Oppanna.com

ಆರು ಆ ಗುರ್ತದವ?

ಬರದೋರು :   ಗೋಪಾಲಣ್ಣ    on   12/06/2011    13 ಒಪ್ಪಂಗೊ

ಗೋಪಾಲಣ್ಣ

ಜಾಲ ಕರೆಲಿ ಇಪ್ಪ ನಲ್ಲಿಲಿ ಕಾಲು ತೊಳಕ್ಕೊಂಡು ಒಳ ಬಂದವು ಶಂಕರಭಟ್ರು.ಮಗ ನರೇಶನ ಹತ್ರೆ “ಎಂತದೊ?ಕಟ್ಟ ಕಟ್ಟಿ ಆತೊ?” ಹೇಳಿ ಕೇಳಿದವು.
“ಇಲ್ಲೆ,ಎಂತ ಇದ್ದು ಎನ್ನತ್ರೆ ತುಂಬಿಸಲೆ? ಎರಡು ಪೇಂಟು ಶರ್ಟು ಅಷ್ಟೆ…”
ಬಾಯಿಗೆ ಎಲೆ-ಅಡಕ್ಕೆ ಹಾಕಿಕೊಂಡು ಶಂಕರಭಟ್ರು-“ಆತಪ್ಪ,ಇನ್ನು ನೀನೇ ಸಂಪಾದನೆ ಮಾಡ್ತೆನ್ನೆ?ಬೇಕಾದ್ದದರ ತೆಕ್ಕೊ”ಹೇಳಿದವು.
ಪೈಸೆಯ ವಿಷಯಲ್ಲಿ ಅಪ್ಪ ಮಗಂಗೆ ಏವಾಗಲೂ ಜಟಾಪಟಿ ಅಕ್ಕು.”ಇದಾ,ನಿಂಗೊ ಇಂದಾದರೂ ಸುಮ್ಮನೆ ಕೂರ್ತೀರೊ?
ಅವ ಹೋಪಲೆ ಹೆರಟ ದಿನವೂ ನಿಂಗಳದ್ದೆಂತ ಲಡಾಯಿ?”-ನರೇಶನ ಅಮ್ಮ ಹೇಳಿದವು.
“ಎಯ್,ಆನೆಲ್ಲಿ ಲಡಾಯಿ ಮಾಡಿದ್ದೆ? ಅವ ಎಂತ ಬೇಕಾರೂ ಮಾಡಲಿ-ಎನಗೆಂತ?”ಹೇಳಿದವು ಭಟ್ರು.
ನರೇಶಂಗೂ ಅಂದು ಅಪ್ಪನ ಹತ್ತರೆ ಜಗಳ ಮಾಡ್ಲೆ ಮನಸ್ಸಿಲ್ಲೆ.ಅವ ಒಳ ಹೋದ.

*  * *

ಶಂಕರ ಭಟ್ಟರದ್ದು ಹಳೆ ಕ್ರಮ.
ಹಳೆ ತೋಟ. ಹಳೆಯ ಮನೆ.ಅವಕ್ಕೆ ಒಬ್ಬ ಮಗ,ಇಬ್ರು ಕೂಸುಗೊ .ಮಗ ನರೇಶ ಹೆರಿಯವ.
ಅವಕ್ಕೆ ಮಕ್ಕೊಗೆ ಎಡಿಗಾಷ್ಟು ಕಲಿಸೆಕ್ಕು ಹೇಳುವ ವಿಚಾರ ಇತ್ತು.ಕರ್ಚಿಗೆ ಅವಕ್ಕೆ ತೊಂದರೆ ಇಲ್ಲೆ. ತುಂಬಾ ಜಾಗ್ರತೆ ಮನುಷ್ಯ.
ಒಂದು ಪೈಸೆ ಹಾಳು ಮಾಡವು.ಮಕ್ಕೊ ಪೈಸೆ ಕೇಳಿರೆ ಎಂತಗೆ,ಎಷ್ಟಾವುತ್ತು ಹೇಳಿ ಕೇಳದ್ದೆ ಕೊಡವು.
ಶಾಲೆಂದ ಬಂದರೆ,ಆ ಪೈಸೆ ಎಂತಗೆ ಕರ್ಚಾತು
ಹೇಳಿ ಲೆಕ್ಕ ಕೇಳುಗು.ಬಾಕಿ ಪೈಸೆ ಅಪ್ಪನ ಕೈಗೆ ಒಪ್ಪಿಸಲೇ ಬೇಕು.ಕೂಸುಗೊ ಮಾತಾಡದ್ದೆ ಲೆಕ್ಕ ಕೊಡುಗು.

ಮಾಣಿದೇ ಸಮಸ್ಯೆ.
ಮಾಣಿ ಹತ್ತರೆ ಅವು ಭಾರೀ ಕಟ್ಟುನಿಟ್ಟು.ಹತ್ತನೇ ಕ್ಲಾಸು ಕಳುದು ಕಾಲೇಜಿಂಗೆ ಹೋಪ ಮಾಣಿಗೆ
ದಿನಾ ಅಪ್ಪನ ಲೆಕ್ಕ ಕಂಡು ಕಿರಿಕಿರಿ ಅಪ್ಪಲೆ ಸುರು ಆತು.
ಅವ ಒಂದು ಐಸ್ ಕ್ರೀಮು ತಿಂದರೂ ಅದರ ಲೆಕ್ಕ ಕೊಡೆಕ್ಕು. ಗೆಳೆಯರಿಂಗೆ
ಬೇಕಾಗಿ ಕರ್ಚು ಮಾಡಿದರೆ ಅವನ ಅಪ್ಪ ಬೈಯವು-ಆದರೆ ಆ ಗೆಳೆಯ ಆರು, ಎಲ್ಲಿಯಾಣದ್ದು,ಹೇಂಗಿಪ್ಪ ಹುಡುಗ ಎಲ್ಲಾ ಅಪ್ಪನ ಹತ್ತರೆ ಹೇಳೆಕ್ಕು.

ಇದೊಂದು ಹರಟೆ ಆತು ಅವಂಗೆ.
ಮಾಡಿದ ಕರ್ಚಿಯ ಲೆಕ್ಕ ಬರೆಯೆಕ್ಕು ಹೇಳಿ ಮಗನ ಹತ್ರೆ ಹೇಳುಗು.”ಚೆಲ್ಲುತ್ತರೂ ಅಳತೆ ಮಾಡಿ ಚೆಲ್ಲೆಕ್ಕು”-ಹೇಳಿ ಹೇಳುಗು!
ಮಾಣಿಯ ಎಲ್ಲಿಗೂ ಕಳಿಸವು-ಅವ ಕಸ್ತಲೆ ಅಪ್ಪಂದ ಮೊದಲು ಮನೆ ಸೇರೆಕ್ಕು.
ತಡವಾದರೆ ಬಾಯಿಗೆ ಬಂದ ಹಾಂಗೆ ಬೈಗು.ಮತ್ತೆ ಪ್ರೀತಿಲಿ ಮಾತಾಡುಗು!

ಶಂಕರ ಭಟ್ರ ಈ ಕ್ರಮ-ಈಗಾಣ ಕಾಲಕ್ಕೆ ಹೊಂದದ್ದ ಕ್ರಮ-ಅವರ ಹೆಂಡತ್ತಿಗೆ ಸರಿ ಆವ್ತಿಲ್ಲೆ.
ಆದರೆ ಅವಕ್ಕೆ ಯಜಮಾನರ ಎದುರು ಮಾತಾಡಿ ಅಭ್ಯಾಸ ಇಲ್ಲೆ.
ಮಾಣಿಯನ್ನೇ ಮಂಕಾಡಿಸಿ ಸಮಾಧಾನ ಮಾಡಿಕೊಂಡಿತ್ತಿದ್ದವು.
ಆದರೆ ನರೇಶ ದೊಡ್ಡ ಆದ ಮೇಲೆ ಅವಕ್ಕೆ ಇಕ್ಕಟ್ಟು ಆತು-ಮಾಡುದೆಂತರ?
ನರೇಶನ ಕಾಲೇಜಿನ ಪ್ರವಾಸಕ್ಕೆ ಮೈಸೂರಿಂಗೆ ಹೋಪಲೆ ಅಪ್ಪ ಒಪ್ಪಿದ್ದವಿಲ್ಲೆ.ಆ ವಿಷಯಲ್ಲಿ ದೊಡ್ಡ ಜಗಳ ಆತು.
“ಇದಾ,ಇದೊಂದಾರಿ ಅವಂಗೆ ಐನೂರು ರೂಪಾಯಿ ಕೊಟ್ಟರೆ ಎಂತ?ಅವಂಗೂ ದೋಸ್ತಿಗಳ ಎದುರು ಮೋರೆ ತೋರ್ಸೆಡದೊ?” ಹೇಳಿ ಅಮ್ಮ ಶಿಫಾರಸ್ಸು ಮಾಡಿದರೂ ಗುಣ ಆತಿಲ್ಲೆ.

ಹೀಂಗಾದ ಮೇಲೆ ಮಗಂಗೆ ಅಪ್ಪನ ಮೇಲೆ ಕೋಪ ಬಂತು.ದಿನಾ ರಣಾಗ್ರ ಮನೆಲಿ!
“ನೋಡು ಮಗಾ,ಆನು ಇಷ್ಟೆಲ್ಲಾ ಕಷ್ಟ ಬಪ್ಪದು ಎಂತಗೆ? ನಿಂಗೊಗೆ ಬೇಕಾಗಿ ಅಲ್ಲದೊ? ಎನಗೆ ನಿನ್ನ ಮೇಲೆ ಹಗೆ ಇದ್ದೊ? ಇಲ್ಲೆ.
ಪೈಸೆ ಹಾಳು ಮಾಡುಲಾಗ.ಸಿಕ್ಕಿದವರ ಹತ್ರೆ ದೋಸ್ತಿ ಮಾಡಲಾಗ. ನಮ್ಮ ಮನೆತನ ಎಂತದು?ಆನು ಎನ್ನ ಅಪ್ಪನ ಹತ್ರೆ ಎದುರು ಮಾತಾಡಿದ್ದಿಲ್ಲೆ ಗೊಂತಿದ್ದೊ?…”ಶಂಕರ ಭಟ್ರು ಮಗಂಗೆ ಬುದ್ಧಿ ಹೇಳುಗು- ಕೋಪ ಇಳಿದ ಮೇಲೆ.

ನರೇಶ ಕೇಳ.ಎದ್ದು ಹೋಕು.
“ಮೀಸೆ ಬಪ್ಪಾಗ ದೇಶ ಕಾಣ ಹೇಳುಗು ಮೊದಲಾಣವು.
ಅದು ಸುಮ್ಮನೆಯೊ? ಎಲ್ಲಾ ಕಲಿಮಹಿಮೆ” -ಹೇಳಿ ಪರಂಚುಗು ಶಂಕರಭಟ್ರು!

* * *

ನರೇಶಂಗೆ ಸುಳ್ಯಲ್ಲಿ ಎಂಜಿನಿಯರಿಂಗ್ ಪ್ರವೇಶ ಆತು.
ಆವಾಗಲೂ ಶಂಕರ ಭಟ್ರು ಅವನ ಹಾಸ್ಟೆಲಿಂಗೆ ಸೇರಿಸಿ ಸುಮಾರು ಬುದ್ಧಿಮಾತು ಹೇಳಿದವು.
‘ಆರೋಗ್ಯ ಹಾಳಾಗದ್ದ ಹಾಂಗೆ ನೋಡೆಕ್ಕು,ಗುರ್ತ ಇಲ್ಲದ್ದವರ ಹತ್ರೆ ಸಲಿಗೆ ಬೇಡ,ಅವು ಕೊಡಿಸಿದ್ದರ ತಿನ್ನೆಡ,
ಪೈಸೆ ಲೆಕ್ಕ ಬರೆದು ಎನಗೆ ತೋರುಸೆಕ್ಕು, ಕತ್ತಲಾದ ಮೇಲೆ ತಿರುಗಲಾಗ,ಜಾಗ್ರತೆ…’ಹೇಳಿ ಹೇಳಿದವು.

* * *

ಈಗ ಅವಂಗೆ ಎಂಜಿನಿಯರಿಂಗ್ ಆಗಿ ಕೆಲಸ ಸಿಕ್ಕಿತ್ತು.ಬೆಂಗಳೂರಿಲಿ.ಶಂಕರಭಟ್ರಿಂಗೆ ಗಾಬರಿ.ಅಲ್ಲಿ ಇಪ್ಪ ತಂಗೆಯ ಗೆಂಡಂಗೆ ಫೋನು ಮಾಡಿ ಎಲ್ಲಾ ವಿವರ ಕೇಳಿದವು.
ಮಗಂಗೆ ಸರಿಯಾದ ಜಾಗೆಲಿ ರೂಮು ಮಾಡಿಸಿ ಕೊಡುಲೆ ಹೇಳಿದವು.ಅವು ಧೈರ್ಯ ಹೇಳಿ ಅಪ್ಪಾಗಲೇ  ಇವಕ್ಕೆ ಸಮಾಧಾನ ಆದ್ದದು.
“ಇದೆಂತ ಅಪ್ಪ? ಈಗ ಎಲ್ಲಾ ಊರಿಂಗೂ ಫೋನು ಇಂಟರ್ ನೆಟ್ ಎಲ್ಲಾ ಇದ್ದು .ಈ ಕಾಲಲ್ಲಿ ಎನ್ನ ಹಾಂಗಿಪ್ಪ ಒಬ್ಬ  ದೊಡ್ಡಾದ ಮಾಣಿ ಬೆಂಗಳೂರಿಂಗೆ ಹೋಪಾಗ ನಿಂಗೊ ಎಂತ ಇಷ್ಟು ಗಾಬರಿ ಮಾಡುದು?”ನರೇಶ ಕೇಳಿದ-ಹೋಪ ದಿನ ಮಧ್ಯಾಹ್ನ.
“ಅಯ್ಯೊ ಮಗ,ನಿನಗೆ ಗೊಂತಿಲ್ಲೆ-ಆನು ಸಣ್ಣ ಪ್ರಾಯಲ್ಲಿ ಕಂಡದು ಇದು-ನಿನಗೆ ಒಬ್ಬ ಅಪ್ಪಚ್ಚಿ ಇದ್ದಿದ್ದ ಗೊಂತಿದ್ದೊ?”
“ಗೊಂತಿದ್ದು,ಅವು ಸಣ್ಣ ಪ್ರಾಯಲ್ಲೇ ತೀರಿಹೋಯಿದವು ಹೇಳಿ ನಿಂಗೊ ಹೇಳಿದ್ದಿರಿ”
“ಅದು ಹಾಂಗಲ್ಲ,ಅದು ಒಂದು ದುರ್ಘಟನೆ…”ಶಂಕರ ಭಟ್ರು ಮನಸ್ಸು ಬಿಚ್ಚಿ ಮಾತಾಡಿದವು.

* * *

“ಆಗ ಆನು ಹತ್ತನೇ ತರಗತಿ ಮುಗಿಸಿ ಮನೆಲಿ ಕೂಯಿದೆ.ನಿನ್ನ ಅಜ್ಜ ಮತ್ತೆ ಮೂರು ವರ್ಷ ಅಪ್ಪಾಗ ತೀರಿ ಹೋದವು.ಮನೆಲಿ ಎನ್ನ ಅಬ್ಬೆ,ಆನು, ತಮ್ಮ ಗೋವಿಂದ,ಇಬ್ಬರು ತಂಗೆಕ್ಕೊ.
ತಂಗೆಕ್ಕಳ ಒಂದೊಂದರ ಒಳ್ಳೆ ಮನೆಗೆ ಸೇರಿಸೆಕ್ಕಾರೆ ಆನು ಎಷ್ಟು ಕಷ್ಟ ಬಯಿಂದೆ?ಆರೂ ಇಲ್ಲೆ ಸಕಾಯಕ್ಕೆ….ಗೋವಿಂದ ಅಕೇರಿಯಾಣವ.ಭಾರಿ ಚುರುಕು.
ಅವನ ಮಾಷ್ಟ್ರಕ್ಕೊಗೆ ಅವ ಹೇಳಿರೆ ಆತು.
ಅವನನ್ನೇ ಹತ್ತನೇಕ್ಲಾಸಿಲಿ ಶಾಲಾನಾಯಕ ಹೇಳಿ ಮಾಡಿದವು.ಆವಾಗ ಈಗಾಣ ಹಾಂಗೆ ಪಾರ್ಟಿ ಇಲ್ಲೆ,

ಕರ್ಚು ಮಾಡೆಕ್ಕು ಹೇಳಿಯೂ ಇಲ್ಲೆ!

ಅವಂಗೆ ಎಲ್ಲರ ದೋಸ್ತಿ ಜಾಸ್ತಿ .ಆನೂ ತಮ್ಮಂಗೆ ಪೈಸೆ ಕೊಟ್ಟ್ಕೊಂಡಿತ್ತಿದ್ದೆ.ಅವನೂ ಪೈಸೆ ಹಾಳು ಮಾಡ.ದುಶ್ಚಟ ಇತ್ತಿಲ್ಲೆ.
ಲಾಯ್ಕದ ಅಂಗಿ ಹೊಲಿಶುದು ,ಪೌಡರು,ಸ್ನೋ,ತಲೆಗೆ ಎಂತದೊ ಎಣ್ಣೆ-ಹೀಂಗೆಲ್ಲಾ  ಕರ್ಚು ಮಾಡುಗು.ಸಣ್ಣ ಅಲ್ಲದೊ?
ಆಗ ನಮ್ಮ ಶಾಲೆಲಿ ಮುಖ್ಯೋಪಾಧ್ಯಾಯ ಆಗಿ ಉಮೇಶ ಕಾರಂತ ಹೇಳಿ ಇದ್ದಿದ್ದವು.

ಅವಕ್ಕೆ ತೆಂಗಿನಕಾಯಿ ನಮ್ಮ ಮನೆಂದಲೇ ಹೋಪದು.
ಆಗ ಎಂಗೊಗೆ ಶಾಲೆಗೆ ಸಂಬಳ ಹೇಳಿ[ಫೀಸು]ಕಟ್ಟಲೆ ಇತ್ತು.ಅದಕ್ಕೆ ಲೆಕ್ಕ ವಜಾ ಮಾಡುಗು.
ಗೋವಿಂದನ ಎಸ್.ಎಸ್.ಎಲ್.ಸಿ.ಮುಗಿದಪ್ಪಾಗ ಅವು ನಿವೃತ್ತಿ ಆಗಿ ಪುತ್ತೂರಿಲಿ ಬಿಡಾರ ಮಾಡಿದವು. ಅಲ್ಲಿ ಕೋಲೇಜಿಂಗೆ ಸೇರುಸಲಕ್ಕು ಹೇಳಿ ಕಾಗದ ಬರದವು.ಅವರ ಮನೆಲೇ ವಾಸ್ತವ್ಯ ಮಾಡಲೂ ಅಕ್ಕು ಹೇಳಿದವು.ಅವರ ಪ್ರೀತಿ ದೊಡ್ಡದು.ಆದರೆ ನವಗೆ ಯೋಗ ಬೇಕನ್ನೆ?
ಎನ್ನ ಅಬ್ಬೆಯೂ ಒಪ್ಪಿತ್ತು. ಗೋವಿಂದಂಗೂ ಉತ್ಸಾಹ. ಪುತ್ತೂರಿಂಗೆ ಅವನ ಕರಕ್ಕೊಂಡು ಹೋದೆ.ಕಾಲೇಜಿಂಗೆ ಸೇರಿಸಿ ಬಂದೆ.

ಆದರೆ ಅಂತಾ ಮಾಣಿಗೆ ಎಂತ ಆಗಿ ಹೋತೊ? ಎರಡು ತಿಂಗಳು ಕಳುದತ್ತು.ಗೋವಿಂದನಿಂದ ಕಾಗದ ಬಂದೊಂಡಿತ್ತು. ಆರೋಗ್ಯವಾಗಿ ಇತ್ತಿದ್ದ.ಕಲಿಯುವಿಕೆಲೂ ಮುಂದೆ ಇದ್ದಿದ್ದ.
ಆನು ಒಂದು ದಿನ ನಮ್ಮ ತೋಟದ ಕಟ್ಟಪ್ಪುಣಿ ರಿಪೇರಿ ಮಾಡಿಸಿಕೊಂಡಿತ್ತಿದ್ದೆ. ಮಳೆಗಾಲಲ್ಲಿ ರಜಾ ಜರಿದು ಬಿದ್ದೊಂಡು ಇತ್ತು-ಹಾಂಗಾಗಿ.
ಅಷ್ಟಪ್ಪಾಗ ಕೆಲಸದ ಹೆಣ್ಣು ರಾಧೆ ಓಡಿಯೊಂಡು ಬಂತು-“ಅಣ್ಣೆರೇ,ನಿಂಗಳ ತಮ್ಮಂಗೆ ಎಂತದೋ ಆಯಿದು.ಬೇಗ ಬರೆಕಡ..”ಹೇಳಿ ಹೇಳಿತ್ತು.

ಗಾಬರಿ ಆಗಿ,ಮನೆಗೆ ಸೇಕು ಬಿಟ್ಟೊಂದು ಓಡಿದೆ-ಮನೆಲಿ ಎಲ್ಲರೂ ಕೂಗುತ್ತಾ ಇದ್ದವು.
ಎನ್ನ ತಮ್ಮ ಗೋವಿಂದ,ಕೊಡೆಯಾಲಲ್ಲಿ ರೈಲಾಫೀಸಿಲಿ ಇದ್ದ ಅಡ-ಅವ ನಮ್ಮ ಬಿಟ್ಟು ಹೋದ….ಡಾಕ್ಟರಿಂಗೆ ಫೋನು ಬಯಿಂದಡ.
ಆವಾಗ ಫೋನು ಇದ್ದದು ಡಾಕ್ಟರ ಹತ್ತರೆ ಮಾತ್ರ.ಅವಕ್ಕೆ ನಮ್ಮ ಊರವು ಆರೊ ಕೊಡೆಯಾಲಂದ ಫೋನು ಮಾಡಿದ್ದವು.
ಎನಗೆ ತಲೆ ತಿರುಗಿದ ಹಾಂಗೆ ಆತು.ಎನ್ನ ಸೋದರಮಾವನ ಮಗ ರಾಮನ ದಿನುಗೋಳಿದೆ-ಇಬ್ಬರೂ ಯೇವದೊ ಕಾರಿಲಿ ಹೋದೆಯೊ.
ಅಲ್ಲಿ ರೈಲಾಫೀಸಿಲಿ ಎನ್ನ ತಮ್ಮ ಬೆಂಚಿಲಿ ಮನಿಗಿದ್ದ..ಅವನ ಮೋರೆ ನೀಲಿಕಟ್ಟಿದ್ದು.ಬಾಯಿ ಅರ್ಧ ಒಡಕ್ಕೊಂಡಿತ್ತು…ರಜಾ ಕಾರಿದ ಹಾಂಗೆ ಇತ್ತು..

ಇಬ್ಬರು ಪೋಲೀಸಿನವು ಇದ್ದವು,ರೈಲಿನ ಕೂಲಿಯವು ಅಲ್ಲಿ ಇದ್ದವು. ಅವು ಎಲ್ಲಾ ಎಂಗೊಗೆ ತೋರಿಸಿದವು-ಗಂಭೀರವಾಗಿ ನಿಂದವು.
ಆಗ ನಮ್ಮ ಪೇಟೆಯ ಶೆಣೈ ಅಲ್ಲಿ ಇತ್ತಿದ್ದವು.ಅವು ಹೇಳಿದ ಪ್ರಕಾರ,ಅವು ಬಂಡಸಾಲೆಗೆ ಹೇಳಿ ಬಂದವು, ಬಂಡಿ ಇಳಿದು ಬಪ್ಪಾಗ ಇಲ್ಲಿ ಆರೋ ಮನಿಗಿದ್ದವು , ಜೀವ ಇಲ್ಲೆ ಹೇಳಿ ಗೊಂತಾಗಿ ,ನೋಡಿದವು.ಇವನ ಗುರ್ತ ಸಿಕ್ಕಿ,ಡಾಕ್ಟರಿಂಗೆ ಫೋನು ಮಾಡಿ,ತಿಳಿಸುವ ಉಪಕಾರ ಮಾಡಿದ್ದವು.

ಎನ್ನ ದೊಂಡೆ ಕಟ್ಟಿತ್ತು.ಶೆಣೈಮಾಮಂಗೆ ಥೇಂಕ್ಸ್ ಹೇಳಲೂ ಎನಗೆ ಅರಡಿಯ.
ಎನಗೆ ಆವಾಗ  ಕೊಡೆಯಾಲ ಪೇಟೆ ಏನೂ ಗೊಂತಿಲ್ಲೆ.ರಾಮಂಗೂ ಅಷ್ಟೆ.ಬೆಪ್ಪನ ಹಾಂಗೆ ಆತು.ಎಂತ ಮಾಡುದು?
ರೈಲಾಫೀಸಿನವು ಹೇಳಿದವು-ಗೋವಿಂದ ನಡುಇರುಳು ಮತ್ತೊಬ್ಬನ ಒಟ್ಟಿಂಗೆ ಅಲ್ಲಿಗೆ ಬಂದ ಅಡ. ರಜಾ ಹೊತ್ತು ಮಾತಾಡಿಕ್ಕಿ ಆ ಜೆನ ಹೋತಡ.

ಮತ್ತೆ ಇವ ಮನಿಗಿದ.
ಉದಯಕಾಲಕ್ಕೆ ಅವ ನರಳಿದ ಸ್ವರ ಕೇಳಿ ಆರೊ ನೋಡುವಾಗ ಜೀವ ಹೋಯಿದು ಹೇಳಿ ಗೊಂತಾತು.
ಮತ್ತೆ ಅಲ್ಲಿ ಇಪ್ಪವು ಸಕಾಯ ಮಾಡಿದವು. ಪೋಲೀಸಿನವು ಅವನ ಕೊಂಡೋಗಿ ವೆನ್ ಲಾಕ್ ಆಸ್ಪತ್ರೆಲಿ ಪೋಸ್ಟ್ ಮಾರ್ಟಮ್ ಮಾಡಿಸಿದವು.

ಗೋಳಿಸೋಡಲ್ಲಿ ವಿಷ ಹಾಕಿ ಆರೋ ಕೊಟ್ಟಿದವು ಹೇಳಿ ಗೊಂತಾತು.
ಆನು ಕಾರಂತ ಮಾಷ್ಟ್ರಿಂಗೆ ಕಂಬಿ ಕಳಿಸಿದೆ.ಎಂಗೊ ಕೊಡೆಯಾಲಂದ ಬಪ್ಪ ಹೊತ್ತಿಂಗೆ ಅವೂ ಇಲ್ಲಿಗೆ ಬಂದವು.

ಗೋವಿಂದನ ಶವವ ಮನೆಗೆ ತಯಿಂದಿಲ್ಲೆ. ಅಬ್ಬೆಗೆ ಎಂತಗೆ ಅವನ ತೋರಿಸುದು?ಇಲ್ಲೇ ಹತ್ತರೆ ನಮ್ಮ ಜಾಗೆಲೆ ಅವನ ಸುಟ್ಟದು.
ಇದೇ ಕೈಂದ ಆನು ಎನ್ನ ತಮ್ಮನ ಕಾಷ್ಟಕ್ಕೆ ಕಿಚ್ಚು ಕೊಟ್ಟೆ….. -ಶಂಕರ ಭಟ್ರು ಆವಾಗಾಣ ದುಃಖ ಮರುಕಳಿಸಿ ಗದ್ಗದಿತ ಆದವು.

“ಪೊಲೀಸು ಕೇಸು ಆಯಿದಿಲ್ಲೆಯೊ?”ನರೇಶ ಕೇಳಿದ.
“ಹಾಕಿದ್ದವು.ನಿಂಗೊಗೆ ಆರ ಮೇಲೆ ಸಂಶಯ ಇದ್ದು ಹೇಳಿ ಕೇಳಿದವು.ಎನಗೆ ಆರ ಮೇಲೂ ಸಂಶಯ ಇಲ್ಲೆ.
ಗೋವಿಂದ ಕಲಿತ್ತ ಮಾಣಿ,ಅವಂಗೆ ಆರೂ ವಿರೋಧಿಗೊ ಇಲ್ಲೆ.ನವಗೂ ಅಷ್ಟೆ.
ಅವ ಆತ್ಮಹತ್ಯೆ ಮಾಡಿದ್ದಾಯಿಕ್ಕು ಹೇಳಲೆ ಕಾರಣವೇ ಇಲ್ಲೆ. ಅವಂಗೆ ಎಂತಾಯಿದು?ಮನೆಲಿ ಹಿರಿಯೋಳ್ತಿಯಾಗಿ ಅಬ್ಬೆ ಇದ್ದು.ಆನು ಇದ್ದೆ.

ಕಾರಂತ ಮಾಷ್ಟ್ರು ಅವನ  ಸ್ವಂತ ಮಗನ ಹಾಂಗೆ ಕಂಡೊಂಡಿದ್ದಿದ್ದವು.
ಅವರ ಹತ್ರೆ ಎರಡು ದಿನದ ಮಟ್ಟಿಂಗೆ ಊರಿಂಗೆ ಹೋಗಿ ಬತ್ತೆ ಹೇಳಿ ಹೇಳಿದ್ದ ಅಡ.
ಅವ ಹೋದ್ದದು ಕೊಡೆಯಾಲಕ್ಕೆ.ಅವನ ಕಿಸೆಲಿ ಸಿನೆಮಾ ಕೊಟ್ಟಗೆಯ ಟಿಕೇಟು ,ಊರಿಂಗೆ ಬಂಡಿಯ ಟಿಕೇಟು ಇತ್ತು.ಬಂಡಿಗೆ ಅವ ಹತ್ತಿದ್ದ ಇಲ್ಲೆ.

ಹಾಂಗಾರೆ ಸಿನೆಮಕ್ಕೆ ಆರೊಟ್ಟಿಂಗೆ ಬಂದದು?ಅವನ ಗೆಳೆಯರ ಹತ್ತರೆ ಕೇಳಿ ಅಪ್ಪಗ, ಅವು ಆರೂ ಒಟ್ಟಿಂಗೆ ಬಯಿಂದವಿಲ್ಲೆ,ಅವ ಹೇಳಿದ್ದನೂ ಇಲ್ಲೆ ಹೇಳಿ ಗೊಂತಾತು.
ಮತ್ತೆ ಪೋಲೀಸರು ತನಿಖೆ ಮಾಡಿ ಕೇಸಿನ ಕ್ಲೋಸು ಮಾಡಿದವು. ಆನು ತಮ್ಮನ ಉತ್ತರಕ್ರಿಯೆ ಎಲ್ಲಾ ಸರಿಯಾಗಿ,ಸಣ್ಣ ಮಟ್ಟಿಂಗೆ ಮಾಡಿದೆ.ದೊಡ್ಡವರು ಜೋಯಿಸರ ಹತ್ತರೆ ಕೇಳುಲಕ್ಕು ಹೇಳಿದವು.

ತೆಂಕಲಾಗಿ,ಪಯ್ಯನ್ನೂರಿಂಗೆ ಹೋಗಿ ಪ್ರಶ್ನೆ ಮಡುಗಿಸಿ ಆತು.
ಆರೋ ಮೂಡಲಾಗಿನವು ಅವನ ಗುರ್ತದವು ಬಂದು ಅವಂಗೆ ವಿಷ ಕುಡಿಸಿ ಕೊಂದಿದವು ಹೇಳಿ ಗೊಂತಾತು.
ಮೂಡಲಾಗಿನವು ಹೇಳಿದರೆ ಎಲ್ಲಿ,ಹೇಂಗೆ ಹೇಳುದು?ಕೊಡೆಯಾಲಕ್ಕೆ ಪಡುವಲಾಗಿ ಕಡಲು ಇಪ್ಪದಲ್ಲದೊ?
ಮತ್ತೆ ಎಲ್ಲಿ ಹುಡುಕ್ಕುದು?ಹುಡುಕ್ಕಲೆ ಆನೇ ಹೋಯೆಕ್ಕು.ಆನು ಹೋದರೆ ಇಲ್ಲಿ ಮನೆಲಿ ನೋಡುಲೆ ಆರಿದ್ದವು?
ಆತು,ಕೊಲೆಗಾರನ ಪತ್ತೆ ಮಾಡಿದರೂ ನಮ್ಮ ಗೋವಿಂದ ಮತ್ತೆ ಸಿಕ್ಕುಗೊ?ಆ ದೇವರೇ ಗೋವಿಂದನ ಎನಗೆ ಕೊಟ್ಟದು,ಅವನೇ ಈಗ ತೆಕ್ಕೊಂಡ-
ಹೇಳಿ ಎನ್ನ ಅಬ್ಬೆ ಕಣ್ಣನೀರು ಹಾಕಿತ್ತು.ಅದರ ಬಿಟ್ಟು ಆನು ಎಲ್ಲಿಗೆ ಹೋಪದು?ಎಲ್ಲಾ ದೈವೇಚ್ಛೆ…..

ಹೀಂಗೆ ಸಮಾಧಾನ ಮಾಡಿಕೊಂಡೆಯೊ” ಹೇಳಿದವು ಶಂಕರ ಭಟ್ರು.
“ಹಾಂಗಾರೆ…ಹಾಂಗಾರೆ…ಕೊಂದವನ ಪತ್ತೆ ಆಯಿದೇ ಇಲ್ಲೆ…ಆರು ಕೊಂದದು-ಹೇಳಿ ನಿಂಗಳ ಅಂದಾಜಿ?”
“ಎಂಗಳ ಅಂದಾಜಿ-ಗೋವಿಂದಂಗೆ ಪ್ರಾಯಂದ ಹೆಚ್ಚು ಬೆಳವಣಿಗೆ ಇತ್ತು.ಎಲ್ಲರ ಹತ್ತರೂ ಗುರ್ತ ಮಾಡಿ ಮಾತಾಡುವ ಅಭ್ಯಾಸ ಇತ್ತು.
ದೊಡ್ಡವರ ಮಕ್ಕಳ ಹಾಂಗೆ ಇದ್ದಿದ್ದ. ಕೈಲಿ ವಾಚು ಇತ್ತು.ಎಲ್ಲರ ಹತ್ತರೂ ದೋಸ್ತಿಯೇ. ಹಾಂಗೆ ಆರನ್ನೊ ಗುರ್ತ ಮಾಡಿಕೊಂಡು ಕೊಡೆಯಾಲಕ್ಕೆ ಬಂದ-ಸಿನೆಮಾ ನೋಡಿದ.
ಇವನ ವೇಷ ನೋಡಿ ಇವ ಶ್ರೀಮಂತರ ಮಗ ಹೇಳಿ ಆ ಗ್ರಾಯಕಿ ಜಾನಿಸಿಕ್ಕು.
ಆ ಮೂರ್ಖಂಗೆ ಸಿಕ್ಕಿದ್ದು ಒಂದು ವಾಚು ಮತ್ತೆ ಚಿಲ್ಲರೆ ಪೈಸೆ ಮಾತ್ರ.
ಅನ್ಯಾಯವಾಗಿ ,ಪಾಪದ ಮಾಣಿಯ ಪ್ರಾಣ ತಿಂದತ್ತು…. -ಹೇಳಿದವು ಶಂಕರಭಟ್ರು.

ನರೇಶಂಗೆ ತುಂಬಾ ಬೇಜಾರಾತು.ಪತ್ತೇದಾರಿ ಕತೆಗಳ ನೋಡಿರೆ,ಎಂತೆಂತದೊ ಕೊಲೆ ,ಕಳವು ಎಲ್ಲಾ ಪತ್ತೆ ಆವುತ್ತು.
ಆದರೆ,ನವಗೆ ನಮ್ಮದೇ ಮನೆಯ ಸದಸ್ಯನ ಕೊಲೆಯ ಪತ್ತೆ ಮಾಡುಲೆ ಆಯಿದಿಲ್ಲೆ.ಇನ್ನು ಎಂತ ಮಾಡುವ ಹಾಂಗೂ ಇಲ್ಲೆ.
ಕೊಲೆಗಾರ ತಪ್ಪಿಸಿಕೊಂಡದೇ….ಯಾವ ಮಾರ್ಗವೂ ಇಲ್ಲೆ.ಅವನ ಸ್ವರ ನಡುಗಿತ್ತು-ಅಪ್ಪನ ಕೈ ಹಿಡಿಕ್ಕೊಂಡ.

“ಅಪ್ಪಾ,ಈ ಸಂಗತಿ ಎನ್ನ ಹತ್ತರೆ ಮೊದಲೇ ಹೇಳೆಕ್ಕಾತು ನಿಂಗೊ.ನಿಂಗೊ ಯಾವಾಗಳೂ ಎನ್ನತ್ತರೆ ಲೆಕ್ಕ ಕೇಳುದು,ತಡ ಮಾಡಿರೆ ಬೈವದು, ಜಾಗ್ರತೆ ಮಾಡುದು ಕಂಡು ಎನಗೆ ಬೇಜಾರಾಗಿತ್ತು.ಅಪ್ಪಚ್ಚಿಗೆ ಆದ ಹಾಂಗೆ ಎನಗೂ ಆರಾರೂ ಮೋಸ ಮಾಡಿದರೆ-ಹೇಳಿ ನಿಂಗೊ ಜಾಗ್ರತೆ ವಹಿಸುದು-ಅಲ್ಲದೊ?”
ಹೇಳಿ ಹೇಳಿದ.
“ಅಪ್ಪು ಮಗಾ.ಆದರೆ ಈ ವಿಷಯ ನೀನು ಸಣ್ಣ ಇಪ್ಪಾಗಳೇ ಹೇಳಿರೆ,ನಿನಗೆ ಎಲ್ಲರ ಮೇಲೂ ಸಂಶಯ ಬಕ್ಕು.ಹಾಂಗೆ ಅಪ್ಪಲೂ ಆಗ.
ಲೋಕಲ್ಲಿ ಸಾಧುಗಳೂ,ಕೆಟ್ಟವೂ ಇರುತ್ತವು.ನಾವು ನಮ್ಮ ಜಾಗ್ರತೆಲಿ ಇರೆಕ್ಕು.ಹಾಂಗಾರೆ ಏವ ಭಯವೂ ಇಲ್ಲೆ”ಹೇಳಿ ಮಗನ ತಲೆಗೆ ಕೈ ಮಡುಗಿದವು ಶಂಕರಭಟ್ರು.
ಅಪ್ಪ ಮಗನ ಶೀತಲ ಯುದ್ಧ ಅಂದಿಂಗೆ ಮುಗುದತ್ತು.
ನರೇಶ ಅಪ್ಪ ಅಮ್ಮನ ಕಾಲು ಹಿಡಿದು ಬೆಂಗಳೂರಿಂಗೆ  ಹೋದ.

[ನೈಜ ಘಟನೆಂದ ಪ್ರೇರಿತ]

13 thoughts on “ಆರು ಆ ಗುರ್ತದವ?

  1. ಕತೆ ಭಾರಿ ಲಾಯ್ಕ ಆಯಿದು ಗೋಪಾಲಣ್ಣ.. ಒಂದು ಒಪ್ಪ..ಃ)

  2. ಈ ಕತೆಯ ಒಳಾಣ ಗೋವಿಂದನ ಕತೆ ನೈಜ ಘಟನೆಯ ಆಧಾರಿತ.ಎಂಗಳ ಮನೆಲಿ ನಡದ್ದು.[ಎಲ್ಲಾ ವಿವರ ನೈಜ ಅಲ್ಲ].ಬಾಕಿ ಎಲ್ಲಾ ಕಾಲ್ಪನಿಕ.
    ಈ ಕತೆಯ ಆನು ಕನ್ನಡಲ್ಲಿ”ಪತ್ತೆಯಾಗದ ಪರಿಚಿತ” ಹೇಳಿ ಬರೆದ್ದೆ. ಕರ್ಮವೀರಲ್ಲಿ ಪ್ರಕಟ ಆಯಿದು.
    ಜೀವನಲ್ಲಿ ಒಂದು ದುರಂತ ನಡೆದರೆ ಅದು ನಮ್ಮ ಹಲವು ವರ್ಷ ಕಾಡುತ್ತು-ಇದು ಸತ್ಯ.
    ಈ ಕತೆಯ ಮೆಚ್ಚಿದ ಎಲ್ಲರಿಂಗೂ ಧನ್ಯವಾದ.

  3. ಗೋಪಾಲಣ್ಣ,
    ಕಥೆ ಲಾಯ್ಕ ಆಯಿದು.ಹಿರಿಯರು ಅಗತ್ಯ ಇಲ್ಲದ್ದ ಖರ್ಚಿ೦ಗೆಲ್ಲಾ ವಿರೋಧ ಹೇಳುಗು,ಉಳಿತಾಯದ ಮಹತ್ವಕ್ಕೆ ಎಷ್ಟೋ ಉದಾಹರಣೆ ಕೊಟ್ಟು ಮಕ್ಕಳ ಆ ದಾರಿಲಿ ಮು೦ದರುಶುಗು.
    ಗೋವಿ೦ದನ ಮರಣದ ಶುದ್ದಿಯ ಗ್ರೇಶೊಗ ದುಃಖ ಬ೦ತು. ನೆಡದ ಘಟನೆಯೋ ಇದು?
    ಕಥೆ ಮುಗುಶಿದ ಕ್ರಮ ನೆಮ್ಮದಿ ಕೊಟ್ಟತ್ತು.ಚೆ೦ದದ ನಿರೂಪಣೆ.

  4. ಗೋಪಾಲ,
    ಆಗ ಬಾರದ್ದು ಆಗಿ ಹೋದ ನೈಜ ಘ್ಹಟನೆಯ ನಿರೂಪಣೆ ಲಾಯಿಕ ಆಯಿದು. ನೆಂಪು ಹಲವಾರು ವರ್ಷ ಹಿಂದಂಗೆ ಹೋತು.
    ಎಲ್ಲದಕ್ಕೂ ಲೆಕ್ಕ ಬರದು ಮಡುಗೆಕ್ಕು ಹೇಳಿ ಅಜ್ಜನ ತಾಕೀತು ಎಂಗೊಗೆ.
    ಸಮಯ ಪರಿಪಾಲನೆ, ಅನಗತ್ಯದ ಖರ್ಚಿಂಗೆ ಕಡಿವಾಣ, ಮಾಡ್ತ ಕೆಲಸಲ್ಲಿ ಶ್ರದ್ಧೆ, ಲೊಟ್ಟೆ ಹೇಳ್ಲಾಗ, ಬೇರೆಯವರತ್ರೆ ಇಪ್ಪದಕ್ಕೆ ಆಶೆ ಪಡ್ಲಾಗ, ಇದೆಲ್ಲಾ ಮನೆ ಪಾಠಂಗೊ ಅಜ್ಜನಿಂದ ಆಗಿಂಡು ಇತ್ತು
    ಅಂಬಗ ಇದೆಲ್ಲಾ ಅನಗತ್ಯ ಹೇಳಿ ಕಂಡರೂ, ಈಗ ಅದರ ಅರ್ಥವೂ ಆಯಿದು, ಅನುಭವವೂ ಆಯಿದು.

  5. [ಮಗಾ.ಆದರೆ ಈ ವಿಷಯ ನೀನು ಸಣ್ಣ ಇಪ್ಪಾಗಳೇ ಹೇಳಿರೆ,ನಿನಗೆ ಎಲ್ಲರ ಮೇಲೂ ಸಂಶಯ ಬಕ್ಕು.ಹಾಂಗೆ ಅಪ್ಪಲೂ ಆಗ.
    ಲೋಕಲ್ಲಿ ಸಾಧುಗಳೂ,ಕೆಟ್ಟವೂ ಇರುತ್ತವು.ನಾವು ನಮ್ಮ ಜಾಗ್ರತೆಲಿ ಇರೆಕ್ಕು.ಹಾಂಗಾರೆ ಏವ ಭಯವೂ ಇಲ್ಲೆ]

    ಲಾಯ್ಕಾಯಿದು..

  6. ತು೦ಬಾ ವಸ್ತು ನಿಷ್ಟ ಕತೆ.ಗೊಪಾಲಣ್ಣೋ ಬರಲಿ ಹಿ೦ಗಿಪ್ಪ ಎದರಿ೦ದ ವಿಷೇಷದ ಕತಗೊ.ಹರ್ದಿಕ್ಕ ಅಭಿನ೦ದನಗೊ.ಒಪ್ಪ೦ಗಳೊಟ್ಟಿ೦ಗೆ

  7. ಗೋಪಾಲಣ್ಣ ಬರದ ಮತ್ತೊಂದು ಅದ್ಭುತ ಕಥೆ. ಅವು ಬರೆತ್ತ ಶೈಲಿಯೇ ಓದುಸೆಂಡು ಹೋವ್ತ ಹಾಂಗೆ ಮಾಡ್ತು. ಕಥೆಲಿ ಅಪ್ಪ- ಮಕ್ಕಳ ನಡುವೆ ನೆಡೆತ್ತ ಶೀತಲ ಸಮರವ, ನವಿರಾದ ಸಂಬಂಧವ ಚೆಂದಕೆ ವಿವರುಸಿದ್ದವು. ತಮ್ಮ ಗೋವಿಂದನ ದುರ್ಮರಣವ ಮನಸ್ಸಿನ ಒಳವೆ ಮಡಗೆಂಡು, ಮಗನ ಉತ್ತಮ ಭವಿಷ್ಯವ ಮನಸ್ಸಿಲ್ಲಿ ಹಾರೈಸೆಂಡಿದ್ದಿದ್ದ ಶಂಕರ ಭಟ್ಟರ ರೂಪ ಕಣ್ಣೆದುರು ಬಂತು. ಅಪ್ಪ ಮಗನ ಸಂವಾದದ ಎಡೆಲಿ ಬಂದ ಹಿಂದಾಣ ಕಥೆ, ಕಥೆಗೆ ಒಳ್ಳೆಯ ತಿರುವು ಕೊಟ್ಟಿದು. ಪ್ರೀತಿಯ ತಮ್ಮ ಗೋವಿಂದ, ಶವವಾಗಿ ಮನುಗೆಂಡಿಪ್ಪ ವಿಷಯವ ಓದುವ ಓದುಗನ ಕಣ್ಣಿಲ್ಲಿ ಎರಡು ನೀರ ಹನಿ ಬತ್ತದಂತೂ ಖಂಡಿತ. ಬೆಳೆತ್ತ ಇಪ್ಪ ಮಕ್ಕೊಗೆ ಒಳ್ಳೆ ಸಂದೇಶ ಕೊಡುತ್ತ ಕಥೆ.
    ಗೋಪಾಲಣ್ಣ, ಕಥೆ ಎನ್ನ ಮನಸ್ಸು ತಟ್ಟಿತ್ತು. ಅಭಿನಂದನೆಗೊ.

  8. ಗೋಪಾಲಣ್ಣನ ಶೈಲಿಯೇ ಪ್ರತ್ಯೇಕ ವಿಶೇಷತೆ. ಅತೀ ಸರಳ ಮತ್ತು ಮನ ನಾಟುವ ಧಾಟಿ. ಮಕ್ಕಳಿಂದ ಮುದಿಯರ ವರೇಂಗೆ ಓದಿಸಿಗೊಂಡು ಹೋಕು. ಪ್ರತಿ ಕಥೇಲಿ ಒಂದು ತಿರುಳು. ಲಾಯಕ್ಕಾಯಿದು ಹೇಳಿ ನಮ್ಮೊಪ್ಪ.

  9. ಲಾಯ್ಕಿದ್ದು.. ಒಪ್ಪ೦ಗೊ. ಮಕ್ಕೊಗೆ ಕಿರಿಕಿರಿ ಕ೦ಡರುದೆ ಅವರ ಸಹವಾಸ ಸ೦ಸರ್ಗ ಹೇ೦ಗಿದ್ದು, ಆರೊಟ್ಟಿ೦ಗೆ ಹೋವ್ತವು ಎ೦ತ ಮಾಡ್ತವು ಹೇಳಿ ನೋಡಿಗೋಳೆಕಾದ್ದು ಹೆರಿಯವರ ಕರ್ತವ್ಯವೇ. ಈಗಾಣ ಕಾಲಲ್ಲಿ ಹಾ೦ಗೆ ನೋಡುವದು ಕಮ್ಮಿ ಆದ್ದದುದೆ ಹೆತ್ತವರಿಗೆ ಹೆಗ್ಗಣ ಮುದ್ದು ಹೇಳ್ತ ಹಾ೦ಗೆ ಕಣ್ಣು ಮುಚ್ಚಿ ಎನ್ನ ಮಗ/ಮಗಳು ದೇವರು ಕುನ್ಹಿ ಹೇಳಿ ನ೦ಬುವದರದ್ದುದೆ ಈಗಾಣ ಸಮಾಜಲ್ಲಿ ನೋಡಿರೆ ಸರಿಯಾಗಿ ಗೊ೦ತಾವ್ತು.

  10. ಕತೆ ಲಾಯಿಕ್ಕಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×