Oppanna.com

ನೆಗೆ ಸುಪ್ರಭಾತ: ಇವು ಬೈಲಿನ ಶುದ್ದಿಲಿ ರೈಸುಗಿದಾ..

ಬರದೋರು :   ನೆಗೆಗಾರ°    on   12/06/2011    64 ಒಪ್ಪಂಗೊ

ನೆಗೆಗಾರ°

ಭಾವಯಾಮಿ ರಘುರಾಮಂ – ಹೇಳಿ ಜೋರು ಪದ್ಯ ಕೇಳಿಗೊಂಡಿತ್ತು, ಮೊನ್ನೆ ಬೈಲಿನ ಕಟ್ಟಪುಣಿಲಿ ನೆಡಕ್ಕೊಂಡೋಪಗ.
ಉದಿಉದಿಯಪ್ಪಗ ಆರಪ್ಪ ಈ ಅಜ್ಜಿಕೆಸೆಟ್ಟು ಹಾಕಿದ ಹೇಳಿ ನೋಡಿರೆ – ಮುಳಿಯಭಾವನ ಮನೆಂದ!
ಅವು ನಿನ್ನೆ ಒಂದು ಭಾಮಿನಿ ಮದುವೆ ಗವುಜಿಯ (ಭೋಜನಕಾಲೇ – 02) ಮುಗುಶಿ, ಬೌಶ್ಷ ನಿದಾನಕ್ಕೆ ಎದ್ದದಾಯಿಕ್ಕು ಗ್ರೇಶಿಗೊಂಡೆ.
ಅವರ ಬಾಮಿನಿ ಚೆಂದ ಇದ್ದು ಹೇಳಿ ಎಲ್ಲೋರಿಂಗೂ ಕೊಶಿ ಆಯಿದು. “ನೆತ್ತರಿಲೇ ಬಂದದಾಯಿಕ್ಕು” – ಹೇಳಿ ಕೇಜಿಮಾವ
° ರಕ್ತಪರೀಕ್ಷೆ ಮಾಡಿ ಧೃಡಮಾಡಿಗೊಂಡವು! 😉

ಅಜ್ಜಿಹೇಳಿದ ಸುಪ್ರಭಾತ ಹೇಳುಲೆ ಎನಗೆ ನಾಲಗೆ ತೆರಚ್ಚುತ್ತಿಲ್ಲೆ. ಎನ್ನದೇ ಒಂದು ಬರದರೆಂತ?
ವಿಶಯ ಎಂತದೂ ಸಿಕ್ಕದ್ದರೆ ಬೈಲಿನೋರ ಬಗ್ಗೆಯೇ ಬರದರಾತು. ಹಾಂಗೆ ಸುರುಮಾಡಿಯೇ ಬಿಟ್ಟೆ.

ನೋಡಿ, ಲಾಯಿಕಾಯಿದು ಹೇಳಿಕ್ಕಿ, ಆತೋ?
(ಇದಾ, ರಾಗಬರುಸುಲೆ ಕೆಲವು ಜೆನರ ಹೆಸರು ರಜ್ಜೆ ವಿತ್ಯಾಸ ಆಯಿಕ್ಕು, ಆದರೆ ಆರ ಹೇಳ್ತದು ಹೇಳಿ ಗುರ್ತ ಗೊಂತಾವುತ್ತು. ಅಷ್ಟು ಸಾಕು ನವಗೆ, ಅಲ್ಲದೋ, ಹಿ ಹಿ!)

ಬೈಲ ಸುಪ್ರಭಾತ:
(ರಾಗ: ಕಮಲಾಕುಚ ಚೂಚುಕ..)

ಮನೆದೇವರ ನೆಂಪಿನ ಮಾಡಿದರೇ
ಸುಬಗಣ್ಣನ ಮೈ ಬೆಶಿ ಏರುಗಿದಾ |
ದಿನನಿತ್ಯವು ದೇವರ ಮಂಕಡುಸೀ
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ನೆಗೆನೆಗೆ ಸೂರ್ಯ ಸುಪ್ರಭಾತ ಕೇಳಿದ°

ರಘುಭಾವನ ಕಾಕತ ಓದಿದವೂ
ಹಳೆ ಹೋಷ್ಟೆಲು ವಾರ್ಡನು ಕೋಲೆಜಿಲೀ |
ಶಿವನೇ ಗ್ರಹಚಾರವ ಬೈದರುದೇ
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಬೊಚಬಾವನ ಚೆಂದಕೆ ಮೀಶಿದರೇ
ಕರಿನೀರಿಡಿ ಸಾರಡಿ ತೋಡಿಲಿಯೇ |
ಮದಿಮಾಯನೆ ಅಕ್ಕಿದ ಬಾವನುದೇ
ಇವ° ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಬೆಶಿಬೇಸಗೆ ಆಸರ ನಿಲ್ಲುಸಲೇ
ಚೆನೆಭಾವನ ಬೊಂಡದ ಅಂಗುಡಿಯೂ |
ದಿನನಿತ್ಯವು ಒಳ್ಳೆಯ ಕಾಯಿಸಿಲೀ
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಮಳೆಗಾಲವು ಬಂದರೆ ಬೈಲಿಲಿಯೇ
ಹೆರಟತ್ತಿದ ಬಟ್ಯ° ಕಿಡಿಂಜೆಲಿಲೇ |
ತರವಾಡಿನ ತೋಟದ ಕಾರ್ಯದೊಳಾ
ಇದು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಮಗುಮಾವನ ಬೈಕಿಲಿ ಕೂಪ ಕೆಣೀ
ಅಜಕಾನದ ಮಾಣಿಗೆ ಬಾರಿಕೊಶೀ |
ಅನುಪತ್ಯದ ಊಟವ ತಪ್ಪುಸದೇ
ಇವ° ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ದೊಡಬಾವನ ಶಾಲೆಲಿ ಗಂಟೆಯುದೇ
ಎಡೆಡೇಲಿ ಪರಂಚುವ ಅಜ್ಜಿಯುದೇ |
ಕಲಿಶುತ್ತ ಕಲಿತ್ತ ಸರಸ್ವತಿಯೇ –
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಅಡುಕತ್ತಿಯ ಮಾರಿನ ಮಾವನುದೇ
ಶರುಮಪ್ಪಚಿ ಸಿಕ್ಕಿದವೊಂದುದಿನಾ|
ನೆಗೆಮಾಣಿಯ ಕಂಡರೆ ಜೋರುನೆಗೇ
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ಉದಿಯಪ್ಪಗ ಹೇಳುವ ರಾಗದೊಳಾ
ನೆಗೆಮಾಣಿಯ ಪದ್ಯವ ಕೇಳಿದಿರೋ |
ಪ್ರತಿಯೊಬ್ಬನು ಎದ್ದವು ಬೈಲಿನೊಳಾ
ಇವು ಬೈಲಿನ ಶುದ್ದಿಲಿ ರೈಸುಗಿದಾ || 🙂 ||

ದಿನಾಲೂ ಉದೀಲೀ ಇದೊಂದೂ ಪ್ರಭಾತಾ |
ಭಕುತ್ತೀಲಿ ಹೇಳೀ ಇ ಬೈಲೀನೊರೆಲ್ಲಾ ||
ಲಡಾಯೀ-ಬಡಾಯೀ ಇದೊಂದೂ ಇಲಿಲ್ಲೇ
ಬೆಳೇಕೂ ಇ-ಬೈಲೂ ತಮಾಶೇ ಕೊಶಾಲೂ || 🙂 ||

~**~ಇಂದ್ರಾಣದ್ದು ಉದಿಯಾತು, ಇನ್ನೊಂದರಿ ನೋಡುವೊ°~**~

ಗಮನುಸಿಕ್ಕಿ:

  • ಇದು ಕೇವಲ ಕೊಶಾಲಿಂಗೆ ಮಾಂತ್ರ. ಆರಾರು ಪರಂಚಿರೆ ಆ° ಕೇಳೆ.
  • ಹೇಳಿರೆ ನಂಬೆಯಿ ನಿಂಗೊ, ಸುಪ್ರಭಾತ ಇಡೀ ಸಗಣ..!
    ಅಪ್ಪು – ಇಡೀ ಸುಪ್ರಭಾತಲ್ಲಿ ’ಸ’ಗಣ (ಸಲಗಂ) ಬರೇಕಡ, ಮುಳಿಯಭಾವ° ಹೇಳಿತ್ತಿದ್ದವು.
  • ಬಾಕಿ ಒಳುದೋರ ಶುದ್ದಿ ಬರೆತ್ತಿರೋ ನಿಂಗೊ ಆರಾರು? ಎನಗೆ ಇಂಗ್ಳೀಶು ಕಲಿವಲೆ ಹೋಪಲಿದ್ದು. 🙂

~
ನೆಗೆನೆಗೆಮೋರೆಯ
ನೆಗೆಮಾಣಿ

64 thoughts on “ನೆಗೆ ಸುಪ್ರಭಾತ: ಇವು ಬೈಲಿನ ಶುದ್ದಿಲಿ ರೈಸುಗಿದಾ..

  1. ನಮ್ಮ ಶುದ್ದಿ ಇಲ್ಲೆ ಬಚಾವ್! ಅಲ್ಲದೋ ಗೆಂಟು ಬಾವ!

  2. ಶ್ರೀಗಳೇ ಹರಸಿ ಆಶೀರ್ವದಿಸಿದ ಮತ್ತೆ ಇನ್ನೆ೦ತರ ಬೆರೆ ಸರ್ಟಿಪಿಕೇಟು ಬೇಡ.
    ಅ೦ದರೂ ನೆಗೆಗಾರಮಾಣಿ ಎ೦ಗಳ ಊರಿಲ್ಲಿ ’ಮದಲಿ೦ಗೆ ಒ೦ದು ಬ೦ಟನ ಮಗ° ಇ೦ಗ್ಲೀಷು ಕಲ್ತ ಹಾ೦ಗೆ’ ಆಗದ್ದೆ.
    ಹೇಳೀರೆ, ಬ೦ಟ ಮಗನ ಕೋಲೇಜಿ೦ಗೆ ಕಳುಸಿತ್ತದ. ಮಗ° ಆವರೆಗೆ ಕನ್ನಡಲ್ಲಿ ಕಲ್ತದು ನಮ್ಮ ಹಾ೦ಗೆ.
    ಕೋಲೇಜಿ೦ಗೆ ಹೋದ ಮಗ° ನಾಲ್ಕು ತಿ೦ಗಳು ಮನಗೆ ಬೈ೦ದಿಲ್ಲೆ. ಮತ್ತೆ ಬಪ್ಪಗ ಪೇ೦ಟು ಸೂಟು ಬೂಟ್ಸು ಎಲ್ಲ ಆತು, ಕೈಲಿ ಸಿಗ್ರೇಟು.
    ಅಪ್ಪ° ಕೇಳಿರೆ ’ಕೋಲೇಜುಕು ಪೋನಕ ಅವ್ವು ಮಾ೦ತ ಬೋಡು’ ಹೇಳಿತ್ತು. ಅಪ್ಪ° ’ಅ೦ದ ಮಗ?’ಹೇಳಿ ಒಪ್ಪಿಯೊ೦ಡತ್ತು.

    ಅ೦ಬಗ ದಾರಿಗೊ ಎಲ್ಲ ಈಗಾಣ ಹಾ೦ಗಲ್ಲದ. ಕಟ್ಟಪ್ಪುಣಿಗೊ ಜಾರ್ಕಟೆ ದಾರಿಗೊ. ಮಗನ ಕರಕ್ಕೊ೦ಡು ಬ೦ಟ° “ಒರ ಬಟ್ರೆ ಆಡೆಕು ಪೋವೋಡು. ಆರ್ನ ಮಗೆ ಮಾ೦ತ್ರ ಅತ್ತು, ಎನ್ನ ಮಗೆಲಾ ಇ೦ಗ್ಲಿಷು ಕಲ್ಪುವೆ- ಎ೦ದು ತೋಜಾವೋಡು” ಹೇಳಿ ಬ೦ಟೆತ್ತಿ ಹತ್ರೆ ಹೇಳಿಕ್ಕಿ ಹೆರಟತ್ತು.
    ದಾರೀಲಿ ಮಗನತ್ರೆ ’ಅ೦ದ ಮಗ ಈ ಕಟ್ಟಪ್ಪುಣಿಕ್ಕು ಇ೦ಗ್ಲೀಷುಟು ದಾದ ಪನ್ಪೇರು?’ ಹೇಳಿ ಕೇಳಿತ್ತು.
    “ಅವ್ವು ದಾಲ ಇಜ್ಜಿ ಅಮ್ಮ.. (ತುಳುವರು ಅಬ್ಬೆಯ ಅಪ್ಪ° ಹೇಳಿಯೂ ಅಪ್ಪನ ಅಮ್ಮ ಹೇಳಿಯು ಹೇಳುವದು – ಅಳಿಯ ಕಟ್ಟಲ್ಲದೊ!)
    ಕಾಟ್-ಪುಣಿ ಎ೦ದು ಪ೦ಡು೦ಟ ಆ೦ಡು” ಹೇಳಿತ್ತು.

    ’ಅ೦ದ ಮಗ, ಆಪಗ ಈ ಲತ್ತು ಬಜಯಿಕು ದಾದಾ ಪನ್ಪುನೆ?’ ಹೇಳಿ ಕೇಳಿತ್ತು.
    ’ಅವ್ವು ಇ೦ಚನೆ – ಲಾತ್ ಬಜಾಯಿ ಎ೦ದು ಪ೦ಡು೦ಟ ಆ೦ಡು’ ಹೇಳಿತ್ತು.

    ಅಪ್ಪ೦ಗೆ ಕೊಶಿಯೋ ಕೊಶಿ ಸೀದ ಬಟ್ರಲ್ಲಿ ಹೋಗಿ ಮಗನ ಇ೦ಗ್ಲೀಷಿನ ವಿವರ್ಸಿದ್ದೆ ವಿವರ್ಸಿದ್ದು.
    ಅ೦ತೂ ನೀನೂದೆ ಹಿ೦ಗೆಲ್ಲ ಕಲಿಯೇಡ ಹೇಳಿ ತಾತ್ಪರ್ಯ.
    ಒಪ್ಪ೦ಗಳೊಟ್ಟಿ೦ಗೆ.

  3. ಪೋಕ್ರಿ ನೆಗೆ ಮಾಣಿ,

    ಒಂದು ಹೊಸ ಸುಪ್ರಭಾತ ಬರದೆ. ಬಹುಶ ನಾವೆಲ್ಲ ಅಜ್ಜಿಯ ಸುಪ್ರಭಾತಕ್ಕೆ ಎಷ್ಟು ಒಗ್ಗಿ ಹೋಯಿದು ಹೇಳಿದರೆ ಬೇರೆ ಸುಪ್ರಭಾತ ಬರವಲಕ್ಕು ಹೇಳಿದೇ ಯೋಚನೆ ಮಾಡಿದ್ದಿಲ್ಲೆ. ಅದರನ್ನೂ ಮಾಡಿದೆ ನೀನು!! ಇದನ್ನೇ ಅಲ್ಲದಾ ಹೇಳುದು ಆಡ್ತಾ ಆಡ್ತಾ ಕಲಿವದು ಹೇಳಿ!!! ‘ಸ’ಗಣದ ಸುಪ್ರಭಾತ ತುಂಬಾ ಲಾಯ್ಕಾಯಿದು ಆತೋ.

    ನೀನು ಇನ್ನು ಈ ಸುಪ್ರಭಾತವ ಪೂರ್ತಿ ಮಾಡಿಕ್ಕಿಯೇ ಇಂಗ್ಳೀಷು ಕಲ್ತರೆ ಸಾಕು. ಅಲ್ಲದ್ದರೂ ಈಗ ದಿನ ಸುಮಾರಾಗಿ ದಿಕಿಶ್ಣರಿ ಬೂಸರು ಬಯಿಂದೋ ಏನೋ? ಅಲ್ಲದ್ದರೆ ಒರಗಿದ ಪುಚ್ಚೆ ಅದರ ತಲೆ ಅಡಿಯಂಗೆ ಮಡಗಿಕ್ಕು. ಅಕೇರಿ ಅಕ್ಷರವೂ ಕಲ್ತದು ಯೇವುದು ಹೇಳಿ ಮರದಿಕ್ಕು ಈಗ!!!

    ರಘು ಭಾವಂಗೆ ನೆಂಪು ಮಾಡಿದ್ದದಾ ‘ರಘು ರಾಮಾಯಣ’ ಬರವಲೆ? 😉 ಹಾಂಗಾದರೂ ಬರವಲೆ ಸುರು ಮಾಡಲಿ..

  4. ದೊಡ್ಡಪುಳ್ಳಿಗೆ ಪರೀಕ್ಷೆ ಮುಗಿಯದ್ದೆ ಬೈಲಿಂಗೆ ಬಪ್ಪಲೇ ಎಡಿಗಾತಿಲ್ಲೆ ಅದ… ನೆಗೆಮಾಣಿ ಎಂತೆಲ್ಲ ಕಾರ್ಬಾರು ಮಾಡಿದನೊ ಅರಡಿಯ… ಇದೆಂತರ ಸುಪ್ರಭಾತ ಹೇಳಿಗೊಂಡು ಕೂದ್ದದೋ.. ಅವ ಏಳೊಗ ಮದ್ಯಾನದ ಬೆಂದಿ ಮಾಡಿ ಆಗಿರ್ತಡಪ್ಪ ಶಾಂತಕ್ಕಂಗೆ… ಮತ್ತೆ ಈ ಸುಪ್ರಭಾತ ಹೇಳಿಕ್ಕಿ ಮಾಷ್ಟರಣ್ಣನಲ್ಲಿಗೆ ಎತ್ತೊಗ ಅವು ಉಂಡು ಒರಗಿರ್ತವೊ ಎಂತೊ.. ಅಂತೂ ಕಲಿವದು ಬಾಕಿಯೇ.. ಹಪ್ಪಾ ಮಾಣಿ, ನಿನಗೆ ಪರೀಕ್ಷೆ ಎಲ್ಲ ಎಂತೂ ಇಲ್ಲೆಯೋ..?
    ಅಂದರೂ ಪದ್ಯ ಲಾಯಿಕಾಯಿದಪ್ಪ.. ಇದನ್ನಾದರೂ ನೇರ್ಪಕ್ಕೆ ಕಲುತ್ತರಕ್ಕೇ…

  5. ನೆಗೆ ಭಾವಾ,,ಇನ್ನು ಇದರ ಕೇಳ್ತ ಬಗೆ ಹೇಂಗೆ????

  6. sooper..hotte tumba nege maadi aathu.
    oppannano, shuddigaarano, negegaarano, gurikkarano,
    anthu halavu hesarugalottinge suprabhatha pastaidu aatha.
    nege maaniya negeyu koshili raisuttappa.
    good luck.

    1. ಮಾಷ್ಟ್ರಮನೆ ಅತ್ತೆಯ ಕಂಡಪ್ಪಗ ಒಂದರಿ ಹೆದರಿಕೆ ಆತು.
      ಇಂಗ್ಳೀಶು ಕಲಿವಲೆ ಬಪ್ಪಗ ಇದರ ಸುದ್ದಿ ತೆಗದಿಕ್ಕಿರೆ? 😉

  7. ಏ ನೆಗೆ ಮಾಣಿ,
    ನಿನ್ನ ಕಾಣದ್ದೆ ಎಷ್ಟು ಅಸಕ್ಕ ಆತು ಗೊಂತಿದ್ದಾ? ನಿನ್ನ ಕಂಡಪ್ಪಗಲೇ ಕೊಶೀ ಆತು.
    ಇನ್ನು ನಿನ್ನ ಸುಪ್ರಭಾತ ರಾಗಲ್ಲಿ ಹಾಡಿ ಅಪ್ಪಗ ಇನ್ನೂ ಕೊಶೀ ಆತು.
    ನಗೆ ಮಾಣಿಯ ಶುದ್ದಿಯ ಕೇಳಿದರೇ
    ನಗೆಯುಕ್ಕಿಯು ಬರುತಿದೆ ಬೈಲಿನಲೀ
    ದಿನ ನಿತ್ಯವು ಕೇಳಲಿ ಈ ತರದಾ
    ಇವ ಬೈಲಿನ ಶುದ್ದಿಲಿ ರೈಸುಗಿದಾ

    1. ಶ್ರೀಶಣ್ಣ, ನಿನ್ನ ಬಡಾಯಿ ಕಾಣದ್ದೆ ಬೋಚಂಗೆ ಒರಕ್ಕಿಲ್ಲೆ.
      ಬೋಚ ಒರಗದ್ದೆ ಪೆಂಗಣ್ಣ ಒರಗಲಿಲ್ಲೆ.

      ಒರಗಲೇ ಇಲ್ಲದ್ದ ಮತ್ತೆ ಇವಕ್ಕೆಲ್ಲ ಸುಪ್ರಭಾತ ಎಂತಕೆ, ಅಲ್ದಾ? 😉

    1. ಹರೇರಾಮ ಗುರುಗಳೇ, ಹೊಡಾಡ್ತೆಯೊ°.
      ಬೈಲಿಂಗೆ ಗೌರವಪೂರಕ ಸ್ವಾಗತ.
      ಇವ° ನಮ್ಮ e-ಬೈಲಿನ ಬಿಂಗಿ ನೆಗೆಮಾಣಿ. ಅಂಬಗಂಬಗ ಬಕ್ಕು. ಈ ಶುದ್ದಿಲಿ ಎಂತಾರು ಅಸಮಂಜಸ ಹೇಳಿ ಕಂಡ್ರೆ, ತೋಟಕಾಚಾರ್ಯರಿಂಗೆ ಅಪಮಾನ ಹೇಳಿ ಅನುಸಿರೆ – ಪಾದಕ್ಕೆ ಹಾಕಿ ಕ್ಷಮೆಕೊಟ್ಟಿಕ್ಕಿ ಗುರುಗಳೇ.

      ಹೇಳಿದಾಂಗೆ, ಈ ಶುದ್ದಿ ಓದಿ ಪ್ರತಿಕ್ರಿಯೆ ಕೊಟ್ಟದು ಅವಂಗೆ ಬಾರೀ ಕೊಶಿ ಆತಡ.
      ಅವಂಗೆ ಒಂದು ಆಶೀರ್ವಾದ ಮಾಡಿ.
      ಬಿಂಗಿಬುದ್ದಿ ಎಲ್ಲ ಬಿಟ್ಟು, ಒಳ್ಳೆ ವಿದ್ಯಾಭ್ಯಾಸ ಕಲ್ತು, ನಮ್ಮ ಒಳ ಗಟ್ಟಿಗ° ಆಗಿ ಬದ್ಕಲಿ ಗುರುಗಳೇ. 🙂

      ಹರೇರಾಮ, ಹರೇರಾಮ, ಹರೇರಾಮ.

      1. ಓದಿ ೨-೩ ದಿನ ಕಳುದರೂ ಅದರ ಗುಂಗು ಇನ್ನೂ ಹೋಯ್ದಿಲ್ಲೆ, ಗೋಸ್ಪರ್ಶ ಆಗಿ ಸುಮಾರು ಹೊತ್ತು ಕಳುದರೂ ಅದರ ಸುಗಂಧ ಇನ್ನೂ ಇಪ್ಪ ಹಾಂಗೆ…

        ಸುಪ್ರಭಾತದ ಸುಪ್ರಭಾವ..!

        1. ಶ್ರೀಚರಣಂಗಳಲ್ಲಿ ಶರಣು..
          ಈ-ಬೈಲ ಬಾಲರಿಂಗೆ ಪರಮಪೂಜ್ಯರು ನೀಡಿದ ಈ ವಾತ್ಸಲ್ಯಪೂರ್ಣ ಸ್ಪರ್ಶಂದ ಪುಳಕಿತ ಆವ್ತಾ ಇದ್ದೆಯೋ..!
          ಹರೇ ರಾಮ..

          1. ಮಕ್ಕೊ ಹೋದಲ್ಲಿಗೆ ಅಬ್ಬೆಯೂ ಹೋಯೆಕ್ಕಾವುತ್ತು..
            ಹೋಪಲೆ ಸೂಕ್ತವಲ್ಲದ ಜಾಗೆಗೊಕ್ಕೆ ಮಕ್ಕೊ ಹೋದರೆ ಅಬ್ಬೆಗೆ ಧರ್ಮಸಂಕಟವೇ ಅಕ್ಕು..
            ಆದರೆ ಈ(E) ಮಕ್ಕೊ ಹಾಂಗಲ್ಲಲೇ ಅಲ್ಲ..
            ಇಂಟರ್ನೆಟ್ಟು ಹೇಳ್ತ ವಿಕೃತಿಯೇ ತುಂಬಿಪ್ಪ ಹಾಳೂರಿನ, ಶುದ್ಧವಾದ ಶುದ್ದಿಗಳಿಂದ ಶುದ್ಧ ಮಾಡ್ತ ಹಾಂಗಿಪ್ಪ, ಸಂಸ್ಕೃತಿ-ಸಮೃದ್ಧವಾದ ಒಂದು ಬೈಲಿನ ನಿರ್ಮಿಸಿದ್ದವು..
            ಆಶೀರ್ವಾದ ಕೊಡದ್ದೇ ಇಪ್ಪದು ಹೇಂಗೆ ಈ ಮಕ್ಕೊಗೆ..

  8. ಸೂಪರ್ ಆಯ್ದು ಸುಪ್ರಭಾತ…
    ನೆಗೆ ಮಾಡಿ ಮಾಡಿ ಸಾಕಾತು 🙂

    [ಬೊಚಬಾವನ ಚೆಂದಕೆ ಮೀಶಿದರೇ
    ಕರಿನೀರಿಡಿ ಸಾರಡಿ ತೋಡಿಲಿಯೇ |] ಇದು ಸೂಪರ್….
    ಎಂತ ಬೋಸಬಾವಂಗೆ ಇನ್ನುದೆ ಉದಿ ಆಯ್ದಿಲ್ಲೆಯೊ?

    1. [ನೆಗೆ ಮಾಡಿ ಮಾಡಿ ಸಾಕಾತು]
      ಅಲ್ಲ ಒಪ್ಪಕ್ಕೋ, ತಲೆಬೆಶಿ ಮಾಡ್ಲೆಂತ ಇದ್ದು ಅದರ್ಲಿ! ನೆಗೆ ಮಾಡಿ ಸಾಕಾದರೆ ನೆಗೆ ಮಾಡ್ಸುತ್ತು ನಿಲ್ಲುಸಿರಾತಪ್ಪ! 😉

      1. ಪರೀಕ್ಷೆ ಗೌಜಿಲಿ ನೆಗೆ ಮಾಡ್ಲೂ ಪುರುಸೊತ್ತಿಲ್ಲೆ… 🙁
        ಹಾಂಗೆ ತಲೆಬೆಶಿ… 🙁

    2. {..ಇನ್ನುದೆ ಉದಿ ಆಯ್ದಿಲ್ಲೆಯೊ?}
      ನವಗೆ ದಿನಾ ಉದ್ಯಪ್ಪಗ, ಉದಿಯಾವುತ್ತು..!!ಮತ್ತೆ ಸಾಯ೦ಕಾಲ ಆದಮತ್ತೆ ಇರುಳಾವುತ್ತು…
      ಅ೦ಬಗ ನಿ೦ಗಳಲ್ಲಿ ಹೀ೦ಗೆ ಅಲ್ಲದೋ?? 😉
      ಇರುಳಾದ ಮತ್ತೆ ಉದಿಯಪ್ಪದೋ??
      ಅಲ್ಲಾ, ಉದಿಯಾದ ಮತ್ತೆ ಇರುಳು ಅಪ್ಪದೋ??

      1. ಒಪ್ಪಕ್ಕ ಅಷ್ಟು ನೆಗೆಮಾಡ್ಳೆ ಎಂತ ಇದ್ದು? ಅಂಬಗ ಅಜ್ಜಿ ಸುಪ್ರಬಾತ ಹೇಳುವಗಳೂ ನೆಗೆ ಮಾಡ್ತೆಯಾ?
        ಮಾಷ್ಟ್ರುಮಾವನತ್ರೆ ಹೋಪಗ ಎಲ್ಲ ನೆಗೆಯೂ ಮರದು ಬೆಗರ್ಲೆ ಸುರು ಆವುತ್ತು ಎನಗೆ 🙁

        1. ನೆಗೆಗಾರಣ್ಣ..
          ಮಾಷ್ಟ್ರುಮಾವ ನಿನ್ನ ನೆಂಪು ಮಾಡಿಕೊಂಡಿತ್ತಿದ್ದವು ಮೊನ್ನೆ…
          ಒಂದರಿ ಹೋಗಿ ಪಾಟ ಒಪ್ಪುಸಿಕ್ಕಿ ಬಾ…ಅಗದ?

      2. ಅಲ್ಲ,ಇಡೀ ಬೈಲು ಸುಪ್ರಬಾತ ಹೇಳ್ವಗ ಬೋಸಬಾವಂದು ಮಾತ್ರ ಸುದ್ದಿಯೆ ಇತ್ತಿಲ್ಲೆ..
        ಹಾಂಗೆ ಕೇಳಿದ್ದು….
        ಮತ್ತೆ ಗ್ರೇಶಿಗೊಂಡೆ ಸಾರಡಿ ತೋಡಿಲಿ ಮೀವಲೆ ಹೋದಿಕ್ಕು ಹೇಳಿ…. 😉

  9. ನೆಗೆ ಸುಪ್ರಭಾತ ಸೂಪರ್ ಬಾತ್ ಆಯಿದು. ಪ್ರತಿಯೊಂದು ಗೆರೆಯನ್ನು, ರಾಗಲ್ಲಿ (ಸುಬ್ಬಲಕ್ಶ್ಮಿ ಯಷ್ಟಲ್ಲ !) ಹಾಡಿ ನೋಡಿದೆ. ರಾಗ ಮದಲೇ ಚೆಂದ. ನೆಗೆಗಾರನ ಸಾಹಿತ್ಯ ಇನ್ನೂದೆ ಚೆಂದ. ಬೋಚ ಬಾವ ಮಿಂದಪ್ಪಗ ಬಂದ ಕರಿ ನೀರು ಸಾರಡಿ ತೋಡಿಲ್ಲಿ ಹರುದ್ದದು ಕೇಳಿ ನೆಗೆ ಬಂದು ತಡೆಯ. ಬೆಂಗಳೂರಿನ ಕೃಷ್ಣೇಗೌಡರುದೆ, ಹೀಂಗಿರುತ್ತದೇ ಒಂದು ಪದ್ಯ ಬರದು ಹಾಸ್ಯ ಕಾರ್ಯಕ್ರಮಲ್ಲಿ ಹಾಡಿದ್ದು ನೆಂಪಾತು. ನೆಗೆಗಾರ, ಇನ್ನಾಣ ಕಂತು ಏವಗ ಬತ್ತು? (ಏವಗ ಕಟ್ಟುತ್ತಿ!! ?)

      1. ಬೇಂಕಿಲ್ಲಿ ಇದ್ದು ಕಂತು ಕೇಳೀ ಕೇಳೀ ಅದೇ ಅಭ್ಯಾಸ ನೋಡು. ನೀನು ಹೀಂಗೆ ಕೇಳ್ತೆ ಹೇಳಿ ಹಾಂಗೆ ಬರದ್ದದು ಗೊಂತಾತಿಲ್ಲಿಯೊ ?

        1. ಹೋ,ಅ೦ತೂ ಇ೦ತೂ ಇದು ಕ೦ತುಪಿತನ ಕಥೆ,ಅಲ್ಲದೋ?

          1. ಬೊಳುಂಬುಮಾವನ ಸಾಲಒಸೂಲಾತಿ ಭಾಶೆಯ “ಕಂತು” ತಪ್ಪಿತ್ತು ಹೇಳಿ ದೊಡ್ಡಬಾವ ಮಾಷ್ಟ್ರ° ಆಗಿ ತೋರುಸಿದ° ಅದಾ…

            ನಿಂಗೊ ಕಂತೆ ಶುದ್ದಿ ಮಾತಾಡಿಗೊಂಡೇ ಇರಿ. ಆನು ಇಂಗ್ಳೀಶು ಕಲ್ತು ದೊಡ್ಡದೊಡ್ಡ ಕಂತೆ ಲೆಕ್ಕ ಮಾಡುವೆ 😉

  10. ಏ ಮಾಣೀ,ನಿನ್ನ ಕತೆಲೆಡಿಯ ! ಒಪ್ಪಣ್ಣನ ಬೈಲಿ೦ಗೆ ‘ಸಗಣ’ದ ರಾಶಿಯೋ??ನೆಗೆ ಮಾಡಿ ನೆಗೆಮಾಡಿ ಸಾಕಾತು,ಹು.
    ~
    ನೆಗೆ ಮಾಣಿಯು ತ೦ದನು ಬೈಲಿನೊಳಾ
    ಸಗಣಾದಿ ಮಹಾಮಹ ಕಾವ್ಯವನೇ
    ಹಿಡುದೊ೦ದರಿಯೇ ಕೆಮಿ ತಿರ್ಪಿದರೇ
    ಇವ° ಬೈಲಿನ ಶುದ್ದಿಲಿ ರೈಸುಗಿದಾ
    ~
    ಉದಿಯಪ್ಪಗ ಮಾವನು ಬೀಸದಲೀ
    ಹೊಡಿ ತಪ್ಪಲೆ ವಿಟ್ಲಕೆ ಹೋಯಿದವೂ
    ಬರಳೀಗಳೆ ತೋರುಸಿ ಪದ್ಯವನೂ
    ಅಡಿ ಕೊಟ್ಟರೆ ಬೈಲಿಲಿ ರೈಸುಗಿದಾ
    ~
    ಕಥೆ ಮೋಸವೆ ಅಜ್ಜಿಯ ಪದ್ಯವನೂ
    ಇವ° ಹಾಡಿರೆ ದೇವರೆ ಓಡುಗಿದಾ
    ಕೆಜಿ ಮಾವನು ಸೂಜಿಯ ಕುತ್ತಿದರೇ
    ಇವ° ಬೈಲಿನ ಶುದ್ದಿಲಿ ರೈಸುಗಿದಾ
    ~

    1. ರಘುಮಾವನ ಪದ್ಯ ಬಂದಲ್ಲಿಗೆ ಬೈಲಿನ ನೆಗೆಮಾಣಿಯ ಸಗಣ ಮಹಿಮೆ ಸಂಪೂರ್ಣ ಆತು! 😉
      [ಇವ° ಹಾಡಿರೆ ದೇವರೆ ಓಡುಗಿದಾ]
      ದೇವರು ಮಾತ್ರ ಅಲ್ಲ, ಮನೆಲಿಪ್ಪೋರುದೆ! 😉

    2. ಮಾವ ಪೇಟೆಂದ ಬಪ್ಪಗ ಆನು ಕಟ್ಟಪುಣಿಗೆ ಓಡುವೆ. ಲಲ್ಲಲಲ್ಲಲಾ.. 😉
      ಅಂತೂ ಎನಗೆ ಪೆಟ್ಟುಬಿದ್ದರೆ ಚೆಂದನೋಡ್ಳೆ ಎಲ್ಲೊರುದೇ ಇದ್ದವು, ಹಪ್ಪಾ

  11. ಚೊರೇ ಮರ್ಕಟೇಶ, ಮುಗಾತೋ ಮುಗಾತೋ?
    ನಿನ್ನಾ ದಿಸೇಲೀ ಪಡುಚ್ಚ ಪಡುಚ್ಚ…!! 🙁

    1. ನೆಗೆಮಾಣಿಯ ಇಂಗ್ಲೀಷೇ ಭಯಂಕರ,
      ಕವನ ಇನ್ನೂ ಭಯಂಕರ,
      ಒಟ್ಟಾರೆ ಇವನತ್ರೆ ಪೂರೈಸ ಪೂರೈಸ!! ಅಲ್ಲದೋ ಸುಭಗಣ್ಣಾ>???

  12. ಸುಪ್ರಭಾತ ಪಷ್ಟಾಯಿದು. ಇಂಗ್ಲಿಷ್ ಕಲ್ತು ಇಂಗ್ಲಿಷಿಲಿಯೂ ಸುಪ್ರಭಾತ ಬರದರೆ ಕೇಳುಲೆ ಎಂಗ ರೆಡಿ.

  13. ಸುಪ್ರಭಾತ ಲಾಯಿಕ್ಕಿದ್ದು. ಎಲ್ಲ ದಿಕ್ಕೆ ‘ಸಗಣ’ದ ಕಂಪು ಒಂದರಿ ಹರಡಿತ್ತು. ಇನ್ನು ಇಂಗ್ಲೀಷು ಕಲ್ತು, ಅದರಲ್ಲಿಯೇ ಪದ್ಯ ಬರವದ ಅಂಬಗ…! ಓದುಲೆ ಕಾದುಗೊಂಡಿರ್ತೆಯೊ…

    1. ಇಂಗ್ಳೀಸ್ ಇಂಗ್ಳೀಸ್ ವಾಟ್ಟೆ ನೈಸ್ – ಹೇಳ್ತೆ ಹೇಳ್ತೆ.
      ರಜ ಸಮಯ ಹೋಯೆಕ್ಕು. ಈಗ ಮಾಷ್ಟ್ರುಮಾವಂಗೆ ಪುರುಸೊತ್ತಿರ. 😉

      1. ನೆಗೆಗಾರಣ್ಣ…
        ಈಗ ಮಾಷ್ಟ್ರು ಮಾವ ಪುರುಸೊತ್ತಿಲಿ ಇದ್ದವಡ…ಮಳೆಗಾಲ ಅಲ್ದಾ?ಹಾಂಗೆ..
        ಈಗ ಹೋಪಲಕ್ಕು ಇಂಗ್ಲೀಷು ಕಲಿವಲೆ..
        ನಿನಗೆ ಗೊಂತಾಗದ್ದೆ ಬಾಕಿ ಅಪ್ಪದು ಬೇಡ ಹೇಳಿ ಹೇಳಿದ್ದು….

  14. ಲಾಯ್ಕಾಯ್ದು..ಮೂರು ಮೂರು ಸರ್ತಿ ಓದಿದೆ..

  15. ತೋಟಕ ವೃತ್ತಲ್ಲಿ ಬಂದ ಸುಪ್ರಭಾತ ಲಾಯಕ ಆಯಿದು ನೆಗೆಮಾಣಿ.
    ‘ಇರೆ ತೋಟಕಮೀರೆರಡಾ ಸಗಣಂ’ ಹೇಳಿ ಇದರ ನೆಂಪು ಮಡಿಗಿಕೋಳ್ತವು.

  16. ನೆಗೆಮಾಣಿ,
    ಮುಳಿಯದ ಭಾವನದ್ದು ರೈಸೆಕ್ಕಾರೆ ಭಾಮಿನಿಯೇ ಆಯೆಕ್ಕು. ನಿನ್ನದು ಏವ ಸಗಣವೇ ಆದರೂ ರೈಸುತ್ತು.

  17. ಅಲೆಲೆ!! 🙂 🙂

    ಇದಾ… ಬೇಗ ಬೇಗ ಸುತ್ತ-ಮುತ್ತ ತಿರುಗಿ ನೋಡಿದೆ, ಒಬ್ಬಳೇ ಕೂದೊಂಡು ನೆಗೆಮಾಡಿದ್ದು ನೋಡಿ “ಮರುಳು’ ಹೇಳಿ ಗ್ರೆಶುಲಾಗನ್ನೇ!! 🙂

    1. ಓ, ಇದಾ, ಪ್ರೇಮಕ್ಕಂದೆ ಇದ್ದವು, ರಾಗಲ್ಲಿ, ಚೆಂದಕ್ಕೆ ಓದಲೆ. 🙂 ರಘುಮಾವನ ಭಾಮಿನಿೂ, ನಗೆಗಾರನ ಸಗಣಕ್ಕೂ ಸೇರ್ಸಿ ಸಧ್ಯಲ್ಲೇ ಒಂದು ಸಾಹಿತ್ಯಗೋಷ್ಟಿ ಮಾಡ್ಲಕ್ಕೋ ಏನೋ ?? ಎಲ್ಲಿದ್ದಿ?

      1. ಅಪ್ಪಪ್ಪು.. ಹೀಂಗಿಪ್ಪ ಆರೋಗ್ಯಕರ ‘ನಗೆ ಗೋಷ್ಥಿ’ಗೊ ಇರಲಿ.. ಹಗುರಪ್ಪಲೆ.. 🙂

    2. ನಿಂಗೊ ಸುಪ್ರಭಾತ ಓದಿ ನೆಗೆಮಾಡಿದ್ದೋ, ಎನ್ನ ಮೋರೆನೋಡಿ ನೆಗೆಮಾಡದ್ದೋ?
      ಮೊದಾಲು ಹೇಳಿ.
      ಲೊಟ್ಟೆಬಿಟ್ರೆ ನಿಂಗಳ ಬಗ್ಗೆಯೂ ಸುಪ್ರಭಾತ ಹೇಳುವೆ ಹಾಂ! 🙂

      1. ದೇವರ ಮಂಕಡುಸಿ.. ಹಳೆ ಹೋಷ್ಟೇಲು.. ಸಾರಡಿ ತೋಡಿಲಿ ಕರಿನೀರು..

        ಬೊಂಡದ ಅಂಗಡಿ.. ಕಿಡಿನ್ಜೆಲು.. ಅನುಪತ್ಯದ ಊಟ.. ಎಡೆಡೆಲಿ ಪರಂಚುವ – ಇದೆಲ್ಲ ರಾಗಲ್ಲಿ ಓದಿಕೊಂಡೇ ನೆಗೆಮಾಡಿದ್ದಾನು, ಆತಾ…. 🙂

        ಮತ್ತೆ, ನಗೆಗಾರ ಮೋರೆ ತೋರ್ಸಲಿಲ್ಲೆಯಾ..
        ಎನಗಿಲ್ಲಿ ಕಮ್ಮಿ ಜನರ ಪರಿಚಯ.
        ಇನ್ನೊಂದ್ಸರ್ತಿ “ಬೈಲಿ”ನ ‘ಸಂವಾದ’ ಆದರೆ ದಿನಿಗೇಳಿ ಆತಾ? 🙂

  18. ಪಷ್ತಾಯ್ದು ಇ ಬೈಲಿನ ಸುಪ್ರಭಾತ.ಚೆ೦ದಲ್ಲಿ ರಾಗಲ್ಲಿ ಓದಿ ಅಪ್ಪಗ ಭಾರಿ ಖುಷಿ ಆತು 🙂

    1. [ಚೆ೦ದಲ್ಲಿ ರಾಗಲ್ಲಿ]
      ದೀಪಿಕಕ್ಕೋ, ಆನುದೆ ರಾಗಲ್ಲಿ ಓದಿದೆ.. ನೆಗೆಮಾಣಿಯುದೆ ಒಂದರಿ ರಾಗಲ್ಲಿ ಓದಿಕ್ಕಿ ಸರಿ ಬಯಿಂದೋ ಹೇಳಿ ನೋಡಿಕ್ಕಿಯೇ ಬೈಲಿಲಿ ಹೇಳಿದ್ದಡ.. ಎಂಗಳ ರಾಗ ಕೇಳಿ ಕಾಕೆಗೊ ಎಲ್ಲ ಸಾರಡಿ ತೋಡಿಂದ ಅತ್ಲಾಗಿ ಪರಾರಿ! ಆದರೆ ’ಚೆಂದಲ್ಲಿ’ ರಾಗಲ್ಲಿ ಓದುಲೆ ಬೈಲಿನ ಒಪ್ಪಕ್ಕಂದ್ರೇ ಆಯೆಕ್ಕಂದ್ರೇ ಆಯೆಕಟ್ಟೆ! 🙂

      1. ದೀಪತ್ತೆ ರಾಗಲ್ಲಿ ಹೇಳುವಗ ವಿನಯಜ್ಜಿ ಡೇನ್ಸು ಮಾಡಿದವಡ.
        ಅಲ್ಲಲ್ಲ, ಅತ್ಲಾಗಿತ್ಲಾಗಿ ಆತೋ? ಉಮ್ಮ 🙁

        ಎಲ್ಲ ಇಂಗ್ಳೀಶು ಸ್ಪೆಲ್ಲಿಂಗಿನ ಹಾಂಗೆ ಅತ್ತಿತ್ತೆ ಆವುತ್ತು 🙁 🙁

        1. ಅದಕ್ಕೇ ಹೇಳಿದ್ದು, ಇಂಗ್ಲೀಷಿನ ಸ್ಪೆಲ್ಲಿಂಗು ಅತ್ಲಾಗಿತ್ಲಾಗಿ ಆಗದ್ದ ಹಾಂಗೆ ಇತ್ಲಾಗಿಂದತ್ಲಾಗಿ ಓದೆಕ್ಕು ಹೇಳಿ, ಗೊಂತಾತೋ?

        2. ಬೌಶ್ಶ “ದೀಪಕ” ರಾಗಲ್ಲಿ ಹೇಳಿದ್ದಾದರೆ…. ಚಾವಡಿಯ ಟ್ಯೂಬುಲೈಟು ಹೊತ್ತುತ್ತಿತ್ತು…..:D

  19. ಪಡ್ಚ ಆತು! ನೀನುದೆ ಸುಪ್ರಭಾತ ಸುರು ಮಾಡಿಕ್ಕಿದೆಯೋ!!!! ಪಷ್ಟಾಯಿದು! ಏನೇ ಆಗಲ್ಲಿ, ಎಲ್ಲರೂ ಸಗಣಲ್ಲಿರೆಕ್ಕೂ ಹೇಳಿ ಹೆಸರು ರಜ ತಿರುಚಿರೂ, ಗುರ್ತ ಹಿಡಿವಲೆ ಸಮಸ್ಯೆ ಆಯ್ದಿಲ್ಲೆ! ಇಂಗ್ಲೀಷು ಕಲಿವಲೆ ಹೋಪಾಗ ಮಾಷ್ಟ್ರುಮಾವನತ್ರೆ ಈ ಪದ್ಯ ಹೇಳಿಕ್ಕೆಡ,
    ಮತ್ತೆ ಮಾಷ್ಟ್ರುಮಾವ ಕೆಮಿ ಹಿಡಿಗಿದಾ
    ನೀನು ಬೊಬ್ಬೆ ಹೊಡದ ಶುದ್ದಿ ರೈಸುಗಿದಾ! 😉

    ಗೊಂತಾತೋ? ನಿ ಕಲ್ತ ಇಂಗ್ಲೀಷನ ರಜ ಹೇಳಿಕೊಡಾತ, ಬೈಲಿಲಿ ಒಪ್ಸದ್ದೆ ದಿನ ಆತು!

    1. ಆನು ಬೊಬ್ಬೆ ಹೊಡದ ಶುದ್ದಿ ರೈಸುವ ಮೊದಲು ನಿನ್ನ ಬೈಕ್ಕಿನ ಚಕ್ರದ ಗಾಳಿ ತೆಗವೆ, ಹಾ°! ಪೋಕ್ರಿಮಾಣಿ, ಎನ್ನತ್ರೆ ಜಗಳಕ್ಕೆ ಬತ್ತ°. 🙁
      ಬೊಳುಂಬುಮಾವಾ°, ನೋಡಿ ಇವನ..

      1. ನಿನ್ನ ಕಾಲೆಳೆಯದ್ರೆ ಎನಗೆ ಒರಕ್ಕು ಬಾರ ಅನ್ನೆ, ಎಂತ ಮಾಡುತ್ತು! 🙂
        [ಬೈಕ್ಕಿನ ಚಕ್ರದ ಗಾಳಿ ತೆಗವೆ]
        ಅಲ್ಲ ಮಾರಾಯಾ, ಹೆರ ಬೇಕಾದಷ್ಟು ಗಾಳಿ ಇಪ್ಪಾಗ ಬೈಕಿನ ಚಕ್ರದ ಗಾಳಿ ಎಂತಕೆ ತೆಗದು ಹಾಳು ಮಾಡ್ತು ನೀನು.. 🙂 ಎನಗೆ ಉಪದ್ರ ಮಾಡಿರೆ ನೋಡು, ಗ್ಯಾರೆಂಟಿ, ನೀನು ಬೈಲಿಲಿ ಇಂಗ್ಲೀಸು ಒಪ್ಸಿದ ಚೆಂದ ಗೊಂತಾಯ್ದಿಲ್ಲೆ ಮಾಷ್ತ್ರು ಮಾವಂಗೆ, ಎಲ್ಲ ಹಾಂಗೆ ಹೋಗಿ ಉರುಗುಲಿದ್ದು! ನಾಡ್ತು ಮಾಷ್ಟ್ರು ಮಾವನತ್ರೆ ಇಂಗ್ಲೀಷು ಕಲಿವಾಗ ಕುಟ್ಟಿ ಎರಡು ಜಾಸ್ತಿ ಬೀಳುಗು.. 😉 ಲಾ ಲಾಲ ಲಾಲಲಾ! 😉

  20. ವಾಹ್ ವಾಹ್!!! ಸೂಪರ್ ಆಯಿದು.. ಲಾಯಿಕಾಯಿದು ಹೇಳ್ಳೇ ನಿ೦ಗೊ ಹೇಳಿದ ಕಾರಣ ಹೇಳಿದ್ದಲ್ಲ, ನಿಜವಾಗಿಯೂ ಲಾಯಿಕಾಯಿದು!! 😉
    ಒಪ್ಪ೦ಗೊ.. ಭಾರೀ ಲಾಯಿಕಾಯಿದು..

    1. ಗಣೇಶಪ್ಪಚ್ಚೀ, ಈಗ ಒರೆಂಗೆ ಬಂದ ಒಪ್ಪಂಗಳಲ್ಲಿ ನಿಂಗೊ ಮಾಂತ್ರ “ಲಾಯಿಕಾಯಿದು” ಹೇಳಿದ್ದು. ಕೊಶೀ ಆತಾತ.

  21. ಆಹಾ., ಉದಿಯಪ್ಪಗ ಎದ್ದ ಹಾಂಗೇ ಬೈಲಿಲಿ ಸುಪ್ರಭಾತ ಕೇಳಿ ಖುಶೀ ಆತಿದಾ. ಭಲೆ ಅಲ್ಲ , ಭಲೇ ಭಲೇ ಆಯ್ದು ಹೇಳಿ ನಮ್ಮ ಒಪ್ಪ.

    1. ನಿಂಗಳ ಬೊಂಡದ ಅಂಗುಡಿಲಿ ಬೊಂಡ ಕುಡುದ ಹಾಂಗೇ ಆತು ಒಪ್ಪ ನೋಡಿಕ್ಕಿ.
      ಹು ಹು ಹು ಹು!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×