ಹರೇರಾಮ ಎಲ್ಲೋರಿಂಗೂ.
ನಮ್ಮ ಶ್ರೀಗುರುಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ, ಅಂತರ್ಜಾಲಲ್ಲಿ ಹರೇರಾಮ.ಇನ್ ಮೂಲಕ ಸಕ್ರಿಯರಾಗಿಪ್ಪದು ಎಲ್ಲೋರಿಂಗೂ ಗೊಂತಿಪ್ಪದೇ.
ರಾಮಾಯಣ, ಸಾಮಾಜಿಕ ವಿಚಾರಂಗಳ ಬಗೆಗೆ ಬ್ಲೋಗು ಶುದ್ದಿ ಬರದು ಓದುಗ ಶಿಷ್ಯವರ್ಗಕ್ಕೆ ಅಮೃತಧಾರೆ ಕೊಡ್ತದು ಒರಿಶಂದ ನೆಡಕ್ಕೊಂಡು ಬಯಿಂದು.
ಇದೀಗ ಹರೇರಾಮದ ಓದುಗರಿಂಗೆ ಮತ್ತೊಂದರಿ ಸುಸಮಯ.
ನಮ್ಮ ಸೌಭಾಗ್ಯಂದಾಗಿ, ಹರೇರಾಮದ ಓದುಗ ಬಳಗಕ್ಕಾಗಿ ಒಂದು ದಿನ ವಿನಿಯೋಗುಸುತ್ತವು.
ನಮ್ಮ ಹತ್ತರೆ “ನೇರ ಸಂವಾದ” ಕಾರ್ಯಕ್ರಮಕ್ಕೆ ಸಮಯ ಕೊಟ್ಟಿದವು.
ಅಪ್ಪು, ನಾಳ್ತು, ಜೂನು 4ನೇ ತಾರೀಕಿನ ಶೆನಿವಾರ, ಮದ್ಯಾನ್ನಂತಿರುಗಿ ಶ್ರೀಗುರುಗೊ ಮುಕ್ತಸಭೆಲಿ ಭಾಗವಹಿಸುತ್ತವು.
ಎಲ್ಲ ಓದುಗ ಭಕ್ತರು ಬಂದು, ಈ ಕಾರ್ಯಕ್ರಮಲ್ಲಿ ತಮ್ಮ ಹತ್ತರೆ ಇಪ್ಪ ಧಾರ್ಮಿಕ, ಆಧ್ಯಾತ್ಮಿಕ ಪ್ರಶ್ನೆಗಳ ಕೇಳ್ತದರ ಮೂಲಕ ಕಾರ್ಯಕ್ರಮದ ಅನುಕೂಲ ಪಡಕ್ಕೊಳೇಕು – ಹೇಳ್ತದು ಸಮಸ್ತರ ಹತ್ತರೆ ಕೋರಿಕೆ.
ಸೂ: ಈ ಶುದ್ದಿಯ ಸಂಕೊಲೆ ನಿಂಗಳ ಪೈಕಿಯೋರಿಂಗೆ ಕಳುಸಿಕ್ಕಿ. ಆತೋ?
ಹೇಳಿಕೆ ಕಾಗತ ಇಲ್ಲಿದ್ದು:
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಹರೇ ರಾಮ..!
ವಿಶಯ ತಿಳಿಸಿದ್ದಕ್ಕೆ ಧನ್ಯವಾದಂಗೋ………….
ಹರೇರಾಮ ಇ-ಮಠದ ಮುಖಾಂತರ ನಮ್ಮ ಗುರುಗೊ ಅದ್ಭುತವನ್ನೇ ಸಾಧ್ಸಿದ್ದವು ಹೇಳಿರೆ ತಪ್ಪಿಲ್ಲೆ.. ಸಂವಾದ ಕಾರ್ಯಕ್ರಮ ಶ್ರೀಗಳ ಕಾರ್ಯಶೀಲತೆ, ಕ್ಷಮತೆಗೆ ಹಿಡುದ ಕನ್ನಡಿ.. ಎನಗೆ ಈ ಅವಕಾಶವ ಉಪ್ಯೋಗ್ಸಿಗೊಂಬ ಭಾಗ್ಯ ಸಿಕ್ಕದ್ದೇ ಇದ್ದರೂ ಕಾರ್ಯಕ್ರಮದ ವಿವರವಾದ ಶುದ್ದಿಯ ನಮ್ಮ ಬೈಲಿಲಿ ನಿರೀಕ್ಷುಸುತ್ತಾ ಇದ್ದೆ..
ಸಂವಾದ ಸುಂದರವಾಗಿ ನೇರವೇರಲ್ಲಿ ಹೇಳಿ ಆಶಯ!
ಹರೇರಾಮ!
ಹರೇ ರಾಮ ಗುರಿಕ್ಕಾರ್ರೆ.
ತುಂಬಾ ಒಳ್ಳೆ ಶುದ್ದಿ ಹೇಳಿದಿ ನಿಂಗೊ. ಧನ್ಯವಾದಂಗೋ.
ಶ್ರೀ ಸಂಸ್ಥಾನ, ಪೀಠದ ಎಲ್ಲಾ ಶಿಷ್ಯರಿಂಗುದೇ ಅವರ ಅಮೃತವಾಣಿ ತಲುಪುವ ಹಾಂಗೆ ಎಲ್ಲಾ ವಿಧಲ್ಲಿ ನಮ್ಮ ಉದ್ಧಾರ ಅಪ್ಪ ಹಾಂಗೆ ದಾರಿ ತೋರ್ಸುತ್ತಾ ಇದ್ದವು. ಅವು ಹಾಕಿ ಕೊಟ್ಟ ರೀತಿ ನೀತಿಲಿ ನಡದರೆ ನವಗೆ ನಮ್ಮ ಜೀವನ ಮುಕ್ತಿಯ ಪಡವಲೆ ಕಷ್ಟ ಇಲ್ಲೆ ಅಲ್ಲದಾ?
ನಾಳ್ದು ನಡವ ಕಾರ್ಯಕ್ರಮ ಒಳ್ಳೆದಾಗಲಿ. ಹರೇರಾಮದ ನಿಜಭಕ್ತರ ಎಲ್ಲಾ ವಿಧ ಪ್ರಶ್ನೆಗ, ಸಮಸ್ಯೆಗ ಪರಿಹಾರ ಆಗಲಿ. ಎಲ್ಲೊರಿಂಗೂ ಶ್ರೀ ಗುರುಗಳ, ಶ್ರೀ ಗುರು ಕರಾರ್ಚಿತ ದೇವರುಗಳ ಆಶೀರ್ವಾದ ಸಿಕ್ಕಲಿ.
ಹರೇರಾಮ.