|| ಹರೇರಾಮ ||
ಬೈಲಿನೋರಿಂಗೆ ನಮಸ್ಕಾರ.
ಊರಿಡೀ ಮಳೆ-ಬೆಳೆ.
ಗೋಕರ್ಣಲ್ಲಿ ಚಾತುರ್ಮಾಸ್ಯ.
ಮನೆ-ಮನಸ್ಸು ಇಡೀ ನೆಮ್ಮದಿ.
ಇದರ ಒಟ್ಟಿಂಗೇ ಒಂದು ಕೊಶಿಯ ಶುದ್ದಿ ಹಂಚಲೆ ಬಂದದು.
ಅದೆಂತದು?
ನಮ್ಮ ಬೈಲಿಲಿ ಇಂದಿಂಗೆ ಶುದ್ದಿಗಳ ಒಟ್ಟು ಸಂಖ್ಯೆ ಒಂದು ಸಾವಿರ ಆತು.
ಮೊನ್ನೆಂದಲೇ ನಾವು ಕಾದುಗೊಂಡಿತ್ತು. ಯೇವತ್ತು ಈ ಗಳಿಗೆ ಬತ್ತು – ಹೇಳಿಗೊಂಡು.
ಎರಡೊರಿಶಲ್ಲಿ ಸಾವಿರ ಶುದ್ದಿ ತುಂಬಲೆ ಕಾರಣ ಆದ ಸಮಸ್ತ ನೆರೆಕರೆಯೋರಿಂಗೂ ಅನಂತಾನಂತ ಕೃತಜ್ಞತೆಗೊ.
ಇನ್ನು ಮುಂದೆಯೂ ಪ್ರೋತ್ಸಾಹ, ಸಹಕಾರ ಇಮ್ಮಡಿ ಮಾಡಿ, ಸಾವಿರ-ಸಾವಿರ ಶುದ್ದಿ ಅಪ್ಪ ಹಾಂಗೆ ಪ್ರೋತ್ಸಾಹ ಮಾಡೇಕು ಹೇಳ್ತದು
ಸಮಸ್ತರ ಪರವಾಗಿ ಕೋರಿಕೆ.
ಹರೇರಾಮ
~
ಬೈಲಿನ ಪರವಾಗಿ
ಗುರಿಕ್ಕಾರ°
Latest posts by Admin (see all)
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ತುಂಬಾ ಸಂತೋಷ ಆತು ಸುದ್ದಿ ಕೇಳಿ. ಇನ್ನು ಬೇಗ ಇನ್ನು ತುಂಬಾ ಸುದ್ದಿಗೊ ಬರಳಿ.
ಅಭಿನಂದನೆಗೋ,
ಒಪ್ಪಂಗೊ…. 🙂
ಹರೇರಾಮ ಗುರಿಕ್ಕಾರ್ರೆ!
ಜೇನುಗೂಡಿನ ಹಾಂಗೆ ಇಪ್ಪ ನಮ್ಮ ಬೈಲು ಇಂದು ಸಾವಿರ ಶುದ್ದಿಗಳ ಮಧುರ ಸಂಗ್ರಹ ಮಾಡಿದ್ದು ಹೇಳಿದರೆ ತುಂಬಾ ಸಂತೋಷವೇ!!
ಜೇನುಗೂಡಿಲಿ ಅಪ್ಪ ಹಾಂಗೇ ಎಲ್ಲೋರ ಕೆಲಸಲ್ಲಿ, ಹನಿ ಹನಿಯಾಗಿಯೇ ಬಂದು ಸೇರಿದ್ದದರಲ್ಲಿಯೇ ಈ ಸಾವಿರದ ಬೈಲಿಂಗೆ ಸಾವಿರ ಶುದ್ದಿಗೋ ಆದ್ದದು ಅಲ್ಲದಾ? ಬೈಲಿನ ಎಲ್ಲೋರೂ ಚೆಂದಲ್ಲಿ ಕೆಲಸ ಮಾಡ್ತಾ ಇಪ್ಪಗ ಕೆಲವು ಜನ ಜೇನುಗೂಡಿಂಗೆ ಕಲ್ಲು ಇಡುಕ್ಕುತ್ತ ನಮುನೆ ಮಾಡ್ತವು. ಅಂಬಗ ಜೇನುಹುಳುಗೋ ಕುಟ್ಟದ್ದೆ ಇಕ್ಕೋ!!?
ಬೈಲಿಲಿ ಈಗ ಇಪ್ಪ ಒಗ್ಗಟ್ಟು, ಅನುಭವ ಆದವರ ಮಾರ್ಗದರ್ಶನ, ಹೊಸಬ್ಬರಿಂಗೆ ತೋರ್ಸುವ ಪ್ರೀತಿ, ಹೊಸ ಹೊಸ ವಿಚಾರಂಗ ಹೀಂಗೇ ಮುಂದರಿಯಲಿ..
ಯಾವ ತೊಂದರೆಯೂ ಬಾರದ್ದೆ ನಮ್ಮ ವಿಸ್ತೃತ, ವಿಸ್ತರಿತ ಕೂಡುಕುಟುಂಬ ಶ್ರೀ ಗುರುಗಳ ಅನುಗ್ರಹಲ್ಲಿ, ನಿಂಗಳ ಕಾಳಜಿಲಿ ಬೆಳೆಯಲಿ..
ಹರೇರಾಮ.
ಶುದ್ದಿಗಳ ಒಟ್ಟು ಸಂಖ್ಯೆ ಒಂದು ಸಾವಿರ ಆತು ಕೇಳಿ ಕೋಶಿ ಆತು . ‘ಸಾವಿರದ ಬೈಲಿಂಗೆ “ಸಾವಿರ ಶುದ್ದಿ”ಗೊ’ ಶೀರ್ಷಿಕೆ ಅರ್ಥಪೂರ್ಣ ಅಲ್ದಾ? ಬೈಲಿನ ಶುದ್ಧಿ ಸಂಖ್ಯೆ ಚೆಂದಕ್ಕೆ ಬೆಳೆಯಲಿ. ಗುರಿಕ್ಕಾರ್ರಿಗೆ ಅಭಿನಂದನೆ ಹೇಳಿ ನಮ್ಮ ಒಪ್ಪ.
ಸಾವು ಇರದ ಶುದ್ದಿ,
ಸಾವಿರದ ಶುದ್ಧಿ…
ಖುಶಿ ಆತು,
ಬೈಲು ಇನ್ನಷ್ಟು ಚೆಂದಕೆ ಮುಂದುವರಿಯಲಿ, ಒಳಿಯಲಿ.
ನಿಂಗಳ ಒಪ್ಪಕ್ಕೆ ಒಂದು ಒಪ್ಪ….ಸರಿಯಾಗಿ ಹೇಳಿದ್ದಿ.
“ಸಾವಿರದ ಬೈಲು” ಹೇಳ್ತ ಗುರುಪೀಠದ ಮಾತು ಸತ್ಯ ಆಗದ್ದಿಕ್ಕೋ! ಸಾವಿರ ಶುದ್ದಿ ದಾಟಿದ ಸಂಭ್ರಮಲ್ಲಿಪ್ಪ ನೆಚ್ಚಿನ ನಮ್ಮ ಬೈಲಿಂಗೆ ಹಾರ್ದಿಕ ಅಭಿನಂದನೆಗೋ.. ಎಲ್ಲೋರಿಂಗೂ ಶುಭಾಶಯಂಗೋ!! ಸಾವಿರ ಸಾವಿರ ಶುದ್ದಿ ಬರಳಿ, ಬೈಲಿ ಬೆಳೆಯಲ್ಲಿ, ಹೇಳ್ತದೇ ಹಾರೈಕೆ!
ಹರೇರಾಮ!
ಗುರಿಕ್ಕಾರ್ರೇ,
ಶುದ್ದಿ ಓದಿ ಸ೦ತೋಷ ಆತು. ಬೈಲಿಲಿ ಸ೦ಖ್ಯೆಯ ಒಟ್ಟಿ೦ಗೆ ಶುದ್ದಿಗಳ ಗುಣಮಟ್ಟವೂ ಮನಸ್ಸಿ೦ಗೆ ಹಿಡುಸಿದ್ದು.ಸುಮಾರು ನೆ೦ಟ್ರಿ೦ಗೆ ಬರವ ಹವ್ಯಾಸವ ಬೆಳೆಶುಲೆ ಒಪ್ಪಣ್ಣನ ಬೈಲು ಒ೦ದು ಸಾಧನವಾಗಿ ಬೆಳೆತ್ತಾ ಇದ್ದು ಹೇಳೊದು ಅಭಿನ೦ದನೀಯ.
ಲಕ್ಷಕ್ಕೆ ಲಕ್ಷ್ಯ ಬಪ್ಪ ಹಾ೦ಗೆ ಬೆಳೆಯಲಿ ಹೇಳಿ ಹಾರೈಕೆಗೊ.
ಆಭಿನಂದನೆಗೋ …
ಅಭಿನಂದನೆಗೋ!!ಹೀಂಗಿಪ್ಪ ಸಾವಿರ ಶುದ್ಧಿಗ ಪ್ರತಿವರ್ಷವೂ ನಿರಂತರವಾಗಿ ಹರಿದುಬರಲಿ…
ಶುದ್ದಿ ಕೇಳಿ ಕೊಶೀ ಆತು. ಅಭಿನಂದನೆಗೊ. ನಮ್ಮ ಬೈಲು ಎಲ್ಲೋರ ಸಹಕಾರಂದ ಇನ್ನಷ್ಟು ಬೆಳೆಯಲಿ. ಎಲ್ಲೋರ ಮನ ಮನವ ಬೆಳಗಲಿ.
ತುಂಬಾ ಸಂತೋಶದ ಸುದ್ದಿ ..ಅಭಿನಂದನಗೊ…ಬೈಲು ಇನ್ನಸ್ಟ್ಟು ವಿಸ್ತ್ತಾರಗೊಳ್ಳಲಿ ನಮ್ಮೋರಲ್ಲಿ ಇಪ್ಪ ಹೊಸ ಪ್ರತಿಭೆ ಗ ಬೆಳಕಿಂಗೆ ಬರಲಿ ಹೇಳುದೇ ಎನ್ನ ಆಶಯ..
ತು೦ಬಾ ಖುಶಿಯ ಶುದ್ದಿ.ಅಭಿನ೦ದನೆಗೊ.
ತುಂಬಾ ಸಂತೋಷದ ಸುದ್ದಿ.
ಬೈಲಿನ ಒಬ್ಬ ಸದಸ್ಯ ಹೇಳ್ಲೆ ತುಂಬಾ ಅಭಿಮಾನ ಆವ್ತಾ ಇದ್ದು.
ಎಲ್ಲಾ ಕ್ಷೇತ್ರಲ್ಲಿಯೂ ಅನುಭವ ಇಪ್ಪ ಪ್ರತಿಯೊಬ್ಬನ ಕೊಡುಗೆಯ ಸ್ಮರಿಸಿ, ಶ್ರೀ ಗುರುಗೊ ಮತ್ತೆ ಹಿರಿಯರ ಆಶೀರ್ವಾದಂದ ಇನ್ನೂ ಮುಂದೆ ಬೆಳೆಯಲಿ, “ಏಕಮೇವ ಅದ್ವಿತೀಯ” ಆಗಿ ಮೆರೆಯಲಿ ಹೇಳಿ ಶುಭ ಹಾರೈಕೆಗೊ
🙂
ಅಭಿನ೦ದನೆಗೊ
ಸಹಸ್ರ ಶುದ್ದಿಯ ಬೈಲು ಇನ್ನಷ್ಟು ವಿರಾಜಿಸಲಿ. ಒಪ್ಪಣ್ಣನ ಕಿರು ಧೈರ್ಯಂದ ಶ್ರೀ ಶ್ರೀ ಶ್ರೀ ಗುರುಗಳ ದಿವ್ಯಾಶೀರ್ವಾದಂದ ಆರಂಭಗೊಂಡ ಈ ಬೈಲು ಅತಿ ಶೀಘ್ರಲ್ಲೇ ಜನಪ್ರಿಯವಾಯ್ದು ಹೇಳಿ ಬೈಲಿಲಿ ಇದ್ದೊಂಡು ಅನುಭವಿಸಿ ಎದೆತಟ್ಟಿ ಭುಜ ತಟ್ಟಿ ಹೇಳ್ಳೆ ಹೆಮ್ಮೆ ಆವ್ತು.
ಇದರಲ್ಲಿದ್ದು ಸಹಕರಿಸಿದ ಎಲ್ಲೋರಿಂಗೂ ಧನ್ಯವಾದ. ಇನ್ನಷ್ಟು ಕೀರ್ತಿ ಬರಲಿ ಹೇಳಿ ಒಪ್ಪ.
ಬೈಲಿನ ಎಲ್ಲರಿಂಗೂ ಸಂತೋಷದ ಸಂಗತಿ.ಲೋಕಲ್ಲಿ ನಡೆವ ಎರಡು ಸಾವಿರನೇ ಕ್ರಿಕೆಟ್ ಟೆಸ್ಟ್ ಈಗ ಲಾರ್ಡ್ಸ್ ಮೈದಾನಲ್ಲಿ ನಡೆತ್ತಾ ಇದ್ದು.ಈಗಲೇ ನಮ್ಮ ಬೈಲಿಲೂ ಸಾವಿರ ಲೇಖನ ಆತು.
ಒಪ್ಪಣ್ಣಂಗೆ ಅಭಿನಂದನೆ.
ಓಹ್! ತುಂಬಾ ಖುಶಿಯ ಶುದ್ದಿ ಇದು. 🙂
ನಮ್ಮ ಬೈಲು ಹೀಂಗೇ ಬೆಳೆಯಲಿ. ಇನ್ನೊಂದು ವರ್ಷಲ್ಲಿ ಇನ್ನೊಂದು ಸಾವಿರ ಶುದ್ದಿ ಆಗಲಿ ಹೇಳಿ ಹಾರೈಕೆ.
ಗುರಿಕ್ಕಾರ್ರೆ,
ಸಾವಿರದ ಸಂಭ್ರಮಕ್ಕೆ ಸಾವಿರ ಅಭಿನಂದನೆಗೊ. ಇನ್ನೂ ಸಾವಿರ ಸಾವಿರ ಶುದ್ದಿಗೊ ಬೇಗ ಬೇಗ ಬಂದುಗೊಂಡಿರ್ಲಿ ಹೇಳಿ ಆಶಿಸುತ್ತೆ.
ಗುರಿಕ್ಕಾರೆ, ನಮ್ಮ ಬಯಲಿಲಿ ಸಾವಿರ ಶುದ್ದಿದಾ೦ಟಿದ್ದು ನೋಡಿ ಕೊಶಿಯಾತು.
ಹೀ೦ಗೆ ನಮ್ಮ ಬಯಲು ಬೆಳದು ದೊಡ್ಡ ಆಗಲಿ ಹೇಳ್ತದೇ ನಮ್ಮೆಲ್ಲರ ಹಾರೈಕೆ.
ಶುಭಾಶಯ೦ಗೊ.. 🙂
ಅಭಿನ೦ದನೆಗೊ …..
ಸಾವಿರಕ್ಕೆ ನಮ್ಮದೊ೦ದು ಒಪ್ಪ..!! 😉
ಯೇ ಬೋಚಬಾವ°..
ನಿನ್ನದು, ಎನ್ನದು, ಪೆಂಗಣ್ಣಂದು ಶುದ್ದಿಗೊ ಸೇರಿಯೇ ಸಾವಿರ ಆದ್ದಡ.
ಇನ್ನು ಹತ್ತು ಸಾವಿರಕ್ಕೆ ಎಷ್ಟು ಬಾಕಿ ಇದ್ದು?ನೀನು ಲೆಕ್ಕಲ್ಲಿ ಉಶಾರಿ ಅಲ್ಲದೋ – ಬೇಗ ಕೂಡುಸಿ ಕಳದು ಹೇಳು, ಆತಾ? 😉
[ಕೂಡುಸಿ ಕಳದು ]
ಬೋಚಬಾವ ಬುದ್ದಿವಂತ, ನೀ ಗ್ರೇಶಿದಾಂಗಲ್ಲ.. ಗೊಂತಾತೋ, ಕೂಡುಸಿ ಕಳದರೆ ಕಡೇಂಗೆ ಸೊನ್ನೆ ಒಳಿವದು ಹೇಳಿ ಮೊನ್ನೆಯೇ ಹೇಳಿದ್ದ ಅವ.. 😉
{ಇನ್ನು ಹತ್ತು ಸಾವಿರಕ್ಕೆ ಎಷ್ಟು ಬಾಕಿ ಇದ್ದು?}
ಇದೇ ಶುದ್ದಿಯ ಇನ್ನು ಒಂಬತ್ತು ಸರ್ತಿ ಹಾಕುಲೆ ಗುರಿಕ್ಕಾರಿಂಗೆ ಹೇಳಿಕ್ಕಿ ಬಯಿಂದನಡ ಬೋಸಬಾವ…!!!
ಹೋ.. 9 ಸತ್ತಿ ಹೇದರೆ ಆತೋ ಅ೦ಬಗ?? 😉
ಓ..!!
ಹತ್ತು ಸಾವಿರವೋ..!!
ಅಷ್ಟರವರೆಗೆ ಎನಗೆ ಲೆಕ್ಕ ಬತ್ತಿಲ್ಲೆ ಬಾವ.!! 😉
1-99 ಸರೀ ಹೇಳ್ತೆ.. ಮತ್ತೆ ಹಾ೦ಗೂ ಹೀ೦ಗು 1000 ಮಟ್ಟುಸುತ್ತೆ..
ಹ್ಮ್ಮ್…!!!!
ಸಾವಿರಾ ಹೇಳಿರೆ – 1000….
ಇದು 10 ಸಾವಿರ ಆಯೆಕಾರೆ 10 ಕೂಡಿರಾತ್ತಿಲ್ಯೊ..
ಅ೦ಬಗ – 1010.. ಇದುಕ್ಕೆ ಆದಿಕ್ಕು ಹತ್ತು ಸಾವಿರ ಹೇಳ್ತು.. ಅಲ್ಲದೋ??
ಬೋಸ ಬಾವ ಹತ್ತು ಸಾವಿರ ಹೇಳಿರೆ 10ದೆ,1000ದೆ =101000 ಹೀ೦ಗೆ ಆದಿಕ್ಕೊ 😉
ನಮ್ಮ ಬೈಲಿಲಿ “ಹೀ೦ಗಿಪ್ಪ” ಹತ್ತು ಸಾವಿರ ಶುದ್ದಿಗ ಬೇಗ ಆಗಲಿ ಅಲ್ಲದ…
ಅದಕ್ಕೇ ಈಗ ಲಕ್ಶ,ಕೋಟಿಲಿ ಲೆಕ್ಕ ಹೇಳ್ತ ಕ್ಯಾಲ್ಕ್ಯುಲೇಟರು ಬಯಿಂದಡ,ಬೋಸ ಭಾವಂಗೆ ಬಿಡಿ ನಬವಗೇ ಗೊಂತಿಲ್ಲೆ.