲುಗಳಲ್ಲಿಪ್ಪ ಗುಳಿಗ್ಗ, ಜುಮಾದಿ, ಉಳ್ಳಾಕುಲು ಭೂತಂಗೊ, ಕಾವು ಕಣಿಯಾರದ ದೇವರುಗೊ – ಇವೆಲ್ಲ ನಮ್ಮ ರಕ್ಷಣೆ ಮಾಡ್ತವು, ಯೇವ ಬರಗಾಲ ಬಂದರೂ ಅವು ಕೈ ಬಿಡ್ತವಿಲ್ಲೆ ಹೇಳ್ತ ವಿಶ್ವಾಸ ಅವರ ಮನಸ್ಸಿಲಿ ನಾವು ತುಂಬುಸುವ°.
ನಾವು ನಮ್ಮವಕ್ಕೆ ಅಷ್ಟು ಮಾಡಿರೆ, ಧರ್ಮಾಂತರ ಮಾಡ್ಳೆ ಪ್ರಯತ್ನ ಮಾಡುವವರ ತಲಗೆ ಅವ್ವೇ ಶುದ್ಧಕಲಶ ಮಾಡಿ ಎರೆತ್ತವು!

ಎಂತ ಹೇಳ್ತಿ?

ಅವರದ್ದು ಪೂರ ಲೊಟ್ಟೆ ಹೇಳಿ ನಾವು ನೆಗೆ ಮಾಡ್ಳಾಗ. ಅದು ಅವರ ಧರ್ಮ, ನಂಬಿಕೆ! ಸತ್ಯ, ಅಸತ್ಯತೆಂದ ಹೊರತಾಗಿಪ್ಪದು.
ಆದರೆ, ಯೇವಗ ಅವು ನಮ್ಮ ಬಾಳಗೆ ಕೈ ಹಾಕುತ್ತವೋ, ಮತ್ತೆ ಸುಮ್ಮನೆ ಕೂಬಲಾಗ. ಅಲ್ಲದೋ? ಏ°?
ಗೋಣ ತಾಡ್ಳೆಬಂದರೆ ಶಾಂತಿಮಂತ್ರ ಹೇಳುದಲ್ಲ, ಬಡಿಗೆ ತೆಕ್ಕೊಂಡು ಅರ್ಪೆಕ್ಕು – ಹೇಳಿ ಶೇಂತಾರುದೊಡ್ಡಪ್ಪ ಯೇವಗಳೂ ಹೇಳುಗು!!

ಒಂದೊಪ್ಪ: ವಿಷ್ಣುವಿನ ದಶಾವತಾರದ ಪುನರ್ಜನ್ಮ ಲೊಟ್ಟೆ ಅಡ! ಯೇಸು ಸತ್ತು ಮೂರ್ನೇದಿನ ಹುಟ್ಟಿದ್ದು ಎಂತರ ಅಂಬಗ?

56 thoughts on “ಮಾರ್ಗದ ಕರೆ ಇಂಗ್ರೋಜಿಲಿ ‘ಶುದ್ಧಕಲಶಾಭಿಶೇಕ’…!!

  1. naavu bari vichaaravantaraadare saala (ati buddivantaraadaroo saala) acharavantarayekku. olle lekhana. ondu swaarasyakara ghatane enmpavtu. engala oorina Porbu sarpasamskaara-naaga pratishte madidu!

    1. ನಿಜವಾಗಿಯೂ ತುಂಬಾ ಖುಷಿ ಅಪ್ಪದು ಇದುವೇ… ನಾವು ಆರ ಹತ್ತರೆಯೂ ಎಂಗಳ ಆಚಾರಂಗಳ ನಿಂಗಳೂ ಅಳವಡಿಸಿಗೊಳ್ಳಿ, ಎಂಗಳ ಮತಕ್ಕೆ ಬನ್ನಿ ಹೇಳಿ ಬಲವಂತ ಮಾಡುತ್ತಿಲ್ಲೇ… ನಮ್ಮತನಲ್ಲಿ ಇಪ್ಪ ಒಳ್ಳೆದರ ಗಮನಿಸಿ ಇತರರು ಇಷ್ಟ ಪಟ್ಟು ನಮ್ಮತನಕ್ಕೆ ಬತ್ತರೆ ಅವರ ಧಾರಾಳವಾಗಿ ಸ್ವಾಗತಿಸುತ್ತು… ಎಷ್ಟು ಒಳ್ಳೆ ಸಂಪ್ರದಾಯ ನಮ್ಮದು…

      ಕ್ರಿಮಿ ಕೀಟ೦ಗಳಲ್ಲಿ ಕೂಡ ದೈವತ್ವವ ಕಂಡವರು ನಾವು… ಮನುಷ್ಯರ ಕೀಳಾಗಿ ಕಾಮ್ಬಲೆ ಹೇಂಗೆ ಸಾಧ್ಯ? ನಾವು ಆರನ್ನೂ ಕೀಳಾಗಿ ಕಾಣುತ್ತಿಲ್ಲೇ. ಆದರೆ ನಮ್ಮತನದ ಮೇಲೆ ನಮಗೆ ಅಭಿಮಾನ ಇದ್ದು ಮತ್ತು ಅದರ ನಾವು ಅನುಸರಿಸುತ್ತು. ಜೊತೆಗೆ ಬಪ್ಪವರೆಲ್ಲ ಸ್ವಾಗತಿಸುತ್ತು. ಇತರರಿಂಗೆ ತೊಂದರೆ ಮಾಡುತ್ತಿಲ್ಲೆ.

      ಎಂಗಳ ಊರಿಲ್ಲಿ ಒಂದು ಬಂಟ ಹವ್ಯಕರ ಆಹಾರ ನಿಯಮಂಗಳ ಅಳವಡಿಸಿಗೊಂಡು,ರುದ್ರ ಎಲ್ಲ ಕಲ್ತು ಬಟ್ಟ ನೆ ಆಯಿದ.(ಆಯಿದವು)

  2. ಎಲ್ಲೊರಿಂಗೂ ನಮಸ್ಕಾರ!
    ನೆರೆಕರೆಯ ಹೆಚ್ಚಿನೋರುದೇ ಸೇರಿ ಈ ಶುದ್ದಿಗೆ ಒಪ್ಪ ಕೊಟ್ಟು, ನಮ್ಮ ನಡವಳಿಕೆ, ಭಾಷಾ ಪ್ರಯೋಗ, ಮತಾಂತರದ ಹಿಂದೆ ಇಪ್ಪ ಕಾರಣಂಗಳ ಹುಡ್ಕಲೆ ಪ್ರಯತ್ನಪಟ್ಟದು ತುಂಬಾ ಕೊಶಿ ಆತು.
    ಇದರ ನಿಂಗೊ ಇನ್ನು ನಾಕು ಜೆನಕ್ಕೆ ಎತ್ತುಸಿರೆ ಈ ಶುದ್ದಿ ಸಾರ್ಥಕ.!
    ಎಂತ ಹೇಳ್ತಿ?
    ~
    ಈ ಸಹಕಾರ ಬೈಲಿನ ಎಲ್ಲಾ ಶುದ್ದಿಗೊಕ್ಕೂ ಮುಂದುವರಿಯಲಿ

  3. @ಕೃಷ್ಣ ಭಟ್
    ಸರಿಯಾಗಿ ಹೇಳಿದಿ. ಅವರ ನಮ್ಮ ಮಟ್ಟಕ್ಕೆ ತರೆಕ್ಕಾರೆ ಮದಲು “ಅವು ಇಪ್ಪದೇ ಹಾಂಗೆ” “ಅವರ ಜಜ್ಮವೇ ಅಷ್ಟು” “ಅವ ಶೂದ್ರನ ಹಾಂಗೆ” ಇತ್ಯಾದಿ ಚಿಂತನೆಗಳ ನಮ್ಮ ಮನಸ್ಸಿಂದ ತೆಗೆಯೆಕ್ಕು ಅಲ್ಲದ??

    ಎನ್ನ ಒಂದು ಸಣ್ಣ ಅಬ್ಸರ್ವೇಷನ್ : ವೇದಂಗಳಲ್ಲಿ ಶೂದ್ರ ಹೇಳ್ತರ ಅರ್ಥ “ಆಳು” – ಹೇಳ್ರೆ ಸ್ವಂತ ಬುಧ್ಧಿ ಉಪ್ಯೋಗ್ಸುಲೆ ಬತ್ತಿಲ್ಲೆ, ಜಾಸ್ತಿ ಫಿಸಿಕಲ್ ವರ್ಕ್ ಮಾಡುವವ ಹೇಳಿ. ಆದರೆ ಮ್ಲೇಚ ಹೇಳ್ರೆ ನೀಚ, ಅಪರಾಧಿ, ಹಿಂಸಾಪ್ರವೃತ್ತಿಯವ ಇತ್ಯಾದಿ ಅರ್ಥ ಇದ್ದು. ಮ್ಲೇಚರ ಬಹಿಷ್ಕಾರ ಹೇಳ್ತು ಶುರುವಾದದ್ದು ಇದೇ ಕಾರಣಕ್ಕೆ ಇಕ್ಕು. ನಾವು ಇಂದು ಶೂದ್ರಂಗೊಕ್ಕೆ ಆರೋಪಿಸುವ ಗುಣಂಗೊ ಎಲ್ಲ ನಿಜವಾಗಲೂ ಮ್ಲೇಚಂಗೊಕ್ಕೆ ಇಪ್ಪದು ಹೇಳಿ ಕಾಂಣುತ್ತು ಎನಗೆ. ಎಂತ ಹೇಳ್ತಿ?

  4. ಎಂತ ಹೇಳಿರೂ ದೊಡ್ಡಭಾವ ಇನ್ನೊಂದು ಲೇಖನಲ್ಲಿ ಹೇಳಿದ ಹಾಂಗೆ ನಾವು ಅವರ ಮಟ್ಟಕ್ಕೆ ಇಳಿವದಲ್ಲ, ಅವರ ನಮ್ಮ ಮಟ್ಟಕ್ಕೆ ತಪ್ಪ ಕೆಲಸ ಆಯೆಕ್ಕು. ಎಡಿಗಾದರೆ.

  5. eecha hodenge baaradde sumaaru samaya aatu. oppaNNana website aada suddi sikkiruu nodle aagittille. tumba laykaayidu.
    ollolle shuddigaluu battaa iddu. idu prastuta charchelippa shuddi. aanu heengippa ‘mataantara’da bagegina sumaaru kathegala(naija) kelidde. bejaaravuttu. illi tumba charche aayidu.
    aagali heenge munduvaresi.

  6. enta oppanno ee sarti tumba banga bappage maadidde ninu. istu dina bekaatu odi mugushule.
    engala kaalalli istella ittille. ingrojiyavu iga jorayidavu. adara tadeyekku. enage iga nadavale kuda banga avuttida. bekadre enta madulakku helutte aato. ninga ella seri olle kelsa maadi aato.

  7. @ಮಹೇಶ

    ಮಹೇಶ ಹೇಳಿ ಬರದ್ದು ಒಪ್ಪಣ್ಣನೆಯೋ? ಗೊಂತಾಯಿದಿಲ್ಲೆ ಎನಗೆ. ಆದರುದೆ ಅವ/ಅವು ಬರದ್ದು ನೂರಕ್ಕೆ ನೂರು ಸತ್ಯ. ಎನ್ನ ಮನಸಿಂಗೂ ಹೀಂಗೇ ಅನ್ನಿಸುದು.
    ಭಾಷೆಯ ಬಗ್ಗೆ ಆನು ಬರದ್ದು ಅದರ ದೂರುಲೆ ಅಲ್ಲ. ದಯವಿಟ್ಟು ಆರುದೆ ತಪ್ಪು ತಿಳ್ಕೊಳ್ಳೆಡಿ. ಸಮಸ್ಸ್ಯೆಯ ಮೂಲ ಎಲ್ಲಿದ್ದು ಹೇಳಿ ಹುಡ್ಕುವಗ ಎನಗೆ ಕೆಲವೆಲ್ಲ ವಿಷಯಂಗೊ ಮನಸ್ಸಿಂಗೆ ಬಂತು. ಅದರ ಹೇಳಿದ್ದು ಅಷ್ಟೆ.

    1. ಚೆಲ ನೀರ್ಕಜೆ ಅಪ್ಪಚ್ಚಿಯೇ, ಒಪ್ಪಣ್ಣ ಹೇಂಗದು ಮಹೇಶº ಅಪ್ಪದು?
      ಮಹೇಶº ಹೇಳಿತ್ತುಕಂಡ್ರೆ ನಮ್ಮ ಕೂಳಕ್ಕೋಡ್ಳು ಮಾಣಿ ಅಲ್ಲದೋ!
      ಅವು ಬರದ್ದು ನೋಡಿರೇ ಗೊಂತಕ್ಕು, ತುಂಬ ಚೆಂದ – ಯೇವತ್ತುದೇ! 🙂

  8. ನಾವು ಅವರ (ಕೆಳವರ್ಗ) ದೂರ ಮಡುಗಿದ್ದಕ್ಕೆ ಸಾಮಾನ್ಯವಾಗಿ ನಮ್ಮವು ಕೊಡುವ ಕಾರಣ– ಈ ವರ್ಗದ ಜನಂಗೊಕ್ಕೆ ಸಂಸ್ಕಾರ ಕಡಮ್ಮೆ– ಹೇಳಿ.
    ಅವ್ವೇ ಆಗಿ ಮೇಲೆ ಬಕ್ಕು, ಸಂಸ್ಕಾರವಂತರು ಆಯೇಕು ಹೇಳಿ ನಾವು ನಿರೀಕ್ಷಿಸಿರೆ ಮಾತ್ರ ಸಾಲ ಹೇಳಿ ಎನಗೆ ಕಾಣ್ತು.
    ಅವಕ್ಕೆ ನಾವೇ ರಜ ಮುಂದೆ ಬಂದು ಸಹಾಯ ಮಾಡೆಕು.

    ಶುರುವಿಲ್ಲೇ ನಾವು ಅವಕ್ಕೆ ವೇದ ಕಲುಶೇಕು, ಶಾಸ್ತ್ರ ಹೇಳಿ ಕೊಡೆಕು ಹೇಳುವ ಭಾವನೆಂದ ಅಲ್ಲ ಆನು ಹೇಳುವದು,
    ಯಾವುದಾದರೂ ಸಣ್ಣ ಕಾರ್ಯಕ್ರಮಂದ ಶುರುವಾಯೇಕು ಹೇಳಿ.
    ಆ ಕಾರ್ಯಕ್ರಮಂಗೋ “ಎಂಗಳ ಕಾರ್ಯಕ್ರಮ” ಹೇಳಿ ಅವಕ್ಕೆ ಅನಿಸುವ ಹಾಂಗಿರೆಕು.
    ನಮ್ಮ ಧರ್ಮದ ವಿಷಯಂಗೋ ಕೆಮಿಗೆ ಬಿದ್ದೊಂಡಿದ್ದರೆ, ಅದರ ಟಚ್ ಇರ್ತು, ಇಲ್ಲದ್ರೆ ದೂರ ಹೋಪಲೆ ಸುಲಭ ಆವ್ತು.

    ನಾವು ಒಂದು ಒಳ್ಳೆ ವಿಷಯ/ಭಾಷಣ ಕೇಳಿರೆ ನವಗೆ ಅದರ ಸಾರ ಬೇಗ ಗೊಂತಾವುತ್ತು. ಬಾಲ್ಯಂದಲೇ ಕೇಳಿ ಕೇಳಿ ನವಗೆ ಅದರ ಹೀರಿಕೊಂಬ ಸಾಮರ್ಥ್ಯ ಬಂದಿರ್ತು. ಅದು ಸುಲಭ ಹೇಳಿ ಆವುತ್ತು,
    ಸಾಮಾನ್ಯವಾಗಿ ಅಂತಹ ಪ್ರವಚನಂಗೋ ನವಗೆ ಅರ್ಥ ಆವ್ತ ಭಾಷೆಲ್ಲಿ ಇರ್ತು. ಅಥವಾ ಅದರಿಂದಲೂ ಮೇಲೆ!.

    ಆದರೆ ಸಣ್ಣಾ ಗಿಪ್ಪಗಳೇ ಬೇರೆ ವಾತಾವರಣಲ್ಲಿ ಬೆಳದವಕ್ಕೆ “ಎಂಗೊಗೆ ಸಂಬಂಧಿಸಿದ್ದಲ್ಲ ” ಹೇಳಿ ಅನಿಸುತ್ತು.
    ನಮ್ಮ ಧರ್ಮದ ವಿಷಯವಾಗಿ ತಿಳಿವು ಕೊಡುವಂಥ ಜನರ ಅಗತ್ಯ ನಮ್ಮೂರಿಲ್ಲಿ ಇದ್ದು.
    ಆ ವಿಷಯಂಗಳ ಈ ಕೆಳವರ್ಗದ ಜನರ ಸ್ತರಲ್ಲಿ ಅರ್ಥ ಅಪ್ಪ ರೀತಿಲ್ಲಿ ಪ್ರವಚನ ಮಾಡುವವು ತಯಾರಾಯೇಕು ಹೇಳಿ ಎನಗೆ ಕಾಣ್ತು.

    ಹಾಂಗೆ ಅದಕ್ಕೆ ಪೂರಕವಾಗಿ ನಮ್ಮವರ ಸ್ತರವೂ ಧರ್ಮದ ತಿಳುವಳಿಕೆ ಯ ವಿಷಯಲ್ಲಿ ಹೆಚ್ಚಾವುತ್ತಾ ಹೋವ್ತ ಕಾರ್ಯಕ್ರಮಂಗಳುದೆ ಬೇಕು.

  9. ಪ್ರದೀಪ ಡಾಕ್ಟ್ರು ಬರದ್ದರ ಆನೊಂದರಿ ಬರತ್ತೆ…
    Purbagala Vishaya baradu, charche suru madiyappaga, ee namma Bhayesha visheya enthage idaralli serithu heli enage artha avuthille………

    ಆದರೂ ಚರ್ಚೆ ಒಳ್ಳೆದೇ… !!!!
    ಹೇಂಗೂ ವೇದಿಕೆ ಇದ್ದಲ್ಲಾ ಒಪ್ಪಣ್ಣನ ಸೈಟು..

  10. ವಾಹ್! ತುಂಬಾ ಒಳ್ಳೆ ಲೇಖನ. ಅತ್ಯುತ್ತಮ ವಿಮರ್ಶೆಯೂ ಆಯಿದು.
    ಈ ಹೊಡೆಲಿ ಚರ್ಚೆಗೊ ಆಯ್ಕೊಂಡಿದ್ದ ಹಾಂಗೆಯೇ ಇನ್ನೊಂದು ಹೊಡೆಲಿ ಮತಾಂತರ ನಿರಂತರ ಆಯ್ಕೊಂಡಿದ್ದು.
    ಚೆ, ನಮ್ಮ ಮನೆಲೇ ಇದ್ದೊಂಡು ನವಗೇ ಬೆನ್ನಿಂಗೆ ತಿವಿತ್ತವನ್ನೆ ಇವು… ಅವ್ವು ನಮ್ಮ ಅನುಕರಣೆ ಮಾಡ್ತವು ಹೇಳಿ ಓದುವಾಗಳೇ ಹೊಟ್ಟೆಉರಿತ್ತು. ಈ ಪಟಂಗಳ ನೋಡುವಾಗಳಂತೂ…ಚೆ, ಇನ್ನು ನಮ್ಮ ಸಂಸ್ಕೃತಿಗೆ, ಆಚರಣೆಗೊಕ್ಕೆ, ನಂಬಿಕೆಗೊಕ್ಕೆ ಎಲ್ಲ ಬೆಲೆ ಇರ್ತಾ… ಆಶ್ರಯ ಕೊಟ್ಟ ಹೆಮ್ಮರದ ಬುಡಕ್ಕೇ ಪೆಟ್ಟು ಹಾಕುತ್ತಾ ಇದ್ದವಲ್ದಾ… ಖಂಡಿತ, ಇದರಿಂದ ಅವರ ಉದ್ಧಾರ ಏನೂ ಆಗ. ‘ಸಂಭವಾಮಿ ಯುಗೇ ಯುಗೇ..’ ಆಗದ್ದೇ ಇರ.
    ಒಪ್ಪಣ್ಣನ ಈ ಶುದ್ದಿಂದ ಬೈಲಿಲಿ ಒಂದು ಜಾಗೃತಿ ಮೂಡಿತ್ತದ. ಖುಷಿ ಆತು.

  11. ಭಾವಾ..
    ಎಂತ ಬರೆವದು.. ಎಲ್ಲ ಸೇರಿ ದೊಡ್ಡ ಪ್ರಭಂದವೆ ಸೃಷ್ಟಿ ಮಾಡಿದ್ದವು. ಅದ್ಭುತ ಪ್ರತಿಕ್ರಿಯೆಂಗೊ.. ಮಧ್ಯೆ ರಜಾ ಬೇರೆ ಕಡೆಗೂ ಹೋಗಿ ಬೈಂದು.. ಆದ್ರೂ ಚಿಂತನಾಪರ ಚರ್ಚೆ ಅಲ್ಲದೊ..

    ವಿಷಯದ ಬಗ್ಗೆ ಎಂತ ಹೇಳುದು.. ನಮ್ಮತನವ ಒಳುಶುವತ್ತ ನಾವೆಲ್ಲ ಹೊರಡೆಕ್ಕು.. ಆ ಪ್ರಯತ್ನವ ಮಾಡುವ ಆಗದೋ..?

  12. ಹವ್ಯಕ ಭಾಷೆ, ಸಾಹಿತ್ಯಲ್ಲಿ ಇಂತಹ ದೊಡ್ಡ ಮಟ್ಟದ ಸಂವಾದ, ಅರಿವು, ಪರಸ್ಪರ ಬೆಳವಣಿಗೆ ಆವ್ತಾ ಇಪ್ಪದು ನಿಜಕ್ಕೂ ಕ್ರಾಂತಿ ಮತ್ತು ಪ್ರಥಮವೂ ಅಪ್ಪು…ಹ್ಯಾಟ್ಸ್ ಆಫ್ಹ್ ಒಪ್ಪಣ್ಣ…ವರುಷದೊಳಗೆ ಬೆಳೆದ ಪರಿ ನಿಜಕ್ಕೂ ಶ್ಲಾಗನೀಯವೇ ಅಪ್ಪು..

    1. ಇಷ್ಟೊಳ್ಳೆ ನೆರೆಕರೆ ಇದ್ದ ಕಾರಣ ಇದು ಸಾಧ್ಯ ಆತು ಪುಟ್ಟಕ್ಕಾ..!
      ತುಂಬಾ ಕೊಶಿಯ ಸಂಗತಿ ಅಲ್ಲದಾ..!!!
      ಹಾಂಗೆ ನೋಡಿರೆ ಎಲ್ಲೊರದ್ದುದೇ ಟೊಪ್ಪಿ ನೆಗ್ಗೆಕ್ಕಕ್ಕು…!
      ಬನ್ನಿ, ಎಲ್ಲೊರು ಒಟ್ಟಿಂಗೆ ಹೋಪೊº..!

  13. Oppnna Purbagala Vishaya baradu, charche suru madiyappaga, ee namma Bhayesha visheya enthage idaralli serithu heli enage artha avuthille………

  14. @ವಾಣಿ ಟೀಚರು:
    ನಿಂಗ ಎಲ್ಲ ಭಾಷೆಯ ಮಹಿಮೆ ಇತ್ಯಾದಿ ಎಲ್ಲ ಹೇಳ್ತಿ.. ಒಂದೇ ಭಾಷೆಲಿ ಬ್ರಾಹ್ಮಣಗೊಂದು ಇತರಿಗೊಂದು ಪದ ಪ್ರಯೋಗ ಇಪ್ಪದು ಎಂತಗೆ ಹೇಳಿ ಮಾತ್ರ ಆರುದೆ ಹೇಳುತ್ತಿಲ್ಲಿ. ‘ಅದು’ ಹೇಳ್ತ ಶಬ್ದ ತಮಿಳಿಂದಲೇ ಬಂದರೂ ಅದು ಬೇರೆ ಜಾತಿಯೊಕ್ಕೆ ಮಾತ್ರ ಎಂತಕ್ಕೆ ಬಂತು? ಹವ್ಯಕನ ನಾವು ‘ಅವ’ ಹೇಳಿ ಎಂತಗೆ ಹೇಳ್ತು?

    ಎನಗೆ ಈ ಭಾಷೆಯ ಚರ್ಚೆಯೇ ಬೇಡ. ಎನ್ನ ಉದ್ದೇಶವೂ ಅದಲ್ಲ. ಮತಾಂತರ ನಿಲ್ಸುಲೆ ಎಂತ ಮಾಡೆಕ್ಕು ನಾವು ಅದರ ಹೇಳಿ. ಹಾಂಗಾರೂ ಈ ಚರ್ಚೆ ಸರಿ ದಾರಿಗೆ ಬತ್ತೋ ನೋಡ.

  15. ಚರ್ಚೆ ಗಮನಿಸುತ್ತಾ ಇದ್ದೆ, ಇಲ್ಲೆ ಇಪ್ಪ ದೊಡ್ಡಭಾವ ಎನ್ನತ್ರೆ ಇದರನ್ನೂ ಹೇಳಿದವು, ನಮ್ಮ ಭಾಷೆಲಿ ಇಪ್ಪ ‘ಅದು’ ಪ್ರಯೋಗ ತಮಿಳಿನ ‘ಅದಿ’ ಹೇಳ್ಸರಿಂದ ಬಂದ್ಸು. ಅಲ್ಲಿ ಅದಕ್ಕೆ ಬಹುವಚನ, ನಮ್ಮಲ್ಲೂ ಆ ಶಬ್ದ ಬಹುವಚನವೇ ಹೇಳ್ಸರಲ್ಲಿ ಸಂಶಯ, ಕನ್ನಡದೊಟ್ಟಿಂಗೆ ರೂಢಿಂದಲಾಗಿ ಮಾಂತ್ರ ನಾಯಿಯ ನಾವು ಅದು ಹೇಳ್ತು, ಇನ್ನು ಟೀಚರು ನಾಯಿಯನ್ನೂ ಬಹುವಚನಲ್ಲಿ ಹೇಳ್ತವಡ ಹೇಳಿಂಡು ಚರ್ಚೆಯ ಇನ್ನೊಂದು ದಿಕ್ಕಂಗೆ ಕೊಂಡೋಗೆಡಿ ! ಸುಮ್ಮನೆ ಭಾಷಾ ಪ್ರಯೋಗಲ್ಲಿ ಇಪ್ಪ ಸಣ್ಣ ಸಣ್ಣ ವ್ಯತ್ಯಾಸಂಗಳ ಹಿಡ್ಕೊಂಡು ನಾವು ಸೋತುಹೋಪಲೆ ಅದೇ ಕಾರಣ ಹೇಳಿ ಚರ್ಚೆ ಮಾಡ್ಸು ಒಳ್ಳೆದಲ್ಲ ಹೇಳಿ ಎನಗೆ ಕಾಣ್ತು. ನಮ್ಮ ಭಾಷೆಗೆ ಹಲವಾರು ಸಂವತ್ಸರಂಗಳ ಇತಿಹಾಸ ಇದ್ದು, ಒಳ್ಳೆ ಭಾಶೆ ಅದು, ಅಲ್ಲದಾ…

  16. ನಿಂಗೋಗೆ ಬೈಬುಲ್ಲು ಓದೆಕೋ? ಅದೂ ನಮ್ಮ ಸಂಸ್ಕೃತ ಭಾಷೆಲ್ಲೇ ಇದ್ದು.

    ಇಬ್ರಾಹೀಮಃ ಸಂತಾನೋ ದಾಯೂದ್ ತಸ್ಯ ಸಂತಾನೋ ಯೇಶುಕ್ರಿಷ್ಟಸ್ತಸ್ಯ ಪೂರ್ವಪುರುಷಶ್ರೇಣೀ ………

    1851 ರಲ್ಲೇ ಇಂಥ ಪ್ರಯತ್ನ ಆಯಿದು.

    ಇದರಲ್ಲಿ ಸಿಕ್ಕಿದ್ದದು:
    http://www.sanskritweb.net/sansdocs/matthew1.pdf

    ಎಂತಕೆ ಹೀಂಗೆ ಅನುವಾದ ಮಾಡಿದ್ದಾಗಿಕ್ಕು ಹೇಳಿ ನಿಂಗಳೇ ಯೋಚನೆ ಮಾಡಿ!

    1. ಕಾರಣ ಎರಡಿಕ್ಕು..ಒಂದೋ ನಮ್ಮ ಸನಾತನ ಭಾಷೆಲಿ ಸ್ಥಿತ್ಯಂತರಗಳ ಪ್ರಸ್ತಾಪ ಆಗಿಪ್ಪದು ನಮ್ಮ ಸಂಸ್ಕೃತಿಯ ಶ್ರೇಷ್ಟತೆಗೆ ಸಾಕ್ಷಿ.
      ಇನ್ನೊಂದು ಕೇರಳದ ಕಡೆಲಿ ಹೇಳುವ ಹಾಂಗೆ ಹಿಂದೂ ಗ್ರಂಥಂಗಳಲ್ಲೇ ‘ನಮ್ಮ ಮತದ ಪ್ರಸ್ತಾಪ ಇದೆ ಅಂತಂದ್ರೆ ನಮ್ಮ ಧರ್ಮಕ್ಕೆ ಎಷ್ಟೆಲ್ಲಾ ಕಡೆ ಮಾನ್ಯತೆ ಇದೆ ನೋಡಿ..’ಅವರ’ ಗ್ರಂಥಗಳಲ್ಲೂ ಪ್ರಸ್ತಾಪ ಇದೆ ನೋಡಿ’ ..ಹೇಳಿ ನಂಬ್ಸುಲೆ.! ನಿಗೂಢ.. ಆದರೂ ಸತ್ಯ…
      ಹೀಂಗಿಪ್ಪ ಕಾರಣಂದ್ಲೇ ಅಲ್ಲದೋ ಕಳುದ ವರುಷ ಕೊಡೆಯಾಲಲ್ಲಿ ಜೋರು ಗಲಾಟೆ, ಚರ್ಚು ಒಡದ್ದು ಎಲ್ಲಾ ಆದ್ದು…

  17. ಹವ್ಯಕ ವ್ಯಾಕರಣ ವನ್ನೇ ಉದ್ದುದ್ದಕ್ಕೆ ಎಳೆತ್ತ ಇಪ್ಪದಕ್ಕೆ ಕ್ಷಮೆಯಿರಲಿ. ಒಪ್ಪಣ್ಣ ಇದರ ಬಗ್ಗೆ ಇನ್ನೊಂದು ಲೇಖನ ಬರವವರೆಗೆ ಇಲ್ಲೇ ಬರೆತ್ತೆ.

    @ಆಚಕೆರೆ ಮಾಣಿ :

    ಆನು ಹೇಳಿದ್ದು ನಿಂಗೊಗೆ ಗೊಂತಾಯಿದಿಲ್ಲೆ ಬಹುಷಹ. ನಿಂಗ ಕನ್ನಡದ ‘ಅದು’ ವಿಂಗೂ ಹವ್ಯಕದ ‘ಅದು’ ವಿಂಗೂ ವ್ಯತ್ಯಾಸ ಇದ್ದು ಹೇಳಿದಿ. ಒಪ್ಪಿದೆ. ಹವ್ಯಕದ ‘ಅವು’ ಗೂ ತುಳುವಿನ ‘ಅವು’ ಗೂ ವ್ಯತ್ಯಾಸ ಇದ್ದು. ಆದರೆ ಹವ್ಯಕ ಭಾಷೆಯ ಒಳವೇ ಒಂದೊಂದು ಜಾತಿಗೆ ಒಂದೊಂದು ಶಬ್ದ (ಅದು ಮತ್ತು ಅವ) ಇಪ್ಪದರ ಬಗ್ಗೆ ಆನು ಹೇಳಿದ್ದು. ಹವ್ಯಕ ಭಾಷೆ ವಿಶೇಷ ಹೇಳಿ ಒಪ್ಪುವೆ. ಆದರೆ ಕೇವಲ ಜಾತಿ ನೋಡಿ ವ್ಯಾಕರಣ ಮಾಡುವ ಬಗ್ಗೆ ಎಂತ ಹೇಳುತ್ತಿ?

    ಆನು ಮೊದಲೇ ಹೇಳಿದ ಹಾಂಗೆ ಇಷ್ಟು ಸಣ್ಣ ವಿಷಯಂದಾಗಿ ಎಂತ ಅಪ್ಪಲೆ ಇಲ್ಲೆ. ಆದರೆ ಇದು ನಮ್ಮ ಮನಸ್ಥಿತಿಯ ತೋರ್ಸ್ಸುತ್ತಷ್ಟೆ. ನಾವು ನಮ್ಮ ಸಂಸ್ಕ್ರುತಿ ಹೇಳಿ ಯಾವುದರ reference ಆಗಿ ತೆಕ್ಕೊಳೆಕ್ಕು ಹೇಳುದು ಪ್ರಶ್ನೆ. ನಮ್ಮ ಕೆಲವು ತಲೆಮಾರಿನ ಹಿರೀಕರ ಕ್ರಮಗಳನ್ನೇ ತೆಕ್ಕೊಳೆಕ್ಕೋ ಅಥವಾ ನಮ್ಮ ಆದಿ ಸಂಪ್ರದಾಯ (ವೇದ, ಗೀತೆ ಇತ್ಯಾದಿ) ಗಳಲ್ಲಿ ಹೇಳಿಪ್ಪ ವಿಷಯಂಗಳ ಅನುಸರಿಸೆಕ್ಕಾ ಹೇಳುದು ಮುಖ್ಯ. ಎನ್ನ ಪ್ರಕಾರ ಕಾಲದೋಷಂದ ನಮ್ಮ ಜಾತಿಲಿ, ಮನಸ್ಸಿಲಿ ಎಷ್ಟೋ ಕಲ್ಮಷಂಗ ಸೇರಿಕೊಂಡಿದು. ಇದರಲ್ಲಿ ಆರ ತಪ್ಪೂ ಇಲ್ಲೆ. ಆದರೆ ಈಗ ಇಪ್ಪದೆಲ್ಲಾ ಸರಿ ಇದ್ದು ತಪ್ಪು ಎಂತ ಇಲ್ಲೆ ಹೇಳುದು ಎನಗೆ ಎಂತಕ್ಕೋ ಸರಿ ಕಾಣುತ್ತಿಲ್ಲೆ.

    ಇಷ್ಟೆಲ್ಲ ಪುರಾಣ ಆನು ಬಿಚ್ಚುತ್ತಾ ಇಪ್ಪದು ಒಪ್ಪಣ್ಣ ಹೇಳಿದ ಇಂಗ್ರೋಜಿ ಕಥೆಯ ಹಿನ್ನೆಲೆಂದ. ನಾವು ಇನ್ನುದೆ ಎಚ್ಚೆತ್ತುಕೊಂಡು ತಪ್ಪುಗಳಿದ್ದರೆ ಸರಿ ಮಾಡಿಯೊಂಡು ಈ ನಿಟ್ಟಿಲಿ ಪ್ರಯತ್ನ ಮಾಡದ್ದರೆ ಒಪ್ಪಣ್ಣ ಇಂಥ ಲೇಖನ ಪ್ರತಿ ವರ್ಷ ಬರೆತ್ತಾ ಇರೆಕ್ಕಕ್ಕು ಹೇಳುವ ಆತಂಕ ಎನಗೆ. ಅದು ಬಿಟ್ಟು ಆರ ಮನಸ್ಸನ್ನು ನೋಯಿಸುವ, ಲಾ ಪಾಯಿಂಟ್ ಹಾಕಿ ಇನ್ನೊಬ್ಬರ ಮಾತು ಅಲ್ಲಗಳೆವ ಹಂಬಲ ಇಲ್ಲೆ.

  18. ಲಾಯಿಕ ಆಯಿದು ಒಪ್ಪಣ್ಣ…..ಎನಗುದೇ ಅಜ್ಜಿಗುದೇ ಓದಿ ಆತು.ಕನ್ನಡಕ ಪವರ್ ವೀಕ್ ಆಯಿದು .ಮತ್ತೆ ಎಂಗೊಗೆ ಇಬ್ರಿಂಗೂ ಕನ್ನಡಕ ಒಂದೇ ಇದಾ.ಹಾಂಗೆ ಓದಿ ಕಮೆಂಟ್ ಬರವಾಗ ತಡವಾತು.
    ಹ್ಮ್ಮ್ಮ್ ……. ಆನು ಇನ್ನು ಎಂತ ಬರವಲೆ ಇಲ್ಲೆ… ಎಲ್ಲೋರು ಲಾಯಿಕಕ್ಕೆ ಕಮೆಂಟ್ ಬರದ್ದವು. ಒಳ್ಳೆ ಮಾಹಿತಿ ಸಂಗ್ರಹ ಮಾಡಿದ್ದೆ ಪುಳ್ಳಿ ನೀನು.ಇನ್ನಷ್ಟು ಹೀಂಗಿಪ್ಪ ಲೇಖನವ ಈಗಾಣ ಮಕ್ಕ ಓದಿದರೆ ನಮ್ಮ ಭಾರತಲ್ಲಿ ನಮ್ಮ ಸಂಸ್ಕೃತಿ ಒಳಿಗಷ್ಟೇ ಅಲ್ದಾ?

  19. lekana laayakka iddu.satyavaagi nadaava vishayangalanne baraddi,eega namma sutaamuttalude ee purbugale tumbiddavu,ottinge aa byarigalude.hindugala sankye kammi avtta iddu,innu 4 varsha kaludare henge ikko?

  20. sooper ….aidu aata oppanno.bahusha idu elloringu feel appa hange iddu.
    namma dharma samskara aachara vichara ellavannu navu dhana dahanda
    marettu.byarigo christiango paise ruchi torusi convert madtavanne.
    namma bagge naavu chintane maadekku.namma beliye sari illadda matte dana battu heli jagalakke hodange.ade namma matha jaati samskarada bagge namage tiluvalike bandare mathantarakke aaspadave illenne oppanno? good luck hare raama.

  21. ಮಹೇಶಣ್ಣ,
    ಮತಾಂತರದ ಬಗ್ಗೆ ನಿಂಗಳ ಜಾಲತಾಣಲ್ಲಿ ಬರದ್ದು ಓದಿದೆ. ಒಳ್ಳೆ ವಿಶ್ಲೇಷಣಾತ್ಮಕವಾಗಿದ್ದು. ಲಾಯಿಕಿದ್ದು. ಮತಾಂತರದ ಬಗ್ಗೆ ವಿಜಯ ಕರ್ನಾಟಕಲ್ಲಿ ಬಂದ ಚರ್ಚೆ ಓದಿಪ್ಪಿ.ಅದರ ಕೆಲವು ಲೇಖನಂಗೊ ಪುಸ್ತಕರೂಪಲ್ಲಿ ಎಡಿಟ್ ಆಗಿ ಬಂದದರ ನೋಡಿಪ್ಪಿ. “ಮತಾಂತರ ಸತ್ಯದ ಮೇಲೆ ಹಲ್ಲೆ” ಹೇಳಿ ಸಾಹಿತ್ಯ ಪ್ರಕಾಶನದೋರು ಪಬ್ಲಿಶ್ ಮಾಡಿದ್ದವು. ಅದರಲ್ಲಿ ಎನ್ನ ಒಂದು ಲೇಖನ ಕೂಡ ಇದ್ದು.ಆ ಪುಸ್ತಕಲ್ಲಿ ಕ್ರಿಶ್ವ್ಹನ್ ಮತಾಂತರದಬಗ್ಗೆ ಎಸ್. ಎಲ್ .ಭೈರಪ್ಪ ಹುಟ್ಟು ಹಾಕಿದ ಚರ್ಚೆ ಇದ್ದು. ಹಾಂಗೇ ನಿಂಗೊಗೆ ಅಥವಾ ನಿಂಗಳ ವೆಬ್ಬಿಂಗೆ ಭೇಟಿ ಕೊಡುವವಕ್ಕೆ ಆಸಕ್ತಿ ಇದ್ದರೆ ಬೆಲ್ಜಿಯಮಿಲಿ ಪ್ರೊಫೆಸರ್ ಆಗಿ ಇಪ್ಪ ಎಸ್. ಎನ್. ಬಾಲಗಂಗಾಧರ ಹೇಳುವೋರ” ಹೀದೆನ್ಸ್ ಇನ್ ಹಿಸ್ ಬ್ಲೈಂಡ್ ನೆಸ್ ” ಪುಸ್ತಕ ಓದ್ಲಕ್ಕು.ಮತಾಂತರದ ಬಗ್ಗೆ ಅವರ ಥಿಯರಿಗೊ ಲಾಯಿಕ ಇದ್ದು. ಕ್ರೈಸ್ತ ಮತದ ಹುಟ್ಟು ಮತ್ತೆ ಬೆಳವಣಿಗೆ ಬಗ್ಗೆ ಅವರ ಒಂದು ಲೇಖನ ಅರೇಳು ತಿಂಗಳ ಹಿಂದೆ “ನೀನಾಸಮ್ ಮಾತುಕತೆ” ಪತ್ರಿಕೆಲಿ ಕೂಡ ಬಯಿಂದು. ಅವರ ಲೇಖನಂಗೊ ವೆಬ್ಬಿಲಿ ಕೂಡ ಇಪ್ಪಲೂ ಸಾಕು. ಗೊಂತಿಲ್ಲೆ.
    ಅಂತೂ ಒಪ್ಪಣ್ಣ ಈ ಸರ್ತಿ ಬರದ್ದು ಕೆಪ್ಪಗೆ ಬಡುದ ಹಾಂಗೆ ಆಯಿದು !!!ಕ್ರೈಸ್ತಂಗೊಕ್ಕುದೆ ಹಿಂದುಗೊಕ್ಕುದೆ.!!!
    ಶುಭಮಸ್ತು!! ಇತಿ, ಅಜಕ್ಕಳ ಗಿರೀಶ.

  22. ಒಪ್ಪಣ್ಣೋ…. ಆನು ತುಂಬಾ ತಡವಾಗಿ ಬಂದೆ. ರಜಾ ಗಡಿಬಿಡಿಲಿ ಇತ್ತಿದ್ದೆ… ಅದೇ ನಮ್ಮ ಬೇಂಕಿನ ಪ್ರಸಾದ ಭಾವಂಗೆ ಟ್ರಾನ್ಸ್ವರು ಆತಡ. ಅವಂಗೆ ಬೆಂಗ್ಳೂರಿಲಿ ಒಂದು ಮನೆ ಆಯೆಕ್ಕಷ್ಟೆ ಇದಾ…..

    ಮತ್ತೆ, ಈ ಸರ್ತಿಯಾಣ ಒಪ್ಪ ನಿಜಕ್ಕೂ ಒಪ್ಪೆಕ್ಕಾದ ಒಪ್ಪವೇ…. ನವಗೆ ಬೇಡದ್ದ ನಮ್ಮದರ ಹೆರ್ಕಿಯೊಂಬಲೇ ಕಾಯ್ತಾ ಇಪ್ಪವು ಲೋಕಲ್ಲಿ ಬೇಕಾದಶ್ಟು ಜೆನ ಇರ್ತವು… ಹೊಲೆಯರ ದೂರ ಮಡುಗುಲೆ ಕಾರಣಂಗ ಇಕ್ಕು. ಆದರೆ ಈಗ ಕೈಮೀರಿ ಹೋಯಿದನ್ನೇ???????
    ಎಂತ ಮಾಡುಲೂ ಎಡಿಯ…

    ಮತ್ತೆ ನಮ್ಮ ನೀರ್ಕಜೆ ಮಹೇಶ ಮಾವ ಎತ್ತಿದ ಪ್ರಶ್ನೆ. ಅವರ ‘ಅದು’ ಹೇಳ್ತು ಹೇಳ್ತದು. ನಾವು ಅದರ ಮಾತ್ರ ಅಲ್ಲ ಅದು ಹೇಳುದು, ಅಮ್ಮನನ್ನೂ ಅದು ಹೇಳ್ತು. ಹಾಂಗೆ ಹೇಳ್ತ ಮಾತ್ರಕ್ಕೆ ಅದು ಕನ್ನಡದ ‘ಅದು’ ಅಲ್ಲ. ಕನ್ನಡದ ವ್ಯಾಕರಣಕ್ಕೂ ಹವ್ಯಕದ ವ್ಯಾಕರಣಕ್ಕೂ ವೆತ್ಯಾಸ ಇದ್ದು.

    ಹವ್ಯಕಲ್ಲಿ ಇಪ್ಪದು ಎರಡೇ ಲಿಂಗ, or gender, ಕನ್ನಡದ ಹಾಂಗೆ ಅದು ಪುರುಶ ಸ್ತ್ರೀ ಅಲ್ಲ. ಅದಕ್ಕೆ ಹೆಸರು ”ಮಹತ್ತ್ ವರ್ಗ” and ”ಅಮಹತ್ತ್ ವರ್ಗ” ಹೇಳಿ. ಈ ಸುರುವಾಣದ್ದರ್ಲಿ ಪ್ರಥಮಪುರುಶ ಅಭಿವ್ಯಕ್ತಿಗೋ ಎಲ್ಲಾ ಬತ್ತು. ಎರಡ್ನೇದು ಬೇರೆಲ್ಲಾ ಸಂಗತಿಗೋ… ಅಂದ್ರೆ third party ಸಂಗತಿಗೋ. and also, ಅದು ಮಾಣಿ ಕೂಸು ವ್ಯತ್ಯಾಸಕ್ಕೂ apply ಆವ್ತು.

    ಹ್ಹೆ ಹ್ಹೆ ಹ್ಹೆ…. ಇದು ಆನು ಹೇಳಿದ್ದಲ್ಲ… ಎಂಗಳ ಮಾಷ್ಟ್ರು ಮಾವ ಒಂದು ದಿನ ಪುರ್ಸೋತ್ತಿಲಿ ಹೇಳಿದ ಸಂಗತಿಗೋ…..

    1. ನಿಂಗ ಹೇಳಿದ ಪ್ರಕಾರ ನೋಡ್ರೆ ನಮ್ಮ ಬ್ರಾಹ್ಮಣರು ಮಹತ್ (ಬ್ರಾಹ್ಮಣ್ಯದ ಗಂಧ ಗಾಳಿ ಗೊಂತಿಲ್ಲದ್ದರು, ಹೆಚ್ಚು ಕಮ್ಮಿ ಎನ್ನ ಹಾಂಗಿಪ್ಪವು) ಅಬ್ರಾಹ್ಮಣರು ಅಮಹತ್ (ಒಳ್ಳೆಯವ, ತಿಳಿವಳಿಕೆ ಇಪ್ಪವ ಆದರೂ) ಆವುತ್ತವು. ಅದೇ ಸಮಸ್ಯೆ ಹೇಳಿ ಆನು ಹೇಳುತ್ತಾ ಇಪ್ಪದು. ಇದು ಮೆರಿಟ್ ಮೇಲೆ ಇಪ್ಪದಲ್ಲ. ಎಲ್ಲಾ 3rd person ಗಳನ್ನೂ ‘ಅದು’ ಹೇಳಿದ್ದರೆ ಎನ್ನ ಅಭ್ಯಂತರ ಇತ್ತಿಲ್ಲೆ. ಎನಗೆ ಅರಡಿಗಾದ ಹಾಂಗೆ ‘ಇದು’ ‘ಅದು’ ಹೇಳ್ತು ಜಾತಿ ವೈಷಮ್ಯಂದಲೇ ಬಂದದು. ಹಾಂಗೆ ಹೇಳಿ ಅದಕ್ಕೆ ನಮ್ಮ ಪೂರ್ವಜರ ದೂಷಿಸುವ ಅಗತ್ಯ ಇಲ್ಲೆ. ನಾವುದೆ ಹೊಸ ವಿಚಾರ ಮಾಡಿ ಹೊಸ ಆಚಾರ ತಪ್ಪಲಕ್ಕದ? ಅಷ್ಟಕ್ಕೂ ಅದು ಹೆಳುದರ ಅವ ಹೇಳುದರಂದ ಎಂತ ಅಪ್ಪಲೂ ಇಲ್ಲೆ. ಆನು ಒಂದು ಉದಾಹರಣೆ ಕೊಟ್ಟದಷ್ಟೆ.

      1. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಸು ಇರ್ತಲ್ಲದಾ. ಹಾಂಗಾಗಿ ‘ಅದು’ ‘ಇದು’ ಹೇಳುವ ಸಂಬೋಧನೆ ನಿಂಗೊ ಹೇಳುವ ವೈಷಮ್ಯಂದ ಬಂದದ್ದು ಹೇಳುದು ಯಾಕೋ ಅಲ್ಲ ಹೇಳಿ ಕಾಣ್ತು. ಎನಗೊಂತಿಲ್ಲೆ.:-)
        ಅಷ್ಟಕ್ಕೂ ಕೂಸುಗೊಕ್ಕೂ ‘ಅದು, ಇದು’ ಹೇಳುವ ಪ್ರಯೋಗ ಇದ್ದಲ್ದಾ? ಅದರರ್ಥ ಕೂಸುಗಳ condemn ಮಾಡುದು ಹೇಳಿ ಅಕ್ಕಾ ಅಂಬಗ?
        ಬ್ರಾಹ್ಮಣಿಕೆ ಬಪ್ಪದು ಜಾತಿಂದ ಅಲ್ಲ, ಕರ್ಮ ಧರ್ಮಂದ. ಮಹತ್ ಮತ್ತು ಅಮಹತ್ ಹೇಳುದು ‘ಮಹತ್, ಶ್ರೇಷ್ಟ’ ಆದದ್ದು ಹೇಳುವ word meaningಂದ ಅಲ್ಲ ಹೇಳಿಯೂ, ಅದು ಕೇವಲ ನಾಮವಾಚಕ ಅಷ್ಟೇ ಹೇಳಿಯೂ ಮಾಷ್ಟ್ರು ಮಾವ ಹೇಳುಗು.

        1. ಹೆಣ್ಣು ಮಕ್ಕಳ ‘ಅದು’ ಹೇಳ್ತಪ್ಪು. ಅದು ಕೂಸುಗಳ condemn ಮಾಡುದು ಅಪ್ಪ ಅಲ್ಲದ ಹೇಳಿ ಎನಗೆ ಗೊಂತಿಲ್ಲೆ. ಎನ್ನ ಅಜ್ಜನ ಕಾಲಲ್ಲಿ ಅಜ್ಜ್ಯೊಕ್ಕೊ ಅಜ್ಜಂದಿರು ಉಂಡ ಬಾಳೆಲೆಲಿ ಉಂಡುಗೊಂಡಿದ್ದಡ್ಡ ಹೇಳಿ ಹೇಳುದು ಕೇಳಿದ್ದೆ. ಅದರ ಬಗ್ಗೆ ಹೆಚ್ಚು ಗೊಂತಿಲ್ಲೆ ಎನಗೆ. ಆದರೆ ಇಲ್ಲಿ ವಿಷಯ ಅದಲ್ಲ. ಕೂಸುಗಳ ಮಾಣಿಯಂಗಳ ಬೇರೆ ಬೇರೆ ರೀತಿ ದಿನಿಗೇಳ್ತು ಹೇಳುದರಲ್ಲಿ ತಪ್ಪಿಲ್ಲೆ. ಎಂತಕ್ಕೆ ಹೇಳಿರೆ ಅವರಲ್ಲಿ ಒಂದು ಭೇದ ಇದ್ದು. ಲಿಂಗಬೇಧ. ಹಾಂಗಪ್ಪಗ ಬ್ರಾಹ್ಮರಿಂಗೂ (ಜನ್ಮತಹ) ಇತರರಿಂಗೂ ನಾವು ಬೇಧ ಮಾಡಿದ ಹಾಂಗೇ ಆವುತ್ತಲ್ಲದ? ಎಲ್ಲರೂ ಮನಸ್ಸಿಲಿ ಬೇಧ ಇದ್ದುಕೊಂಡೇ ಹಾಂಗೆ ದಿನಿಗೇಳುದು ಹೇಳ್ತಾ ಇಲ್ಲೆ ಆನು.

          ಇರಲಿ. ಇದರ ಬಗ್ಗೆ ಹೆಚ್ಚು ತಲೆಗೆಡಿಸಿಗೊಂಬದು ಬೇಡ. ಸಮಸ್ತ ಹಿಂದು ಸೋದರರಿಂಗೂ ಒಪ್ಪ ಆಯೆಕ್ಕು ಹೇಳಿ ಎನ್ನ ಆಶಯ ಅಷ್ಟೆ.

          1. ಹವ್ಯಕ ಭಾಷೆಯ ಪ್ರತ್ಯಯಂಗಳ ಬಗೆಗೆ ಚರ್ಚೆ ಆವುತ್ತಾ ಇದ್ದು. ಒಳ್ಳೆದೇ!
            ಅವ°, ಅದು ಹೇಳ್ತದು ನಮ್ಮ ಭಾಷೆಯ ಸೊಗಡು! ಇವುಗಳ ಬಗೆಗೆ ನಮ್ಮ ಅಜಕ್ಕಳ ಮಾಷ್ಟ್ರಣ್ಣ ರಜ್ಜ ತಿಳುದ್ದವು.
            ನಮ್ಮ ಭಾಷಾವಿಶೇಷವ ಸಾರುವ ಆ ಲೇಖನವ ಸದ್ಯವೇ ನಿರೀಕ್ಷಿಸಿ – ಎಲ್ಲ ಒಪ್ಪಣ್ಣ ಒಪ್ಪಕ್ಕಂದ್ರಿಂಗಾಗಿ.
            ~
            ಗುರಿಕ್ಕಾರ°

      2. ಅದು ಇದು ಹೇಳುದು ನಮ್ಮ ಭಾಷೆಯ ಸೊಗಡು ಅಪ್ಪು.
        ಅದು ಜಾತಿ ವೈಷಮ್ಯಂದ ಬಂದದು ಅಲ್ಲ. ಆದರೆ ಜಾತಿಪ್ರಜ್ಞೆಂದ ಬಂದದು ಅಪ್ಪು.
        ಹೆರಜಾತಿ ಹೇಳುವ ಒಂದು ಮನೋಭಾವಂದ ಬಂದದು ಅಪ್ಪು. ಅದು ಇದು ಹೇಳುವ ಬದಲು ಅವ ಇವ ಹೇಳಿ ಹೇಳುದು ಒಳ್ಳೆದು.
        ಈಗ ಪೇಟೆಲಿ ಇಪ್ಪೋರು ಹೆಚ್ಚಿನೋರು ಅದು ಹೇಳಿ ಹೇಳ್ತವಿಲ್ಲೆ.
        ಮಲಯಾಳಲ್ಲಿ ಎಲ್ಲವುದೆ ಅಮಹತ್. ಜಾತಿ ನೋಡಿ ಮಹತ್-ಅಮಹತ್ ವಿಭಾಗ ಇಪ್ಪದು ನಮ್ಮ ಭಾಷೆಲಿ ಮಾಂತ್ರ ಹೇಳಿ ಕಾಣುತ್ತು.
        ಮತ್ತೆ ಪ್ರಥಮ ಪುರುಷ ಥರ್ಡ್ ಪರ್ಸನ್ ಹೇಳಿ ನಮ್ಮ ಆಚಕರೆ ಮಾಣಿ ಹೇಳಿದ್ದರಲ್ಲಿ ರಜಾ ಕನ್ ಫ್ಯೂಶನ್ ಇದ್ದು. ಕನ್ನಡದ ಪ್ರಥಮ ಪುರುಷ ಇಂಗ್ಲಿಷಿಲಿ ಥರ್ಡ್ ಪರ್ಸನ್.
        ಬೇರೆಲ್ಲ ವಿಷಯಲ್ಲಿ ಜಾತಿಭೇದ ಮಾಡುದು ನಾವು ಕಮ್ಮಿ ಆದರುದೆ ಈ ಸರ್ವನಾಮ ನವಗೊಂದು ಕಳಂಕ ಹೇಳಿಯೇ ಎನ್ನ ಅಂದಾಜಿ. ಅದರ ನವಗೆ ಸಮರ್ಥಿಸಿಗೊಂಬಲೆ ರಜ ಕಷ್ಟವೇ.
        ಮತಾಂತರಂದ ಚರ್ಚೆ ಬೇರೆ ದಿಕ್ಕಂಗೆ ಹೋದರೂ ಆಯೆಕ್ಕಾದ ಚರ್ಚೆಯೇ.
        ಇತಿ ಅಜಕ್ಕಳ ಗಿರೀಶ.

        1. ಅಪ್ಪು. ಎನಗೆ ಹೇಳೆಕ್ಕಾದ್ದೂ ಜಾತಿಪ್ರಜ್ಞೆ ಹೇಳಿಯೇ. ತಪ್ಪಿ ಜಾತಿ ವೈಷಮ್ಯ ಹೇಳಿ ಬರದೆ. ನಿಂಗ ಹೇಳುದರಲ್ಲಿ ಎನಗೆ ಸಹಮತ ಇದ್ದು.

          1. ಇದಾ..ಆನು ಪುನಾ ಹೇಳ್ತಾ ಇದ್ದೆ. ಕನ್ನಡದ ‘ಅದು’ ವಿಂಗೂ, ಹವ್ಯಕದ ‘ಅದು’ ವಿಂಗೂ ವೆತ್ಯಾಸ ಇದ್ದು. ‘ಅದು’ ಹೇಳುದರ ನಮ್ಮ ಮನೆ ಅಜ್ಜಿ, ಅಮ್ಮ, ತಂಗಿ, ಅಕ್ಕಂದ್ರಿಂಗೆ, ಸಹಪಾಟಿಗೊಕ್ಕೂ ಬಳಸುತ್ತು. ಹವ್ಯಕಲ್ಲಿ ೨ ಲಿಂಗಂಗೊ ಮಾತ್ರ ಇಪ್ಪದು.ಕನ್ನಡಲ್ಲಿ ಒಟ್ಟು ೯ ಲಿಂಗಂಗೊ ಇದ್ದು. ಬರೀ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗ ಮಾತ್ರ ಅಲ್ಲ. ಪುನ್ನಪುಂಸಕ, ಸ್ತ್ರೀನಪುಂಸಕ ಲಿಂಗ ಹೇಳಿ so on.. ಬೇಕಾರೆ ನಮ್ಮ ಅಜಕ್ಕಳ ಮಾವನತ್ರೆಯೇ ಕೇಳಿ. ‘ಅವು’ ವಿವರುಸುಗು. ಉದಾ : ಹವ್ಯಕದ ‘ಅವು’, ತುಳುವಿನ ‘ಅವು’ ಹೇಳುದಕ್ಕೂ ವೆತ್ಯಾಸ ಇಲ್ಲೆಯಾ? ನಮ್ಮಲ್ಲಿ ಅವು ಹೇಳುದು ಗೌರವಕ್ಕೆ, ಅದೆ ತುಳುವಿಲಿ ನಿಕೃಷ್ಟವಾಗಿಪ್ಪ ಭಾವ. ಇದಕ್ಕೆಂತ ಹೇಳ್ತಿ? ಹಾಂಗಾಗಿ ಕನ್ನಡದ ವ್ಯಾಕರಣವ ಹವ್ಯಕದ ವ್ಯಾಕರಣದೊಟ್ಟಿಂಗೆ ಕನ್ಸ್ಫ್ಯೂಸ್ ಮಾಡಿಕೊಳ್ಳೆಡಿ.
            ಗ್ರೀಕಿನ ಭಾಷೆಯ mummyಗೂ, ಇಂಗ್ಲೀಷಿನ ಭಾಷೆಯ ಮಮ್ಮಿಗೂ ವೆತ್ಯಾಸ ಇದ್ದು. ಹಾಂಗೆ ಅಲ್ಲದೋ?

          2. ಆನು ಆಚಕರೆ ಮಾಣಿಯ ಅಭಿಪ್ರಾಯ ಒಪ್ಪುತ್ತೆ. ಆನೂ ಮೊದಲಿಂಗೆ ಎಂಗಳ ಎಂತಗೆ ಪ್ರಾಣಿಗಳ,ವಸ್ತುವಿನ ಸಾಲಿಂಗೆ ಸೇರಿಸಿದ ಹಾಮ್ಗೆ ಸಂಬೋಧಿಸಿ ಮಾತಾಡುದು ಹೇಳಿ ಜೆಗಳ ಮಾಡುವೆ. ಆದರೆ ಭಾಷಾ ವೆತ್ಯಾಸ, ಮತ್ತೆ ವಿಶೇಷತೆಗಳ ಅಧ್ಯಯನ ಮಾಡಿದ ಮೇಲೆ ಅರ್ತ ಆತು. ಅಪ್ಪು.. ಕನ್ನಡದ ‘ಅದು, ಇದು’ ವಿಂಗೂ, ಹವ್ಯಕದ ‘ಅದು, ಇದು’ ವಿಂಗೂ ವೆತ್ಯಾಸ ಇದ್ದು. ಹವ್ಯಕಲ್ಲಿ ಅದು ಇದು ಹೇಳುದು ಜಾತಿ ವಾಚಕವೂ ಅಲ್ಲ, ಗುಣ ವಾಚಕವೂ ಅಲ್ಲ.
            ಅಷ್ಟಕ್ಕೂ ಚರ್ಚೆ ಬೇರೆ ಕಡೆ ಹೋಪದಕ್ಕೆ ಕ್ಷಮೆಯಿರಲಿ.

  23. ಈ ಸಮಸ್ಯೆಗೆ ಕಾರಣ ಎಂತದು?
    ನಾವು ಅರ್ಧ ಮತಾಂತರ ಆದ್ದದೆ ಕಾರಣ.
    ಆಚಾರ ಇಲ್ಲದ್ದ ವಿಚಾರ, ವಿಚಾರ ಇಲ್ಲದ್ದೆ ಆಚಾರ ಮಾಡಿ ನಾವುದೇ ಅರ್ಧ ಮತಾಂತರ ಆದ ಹಾಂಗೆ ಅಲ್ಲದೋ ? (ಹಾಂಗೆ ಹೇಳಿ ಇಪ್ಪದರ ಬಿಡ್ಲಾಗ!)

    ಆಚಾರ ಇಲ್ಲದ್ದ ವಿಚಾರ ಇದ್ದು ಪ್ರಯೋಜನ ಇಲ್ಲೆ ಹೇಳಿ ವಿಚಾರವ ಬಿಟ್ಟವು ಕೆಲವು ಜೆನ.
    ವಿಚಾರ ಇಲ್ಲದ್ದೆ ಆಚಾರ ಇದ್ದು ಎಂತ ಲಾಭ ಹೇಳಿ ಆಚಾರವ ಬಿಟ್ಟವು ಮತ್ತೆ ಕೆಲವು ಜೆನ.
    ಒಟ್ಟಿಲ್ಲಿ ಅದೂ ಇಲ್ಲೆ ಇದೂ ಇಲ್ಲೆ !!!

    ಇಪ್ಪದರ ಉಳಿಸಿಯೊಂಡು ಬೇಕಾದ್ದರ ಬೆಳೆಸಿಗೊಂಬ ಹೇಳಿ ಆಲೋಚನೆ ಮಾಡದ್ರೆ ಹೇಂಗೆ??

    ಸಮಾಜವ ವೈಚಾರಿಕವಾಗಿ ಲೀಡ್ ಮಾಡೆಕಾದ ನಾವೇ (ನಾವೆ!!) ದಿಕ್ಕು ತಪ್ಪಿರೆ !!
    ನಮ್ಮಲ್ಲಿಪ್ಪ ಸತ್ತ್ವ ಕಮ್ಮಿ ಆವ್ತಾ ಹೋದ ಹಾಂಗೆ ಸಮಾಜವ ಮುನ್ನಡೆಸುವ ಶಕ್ತಿ ಯ ನಾವು ಕಳಕ್ಕೊಳ್ತು.

    ಹಾಂಗಾರೆ ಪರಿಹಾರ ಎಂತದು?

    1. ನಿಂಗ ಹೇಳಿದ್ದು ನೂರಕ್ಕೆ ನೂರು ನಿಜ.

  24. ಒಹ್!!
    ಒಪ್ಪಣ್ಣಾ ಬರದ್ದದು ಬಾರಿ ಲಾಯಿಕ ಆಯಿದು.
    ನಾವೇ ರಜ ನಿಂಗ ಹೇಳಿದಾಂಗೆ ಇಪ್ಪೊರ ಅತ್ಲಾಗಿ ಹೋಗದ್ದಾಂಗೆ ನೋಡೆಕ್ಕಷ್ಟೆ.
    ನಾವು ನಮ್ಮ ಧರ್ಮವ ಬಿಟ್ಟು ಕೊಡುದು ಬೇಡಪ್ಪಾ..

  25. ಲಾಯಿಕ ಆಯಿದು ಒಪ್ಪಣ್ಣ ಬರದ್ದು..

    ’ಸನಾತನ ಧರ್ಮದ ಅನುಕರಣೆ ಮಾಡಿಗೊಂಡು ಅವರ ಧರ್ಮವುದೇ ಪರಿಪೂರ್ಣತೆಯ ಹೊಡೆಂಗೆ ಹೋವುತ್ತಾ ಇದ್ದು ಹೇಳಿ ಅರ್ಥವೋ?
    ಮೊದಲು ಅರೆಬೆಂದ ಯೋಚನೆಗೊ ಇತ್ತು. ಈಗ ಅದುದೇ ಬೆಳದು ಬೆಳದು ಪರಿಪೂರ್ಣವಾದ ಹಿಂದುತ್ವದ ಹೊಡೆಂಗೆ ಬತ್ತಾ ಇದ್ದು ಹೇಳುವನೋ?’

    ಹೇಳ್ಳೆಡಿಯಾ ಬಾವಾ ನಿಜ ಆಗಿಪ್ಪಲೂ ಸಾಲು!

  26. ಇದು ಯತಾರ್ಥವಾಗಿ ನಮ್ಮದೇ(ಹಿ೦ದುಗಳ) ಜಾತಿವ್ಯವಸ್ತೆಲಿ ಇಪ್ಪ ಅವ್ಯವಸ್ತೆ….ಹಿ೦ದೆ ಬ್ರಿಇಷರು ವಿಭಜಿಸಿ ಆಳುವ ರೀತಿ ತ೦ದು ಭಾರತೀಯರ ದುರ್ಬಲರನ್ನಾಗಿ ಮಾಡಿದ್ದವಡ…..ಅದೇ ರೀತಿ ನಮ್ಮ ಜಾತಿ ವ್ಯವಸ್ತೆಯ ಪರಕೀಯರು ಚೆ೦ದಕ್ಕೆ ಉಪಯೋಗಿಸಿಕೊಳ್ಳುತ್ತವು….ಪೊರ್ಬುಗಳ ಮತಾ೦ತರವೂ ಇದೇ ರೀತಿ…
    ಅದಲ್ಲದ್ದೆ ಮತಾ೦ತರದ ಬಲಿಪಶುಗ ಸಮಾಜದ ಕೆಳವರ್ಗದವು ಮಾತ್ರ ಅಲ್ಲ…
    ಉದಾಹರಣೆಗೆ “ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು” ತಮಿಳುನಾಡಿನ ವೆಲ್ಲೂರು ಪೇಟೆಲಿ ಇಪ್ಪದು…ಪ್ರತೀ ವರ್ಷವೂ ಇ೦ಡಿಯಾ ಟುಡೇ, ದಿ ವೀಕ್ ಪತ್ರಿಕೆಗ ಆಸ್ಪತ್ರೆಗಳ ಸಮೀಕ್ಷೆಯ ವರದಿಗಳ ಕೊಡುಗ ಯಾವಾಗಲೂ ಎರಡನೇ ಸ್ಥಾನಲ್ಲಿಪ್ಪದು…ಹೆಚ್ಚಾಗಿ ಮೂರನೇ ಅಥವಾ ನಾಲ್ಕನೇ ಸ್ಥಾನ ಸಿಕ್ಕುದು ಸೈಟ್ ಜೋನ್ಸ್ ಆಸ್ಪತ್ರೆ ಬೆ೦ಗ್ಳೂರು..ಅದು ಹೇ೦ಗೆ ಪೊರ್ಬುಗೊಕ್ಕೆ ಆ ರೀತಿಯ ಸಾಧನೆ ಮಾಡ್ಲೆ ಎಡಿಗಾತು? ಅ೦ತರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಅಲ್ಲಿ ಇದ್ದು..
    ನವಗೆ ಏಕೆ ಆ ರೀತಿಯ ಒ೦ದು ಹಿ೦ದೂ ಕಾಲೇಜು ಕಟ್ಟುಲೆ ಎಡಿಗಾಯಿದಿಲ್ಲೆ?
    ಅದುವೇ ಪೊರ್ಬುಗಳ ತತ್ವ….ಅವರದ್ದು targetted delivery system..ಜನ೦ಗಳ ಬೇಕುಗಳ ಅರ್ಥ ಮಾಡಿಗೊ೦ಡು ಅದರ ಕೊಟ್ಟುಗೊ೦ಡು ಮರುಳು ಮಾಡುವ ಬುದ್ಧಿ..ಶಾಲೆ ಆಸ್ಪತ್ರೆ ಇತ್ಯಾದಿ…
    ಅದಲ್ಲದ್ದೆ ಎಲ್ಲಾ ದಿಕ್ಕೆ ಇಪ್ಪ ಹಾ೦ಗೆ ನಮ್ಮ ಹವ್ಯಕ ಸಮಾಜಲ್ಲೂ ನ್ಯೂನತೆಗ ಇಕ್ಕು…ನಮ್ಮ ಸ೦ಸ್ಕೃತಿಯ ನವಗೆ ಒಳಿಶಿಗೊ೦ಬಲೆ
    ನವಗೆ ಏಕೆ ಎಡಿತ್ತಿಲ್ಲೆ ಹೇಳುದಕ್ಕೆ ಬೇರೆ ಬೇರೆ ಕಾರಣ೦ಗ ಇಕ್ಕು…
    ಈ ವಿಶಯಲ್ಲಿ ದೊದ್ಡಭಾವ ಹೇಳಿದಾ೦ಗೆ ಆರೋಗ್ಯಕರ ಚರ್ಚೆ ನಿಜವಾಗಿಯೂ ಮಾಡೆಕ್ಕಾದ್ದದೆ…ಒಬ್ಬೊಬ್ಬನ ಅಭಿಪ್ರಾಯ ಒ೦ದೊ೦ದು ಇಕ್ಕು…ನಾವೇ ಎಲ್ಲೋರು ಒಟ್ಟಿ೦ಗೆ ಕೂದೋ೦ಡು ಮಾತಾಡಿರೆ ಏನಾರು ನಿರ್ಧಾರಕ್ಕೆ ಬಪ್ಪಲೆ ಎಡಿಗಾ ಏನೋ?…

    1. ningo heliddu hundreddu percentu karrectu daktre.
      nammallippa lopangale ee jana saryagi exlpoit madta iddavu. Nammade jenongu purbugo adappago eshto bejara avto adarinda hechcu bejara “avara” naavu nadeshigomba reethi nodi enage avuttu. Indingoo naavu harijanara maneyola bidle tayarille. adare ee DANA THIMBA maple maneyola bandu adakka vyapara madidare nammavakke yava abhyantaravoo ille. Inta viparyasangala pariharisigomaba agatya namage indu baindu. Navellaroo seri namma hiriyaringe idara avakke artha appa reethili helekkaddu namma karhtavya. Illaddare namma mundano generation igarji/pallige hopadara noduva karma khandita tappiddalla..

      1. @ಸತ್ಯಣ್ಣ,
        ಈ ವಿಷಯದ(ಇದಲ್ಲದ್ದೆ ಇನ್ನೂ ಹಲವು) ಬಗ್ಗೆ ಅದೇ ದಿನ ಒಪ್ಪಣ್ಣ೦ಗೆ ಒ೦ದು ವೈಯುಕ್ತಿಕ ಪತ್ರ ಬರದಿತ್ತೆ…ತು೦ಬಾ ವಿಸ್ತಾರವಾಗಿ…ಅದರ ಅವ ಗುರುಗೊಕ್ಕೆ ಕಳುಸಿದ್ದ ಅಡ…ಗುರುಗ ಅದರ ಬಗ್ಗೆ ಆಲೋಚನೆ ಮಾಡಿ ಮ೦ಗಳಕರವಾದ ಪರಿಹಾರ ಕೊಡ್ತೆ ಹೇಳಿದ್ದವಡ….ಖ೦ಡಿತಾ ಕೊಡುಗು…ಆ ವಿಶ್ವಾಸ ನವಗೆಲ್ಲಾ ಇದ್ದು….

  27. ಲಾಯ್ಕಾಯ್ದು. ಎಲ್ಲರಿಂಗೂ ಹೀಂಗಿಪ್ಪ ದೈರ್ಯ ಇರ್ತಿಲ್ಲೆ. ಅದೂ ಇಷ್ಟು ನೇರಾನೇರ!!!!ಗುಡ್.
    ಆದರೆ ಜಾಗ್ರತೆ ಇರು ಒಪ್ಪಣ್ಣ. ಬೇಗ ‘ಬ್ರಾಂಡ್ ‘ ಅನ್ಸಿಕೊಳ್ತೆ. ಬಿ ಕೇರ್ಫುಲ್. ಅಷ್ಟು ಸುಲಬ ಇಲ್ಲೆ ಹೀಂಗೆ ಬರದು ಇಪ್ಪಲೆ.

  28. ಒಪ್ಪಣ್ಣನ ಈ ಸರ್ತಿಯಾಣ ಬರವಣಿಗೆ ಓದಿ ಅದಕ್ಕಿಂತ ದೊಡ್ಡ ಕಾಮೆಂಟುಗೊ ಎಲ್ಲ ಬಯಿಂದಿದಾ… ನಮ್ಮ ಮಧ್ಯಲ್ಲಿ ಒಂದು ಚರ್ಚೆ ಹುಟ್ಟುಸಲೆ ಸಾಧ್ಯ ಆದರೆ ಬರವಣಿಗೆ ಸಾರ್ಥಕ, ಎಂತ ಹೇಳ್ತೆ ನೀನು ಒಪ್ಪಣ್ಣಾ…?

  29. ಬೊಳುಂಬು ಗೋಪಾಲ ಮಾವ ಹೇಳಿದ್ದು ಸರಿ. ಬೇಳದ ಕೂಗುತ್ತ ಮೇರಿಯ ಇಂಗ್ರೋಜಿಲಿ ಕೂಡ ಕೆಲವು ಒರಿಷಂದ ನವರಾತ್ರಿಲಿ ಆಯುಧ ಪೂಜೆ (ವಾಹನ ಪೂಜೆ) ಮಾಡ್ತಾ ಇದ್ದವು. ಅಲ್ಲಿ ನಮ್ಮ ಹಿಂದುಗೊ ಕೆಲವು ಜನ ಕೂಡ ರಿಕ್ಷಾ, ಬೈಕು ಕೊಂಡೋಗಿ ಪಾದ್ರಿ ಕೈಯಿಂದ ನೀರು ತಳಿಶಿಗೊಂಬದು ನೋಡುವಾಗ ಬೇಜಾರಾವುತ್ತು. ಇದರ ಪೇಪರಿಲ್ಲಿಯೂ ದೊಡ್ಡ ಪಟ ಹಾಕಿ ಶುದ್ದಿ ಕೊಡ್ತವು.

    ಕೇರಳಲ್ಲಿ ಪೊರ್ಬುಗಳ ’ನಸ್ರಾಣಿಗೊ’ ಹೇಳಿ ಹೇಳ್ತ ಕ್ರಮ ಇದ್ದು. ನಸ್ರಾಣಿ ಹೇಳ್ತ ಶಬ್ದ ನಮ್ಮ ಊರಿಲ್ಲಿಯೂ ಇದ್ದು. ಆದರೆ ಈ ನಸ್ರಾಣಿಗೊ ನಂಜು ಮಾಡ್ಳೆ ಬಲ. ಹತ್ತರೆ ನಮ್ಮವರ ಮನೆ ಇದ್ದರೆ ಏನಾರೊಂದು ಕೊಸ್ರಾಂಕೊಳ್ಳಿ ತೆಗೆಯದ್ದೆ ಇರವು.

    ಆದರೆ ಎಷ್ಟು ಹೇಳಿರೂ ಈ ಪೊರ್ಬುಗೊಕ್ಕೆ ನಮ್ಮ ದೇವರ ಮೇಲೆ ರೆಜ್ಜ ಹೆದರಿಕೆ ಇದ್ದು ಕಾಣ್ತು. ಎಂತ ಹೇಳಿರೆ ಕಳುದ ಒರಿಷ ಕಣ್ಯಾರ ಇಂಗ್ರೋಜಿಯ 75ನೇ ಒರಿಷದ ಸಂಭ್ರಮದ ಸಮಯಲ್ಲಿ ಅಲ್ಯಾಣ ಪಾದ್ರಿ ಕಣ್ಯಾರ ದೇವರಿಂಗೆ ಹಣ್ಣು ಕಾಯಿ ತಂದು ಕೊಟ್ಟಿದಡ. ಇದು ಗುಟ್ಟಿನ ಶುದ್ದಿ. (ಆರತ್ರೂ ಹೇಳಿಕ್ಕೆಡಿ… ಆತಾ? 😀 ) ಇದು ಕಣ್ಯಾರ ಪೇಟೆಯ ಒಬ್ಬ ಡಾಕುಟ್ರ ಹೇಳಿದ್ದದು.

  30. ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲೆ ಕಾಣುತ್ತು ಒಪ್ಪಣ್ಣೊ.. ಕೇ೦ದ್ರಲ್ಲಿ ಇಪ್ಪದು ಬಾಯಮ್ಮನ ಸರ್ಕಾರ.. ಹಾ೦ಗಾಗಿ ಇ೦ಥದಕ್ಕೆಲ್ಲ ಒಳ್ಳೆ ಪ್ರೋತ್ಸಾಹ ಸಿಕ್ಕುತ್ತು ಅಲ್ಲಿ೦ದ.. ಮತ್ತೆ ನಮ್ಮ ಟೀವಿ, ಪೇಪರ್ ನವೆಲ್ಲ ಕೂಡ ಪುರ್ಬುಗಳ ಕಡೆಯೆ… ನಿಜವಾಗಿ ನೋಡಿರೆ ಈ ಪುರ್ಬುಗೊ ಹಿ೦ದುಗಳಲ್ಲಿಪ್ಪ ಜಾತಿ ಪಧ್ಧತಿ, ಅಸ್ಪ್ರುಶ್ಯತೆ ಇತ್ಯಾದಿ ದೌರ್ಬಲ್ಯ೦ಗಳ ಉಪಯೋಗಿಸುತ್ತ ಇದ್ದವು..

  31. ಬರದ್ದು ಲಾಯಿಕ ಆಯಿದು. ಇದರ ತಪ್ಸುಲೆ ನಾವೆಂತ ಮಾಡುಲೆ ಎಡಿಗು ಹೇಳುದೆ ಪ್ರಶ್ನೆ. ನಮ್ಮ ಶರ್ರಲ್ಲಿ ಜ್ವರ ಬತ್ತಾ ಇದ್ದು ಜ್ವರ ಬತ್ತಾ ಇದ್ದು ಹೇಳಿಯೊಂಡಿದ್ದರೆ ಜ್ವರ ಕಮ್ಮಿ ಆವುತ್ತ? ನಮ್ಮ ಆಯುರ್ವೇದಲ್ಲಿ ಹೇಳಿದ ಪ್ರಕಾರ ಜ್ವರ ಬಂದ ಮೇಲೆ ಮಾತ್ರೆ ಕೊಡುಕ್ಕಿಂತ ಜ್ವರ ಬಾರದ್ದಾಂಗೆ ಮಾಡುದೆ ಉಚಿತ. ಒಪ್ಪಣ್ಣನೇ ಬರದ ಹಾಂಗೆ ಕೆಳ ಜಾತಿಯವು ಕನ್ವರ್ಟ್ ಅಪ್ಪಲೆ ಪಾದಿರಿಗೊ ಕಾರಣ ಆದಿಕ್ಕು. ಆದರೆ 100% ಅಲ್ಲ. 50% ಪಾದ್ರಿಗೊ ಕಾರಣ ಆದರೆ 50% ನಾವೇ ಕಾರಣ ಹೇಳಿ ಎನ್ನ ಅನಿಸಿಕೆ. ಈಗ ಬ್ರಾಹ್ಮಣರನ್ನೇ ತೆಕ್ಕೊಂಬ. ಲೆಕ್ಕಕ್ಕೆ ನವಗೆ ವೇದ ಶಾಸ್ತ್ರ ಇತ್ಯಾದಿ ಗೊಂತಿರೆಕ್ಕು ಹೇಳಿ. ನವಗೆ ಗೊಂತಿದ್ದ ಅವೆಲ್ಲ? ವೇದ ಆಗಲೀ ಗೀತೆ ಆಗಲೀ ಜನ್ಮತಹ ಬ್ರಾಹ್ಮಣ ಅಪ್ಪಲೆ ಸಾಧ್ಯ ಇಲ್ಲೆ ಹೇಳಿ ಹೇಳುತ್ತು. ಅದಕ್ಕೇ ನವಗೆ ಉಪನಯನ ಹೇಳ್ತರ ಮಾಡುದು. ಹಾಂಗಿಪ್ಪಗ ಹೊಲೆಯರಲ್ಲೂ ಆಸಕ್ತಿಯಿಪ್ಪವು ಇದ್ದರೆ ಅವಕ್ಕೆ ಉಪನಯನ ಮಾಡುಲಾಗದ? ಅವು ಮಾಂಸ ತಿಂತವು ಹೇಳಿ ಆತು. ಎಲ್ಲೋವು ತಿನ್ನೆಕ್ಕು ಹೇಳಿಯೇ ಇಲ್ಲೆನ್ನೇ? ಅಷ್ಟಕ್ಕೂ ನಮ್ಮಲ್ಲಿ ಎಷ್ಟು ಜನ ಮಾಂಸ ತಿಂತೊವಿಲ್ಲೆ? ಕಮ್ಮಿಲಿ 10% ಜನ ತಿಂಗು (ಬೆಂಗುರಿಲಿ ಇಪ್ಪೋರ ಸೇರ್ಸಿ). ಅವು ಬ್ರಾಹ್ಮಣರು ಅಲ್ಲವೋ? ಆಚಾರಿಗೊ, ಕೊಂಕಣಿಗೊ ಜನಿವಾರ ಹಾಕಿಯೂ ಮಾಂಸ ತಿಂತೊವಿಲ್ಲೆಯೋ? ಇಂಥ ಜನಂಗಳ ಪಾದ್ರಿಗೊ ಮರುಳು ಮಾಡುಲೆ ಕಷ್ಟ. ಎಂತಕ್ಕೆ ಹೇಳ್ರೆ ಅವು ನಮ್ಮ ಧರ್ಮದ ‘ಒಳ’ ಇದ್ದವು. ಪೂರ್ತಿಯಾಗಿ ಧರ್ಮಾಚರಣೆ ಮಾಡ್ತವು ಹೇಳಿ ಅಲ್ಲ. ಆದರೆ ‘ಒಳ’ ಇದ್ದವು. ಹಾಂಗೇ ಹೊಲೆಯರನ್ನೂ ನಾವು ‘ಒಳ’ ತರೆಕ್ಕು ಹೇಳಿ ಎನ್ನ ಆಂಬೋಣ.

    ಇನ್ನೂ ಒಂದು ಇದ್ದು. ನಾವು ಹವ್ಯಕ ಭಾಷೆಲಿ ಹೊಲೆಯರ/ಕೆಳ ಜಾತಿಯೊರ ‘ಅದು’ ಹೇಳಿ ಹೇಳುತ್ತು. ಈಗಣ ಪೇಟೆಲಿಪ್ಪ ಹವ್ಯಕರು ನಾಯಿಗಳನ್ನೂ ‘ಅವ’ ಹೇಳಿ ಹೇಳ್ತ ಕಾಲಲ್ಲಿ ಹೊಲೆಯರ ‘ಅದು’ ಹೇಳಿ ಹೇಳೆಕ್ಕ ಹೇಳ್ತು ಎನ್ನ ಪ್ರಶ್ನೆ. ಹೇಳಿದರೆ ಅಪ್ಪಲೆ ಎಂತ ಇಲ್ಲೆ. ಆದರ ಅದರ ಹಿಂದಿನ ಆಶಯ ಸರಿಯಾಗಿರೆಕ್ಕು ಅಷ್ಟೆ.

    ಇನ್ನೂ ಒಂದು ವಿಷಯ ಇದ್ದು. ನಮ್ಮ ದೇಶಲ್ಲಿ ಇಷ್ಟೊಂದು ಹಿಂದೂ ಸಂಘಟನೆಗೊ ಇದ್ದು. ಆದರುದೆ ಇನ್ನುದೆ ನಾವಗೆ ನಮ್ಮದೇ ದೇವಸ್ಥಾನಂಗಳ ಆದಾಯ ನವಗೆ ಬಪ್ಪ ಹಾಂಗೆ ಏಕೆ ಮಾಡುಲೆ ಎಡಿಗಾಯಿದಿಲ್ಲೆ? ಉದಾ ತಿರುಪತಿ ತಿಮ್ಮಪ್ಪಂಗೆ ಬಪ್ಪ ಪೈಸೆಲಿ ನವಗೆ ಸೋಜಂಗೊ ಕೊಡುದಕ್ಕಿಂತ ಜಾಸ್ತಿ ಪೈಸೆ ಹೊಲೆಯರಿಂಗೆ ಕೊಡುಲೆ ಎಡಿಗು. ನಾವು ಏಕೆ ಹಾಂಗೆ ಮಾಡುತ್ತಿಲ್ಲೆ? ಅಷ್ಟಕ್ಕೂ ಈ ಧಾರ್ಮಿಕ ದತ್ತಿ ಕಾಯಿದೆ ಹೇಳ್ತು ಎಂತಕ್ಕೆ ಶುರುವಾದ್ದು ಗೊಂತಿದ್ದೋ? ದತ್ತಿ ಕಾಯಿದೆ ಬಪ್ಪಂದ ಮದಲು ದೇವಸ್ಥಾನ ಆಡಳಿತ ಸಮಿತಿಗೊ ದೇಶದಾದ್ಯಂತ ಅತ್ಯಂತ ಕರಪ್ಟ್ ಆಗಿ ಹೋಗಿತ್ತಿದು. ಈ ಬಗ್ಗೆ ಎಲ್ಲಾ ಕಡೆ ದೂರುಗೊ ಬಂದ ಮೇಲೆಯೇ ಗೋರ್ಮೆಂಟು ದತ್ತಿ ಕಾಯಿದೆ ತಂದು ಹಣಕಾಸು ವ್ಯವಹಾರಂಗೊಳ ತನ್ನ ಸುಪರ್ದಿಗೆ ತೆಕ್ಕೊಂಡದು. ಈಗ ಪುನಹ ಅದರ ನಮ್ಮ ಸುಪರ್ದಿಗೆ ತರೆಕ್ಕು ಹೇಳಿ ಇದ್ದರೆ ನಾವು ಸರಿಯಾದ ಪಾರದರ್ಶಕ ಮತ್ತೆ ಸುಸ್ಥಿರ ಆಡಳಿತ ನೀತಿಯ ತರೆಕ್ಕು. ಅದರ ಇಡೀ ಭಾರತಲ್ಲಿ ಒಂದೇ ರೀತಿ ಇಪ್ಪ ಹಾಂಗೆ ಮಾಡೆಕ್ಕು. ಮಾಡುದು ಕಷ್ಟ ಹೇಳುದು ಒಂದು ಕಡೆ ಆದರೆ ನಮ್ಮಲ್ಲಿ ಬಹಳಷ್ಟು ಜನಕ್ಕೆ ಅದು ಬೇಕಿಲ್ಲೆ. ಬೇಕಾರೆ ಅಷ್ಟು ಪೈಸೆಲಿ ದೇವಸ್ಥಾನಕ್ಕೆ ಅನಗತ್ಯ ಫೆಸಿಲಿಟಿಗಳ ಹಾಕುಗು ಅಥವಾ ಒಂದಷ್ಟು ದೊಡ್ಡ ದೊಡ್ಡ ದೇವರ ವಿಗ್ರಹಂಗಳ ಮಾಡುದೇ ಹೊರತು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುದು ಕಮ್ಮಿ. ಎಂತಕ್ಕೆ ಹೀಂಗೆ?

    ದೇವಸ್ಥಾನ, ದತ್ತಿ ಕಾಯಿದೆ ಮತ್ತೆ ದೇವಸ್ಥಾನಂಗಳ ಆಡಳಿತ ಪುನ ಪಡಕೊಂಬದು ಹೇಂಗೆ ಹೇಳ್ತು ಬಗ್ಗೆ ಹೆಚ್ಚು ವಿವರ ಬೇಕಿದ್ದರೆ ಈ ಕೆಳಣ ಕೊಂಡಿ ಓದಿ:
    http://hindurenaissance.com/index.php/20080126102/6-varshapratipada-april-2007/articles/dharma/alternative-to-govt-control-of-hindu-math-and-temples/menu-id-1.html


    ಧನ್ಯವಾದಗಳೊಂದಿಗೆ,
    ಮಹೇಶ ಪ್ರಸಾದ ನೀರ್ಕಜೆ

    1. ನೀರ್ಕಜೆ ಅಪ್ಪಚ್ಚಿ
      ಪ್ರಬುದ್ಧವಾಗಿ ಬರದ್ದಿ. ಇದೇ ವಿಷಯ(‘ಅದು’ ಹೇಳ್ತದು) ಸರ್ಪಮಲೆ ಮಾವನ ಲೇಖನಲ್ಲಿಯೂ ಚರ್ಚೆಯಾಯಿದು. ಒಂದರಿ ಓದಿನೋಡಿಕ್ಕಿ.

  32. ಅಪ್ಪನಮನೆ ಚಿನ್ನವ ಕದ್ದು ಗೆಂಡನಮನಗೆ ಹೊತ್ತ ಹಾಂಗೆ!
    ಶುದ್ಧ, ಕಲಶ, ಅಭಿಶೇಕ!!! ಮೂರುದೇ ಅವರ ಸಂಸ್ಕೃತಿಲಿ ಇಲ್ಲದ್ದು.
    ಗಂಧ ಗಂಧವೇ, ಉಪ್ಪಳಿಗೆ ಉಪ್ಪಳಿಗೆಯೇ!
    ಗೋಣ ತಾಡ್ಳೆಬಂದರೆ ಶಾಂತಿಮಂತ್ರ ಹೇಳುದಲ್ಲ, ಬಡಿಗೆ ತೆಕ್ಕೊಂಡು ಅರ್ಪೆಕ್ಕು.
    ವಿಷ್ಣುವಿನ ದಶಾವತಾರದ ಪುನರ್ಜನ್ಮ ಲೊಟ್ಟೆ ಅಡ! ಯೇಸು ಸತ್ತು ಮೂರ್ನೇದಿನ ಹುಟ್ಟಿದ್ದು ಎಂತರ ಅಂಬಗ?

    ವಾಹ್, ಎಂತಾ ಮಾತುಗೊ ಒಪ್ಪಣ್ಣ ನಿನ್ನದು. ಭಾರೀ ಲಾಯಕಾಯಿದು. ನಿಜ ಸ್ಥಿತಿಯ ತಿಳುಸಿಕೊಡುವ ಒಳ್ಳೆ ವೈಚಾರಿಕ ಲೇಖನ. ನವರಾತ್ರಿಯ ಸಂದರ್ಭಲ್ಲಿ ಅವುದೆ ವಾಹನ ಪೂಜೆ ಮಾಡುತ್ತರ ಎಂಗಳ ಏರಿಯಾದ ಚರ್ಚಿಲ್ಲಿ ಆನು ಕಂಡಿದೆ. ನಾವು ಮಾಡುವ ದಿನವೇ ಅವು ಆ ಕಾರ್ಯಕ್ರಮ ಮಾಡುತ್ತವು. ದೀಪಾವಳಿ ಸಮಯಲ್ಲು ಅವರದ್ದು ಗೌಜಿ ಇರುತ್ತು. ನಮ್ಮ ಧರ್ಮದ ಬಗ್ಗೆ ನವಗೆ ಅಭಿಮಾನ, ಪ್ರೀತಿ ಇದ್ದರೆ ಆರಿಂಗು ತಲೆತಗ್ಗುಸೆಕಾಗಿ ಇಲ್ಲೆ.

    ಆದರೆ ಅವರ ಚರ್ಚಿನ ಒಳ ಅವು ತೋರುತ್ತ ಶಿಸ್ತಿನ ನಾವು ನಮ್ಮ ದೇವಸ್ಥಾನಂಗಳಲ್ಲಿ ಅಳವಡಿಸೆಳೆಕು ಹೇಳಿ ಎನಗೆ ಅನುಸುತ್ತು.

  33. ಒಪ್ಪಣ್ಣ..,
    ಎಲ್ಲೋರ ಮನಸ್ಸಿಲಿಪ್ಪ ಭಾವನೆಯ ಚೆಂದಕ್ಕೆ ಅಕ್ಷರ ಕ್ಕಿಳಿಸಿದ್ದಿ..
    ನಿಜವಾಗಿ ಮುಗ್ಧ ಜನಂಗಳ ಮೋಸಲ್ಲಿ ಅವರ ಜಾತಿಗೆ ಸೇರುಸುತ್ತವು..
    ಇಲ್ಲಿ ಜನ ಹೆಚ್ಚು ಅವರ ಜಾತಿಗೆ ಸೇರಿದಷ್ಟು ಅವರ ಹೆಡ್ದಾಪೀಸಿಂದ ಪೈಸೆ ಬತ್ತ ಡ್ಡ…
    ರಾಶಿ ರಾಶಿ ಪೈಸೆ ಬರೆಕ್ಕಾರೆ ಜನ ಒಳ ಬಂದದರ ತೋರುಸೆಡದ..?
    ಹಾಂಗಾಗಿ ಇಲ್ಲಿ ಯಾವ ನಮ್ಮ ಅಚಾರಂಗಳ ಅನುಕರಣೆ ಮಾಡಿದರೂ ತಳಿ ಯದ್ದಿಪ್ಪದು.. ಬಪ್ಪಷ್ಟು ಜನ ಬರಲಿ ಹೇಳಿ…
    ಇದಕ್ಕೆ ಆದಷ್ಟು ಬೇಗ ಮಂಗಳ ಆದರೆ ಒಳ್ಳೇದಿತ್ತು…
    ಶ್ರೀದೇವಿ ವಿಶ್ವನಾಥ್

  34. ಈ ಲೇಖನವನ್ನು ನೋಡಿದರೆ ಒಂದು ರೀತಿಯಲ್ಲಿ ನೋವಾಗುತ್ತದೆ.
    ನಮ್ಮಲ್ಲಿ ಹಿಂದಿನಿಂದಲೂ ಬಂದ ಜಾತಿ ಪದ್ಧತಿಯನ್ನು ಉಪೇಕ್ಷಿತ ಬಂಧುಗಳಲ್ಲಿ ಬೇರೆ ರೀತಿಯಲ್ಲಿ ಬಿಂಬಿಸುತ್ತ ಅವರಿಗೆ ಹಣದ ಆಮಿಷ ಒಡ್ಡಿ, ಅವರನ್ನು ಮತಂತರ ಮಾಡಿ ಸಂಖ್ಯಾಬಲವನ್ನು ವೃದ್ಢಿಸುವಲ್ಲಿ ನಿರತರಿಗಿರುವ ಪಾದ್ರಿಗಳು ನಮ್ಮ ಸಮಾಜಕ್ಕೆ ಅತ್ಯಂತ ಅಪಾಯಕಾರಿ.
    ಒಬ್ಬ ವ್ಯಕ್ತಿ ಮತಾಂತರ ಆದ ಎಂದರೆ ಅದನ್ನು ಹಗುರವಾಗಿ ತೆಗೆದುಕೊಳ್ಳುವಹಾಗಿಲ್ಲ, ಎಕೆಂದರೆ ಒಬ್ಬ ಮತಾಂತರ ಆದರೆ ರಾಷ್ಟ್ರಾಂತರ ಆದ ಹಾಗೆ.
    ಆ ವ್ಯಕ್ತಿಯ ಆಚರ ವಿಚಾರ ಯಲ್ಲವೂ ಸಹಜವಾಗಿಯೇ ಬದಲಾವಣೆ ಆಗುತ್ತವೆ. ನಿನ್ನೆಯವರೆಗೂ ತೀರ್ಥ ಕುಡಿಯುತ್ತಿದ್ದ ವ್ಯಕ್ತಿ ವೈನ್ ಕುಡಿಯುತ್ತಾನೆ. ಈ ರೀತಿ ಅನೇಕ ಬದಲಾವಣೆ ಅವನಲ್ಲಿ ಕಾಣಸಿಗುತ್ತದೆ. ಹಣೆಯ ತಿಲಕ ಹೋಗುತ್ತದೆ. ಧರಿಸುವ ಬಟ್ಟೆ ಬದಲಾಗುತ್ತದೆ…..
    ೨೦೦೦ರಲ್ಲಿ ಪೋಪ್ ಭಾರತಕ್ಕೆ ಬಂದಾಗ ಮುಂದಿನ ಶತಮಾನ ಕ್ರಿಸ್ತನ ಶತಮಾನ ಎಂದು ಹೇಳಿ ಹೋಗಿದ್ದರು.

    ಆದರೆ ಈ ಎಲ್ಲ ಬೆಳವಣಿಗೆಯನ್ನು ಆಳಕ್ಕೆ ಇಳಿದು ಗಮನಿಸಿದರೆ ಭಾರತ, ಭಾರತೀಯ ಸಂಸ್ಕೃತಿ ಜಗತ್ತೇ ಒಪ್ಪುವ ಕಾಲ ಸನ್ನಿಹಿತವಾಗುತ್ತಿದೆ ಎಂಬುದು ಗೋಚರವಾಗುತ್ತದೆ. ನಮ್ಮ ಹಿರಿಯರು ಅದನ್ನೆ ತಾನೆ ಹೇಳಿದ್ದು ‘ಯಾವ ದೇವರನ್ನೇ ನಂಬು, ಆಚರಣೆಯನ್ನೇ ಅನುಸರಿಸು ಆದರೆ ಸನಾತನ ಹಿಂದೂ ಧರ್ಮವನ್ನು ಬಿಡಬೇಡ.’ ಇನ್ನು ಪಾದ್ರಿಗಳೆಲ್ಲ ತಮ್ಮ ಪರಿಚಯವನ್ನು ಹೊರದೇಶಕ್ಕೆ ಹೋದಾಗ “ನಾನು ಹಿಂದು ಕ್ರಿಶ್ಚಿಯನ್” ಎಂದು ಮಾಡಿಕೊಡಬೇಕು.

    ಹೌದು ಹಜ್ ಯಾತ್ರೆಗೆ ಹೋದ ಮುಸಲ್ಮನ ಇದೇ ರೀತಿ ಅಲ್ಲಿ ಹೆಸರು ನೋದಾಯಿಸಿದ ಉಧಾಹರಣೆಗಳಿವೆ. ಈ ದೇಶಕ್ಕೆ, ಢರ್ಮಕ್ಕೆ ಖಂಡಿತ ನಾಶ ಇಲ್ಲ ಇದು ಅಚಲ, ವಜ್ರದಷ್ಟು ಗಟ್ಟಿ ಈ ರೀತಿ ಎಷ್ಟೋ ಆಕ್ರಮಣಗಳನ್ನು ಈ ನಾಡು ಕಂಡಿದೆ. ಆವುಗಳನ್ನು ಕಾಲಕಾಲಕ್ಕೆ ದಮನಿಸುತ್ತಲೇ ಬಂದಿದೆ.
    ಆದರೆ ಕೊನೆಗೂ ಸರಿ ಮಾಡಿಕೊಳ್ಳಬೇಕಾದದ್ದು ನಾವೇ. ನಮ್ಮ ಮನೆಯಲ್ಲಿ ಇರುವ ಕೊಳೆಯನ್ನು ಬೇರೆಯವರು ಬಂದು ಸ್ವಚ್ಛ ಮಾಡುವುದಿಲ್ಲ ನಾವೇ ಮಾಡುತ್ತೇವೆ. ಹಾಗೇ ನಮ್ಮ ಸಮಾಜದಲ್ಲಿ ಇರುವ ಈ ರೀತಿಯ ಅನಿಷ್ಟಗಳನ್ನು ನಾವೇ ತಾನೆ ಸರಿ ಮಾಡಬೇಕದದ್ದು.

    ಈ ಎಲ್ಲ ಜಾಗೃತಿಯನ್ನು ನಾವು ಈಗ ಮಾಡದಿದ್ದರೆ ಮುಂದಿನ ಪೀಳಿಗೆಗೆ ನಾವು ಮೋಸಮಾಡಿದ ಹಾಗೆ ಆಗುತ್ತದೆ. ಮುಂದೆ ಜನಿಸುವ ಮಕ್ಕಳಿಗೆ ಈ ಸಂಸ್ಕೃತಿಯ ಪರಿಚಯವೇ ಇಲ್ಲದಂತಾಗುತ್ತದೆ. ಈ ಸಂಗತಿಗಳನ್ನು ಓದಿ ನಾವೂ ಸುಮ್ಮನೆ ಕುಳಿತುಕೊಳ್ಳಬಾರದು. ಸಂದರ್ಭಸಿಕ್ಕಾಗ ಉದಾಹರಣೆ ಮದುವೆ ಮಂಟಪದಲ್ಲಿ ಅಕ್ಷತೆ ಆಗೋವರೆಗೂ ಹೇಗೂ ಸಮಯ ಇರುತ್ತೆ ಯಾವ್ಯಾವುದೋ ಹರಟೆ ಅಗ್ತಿರುತ್ತೆ, ಅದರ ಬದಲು ಈ ರೀತಿ ವಿಷಯಗಳನ್ನು ವಿನಿಮಯ ಮಾಡಿಕೊಂಡರೆ ಎಷ್ಟು ಉತ್ತಮ ಅಲ್ವಾ??

    ಪ್ರಸ್ತುತ ಸಂದರ್ಭಕ್ಕನುಗುಣವಾಗಿ ಅತ್ಯಂತ ಮಾರ್ಮಿಕವಾದಂತಹ ಲೇಖನವನ್ನು ಒಪ್ಪಣ್ಣ ಬರೆದಿದ್ದಾರೆ.
    ಈ ಲೇಖನ ಹಿಂದೆ ಇರುವ ಸಂಗತಿಯನ್ನು ಓದುಗರು ಅರಿತುಕೊಂಡು ಸಮಾಜದ ಬಗ್ಗೆ ಕಳಕಳಿಯನ್ನು ತೋರಿದರೆ, ಖಡಿತವಾಗಿ ಒಪ್ಪಣ್ಣನ ಈ ಪ್ರಯತ್ನ ಸಾರ್ಥಕವಾಗುತ್ತದೆ. ಸಮಜವನ್ನು ಎಚ್ಚರಿಸುವ ಇನ್ನೂ ಹೆಚ್ಚಿನ ಲೇಖನಗಳು ಅವರಿಂದ ಬರಲಿ..

  35. ಪೊರ್ಬುಗಳ ನೀಚ ಬುದ್ಧಿ ಓದಿ ಭಾರೀ ಬೇಜಾರಾತು. ಕಳುದ ಒರಿಶ ಬೆಳ್ತಂಗಡಿ ಸೈಡಿಲ್ಲಿ ಒಂದು ಪೊರ್ಬುಗಳ ಅನಾಥಾಶ್ರಮದ ಪಟ ತೆಗವಲೆ ಹೋಗಿತ್ತಿದ್ದೆ. ಒಂದು ವೆಬ್‍ಸೈಟಿಂಗೆ ಬೇಕಾಗಿ. ಎದ್ದು ನಿಂಬಲೆ ಎಡಿಯದ್ದವಕ್ಕು ಚರ್ಮದ ತುಂಡು ಕಟ್ಟಿ ಬಿಟ್ಟಿದವು. ಹಿಂದುಗೊ ಆಗಿಪ್ಪವು ಹಿಂದುಗಳೇ ಅಡ. ಜಾತಿ ಗೊಂತಿಲ್ಲದ್ದ ಕೆಲವು ಮರ್ಲಂಗೋ, ಅನಾಥಂಗೊ ಪೊರ್ಬುಗೊ ಅಡ. ಹೇಂಗೆ?
    ಆ ಮನುಷ್ಯಂಗೆ ಬೇರೆ ದೇಶಂದ ಪೈಸೆ ಬತ್ತೋ ಸಂಶಯ ಎನಗೆ. ಆದರೂ ಇಲ್ಲಿ ವೆಬ್‍ಸೈಟ್ ಮಾಡಿ ಊರಿಲ್ಲಿ ಪ್ರಚಾರ ಮಾಡಿ ಪೈಸೆ ಮಾಡುವ ಬುದ್ಧಿ. ಎನ್ನತ್ರೆ ಇಂಗ್ಲೀಷಿಲ್ಲಿ ಲೇಖನ ಬರವಲೆ ಎಡಿಗೋ ಕೇಳಿತ್ತು. ಬರವಾ ಹೇಳಿದೆ. ಇಂದಿನವರೆಗೆ ಲೇಖನ ಬರೆಕು ಹೇಳಿ ಎನಗೆ ಕಂಡಿದಿಲ್ಲೆ. ಹೇಂಗೆ ಬರವಲೆ ತೋರುಗಾ?

    ಎಂಗಳಲ್ಲಿ ಕೆಲಸಕ್ಕೆ ಬಪ್ಪ ಬಾಯಮ್ಮ ಏವಾಗ ನೋಡಿರೂ ಅದರ ಇಂಗ್ರೋಜಿ ಸುದ್ದಿ ಮಾತಾಡ್ಯೊಂಡೇ ಇಕ್ಕು ಅಮ್ಮನತ್ರೆ. ಅಮ್ಮ ಕೆಲವು ಸರ್ತಿ ಅದರ ಹೇಳುವಗ ಎನಗೆ ಪಿಸುರು ಬಕ್ಕು. ಈ ಒರಿಶ ಜಾತ್ರೆ, ಬೆಡಿ ಎಲ್ಲ ಇದ್ದಡ ಅಲ್ಲಿ. ಬೇರೆಂತ ಇಲ್ಲೆ ಆಯಿಕ್ಕು ಕೇಳಿದೆ ಅಮ್ಮನತ್ರೆ. ನವಂಬರ್ ತಿಂಗಳು ಸುರುವಿಂಗೆ ‘ಆಲ್ ಸೋಲ್ಸ್ ಡೇ’ ಹೇಳಿ ಮಾದ್ತವು. ಅದು ನಮ್ಮ ‘ಅಷ್ಟಗೆ’ ಹಾಂಗೆ ಅಡ. ‘ಪ್ರಸಾದ ಕೊಡುದು’ ಹೇಳಿ ಒಂದು ಆಚರಣೆ ಇದ್ದು. ಅದು ನಮ್ಮ ಉಪನಯನದ ಹಾಂಗೆ ಅಡ. ಪೊರ್ಬುಗೊಕ್ಕೆ ಮಂಡೆ ಸಮ ಇದ್ದಾ? ನಮ್ಮದು ಬೇಡ ಹೇಳಿ ಬಿಟ್ಟವಕ್ಕೆ ಇದು ಎಲ್ಲ ಎಂತದಕ್ಕೆ?
    ಹೇಂಗೂ ನಮ್ಮ ಯೋಗ, ಆಯುರ್ವೇದ ಎಲ್ಲದರ ಎಂಗೊ ಕಂಡುಹಿಡುದ್ದು ಹೇಳ್ತವನ್ನೆ ಈ ಬೇರೆ ದೇಶದವು? ಇನ್ನು ಈ ಹಿಂದೂ ಆಚರಣೆಗೊ ಎಂಗಳದ್ರಲ್ಲಿ ಮೊದಲೇ ಇತ್ತಿದ್ದು ಹೇಳುಗಾಯಿಕ್ಕು ಈ ಪೊರ್ಬುಗೊ?

    ಒಂದು ಸರ್ತಿ ತೆಂಕ್ಲಾಗಿ ಕೇರಳಕ್ಕೆ ಹೀಂಗೇ ಹೋಗಿ ಬನ್ನಿ. ತ್ರಿಶೂರ್ ಹೇಳಿರೆ ನಮ್ಮ ಗುರುವಾಯೂರಪ್ಪನ ಊರು. ಅಲ್ಲಿಂದ ಬರೇ ೩೦ ಕಿ.ಮೀ. ದೂರಲ್ಲಿ ಚಾಲಕ್ಕುಡಿ ಹೇಳಿ ಊರು ಇದ್ದು. ಬೆಟ್ಟ ಪ್ರದೇಶ. ಅಲ್ಲೆಲ್ಲ ಹೊಲೆಯರು, ಮಾದಿಗರು ಇಪ್ಪದು. ಈಗ ಅಲ್ಲಿ ಪ್ರತಿ ಕಿ.ಮೀ ಗೆ ಎರಡು ಮೂರು ‘ಪಳ್ಳಿ’ (ಹೇಳಿರೆ ನಮ್ಮ ಭಾಷೆಲಿ ಇಂಗ್ರೋಜಿ) ಕಾಂಬಲೆ ಸಿಕ್ಕುತ್ತು. ಮಾರ್ಗದ ಕರೆಲಿ ದೊಡ್ಡ ಕಾಣಿಕೆ ಡಬ್ಬಿಯುದೆ ಇಕ್ಕು. ಆತಿರಪಳ್ಳಿ ಜಲಪಾತ ನೋಡ್ಳೆ ಹೋಪಗ ಈ ಸಂಗತಿ ಗೊಂತಕ್ಕು! ಅಲ್ಲಿಪ್ಪ ಹೊಲೆಯರ, ಕೊರಗರ ಎಲ್ಲ ಮತಾಂತರ ಮಾಡಿ ಪೊರ್ಬುಗಳ ಮಾಡಿ ಆಯಿದು. ಇದು ಈಗ ಆದ ಸಂಗತಿ ಅಲ್ಲ ಕಾಣ್ತು. ಮೊನ್ನೆ ದೊಡ್ಡಭಾವನೊಟ್ಟಿಂಗೆ ವಯನಾಡ್ ತಿರುಗುಲೆ ಹೋಗಿಪ್ಪಗಳುದೆ ಅಲ್ಲಿಯೂ ಇದೇ ಸಂಗತಿ. ಅಲ್ಲಲ್ಲಿ ಪೊರ್ಬುಗಳ ಪಳ್ಳಿಗೊ. ಒಂದೆರಡು ದೊಡ್ಡ ಪಳ್ಳಿಗಳಲ್ಲಿ ಕೊಡಿಮರ ಇದ್ದು. ಕೊಡಿಮರದ ಮೇಗೆ ಕೊತ್ತಳಿಗೆ ತುಂಡು! (ಗೊಂತಾತಲ್ದಾ?)

    ಈಗ ಹೇಂಗೂ ನಮ್ಮ ಕೇಂದ್ರ ಸರಕಾರ ನೆಡಶುವದು ಅವರ ಬಾಯಮ್ಮನೇ ಅಲ್ಲದೋ? ಹಾಂಗಾಗಿ ಇಷ್ಟು ಆರ್ವಾಡು… ಅದು ಅಧಿಕಾರಕ್ಕೆ ಬಂದ ಮತ್ತೆ ಕಳ್ಳನೋಟು, ಮತಾಂತರ, ಲವ್ ಜಿಹಾದ್ ಎಲ್ಲ ಜೋರಾದ್ದು. ಇದು ಆರಿಂಗಾದರೂ ಮೇಲ್ನೋಟಕ್ಕೇ ಕಾಂಬ ವಿಷಯ.

    ಒರಿಸ್ಸಾಲ್ಲಿ ಈಗ ಜೋರು ಮತಾಂತರ ಆವುತ್ತಾ ಇದ್ದಡ ಅಲ್ಲದೋ? ಎಂಗಳ ಊರಿನ ದೆನೀಸನ ಮಗ ಸಂತೋಷ ಮಧ್ಯಪ್ರದೇಶಲ್ಲಿ ಪಾದ್ರಿ ಅಪ್ಪಲೆ ಕಲ್ತು ಈಗ ಮೊನ್ನೆ ಮೊನ್ನೆ ಒರಿಸ್ಸಾಲ್ಲಿ ಪಾದ್ರಿ ಆತಡ. ಅದಕ್ಕೆ ಇಲ್ಲಿಂದ ಅದರ ಅಬ್ಬೆ, ಅಪ್ಪ ಎಲ್ಲ ಹೋಯಿದವಡ. ರೈಲಿನ ಖರ್ಚು ಎಲ್ಲ ಅವರ ವೆಟಿಕನ್ ಕೊಡ್ತಡ. ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×