Oppanna.com

ರಾಜಿ

ಬರದೋರು :   ಗೋಪಾಲಣ್ಣ    on   29/05/2011    12 ಒಪ್ಪಂಗೊ

ಗೋಪಾಲಣ್ಣ

ಶಾಮಣ್ಣ ಕಚೇರಿಂದ ಯಾವುದೋ ಸಭೆಗೆ ಹೋಗಿ ಬಪ್ಪಾಗ ಹೊತ್ತು ನೆತ್ತಿ ಮೇಲಿತ್ತು.ಅವನ ಕೋಣೆಲಿ ಒಂದು ಕಟ್ಟ ಸಿಹಿತಿಂಡಿ ಇತ್ತು.ಇದಾರಪ್ಪ ಇಲ್ಲಿ ಮಡುಗಿದ್ದು ಹೇಳಿ ಆಶ್ಚರ್ಯ ಆತು ಅವಂಗೆ.ಕರೆಗಂಟೆ ಬಾರಿಸಿದ-ಪ್ಯೂನ್ ಬಂತು.”ಹರೀಶ್,ಇದು ಏನು?”ಹೇಳಿ ಕೇಳಿದ.

“ಸಾರ್,ಯಾರೋ ಹುಡುಗ -ನಿಮ್ಮ ತಂಗಿಯ ಮಗ ಅಂತೆ;ನಾನು ಪಾಸ್ ಆದದ್ದಕ್ಕೆ ಅಂಕಲ್ ಗೆ ಸಿಹಿ ಕೊಡ್ಬೇಕು-ಅಂತ ಇಟ್ಟು ಹೋದರು”-ಪ್ಯೂನ್ ವಿಧೇಯತೆಲಿ ಹೇಳಿತ್ತು.

ಶಾಮಣ್ಣಂಗೆ ಸಂತೋಷ ಆತು.ಪ್ಯೂನಿನ ಕಳಿಸಿದ.

ಶಾಮಣ್ಣ ಕೆಲಸಲ್ಲಿ ಮುಳುಗಿಹೋದ. ಅವ ಜಿಲ್ಲಾಧಿಕಾರಿ ಕಚೇರಿಲಿ  ದೊಡ್ಡ ಅಧಿಕಾರಿ.ಅವನ ತಂಗೆ ಬೆಂಗಳೂರಿಲಿ ಇಪ್ಪದು.ಅದರ ಮಗ ಹತ್ತನೇ ತರಗತಿ.ಆ ಮಾಣಿಯ ಫಲಿತಾಂಶ ಎಂತಾತು ಹೇಳಿ ಅವಂಗೆ ಗೊಂತಿಲ್ಲೆ.ತಂಗೆಗೂ ಅವಂಗೂ ಮಾತು ಇದ್ದು,ಆದರೆ ಅವಂಗೆ ಈ ಸಂಬಂಧಲ್ಲಿ ಹೆಚ್ಚು ಆಸ್ಥೆ ಇಲ್ಲೆ.ಅವ ಆತು,ಅವನ ಕಚೇರಿ ಆತು,ಅವನ ಹೆಂಡತಿ ಆತು,ಮಕ್ಕೊ ಆತು-ಇಷ್ಟೇ ಅವನ ಪ್ರಪಂಚ.ತಂಗೆ ಎಂತ ಮಾಡುತ್ತು,ಭಾವ ಹೇಂಗಿದ್ದ,ಅವನ ಮಕ್ಕೊ ಎಂತ ಕಲಿತ್ತವು-ಯಾವುದನ್ನೂ ತಿಳಿವ ಆಸಕ್ತಿ ಅವಂಗಿಲ್ಲೆ.ವರ್ಷಕ್ಕೊಂದಾರಿ ಅವು ಬಂದು ಹೋವ್ತವು-ಆವಾಗ ಅವನ ಹೆಂಡತ್ತಿ ಒಂದು ಪಾಯಸ ಮಾಡುತ್ತು.ಇವೂ ಹಾಂಗೆ-ಯಾವಾಗಲಾದರೂ ಬೆಂಗಳೂರಿಂಗೆ ಹೋದರೆ ಒಂದಾರಿ ತಂಗೆ ಮನೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಬಪ್ಪದು-ಅಷ್ಟೆ!ನಾಲ್ಕು ತಿಂಗಳಿಂಗೆ  ಒಂದಾರಿ ದೂರವಾಣಿಲಿ ಮಾತಾಡಿರೆ ಹೆಚ್ಚು.

ಈಗ ಈ ಮಾಣಿ ಲಾಡು ತಯಿಂದ.

ಇವ ಯಾವಾಗ ಊರಿಂಗೆ ಬಂದದು?ಮನೆಗೆ ಏಕೆ ಬಯಿಂದಾ ಇಲ್ಲೆ?ಅವನ ದೊಡ್ಡಪ್ಪ ಪುತ್ತೂರಿಲಿದ್ದವು-ಅಲ್ಲಿಗೆ ಹೋಯಿದನೊ ಎಂತ?ತಂಗೆಯೂ ಬೈಂದೊ-ಹೇಳಿ ಅವ ಯೋಚನೆ ಮಾಡಿದ.

ಹೊತ್ತೋಪಗ ಮನೆಗೆ ಹೋಪಾಗ ಕಟ್ಟ ತೆಕ್ಕೊಂಡು ಹೋದ-ಹೆಂಡತ್ತಿ,ಮಕ್ಕೊ ಎಲ್ಲಾ ಹಂಚಿ ತಿಂದವು.ಇವನೂ ಎರಡು ಲಾಡು ತಿಂದ.

ಟಿ ವಿ ನೋಡುದು,ಮೀಯಾಣ,ಊಟ ಎಲ್ಲಾ ಆತು.

ತಂಗೆಗೆ ಮೊಬೈಲಿಲಿ ಮಾತಾಡಿ ಒಂದು ಧನ್ಯವಾದ ಹೇಳುತ್ತೆ-ಹೇಳಿ ,ಮಾಡಿದ.

“ಸುನಿತಾ,ಹೇಂಗಿದ್ದೆ?ನೀನು ಕಳಿಸಿದ ಲಾಡು ಸಿಕ್ಕಿತ್ತು.ಎಲ್ಲಿದ್ದೆ ನೀನು?ಎಷ್ಟು ಮಾರ್ಕು ಕುಮಾರಂಗೆ?”

“ಅಣ್ಣ,ಆನು ಮನೆಲೇ ಇದ್ದೆ-ಎಂತ ಹೇಳುದು ನೀನು?೧೦ನೇ ಕ್ಲಾಸಿನ ಫಲಿತಾಂಶ ಬಪ್ಪದು ನಾಡಿದ್ದು ಮಂಗಳವಾರ.ಆನು ಎಲ್ಲಿ ಲಾಡು ಕಳಿಸಿದ್ದೆ?”

“ಅಪ್ಪೊ!ಇಂದು ಆನು ಇಲ್ಲದಿಪ್ಪಾಗ ಎನ್ನ ತಂಗೆಯ ಮಗ ಹೇಳಿಯೊಂಡು ಒಬ್ಬ ಮಾಣಿ ಲಾಡು ಕೊಟ್ಟು ಹೋದ ಅನ್ನೆ?”

“ಚೊಕ್ಕ ಆತು-ಲಾಡು ತಿಂದಾತೊ?”

“ಆತು…..”

“ಇದೊಳ್ಳೆ ವಿಚಿತ್ರ ಆತು.ಕುಮಾರಂಗೆ ಫಲಿತಾಂಶವೇ ಬೈಂದಿಲ್ಲೆ-ನಿನಗೆ ಲಾಡು ಆರು ಕೊಟ್ಟದಪ್ಪ?”

“ಎನಗೂ ಗೊಂತಾವ್ತಿಲ್ಲೆ.ಎನಗೆ ಇಪ್ಪದು ನೀನು ಒಂದೇ ತಂಗೆ!”

“ದೊಡ್ಡಣ್ಣನ ಮಗ,ಕುಮಾರನ ಪ್ರಾಯದವನೇ.ಅವನ ಫಲಿತಾಂಶ ಇಂದು ಬಂತೊ ಏನೊ?”-ಇಷ್ಟು ಹೇಳಿ ಸುನಿತಾ ನಾಲಗೆ ಕಚ್ಚಿಯೊಂಡತ್ತು.ಶಾಮಣ್ಣಂಗೂ ದೊಡ್ಡಣ್ಣಂಗೂ ಸರಿ ಇಲ್ಲೆ.

“ಸರಿ, ಸರಿ..ಆ ವಿಷಯ ಬಿಡು”ಹೇಳಿ ಕರೆಯ ನಿಲ್ಲಿಸಿದ ಶಾಮಣ್ಣ.

*************

ಶಾಮಣ್ಣನ ಊರು ಪೈವಳಿಕೆ ಹತ್ತರೆ-ಅವಂಗೆ ಒಬ್ಬ ಅಣ್ಣ-ಸುಬ್ಬಣ್ಣ.ಹಿರಿಯರಿಂದ ಬಂದ ತೋಟ ನೋಡಿಕೊಂಡಿತ್ತಿದ್ದ.ತಂಗೆ ಸುನಿತನ ಮದುವೆ ಆಗಿ ಅದು ಬೆಂಗಳೂರಿಲಿ ಇದ್ದು.

ಶಾಮಣ್ಣನ ಪಾಲಿನ ಆಸ್ತಿಯನ್ನೂ ಸುಬ್ಬಣ್ಣ ನೋಡಿಕೊಂಡಿತ್ತಿದ್ದ.ಅವನ ಮನೆಗೆ ಶಾಮಣ್ಣ  ಅಂಬಗಂಬಗ ಹೋಗಿಕೊಂಡಿತ್ತಿದ್ದ.ಸುಬ್ಬಣ್ಣನ ಮಗ ಗಿರೀಶಂಗೆ ಅಪ್ಪಚ್ಚಿ ಹೇಳಿದರೆ ಆತು.ಅವನ ಹತ್ತರೆ ಶಾಮಣ್ಣ “ನೀನು ಕಲ್ತು ಉಶಾರಾಗಿ ಡಾಕ್ಟರಾಯೆಕ್ಕು,ನಮ್ಮ ಪೈಕಿ ಆರೂ ಆ ಕೆಲಸಲ್ಲಿ ಇಲ್ಲೆ ಮಾಣಿ”ಹೇಳಿಕೊಂಡಿತ್ತಿದ್ದ.ಐದಾರು ವರ್ಷದ ಮಾಣಿ-“ಹೋ,ಅಕ್ಕು,ಅಕ್ಕು” ಹೇಳಿ ಕೊಣಿಕ್ಕೊಂಡಿತ್ತಿದ್ದ.

ಅಷ್ಟಪ್ಪಗ  ಶಾಮಣ್ಣಂಗೆ ಮಂಗಳೂರಿಲಿ ಮನೆ ಕಟ್ಟುಸುವ ಕೆಲಸ ಸುರು ಆತು.

ಪೈಸೆ ಬೇಕನ್ನೆ?ಅಪ್ಪನ ಆಸ್ತಿಯನ್ನೇ ಮಾರುಲೆ ಹೆರಟ.

ಸುಬ್ಬಣ್ಣ ಹೇಳಿದ-“ಶಾಮ,ಗುಡ್ಡೆ ಜಾಗೆ ನೀನು ಆರಿಂಗೆ ಬೇಕಾರೂ ಕೊಡು-ತೋಟ,ಕರೆಕಾಡು ಸೇರಿ ಮೂರು ಎಕ್ರೆ ಇದ್ದನ್ನೆ-ಎನ್ನ ಜಾಗೆಗೆ ಒತ್ತಡಪ್ಪು ಇದ್ದು. ನೀನು ರಜಾ ಪೈಸೆ ನಿಲ್ಲಿಸು.ಆನು ನಾಕು ವರ್ಷಲ್ಲಿ ಕೊಟ್ಟು ಪೂರಯಿಸುವೆ”

ಶಾಮಣ್ಣಂಗೆ ಮನಸ್ಸು ಬಯಿಂದಿಲ್ಲೆ.ಹುಂ..ಹುಮ್…..ಹೇಳಿ ಜಾಗೆ ಕಾಲಿ ಮಾಡಿದ.

ಮತ್ತೊಂದರಿ ಕೇಳುವಾಗ-“ಎನಗೆ ನಿಲ್ಲಿಸಲೆ ಎಡಿಯ.ನೀನು ಬೇಕಾರೆ ಸಾಲ ಮಾಡು,ಪೈಸೆ ಕೊಡು.ಎನಗೆ ಮನೆ ಕೆಲಸ ಆವುತ್ತಾ ಇದ್ದು ಹೇಳಿ ನಿನಗೆ ಗೊಂತಿಲ್ಲೆಯೊ?” ಹೇಳಿ ಹೇಳಿದ ಶಾಮಣ್ಣ.

ಹತ್ತರಾಣ ಮನೆಯವರ ಹತ್ತರೆ-“ಅಣ್ಣಂಗೆ ಕೊಡುಲಾಗ ಹೇಳಿ ಎನಗೆ ಇಲ್ಲೆ.ಅವ ಸರೀ ಪೈಸೆ ಕೊಡ.ಅದೂ-ಇದೂ ಹೇಳುಗು.ಕ್ರಯವೂ ಹೇಳುತ್ತದು ಹೇಂಗೆ?ಮಮ್ಮದೆ ಆದರೆ ನಗದು ಕೊಡುತ್ತು.ಎಕ್ರೆಗೆ ಎರಡು ಲಕ್ಷ ಹೇಳಿದ್ದು…ಅದರ ಹತ್ತರೆ ದುಬಾಯಿ ಪೈಸೆ ಇದ್ದು,ಮಗ ಕಳಿಸಿದ್ದು…..” ಹೀಂಗೆಲ್ಲ ಹೇಳಿದ.

ಅದೆಲ್ಲ ಉಪ್ಪು ಕಾರ ಸೇರಿಸಿ ಸುಬ್ಬಣ್ಣಂಗೆ ವರದಿ ಆತು.

ಸುಬ್ಬಣ್ಣ ಮತ್ತೊಂದಾರಿ ಬಂದ ತಮ್ಮನ ಬೈದ.”ಅಪ್ಪ ಮಾಡಿದ ತೋಟವ ಆರಾರಿಂಗೊ ಕೊಡುತ್ತೆ ಅನ್ನೆ? ನಿನಗೆ ಕಲಿಶಿದ್ದಕ್ಕೆ ನೀನು ಹೀಂಗೆ ಮಾಡುದೊ? ಇನ್ನು ನೀನು ಎನ್ನ ಮನೆಯ ಮೆಟ್ಟು ಕಲ್ಲು ಹತ್ತೆಡ…”ಹೇಳಿ ಹೇಳಿದ.

ಶಾಮಣ್ಣಂಗೂ ಕೋಪ ಬಂತು.”ಆನು ಬತ್ತಿಲ್ಲೆ..” ಹೇಳಿ ನಡೆದ.

ಅಂತೂ ಶಾಮಣ್ಣನ ತೋಟ  ವಿಕ್ರಯ ಆಗಿ,ಮಮ್ಮದೆಯ ಸ್ವಾಧೀನ ಆತು.ಅದರ ಆಡುಗೊ ಸುಬ್ಬಣ್ಣನ ತೋಟಕ್ಕೆ ನುಗ್ಗಲೆ ಸುರು ಆತು.

ಸುಬ್ಬಣ್ಣಂಗೆ ಇರುಳೂ ಹಗಲೂ ತಮ್ಮನ ಬೈವದೇ ಕೆಲಸ.ಆದರೆ ಕೇಳುಲೆ ಅವ ಇಲ್ಲೆ.ಆದರೆ ಹೇಳುವವು ಇದ್ದವನ್ನೆ?ಶಾಮಣ್ಣಂಗೆ ಎಲ್ಲಾ ಗೊಂತಾಗಿಕೊಂಡು ಇತ್ತು.ವಿರೋಧ ಬೆಳದತ್ತು.

ಶಾಮಣ್ಣನ ಮನೆ ಒಕ್ಕಲಿಂಗೆ  ಅವನ ಒಡಹುಟ್ಟಿದ ಅಣ್ಣಂಗೆ ಹೇಳಿಕೆ ಇತ್ತಿಲ್ಲೆ.ಅಬ್ಬೆ,ಅಪ್ಪನ ತಿಥಿಯ ಸುಬ್ಬಣ್ಣ ಮಾಡುತ್ತ-ಶಾಮಣ್ಣ ಬಂದು ಸೇರುಲೆ ಇಲ್ಲೆ!

ಈಗ ಗಿರೀಶ ಮಾಣಿ ಪಾಸಾದ್ದಕ್ಕೆ ಶಾಮಣ್ಣಂಗೆ ಚೀಪೆ  ತಿನ್ನಿಸಲಿದ್ದೊ?

ಶಾಮಣ್ಣ ಮನಸ್ಸಿಲೇ ನೆಗೆ ಮಾಡಿದ.

ಎರಡು ದಿನ ಕಳೆದ ಮೇಲೆ ಶಾಮಣ್ಣಂಗೆ ಕಚೇರಿಗೆ ಒಂದು ಕಾಗದ ಬಂತು-

‘ತೀ.ಸ.ಅಪ್ಪಚ್ಚಿಗೆ ಗಿರೀಶ ಮಾಡುವ ಪ್ರಣಾಮಂಗೊ.

ಇಲ್ಲಿ ಎಲ್ಲಾ ಕ್ಷೇಮ.ಅಪ್ಪನೂ ನಿಂಗಳ ವಿಷಯ ಹೇಳುತ್ತಾ ಇರುತ್ತವು.ನಿಂಗೊ ಎಂತ ಮಾಡುತ್ತೀ?

ಆನು ಮೊನ್ನೆ ಎಸ್.ಎಸ್.ಎಲ್.ಸಿ.ಪರೀಕ್ಷೆಲಿ ತೊಂಬತ್ತೆಂಟು ಶೇಕಡಾ ಮಾರ್ಕು ಗಳಿಸಿ ಪಾಸಾಯಿದೆ.ನಿಂಗೊ ಆನು ಸಣ್ಣ ಇಪ್ಪಾಗ ಆಶೀರ್ವಾದ ಮಾಡಿದ ಹಾಂಗೆ,ಡಾಕ್ಟರ್ ಅಪ್ಪಲೆ ಪ್ರಯತ್ನ ಮಾಡುತ್ತೆ.ಹಾಂಗೆ ಕಾಲೇಜಿಂಗೆ ಬಂದವ ನಿಂಗಳ ಕಚೇರಿಗೆ ಬಂದೆ.ಎಲ್ಲಾ ಮಾತಾಡೆಕ್ಕು ಹೇಳಿ ಗ್ರೇಶಿದೆ.ಆದರೆ ನಿಂಗೊ ಮೀಟಿಂಗಿಲಿ ಇತ್ತಿದ್ದಿರಿ.

ಲಾಡಿನ ನಿಂಗಳ ಮೇಜಿಲಿ ಮಡುಗಿದ್ದೆ.ಆನು ಮಡುಗಿದ್ದು ಹೇಳಿ ಗೊಂತಾದರೆ ನಿಂಗೊ ಪಕ್ಕ ಕೋಪಲ್ಲಿ ಇಡುಕ್ಕುವಿರಿ ಹೇಳಿ ಆನು ನಿಂಗಳ ತಂಗೆಯ ಮಗ ಹೇಳಿ ಹೇಳಿದೆ.

ಫೋನಿಲಿ ಎಲ್ಲಾ ವಿಷಯ ಹೇಳಲೆ ಎನಗೆ ಸಮ ಆಗ.ಆನು ನಿಂಗಳ ಸದ್ಯ ಕಂಡಿದೇ ಇಲ್ಲೆ,ಅಲ್ಲದೊ?ಹಾಂಗಾಗಿ ಕಾಗದ ಬರೆತ್ತಾ ಇದ್ದೆ.

ಈಗ ಅಪ್ಪ ನಿಂಗಳ ಬೈತ್ತವಿಲ್ಲೆ.ಮಮ್ಮದೆಯ ಕೈಂದ ತೋಟ ಎಂಗಳೇ ಮಾಡಿಕೊಂಡಿದೆಯೊ.ರಜಾ ಹಾಳಾದ ಕಾರಣ ಚೂರು ಕಮ್ಮಿಗೆ ಕೊಟ್ಟತ್ತು.

ಎನಗೆ ಶುಭ ಆಗಲಿ ಹೇಳಿ ಆಶೀರ್ವಾದ ಮಾಡಿ,ಹೇಳಿ ಕೇಳಿಕೋಳ್ತೆ.

ಇತಿ ಪ್ರಣಾಮಂಗೊ,

ಗಿರೀಶ.’

ಕಾಗದ ಓದಿ ಶಾಮಣ್ಣನ ಕಣ್ಣಿಂದ ನೀರು ಹರಿದತ್ತು.

“ಎಷ್ಟಾದರೂ ಎನ್ನ ಅಣ್ಣನ ಮಗ ಇವ” ಹೇಳಿ ಮನಸ್ಸು ಅಭಿಮಾನಲ್ಲಿ ಉಬ್ಬಿತ್ತು.

ಮತ್ತಾಣ ಆದಿತ್ಯವಾರ ಶಾಮಣ್ಣ ತನ್ನ ಅಣ್ಣನ ಮನೆಗೆ ಹೋಗಿ,ಅಣ್ಣನ ಕಾಲು ಹಿಡಿದ.

ಮಾಣಿಂದಾಗಿ ದೊಡ್ಡವರೂ ರಾಜಿ ಆದವು.

12 thoughts on “ರಾಜಿ

  1. ಗೋಪಾಲಣ್ಣ,
    ಕಥೆಯ ಓದಿ ಕಣ್ಣಿಲಿ ನೀರು ಬ೦ತು.ಆ ಮಾಣಿಯ ಮೆಚ್ಚೆಕ್ಕು.ಕಡುದ ಸ೦ಬ೦ಧ೦ಗಳ ಒ೦ದು ಮಾಡುಲೆ ಗಿರೀಶ ಮಾಡಿದ ಪ್ರಯತ್ನ ನವಗೆಲ್ಲ ಮಾದರಿ.

  2. ಒಳ್ಲೆಯ ನೀತಿ ಯೆಲ್ಲೊರಿ೦ಗೂ..

  3. ಗೋಪಾಲಣ್ಣಾ,
    ದೊಡ್ಡವರ ಜಗಳ ಮಕ್ಕಳಿಂದಲಾಗಿ ಸರಿಯಪ್ಪದೂ ಇದ್ದು. ಇನ್ನು ಕೆಲವು ದಿಕ್ಕೆ ಮಕ್ಕಳಿಂದಲಾಗಿಯೇ ದೊಡ್ಡವಕ್ಕೆ ಜಗಳ ಬಪ್ಪದೂ ಇದ್ದು. ಇಲ್ಲಿ ಗಿರೀಶನಿಂದಾಗಿ ದೊಡ್ಡವರ ಜಗಳ ಸರಿಯಾದ್ದದು, ಕತೆಯ ಅಕೇರಿಗೆ ಪರಿಣಾಮ ತೋರುಸುತ್ತು. ಬೈಲಿನ ನಿತ್ಯಜೀವನವ ಶುದ್ದಿಯನ್ನೇ ಕತೆಯಾಗಿ ಬರದ್ದಿ.

  4. ರಾಜಿ ಆದ ಅಣ್ಣ ತಮ್ಮಂದರ ಕತೆ ಕೇಳಿ ಕೊಶಿ ಆತು. ಘಟನೆ, ನೈಜತೆಗೆ ತುಂಬಾ ಹತ್ರೆ ಇದ್ದು. ಶಾಮಣ್ಣನ ಕಣ್ಣಿಂದ ಹರುದ ಹಾಂಗೆ, ಓದುಗನ ಕಣ್ಣಿಂದಲೂ ನೀರು ಹರುಸಿದ ಕಥೆ. ಕಾಲ ಎಲ್ಲವನ್ನೂ ಮರೆಸುತ್ತು ಹೇಳ್ತದುದೆ ಇಲ್ಲಿ ಕಂಡು ಬತ್ತು.

  5. ಗೋಪಾಲಣ್ಣ ಭಾರೀ ಲಾಯಿಕ ಆಯ್ದು ಕಥೆ………………… ನಾವು ಅಂದುಗೊಂಡ ಹಾಂಗೆ ದಿನಂಗೊ ಇರುತ್ತಿಲ್ಲೆ ಅಲ್ಲದಾ…… ಎಲ್ಲೋರ ಒಟ್ಟಿಂಗೆ ಇದ್ದರೆ ಎಷ್ತೊೞೆದು……………………..

  6. ಲಾಯ್ಕಾಯಿದು ಕಥೆ. ಎಲ್ಲಾ ಕಡೆ ಹೀ೦ಗೆ ಅಪ್ಪದಿದಾ !!! ಸಣ್ಣ ವಿಶಯಕ್ಕೆ ಜಗಳ ಅಪ್ಪದು …ಎರಡೂ ಕಡೆಯವು ರಾಜಿ ಅಪ್ಲಲೆ ತಯಾರಿಲ್ಲೆ!!! ಇನ್ನು ಅದಕ್ಕೆ ಊರಿನ ಫಿಟ್ಟ್೦ಗ್ ಮಾಸ್ಟರ್ ಗೊ ಸೇರಿದರೆ ಮುಗಾತು ಕಥೆ !!!!! ಗಿರೀಶನ ಹಾ೦ಗಿಪ್ಪವು ಪ್ರತಿ ಮನೆಲಿ ಒಬ್ಬ ಇದ್ದರೆ ಸಾಕು ಉದ್ದಾರ ಅಕ್ಕು ಮನೆ ,ಇಲ್ಲದ್ರೆ ದೇವರೇ ಗತಿ!
    ಅಕೇರಿ೦ಗೆ ಸುಂದರ ನಿರೂಪಣೆಲಿ ಮನಮುಟ್ಟುವ ಕಥೆ ಕೊಟ್ಟದಕ್ಕೆ ಧನ್ಯವಾದಂಗೋ.

  7. ಲಾಯ್ಕಾಯಿದು ಕಥೆ. ಎಲ್ಲಾ ಕಡೆ ಹೀ೦ಗೆ ಅಪ್ಪದಿದಾ !!! ಸಣ್ಣ ವಿಶಯಕ್ಕೆ ಜಗಳ ಅಪ್ಪದು …ಎರಡೂ ಕಡೆಯವು ರಾಜಿ ಅಪ್ಲಲೆ ತಯಾರಿಲ್ಲೆ!!! ಇನ್ನು ಅದಕ್ಕೆ ಊರಿನ ಫಿಟ್ಟ್೦ಗ್ ಮಾಸ್ಟರ್ ಗೊ ಸೇರಿದರೆ ಮುಗಾತು ಕಥೆ !!!!! ಗಿರೀಶನ ಹಾ೦ಗಿಪ್ಪವು ಪ್ರತಿ ಮನೆಲಿ ಒಬ್ಬ ಇದ್ದರೆ ಸಾಕು ಉದ್ದಾರ ಅಕ್ಕು ಮನೆ ,ಇಲ್ಲದ್ರೆ ದೇವರೇ ಗತಿ!

    ಅಕೇರಿ೦ಗೆ ಸುಂದರ ನಿರೂಪಣೆಲಿ ಮನಮುಟ್ಟುವ ಕಥೆ ಕೊಟ್ಟದಕ್ಕೆ ಧನ್ಯವಾದಂಗೋ.

  8. ಗೋಪಾಲಣ್ಣ! ಮನಮುಟ್ಟಿದ ಕಥೆ.. ಎನ್ನ ಮನೆ-ಸುತ್ತ-ಮುತ್ತ ನಡೆತ್ತ ಕಥೆಯ ಹಾಂಗೇ ಇದ್ದು.. ಪಾತ್ರಂಗೋ, ಹೆಸರುಗೋ ಬೇರೆ ಅಷ್ಟೆ.. ಸುರೂವಣ ಹಂತಲ್ಲಿದ್ದು, ಆದರೆ ಅಂತ್ಯ ಹೆಂಗಾವುತ್ತು ಹೇಳುದರ ಕಾಲವೇ ಹೇಳೆಕ್ಕಷ್ಟೆ.. ತನ್ನ ನೆತ್ತರು ಹಂಚಿಗೊಂಡು ಹುಟ್ಟಿದ ಒಡಹುಟ್ಟಿದವರ ಹತ್ತರೆಯೇ ಮನುಷ್ಯಂಗೆ ಪೈಸದ ಲೆಕ್ಕಾಚಾರ ನೆಂಪಪ್ಪದು ವಿಪರ್ಯಾಸ. ಮಮ್ಮದೆ ಮೂರು ಕಾಸಿಂಗೆ ತೆಕ್ಕೊಂಡ್ರೂ ಅಕ್ಕು, ನಗದು ಬರೆಕ್ಕಾದ್ದು ಮುಖ್ಯ! ಇಂದು ಕೃಷಿಕ ಕಷ್ಟಪಡ್ತಾ ಇದ್ದ ಹೇಳಿರೆ ಅದಕ್ಕಿಪ್ಪ ಹತ್ತು ಹಲವು ಕಾರಣಂಗಳಲ್ಲಿ- ಕೃಷಿಯಲ್ಲದ್ದೆ ಬೇರೆ ಆದಾಯ ಇದ್ದರೂ, ಒಡಹುಟ್ಟಿದವಂಗೆ ಹೆಗಲು ಕೊಡುವ ಸಾಮರ್ಥಿಕೆ ಇದ್ದರೂ ಸಹಾಯ ಮಾಡ್ತ ಮನಸ್ಸಿಲ್ಲದ್ದೆ ಮತ್ತಷ್ಟು ರಕ್ತ ಹೀರುವ ಮನಸ್ಥಿತಿಂಯೂ ಒಂದು ಹೇಳುದು ಕಟುಸತ್ಯ. ನಾವು ಎಲ್ಲೇ ಇರಳಿ, ಎಷ್ಟೇ ದುಡಿಯಲ್ಲಿ, ಅನ್ನ ಕೊಡುದು ಕೃಷಿಯೇ, ನೆಮ್ಮದಿ-ಆರೋಗ್ಯ ಕೊಡುದೂ ಕೃಷಿಯೇ ಅಲ್ಲದಾ..
    ಒಟ್ಟಿಲಿ ಸುಂದರ ನಿರೂಪಣೆಲಿ ಮನಮುಟ್ಟುವ ಕಥೆ ಕೊಟ್ಟದಕ್ಕೆ ಧನ್ಯವಾದಂಗೋ.. ಹರೇರಾಮ!

  9. {ಕಾಗದ ಓದಿ ಶಾಮಣ್ಣನ ಕಣ್ಣಿಂದ ನೀರು ಹರಿದತ್ತು.}…
    ಕತೆ ಓದಿ ಆರಿಂಗಾದರೂ ಕಣ್ಣು ಪಸೆ ಅಕ್ಕು. ಲಾಯಿಕ್ಕಾಯಿದು…

  10. ಉದ್ಯೋಗಿಗಳ ಕುಟುಂಬ ಸಂಬಂದ ಈ ಕಾಲಲ್ಲ್ಲಿ ಹೇಂಗಿರ್ತು ಹೇಳಿ ಒಳ್ಳೆ ವಿಡಂಬನೆ. ಕೊಂಡೋದ ಶೈಲಿ (ನಿರೂಪಣೆ) ಲಾಯಕ ಆಯ್ದು. ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×