- ಹೇ ಗುರುದೇವ… - March 15, 2012
- ಅಡಿಗೆಲ್ಲಿ ಕ್ರಾಂತಿ - February 16, 2012
- ಪೇಟೆಂದ-ಹಳ್ಳಿಯೆಡೆಗೆ : ಸಜಂಕಬೆಟ್ಟು ರವಿಯಣ್ಣನ ಅನುಭವ ಲೇಖನ - January 14, 2012
ನೀರಮೂಲೆ ಜಯಶ್ರೀಅಕ್ಕನ ಗೊಂತಿದ್ದೋ? ಅವರ ಮೂಲ ನೀರಮೂಲೆ ಆದರೂ, ಸದ್ಯಕ್ಕೆ ಕೊಡೆಯಾಲಲ್ಲಿ ಇದ್ದವು.
ಯೆಜಮಾನ್ರು ಕೊಡೆಯಾಲಲ್ಲೇ ವ್ಯವಹಾರಗಾರರು. ದೊಡ್ಡ ಮಗ ಶ್ರೀಚರಣಂಗೆ ಒಂದು ತಂಗೆ ಹುಟ್ಟಿದ್ದು – ಮೊನ್ನೆ ಹದಿನೈದು ದಿನಗಳ ಹಿಂದೆ!
ಸಂತೃಪ್ತ ಕುಟುಂಬಕ್ಕೆ ಹೊಸ ಜೆನರ ಸೇರ್ಪಡೆಯ ಕೊಶಿ ಅವರ ನೆಮ್ಮದಿಯ ನೂರ್ಮಡಿ ಮಾಡಿದ್ದು.!ಬೈಲಿನ ಮೇಲೆ ಅಗಾಧ ಪ್ರೀತಿ, ವಿಶ್ವಾಸ ಇಪ್ಪ ನಮ್ಮದೇ ಬೈಲಿನ ಅಕ್ಕ°.
ಬೈಲಿನ ಕೆಲವು ಶುದ್ದಿಗೊಕ್ಕೆ ಒಪ್ಪ ಪ್ರೋತ್ಸಾಹ ಕೊಟ್ಟು ಬೆನ್ನುತಟ್ಟುದರ ನಾವು ಕಂಡಿದು. ಈಗ ಅವ್ವೇ ಬೈಲಿಂಗೆ ಬತ್ತಾ ಇದ್ದವು!!ಅಪ್ರತಿಮ ಗುರುಭಕ್ತಿ ಇಪ್ಪ ಜಯಶ್ರೀಅಕ್ಕ, ಗುರುಗಳ ಸಮಾಜಮುಖಿ ಬೈಲು http://hareraama.in ಲಿ ಸಕ್ರಿಯವಾಗಿ ಪ್ರತಿಕ್ರಿಯೆ ಕೊಡ್ತವು.
ಜಯಶ್ರೀ ಅಕ್ಕ ಅವರ ಅನುಭವಂಗಳ, ಅವರ ಚಿಂತನೆಗಳ, ಅವರ ಯೋಚನೆಗಳ ಬೈಲಿಂಗೆ ಹಂಚುತ್ತಾ ಇದ್ದವು.
ಎಲ್ಲೋರುದೇ ಚೆಂದಕೆ ಪ್ರೋತ್ಸಾಹ ಮಾಡಿ ಸಹಕರುಸೇಕು ಹೇಳ್ತದು ನಮ್ಮ ಹಾರಯಿಕೆ.
~
ಗುರಿಕ್ಕಾರ°
ಗಣಿತ, ಭೌತಶಾಸ್ತ್ರಗಳಲ್ಲಿ ಆಸಕ್ತಿ ಜಾಸ್ತಿ ಇದ್ದ ಕಾರಣ ಅತುತ್ತಮ ವಿಜ್ಹಾನಿ ಅಪ್ಪ ಕನಸು ಕಂಡೆ. ವಿಧಿ ಆ ಹಾದಿಲ್ಲಿ ಎನ್ನ ಮುನ್ನಡೆಸಿದ್ದಿಲ್ಲೇ.
ಮುಂದೆ ಸಾಫ್ಟ್ ವೇರ್ ಲಿ ಆಸಕ್ತಿ ಬೆಳದತ್ತು. ಕಂಪೆನಿಯ ಸೀನಿಯರ್ ಉದ್ಯೋಗಿಗಕ್ಕೂ ಅಚ್ಚರಿಗೊಳಿಸುವಂತಹ ಸಾಫ್ಟ್ ವೇರ್ ಎನ್ನ ಕೈಲಿ ಮೂಡಿ ಬತ್ತ ಇತ್ತಿದ್ದು.
ಹಾಂಗೆ ಆ ಕ್ಷೇತ್ರಲ್ಲಿ ಮಹತ್ತರವಾದ್ದು ಸಾಧಿಸುವ ಕನಸು ಕಂಡೆ. ವಿಧಿ ಆ ಮಾರ್ಗಂದಲೂ ಎನ್ನ ಹಿಂದೆ ಕರಕ್ಕೊಂಡು ಬಂತು. ಕೊನೆಗೆ ವಿಧಿ ಎನಗೆ ಕೊಟ್ಟದು ಅಮ್ಮನಾಗುವ ಅವಕಾಶ.
ಭಾರತಲ್ಲಿ ಇಂದು ಮನುಷ್ಯನ ಕಂಪ್ಯೂಟರ್ ಆಗಿ ಬೆಳೆಶುವ, ಬುದ್ದಿ ಜೀವಿ ಮಾಂತ್ರ ಆಗಿ ಬೆಳೆಶುವ ಅಮ್ಮಂದಿರು ತುಂಬಾ ಜೆನ ಇದ್ದವು.
ಆದರೆ ಮನುಷ್ಯನ ಮನುಷ್ಯನಾಗಿ,ಹೃದಯ ಜೀವಿಯಾಗಿ ಬೆಳೆಸುವ ಅಮ್ಮಂದಿರು ಎಷ್ಟು ಜೆನ ಇದ್ದವು?
ಆನು ಈ ಹಾದಿಲ್ಲಿ ಹೆಜ್ಜೆ ಹಾಕುತ್ತ ಇದ್ದೆ. ತುಂಬಾ ಖುಷಿಲಿ ಇದ್ದೆ. ನಿಂಗಳುದೆ ಒಂದರಿ ಸರಿಯಾಗಿ ಆಲೋಚನೆ ಮಾಡಿ ಎನ್ನ ಹಾದಿಲ್ಲಿ ಬತ್ತಿರಾ?
ಎಲ್ಲರಿಂಗೂ ಧನ್ಯವಾದಂಗ… ಇಂದಿನ ಆಧುನಿಕ ಜಗತ್ತಿಲ್ಲಿ ಇದು ಎಷ್ಟು ಕಷ್ಟದ ಕೆಲಸ ಹೇಳಿ ನಿಂಗೊಗೆಲ್ಲ ಗೊಂತಿದ್ದು… ನಿಂಗಳೆಲ್ಲರ ಸಹಕಾರಂದ ಮಾಂತ್ರ ಇದು ಸಾಧ್ಯ…
ನೀರಮೂಲೆ ಜಯಕ್ಕಂಗೆ ಹಾರ್ದಿಕ ಸ್ವಾಗತ. ಪರಿಪೂರ್ಣ ಮಾತೃತ್ವದ ನಿಂಗಳ ಕನಸು ನನಸಾಗಲಿ. ಶುಭಾಶಯಂಗೊ.
ಜಯಶ್ರೀಗೆ ಆತ್ಮೀಯ ಸ್ವಾಗತ. ಉತ್ತಮ ಅಭಿಪ್ರಾಯವನ್ನೇ ಬಯಲಿಂಗೆ ತಿಳಿಯ ಪಡುಸಿದ್ದೆ. ಆಫೀಸು ಕೆಲಸಲ್ಲಿ ಬಹಳಷ್ಟು ಸಾಧನೆ ಮಾಡೆಕು ಹೇಳಿ ಗ್ರೇಶುವ ಈಗಾಣ ಕೂಸುಗಳ ಚಿಂತನೆಗೆ ಹಚ್ಚುವ ಲೇಖನ. ಕೆಲವೇ ಕೆಲವು ಶಬ್ದಂಗಳಲ್ಲಿ ವಿವರುಸಿದ್ದೆ. ಲಾಯಕಾಯಿದು. ಮುಂದಾಣ ಲೇಖನಕ್ಕೆ ಕಾಯ್ತಾ ಇದ್ದೆ.
ಜಯಶ್ರೀ ಅಕ್ಕ೦ಗೆ ಸ್ವಾಗತ.
ನಿ೦ಗಳ ಸ೦ದೇಶ ಮನಮುಟ್ಟಿತ್ತು.ಮನುಷ್ಯತ್ವವ ರೂಪಿಸುವ ಈ ಸಾಧನೆಗೆ ಅಭಿನ೦ದನೆ,ಶುಭಾಶಯ೦ಗೊ.
ಸಾಧನೆ ಹೇಳುದು ಕೇವಲ ನಾವು ಮೇಲುರುದು ಮಾಂತ್ರ ಅಲ್ಲ, ಎಲ್ಲಕ್ಕಿಂತ ಮುಖ್ಯ ಒಬ್ಬ ಮನುಷ್ಯನ ಹುಟ್ಟಿದಂದಿಂದ, ವಿದ್ಯೆ ಬುದ್ಧಿ ಕಲುಶಿ, ಗೌರವಯುತವಾದ ವ್ಯಕ್ತಿಯಾಗಿ ಮಾಡುದು. ಅಂತಹ ಸಾಧನೆಯ ಹಾದಿಲಿ ಇಪ್ಪ ನಿಂಗೊಗೆ ಶುಭ ಆಗಲಿ. ಬೈಲಿಂಗೆ ಸ್ವಾಗತ 🙂
ಅಭಿನಂದನೆಗೊ
[ಎಲ್ಲಿ ಕೊರತೆ ಇದ್ದೋ ಅಲ್ಲಿ ಸಾಧನೆಗೆ ಒಳ್ಳೆ ಅವಕಾಶ ಅಲ್ಲದ? …ನಿಂಗಳುದೆ ಒಂದರಿ ಸರಿಯಾಗಿ ಆಲೋಚನೆ ಮಾಡಿ ಎನ್ನ ಹಾದಿಲ್ಲಿ ಬತ್ತಿರಾ?] – ‘ಅಮ್ಮ’ ಎಂಬ ಪದ ತುಂಬಿತ್ತು. ಹೆಮ್ಮೆಯ ಸ್ವಾಭಿಮಾನದ ಜಯಶ್ರೀ ಅಕ್ಕಂಗೆ ನಮಸ್ಕಾರ. ‘ಬ್ರೆಡ್ಡು – ಜಾಮು’ ಸಂಸ್ಕೃತಿಂದ ವಿಮೋಚನೆ ಹೀಂಗೆ ಮಾತ್ರ ಸಾಧ್ಯ.
ಜಯಶ್ರೀ ಅಕ್ಕಂಗೆ ಸ್ವಾಗತಮ್.
ಪ್ರಸ್ತುತ ಜೀವನದ ಸಮಸ್ಯೆಯ ಸರಿಯಾಗಿ ಅರ್ತ ಮಾಡಿಗೊಂಡು, ಮುಂದಾಣ ತಲೆಮಾರಿನ ತಂಗೆಕ್ಕೊಗೆ ಮಾರ್ಗದರ್ಶನ ಕೊಡ್ತಾ ಇಪ್ಪದು ನಿಜವಾಗಿಯೂ ಅಭಿನಂದನೀಯ.
ಜೀವನ ಜೀವಿಕೆಯ ಸಮಗ್ರತೆಂದಾಗಿ ನಿಂಗಳ ಕುಟುಂಬ ಬೆಳೆಯಲಿ ಹೇಳ್ತದು ಒಪ್ಪಣ್ಣನ ಹಾರೈಕೆ.
ಬೈಲಿಂಗೆ ಬನ್ನಿ, ಶುದ್ದಿ ಹೇಳಿಗೊಂಡಿರಿ.
ಹರೇರಾಮ
ಬೈಲಿಂಗೆ ಸುಸ್ವಾಗತ.
ಅನುಭವಂಗಳ ಹಂಚಿದ ಶುದ್ದಿ ಲಾಯಿಕ ಆಯಿದು.
ಬೈಲಿಂಗೆ ಸ್ವಾಗತ.ಒಳ್ಳೆ ಅರ್ಥಪೂರ್ಣ ಶುದ್ದಿಯ ಮೂಲಕ ನಿಂಗ ಸುರು ಮಾಡಿದ್ದು ತುಂಬಾ ಕೊಶಿ ಆತು.ನಿಂಗಳ ಹಾಂಗಿಪ್ಪ ಮಾರ್ಗದರ್ಶನ ಕೊಡುವ ಅಮ್ಮಂದ್ರು ಇನ್ನಷ್ಟು ಬೆಳೆಯಲಿ.ನಿಂಗಳ ಶುದ್ದಿಗೆ ಕಾದೊಂಡಿರ್ತೆಯ.ಧನ್ಯವಾದ!!
ಮನೆಯೋರಿ೦ಗೆ ಎಲ್ಲಾ ಒ೦ದು ಕೊಶಿಯ ಸುದ್ದಿ.. ಶುಭಾಶಯ೦ಗೊ ಅಕ್ಕಾ..
ಹಾ೦ಗೆ ಬಯಲಿ೦ಗೆ ಸ್ವಾಗತ..
“…ಎಲ್ಲಿ ಕೊರತೆ ಇದ್ದೋ ಅಲ್ಲಿ ಸಾಧನೆಗೆ ಒಳ್ಳೆ ಅವಕಾಶ ಅಲ್ಲದ”
ಈ ಮಾತು ೧೦೦ ರಕ್ಕ ೧೦೦ ರು ಸತ್ಯ ಅಕ್ಕಾ.. ಭಾರಿ ಕೊಶಿಯಾತು ನಿ೦ಗಳ ಸಾಧನೆಯ ಛಲವ ಕ೦ಡು..
ಶುಭಾ ಹಾರೈಕೆಗೊ.
ಕುಟು೦ಬಲ್ಲಿ ಹೊಸ ಅತಿಥಿಯ ಆಗಮನದ ಸ೦ದರ್ಭಲ್ಲಿ ಶುಭಾಶಯ೦ಗೊ.
ಹೊಸ ತಲೆಮಾರಿನ ಸರಿಯಾಗಿ ಬೆಳೆಸುವ ದಿಸೆಲಿ ‘ಅಮ್ಮ’, ‘ಅಪ್ಪ’, ‘ಶಿಕ್ಷಕ/ಶಿಕ್ಷಕಿ’ ಯರ ಪಾತ್ರ ಮಹತ್ತರವಾದ್ದು ಹೇಳಿ ಡಾ. ಎ.ಪಿ.ಜೆ. ಅಬ್ದುಲ್ ಕಲಾ೦ ಹೇಳಿದ್ದವಾಡ.