Oppanna.com

ನಾಕಾಣೆ ಇನ್ನು ಕಾಣೆ!

ಬರದೋರು :   ಗೋಪಾಲಣ್ಣ    on   02/07/2011    9 ಒಪ್ಪಂಗೊ

ಗೋಪಾಲಣ್ಣ

ಇನ್ನು ಮುಂದೆ ನಾಕಾಣೆ [೨೫ ಪೈಸೆ] ಅಧಿಕೃತವಾಗಿ ಚಲಾವಣೆ ಇಲ್ಲೆ.ಒಂದು ರೂಪಾಯಿ=ಹದಿನಾರು ಆಣೆ. ೪ ಆಣೆ ಹೇಳಿದರೆ ರೂಪಾಯಿಯ ಕಾಲು ಭಾಗ.[ಇದು ೧೯೫೬ ರ ಹಿಂದಿನ ಲೆಕ್ಕ].

ಜುಲಾಯಿ ೧ ರಿಂದ ಸರ್ಕಾರ ಈ ಕ್ರಮ ಜಾರಿಗೆ ತಯಿಂದು.ಇನ್ನು ಬೇಂಕಿಲಿ ೧,೨,೩,೫,೧೦,೨೦ ಮತ್ತೆ ೨೫ ಪೈಸೆಯ ಬದಲಾಯಿಸಿ ಕೊಡವು.

ಕೆಲವರಿಂಗೆ ನೆಂಪಿಕ್ಕು-೨೫ ಪೈಸೆಗೆ ಒಂದು ಪೋಸ್ಟ್ ಕವರು ಸಿಕ್ಕಿಕೊಂಡಿತ್ತಿದ್ದು-೧೯೭೭ ರಲ್ಲಿ.ಉದಯವಾಣಿ ಸಿಕ್ಕಿಕೊಂಡಿತ್ತಿದ್ದು.ಹತ್ತಿರದ ಊರಿಂಗೆ ಹೋಗಿ ಬಪ್ಪಲೆ ಆಗಿಕೊಂಡಿತ್ತಿದ್ದು.[ಶಾಲೆ ಕಾಲೇಜುಗೊಕ್ಕೆ!]

ಇಷ್ಟು ಬೇಗ ನಾಕಾಣೆ ಕಾಣೆ ಆದ್ದದು ನಮ್ಮ ಹಣದುಬ್ಬರದ ಕಾರಣಂದಾಗಿ.

ಹಳೆ ಕಾಲಲ್ಲಿ ನಾಕಾಣೆಗೆ ಚಕ್ರ ಹೇಳಿ ಹೆಸರು. ನಾಕಾಣೆ ದಕ್ಷಿಣೆ ಕೊಟ್ಟವು ದೊಡ್ಡ ಶ್ರೀಮಂತರು ಹೇಳಿ ಲೆಕ್ಕ.ಚಕ್ರಕೋಡಿ ಹೇಳುವ ಮನೆತನಕ್ಕೆ ಒಂದನೇ ಮರ್ಯಾದೆ[ ಶುಭ ಕಾರ್ಯಂಗಳಲ್ಲಿ ಸುರುವಿಂಗೆ ದಕ್ಷಿಣೆ ಕೊಡುದು] ಹೇಳಿ ಲೆಕ್ಕ ಇತ್ತು-ಈಗಲೂ ಅನುಸರಿಸುತ್ತವು.

ನಮ್ಮ ಸಂಸ್ಕೃತಿಯ ಭಾಗ ಆದ ನಾಕಾಣೆಗೆ ಭಾವಪೂರ್ಣ ಶ್ರದ್ಧಾಂಜಲಿ.

9 thoughts on “ನಾಕಾಣೆ ಇನ್ನು ಕಾಣೆ!

  1. ಮೊದಲೆಲ್ಲಾ ನಾಕಾಣೆಗೆ ಒಂದು orange ಮಿಠಾಯಿ ಸಿಕ್ಕಿಗೊಂಡಿತ್ತು. ಇನ್ನು ಅದರ ಒತ್ತೆಯಾಗಿ ತೆಗವಲೆ ಎಡಿಯನ್ನೆ 🙁
    ಮತ್ತೆ 1000, 500 ರೂ ನೋಟುಗಳ ನಿಷೇಧ ಮಾಡಿದರೆ ಹಣದುಬ್ಬರ ರಜ್ಜ ಇಳಿಗು ಹೇಳಿ ಎನ್ನ ಅನಿಸಿಕೆ.

  2. ಗೋಪಾ ಮಾವು..
    ನಿ೦ಗೊ ಹೇಳಿದಾ೦ಗೆ – ೧,೫,೧೦,೨೦.. ಈಗ ೨೫ ಪಾವಲಿ ಚಲಾವಣಿ “ಬ೦ದ್” .. ಇದರ ಮೂಲ ಕಾರಣ ದಿನದಿ೦ದ ದಿನಕ್ಕೆ ಏರುತ್ತಿಪ್ಪಾ Inflation rate, ನಮ್ಮ ಪೈಸೆಯ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಲಿ ಕಮ್ಮಿಯಪ್ಪದು..

    ಮತ್ತೆ ಒ೦ದು ೨೫ ಪೈಸೆ ನಾಣ್ಯವ ಮಾಡೆಕಾರೆ ಅದರ – manufacturing Cost ೨೫ ಪೈಸೆ೦ದಲೂ ಜಾಶ್ತಿ ಹೇಳುವ ವಿಚಾರ ನವಗೆ ಗೊ೦ತಿದ್ದು..
    ಈ ಕಾರಣ೦ದ, ಇದರ ಚಲಾವಣೆ ನಿಲ್ಲುಸುತ್ತದು..

    ಮತ್ತೆ ನಮ್ಮ ರಘು ಭಾವ ಹೇಳಿದಾ೦ಗೆ ಇ೦ದಿಗೆ ೨೫ ಪೈಗೆ ಎ೦ತ ಮಣ್ಣು ಸಿಕ್ಕುತಿಲ್ಲೆ..
    ಆದರೆ, ೧೦೦ರು ೨೫ ಪೈ ನಾಣ್ಯವ ಕರಗ್ಸಿ ಸ್ಟೀಲ್ ಮಾರಿರೆ ಹೆಚ್ಚು ಪೈಸೆ ಸಿಕ್ಕುತ್ತು.. ಅಲ್ಲದೋ?? 😉

    ಉಪಾಯ ಆಗದ್ದಿಲ್ಲಿ 🙂

  3. ೯೦-೯೨ರ ವರೇ೦ಗುದೆ ಶಾಲೆ/ಕೋಲೇಜು ಮಕ್ಕೊಗೆ ಬಸ್ಸಿಲ್ಲಿ ಹೋಪಲೆ ನಾಲ್ಕಾಣೆ ಕೊಟ್ರೆ ಸಾಕಿದ್ದತ್ತು.
    ಚೆನ್ನೈ ಭಾವ ಹೇಳಿದ ಹಾ೦ಗೆ ಆನು ೧-೨-೩ನೇ ಕ್ಲಾಸಿ೦ಗೆ ಹೋಪಗ ನಾಲ್ಕಾಣೆ ಕೊಟ್ರೆ ಎರಡು ಅಯಿಸ್ಕೇ೦ಡಿ ಸಿಕ್ಕಿ ಬಾಕಿ ಐದು ಪೈಸೆಯುದೆ ಉಳಿಗು. ಮತ್ತೆ ಅದು ೧೫ ಪೈಸೆ ಆತು, ೨೦ ಪೈಸೆ ಆತು, ೨೫ ಪೈಸೆ ಆತು. ಈಗ ಅಯಿಸ್ಕೇ೦ಡಿ ಪೆಟ್ಟಿಗೆಲಿ ಹೊತ್ತೊ೦ಡು ಬ೦ದು ಮಾರುವ ಜನ೦ಗೊ ಇದ್ದವೋ ಇಲ್ಲೆಯೋ ಗೊ೦ತಿಲ್ಲೆ. ಇದ್ದರುದೆ ೨-೩ ರುಪಾಯಿ೦ದ ಕಮ್ಮಿಗೆ ಸಿಕ್ಕಾಯ್ಕು.
    ಆ ಸಮಯಲ್ಲಿ ಚಾಯ / ಕಾಪಿ ಕುಡಿಯೆಕಾರೆ ಬರೇ ೬೦ ಪೈಸೆ ಕೊಟ್ರೆ ಸಾಕಿದ್ದತ್ತು.

  4. ನಾವು ಮಂಡೆಬೆಶಿ ಎಂತಕೆ ಮಾಡುದು? ಸುಲಭಲ್ಲಿ ನಾವು ಒಂದು ೫೦- ೬೦ ವರ್ಷದ ಹಿಂದಾಣ ಕಾಲಕ್ಕೆ ಹೋಪಲಕ್ಕು.
    ಪೈಸೆ ಹೇಳ್ತಲ್ಲಿ ರೂಪಾಯಿ ಹೇಳಿರೆ ಆತು. ಒಂದು ಪೈಸೆಯ ಜಾಗೆಗೆ ಒಂದು ರೂಪಯಿ ಬಂದು ನಿಂದಿದು. ೫೦-೬೦ ವರ್ಷದ ಹಿಂದೆ ೫-೧೦ ಪೈಸೆಗೆ ಚಾಯ ಸಿಕ್ಕಿಗೊಂಡು ಇತ್ತು. ಈಗ ೫-೧೦ ರೂಪಾಯಿಗೆ ಚಾಯ ಸಿಕ್ಕುತ್ತು. ೩೦ ಪೈಸೆ ಅಂದಾಜಿಂಗೆ ಒಂದು ಕಿಲ ಅಕ್ಕಿ ಸಿಕ್ಕಿಗೊಂಡು ಇತ್ತು, ಈಗ ೩೦ ರೂಪಾಯಿಗೆ ಒಂದು ಕಿಲ ಆಕ್ಕಿ.
    ಹಾಂಗೆ “ಪೈಸೆ” ಹೇಳ್ತ ಜಾಗೆಲಿ “ರೂಪಾಯಿ” ಹೇಳಿರೆ ನಾವು ೫೦-೬೦ ವರ್ಷ ಹಿಂದೆ ಹೋದ ಹಾಂಗೆ ಆತಲ್ಲದ?
    ಇನ್ನು ಮುಂದೆ ೨೫ ರೂಪಾಯಿಗೆ ನಾಲ್ಕಾಣೆ ಹೇಳಿಗೊಂಬ, ಎಂತ ಹೇಳ್ತಿ? 🙂

  5. ಎರಡು ವರುಷ ಹಿ೦ದೆ ಭಿಕ್ಷೆ ಬೇಡುವ ಒಬ್ಬ ಅಜ್ಜ೦ಗೆ ಎ೦ಟಾಣೆ ಪಾವಲಿ ಕೊಟ್ಟಪ್ಪಗ “ಇದಕ್ಕೇನೂ ಸಿಗೊಲ್ಲ” ಹೇಳಿ ಎನ್ನ ಕೈಗೇ ಹಾಕಿತ್ತು !! ಅಲ್ಲಿ೦ದ ಮತ್ತೆ ನಾಕಾಣೆ ನಾಣ್ಯ ಸ೦ಗ್ರಹಕ್ಕೆ ಮಾ೦ತ್ರ ಯೋಗ್ಯ ಹೇಳೊದು ಸರೀ ಅರ್ಥ ಆಗಿತ್ತು.
    ರಾಜಕೀಯಲ್ಲಿ ಚಲಾವಣೆಲಿ ಇದ್ದರೆ ಮಾ೦ತ್ರ ಬೆಲೆ,ಅದಕ್ಕೇ ಅಲ್ಲದೋ ದೇವೇಗೌಡ ತಲಗೆ ಬೈರಾಸು ಕಟ್ಟಿ ಮಾರ್ಗದ ಕರೆಲಿ ಒ೦ದು ಘ೦ಟೆ ಉಪವಾಸ ಮಾಡೊದು !! ಆದರೆ,ನಾಣ್ಯ೦ಗಳ ವಿಷಯಲ್ಲಿ ಚಲಾವಣೆಲಿ ಇಲ್ಲದ್ದದಕ್ಕೆ ಬೆಲೆ ಹೆಚ್ಚೊದು ಹೇಳಿ ನೆ೦ಪಿರಳಿ.ನಾಕಾಣೆ ಹೇಳಿ ತಾಪು ಮಾಡಿಕ್ಕೆಡಿ,ಆತೊ?
    ಗೋಪಾಲಣ್ಣ,”ಚಕ್ರ”ದ ಹಿನ್ನೆಲೆ ಗೊ೦ತಾತು,ಧನ್ಯವಾದ.

    1. ನಿಜ.ಈ ಸಣ್ಣ ಬೆಲೆಯ ನಾಣ್ಯಂಗಳ ಸಂಗ್ರಹಿಸಿ ಮಡುಗಿರೆ ಮುಂದೆ ಅದಕ್ಕೆ ಚಾರಿತ್ರಿಕ ಮೌಲ್ಯ ಬಕ್ಕು.

  6. ನಾಗರೀಕತೆ (!) ಬೆಳದಾಂಗೆ ಸಂಸ್ಕೃತಿ ಕ್ಷೀಣಿಸುತ್ತು. ಹಾಂಗೇ ಹಣದುಬ್ಬರ ಏರಿದಾಂಗೆ ಪೈಸೆ ಮೌಲ್ಯ ಕಮ್ಮಿ ಆವ್ತು. ಇದೀಗ ನಾಕಾಣೆಯೂ ಇಲ್ಲೆ ಹೇಳಿ ಅತಿದಾ ಚಲಾವಣೆಗೆ. ನಾಕಾಣಗೆ ಎರಡು ಐಸ್ಕೇಂಡಿ ಪೆರ್ವ ಗಣೇಶಣ್ಣನೂ ಆನೂ ಒಟ್ಟಿಂಗೆ ತಿಂದು ಬಾಕಿ ಐದು ಪೈಸೆ ಅವ ಕಿಸಗೆ ಹಾಕಿಯೊಂಡದು ನೆಂಪು ಬತ್ತೀಗ ಇದಾ. ನಾಕಾಣೆ ಕಣ್ಮರೆ ಆಪ್ಪಗ ನಾಕಾಣೆ ಶುದ್ದಿಯೂ ಬಂತು ಹೇಳಿ ನಮ್ಮ ಒಪ್ಪ.

  7. ನಮ್ಮ ಸಂಸ್ಕೃತಿಯ ಭಾಗ ಆದ ನಾಕಾಣೆಗೆ ಭಾವಪೂರ್ಣ ಶ್ರದ್ಧಾಂಜಲಿ. ಈ ಮಾತು ಮನಸ್ಸಿಂಗೆ ತಟ್ಟಿತ್ತು ಗೋಪಾಲಣ್ಣ.
    ನಾಕಾಣೆಯ ಬದಲು, ನೂರು ರೂಪಾಯಿಯ ನಾಣ್ಯವ ಮಾಡ್ತ ಅಂದಾಜು ಇದ್ದಾಡ !!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×